ವಿಷಯಕ್ಕೆ ಹೋಗು

ಸಾರ್ಕೊಯಿಡೋಸಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sarcoidosis
Classification and external resources
ICD-10D86
ICD-9135
OMIM181000
DiseasesDB11797
MedlinePlus000076
eMedicinemed/2063
MeSHD012507

ಸಾರ್ಕೊಯಿಡೋಸಿಸ್ (ಸಾರ್ಕ್ = ಮಾಂಸ, -ಒಇಡ್ = ಸದೃಶವಾದ, -ಓಸಿಸ್ = ಒಂದು ಪ್ರಕ್ರಿಯೆ), ನ್ನು ಸಾರ್ಕಾಯ್ಡ್ ಅಥವಾ ಬೆಸ್ನಿಯೇರ್-ಬೋಯೆಕ್ ಬೇನೆ ಎಂದೂ ಕರೆಯುತ್ತಾರೆ. ಇದು ಒಂದು ಬಹುವಿಧವಾಗಿ ಗ್ರ್ಯಾನುಲೋಮಟಸ್ (ಪೆಟ್ಟಿನಿಂದ ಅಥವಾ ಉರಿಯೂತ ಅಥವಾ ಸೋಂಕಿನ ಪರಿಣಾಮವಾಗಿ ಜೀವಕೋಶ ಕಣಗಳಲ್ಲಿ ಬೆಳೆಯುವ ಒಂದು ದುರ್ಮಾಂಸ) ಉರಿಯೂತವನ್ನು ಉಂಟುಮಾಡುವ ಬೇನೆ[]. ಇದು ಜೀವಕೋಶಗಳು ಸಾವನ್ನಪ್ಪದ ಗ್ರ್ಯಾನುಲೋಮಗಳನ್ನು (ಸಣ್ಣ ಉರಿಯೂತವಿರುವ ಗಂಟುಗಳು) ವಿಶೇಷವಾಗಿ ಹೊಂದಿರುತ್ತವೆ. ಬೇನೆಗೆ ಕಾರಣವು ಇನ್ನೂ ತಿಳಿದುಬಂದಿಲ್ಲ. ಗ್ರ್ಯಾನುಲೋಮಗಳು ಸಾಮಾನ್ಯವಾಗಿ ಶ್ವಾಸಕೋಶ ಗಳು ಅಥವಾ ದುಗ್ಧಗ್ರಂಥಿಗಳಲ್ಲಿ ಕಾಣಿಸಿಕೊಳ್ಳುತ್ತವೆ, ಆದರೆ ವಾಸ್ತವವಾಗಿ ಇದು ಯಾವುದೇ ಅಂಗಗಳಿಗೆ ಹಾನಿಯನ್ನುಂಟುಮಾಡಬಹುದು. ರೋಗಲಕ್ಷಣಗಳು ಸಾಮಾನ್ಯವಾಗಿ ಕ್ರಮೇಣ ಕಾಣಿಸಿಕೊಳ್ಳುತ್ತವೆ ಆದರೆ ಸಾಂದರ್ಭಿಕವಾಗಿ ಹಠಾತ್ತನೆ ಕಾಣಿಸಿಕೊಳ್ಳಬಹುದು. ಪ್ರಾಯೋಗಿಕ ಚಿಕಿತ್ಸಾಕ್ರಮವು ಸಾಮಾನ್ಯವಾಗಿ ಭಿನ್ನವಾಗಿದ್ದು,ರೋಗಲಕ್ಷಣಗಳಿಲ್ಲದ ಕಾಯಿಲೆಯಿಂದ ಹಿಡಿದು ನಿತ್ರಾಣಗೊಳಿಸುವ ದೀರ್ಘಕಾಲೀನ ರೋಗಸ್ಥಿತಿ ಉಂಟಾಗಿ ಅಂತಿಮವಾಗಿ ಸಾವಿಗೆ ಕಾರಣವಾಗಬಹುದು.

ಸಾಂಕ್ರಾಮಿಕಶಾಸ್ತ್ರ

[ಬದಲಾಯಿಸಿ]

ಸಾರ್ಕೊಯಿಡೋಸಿಸ್ ಸಾಮಾನ್ಯವಾಗಿ ಎರಡೂ ಲಿಂಗಗಳ ಯುವ ವಯಸ್ಕರಿಗೆ ತಗಲುತ್ತದೆ, ಆದಾಗ್ಯೂ ಅಧ್ಯಯನಗಳ ಪ್ರಕಾರ ಬೇನೆಯು ಹೆಚ್ಚಾಗಿ ಸ್ತ್ರೀಯರಲ್ಲಿ ಕಂಡು ಬರುತ್ತದೆಂದು ವರದಿ ಮಾಡಿದೆ. ೪೦ಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಬೇನೆಯ ಪ್ರಮಾಣವು ಹೆಚ್ಚಾಗಿದೆ ಹಾಗು ೨೦ ರಿಂದ ೨೯ ವರ್ಷದ ವ್ಯಕ್ತಿಗಳಲ್ಲಿ ಅತ್ಯುಚ್ಚ ಪ್ರಮಾಣದಲ್ಲಿದೆ; ೫೦ ವರ್ಷಕ್ಕೂ ಮೇಲ್ಪಟ್ಟ ಹೆಂಗಸರಲ್ಲಿ ಎರಡನೇ ಅತ್ಯುಚ್ಚ ಪ್ರಮಾಣ ಕಂಡುಬರುತ್ತದೆ.[][]

ಸಾರ್ಕೊಯಿಡೋಸಿಸ್, ವಿಶ್ವವ್ಯಾಪಿಯಾಗಿ ಎಲ್ಲ ಜನಾಂಗದವರಿಗೂ ತಗಲಬಹುದಾದ ಬೇನೆಯಾಗಿದೆ. ಬೇನೆಯ ಸರಾಸರಿ ಪ್ರಮಾಣವು ಪುರುಷರಲ್ಲಿ ೧೬.೫/೧೦೦,೦೦೦ರಷ್ಟು ಹಾಗು ಮಹಿಳೆಯರಲ್ಲಿ ೧೯/೧೦೦,೦೦೦ರಷ್ಟು ಕಂಡುಬರುತ್ತದೆ. ಈ ಬೇನೆಯು ಹೆಚ್ಚಾಗಿ ಉತ್ತರ ಯುರೋಪಿಯನ್ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ, ಹಾಗು ಅತ್ಯಧಿಕವಾದ ವಾರ್ಷಿಕ ಪ್ರಮಾಣ ೬೦/೧೦೦,೦೦೦ರಷ್ಟು ಸ್ವೀಡನ್ ಹಾಗು ಐಸ್ಲ್ಯಾಂಡ್ ನಲ್ಲಿ ಕಂಡುಬಂದಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ, ಸಾರ್ಕೊಯಿಡೋಸಿಸ್ ಕಾಕೇಸಿಅನ್(ಶ್ವೇತ ವರ್ಣೀಯರು) ಜನರಿಗಿಂತ ಹೆಚ್ಚಾಗಿ ಆಫ್ರಿಕನ್ ಸಂತತಿಯವರಲ್ಲಿ ಕಂಡುಬರುತ್ತದೆ. ಬೇನೆಯ ವಾರ್ಷಿಕ ಪ್ರಮಾಣವು ಕ್ರಮವಾಗಿ ೩೫.೫ ಹಾಗು ೧೦.೯/೧೦೦,೦೦೦ರಷ್ಟಿದೆ ಎಂದು ವರದಿ ಮಾಡಲಾಗಿದೆ.[] ಸಾರ್ಕೊಯಿಡೋಸಿಸ್ ದಕ್ಷಿಣ ಅಮೆರಿಕ, ಸ್ಪೇನ್, ಭಾರತ, ಕೆನಡಾ, ಹಾಗು ಫಿಲಿಪ್ಪೀನ್ಸ್‌ನಲ್ಲಿ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದೆಯೆಂದು ವರದಿಯಾಗಿದೆ.

ವಿಶ್ವದಾದ್ಯಂತ ಇರುವ ಈ ವ್ಯತಿರಿಕ್ತ ಪ್ರಮಾಣವು, ಆಂಶಿಕವಾಗಿ ವಿಶ್ವದ ಕೆಲವು ಪ್ರದೇಶಗಳಲ್ಲಿ ಪರೀಕ್ಷಾ ಕಾರ್ಯಕ್ರಮದ ಕೊರತೆಯ ಕಾರಣವಿರಬಹುದು. ಜೊತೆಗೆ ಇತರ ಗ್ರ್ಯಾನುಲೋಮಟಸ್ ಕಾಯಿಲೆಗಳ ಉಪಸ್ಥಿತಿಯು ಈ ಬೇನೆಯನ್ನು ಮರೆಮಾಡಬಹುದು, ಉದಾಹರಣೆಗೆ ಕ್ಷಯ, ಇದು ಸಾರ್ಕೊಯಿಡೋಸಿಸ್ ರೋಗಲಕ್ಷಣ ಗುರುತಿಸಲು ಅಡ್ಡಿಯಾಗಬಹುದು.[]

ವಿವಿಧ ಜನಾಂಗದವರಲ್ಲಿ ಬೇನೆಯ ತೀವ್ರತೆಯೂ ಸಹ ಭಿನ್ನವಾಗಿರಬಹುದು. ಹಲವಾರು ಅಧ್ಯಯನಗಳು, ಕಾಕೇಸಿಅನ್(ಶ್ವೇತ ವರ್ಣೀಯರು) ಜನರಿಗಿಂತ ಬೇನೆಯ ತೀವ್ರತೆ ಮತ್ತು ಹರಡುವಿಕೆಯು ಆಫ್ರಿಕನ್ ಮೂಲದವರಲ್ಲಿ ಹೆಚ್ಚಾಗಿರುತ್ತದೆ ಎಂದು ಸೂಚಿಸುತ್ತದೆ. ಶ್ವೇತ ವರ್ಣೀಯರಲ್ಲಿ ಹೆಚ್ಚಾಗಿ ಯಾವುದೇ ಲಕ್ಷಣಗಳು ಕಂಡುಬರದ ಬೇನೆಯಿರುತ್ತದೆ.[]

ಜನಾಂಗ ಹಾಗು ಲಿಂಗದ ಆಧಾರದ ಮೇಲೆ ಬೇನೆಯ ಕುರುಹುಗಳು ಕೊಂಚ ಮಟ್ಟಿಗೆ ಭಿನ್ನವಾಗಿರುತ್ತವೆ. ಎರಿಥೇಮ ನಾಡೋಸಂ ಹೆಂಗಸರಿಗಿಂತ ಹೆಚ್ಚಾಗಿ ಗಂಡಸರಲ್ಲಿ ಸಾಧಾರಣವಾಗಿ ಕಂಡುಬರುತ್ತದೆ. ಇದು ಇತರ ಜನಾಂಗದವರಿಗಿಂತ ಕಾಕೇಸಿಅನ್ಸ್ (ಶ್ವೇತ ವರ್ಣೀಯರು) ರಲ್ಲಿ ಕಂಡುಬರುತ್ತದೆ. ಜಪಾನಿನ ರೋಗಿಗಳಲ್ಲಿ, ಬೇನೆಯಲ್ಲಿ ಕಣ್ಣುಗಳಿಗೆ ಹಾಗು ಹೃದಯಕ್ಕೆ ಸಂಬಂಧಪಟ್ಟ ಲಕ್ಷಣಗಳು ಇತರ ಜನಾಂಗಗಳಿಗಿಂತ ಹೆಚ್ಚಾಗಿ ಕಂಡುಬರುತ್ತದೆ.[] ಧೂಮಪಾನ ಮಾಡದವರಲ್ಲೂ ಸಹ ವ್ಯಾಪಕವಾಗಿ ಹರಡುವ ಕೆಲವೇ ಕೆಲವು ಶ್ವಾಸಕೋಶದ ಬೇನೆಗಳಲ್ಲಿ ಸಾರ್ಕೊಯಿಡೋಸಿಸ್ ಕೂಡ ಒಂದು.

ವಿಧಗಳು

[ಬದಲಾಯಿಸಿ]

ಸಾರ್ಕೊಯಿಡೋಸಿಸ್ ಬೇನೆಯನ್ನು ಕೆಳಕಂಡಂತೆ ವಿಭಾಗ ಮಾಡಬಹುದು:[]: 708–11 

ರೋಗ ಸೂಚನೆಗಳು ಹಾಗೂ ಲಕ್ಷಣಗಳು

[ಬದಲಾಯಿಸಿ]
ಸಾರ್ಕೊಯಿಡೋಸಿಸ್ ಬೇನೆಯ ಚಿಹ್ನೆಗಳು ಹಾಗು ರೋಗಲಕ್ಷಣಗಳು.[]

ಸಾರ್ಕೊಯಿಡೋಸಿಸ್ ವ್ಯವಸ್ಥಿತವಾಗಿ ಯಾವುದೇ ಅಂಗಗಳಿಗೆ ಹಾನಿಯುಂಟುಮಾಡುವ ಒಂದು ಬೇನೆ. ಸಾಮಾನ್ಯ ರೋಗಲಕ್ಷಣಗಳು ಅಸ್ಪಷ್ಟವಾಗಿರುತ್ತವೆ, ಉದಾಹರಣೆಗೆ ದಣಿವು, ನಿದ್ರೆಯಿಂದಲೂ ಬದಲಾಗುವುದಿಲ್ಲ, ಬಲಹೀನತೆ, ತೂಕದಲ್ಲಿ ಇಳಿಕೆ, ನೋವುಗಳು ಹಾಗು ಬಾಧೆಗಳು, ಸಂಧಿವಾತ, ಕಣ್ಣಿನ ಶುಷ್ಕತೆ, ಮಂಡಿಗಳಲ್ಲಿ ಊತ, ದೃಷ್ಟಿ ಮಂಜಾಗುವಿಕೆ, ಉಸಿರಾಟದ ತೊಂದರೆ, ಒಣಕೆಮ್ಮುಲು ಅಥವಾ ಚರ್ಮದ ಹಾನಿಯ ಲಕ್ಷಣಗಳು ಕಂಡುಬರುತ್ತವೆ. ಸಾರ್ಕೊಯಿಡೋಸಿಸ್ ಮತ್ತು ಕ್ಯಾನ್ಸರ್ ಒಂದನ್ನೊಂದು ಹೋಲುತ್ತವೆಯಾದರೂ, ಭಿನ್ನತೆಯನ್ನು ಗುರುತಿಸುವುದು ಕಷ್ಟವಾಗಿದೆ.[] ಚರ್ಮಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಭಿನ್ನವಾಗಿರುತ್ತವೆ, ಹಾಗು ಇದು ರಾಷಸ್ (ಚರ್ಮದ ಮೇಲೆ ಏಳುವ ಸಣ್ಣ ಸಣ್ಣ ಕೆಂಪುಗುಳ್ಳೆಗಳ ಹರವು) ಹಾಗು ನಾಡ್ಯೂಲಿ (ಸಣ್ಣದಾಗಿ ನೋವು) ಯಿಂದ ಹಿಡಿದು ಎರಿಥೇಮ ನಾಡೂಸಂ(ಕೆಂಪು ಗಂಟು) ಅಥವಾ ಲುಪಸ್ ಪರ್ನಿಯೋ(ಚರ್ಮದಲ್ಲಿ ಗುಳ್ಳೆ) ದಂತಹ ಲಕ್ಷಣಗಳನ್ನು ಹೊಂದಿರುತ್ತದೆ. ಇದು ಸಾಮಾನ್ಯವಾಗಿ ರೋಗ ಲಕ್ಷಣವನ್ನು ಹೊಂದಿರುವುದಿಲ್ಲ.

