ವಿಷಯಕ್ಕೆ ಹೋಗು

ಸದಸ್ಯ:Shamant18/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಂಗ್ಲ ಸಾಹಿತ್ಯ

[ಬದಲಾಯಿಸಿ]

ಈ ಲೇಖದನ ಗುರಿ ಹಾಗೂ ಗಮನ ಆಂಗ್ಲ ಭಾಷೆಯಲ್ಲಿರುವ ಸಾಹಿತ್ಯದ ಬಗ್ಗೆ. ಕೇವಲ ಇಂಗ್ಲೆಂಡ್ ಅಲ್ಲದೆ ಸ್ಕಾಟ್ಲೆಂಡ್,ಐರ್ಲೆಂಡ್,ಅಮೇರಿಕ ಹಾಗೂ ಹಳೆಯ ಬ್ರಿಟೀಷ್ನನ ವಸಾಹತುಗಳೂ ಒಳಗೊಂಡಿವೆ.ಆದರೂ ಪ್ರಮುಖವಾಗಿ ೧೯ನೇ ಶತಮಾನದ ಆರಂಭದವರೆಗೂ ಇಂಗ್ಲೆಂಡ್ ಮತ್ತು ಐರ್ಲ್ಯಾಂಡ್ ಆಂಗ್ಲ ಸಾಹಿತ್ಯದ ಬಗ್ಗೆ ವ್ಯವಹರಿಸುತ್ತದೆ. ಆಂಗ್ಲ ಸಾಹಿತ್ಯ ಸಾಮಾನ್ಯವಾಗಿ ಬೇವುಲ್ಪ್ ಮಹಾಕಾವ್ಯದಿಂದ ಆರಂಭವಾಗುತ್ತದೆ.ಈ ಮಹಾಕಾವ್ಯ ೮ನೇ ಶತಮಾನ ದಿ೦ದ ೧೧ನೇ ಶತಮಾನದ ನಡುವೆ ರಚಿಸಲಾಗಿತ್ತು. ಹಳೆಯ ಆಂಗ್ಲ ಭಾಷೆಯಲ್ಲಿ ಅತ್ಯಂತ ಪ್ರಸಿದ್ಧ ಮಹಾಕಾವ್ಯ ಅಂತಸ್ತು ಹೊಂದಿರುವ ಏಕೈಕ ಹೆಗ್ಗುರುತೆಂದರೆ ಕವಿ ಜೆಫ್ರಿ ಚಾಸರ್ನ (೧೩೪೩-೧೪೦೦) ಸಾಹಿತ್ಯ ರಚನೆಗಳು. ವಿಶೇಷವಾಗಿ ಅವರ'ದಿ ಕ್ಯಾಂಟರ್ಬರಿ ಟೇಲ್ಸ್'ಸಲ್ಲುತ್ತದೆ. ನಂತರ ನವೋದಯ ಕಾಲದಲ್ಲಿ ವಿಶೇಷವಾಗಿ ತಡ ೧೬ನೇ ಹಾಗೂ ೧೭ನೇ ಶತಮಾನದ ಮೊದಲಿನಲ್ಲಿ ಪ್ರಮುಖ ನಾಟಕ ಹಾಗೂ ಕಾವ್ಯಗಳನ್ನು ವಿಲಿಯಂ ಷೇಕ್ಸ್‌ಪಿಯರ್, ಬೆನ್ ಜಾನಸನ್, ಜಾನ್ ಡನ್ ಮುಂತಾದವರು ರಚಿಸಿದರು.