ಸಮಸ್ಯೆ ಆಧಾರಿತ ಕಲಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A PBL group at Sydney Dental Hospital

ಸಮಸ್ಯೆ ಆಧಾರಿತ ಕಲಿಕೆ ಸಮಸ್ಯೆ ಆಧಾರಿತ ಕಲಿಕೆ ಪಿಬಿಲ್ ವಿದ್ಯಾರ್ಥಿ ಕೇಂದ್ರಿತ ಬೋಧನ ಕಲೆ ಆಗಿದೆ. ಇದರಲ್ಲಿ ವಿದ್ಯಾರ್ಥಿಗಳು ಒಂದು ವಿಷಯದ ಬಗ್ಗೆ ತಿಳಿಯಲು ಅವರ ಅನುಭವದಿಂದ ಒಂದು ತೆರೆದ ಸಮಸ್ಯೆಯನ್ನು ಪರಿಹರಿಸುತಾರೆ. ವಿದ್ಯಾರ್ಥಿಗಳು ಆಲೋಚನೆ ತಂತ್ರಗಳು ಮತ್ತು ವಿಚಾರ ವ್ಯಾಪ್ತಿ ಎರಡನ್ನು ಕಲಿಯುತ್ತಾರೆ. ಪಿಬಿಲ್ ಶೈಲಿ ಮೊದಲು ವೈದ್ಯಕೀಯ ಶಾಲೆಯಲ್ಲಿ ಆರಂಭಗೊಂಡಿತು, ಮತ್ತು ಈಗ ಇತರ ವಿಚಾರ ಶಾಲೆಗಳುಬಳಸಲಾಗುತ್ತದೆ. ಇದು 1960 ರಲ್ಲಿ ಕೆನಡಾದಲ್ಲಿ ಮೆಕ್ ಮಾಸ್ಟರ್ ಯೂನಿವರ್ಸಿಟಿ ಮೆಡಿಕಲ್ ಶಾಲೆಯಲ್ಲಿ ಅಭಿವೃದ್ಧಿಪಡಿಸಲಾಯಿತು ಮತ್ತು ನಂತರ ಜಗತ್ತಿನಾದ್ಯಂತ ಹರಡಿಕೊಂಡಿತು. ವಿದ್ಯಾರ್ಥಿಯರಲ್ಲಿ ಹೊಂದಿಕೊಳ್ಳುವ ಜ್ಞಾನ ಮತು ಪರಿಣಾಮಕಾರಿ ಸಮಸ್ಯೆ ಬಿಡಿಸುವ ಕೌಶಲ್ಯಗಳು, ಸ್ವಯಂ ನಿರ್ದೇಶನದ ಕಲಿಕೆ ಪರಿಣಾಮಕಾರಿ ಸಹಭಾಗಿತ್ವ ಮತ್ತು ಸ್ವಾಭಾವಿಕ ಪ್ರೇರಣೆ ಅಭಿವೃದ್ಧಿ ಸಹಾಯ ಮಾಡುವುದೆ ಪಿಬಿಲ್ನ ಧ್ಯೇಯ ಅಗಿದೆ.[೧] ಸಮಸ್ಯೆ ಆಧಾರಿತ ಕಲಿಕೆ ಸಕ್ರಿಯ ಕಲಿಕೆಯ ಒಂದು ಶೈಲಿಯಾಗಿದೆ.