ಎರಿಥೇಮ ನಾಡೂಸಂ, ದ್ವಿಪಾರ್ಶ್ವಕ ಶ್ವಾಸಕೋಶದ ಹೈಲಮ್ ಲಿಂಫಡೆನೋಪತಿ(ದುಗ್ಧಗ್ರಂಥಿ ಕಾಯಿಲೆ) ಹಾಗು ಅರ್ಥ್ರಲ್ಜಿಯ(ಕೀಲುನೋವು) ಸಂಯೋಜನೆಯನ್ನು ಲೋಫ್ಗ್ರೆನ್ ಸಿಂಡ್ರೋಮ್ ಎಂದು ಕರೆಯಲಾಗಿದೆ. ಈ ರೋಗಲಕ್ಷಣವು ಬೇನೆಗೆ ಸಂಬಂಧಿಸಿದಂತೆ ಒಂದು ಒಳ್ಳೆಯ ಮುನ್ಸೂಚನೆಯನ್ನು ನೀಡುತ್ತದೆ.

ಮೂತ್ರಪಿಂಡ, ಪಿತ್ತಜನಕಾಂಗ (ವಾಹಕನಾಳಕ್ಕೆ ಸಂಬಂಧಿಸಿದ ಅಧಿಕ-ಒತ್ತಡವನ್ನು ಒಳಗೊಂಡಿದೆ), ಹೃದಯ[] ಅಥವಾ ಮಿದುಳು ಒಳಗೊಂಡಿದ್ದರೆ ಮತ್ತಷ್ಟು ರೋಗಲಕ್ಷಣಗಳನ್ನು ಉಂಟುಮಾಡಿ ಅಂಗಾಂಗಗಳ ಕ್ರಿಯೆಯಲ್ಲಿ ವ್ಯತ್ಯಾಸವನ್ನು ತರಬಹುದು. ಮಿದುಳಿಗೆ ಅಥವಾ ನರಗಳಿಗೆ ಹಾನಿಯುಂಟುಮಾಡುವ ಸಾರ್ಕೊಯಿಡೋಸಿಸ್‌ನ್ನು ನ್ಯೂರೋಸಾರ್ಕೊಯಿಡೋಸಿಸ್ ಎಂದು ಕರೆಯಲಾಗಿದೆ.

ಆದಾಗ್ಯೂ ಸಾರ್ಕೊಯಿಡೋಸಿಸ್ ಬೇನೆಯುಳ್ಳ ರೋಗಿಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಲಕ್ಷಣಗಳು 20% ನಿಂದ 30%ನಷ್ಟಿರುತ್ತದೆ. ಕೇವಲ 5%ನಷ್ಟು ರೋಗಿಗಳಲ್ಲಿ ವ್ಯವಸ್ಥಿತ ಸಾರ್ಕೊಯಿಡೋಸಿಸ್‌ನ ಲಕ್ಷಣಗಳು ಕಂಡುಬರುತ್ತವೆ.[೧೦]

ಹೃದಯಕ್ಕೆ ಸಂಬಂಧಿಸಿದ ಸಾರ್ಕೊಯಿಡೋಸಿಸ್ ನ ಲಕ್ಷಣಗಳು ವಿದ್ಯುತ್ ವಾಹಕ ವೈಪರೀತ್ಯಗಳಿಂದ ಹಿಡಿದು ಮಾರಣಾಂತಿಕ ಕುಕ್ಷಿಯ ಅರ್ರಿಥ್ಮಿಯ(ಹೃದಯ ಬಡಿತದಲ್ಲಿ ವ್ಯತ್ಯಾಸ) ದಂತಹ ಲಕ್ಷಣಗಳನ್ನು ತೋರಬಹುದು.[೧೧] ಮಯೋಕಾರ್ಡಿಯಲ್ ಸಾರ್ಕೊಯಿಡೋಸಿಸ್ ಅಪರೂಪವಾಗಿ ಸಂಭವಿಸುವ ಹೃದಯಸಂಬಂಧಿ ಹಠಾತ್ ಸಾವಿಗೆ ಕಾರಣವಾಗಬಹುದು.[೧೨][೧೩]

ಕಣ್ಣಿನಲ್ಲಿ ರೋಗಲಕ್ಷಣಗಳು ಯುವೆಯ್ಟಿಸ್(ಕಣ್ಣಿನ ಮಧ್ಯದ ಪದರದ ಉರಿಯೂತ) ಯುವೆಒಪರೋಟೈಟಿಸ್(ಪ್ಯಾರೊಟಿಡ್ ಗ್ರಂಥಿಯ ಉರಿಯೂತ)ಮತ್ತು ಅಕ್ಷಿಪಟಲದ ಉರಿಯೂತ ಸೇರಿವೆ. ಕಣ್ಣಿನ ತೀಕ್ಷ್ಣತೆಯನ್ನು ಕಡಿಮೆ ಮಾಡಬಹುದು ಅಥವಾ ಕುರುಡನ್ನು ಉಂಟುಮಾಡಬಹುದು. ಮುಂಭಾಗದ ಯುವೆಯ್ಟಿಸ್, ಪಾರೋಟೈಟಿಸ್, VII ಕಾರ್ನಿಯ ನರದ ವ್ಯಾಧಿ ಹಾಗು ಜ್ವರದ ಸಂಯೋಜನೆಯನ್ನು ಯುವೆಒಪರೋಟಿಡ್ ಜ್ವರವೆಂದು ಕರೆಯಲಾಗುತ್ತದೆ. ಇದು ಹೀರ್ಫೋರ್ಡ್-ವಾಲ್ಡೇನ್ ಸ್ಟ್ರೋಮ್ ಸಿಂಡ್ರಮ್ ಜೊತೆ ಸಂಬಂಧವನ್ನು ಹೊಂದಿದೆ. (D86.8)

ತಲೆಬುರುಡೆಯ ಸಾರ್ಕೊಯಿಡೋಸಿಸ್ ದೊಡ್ಡ ಪ್ರಮಾಣದ ಅಥವಾ ಅಲ್ಲಲ್ಲಿ ಕೂದಲುದುರುವ ಲಕ್ಷಣವನ್ನು ಹೊಂದಿರುತ್ತವೆ.[೧೪]: 762 

ಬೆಲ್ಸ್ ಪಾಲ್ಸಿ(ಮುಖದ ಒಂದು ಬದಿಯ ಸ್ನಾಯುಗಳಿಗೆ ಲಕ್ವ) ಸಾರ್ಕೊಯಿಡೋಸಿಸ್ ಸಂಭವಿಸಬಹುದಾದ ಒಂದು ಕಾರಣ. ಗ್ರಾನ್ಯುಲೋಮಟಸ್ ಬೇನೆಯು ಅಟೆಲೆಕ್ಟಾಸಿಸ್(ಶ್ವಾಸಕೋಶದ ಕಾಯಿಲೆ)ಗೆ ಕಾರಣವಾಗಬಹುದು.

ರೋಗನಿರ್ಣಯ

[ಬದಲಾಯಿಸಿ]

ಸಾರ್ಕೊಯಿಡೋಸಿಸ್ ಬೇನೆಯ ರೋಗನಿರ್ಣಯವು ಸಾಮಾನ್ಯವಾಗಿ ಬೇರೆ ಕಾಯಿಲೆಗಳಿಂದ ಹೊರತಾಗಿಸುವುದಾಗಿದೆ. ಶ್ವಾಸಕೋಶದ ರೋಗ ಲಕ್ಷಣಗಳಿಂದ ಸಾರ್ಕೋಡೋಯಿಸ್‌ ಬೇನೆಯನ್ನು ಹೊರತಾಗಿಸಲು ಹೃದಯದ ಎಕ್ಸ್ ರೇ, ಹೃದಯದ CT ಸ್ಕ್ಯಾನ್, PET ಸ್ಕ್ಯಾನ್, CT-ಆಧಾರಿತ ಅಂಗಾಂಗ ಪರೀಕ್ಷೆ, ಮೀಡಿಯಾಸ್ಟಿನೋಸ್ಕೋಪಿ, ತೆರೆದ ಶ್ವಾಸಕೋಶದ ಅಂಗಾಂಶ ಪರೀಕ್ಷೆ, ಬ್ರೊಂಚೋಸ್ಕೋಪಿ ಜೊತೆಗೆ ಅಂಗಾಂಶ ಪರೀಕ್ಷೆ, ಎಂಡೋಬ್ರಾಂಕಿಯಲ್ ಅಲ್ಟ್ರಸೌಂಡ್ ಹಾಗು ಎಂಡೋಸ್ಕೊಪಿಕ್ ಅಲ್ಟ್ರಾಸೌಂಡ್ ನ ಜೊತೆಗೆ ದುಗ್ಧಗ್ರಂಥಿಯ ಮೀಡಿಯಾಸ್ಟೈನಲ್FNAಮಾಡಲಾಗುತ್ತದೆ. ದುಗ್ಧಗ್ರಂಥಿಗಳ ಜೀವಕೋಶಅಂಗಾಂಶ ಪರೀಕ್ಷೆಯ ಮೂಲಕ ಕ್ಯಾನ್ಸರ್‌ನ್ನು ತಳ್ಳಿಹಾಕುವ ಫ್ಲೋ ಸೈಟೋಮೆಟ್ರಿ(ಜೀವಕೋಶಗಳ ಎಣಿಕೆಯ ವಿಧಾನ) ಹಾಗು ಸೂಕ್ಮಜೀವಿಗಳು ಹಾಗು ಬೂಷ್ಟನ್ನು ತಳ್ಳಿಹಾಕಲು ವಿಶೇಷ ವರ್ಣಸಿಕ್ತ (ಆಸಿಡ್ ಫಾಸ್ಟ್ ಏಕಾಣುಜೀವಿಯ ಬಣ್ಣ ಕೂಡಿಸುವಿಕೆ ಹಾಗು ಗೊಮೊರಿ ಮೆಥೆನಮೈನ್ ಬೆಳ್ಳಿಯ ಬಣ್ಣಕೂಡಿಸುವಿಕೆ)ಎರಡೂ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಆಂಜಿಯೋಟೆನ್ಸಿನ್-ಮಾರ್ಪಡಿಸುವ ಕಿಣ್ವಗಳ ರಕ್ತದ ಪ್ರಮಾಣಗಳನ್ನು ಸಾರ್ಕೊಯಿಡೋಸಿಸ್ ನ ರೋಗನಿರ್ಣಯಕ್ಕೆ ಹಾಗು ಬೇನೆಯ ಬಗ್ಗೆ ಮುನ್ನೆಚರಿಕೆ ತೆಗೆದುಕೊಳ್ಳಲು ಬಳಸಿಕೊಳ್ಳಲಾಗುತ್ತದೆ.[೧೫]

ಪರೀಕ್ಷೆಗಳು

[ಬದಲಾಯಿಸಿ]

ವ್ಯಾಪಕ ಸಂಭಾವ್ಯ ರೋಗಲಕ್ಷಣಗಳಿರುವ ಕಾರಣದಿಂದ, ರೋಗವನ್ನು ನಿರ್ಧಾರ ಮಾಡುವ ಪರೀಕ್ಷೆಗಳು ಹಲವು ಅಂಗಗಳನ್ನು ಒಳಗೊಳ್ಳಬಹುದು ಹಾಗು ಪ್ರಾಥಮಿಕ ನಿರೂಪಣೆಯ ಆಧಾರದ ಮೇಲೆ ಹಲವು ವಿಧಾನಗಳನ್ನು ಒಳಗೊಳ್ಳಬಹುದು.

ಸಾಮಾನ್ಯವಾಗಿ ಸಾರ್ಕೊಯಿಡೋಸಿಸ್ ಬೇನೆಯನ್ನು ಶ್ವಾಸಕೋಶದ ಪರಿಮಿತಿಗೊಳಪಟ್ಟ ಒಂದು ಕಾಯಿಲೆ ಎಂಬ ಚಿತ್ರಣ ನೀಡಲಾಗುತ್ತದೆ. ಇದು ಶ್ವಾಸಕೋಶದ ಗಾತ್ರದಲ್ಲಿ ಇಳಿಕೆ ಹಾಗು ಚಾಚುವ ಪ್ರವೃತ್ತಿ ಯಲ್ಲಿ ಇಳಿಕೆ(ಚಾಚುವ ಸಾಮರ್ಥ್ಯ)ಉಂಟುಮಾಡುತ್ತದೆ - ಹೀಗಾಗಿ ರೋಗದ ತೀವ್ರತೆಯನ್ನು ನಿರ್ಧರಿಸಲು ಅಥವಾ ಶ್ವಾಸಕೋಶದ ಕಾಯಿಲೆಯನ್ನು ತಳ್ಳಿಹಾಕಲು ಹೃದಯದ ಎಕ್ಸ್ ರೇ ಹಾಗು ಇತರ ವಿಧಾನಗಳನ್ನು ಬಳಸಲಾಗುತ್ತದೆ.