೧೭ ನೇ ಶತಮಾನದ ಮತ್ತೊಂದು ಮಹಾನ್ ಕವಿ ಜಾನ್ ಮಿಲ್ಟನ್ (೧೬೦೮-೧೬೭೪) ಪ್ಯಾರಡೈಸ್ ಲಾಸ್ಟ್ ಎಂಬ ಮಹಾ ಕವಿತೆಯ ಲೇಖಕರು ಆಂಗ್ಲ ಸಾಹಿತ್ಯವನ್ನು ಇನ್ನಷ್ಟು ಸಮ್ರುದ್ದಗೊಳಿಸಿದರು. ೧೭ನೇ ಹಾಗೂ ೧೮ನೇ ಶತಮಾನಗಳಲ್ಲಿ ವಿಶೇಷವಾಗಿ ಸಾಹಿತ್ಯವು ವಿಡಂಬಣೆಗಳಿಗೆ ಸಂಬಂಧಪಟ್ಟಿದ್ದವು, ಈ ಕಾಲದಲ್ಲಿ ಜಾನ್ ಡ್ರೈಡನ್ ಮತ್ತು ಅಲೆಕ್ಸಾಂಡರ್ ಪೋಪ್ ನ ಕಾವ್ಯಗಳು ಜೊನಾಥನ್ ಸ್ವಿಫ್ಟ್ ನ ಗದ್ಯವಚನಗಳು ಹೊಸ ಸಾಹಿತ್ಯ ತಿರುವನ್ನು ನೀಡಿತು. ೧೮ನೇ ಶತಮಾನದಲ್ಲಿ ಮೊದಲ ಬ್ರಿಟಿಷ್ ಕಾದಂಬರಿಗಳನ್ನು ಡೇನಿಯಲ್ ಡೇಪೌ, ಸಾಮ್ಯುಲ್ ರಿಚ್‌ರ್ಡ್ಸನ್ ಮತ್ತು ಹೆನ್ರಿ ಪೀಲ್ಡಿಂಗ್ ರಚಿಸಿದರು. ೧೮ನೇ ಶತಮಾನದ ಕೊನೆ ಹಾಗೂ ೧೯ನೇ ಶತಮಾನದ ಆರಂಭದಲ್ಲಿ ಪ್ರಣಯ ಕವಿಗಳಾದ ವರ್ಡ್ಸ್‌ವರ್ತ್, ಶಲ್ಲೇ ಮತ್ತು ಜಾನ್ ಕೀಟ್ಸ್ ರ ಕಾಲವಾಗಿತ್ತು. ವಿಕ್ಟೋರಿಯಾ ಯುಗದಲ್ಲಿ (೧೮೩೭-೧೯೦೧) ಕಾದಂಬರಿ ಆಂಗ್ಲ ಭಾಷೆಯನ್ನು ಕರೆದೊಯ್ಯುವಂತಹ ಸಾಹಿತ್ಯಕ ಶೈಲಿಯಿತ್ತು. ಅದು ವಿಶೇಷವಾಗಿ ಚಾರ್ಲ್ಸ್‌ ಡಿಕನ್ಸ್ ರವರ ಕಾದಂಬರಿಗಳಿಂದ ಮತ್ತು ೧೯ ನೇ ಶತಮಾನದ ಕೊನೆಯಲ್ಲಿ ಒಂಟಿ ಸಹೋದರಿಯರು ಮತ್ತು ಥಾಮಸ್ ಹಾರ್ಡಿ ಅವರ ಸಾಹಿತ್ಯದಿ0ದ.