ವಿದ್ಯಾರ್ಥಿಗಳು ಗುಂಪಿನಲ್ಲಿ ಚರ್ಚಿಸುವಗ ಅವರಿಗೆ ಏನು ತಿಳಿದಿದೆ ಏನು ತಿಳಿಯಬೇಕಾಗಿದೆ, ಮತ್ತು ಎಲ್ಲಿ ಮತ್ತು ಹೇಗೆ ಸಮಸ್ಯೆಯ ಪರಿಹಾರಕ್ಕಾಗಿ ಹೊಸ ಮಾಹಿತಿಯನ್ನು ಪಡೆಯುದನ್ನು ಪತ್ತೆಹಚುತ್ತಾರೆ. ಇದರಲ್ಲಿ ಶಿಕ್ಷಕರ (ಪಿಬಿಲ್ ಶಿಕ್ಷಕ ಎಂದು ಕರೆಯಲಾಗುತ್ತದೆ) ಪಾತ್ರ ಬೆಂಬಲ ಮತ್ತು ಮಾರ್ಗದರ್ಶನೆ ನೀಡುವುದು, ಮತ್ತು ಕಲಿಕಾ ಪ್ರಕ್ರಿಯೆಯ ಮೇಲ್ವಿಚಾರಣೆ ಮೂಲಕ ಕಲಿಕೆಗೆ ಅನುಕೂಲ ಮಾಡುವುದು.[೨] ಶಿಕ್ಷಕ ಸಮಸ್ಯೆಯನ್ನು ಪರಿಹರಿಸಲು ವಿದ್ಯಾರ್ಥಿಯರನ್ನು ಪ್ರೋತ್ಸಾಹಿಸಿ ವಿಶ್ವಾಸ ನಿರ್ಮಾಣ ಮಾಡಬೇಕು ಮತ್ತೆ ಅವರ ತಿಳುವಳಿಕೆಯನ್ನು ವಿಸ್ತರಿಸಬೇಕು. ಪಿಬಿಲ್ ಸಾಂಪ್ರದಾಯಿಕ ಬೋಧನೆಯಿಂದ ಮತ್ತು ತತ್ವಶಾಸ್ತ್ರ ಕಲಿಕೆಯಿಂದ[೩] ಮಾದರಿ ಶಿಫ್ಟ್ ಪ್ರತಿನಿಧಿಸುತ್ತದೆ ಯಾಕೆಂದರೆ ಅವು ಹೆಚ್ಚಾಗಿ ಉಪನ್ಯಾಸ ಆಧರಿಸಿದೆ. ಪಿಬಿಲ್ ಕಲಿಸಿಕೊಡುವ ರಚನೆಗಳು ಸಾಂಪ್ರದಾಯಿಕ ತರಗತಿಯ/ಉಪನ್ಯಾಸ ಬೋಧನೆಗಿಂತ ಅತ್ಯಂತ ವಿಭಿನ್ನವಾಗಿವೆ.

ಅರ್ಥ[ಬದಲಾಯಿಸಿ]

ಬಾರೋವ್ಸ್ ಸಮಸ್ಯೆ ಆಧಾರಿತ ಕಲಿಕೆ ಮಾದರಿಯನ್ನು ಹೀಗೆ ವ್ಯಾಖ್ಯಾನಿಸಿದ್ದಾನೆ:[೪]

1. ವಿದ್ಯಾರ್ಥಿ ಕೇಂದ್ರಿತ ಕಲಿಕೆ
2. ವಿದ್ಯಾರ್ಥಿಗಳ ಸಣ್ಣ ಗುಂಪುಗಳು ಮಾಡಲಾಗುತ್ತದೆ ಹೆಚ್ಚಾಗಿ ೬-೧೦ ಜನರು
3. ಆಯೋಜಕರು ಅಥವಾ ಶಿಕ್ಷಕರು ವಿದ್ಯಾರ್ಥಿಯರನ್ನು ಕಲಿಸುವ ಬದಲು ಮಾರ್ಗದರ್ಶನ ನೀಡತ್ತಾರೆ
4. ಸಮಸ್ಯೆ ಗುಂಪಿನ ಸಂಘಟಿತ ಗಮನಕ್ಕೆ ಅಡಿಪಾಯವಾಗಿದೆ, ಮತ್ತು ಕಲಿಕೆಯನ್ನು ಪ್ರಚೋದಿಸುತ್ತದೆ
5. ಸಮಸ್ಯೆ ಸಮಸ್ಯೆಯನ್ನು ಪರಿಹರಿಸುವ ಕೌಶಲಗಳ ಅಭಿವೃದ್ಧಿಗೆ ಒಂದು ವಾಹನವಾಗಿದೆ. ಇದು ಅರಿವಿನ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ.
6. ಹೊಸ ಜ್ಞಾನವನ್ನು ಸ್ವಯಂ ನಿರ್ದೇಶನದ ಕಲಿಕೆಯ (ಎಸ್ ಡಿ ಎಲ್) ಮೂಲಕ ಪಡೆಯಲಾಗುತ್ತದೆ.

