ಸದಸ್ಯ:Yajas duddiyanda/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]

ಕೋಡಸಿಗ ಎಂಬುದು ಸಣ್ಣ ಪ್ರಮಾಣದ ಪರ್ಣಪಾತಿ ಮರ. ಪರಸ್ಪರಾಭಿಮುಖ ಎಲೆಗಳು ,ತೊಗಟೆ ಬೂದುಕಂದು ಬಣ್ಣದ್ದಾಗಿ ಚಿಪ್ಪುಚಿಪ್ಪಾಗಿರುತ್ತದೆ. ಕರ್ನಾಟಕದ ಪರ್ಣಪಾತಿ ಕಾಡುಗಳಲ್ಲಿ ಕಂಡು ಬರುತ್ತದೆ. ಎಲೆಗಳು ಡಿಸೆಂಬರ್-ಜನವರಿಗೆ ಹಳದಿ ಬಣ್ಣಕ್ಕೆತಿರುಗಿ, ಫ್ರೆಬ್ರವರಿ ತಿಂಗಳಿಗೆ ಉದುರಿ ಮರವುಏಪ್ರಿಲ್‍ವರೆಗೆಎಲೆರಹಿತವಾಗಿದ್ದು, ಆಗ ಹೊಸ ತಳಿರು ಮೂಡುತ್ತದೆ.

Holarrhena-antidysenterica 03

ವೈಜ್ಞಾನಿಕ ಹೆಸರು[ಬದಲಾಯಿಸಿ]

ವೈಜ್ಞಾನಿಕ ಹೆಸರು:ಹೊಲೆರನಿ ಆಂಟಿಡೀಸೆಂಟ್ರಿಕಾ.[೨]

ಇತರ ಭಾಷೆಗಳಲ್ಲಿನ ಹೆಸರು[ಬದಲಾಯಿಸಿ]

  • ಕನ್ನಡದಲ್ಲಿ: ಕೊಡಸ, ಕೊಡಸಿಗ, ಕೊಡಗಾಸನ, ಕುಟಜಾ
  • ಇಂಗ್ಲೀಷ್: ಈಸ್ಟರ್‍ಟ್ರೀ
  • ಸಂಸ್ಕøತ: ಕುಟಜಾ, ಗಿರಿಮಲ್ಲಿಕಾ, ವಾತ್ಸಕ
  • ಹಿಂದಿ- ಇಂದ್ರಿಜು, ಕುರುಚಿ
  • ತಮಿಳು: ವೆಪಲೈ
  • ಮಾಲಯಳ: ಕೊಡಗಪಾಲ

ಆಕಾರ[ಬದಲಾಯಿಸಿ]

ಹೂಬಿಡುವ ಕಾಲ ವಿಭಿನ್ನವಾಗಿದ್ದು, ಸಾಮಾನ್ಯವಾಗಿ ಬಿಳಿಯ ಹುಗೊಂಚಲು ಸುವಾಸನೆ ಕೊಡಿದ್ದು ಮೇ ತಿಂಗಳಿಂದ ಆಗಸ್ಟ್ ತಿಂಗಳವರೆಗೂ ಕಾಣಬರುತ್ತದೆ. ಕಾಯಿಗಳು ಹೊವಿನ ಜೊತೆಯಲ್ಲಿ ಬೆಳೆದು ೨೦-೪೦ ಸೆ.ಮೀ ಉದ್ದವಾಗಿ ಬೆಳೆದು ಆಗಸ್ಟ್ -ಅಕ್ಟೋಬರ್ ತಿಂಗಳಲ್ಲಿ ಜೋಡಿಜೋಡಿಯಾಗಿ ತೂಗಾಡುತ್ತದೆ. ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಬಿರಿದು ರೇಷ್ಮೆಯಂತಹ ಕೋಶಗಳಿಂದ ಆವೃತವಾದ ಬೀಜಗಳು ಹೊರಚೆಲ್ಲವುತ್ತದೆ. ಉತ್ತಮ ಸುವಾಸನೆ ಹೊಂದಿರುವ ಹೂವು ನಂತರ ಬೂರಗದ ಹತ್ತಿಯಕೊಡಿನತರಹ ಬೀಜಗಳಾಗಿ ಗಾಳಿಯಲ್ಲಿ ಬೀಜ ಪ್ರಸಾರವಾಗಿ ಸಸ್ಯಾಭಿವೃದ್ದಿಯಾಗುತ್ತದೆ.ಇದನ್ನು ಭಾರತದ್ಯಾಂತ ಬೇಳೆಯುತ್ತಾರೆ. ಏಷ್ಯಾದ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಭಾರತದಉಷ್ಣವಲಯದ ಭಾಗಗಳಲ್ಲಿ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಸಮಾನ್ಯವಾಗಿಕಂಡುಬರುತ್ತದೆ. ೧,೧೦೦ ಮೀಟರ್ ಎತ್ತರದಲ್ಲಿ ಅಸ್ಸಾಂ ಮತ್ತುಉತ್ತರ ಭಾರತದಲ್ಲಿ ಬೇಳೆಯುತ್ತಾರೆ. ಪಶ್ಚಿಮ ಘಟ್ಟ ಮೂಲದ ಈ ಸಸ್ಯ ವರ್ಗದ ಉಪಯೋಗ ದಾದ್ಯಾಂತ ಇರುವುದು ಕಂಡು ಬರುತ್ತದೆ.[೧]] ಕುರ್ಚಿಎಂಬುದುಇದರ ಸಾಮಾನ್ಯ ಹೆಸರು. ಕರಾವಳಿ ಕರ್ನಾಟಕದ ಭಾಗಗಳಲ್ಲಿ ಕೊಡಸಾನಎನ್ನುತ್ತಾರೆ. ಕನ್ನಡದಲ್ಲಿ ಕೊಡಸಾನ, ಕೊಡಮುರಿಕೆ, ಕೊಡಸ, ಎಂಬುದಾಗಿಯು ಕರೆಯುತ್ತಾರೆ.