೧೯ನೇ ಶತಮಾನದಲ್ಲಿಯೇ ಅಮೇರಿಕನ್ನರ ಪ್ರಮುಖ ಬರಹಗಾರರಾದ ಹೆಮ‌ನ್ ಮೆಲ್ ವಿಲ್ , ವಿಲ್ಟ್ ಮೆನ್ ಮತ್ತು ಎಮಿಲಿ ಡಿಕಿನ್ಸನ್ ರವರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು. ಮತ್ತೊಬ್ಬ ಅಮೇರಿಕನ್ ಹೆನ್ರಿ ಜೆಮ್ಸ್ ರವರು ಅತ್ಯಂತ ಪ್ರಸಿದ್ಧ ಕಾದಂಬರಿಕಾರರಾಗಿದ್ದರು. ಐರಿಶ್ ಬರಹಗಾರರಾದ ಜೇಮ್ಸ್ ಜಾಯ್ಸ್ ಮತ್ತು ಸಾಮ್ಯುಲ್ ಬೆಕೆಟ್ ೨೦ನೇ ಶತಮಾನದಲ್ಲಿ ಪ್ರಮುಖರಾಗಿದ್ದರು. ಆಧುನಿಕ ಚಳುವಳಿಯಲ್ಲಿ ಇವರಿಬ್ಬರೂ ಅತಿಮುಖ್ಯ ಪಾತ್ರದಾರಿಗಳಾಗಿದ್ದರು. ಅಮೇರಿಕನ್ನರಾದ ಕವಿ ಟಿ. ಎಸ್. ಎಲಿಯಟ್ ಮತ್ತು ಎಜ್ರಾ ಪೌಂಡ್, ಕಾದಂಬರಿಕಾರ ವಿಲಿಯಮ್ ಪೌಲ್ಕ್ ನರ್ ರವರು ಮತ್ತು ಇತರ ಆಧುನಿಕ ಚಳುವಳಿಕಾರರು,೨೦ನೇ ಶತಮಾನದ ನಡುವಿನಲ್ಲಿ ಪ್ರಮುಖ ಬರಹಗಾರರಾಗಿ ಬ್ರಿಟಿಷ್ ಆಡಳಿತದಲ್ಲಿದ್ದ ದೇಶಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು, ಹಲವು ನೊಬೆಲ್ ಪ್ರಶಸ್ತಿ ವಿಜೇತರ ಸಹ ಇದ್ದರು. ೨೦ ಮತ್ತು ೨೧ ನೇ ಶತಮಾನದ ಶ್ರೇಷ್ಠ ಬರಹಗಾರರೆಲ್ಲ ಇಂಗ್ಲೆಂಡ್ ನ ಹೊರಗಿನವರಾಗಿದ್ದರು. ಆಧುನಿಕ ಚಳುವಳಿಯ ನಂತರ ಮತ್ತು ೨ನೇ ವಿಶ್ವಯುದ್ದದ ನಂತರದ ಸಾಹಿತ್ಯ ಪ್ರವ್ರುತ್ತಿಗಳನ್ನು ವರ್ಣಿಸುತ್ತದೆ.ಆಧುನಿಕ ಅವಧಿ ಬರಹಗಾರರ ಮುಂದುವರಿಕೆ ಮತ್ತು ಪ್ರಯೋಗ ಪರೀಕ್ಷೆ ಅತೀವವಾಗಿ ವಿಘಟನೆ, ವಿರೋದಾಬಾಸ, ಪಶಾಹ೯ ಮತ್ತು ಜ್ಞಾನೋದಯ ಆಲೊಚನೆಯ ವಿರುದ್ದ ಆಧುನಿಕ ಸಾಹಿತ್ಯದ ಅವಧಿಯಲ್ಲಿ ಸಾಹಿತಿಗಲಳು ಹೊಂದಿದ್ದರು.