ಇತಿಹಾಸ[ಬದಲಾಯಿಸಿ]

ಪಿ ಬಿ ಎಲ್ ನ್ನು ಹೋವರ್ಡ್ ಬಾರೋವ್ಸ್ ಮತ್ತು ಅವರ ಸಹೋದ್ಯೋಗಿಗಳು ೧೯೬೦ ರಲ್ಲಿ ಕೆನಡಾಮೆಕ್ ಮಾಸ್ಟರ್ ವಿಶ್ವವಿದ್ಯಾಲಯ ಹ್ಯಾಮಿಲ್ಟನ್, ಒಂಟಾರಿಯೊ ವೈದ್ಯಕೀಯ ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರವರ್ತನಗೊಳಿಸಿದರು.[೫] ವೈದಕೀಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ವೈದ್ಯಕೀಯ ಶಿಕ್ಷಣದಿಂದ ಬೇಸತ್ತಿದ್ದರು, ಮತ್ತು ವೈದ್ಯಕೀಯ ಶಾಲೆಯ ಮೊದಲ ಮೂರು ವರ್ಷಗಳಲ್ಲಿ ಅಪಾರ ಪ್ರಮಾಣದಲ್ಲಿ ಮಂಡಿಸಿದ ವಿಷಯದಲ್ಲಿ ವೈದ್ಯಕೀಯ ವೃತ್ತಿ ಮತ್ತು ಪ್ರಾಯೋಗಿಕವಾಗಿ ಆಧಾರಿತ ಔಷಧಲ್ಲಿ ಸ್ವಲ್ಪ ಪ್ರಸ್ತುತತೆಯನ್ನು ಅರ್ಥ ಮಾಡಿಕೋಂಡಿದ್ದರು.[೬] ಪಿ ಬಿ ಎಲ್ ಪಠ್ಯಕ್ರಮ ಕಲಿಯುವವರಿಗೆ ಉತ್ತೇಜಿಸುವ ಸಲುವಾಗಿ ಅಭಿವೃದ್ಧಿಪಡಿಸಲಾಯಿತು, ಮತ್ತು ಕಲಿಯುವವರಿಗೆ ಭವಿಷ್ಯದ ಪಾತ್ರಗಳಲ್ಲಿ ಕಲಿಕೆಯ ಪ್ರಸ್ತುತತೆಯನ್ನು ನೋಡಲು ಸಹಾಯ ಮಾಡಲು, ಕಲಿಕೆಯ ಕಡೆಗೆ ಉನ್ನತ ಮಟ್ಟದ ಪ್ರೇರಣೆ ನಿರ್ವಹಿಸಲು, ಮತ್ತು ಕಲಿಯುವವರಿಗೆ ಜವಾಬ್ದಾರಿ, ವೃತ್ತಿಪರ ವರ್ತನೆಗಳ ಪ್ರಾಮುಖ್ಯತೆಯನ್ನು ತೋರಿಸಲು ಇದನ್ನು ಅಭಿವೃದ್ಧಿಪಡಿಸಲಾಯಿತು.[೪]

ಸಮಸ್ಯೆ ಆಧಾರಿತ ಕಲಿಕೆಯನ್ನು ಇತರ ವೈದ್ಯಕೀಯ ಶಾಲಾ ಕಾರ್ಯಕ್ರಮಗಳು[೪] ಕೂಡ ಅಳವಡಿಸಿಕೊಂಡಿದ್ದಾರೆ, ಇತರ ಕೆ -೧೨[೪][೭] ಹಾಗೂ ಪದವಿಪೂರ್ವ ಬೋಧನೆಗಳು[೮][೯][೧೦] ಅಳವಡಿಸಿಕೋಂಡಿದ್ದಾರೆ. ಪಿ ಬಿ ಎಲ್ ನ ಬಳಕೆ ವೈದ್ಯಕೀಯ ಶಾಲೆಗಳ ಕಾರ್ಯಕ್ರಮಗಳಿಂದ ಆರಂಭವಾಗಿ ಈಗ ಇತರ ಆರೋಗ್ಯ ವಿಜ್ಞಾನ, ಗಣಿತ, ಕಾನೂನು, ಶಿಕ್ಷಣ, ಅರ್ಥಶಾಸ್ತ್ರ, ವ್ಯವಹಾರ, ಸಾಮಾಜಿಕ ವಿಜ್ಞಾನ, ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ವಿಸ್ತರಿಸಿದೆ.[೭] ಪಿ ಬಿ ಎಲ್ ನ ಬಳಕೆ, ಇತರ ವಿದ್ಯಾರ್ಥಿ ಕೇಂದ್ರಿತ ಬೋಧನ ಕಲೆಗಳ ಹಾಗೆಯೇ ಸಾಂಪ್ರದಾಯಿಕ ಬೋಧನಾ ಕಲೆಗಳ ವೈಫಲ್ಯಗಳನ್ನು ಗುರುತಿಸಿ ಪ್ರೇರಣೆ ತೆಗೆದುಕೊಂಡಿದೆ[೧೧][೧೨] ಮತ್ತು ಜನರು ಹೇಗೆ ಆಳವಾದ ಗ್ರಹಿಕೆಗಳನ್ನು ತಿಳಿಯಲು ಹುಟ್ಟು ಹಾಕುತ್ತಾರೆ ಇದರಿಂದ ಕೂಡ ಪ್ರೇರಣೆ ತೆಗೆದುಕೊಂಡಿದೆ.[೧೩] ಸಾಂಪ್ರದಾಯಿಕ ಸೂಚನಾ ಭಿನ್ನವಾಗಿ, ಪಿ ಬಿ ಎಲ್ ವಿದ್ಯಾರ್ಥಿಯನ್ನು ಸಕ್ರಿಯವಾಗಿ ಜ್ಞಾನ ಹುಟ್ಟುಹಾಕಲು ತೊಡಗಿಸುತ್ತದೆ. ಪಿ ಬಿ ಎಲ್ ಲ್ಲಿ ವಿವಿಧ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಬಹುದು ಮತ್ತು ಒಂದಕ್ಕಿಂತ ಹೆಚ್ಚು ಪರಿಹಾರವನ್ನು ಕೊಡಬಹುದು.[೧೪]