ರಚನೆ[ಬದಲಾಯಿಸಿ]

೫-೬ ಅಡಿ ಎತ್ತರವಾಗಿ ಬೆಳೆದು ಮರವಾಗುವ ಈ ಸಸ್ಯ ಸಂಕುಲ ಸಾಮಾನ್ಯವಾಗಿ ಮೇ ತಿಂಗಳ ಕೊನೆಯಲ್ಲಿ ಹೂ ಬಿಡಲಾರಂಭಿಸುತ್ತದೆ. ಕಾಡುಗಳಲ್ಲಿ, ಬೇಲಿಗಳಲ್ಲಿ ಕಾಣಸಿಗುವ ಕೊಡಸಿಗ ಹೂ ತನ್ನ ವಿಶಿಷ್ಟ ಪರಿಮಳದಿಂದ ಗಮನ ಸೆಳೆಯುತ್ತದ. ಬಿಳಿಗೊಂಚಲಾಗಿ ಬಿರಿವ ಹೂವು ನೂಡಲು ಆಕರ್ಷಕವಾಗಿದ್ದು ,ಇದನ್ನು ಬಿಸಿಲಲ್ಲಿ ಒಣಗಿಸಿಟ್ಟರೆ ಬೇಕಾದಾಗತುಪ್ಪದಲ್ಲಿ ಒಗ್ಗರಿಸಿ ಪಲ್ಯಇಲ್ಲವೆ ಮಜ್ಜಿಗೆ, ತೆಂಗಿನತುರಿ, ಮೆಣಸಿನೊಂದಿಗೆ ರುಬ್ಬಿರುಚಿಕಟ್ಟಾದ ತಂಬುಳಿ ಮಾಡಬಹುದು. ಮಳೆಗಾಲದ ಶೀತ, ಅರ್ಜಿರ್ಣದ ಭೇಧಿಗಳಿಗೆ ಇದು ದಿವ್ಯಔಷಧಿಯಾಗಿದೆ. ಎಲೆ ಹಸಿರಾಗಿದ್ದು, ಇದನ್ನು ನೆನೆಹಾಕಿ ಎಣ್ಣೆ ತಯಾರಿಸಿದರೆ ಅದು ಷರ್ಮದತುರಿಕಜ್ಜೆ, ಇಸಬು ವ್ರಣಗಳನ್ನು ನಿವಾರಿಸುತ್ತದೆ. ಎಲೆ ತೊಟ್ಟಿನಿಂದಒಸರುವ ಬಿಳಿದ್ರವ ಮೇಣ ಹುಣ್ಣಿಗೆ, ತೊಗಟೆ ಮತ್ತು ಬೇರುಗಳು ಔಷಧೀಯ ಗುಣಗಳನ್ನು ಹೊಂದಿದ್ದು ಮಜ್ಜಿಗೆಯಲ್ಲಿತೇಯ್ದು ಸೇವಿಸಿದರೆ ಅಜೀರ್ಣದಿಂದಾಗುವ ಹೊಟ್ಟೆನೋವು, ಆಮಶಂಕೆ, ಬೇಧಿಯಮಥ ಕಾಯಿಲೆಗಳನ್ನು ನಿವಾರಿಸುತ್ತದೆ. ಬೀನ್ಸ್ ನಂತಿರುವ ಎಳೆಕೋಡುಗಳು ಗೊಂಚಲಾಗಿ ಬೆಳೆದು ನೋಡಗರನ್ನು ಸೆಳೆಯುತ್ತದೆ. ಇದನ್ನು ಹಾಗಲಕಾಯಿಯಂತೆಎಲ್ಲಾತರದ ಅಡುಗೆಗಳಲ್ಲೂ ಬಳಿಸಬಹುದಾಗಿದೆ.