ಈ ಬೇನೆಯ ವೈಶಿಷ್ಟ್ಯವೆಂದರೆ ಶ್ವಾಸಕೋಶಕ್ಕೆ ಎಳೆದುಕೊಂಡ ಗಾಳಿಯ ಪ್ರಮಾಣವನ್ನು ಸೀಮಿತಗೊಳಿಸುತ್ತದೆ. ಆದರೆ ಸಾಧಾರಣಕ್ಕಿಂತ ಹೆಚ್ಚು ನಿಶ್ವಾಸದ ಹರಿವಿನ ಅನುಪಾತಗಳನ್ನು ಉತ್ಪತ್ತಿ ಮಾಡುತ್ತದೆ. ಗರಿಷ್ಠ ಗಾಳಿ ಹೊರಬಿಡುವ ಸಾಮರ್ಥ್ಯ (ಸಂಪೂರ್ಣ ಒಳಉಸಿರು ಮತ್ತು ಹೊರಉಸಿರು)ವು ಕಡಿಮೆಯಾಗುತ್ತದೆ, ಹಾಗು ಹೆಚ್ಚಿನ ಗಾಳಿಯನ್ನು ಮೊದಲ ಸೆಕೆಂಡ್ ನಲ್ಲೇ ಹೊರಹಾಕಬಹುದು. ಇದರರ್ಥ FEV1/FVC ಪ್ರಮಾಣ ಸಾಮಾನ್ಯಕ್ಕಿಂತ ಅಂದರೆ ೮೦% ನಿಂದ ೯೦% ವರೆಗೂ ಹೆಚ್ಚಾಗಿರುತ್ತದೆ.

ಪ್ರತಿರೋಧಕ ಶ್ವಾಸಕೋಶದ ವ್ಯತ್ಯಾಸಗಳು ನಿಶ್ವಾಸದ ಗಾಳಿಯ ಪ್ರಮಾಣದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಎದೆಯ ಹಿಗ್ಗಿದ ದುಗ್ಧಗ್ರಂಥಿಯಿಂದ ವಾಯುನಾಳ ಸಂಕುಚಿತಗೊಂಡಾಗ ಅಥವಾ ಆಂತರಿಕ ಉರಿಯೂತ ಅಥವಾ ಗಂಟುಗಳಿಂದ ಗಾಳಿಹರಿಯುವಿಕೆಗೆ ಅಡ್ಡಿಯಾಗಿ ಸಂಭವಿಸಬಹುದು.

ಸಾರ್ಕೊಯಿಡೋಸಿಸ್ ಬೇನೆಯ ಪರಿಣಾಮವಾಗಿ ಮೀಡಿಯಾಸ್ಟೀನಂ(ಎದೆಗೂಡನ್ನು ಎಡ ಬಲ ಭಾಗಗಳಾಗಿ ವಿಭಾಗಿಸುವ ಚರ್ಮದ ಭಿತ್ತಿ)ನ CT ಸ್ಕ್ಯಾನ್ ಮೂಲಕ ಲಿಂಫಡೆನೋಪತಿ ಗೆ ಒಳಪಟ್ಟ ಎದೆಯ ಚಿತ್ರಣ.

ಹೃದಯದ ಎಕ್ಸ್-ರೇ ಬದಲಾವಣೆಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು

  • ಹಂತ ೧ ಬಿಹಿಲರ್ ಲಿಂಫಡೆನೋಪತಿ (ದುಗ್ಧಗ್ರಂಥಿ ಕಾಯಿಲೆ)
  • ಹಂತ ೨ ಬಿಹಿಲರ್ ಲಿಂಫಡೆನೋಪತಿ ಹಾಗು ರೆಟಿಕ್ಯುಲೋನಾಡ್ಯುಲರ್‌ ಧ್ರವತುಂಬುವಿಕೆ
  • ಹಂತ ೩ ಬೈಲ್ಯಾಟರಲ್ ಶ್ವಾಸಕೋಶದ ದ್ರವತುಂಬುವಿಕೆ
  • ಹಂತ ೪ ಫೈಬ್ರೋಸಿಸ್ಟಿಕ್ ಸಾರ್ಕೊಯಿಡೋಸಿಸ್ ವಿಶಿಷ್ಟವಾಗಿ ಮೇಲಿನ ಹಿಲರ್‌ನ್ನು ಒಳಕ್ಕೆಳೆದುಕೊಳ್ಳುತ್ತದೆ, ಪಿತ್ತಕೋಶ & ಬುಲ್ಲೌಸ್ ಬದಲಾವಣೆಗಳು.

ಇತರ ಅಂಗಗಳ ಪಾಲ್ಗೊಳ್ಳುವಿಕೆಯನ್ನು ಪರೀಕ್ಷಿಸುವಾಗ ಎಲೆಕ್ಟ್ರೋಕಾರ್ಡಿಯೋಗ್ರಾಮ್, ನೇತ್ರ ತಜ್ಞರಿಂದ ಕಣ್ಣಿನ ಪರೀಕ್ಷೆ, ಪಿತ್ತಜನಕಾಂಗದ ಕ್ರಿಯೆಯ ಪರೀಕ್ಷೆಗಳು, ಮೂತ್ರಪಿಂಡದ ಕಾರ್ಯನಿರ್ವಹಣೆ ಪರೀಕ್ಷೆ, ಸೀರಮ್ ಕ್ಯಾಲ್ಷಿಯಂ ಹಾಗು ೨೪-ಗಂಟೆಗಳ ಮೂತ್ರದ ಕ್ಯಾಲ್ಸಿಯಂ ಪರೀಕ್ಷೆಗಳು ಒಳಗೊಂಡಿವೆ.

ಸ್ತ್ರೀ ರೋಗಿಗಳಲ್ಲಿ ಸಾರ್ಕೊಯಿಡೋಸಿಸ್ ಬೇನೆಯು ವಿಶೇಷವಾಗಿ ಹೈಪೋಥೈರಾಯ್ಡಿಸಂ, ಹೈಪರ್ಥೈರಾಯ್ಡಿಸಂ ಹಾಗು ಇತರ ಥೈರಾಯ್ಡ್ ಕಾಯಿಲೆಗಳ ಜೊತೆ ಸಂಬಂಧವನ್ನು ಹೊಂದಿದೆ. ಹೀಗಾಗಿ ಥೈರಾಯ್ಡ್ ಗ್ರಂಥಿ ಕಾರ್ಯನಿರ್ವಹಣೆ ಬಗ್ಗೆ ತೀವ್ರ ನಿಗಾ ಇಡುವುದಕ್ಕೆ ಸಲಹೆ ನೀಡಲಾಗುತ್ತದೆ[೧೬]

ಕಾರಣಗಳು ಹಾಗು ಪ್ಯಾಥೋಫಿಸಿಯೋಲಜಿ

[ಬದಲಾಯಿಸಿ]

ಸಾರ್ಕೊಯಿಡೋಸಿಸ್ ಬೇನೆಗೆ ನಿರ್ದಿಷ್ಟ ಕಾರಣವು ತಿಳಿದುಬಂದಿಲ್ಲ. ಪ್ರಸಕ್ತ ಅಧ್ಯಯನದ ಆಧಾರದ ಮೇಲೆ, ಆನುವಂಶಿಕತೆಯಿಂದ ಬೇನೆಗೆ ಒಳಗಾಗಬಹುದಾದ ವ್ಯಕ್ತಿಗಳಲ್ಲಿ ಇದು ಪರಿಸರದ, ವೃತ್ತಿಗೆ ಅನುಗತವಾದ, ಅಥವಾ ಸೋಂಕನ್ನು ಉಂಟುಮಾಡುವ ವಸ್ತುಗಳಿಗೆ ಒಡ್ಡಿಕೊಂಡ ನಂತರ ಉಂಟಾಗುವ ಪ್ರತಿರಕ್ಷಿತ ಪ್ರತಿಕ್ರಿಯೆಯ ಬದಲಾವಣೆಯಿಂದ ಈ ಬೇನೆಯು ಉಂಟಾಗಬಹುದೆಂದು ಹೇಳಲಾಗಿದೆ.[೧೭]

ಪ್ರತಿರಕ್ಷಿತ ವ್ಯವಸ್ಥೆಯ ಅನಿಯಂತ್ರಣ

[ಬದಲಾಯಿಸಿ]

ಗ್ರ್ಯಾನುಲೋಮಟಸ್ ಉರಿಯೂತವು ಮುಖ್ಯವಾಗಿ ಏಕಕೋಶಗಳು, ಬೃಹತ್ಕಣಗಳು ಮತ್ತು ಸಕ್ರಿಯ T-ಲಿಂಫೋಸೈಟ್ಸ್‌ನ ಸಂಗ್ರಹಣೆಯಿಂದ ಕೂಡಿದೆ. ಜತಗೆ ಮುಖ್ಯ ಉರಿಯೂತ ಮಧ್ಯವರ್ತಿಗಳಾದ TNF-ಅಲ್ಫಾ, INF-ಗಾಮ, IL-2 and IL-12, Th1- ಧ್ರುವೀಕರಿಸಿದ ಪ್ರತಿಕ್ರಿಯೆಯ ವೈಶಿಷ್ಟ್ಯತೆ(T-ಹೆಲ್ಪರ್ ಲಿಂಫೋಸೈಟ್-1 ಪ್ರತಿಕ್ರಿಯೆ)ಗಳ ಹೆಚ್ಚಿನ ಉತ್ಪಾದನೆ. ಸಾರ್ಕೊಯಿಡೋಸಿಸ್ ಬೇನೆಯು ಉರಿಯೂತಗಳ ಪ್ರಕ್ರಿಯೆಯಲ್ಲಿ ಅಸಂಗತ ಪರಿಣಾಮವನ್ನು ಉಂಟುಮಾಡುತ್ತದೆ; ಇದು ಹೆಚ್ಚಿದ ಬೃಹತ್ಕಣಗಳಿಂದ ವಿಶೇಷತೆಯನ್ನು ಪಡೆಯುವುದರ ಜೊತೆಗೆ CD4 ಹೆಲ್ಪರ್ T-ಸೆಲ್‌ಗಳ ಸಕ್ರಿಯಕರಣದ ಪರಿಣಾಮವಾಗಿ ಉರಿಯೂತವು ವೇಗವಾಗಿ ವೃದ್ಧಿಹೊಂದುತ್ತವೆ. ಆದಾಗ್ಯೂ,ಟ್ಯೂಬರ್‌ಕ್ಯೂಲಿನ್‌ ಪರೀಕ್ಷೆ ಮುಂತಾದ ಪ್ರತಿಜನಕದ ಸವಾಲುಗಳಿಗೆ ಪ್ರತಿರಕ್ಷಕ ಪ್ರತಿಕ್ರಿಯೆ ದಮನಿತವಾಗುತ್ತದೆ.

ಈ ಅಸಂಗತ ಸ್ಥಿತಿಯಲ್ಲಿ ಏಕಕಾಲಕ್ಕೆ ನಡೆಯುವ ಹೈಪರ್- ಹಾಗು ಹೈಪೋ- ಕ್ರಿಯೆಯನ್ನು ಅನೆರ್ಜಿ(ಪ್ರತಿಜನಕ ಅಥವಾ ಪ್ರತಿಕಾಯಕ್ಕೆ ಪ್ರತಿರಕ್ಷಣೆ ತೋರದ ಸ್ಥಿತಿ) ಎಂದು ಸೂಚಿಸಲಾಗಿದೆ. ಈ ಅನೆರ್ಜಿಯು ಸೊಂಕುಗಳನ್ನು ಹಾಗು ಕ್ಯಾನ್ಸರ್ ನ್ನು ಹೆಚ್ಚಿಸುವ ಅಪಾಯಕ್ಕೆ ಜವಾಬ್ದಾರಿಯಾಗಬಹುದು. ನಿಯಂತ್ರಕವಾದ T-ಲಿಂಫೋಸೈಟ್ಸ್ ಸಾರ್ಕಾಯ್ಡ್ ಗ್ರ್ಯಾನುಲೋಮಾ ಹೊರವಲಯದಲ್ಲಿ IL-2 ಸ್ರವಿಸುವಿಕೆಯನ್ನು ತಡೆಗಟ್ಟುತ್ತದೆ. ಪ್ರತಿಜನಕ-ನಿರ್ದಿಷ್ಟ ಸ್ಮರಣೆ ಪ್ರತಿಕ್ರಿಯೆಗಳನ್ನು ತಡೆಗಟ್ಟುವ ಮೂಲಕ ಇದು ಅನೆರ್ಜಿಯ ಸ್ಥಿತಿಗೆ ಕಾರಣವೆಂದು ಊಹಿಸಲಾಗಿದೆ.[೧೮]

ಈ ನಡುವೆ TNF-ಅಲ್ಫಾ ಗ್ರ್ಯಾನುಲೋಮಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಂದು ವ್ಯಾಪಕವಾಗಿ ನಂಬಲಾಗಿದೆ. ಸಾರ್ಕೊಯಿಡೋಸಿಸ್ ಬೇನೆಯು TNF-ಆಲ್ಫಾ ಪ್ರತಿವರ್ತಿಯಾದ ಏಟನೆರ್ಸೆಪ್ಟ್ ಚಿಕಿತ್ಸೆ ನೀಡುವಾಗ ಕಾಣಿಸಿಕೊಳ್ಳಬಹುದು.