ಅನುಮೋದಕರು[ಬದಲಾಯಿಸಿ]

ಪಿ ಬಿ ಎಲ್ ನ ಸಮರ್ಥಕರು ಪಿ ಬಿ ಎಲ್ ನ್ನು ವಿಷಯ ಜ್ಞಾನ ಹೆಚ್ಚಿಸಲು ಬಳಸಬಹುದು, ಮತ್ತು ಇದು ಏಕಕಾಲದಲ್ಲಿ ಸಂವಹನದ ಅಭಿವೃದ್ಧಿ, ಸಮಸ್ಯೆಗಳನ್ನು ಪರಿಹರಿಸುವ, ನಿರ್ಣಾಯಕ ಚಿಂತನೆ, ಸಹಯೋಗ, ಮತ್ತು ಸ್ವಯಂ-ನಿರ್ದೇಶನ ಕಲಿಕೆಯ ಕೌಶಲಗಳನ್ನು ಅಭಿವೃದ್ಧಿ ಮಾಡಬಹುದು ಎಂದು ಇದರ ಸಮರ್ಥನೆ ಮಾಡುತ್ತಾರೆ.[೧೫][೧೬] ಪಿ ಬಿ ಎಲ್ ವಿದ್ಯಾರ್ಥಿಗಳಿಗೆ ಒಂದು ಕೃತಕ ವಾಸ್ತವ ಜಗತ್ತಿನಲ್ಲಿ ಕೆಲಸ ಮತ್ತು ವೃತ್ತಿಪರ ಸಂದರ್ಭದಲ್ಲಿ ಸ್ಥಾನವನ್ನು ನೀಡುತ್ತದೆ ಮತ್ತು ನೈತಿಕ ಸಮಸ್ಯೆಗಳನ್ನು ಅರ್ಥ ಮಾಡಿಕೋಳ್ಲಲು ಮತ್ತು ಆದನ್ನು ಪರಿಹರಿಸಿ ಫಲಿತಾಂಶ ಪಡೆಯಲು ಬೇಕಾದ ನೀತಿ, ಪ್ರಕ್ರಿಯೆ ಇದರಲ್ಲಿ ಒಳಗೊಂಡಿದೆ. ವಿದ್ಯಾರ್ಥಿಗಳು ಕಲಿಕೆಯ ತಂತ್ರಗಳ ಸಂಯೋಜನೆಯ ಮೂಲಕ ಅಧ್ಯಯನ ಮಾಡಿ ಸಮಸ್ಯೆಯ ಸ್ವರೂಪ ಕಂಡುಹಿಡಿಯಲು, ಅದರ ಪರಿಹಾರವನ್ನು ಆಯ್ಕೆ ಮಾಡಿ ಮತ್ತು ಅದರ ನಿರ್ಬಂಧಗಳನ್ನು ಅರ್ಥಮಾಡಿ, ಆದಾನ ಚರಾಂಶಗಳನ್ನು ವಿವರಿಸಿ ಮತ್ತು ಅದರಲ್ಲಿ ಒಳಗೊಂಡಿರುವ ದೃಷ್ಟಿಕೋನಗಳನ್ನು ಅರ್ಥೈಸಿಕೊಂಡು, ಸಮಸ್ಯೆಯ ಸಂಕೀರ್ಣ ಸಾಮಾಜಿಕ ಸ್ವಭಾವನ್ನು ಪರಿಹರಿಸುವುದನ್ನು ತಿಳಿದುಕೋಳ್ಲುತ್ತಾರೆ ಮತ್ತು ಹೇಗೆ ಸ್ಪರ್ಧಾತ್ಮಕ ನಿರ್ಣಯಗಳ ನಿರ್ಧಾರಗಳನ್ನು ತಿಳಿಸಬಹುದು ಇದನ್ನು ಕಲಿಯುತ್ತಾರೆ. .