ಹೂವು[ಬದಲಾಯಿಸಿ]

ಅರಳಿದ ಕೊಡಸಿಗ ಹೂಗಳನ್ನು ತೊಳದು ಬಿಸಿಲಿನಲ್ಲಿ ಒಣಗಿಸಿಕೊಂಡರೆ ಬೇಕದಾಗ ತಂಬುಳಿ ಮಾಡಬಹುದು. ಎಳೆಯ ಕೋಡುಗಳನ್ನು ತುಂಡರಿಸಿ, ನೀರಿನಲ್ಲಿಒಂದು ಕುದಿಸಿ ಸೋಸಿದರೆ ಮೇಣದ ಅಂಶವನ್ನು ಹೋಗಲಾಡಿಸಬಹುದು. ಇದರಿಂದ ಪಲ್ಯ, ಮೆಣಸಿನಕಾಯಿ, ಸಾಂಬಾರು, ಗೊಜ್ಜು ಮತ್ತು ಕಾಯಿರಸಗಳನ್ನು ಮಾಡಬಹುದು. ಹಗಲ ಕಾಯಿಯಂತೆ ಉಪ್ಪು-ಹುಳಿ-ಬೆಲ್ಲ ಖಾರಗಳನ್ನು ಅಡುಗೆಗಳು ಆರೋಗ್ಯಕ್ಕೋಉತ್ತಮ.

ಮರದ ತೊಗಟೆ[ಬದಲಾಯಿಸಿ]

8-12ವರ್ಷ ಬೆಳದ ಮರದ ತೊಗಟಿಯನ್ನು ಜುಲೈಯಿಂದ ಸೆಪ್ಟಂಬರ್ ತಿಂಗಳ ಮಧ್ಯೆತೆಗೆದು ಒಣಗಿಸಿದ ಅದರ ಹುಡಿಯಿಂದ ಹೊಟ್ಟೆಹುಳು, ಭೇಧಿಯಂತಹ ಕಾಯಿಲೆಗಳಿಗೆ ಉಪಯೋಗವಾಗುತ್ತದೆ. ಅರ್ಜಿರ್ಣದಂತಹ ರೋಗಗಳಿಗೆ ಇದುಉತ್ತಮಔಷಧಿ.

ಕೊಡಸಿಗ ಬೀಜಗಳು[ಬದಲಾಯಿಸಿ]

ಸಾಧರಣ ಕೊಡಸಿಗ ಬೀಜಗಳು 30 ಸೆ.ಮೀ ಉದ್ದವಿರುತ್ತದೆ. ಒಂದುಕೋಡಿನಲ್ಲಿ ಸಾಧರಣವಾಗಿ ೨೦ ರಿಂದ ೩೦ ರಷ್ಟು ಬೀಜಗಳೀರುತ್ತದೆ. ರಕ್ತಭೇದಿ ಖಾಯಿಲೆಗೆ ಇದರ ಬೀಜಗಳನ್ನು ಶುಂಠಿಯಿಂದ ಬೇರಸಿ ಔಷಧಿ ತಯಾರಿಸುತ್ತಾರೆ.