ಆನುವಂಶಿಕ ಸಂಬಂಧಗಳು

[ಬದಲಾಯಿಸಿ]

ಆನುವಂಶಿಕ ಲಕ್ಷಣಗಳ ಪರೀಕ್ಷೆಗಾಗಿ ಹಲವು ರೋಗಿಗಳ ವಂಶ ವಾಹಿಯನ್ನು ಸ್ವೀಕರಿಸಲಾಯಿತು, ಆದರೆ ಕೆಲವನ್ನು ಮಾತ್ರ ಮುಂದಿನ ಹಂತದ ಪರೀಕ್ಷೆಗಳಿಗೆ ದೃಢಪಡಿಸಲಾಯಿತು ಹಾಗೂ ಯಾವುದೇ ಖಾತರಿಯಾದ ವಂಶವಾಹಿ ಗುರುತುಗಳು ಕಂಡುಬರಲಿಲ್ಲ. ಪ್ರಸಕ್ತ ಅತ್ಯಂತ ಕುತೂಹಲಕಾರಿಯಾದ ರೋಗಿಯ ಜೀನ್ ಎಂದರೆ BTNL2, ಹಲವಾರು HLA-DR ಅಪಾಯಕಾರಿ ಆಲೀಲ್ (ಎರಡು ವ್ಯತಿರಿಕ್ತ ಗುಣಗಳನ್ನು ತೋರಿಸುವ ಆನುವಂಶಿಕ ಜೀನುಗಳ ಜೋಡಿಯಲ್ಲಿ ಒಂದು)ಗಳನ್ನೂ ಪರೀಕ್ಷಿಸಲಾಗಿದೆ.[೧೯] ಸತತವಾದ ಸಾರ್ಕೊಯಿಡೋಸಿಸ್‌ನಲ್ಲಿ, ಹಲ ಹಾಪ್ಲೋಟೈಪ್ HLA-B7-DR15 ಗಳು ಬೇನೆಗೆ ಸಹಕಾರಿಯಾಗಿರುತ್ತದೆ ಅಥವಾ ಇವೆರಡರ ನಿರ್ದಿಷ್ಟ ಸ್ಥಾನಗಳ ನಡುವೆ ಮತ್ತೊಂದು ಜೀನ್ ಸಂಬಂಧ ಹೊಂದಿರುತ್ತದೆ. ಶಾಶ್ವತವಲ್ಲದ ಬೇನೆಯಲ್ಲಿ HLA DR3-DQ2 ಜೊತೆಗೆ ಒಂದು ಬಲವಾದ ಆನುವಂಶಿಕ ಸಂಬಂಧವಿರುತ್ತದೆ.[೨೦] ಒಡಹುಟ್ಟಿದವರಲ್ಲಿ ಬೇನೆಯ ಬೆಳೆಯುವುದಕ್ಕೆ ಸಾಧಾರಣವಾಗಿ ಹೆಚ್ಚಿನ ಅಪಾಯವಿರುತ್ತದೆ(ಅಪಾಯದ ಅನುಪಾತ 5-6). ಇದು ಆನುವಂಶಿಕ ಲಕ್ಷಣಗಳು ಕೇವಲ ಒಂದು ಸಣ್ಣ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಬದಲಾದ ಪರಿಕಲ್ಪನೆಯೇನೆಂದರೆ, ಕುಟುಂಬದ ಸದಸ್ಯರು ಪರಿಸರದ ರೋಗಜನಕಗಳಿಗೆ ಸಮಾನವಾದ ರೀತಿಯಲ್ಲಿ ಒಡ್ಡಿಕೊಳ್ಳುವುದು ಆನುವಂಶಿಕ ಅಂಶ ಸ್ಪಷ್ಟಪಡಿಸುವ ಮೇಲ್ನೋಟದ ವಿವರಣೆಯಾಗಿದೆ.

ಸೋಂಕನ್ನು ಹರಡುವ ಅಂಶಗಳು

[ಬದಲಾಯಿಸಿ]

ಸೋಂಕನ್ನು ಹರಡುವ ಹಲವಾರು ಅಂಶಗಳು ವಿಶೇಷವಾಗಿ ಸಾರ್ಕೊಯಿಡೋಸಿಸ್ ಬೇನೆಯೊಂದಿಗೆ ತಳುಕು ಹಾಕಿಕೊಂಡಿವೆ. ಆದರೆ ಕಂಡುಬರುವ ಯಾವುದೇ ಸಂಯೋಜನೆಗಳು ಒಂದು ನೇರ ಕಾರಣವಾಗಿ ವರ್ತಿಸುತ್ತವೆ ಎಂದು ನಿರ್ದಿಷ್ಟವಾಗಿ ಸೂಚಿಸಲು ಸಾಕಾಗುವುದಿಲ್ಲ. ಪ್ರೊಪಿಯೋನಿಬ್ಯಾಕ್ಟೀರಿಯಮ್ ಆಕ್ನಿ ಗಳನ್ನು ಬ್ರೊನ್ಚೊಅಲ್ವಿಯೋಲರ್ ಲ್ಯಾವಿಜ್ (ಶ್ವಾಸಕೋಶಕ್ಕೆ ದ್ರವವನ್ನು ಹೊಗ್ಗಿಸಿ ಅದರ ಪರೀಕ್ಷೆಗೆ ಮರುಸಂಗ್ರಹಿಸುವುದು)ನ ಸರಿಸುಮಾರು 70% ರೋಗಿಗಳಲ್ಲಿ ಪತ್ತೆ ಮಾಡಬಹುದು. ಇದು ಬೇನೆಯ ಕ್ರಿಯೆಯ ಜೊತೆಗೆ ಸಂಬಂಧವನ್ನು ಹೊಂದಿದೆ, ಆದಾಗ್ಯೂ ಇದು 23% ನಿಯಂತ್ರಕರಲ್ಲೂ ಕಂಡು ಬರುತ್ತದೆ.[೨೧][೨೨] ಇತ್ತೀಚಿನ ಮೆಟಾ-ಅನಾಲಿಸಿಸ್(ಹಿಂದಿನ ಅಧ್ಯಯನಗಳ ಸಂಗ್ರಹದ ವಿಶ್ಲೇಷಣೆ) ಸಾರ್ಕೊಯಿಡೋಸಿಸ್ ಬೇನೆಯಲ್ಲಿ ಮೈಕೋಬ್ಯಾಕ್ಟೀರಿಯದ ಪಾತ್ರವನ್ನು ಪರೀಕ್ಷಿಸಿದಾಗ, 26.4% ನಷ್ಟು ರೋಗಿಗಳಲ್ಲಿ ಇದು ಕಂಡುಬಂತು. ಆದಾಗ್ಯೂ ಮೆಟಾ-ವಿಶ್ಲೇಷಣೆಯು ಒಂದು ಸಂಭವನೀಯ ಪಕ್ಷಪಾತವನ್ನು ಪತ್ತೆ ಮಾಡಿತು. ಹೀಗಾಗಿ ಫಲಿತಾಂಶಗಳಿಗೆ ಮತ್ತಷ್ಟು ದೃಢೀಕರಣ ದೊರಕಬೇಕಿದೆ.[೨೩][೨೪]

ಅಂಗಾಂಗ ಕಸಿ ಮೂಲಕ ಸಾರ್ಕೊಯಿಡೋಸಿಸ್ ಬೇನೆ ಹರಡುವ ಬಗ್ಗೆಯೂ ಸಹ ವರದಿಗಳಿವೆ.[೨೫]

ವಿಟಮಿನ್ ಡಿಯ ಅನಿಯಂತ್ರಣ

[ಬದಲಾಯಿಸಿ]

ಸಾರ್ಕೊಯಿಡೋಸಿಸ್ ಬೇನೆಯಲ್ಲಿ ಸಾಧಾರಣವಾಗಿ ವಿಟಮಿನ್ ಡಿ ಯ ಉತ್ಪತ್ತಿಯಲ್ಲಿ ಒಂದು ಅನಿಯಂತ್ರಣದ ಜೊತೆಗೆ ಎಕ್ಸಟ್ರಾರೆನಾಲ್ (ಮೂತ್ರಪಿಂಡದ ಹೊರಭಾಗದಲ್ಲಿ) ಉತ್ಪತ್ತಿಯು ಅಧಿಕವಾಗಿರುತ್ತದೆ.[೨೬] ನಿರ್ದಿಷ್ಟವಾಗಿ, ಗ್ರಾನ್ಯುಲೋಮದ ಒಳಗಿರುವ ಬೃಹತ್ಕಣಗಳು ವಿಟಮಿನ್ ಡಿ ಯನ್ನು ಸಕ್ರಿಯರೂಪಕ್ಕೆ ಪರಿವರ್ತಿಸುತ್ತದೆ. ಇದರ ಪರಿಣಾಮವಾಗಿ ಹಾರ್ಮೋನ್ 1,25-ಡೈಹೈಡ್ರೋಆಕ್ಸಿವಿಟಮಿನ್ ಡಿ ಯ ಪ್ರಮಾಣದಲ್ಲಿ ಹೆಚ್ಚಾಗುತ್ತವೆ ಹಾಗು ಹೈಪರ್ವಿಟಮಿನೋಸಿಸ್ ಡಿ ಯ ಲಕ್ಷಣಗಳಲ್ಲಿ ದಣಿವು, ಬಲಹೀನತೆ, ಶೀಘ್ರಕೋಪ, ಲೋಹೀಯ ರುಚಿ, ತಾತ್ಕಾಲಿಕ ಮರೆಗುಳಿತನ ಅಥವಾ ಅರಿವಿನ ಸಮಸ್ಯೆಗಳು ಒಳಗೊಳ್ಳುತ್ತವೆ. ಶರೀರದ ಸಮಕಾರಕ ಪ್ರತಿಕ್ರಿಯೆಗಳು (ಉದಾಹರಣೆಗೆ ಪ್ಯಾರಥೈರಾಯ್ಡ್ ಹಾರ್ಮೋನ್ ಮಟ್ಟದಲ್ಲಿ ನಿಗ್ರಹ) ರೋಗಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುವ ಹೈಪರ್ ಕ್ಯಾಲ್ಸೆಮಿಯ(ಕ್ಯಾಲ್ಸಿಯಂ ಪ್ರಮಾಣ ಹೆಚ್ಚುವುದು) ಬೆಳವಣಿಗೆಯಾಗಿದೆ ಎಂಬ ಅರ್ಥವನ್ನು ನೀಡುವುದಿಲ್ಲ. ಗರ್ಭಾವಸ್ಥೆಯಲ್ಲಿ ಕಂಡುಬರುವ ಎಸ್ಟ್ರಾಡಿಯೋಲ್ ಹಾಗು ಪ್ರೊಲ್ಯಾಕ್ಟಿನ್ ನ ಅತೀ ಹೆಚ್ಚಿನ ಮಟ್ಟಗಳಿಂದ ಈ ಪರಿಸ್ಥಿತಿ ಗಂಭೀರವಾಗಬಹುದು. ಇದರಿಂದ ಹೈಪರ್ ಕ್ಯಾಲ್ಸಿಯುರಿಯ ಹಾಗು/ಅಥವಾ ಸಮಕಾರಕ ಹೈಪೋ ಪ್ಯಾರಥೈರಾಯ್ಡಿಸಂ ಗೆ ಕಾರಣವಾಗಬಹುದು.[೨೭] ವಿಟಮಿನ್ ಡಿ ಯ ಹೆಚ್ಚಿದ ಪ್ರಮಾಣಗಳೂ ಸಹ ಪ್ರತಿರಕ್ಷಕ-ವ್ಯವಸ್ಥೆಯ ಅಸಮರ್ಪಕ ಕ್ರಿಯೆಗೆ ಕಾರಣವಾಗಬಹುದು, ಇದು ನಂತರ ಸಾರ್ಕಾಯ್ಡ್ ಪರಿಸ್ಥಿತಿಯ ಕಾರಣವಾಗಬಹುದು.

ವಿಟಮಿನ್ D ಯ ಅನಿಯಂತ್ರಣದ ನಡುವೆ ಸಂಪರ್ಕ, ಪ್ರತಿರಕ್ಷಕ ವ್ಯವಸ್ಥೆಯ ಮೇಲೆ ಅದರ ಪರಿಣಾಮ, ಹಾಗು ಎರಡರ ಪರಿಣಾಮ ಹೇಗೆ ಸಾರ್ಕೊಯಿಡೋಸಿಸ್ ಬೇನೆಗೆ ಕಾರಣವಾಗಬಹುದು ಎಂಬುದನ್ನು ಇತ್ತೀಚಿಗೆ Dr. ಟ್ರೆವೊರ್ ಮಾರ್ಷಲ್ ಶೋಧಿಸಿದ್ದಾರೆ. Dr. ಮಾರ್ಷಲ್ FDA ಮೇಲ್ವಿಚಾರಣೆಯಲ್ಲಿ ಪ್ರೋಟೋಕಾಲ್ (ಮಾರ್ಷಲ್ ಪ್ರೋಟೋಕಾಲ್)ಮೂಲಕ ಇತ್ತೀಚಿಗೆ ಸಂಶೋಧನೆ ಮಾಡಿದ ಸಿದ್ಧಾಂತವು,L -ಫಾರ್ಮ್ ಅಥವಾ ಕೋಶಭಿತ್ತಿ ಕೊರತೆಯ ಬ್ಯಾಕ್ಟಿರಿಯ ದೇಹಕ್ಕೆ ಸೋಂಕನ್ನು ಉಂಟುಮಾಡುತ್ತವೆ. ಜೊತೆಗೆ ವಿಟಮಿನ್ ಡಿ ಅನಿಯಂತ್ರಣವನ್ನು ಪ್ರಚೋದಿಸುವ ಅಥವಾ ಅಧಿಕಗೊಳಿಸುವ ಮೂಲಕ ಪ್ರತಿರಕ್ಷಕ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡುತ್ತದೆ. ಇದರ ಪರಿಣಾಮವಾಗಿ ಬ್ಯಾಕ್ಟಿರಿಯಾದ ಸೋಂಕಿನಿಂದ ದೇಹದ ಪ್ರತಿರಕ್ಷಕ ಪ್ರತಿಕ್ರಿಯೆಯನ್ನು ನಿಗ್ರಹಿಸುತ್ತವೆ. Dr. ಮಾರ್ಷಲ್ ರ ಸಂಶೋಧನೆಯು ವ್ಯಾಪಕವಾದ ಚರ್ಚೆಗೆ ಒಳಪಟ್ಟಿದೆ, ಹಾಗು ಮಾರ್ಷಲ್ ಪ್ರೋಟೋಕಾಲ್ ಸಲಹೆಯ ಪ್ರಕಾರ ಜನರು ವಿಟಮಿನ್ ಡಿ ಯ ಎಲ್ಲ ಪದಾರ್ಥಗಳನ್ನು ತ್ಯಜಿಸಬೇಕು. ಇದು ವಿಟಮಿನ್ ಡಿ ಪ್ರಯೋಜನಗಳಿಗೆ ಸಂಬಂಧಿಸಿದ ವ್ಯಾಪಕವಾದ ವೈದ್ಯಕೀಯ ಜ್ಞಾನಕ್ಕೆ ವಿರುದ್ಧವಾಗಿದೆ. ಮಾರ್ಷಲ್ ಪ್ರೋಟೋಕಾಲ್ ನ ಕಾರ್ಯಸಾಧ್ಯತೆಯ ಬಗ್ಗೆ ಯಾವುದೇ ಸಂಶೋಧನೆಗಳು ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟವಾಗಿಲ್ಲ. ಮಾರ್ಷಲ್ ವೃತ್ತಿಯಲ್ಲಿ ಒಬ್ಬ ವೈದ್ಯನಲ್ಲ; ಅವರು ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.[೨೮]