ಉಲ್ಲೇಖಗಳು[ಬದಲಾಯಿಸಿ]

 1. Hmelo-Silver, Cindy E. (2004). "Problem-Based Learning: What and How Do Students Learn?". Educational Psychology Review 16 (3): 235. doi:10.1023/B:EDPR.0000034022.16470.f3
 2. Schmidt, Henk G; Rotgans, Jerome I; Yew, Elaine HJ (2011). "The process of problem-based learning: What works and why". Medical Education. 45 (8): 792–806. doi:10.1111/j.1365-2923.2011.04035.x. PMID 21752076.
 3. Hung, Woei (2011). "Theory to reality: A few issues in implementing problem-based learning". Educational Technology Research and Development. 59 (4): 529. doi:10.1007/s11423-011-9198-1.
 4. ೪.೦ ೪.೧ ೪.೨ ೪.೩ Barrows, Howard S. (1996). "Problem-based learning in medicine and beyond: A brief overview". New Directions for Teaching and Learning. 1996 (68): 3. doi:10.1002/tl.37219966804.
 5. Neville, Alan J. (2009). "Problem-Based Learning and Medical Education Forty Years on". Medical Principles and Practice 18 (1): 1–9. doi:10.1159/000163038. PMID 19060483
 6. How people learn brain, mind, experience, and school (Expanded ed., 4. printing ed.). Washington, DC: National Acad. Press. 2001. ISBN 978-0309070362.
 7. ೭.೦ ೭.೧ Gasser, Kenneth W. (June 2011). "Five Ideas for 21st Century Math Classrooms". American Secondary Education. 39 (3): 108–16. Retrieved 16 November 2012.
 8. Armstrong, Elizabeth G (2008). "A Hybrid Model of Problem-based Learning". In Boud, David; Feletti, Grahame (eds.). The challenge of problem-based learning. London: Routledge. ISBN 978-0-7494-2560-9. {{cite book}}: Unknown parameter |chapterurl= ignored (help)
 9. Duch, Barbara J.; Groh, Susan; Allen, Deborah E. (2001). The power of problem-based learning : a practical "how to" for teaching undergraduate courses in any discipline (1st ed.). Sterling, VA: Stylus Pub. ISBN 1579220371.[page needed]
 10. Peters, José A. Amador, Libby Miles, C.B. (2006). The practice of problem-based learning : a guide to implementing PBL in the college classroom. Bolton, Mass.: Anker Pub. Co. ISBN 978-1933371078.{{cite book}}: CS1 maint: multiple names: authors list (link)[page needed]
 11. Wingspread Conference. (1994). Quality Assurance in Undergraduate Education: What the Public Expects. Denver, CO: Education Commission of the States[page needed]
 12. Kenney, Shirley Strum. "Reinventing Undergraduate Education:A Blueprint for America's Research Universities" (PDF). The Boyer Commission on Educating Undergraduates in the Research University. Northern Illinois University. Archived from the original (PDF) on 22 ಜುಲೈ 2013. Retrieved 17 November 2012.
 13. How people learn brain, mind, experience, and school (Expanded ed., 4. printing ed.). Washington, DC: National Acad. Press. 2001. ISBN 978-0309070362. {{cite book}}: |first= missing |last= (help)CS1 maint: extra punctuation (link) CS1 maint: multiple names: authors list (link)[page needed]
 14. Cotič, Mara; Zuljan, Milena Valenčič (2009). "Problem‐based instruction in mathematics and its impact on the cognitive results of the students and on affective‐motivational aspects". Educational Studies. 35 (3): 297. doi:10.1080/03055690802648085.
 15. Barrett, Terry (2010). "The problem‐based learning process as finding and being in flow". Innovations in Education and Teaching International. 47 (2): 165. doi:10.1080/14703291003718901.
 16. Wells, Samantha H; Warelow, Philip J; Jackson, Karen L (2009). "Problem based learning (PBL): A conundrum". Contemporary Nurse. 33 (2): 191–201. doi:10.5172/conu.2009.33.2.191. PMID 19929163.