ಉಪಯೋಗ[ಬದಲಾಯಿಸಿ]

  • ಕುಟಜಾರಿಷ್ಟ ಎಂಬ ಹೊಟ್ಟೆ ನೋವು, ಹೊಟ್ಟೆಹುಳ, ಅಲ್ಸರ್ ಸಂಬಧಿತ ಖಾಯಿಲೆಯನ್ನು ಗುಣಪಡಿಸುವ ಔಷಧಿ ತಯಾರಿಕೆಗೆ ಕೊಡಸಿಗ ಎಂಬ ಔಷಧಿ ಗಿಡವನ್ನು ಬಳಸುತ್ತಾರೆ.
  • ಅರ್ಯುವೇದ ಔಷದೋಪಚಾರಗಳಲ್ಲಿ 59 ಬಗೆಯ ಔಷಧಿ ತಯಾರಕರು ಬಳಕೆಯಾಗುವ ಸಸ್ಯವಾಗಿದೆ.
  • ಕೊಡಸಾನಗಿಡದ ಚೆಕ್ಕೆ, ಹೂವು ಔಷಧೀಯ ಬಳಕೆಗಾಗುವ ವಸ್ತುಗಳು. ಈ ಮರವು ಭಾರೀಔಷದೀಯಗುಣ ಹೊಂದಿದ್ದು ಭೇದಿ ನಿವಾರಣೆಗೆ ಪರಮ ಔಷಧಿ, ಇದನ್ನು ಟಾನಿಕ್ ಎನ್ನುತ್ತಾರೆ.
  • ಇದರಲ್ಲಿ 2%ದಷ್ಟು ಸಸ್ಯಕ್ಷಾರಇರುತ್ತದೆ. ಇದು ಪದೇ ಪದೇ ಬರುವ ಮಲೇರಿಯಾದಂತಹಜ್ವರವನ್ನು ಹುಟ್ಟುಡಗಿಸುವಗುಣ ಹೊಂದಿದೆ. ಇದರಿಂದ ಸ್ಟಿರಾಯ್ಡ್‍ಹಾರ್ಮೊನ್ ಉತ್ಪಾದಿಸುತ್ತದೆ.
  • ಹಿಂದೆಎಲ್ಲೆಂದರಲ್ಲಿಇರುತ್ತಿದ್ದ ಈ ಸಸ್ಯ ಈಗ ಬಹಳಷ್ಟು ಕಡಿಮೆಯಾಗಿದೆ. ಕೃಷಿ ವಿಸ್ತರಣೆ, ಹಸು, ಆಡು ಮೇಯುವಿಕೆ, ಮಳೆ ಕಡಿಮೆಯಾಗಿ ಸಸ್ಯಅವನತಿಯಾಗುತಿದೆ. ಇದು ಸ್ವಭಾವಿಕವಾಗಿ ಬೀಜದಿಂದ ಸಭಿವೃದ್ದಿಯಾಗುವಗಿಡವಾಗಿದ್ದುಯಾರು ನೆಟ್ಟು ಬೆಳೆಸುವುದಿಲ್ಲ.
  • ಹೂವು, ಎಲೆ, ಬೀಜ ಎಳೆಕೊಡು, ತೊಗಡೆ ಮತ್ತು ಬೇರಗಳನ್ನು ಬಳಸಿ ವಿವಿಧ ಚರ್ಮರೋಗಗಳು ಹಾಗೂ ರಕ್ತದಲ್ಲಿನ ನಂಜಿನ ನಿವಾರಣೆಗೆ ಸಿದ್ದ ಔಷದಿ ನೀಡುತ್ತಾರೆ.
  • ಮುಖ್ಯವಾಗಿ ಬೇರುಗಳಿಂದ ತಯಾರಿಸಿದ ಕಷಾಯವನ್ನುಗಾಯ, ಹುಣ್ಣು ಕಜ್ಜಿಗಳನ್ನು ತೊಳೆಯಲು ಬಳಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. ವನಸಿರಿ, ಅಜ್ಜಂಪುರ ಕೃಷ್ಣಸ್ವಾಮಿ, ಪ್ರಕಟಣೆ ೨೦೧೪,ಪ್ರಕಾಶನ ನವ ಕರ್ನಾಟಕ ಪಬ್ಲಿಕೇಶನ್ ಪ್ರೈ.ಲಿಮೀಟ್,ಪುಟಸಂಖ್ಖೆ ೧೫೬,೧೫೭
  2. http://www.planetayurveda.com/library/kutaja-holarrhena-antidysenterica