ಹೈಪರ್‌ಪ್ರೋಲ್ಯಾಕ್ಟಿನೇಮಿಯ

[ಬದಲಾಯಿಸಿ]

ಸಾರ್ಕೊಯಿಡೋಸಿಸ್ ಬೇನೆಯಲ್ಲಿ ಪ್ರೋಲ್ಯಾಕ್ಟಿನ್(ಪೆ‌ಪ್‌ಟೈಡ್ ಹಾರ್ಮೋನ್) ಸಾಧಾರಣವಾಗಿ ಅಧಿಕವಾಗಿರುತ್ತದೆ. 3-32% ನಡುವಿನ ಪರಿಸ್ಥಿತಿಗಳಲ್ಲಿ ಹೈಪರ್‌ಪ್ರೊಲ್ಯಾಕ್ಟಿನೇಮಿಯ(ರಕ್ತದಲ್ಲಿ ಅಧಿಕ ಮಟ್ಟದ ಪ್ರೊಲಾಕ್ಟಿನ್) ಇರುತ್ತದೆ. ಇದು ಸಾಧಾರಣವಾಗಿ ಅಮೇನೋರ್ರಿಯ,(ಮಹಿಳೆಯರರಲ್ಲಿ ಋತುಚಕ್ರದ ಅವಧಿ ಸ್ಥಗಿತ) ಗಲಾಕ್ಟೋರ್ರಿಯ(ಎದೆಯಿಂದ ಹಾಲು ಒಸರುವುದು) ಅಥವಾ ನಾನ್ ಪುಯೇರ್ಪೆರಲ್ ಮಸ್ಟಿಟಿಸ್(ಸ್ತನದ ಅಂಗಾಂಶದ ಉರಿಯೂತ) ಕಾರಣವಾಗುತ್ತದೆ.

ಪ್ರೋಲ್ಯಾಕ್ಟಿನ್ ಪ್ರತಿರಕ್ಷಕ ವ್ಯವಸ್ಥೆಯ ಮೇಲೆ ಒಂದು ವ್ಯಾಪಕವಾದ ಪರಿಣಾಮವನ್ನು ಬೀರುತ್ತದೆ. ಪ್ರೋಲ್ಯಾಕ್ಟಿನ್ ಮಟ್ಟದಲ್ಲಿ ಏರಿಕೆಯು ಬೇನೆಯ ಚಟುವಟಿಕೆ ಜೊತೆಗೆ ಸಂಯೋಜನೆಯನ್ನು ಹೊಂದಿದೆ ಅಥವಾ ಹಲವು ಆಟೊಇಮ್ಯೂನ್(ಸ್ವಂತ ಅಂಗಾಂಶಗಳ ಮೇಲೆ ಪ್ರತಿರಕ್ಷಕ ವ್ಯವಸ್ಥೆಯ ದಾಳಿ) ಬೇನೆಗಳ ಲಕ್ಷಣಗಳನ್ನು ಉಲ್ಬಣಗೊಳಿಸುತ್ತದೆ. ಹಾಗು ಔಷಧಗಳಲ್ಲಿ ಪ್ರೋಲ್ಯಾಕ್ಟಿನ್‌ನ ಅಂಶಗಳನ್ನು ಕಡಿಮೆ ಮಾಡಿದ ಹಲವು ಚಿಕಿತ್ಸೆಗಳಲ್ಲಿ ಫಲಿತಾಂಶವು ಫಲಕಾರಿಯಾಗಿದೆ.[೨೯] ಆದಾಗ್ಯೂ, ಸಾರ್ಕೊಯಿಡೋಸಿಸ್ ಬೇನೆಗೆ ಈ ಸಂಬಂಧವು ಹೊಂದುತ್ತದೆಯೇ ಎಂಬುದು ತಿಳಿದುಬಂದಿಲ್ಲ. ಜೊತೆಗೆ ಇತರ ಆಟೋಇಮ್ಯೂನ್ ಬೇನೆಗಳಲ್ಲಿ ಇಂತಹ ಸಂಬಂಧ ಸ್ಥಿರಪಟ್ಟಿರುವಂತೆ ಸಾರ್ಕೊಯಿಡೋಸಿಸ್ ಬೇನೆಯಲ್ಲಿ ಲಿಂಗದ ಪಕ್ಷಪಾತದ ಬಗ್ಗೆ ಕಡಿಮೆ ಅಭಿಪ್ರಾಯಗಳು ವ್ಯಕ್ತವಾಗಿವೆ. ಗರ್ಭಾವಸ್ಥೆಯಲ್ಲಿ, ಪ್ರೋಲ್ಯಾಕ್ಟಿನ್ ಹಾಗು ಎಸ್ಟ್ರೋಜೆನ್ ಕೆಲವು ಹಂತದವರೆಗೂ ಪರಸ್ಪರ ವಿರುದ್ಧವಾಗಿ ವರ್ತಿಸುತ್ತವೆ.ಶ್ವಾಸಕೋಶದ ಸಾರ್ಕೊಯಿಡೋಸಿಸ್ ಬೇನೆಯ ಲಕ್ಷಣಗಳು ಕೊಂಚ ಮಟ್ಟಿಗೆ ಚೇತರಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತದೆ ಆದರೆ ಲೂಪಸ್(ತೀವ್ರ ಉರಿಯೂತದ ಕಾಯಿಲೆ) ಯುವೇಟಿಸ್(ಕಣ್ಣಿನ ಉರಿಯೂತ) ಹಾಗು ಅರ್ಥ್ರಲ್ಜಿಯಾ(ಕೀಲುಗಳಲ್ಲಿ ನೋವು) ಪರಿಸ್ಥಿತಿಗಳು ಸ್ವಲ್ಪಮಟ್ಟಿಗೆ ಹದಗೆಡಬಹುದು.[೨೭] ಲೂಪಸ್, ಯುವೇಟಿಸ್ ಹಾಗು ಅರ್ಥ್ರಾಲ್ಜಿಯಾಗಳು ಕೆಲವೊಂದು ಪರಿಸ್ಥಿತಿಗಳಲ್ಲಿ ಪ್ರೋಲ್ಯಾಕ್ಟಿನ್ ಮಟ್ಟದಲ್ಲಿ ಹೆಚ್ಚಾದ ಕಾರಣದಿಂದ ಉಂಟಾಗುತ್ತದೆಂದು ಹೇಳಲಾಗಿದೆ. ಇದು ಬ್ರೋಮೋಕ್ರಿಪ್ಟಿನ್ ಚಿಕಿತ್ಸೆಗೆ ಸ್ಪಂದಿಸುತ್ತದೆ. ಆದರೆ ಇದನ್ನು ಸಾರ್ಕೊಯಿಡೋಸಿಸ್‌ಗೆ ನಿರ್ದಿಷ್ಟವಾಗಿ ಇಲ್ಲಿಯವರೆಗೆ ಪರೀಕ್ಷಿಸಲಾಗಿಲ್ಲ. ಸಾರ್ಕೊಯಿಡೋಸಿಸ್ ಬೇನೆಯಲ್ಲಿ ಪ್ರೋಲ್ಯಾಕ್ಟಿನ್ ಮಟ್ಟದ ಹೆಚ್ಚಳದ ಬಗ್ಗೆ ಕಾರಣಗಳು ತಿಳಿದುಬಂದಿಲ್ಲ. ಪ್ರೋಲ್ಯಾಕ್ಟಿನ್ ಕೆಲವು ಆಟೊಇಮ್ಯುನ್ ಬೇನೆಗಳಲ್ಲಿ T-ಲಿಂಫೋಸೈಟ್ಸ್‌ನಿಂದ(ಬಿಳಿರಕ್ತ ಕಣ ಲಿಂಫೋಸೈಟ್ಸ್‌ನ ಗುಂಪು) ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದರ ಮಟ್ಟ ಎಷ್ಟಿರುತ್ತದೆಂದರೆ ಹೈಪೋತಲಮಿಕ್ ಡೋಪಮಿನೆರ್ಜಿಕ್ ವ್ಯವಸ್ಥೆಯ ಪ್ರತಿಕ್ರಿಯೆಗೆ ಹಾನಿಯುಂಟುಮಾಡಬಹುದು.[೩೦]

ಹೆಚ್ಚಿನ ಪಿಟ್ಯೂಟರಿ ಪ್ರೋಲ್ಯಾಕ್ಟಿನ್ ಗಳು ಉರಿಯೂತಕ್ಕೆ ಮುಂಚಿನ ಹಂತವಾದ ಸೈಟೋಕಿನ್(ಸಣ್ಣ ಪ್ರೋಟೀನ್‌ಗಳು)ಪಾತ್ರವನ್ನು ವಹಿಸುತ್ತದೆ. ಪ್ರೋಲ್ಯಾಕ್ಟಿನ್ ಪ್ರತಿಕಾಯಗಳು ಇತರ ಆಟೊಇಮ್ಯೂನ್ ಬೇನೆಗಳಲ್ಲಿನ ಹೈಪರ್ ಪ್ರೋಲ್ಯಾಕ್ಟಿನೆಮಿಯ ದ ಪಾತ್ರವನ್ನು ವಹಿಸುತ್ತದೆ ಹಾಗೂ ಎಂಡೊಕ್ರೈನ್(ಗ್ರಂಥಿ) ಆಟೊಇಮ್ಯುನಿಟಿಯ ಅಧಿಕ ಉಪಸ್ಥಿತಿಯನ್ನು ಸಾರ್ಕೊಯಿಡೋಸಿಸ್ ರೋಗಿಗಳಲ್ಲಿ ಗಮನಿಸಲಾಗಿದೆ.[೩೧] ಇದು ಮೂತ್ರಪಿಂಡದ ಕಾಯಿಲೆ ಅಥವಾ ಸ್ಟೀರಾಯ್ಡ್ ಚಿಕಿತ್ಸೆಯ ಪರಿಣಾಮವೂ ಆಗಿರಬಹುದು. ನ್ಯೂರೋಸಾರ್ಕೊಯಿಡೋಸಿಸ್ ಸಾಂದರ್ಭಿಕವಾಗಿ ಹೈಪೋಪಿಟ್ಯೂರಿಸಂಗೆ(ಪಿಟ್ಯೂಟರಿ ಗ್ರಂಥಿಯಿಂದ ಹಾರ್ಮೋನುಗಳ ಕಡಿಮೆ ಸ್ರವಿಸುವಿಕೆ) ಕಾರಣವಾಗಬಹುದು ಆದರೆ ಹೈಪರ್ಪ್ರೋಲ್ಯಾಕ್ಟಿನೆಮಿಯ ಕಾರಣವಾಗಿಲ್ಲ.

ಥೈರಾಯ್ಡ್ ಗ್ರಂಥಿಯ ಬೇನೆ

[ಬದಲಾಯಿಸಿ]

ಸ್ತ್ರೀಯರಲ್ಲಿ, ಥೈರಾಯ್ಡ್ ಬೇನೆ ಹಾಗು ಸಾರ್ಕೊಯಿಡೋಸಿಸ್ ನಡುವೆ ಒಂದು ಮಹತ್ವವಾದ ಸಂಬಂಧವನ್ನು ವರದಿಮಾಡಲಾಗಿದೆ. ಈ ಸಂಬಂಧ ಕಡಿಮೆ ಗುರುತಿಸಲ್ಪಟ್ಟಿದ್ದರೂ ಪುರುಷ ರೋಗಿಗಳಲ್ಲಿ ಹೆಚ್ಚು ಮಹತ್ವವನ್ನು ಪಡೆದಿದೆ. ಸ್ತ್ರೀ ರೋಗಿಗಳಲ್ಲಿ ವಿಶೇಷವಾಗಿ ಹೈಪೋಥೈರಾಯ್ಡಿಸಂ, ಹೈಪರ್ಥೈರಾಯ್ಡಿಸಂ ಹಾಗು ಥೈರಾಯ್ಡ್ ಆಟೊಇಮ್ಯುನಿಟಿಯಲ್ಲಿ ಹೆಚ್ಚಿದ ಅಪಾಯವಿರುತ್ತದೆ. ಈ ಜನರಲ್ಲಿ ಥೈರಾಯ್ಡ್ ಬೇನೆಯ ರೋಗೊತ್ಪತ್ತಿಗೆ ಆಟೊಇಮ್ಯುನಿಟಿ ಅತ್ಯಂತ ಪ್ರಾಮುಖ್ಯವನ್ನು ಪಡೆದಿರುವಂತೆ ಕಂಡುಬಂದಿದೆ. ಈ ನಡುವೆ ಥೈರಾಯ್ಡ್ ಗ್ರಾನ್ಯುಲೋಮಟೋಸಿಸ್ ಅಪರೂಪವಾಗಿ ಕಂಡುಬರುತ್ತದೆ.[೧೬]

ಅತಿಸೂಕ್ಷ್ಮ ಪ್ರತಿಕ್ರಿಯೆ/ಆಟೊಇಮ್ಯುನ್

[ಬದಲಾಯಿಸಿ]

ಆಟೊಇಮ್ಯುನ್ ಬೇನೆಗಳ ಸಂಬಂಧವನ್ನು ಸಾಧಾರಣವಾಗಿ ಗಮನಿಸಲಾಗಿದೆ. ಇದು Th1 ಲಿಂಫೋಕಿನ್‌ನ ಉಪಸ್ಥಿತಿಯ ಪರಿಣಾಮವಾಗಿದೆ ಎಂದು ಕೆಲವು ಪುರಾವೆ ಆಧಾರ ಕಲ್ಪನೆಯನ್ನು ಬೆಂಬಲಿಸುತ್ತದೆ.[೧೬][೩೨]

ಸಾರ್ಕೊಯಿಡೋಸಿಸ್ ಸೆಲಿಯಕ್ ಬೇನೆ(ಸಣ್ಣಕರುಳಿನ ಆಟೊಇಮ್ಯೂನ್ ಅವ್ಯವಸ್ಥೆ) ಜೊತೆಗೆ ಸಂಬಂಧವನ್ನು ಹೊಂದಿದೆ. ಸೆಲಿಯಕ್ ಬೇನೆಯ ಪರಿಸ್ಥಿತಿಯಲ್ಲಿ, ಕೆಲವೊಂದು ಪ್ರೋಟೀನ್ ಸರಣಿಯಲ್ಲಿ ಒಂದು ದೀರ್ಘಕಾಲಿಕ ಪ್ರತಿಕ್ರಿಯೆ ಉಂಟಾಗುತ್ತವೆ. ಸಾಮಾನ್ಯವಾಗಿ ಗ್ಲುಟೆನ್ಸ್(ವಿಶೇಷ ತರದ ಪ್ರೋಟಿನ್) ಎಂದು ಕರೆಯಲ್ಪಡುವ ಇದನ್ನು ಕೆಲವು ಏಕದಳ ಧಾನ್ಯಗಳಲ್ಲಿ ಕಂಡುಬರುತ್ತದೆ. ಈ ಕ್ರಿಯೆಯು ಸಣ್ಣ ಕರುಳಿನ ವಿಲ್ಲಿ (ತೆಳುವಾದ ನಾಳದಂಥ ಚಾಚಿಕೆ) ಯನ್ನು ನಾಶಮಾಡುತ್ತದೆ. ಇದರ ಪರಿಣಾಮವಾಗಿ ಪೌಷ್ಟಿಕಗಳ ಅರೆಜೀರ್ಣತೆ ಉಂಟಾಗುತ್ತದೆ.

ಮಾದರಿ IV ಅತಿಸೂಕ್ಷ್ಮ ಪ್ರತಿಕ್ರಿಯೆಯ ಸಂಬಂಧವನ್ನು ವಿವರಿಸಲಾಗಿದೆ.[೩೩] ವಿಳಂಬವಾದ ಚರ್ಮದ ಅತಿಸೂಕ್ಷ್ಮ ಪ್ರತಿಕ್ರಿಯೆಯ ಪರೀಕ್ಷೆಯನ್ನು ಹೆಚ್ಚುತ್ತಿರುವ ಬೇನೆಯ ಪ್ರಮಾಣವನ್ನು ತಿಳಿಯಲು ನಡೆಸಲಾಗುತ್ತದೆ.[೩೪]

ಈ ರೀತಿಯಾದ ಚರ್ಚೆಯಲ್ಲಿ, ಕೆಲವೊಂದು ಪರಿಸ್ಥಿತಿಗಳಲ್ಲಿ ಬೇನೆಯು ಸೆಪ್ಟೆಂಬರ್ 11, 2001ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿಯಿಂದ ನೆಲಸಮಗೊಂಡ ಕಟ್ಟಡದಿಂದ ಹೊರಬಿದ್ದ ಧೂಳಿನ ಸೇವನೆಯಿಂದ ಉಂಟಾಗಿರಬಹುದೆಂದು ಹೇಳಲಾಗಿದೆ.[೩೫] ಹೆಚ್ಚಿನ ಮಾಹಿತಿಗಾಗಿ ಸೆಪ್ಟೆಂಬರ್ 11, 2001ರ ದಾಳಿಯಿಂದ ಆರೋಗ್ಯದ ಮೇಲಾದ ಪರಿಣಾಮಗಳು ನ್ನು ನೋಡಿ.

ಗರ್ಭಾವಸ್ಥೆ

[ಬದಲಾಯಿಸಿ]

ಸಾರ್ಕೊಯಿಡೋಸಿಸ್ ಸಾಮಾನ್ಯವಾಗಿ ಯಶಸ್ವೀ ಗರ್ಭಾವಸ್ಥೆಯನ್ನು ಹಾಗು ಪ್ರಸವವನ್ನು ತಡೆಗಟ್ಟುವುದಿಲ್ಲ. ಗರ್ಭಾವಸ್ಥೆಯಲ್ಲಿ ಕಂಡುಬರುವ ಅಂತರ್ವರ್ಧಕ ಎಸ್ಟ್ರೋಜನ್ ಗಳು ಸ್ವಲ್ಪ ಮಟ್ಟಿಗಿನ ಅನುಕೂಲವಾದ ಇಮ್ಮ್ಯುನೋಮಾಡ್ಯೂಲೇಟರಿ(ಒಂದಕ್ಕಿಂತ ಹೆಚ್ಚು ಪ್ರತಿರಕ್ಷಕ ನಿರ್ವಹಣೆ ನಿಯಂತ್ರಣ) ಪ್ರಭಾವವನ್ನು ಹೊಂದಿರುತ್ತದೆ. ಹೆಚ್ಚಿನ ಪರಿಸ್ಥಿತಿಗಳಲ್ಲಿ ಸಾರ್ಕೊಯಿಡೋಸಿಸ್ ಬೇನೆಯ ಚಿಕಿತ್ಸಾ ಕ್ರಮವು ಗರ್ಭಾವಸ್ಥೆಗೆ ತೊಂದರೆಯನ್ನೇನು ಉಂಟುಮಾಡುವುದಿಲ್ಲ. ಕೆಲವೊಂದು ಪರಿಸ್ಥಿತಿಗಳಲ್ಲಿ ಚೇತರಿಕೆ ಕಂಡುಬಂದರೆ ಮತ್ತೆ ಸ್ವಲ್ಪ ಪ್ರಕರಣಗಳಲ್ಲಿ ರೋಗ ಲಕ್ಷಣಗಳು ಇನ್ನೂ ಹದಗೆಡುವುದು ಪತ್ತೆಯಾಗಿದೆ.[೨೭]

ಚಿಕಿತ್ಸಾಕ್ರಮ

[ಬದಲಾಯಿಸಿ]

೩೦ ರಿಂದ ೭೦%ರಷ್ಟು ರೋಗಿಗಳಿಗೆ ಚಿಕಿತ್ಸೆಯ ಅವಶ್ಯಕತೆಯಿರುವುದಿಲ್ಲ.[] ಸಾಮಾನ್ಯವಾಗಿ ಪ್ರೆಡ್ನಿಸೋನ್ ಎಂಬ ಹೆಸರಿನಿಂದ ಪರಿಚಿತವಾಗಿರುವ ಕೋರ್ಟಿಕೊಸ್ಟೆರಾಯ್ಡ್ಸ್, ಹಲವು ವರ್ಷಗಳಿಂದ ಈ ಬೇನೆಗೆ ದೊರಕುತ್ತಿರುವ ಒಂದು ಚಿಕಿತ್ಸಾಕ್ರಮವಾಗಿದೆ. ಕೆಲವು ರೋಗಿಗಳಲ್ಲಿ, ಈ ಚಿಕಿತ್ಸೆಯು ನಿಧಾನವಾಗಿ ಪರಿಣಾಮವನ್ನು ಬೀರುತ್ತದೆ ಅಥವಾ ಬೇನೆಯು ವ್ಯತಿರಿಕ್ತವಾದ ಪರಿಣಾಮವನ್ನು ಬೀರಬಹುದು, ಆದರೆ ಇತರ ರೋಗಿಗಳು ಸ್ಟೀರಾಯ್ಡ್ ಚಿಕಿತ್ಸೆಗೆ ಪ್ರತಿಕ್ರಯಿಸುವುದಿಲ್ಲ. ಬೇನೆಯ ಪ್ರಾರಂಭಿಕ ಹಂತದಲ್ಲಿ ಕೋರ್ಟಿಕೊಸ್ಟೆರಾಯ್ಡ್ ಚಿಕಿತ್ಸಾಕ್ರಮವು ಚರ್ಚಾಸ್ಪದವಾಗಿದೆ ಏಕೆಂದರೆ ಹಲವು ಪರಿಸ್ಥಿತಿಗಳಲ್ಲಿ ಬೇನೆಯು ಸ್ವಾಭಾವಿಕವಾಗಿ ಹೊರಟುಹೋಗಬಹುದು.[೩೬] ಇದರ ಜೊತೆಯಲ್ಲಿ, ಕೋರ್ಟಿಕೊಸ್ಟೆರಾಯ್ಡ್ಸ್ ಚಿಕಿತ್ಸೆಯು ಹಲವು ನಿರ್ಧಾರಿತ ಔಷಧಿಗಳು-ಹಾಗು ಅದನ್ನು ನೀಡುವ ಕಾಲಾವಧಿಗಳಿವೆ- ಇದು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು(ದೀರ್ಘಕಾಲದ ಪ್ರೆಡ್ನಿಸನ್ ಚಿಕಿತ್ಸೆಗೆ ಒಳಪಟ್ಟಿರುವವರಲ್ಲಿ ದಿನ ಬಿಟ್ಟು ದಿನ ಔಷಧಿಗಳನ್ನು ನೀಡುವ ಮೂಲಕ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಬಹುದು),[೩೭]. ಜೊತೆಗೆ ಇವುಗಳ ಬಳಕೆಯನ್ನು ಸಾಮಾನ್ಯವಾಗಿ ತೀವ್ರತರವಾದ, ಒಂದೇ ಸಮನೆ ಹೆಚ್ಚುತ್ತಿರುವ ರೋಗಗಳಿಗೆ, ಅಥವಾ ಅಂಗಾಂಗಗಳಿಗೆ-ಹಾನಿಯುಂಟುಮಾಡುವ ಬೇನೆಗಳಿಗೆ ಸೀಮಿತಗೊಳಿಸಲಾಗಿದೆ. ಕೋರ್ಟಿಕೊಸ್ಟೆರಾಯ್ಡ್ಸ್ ಅಥವಾ ಇತರ ಇಮ್ಮ್ಯುನೋಸಪ್ರೆಸ್ಸೆಂಟ್ಸ್(ಪ್ರತಿರಕ್ಷಕ ವ್ಯವಸ್ಥೆಯ ಸಕ್ರಿಯತೆ ತಗ್ಗಿಸುವ) ಗಳ ಸ್ವಾಭಾವಿಕ ಇತಿಹಾಸದ ಮೇಲಿನ ಪ್ರಭಾವವು ಅಸ್ಪಷ್ಟವಾಗಿದೆ.

ತೀವ್ರತರವಾದ ಬೇನೆಯ ಲಕ್ಷಣಗಳು ಕಂಡುಬಂದಲ್ಲಿ ಅವುಗಳನ್ನು ಸಾಮಾನ್ಯವಾಗಿ ಸ್ಟೀರಾಯ್ಡ್ ಗಳಿಂದ ಚಿಕಿತ್ಸೆ ನೀಡಲಾಗುತ್ತದೆ, ಹಾಗು ಸ್ಟೀರಾಯ್ಡ್ ಗಳ ಅಂಶ ಕಡಿಮೆಯಿರುವ ಏಜೆಂಟ್ ಗಳಾದ ಅಜಾಥಿಯೋಪ್ರಿನ್ ಹಾಗು ಮೆತ್ಹೋಟ್ರೆಕ್ಸೇಟ್ ಗಳನ್ನೂ ಸಾಮಾನ್ಯವಾಗಿ ಬಳಸಲಾಗುತ್ತದೆ. ತುಂಬಾ ವಿರಳವಾಗಿ, ಸೈಕ್ಲೋಫಾಸ್ಪ್ಹಮೈಡ್ ನ್ನು ಸಹ ಬಳಸಲಾಗುತ್ತದೆ. ಗ್ರ್ಯಾನುಲೋಮಗಳು ಪ್ರತಿರಕ್ಷಿತ ಜೀವಕೋಶಗಳ ಸಂಗ್ರಹ, ವಿಶೇಷವಾಗಿ T ಸೆಲ್ಸ್ ಗಳಿಂದ ಉಂಟಾಗಿರುತ್ತವೆ. ಇಮ್ಮ್ಯುನೋಸಪ್ರೆಸೆಂಟ್ಸ್‌ಗಳನ್ನು, ಇಂಟರ್ಲ್ಯೂಕಿನ್-2 ಪ್ರತಿರೋಧಕಗಳು ಅಥವಾ ಆಂಟಿ- ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್- ಅಲ್ಫಾ ಚಿಕಿತ್ಸೆ (ಉದಾಹರಣೆಗೆ ಇನ್ಫ್ಲಿಕ್ಸಿಮಾಬ್) ಮುಂತಾದವುಗಳನ್ನು ಪ್ರಾಥಮಿಕ ರೋಗ ಲಕ್ಷಣಗಳಲ್ಲಿ ಬಳಕೆ ಮಾಡಿದಾಗ ಕೆಲವು ಪರಿಸ್ಥಿತಿಗಳಲ್ಲಿ ಯಶಸ್ವಿಯಾದ ಉದಾಹರಣೆಗಳಿವೆ. ದುರಾದೃಷ್ಟವಶಾತ್, ಇದರಲ್ಲಿ ಯಾವುದೂ ಒಂದು ಖಾತರಿಯಾದ ಚಿಕಿತ್ಸೆಯನ್ನು ಒದಗಿಸುವುದಿಲ್ಲ. ಜೊತೆಗೆ ಇದರಲ್ಲಿ ಗಮನಾರ್ಹವಾದ ಅಡ್ಡ ಪರಿಣಾಮಗಳು ಉದಾಹರಣೆಗೆ ಗುಪ್ತವಾಗಿರುವ ಕ್ಷಯ ವು ಪುನಃ ಸಕ್ರಿಯಗೊಳ್ಳಬಹುದಾದ ಒಂದು ಹೆಚ್ಚಿನ ಅಪಾಯವಿದೆ. ಆಂಟಿ-ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್-ಅಲ್ಫಾ ಚಿಕಿತ್ಸೆಯನ್ನು ಕೀಲುವಾತ ರೋಗದ ಏತನೇರ್ಸೆಪ್ಟ್ ನೊಂದಿಗೆ ನೀಡಿದಾಗ ಸಾರ್ಕೊಯಿಡೋಸಿಸ್ ಉಂಟಾಗಬಹುದೆಂದು ಗಮನಿಸಲಾಗಿದೆ.

ವಿಟಮಿನ್ Dಯ ಅನಿಯಂತ್ರಣ ಹಾಗು ಸಾರ್ಕೊಯಿಡೋಸಿಸ್ ನ ಹೊಮ್ಮುವಿಕೆಯ ನಡುವಿನ ನಂಟನ್ನು ಮಾರ್ಷಲ್ ಪ್ರೋಟೋಕಾಲ್ ನಲ್ಲಿ ಪರಿಶೋಧಿಸಲಾಯಿತು. ಇದು ಕೋಶಭಿತ್ತಿ ಕೊರತೆಯುಳ್ಳ ಬ್ಯಾಕ್ಟೀರಿಯ ದೇಹಕ್ಕೆ ಸೋಂಕನ್ನು ತರುವುದರ ಜೊತೆಗೆ ಪ್ರತಿರಕ್ಷಕ ವ್ಯವಸ್ಥೆ ಕಣ್ಗಾವಲಿನಿಂದ ತಪ್ಪಿಸಿಕೊಂಡು ಅನಿಯಂತ್ರಣವನ್ನು ಉತ್ತೇಜಿಸುತ್ತದೆ,ಇದರಿಂದ ದೇಹದ ಪ್ರತಿರಕ್ಷಕ ಪ್ರತಿಕ್ರಿಯೆ ದಮನವಾಗುತ್ತದೆ.

ಏಕೆಂದರೆ ಸಾರ್ಕೊಯಿಡೋಸಿಸ್ ವಿವಿಧ ಅಂಗಾಂಗ ವ್ಯವಸ್ಥೆಗಳಿಗೆ ಧಕ್ಕೆ ಉಂಟುಮಾಡಬಹುದು, ಸಾರ್ಕೊಯಿಡೋಸಿಸ್ ನ ರೋಗಿಗೆ ಪದೇ ಪದೇ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ವಿದ್ಯುತ್ ಹೃಲ್ಲೇಖ), ನೇತ್ರತಜ್ಞರಿಂದ ಕಣ್ಣಿನ ತಪಾಸಣೆ, ಪಿತ್ತಜನಕಾಂಗದ ಕ್ರಿಯೆಯ ಪರೀಕ್ಷೆಗಳು, ಸೀರಮ್ ಕ್ಯಾಲ್ಷಿಯಂ ಹಾಗು ೨೪ ಗಂಟೆ ಮೂತ್ರದಲ್ಲಿನ ಕ್ಯಾಲ್ಷಿಯಂ ಬಗ್ಗೆ ತಪಾಸಣೆ ನಡೆಸುತ್ತಿರಬೇಕು. ಸ್ತ್ರೀರೋಗಿಗಳಲ್ಲಿ ಸಾರ್ಕೊಯಿಡೋಸಿಸ್ ಬೇನೆಯು ವಿಶೇಷವಾಗಿ ಹೈಪೋಥೈರಾಯ್ಡಿಸಂ, ಹೈಪರ್ ಥೈರಾಯ್ಡಿಸಂ ಹಾಗು ಇತರ ಥೈರಾಯ್ಡ್ ಕಾಯಿಲೆಗಳ ಜೊತೆ ತಳುಕು ಹಾಕಿಕೊಂಡಿದೆ. ಹೀಗಾಗಿ ಥೈರಾಯ್ಡ್ ಕಾರ್ಯನಿರ್ವಹಣೆಯ ಬಗ್ಗೆ ತೀವ್ರ ನಿಗಾ ಇಡುವುದಕ್ಕೆ ಸಲಹೆ ನೀಡಲಾಗುತ್ತದೆ.[೧೬]

ಬೇನೆಯ ಬಗ್ಗೆ ಮುನ್ನರಿವು

[ಬದಲಾಯಿಸಿ]

ಬೇನೆಯು ಉಲ್ಬಣಗೊಳ್ಳಬಹುದು ಹಾಗು ಇಳಿಕೆಯಾಗುವುದರ ಜೊತೆಗೆ ಸ್ವಾಭಾವಿಕವಾಗಿ ಹೊರಟುಹೋಗಬಹುದು ಅಥವಾ ದೀರ್ಘಕಾಲಿಕವಾಗಿರಬಹುದು. ಕೆಲವು ರೋಗಿಗಲ್ಲಿ, ಇದು ಶ್ವಾಸಕೋಶದ ತಂತೂತಕವೃದ್ಧಿಗೆ ಕಾರಣವಾಗಿ ಸಾವಿಗೆ ಎಡೆ ಮಾಡಿಕೊಡಬಹುದು. ಸರಿಸುಮಾರು ಅರ್ಧದಷ್ಟು ಪರಿಸ್ಥಿತಿಗಳಲ್ಲಿ 12-36 ತಿಂಗಳುಗಳಲ್ಲಿ ಹಾಗು ಹೆಚ್ಚೆಂದರೆ 5 ವರ್ಷಗಳಲ್ಲಿ ಬೇನೆಯನ್ನು ಪರಿಹರಿಸಬಹುದು ಅಥವಾ ವಾಸಿಮಾಡಬಹುದು. ಕೆಲವು ಪರಿಸ್ಥಿತಿಗಳಲ್ಲಿ ಹಲವಾರು ದಶಕಗಳವರೆಗೆ ಬೇನೆಯು ಇರುತ್ತದೆ.[] ಹೃದಯಕ್ಕೆ ಸಂಬಂಧಿಸಿದಂತೆ ಬೇನೆಯ ಬಗ್ಗೆ ಮುನ್ನರಿವು ಸಾಕಷ್ಟಿರುವುದಿಲ್ಲ.[೩೮] ಸಾರ್ಕೊಯಿಡೋಸಿಸ್ ನ ರೋಗಿಗಳಲ್ಲಿ ಕ್ಯಾನ್ಸರ್ ಸಂಭವಿಸುವ ಪ್ರಮಾಣ ಜಾಸ್ತಿಯಿರುತ್ತದೆ, ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್, ಮಾರಕವಾದ ದುಗ್ಧಗ್ರಂಥಿಯ ಗಂತಿ ಗಳು ಹಾಗು ಇತರ ಅಂಗಾಂಗಗಳ ಕ್ಯಾನ್ಸರ್ ಸಾರ್ಕೊಯಿಡೋಸಿಸ್‌ನಿಂದ ಉಂಟಾಗುತ್ತದೆಂದು ತಿಳಿಯಲಾಗಿದೆ.[೩೯] ಸಾರ್ಕೊಯಿಡೋಸಿಸ್-ದುಗ್ಧಗ್ರಂಥಿಯ ಗಂತಿಯ ಲಕ್ಷಣಗಳಲ್ಲಿ, ಸಾರ್ಕೊಯಿಡೋಸಿಸ್ ಜೊತೆಗೆ ಲಿಮ್ಪ್ಹೋಪ್ರೋಲಿಫರೇಟಿವ್ ಬೇನೆ(ಲಿಂಫೋಸೈಟ್ಸ್ ಅತ್ಯಧಿಕ ಉತ್ಪಾದನೆ)ಯ ಬೆಳವಣಿಗೆಯಾಗುತ್ತದೆ ಉದಾಹರಣೆಗೆ ನಾನ್-ಹೊಡ್ಜ್ಕಿನ್ ಲಿಂಫೋಮ.[೪೦] ಇದು ಸಾರ್ಕೊಯಿಡೋಸಿಸ್ ಬೇನೆಯ ಪ್ರಕ್ರಿಯೆಯಲ್ಲಿ ಸಂಭವಿಸುವ ಪ್ರತಿರಕ್ಷೆಯ ವೈಪರೀತ್ಯಗಳನ್ನು ಆಧರಿಸಿದೆ ಎಂದು ಹೇಳಲಾಗಿದೆ.[೪೧] ಸಾರ್ಕೊಯಿಡೋಸಿಸ್ ಬೇನೆಯು ಕ್ಯಾನ್ಸರ್ ನಂತರ ಬರಬಹುದು[೪೨] ಅಥವಾ ಕ್ಯಾನ್ಸರ್ ನ ಜೊತೆಗೆ ಬರಬಹುದು.[೪೩] ಕೆಲವೊಂದು ಹೇರಿ ಸೆಲ್ ರಕ್ತಕ್ಯಾನ್ಸರ್,[೪೪] ತೀವ್ರ ಮ್ಯೆಲಾಯ್ಡ್ ರಕ್ತಕ್ಯಾನ್ಸರ್,[೪೫] ಹಾಗು ತೀವ್ರ ಮ್ಯೆಲೋಬ್ಲಾಸ್ಟಿಕ್ ರಕ್ತಕ್ಯಾನ್ಸರ್ [೪೬] ಸಾರ್ಕೊಯಿಡೋಸಿಸ್ ಗೆ ಸಂಬಂಧಿಸಿದ ಹಾಗೆ.

ಇವನ್ನೂ ನೋಡಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. "sarcoidosis" at Dorland's Medical Dictionary
  2. ೨.೦ ೨.೧ Syed, J.; Myers, R. (2004). "Sarcoid heart disease". Can J Cardiol. 20 (1): 89–93. PMID 14968147. {{cite journal}}: Unknown parameter |month= ignored (help)
  3. ೩.೦ ೩.೧ ೩.೨ ೩.೩ Nunes H, Bouvry D, Soler P, Valeyre D (2007). "Sarcoidosis". Orphanet J Rare Dis. 2: 46. doi:10.1186/1750-1172-2-46. PMC 2169207. PMID 18021432.{{cite journal}}: CS1 maint: multiple names: authors list (link) CS1 maint: unflagged free DOI (link)
  4. Henke, CE.; Henke, G.; Elveback, LR.; Beard, CM.; Ballard, DJ.; Kurland, LT. (1986). "The epidemiology of sarcoidosis in Rochester, Minnesota: a population-based study of incidence and survival". Am J Epidemiol. 123 (5): 840–5. PMID 3962966. {{cite journal}}: Unknown parameter |month= ignored (help)
  5. "ಅಮೆರಿಕನ್ ತೋರಾಸಿಕ್ ಸೊಸೈಟಿ: ಸ್ಟೇಟ್ಮೆಂಟ್ ಆನ್ ಸಾರ್ಕೊಯಿಡೋಸಿಸ್." Am J ರೆಸ್ಪಿರ್ ಕ್ರಿಟ್ ಕೇರ್ ಮೆಡ್ ೧೯೯೯;೧೬೦:೭೩೬-೭೫೫.
  6. James, William D.; Berger, Timothy G.; et al. (2006). Andrews' Diseases of the Skin: clinical Dermatology. Saunders Elsevier. ISBN 0-7216-2921-0. {{cite book}}: Explicit use of et al. in: |author= (help)CS1 maint: multiple names: authors list (link)
  7. ನ್ಯಾಷನಲ್ ಹಾರ್ಟ್, ಲಂಗ್, ಅಂಡ್ ಬ್ಲಡ್ ಇನ್ಸ್ಟಿಟ್ಯೂಟ್: DCI ಹೋಂ: ಲಂಗ್ ಡಿಸೀಸಸ್: ಸಾರ್ಕೊಯಿಡೋಸಿಸ್: ಚಿಹ್ನೆಗಳು & ರೋಗಲಕ್ಷಣಗಳು ಮೇ 9, 2009ರಲ್ಲಿ ಮರುಸಂಪಾದಿಸಲಾಗಿದೆ.
  8. ಟೋಲಾನೇ SM, ಕೋಲ್ಸನ್ YL, ಗಿಲ್ RR, ಶ್ಚುಲ್ಟೆ S, ಡುಗ್ಗನ್ MM, ಶುಲ್ಮ್ಯಾನ್ LN, ವಿನೆರ್ EP. ಸ್ಥಾನಾಂತರದ ಸ್ತನ ಕ್ಯಾನ್ಸರ್‌ನ ನಕಲು ಮಾಡುವ ಸಾರ್ಕೋಯಿಡೋಸಿಸ್. ಕ್ಲಿನ್ ಸ್ಥನ ಕ್ಯಾನ್ಸರ್. 2007 ಅಕ್ಟೊ;7(10):804-10. PubMed PMID 18021484.
  9. "ಸಾರ್ಕೊಯಿಡೋಸಿಸ್ ಅಂಡ್ ದಿ ಹಾರ್ಟ್". ಫೌಂಡೆಶನ್ ಫಾರ್ ಸಾರ್ಕೊಯಿಡೋಸಿಸ್ ರಿಸರ್ಚ್. 2 ಡಿಸೆಂಬರ್ 2007ರಲ್ಲಿ ಮರುಸಂಕಲಿಸಲಾಗಿದೆ. [೧] Archived 2012-12-13 ವೇಬ್ಯಾಕ್ ಮೆಷಿನ್ ನಲ್ಲಿ.
  10. ಅನ್ನ M. ಮ್ಯಾಕ್ಡಿವಿಟ್ ಹಾಗು ಅರ್ಮನ್ T. ಅಸ್ಕರಿ, "ಏ ಮಿಡಲ್-ಏಜ್ಡ್ ಮ್ಯಾನ್ ವಿಥ್ ಪ್ರೋಗ್ರೆಸ್ಸಿವ್ ಫೆಟೀಗ್,"ಕ್ಲೆವ್ಲಂಡ್ ಕ್ಲಿನಿಕ್ ಜರ್ನಲ್ ಆಫ್ ಮೆಡಿಸಿನ್ 2009; 76(10):564-574 doi:10.3949/ccjm.76a.08114
    This citation will be automatically completed in the next few minutes. You can jump the queue or expand by hand
  11. ಹಾರ್ಟ್. 2006 ಫೆಬ್ರವರಿ; 92(2): 282–288. doi:10.1136/hrt.2005.080481
    This citation will be automatically completed in the next few minutes. You can jump the queue or expand by hand
  12. ಫೋರೆನ್ಸಿಕ್ ಸೈನ್ಸ್ ಇಂಟರ್ನ್ಯಾಷನಲ್, ಸಂಪುಟ 89, ಸಂಚಿಕೆ 3, ಪುಟಗಳು 145-153
  13. Rajasenan, V.; Cooper, ES. (1969). "Myocardial sarcoidosis, bouts of ventricular tachycardia, psychiatric manifestations and sudden death. A case report". J Natl Med Assoc. 61 (4): 306–9. PMC 2611747. PMID 5796402. {{cite journal}}: Unknown parameter |month= ignored (help)
  14. ಜೇಮ್ಸ್, ವಿಲ್ಲಿಯಮ್; ಬರ್ಗರ್, ತಿಮೋಥಿ; ಎಲ್ಸ್ಟನ್, ಡಿರ್ಕ್ (2005). ಆಂಡ್ರ್ಯೂಸ್' ಡಿಸೀಸಸ್ ಆಫ್ ದಿ ಸ್ಕಿನ್: ಕ್ಲಿನಿಕಲ್ ಡರ್ಮಟಾಲಜಿ . (10th ed.). ಸಾಂಡರ್ಸ್. ISBN 0-7216-2921-0
  15. "ಆರ್ಕೈವ್ ನಕಲು". Archived from the original on 2010-03-27. Retrieved 2010-06-09.
  16. ೧೬.೦ ೧೬.೧ ೧೬.೨ ೧೬.೩ .Antonelli A, Fazzi P, Fallahi P, Ferrari SM, Ferrannini E (2006). "Prevalence of hypothyroidism and Graves disease in sarcoidosis". Chest. 130 (2): 526–32. doi:10.1378/chest.130.2.526. PMID 16899854. {{cite journal}}: Unknown parameter |month= ignored (help)CS1 maint: multiple names: authors list (link)
  17. Rossman MD, Kreider ME (2007). "Lesson learned from ACCESS (A Case Controlled Etiologic Study of Sarcoidosis)". Proc Am Thorac Soc. 4 (5): 453–6. doi:10.1513/pats.200607-138MS. PMID 17684288. {{cite journal}}: Unknown parameter |month= ignored (help)
  18. Kettritz R, Goebel U, Fiebeler A, Schneider W, Luft F (2006). "The protean face of sarcoidosis revisited". Nephrol. Dial. Transplant. 21 (10): 2690–4. doi:10.1093/ndt/gfl369. PMID 16861724. {{cite journal}}: Unknown parameter |month= ignored (help)CS1 maint: multiple names: authors list (link)
  19. Iannuzzi MC (2007). "Advances in the genetics of sarcoidosis". Proc Am Thorac Soc. 4 (5): 457–60. doi:10.1513/pats.200606-136MS. PMID 17684289. {{cite journal}}: Unknown parameter |month= ignored (help)
  20. Grunewald J, Eklund A, Olerup O (2004). "Human leukocyte antigen class I alleles and the disease course in sarcoidosis patients". Am. J. Respir. Crit. Care Med. 169 (6): 696–702. doi:10.1164/rccm.200303-459OC. PMID 14656748. {{cite journal}}: Unknown parameter |month= ignored (help)CS1 maint: multiple names: authors list (link)
  21. Hiramatsu J, Kataoka M, Nakata Y (2003). "Propionibacterium acnes DNA detected in bronchoalveolar lavage cells from patients with sarcoidosis". Sarcoidosis Vasc Diffuse Lung Dis. 20 (3): 197–203. PMID 14620162. {{cite journal}}: Unknown parameter |month= ignored (help)CS1 maint: multiple names: authors list (link)
  22. Inoue Y, Suga M (2008). "[Granulomatous diseases and pathogenic microorganism]". Kekkaku (in Japanese). 83 (2): 115–30. PMID 18326339.{{cite journal}}: CS1 maint: unrecognized language (link)
  23. Gupta D, Agarwal R, Aggarwal AN, Jindal SK (2007). "Molecular evidence for the role of mycobacteria in sarcoidosis: a meta-analysis". Eur. Respir. J. 30 (3): 508–16. doi:10.1183/09031936.00002607. PMID 17537780. {{cite journal}}: Unknown parameter |month= ignored (help)CS1 maint: multiple names: authors list (link)
  24. ಅಲ್ಮೆನೋಫ್ಫ್ PL, ಜಾನ್ಸನ್ A, ಲೆಸ್ಸೇರ್ M, ಮ್ಯಾಟ್ಮ್ಯಾನ್ LH. ಗ್ರೋಥ್ ಆಫ್ ಆಸಿಡ್ ಫಾಸ್ಟ್ ಲ ಫಾರ್ಮ್ಸ್ ಫ್ರಮ್ ದಿ ಬ್ಲಡ್ ಪೇಷೆಂಟ್ಸ್ ವಿಥ್ ಸಾರ್ಕೊಯಿಡೋಸಿಸ್. ತೋರಾಕ್ಸ್ 1996;51:530-3. PMID 8711683.
  25. ಪಡಿಲ್ಲ ML, ಸ್ಕ್ಹಿಲೆರೋ GJ, , ಟೆಯರ್ಸ್ಟೀನ್ AS.. ಡೋನರ್-ಅಕ್ವೈರ್ಡ್ ಸಾರ್ಕೊಯಿಡೋಸಿಸ್. ಸಾರ್ಕೊಯಿಡೋಸಿಸ್ ವಾಸ್ಕ್ ಡಿಫ್ಯೂಸ್ ಲಂಗ್ ಡಿಸ್ 2002;19:18-24. PMID 12002380.
  26. ಬಾರ್ಬರ್ GL, ಕೋಬರ್ನ್ JW, ಸ್ಲಾಟೋಪೋಲ್ಸ್ಕಿ E, ನಾರ್ಮನ್ AW, ಹೊರ್ಸ್ಟ್ RL. ಹೈಪರ್ ಕ್ಯಾಲ್ಸೆಮಿಯ ಇನ್ ಏ ಅನೆಫ್ರಿಕ್ ಪೇಷೆಂಟ್ ವಿಥ್ ಸಾರ್ಕೊಯಿಡೋಸಿಸ್: ಎವಿಡೆನ್ಸ್ ಫಾರ್ ಎಕ್ಸ್ ಸ್ಟ್ರಾರೆನಾಲ್ ಜೆನೆರೇಶನ್ ಆಫ್ 1,25-ಡಿ ಹೈಡ್ರೋಆಕ್ಸಿವಿಟಮಿನ್ D.N ಇಂಗ್ಲ J ಮೆಡ್ 1981;305:440-3. PMID 6894783.
  27. ೨೭.೦ ೨೭.೧ ೨೭.೨ Subramanian P, Chinthalapalli H, Krishnan M (2004). "Pregnancy and sarcoidosis: an insight into the pathogenesis of hypercalciuria". Chest. 126 (3): 995–8. doi:10.1378/chest.126.3.995. PMID 15364785. {{cite journal}}: Unknown parameter |month= ignored (help)CS1 maint: multiple names: authors list (link)
  28. ಮೆಲ್ಬಾರ್ನ್ ವಿಶ್ವವಿದ್ಯಾಲಯದ ವಿಚಾರಗೋಷ್ಠಿ (2006)." Archived 2011-07-25 ವೇಬ್ಯಾಕ್ ಮೆಷಿನ್ ನಲ್ಲಿ. ಮಲೆಕ್ಯುಲರ್ ಮೆಕ್ಯಾನಿಸಮ್ಸ್ ಡ್ರೈವಿಂಗ್ ದಿ ಕರೆಂಟ್ ಎಪಿಡೆಮಿಕ್ ಆಫ್ ಕ್ರೋನಿಕ್ ಡಿಸೀಸ್" Archived 2011-07-25 ವೇಬ್ಯಾಕ್ ಮೆಷಿನ್ ನಲ್ಲಿ.
  29. Yu-Lee LY (2002). "Prolactin modulation of immune and inflammatory responses". Recent Prog. Horm. Res. 57: 435–55. doi:10.1210/rp.57.1.435. PMID 12017556.
  30. Méndez I, Alcocer-Varela J, Parra A (2004). "Neuroendocrine dopaminergic regulation of prolactin release in systemic lupus erythematosus: a possible role of lymphocyte-derived prolactin". Lupus. 13 (1): 45–53. doi:10.1191/0961203304lu487oa. PMID 14870917.{{cite journal}}: CS1 maint: multiple names: authors list (link)
  31. Papadopoulos KI, Hörnblad Y, Liljebladh H, Hallengren B (1996). "High frequency of endocrine autoimmunity in patients with sarcoidosis". Eur. J. Endocrinol. 134 (3): 331–6. doi:10.1530/eje.0.1340331. PMID 8616531. {{cite journal}}: Unknown parameter |month= ignored (help)CS1 maint: multiple names: authors list (link)
  32. Romagnani S (1997). "The Th1/Th2 paradigm". Immunol. Today. 18 (6): 263–6. doi:10.1016/S0167-5699(97)80019-9. PMID 9190109. {{cite journal}}: Unknown parameter |month= ignored (help)
  33. "eMedicine - Hypersensitivity Reactions, Delayed : Article by Walter Duane Hinshaw". Retrieved 2008-09-18.
  34. Morell F, Levy G, Orriols R, Ferrer J, De Gracia J, Sampol G (2002). "Delayed cutaneous hypersensitivity tests and lymphopenia as activity markers in sarcoidosis". Chest. 121 (4): 1239–44. doi:10.1378/chest.121.4.1239. PMID 11948059. Archived from the original on 2020-05-07. Retrieved 2010-06-09. {{cite journal}}: Unknown parameter |month= ignored (help)CS1 maint: multiple names: authors list (link)
  35. ನ್ಯೂ ಯಾರ್ಕ್ ಟೈಮ್ಸ್ ಲೇಖನ, ಮೇ 24, 2007
  36. White, E.S.; Lynch Jp, 3rd (2007). "Current and emerging strategies for the management of sarcoidosis". Expert Opinion on Pharmacotherapy. 8 (9): 1293–1311. doi:10.1517/14656566.8.9.1293. PMID 17563264. {{cite journal}}: |access-date= requires |url= (help); Unknown parameter |month= ignored (help)CS1 maint: numeric names: authors list (link)
  37. ""ಡೋಸಿಂಗ್ ಕಂಸಿಡರೆಷನ್ಸ್"". Archived from the original on 2008-07-11. Retrieved 2010-06-09.
  38. J. ಸಯೆದ್ ಹಾಗು R. ಮಯೇರ್ಸ್, "ಸಾರ್ಕಾಯ್ಡ್ ಹಾರ್ಟ್ ಡಿಸೀಸ್," ಕ್ಯಾನ್ ಜ ಕಾರ್ಡಿಯೊಲ್. 2004 Jan;20(1):89-93.
  39. J. ಆಸ್ಕ್ಲಿಂಗ್; et al., "ಇನ್ಕ್ರೀಸ್ಡ್ ರಿಸ್ಕ್ ಫಾರ್ ಕ್ಯಾನ್ಸರ್ ಫಾಲೋಯಿಂಗ್ ಸಾರ್ಕೊಯಿಡೋಸಿಸ್," Am. J. ರೆಸ್ಪಿರ್. ಕ್ರಿಟ್. ಕೇರ್ ಮೆಡ್., ಸಂಪುಟ 160, ಸಂಖ್ಯೆ 5, ನವೆಂಬರ್ 1999, 1668-1672
  40. doi:10.1007/s00277-001-0415-6
    This citation will be automatically completed in the next few minutes. You can jump the queue or expand by hand
  41. doi:10.1007/s12032-007-0026-8
    This citation will be automatically completed in the next few minutes. You can jump the queue or expand by hand
  42. doi:10.1200/JCO.2005.02.089
    This citation will be automatically completed in the next few minutes. You can jump the queue or expand by hand
  43. doi:10.1378
    This citation will be automatically completed in the next few minutes. You can jump the queue or expand by hand
  44. G ಸ್ಚಿಲ್ಲೆರ್, J ಸೆಡ್ ಹಾಗು S ಪಾಲ್, "ಹೇರಿ ಸೆಲ್ ಲ್ಯುಕೆಮಿಯ ಅಂಡ್ ಸಾರ್ಕೊಯಿಡೋಸಿಸ್: ಏ ಕೇಸ್ ರಿಪೋರ್ಟ್ ಅಂಡ್ ರಿವ್ಯೂ ಆಫ್ ದಿ ಲಿಟರೇಚರ್," ಲ್ಯುಕೆಮಿಯ (2003) 17, 2057–2059. ಟೆಂಪ್ಲೇಟು:Cite doi:10.1038/sj.leu.2403074
  45. F ಮಲೋಯ್ಸೆಲ್ ಹಾಗು F ಒಬೆರ್ ಲಿಂಗ್, "ತೀವ್ರವಾದ ರಕ್ತಕ್ಯಾನ್ಸರ್ ಸಾರ್ಕೊಯಿಡೋಸಿಸ್ ಬೇನೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ," J R ಸೊಕ್ ಮೆಡ್. 1992 ಜನವರಿ; 85(1): 58–59. ಟೆಂಪ್ಲೇಟು:Cite PMCID: PMC1293471
  46. ಜೆರೋಮ್ ಮ್. ರಿಚ್, "ತೀವ್ರ ಮ್ಯೆಲೋಬ್ಲಾಸ್ಟಿಕ್ ರಕ್ತಕ್ಯಾನ್ಸರ್ ಅಂಡ್ ಸಾರ್ಕೊಯಿಡೋಸಿಸ್. ರೋಗೊತ್ಪತ್ತಿಯ ಪರಿಣಾಮ (p 366-369)," DOI: 10.1002/1097-0142(19850115)55:2<366::AID-CNCR2820550212>3.0.CO;2-1}}


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಚಿತ್ರಣಗಳು

[ಬದಲಾಯಿಸಿ]