ಕಾದಂಬರಿ ಆಂಗ್ಲ ಭಾಷೆಯನ್ನು ಕರೆದೊಯ್ಯುವಂತಹ ಸಾಹಿತ್ಯಕ ಶೈಲಿಯಿತ್ತು

ಹಳೆಯ ಆಂಗ್ಲ ಭಾಷೆಯಲ್ಲಿ ಅತ್ಯಂತ ಪ್ರಸಿದ್ಧ ಕೃತಿಗಳ ಬರಹಗಾರ ವಿಲಿಯಂ ಷೇಕ್ಸ್‌ಪಿಯರ್

ಹಳೆಯ ಆಂಗ್ಲ ಸಾಹಿತ್ಯ (೬೫೮-೧೧೦೦)

[ಬದಲಾಯಿಸಿ]

ಹಳೆಯ ಆಂಗ್ಲ ಸಾಹಿತ್ಯ ಅಥವಾ ಆಂಗ್ಲೊ ಸಾಕ್ಸನ್ ಸಾಹಿತ್ಯ ಹಳೆ ಆಂಗ್ಲ ಭಾಷೆಯಲ್ಲಿ ಬರೆದಿರುವಂತಹ ಸಾಹಿತ್ಯವನ್ನು ಒಳಗೊಳ್ಳುತ್ತದೆ. ಸಾಕ್ಸನ್ ಮತ್ತು ಇತರೆ ಜಮ‍೯ನ್ ಬುಡಕಟ್ಟು ಜನರು ಇಂಗ್ಲೆಂಡ್ ನಲ್ಲಿ ನೆಲೆಯೂರಿಸಿದ ನಂತರ ಆರಂಭವಾದ ಬರವಣಿಗೆ. ಈ ಸಾಹಿತ್ಯದ ಪ್ರಕಾರ ಮಹಾಕಾವ್ಯ, ಸಂತಚರಿತೆ, ನೀತಿ ಭೋದನೆ, ಬೈಬಲ್ ಅನುವಾಧ, ಕಾನೂನಿನ ಕೆಲಸ, ಕಾಲಾನುಕ್ರಮಾದಿ ಇತ್ಯಾದಿ. ಈ ಅವಧಿಗೆ ಸಂಬಂಧಪಟ್ಟಂತೆ ೪೦೦ ಹಸ್ತ ಪತ್ರಿಕೆಗಳು ಉಳಿದಿವೆ. ಹಳೆಯ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ಉಳಿದಿರುವ ಆರಂಭಿಕ ಕಾವ್ಯ 'ಸೀಡ್ ಮನ್ಸ್ ಹಿಮ್' ಬಹುಶಃ ೬೫೮-೬೮೦ ಯಲ್ಲಿ ಸಂಯೋಜನೆಗೊಂಡಿರಬಹುದು.

Chaucer

ಜೆಫ್ರಿ ಚಾಸರ್

ಮಧ್ಯ ಆಂಗ್ಲ ಸಾಹಿತ್ಯ(೧೧೦೦-೧೫೦೦)

[ಬದಲಾಯಿಸಿ]

ಇಂಗ್ಲೆಂಡ್ ನ ನಾಮ‍೯ನ್ ವಿಜಯದ ನಂತರ ೧೦೬೬ ರಲ್ಲಿ ಆಂಗ್ಲೋ ಸಾಕ್ಸನ್ ಭಾಷೆಯ ಬರವಣಿಗೆಯ ರೂಪ ದರ ಪ್ರಮಾಣದಲ್ಲಿ ಸಾಮಾನ್ಯವಾಯಿತು.ಅರಿಸ್ಟ್ರೋಕಸಿಯ ಅಡಿಯಲ್ಲಿ ಹಾಗೂ ಅದರ ವ್ರಭಾವದಿಂದ ಪ್ರೆಂಚ್ ಭಾಷೆ ನ್ಯಾಯಾಲಯಗಳು, ಸಂಸತ್ತು ಹಾಗೂ ಸುಸಂಸ್ಕೃತ ಸಮಾಜ ಪ್ರಮಾಣಿತ ಭಾಷೆಯಾಯಿತು. ಈ ಅವಧಿಯಲ್ಲಿ ಧಾಮಿ‍೯ಕ ಸಾಹಿತ್ಯ ಜನಪ್ರಿಯವಾಗುವತ್ತ ಮುಂದುವರಿಯಿತು. ಸಂತರ ಜೀವನ ಚರಿತ್ರೆಗಳನ್ನು ಬರೆದು ಅಳವಡಿಸಿಕೊಂಡು ಹಾಗೂ ಅನುವಾದಿಸಿಕೊಳ್ಳುವತ್ತ ನಡೆದರು, ಉದಾಹರಣೆ:- ದಿ ಲೈಪ್ ಆಫ್ ಸೇಂಟ್, ಜೌಡ್ರೆ ಮತ್ತು ಸೌತ್ ಇಂಗ್ಲಿಷ್ ಲೆಜೆಂಡ್ರಿ ಪ್ರಮುಖವು.ಈ ಅವಧಿಯಲ್ಲಿ ಹೊಸ ಶೈಲಿಯ ಆಂಗ್ಲ ಭಾಷೆ ಉದ್ಬವವಾಯಿತು ಅದರ ಹೆಸರೇ ಮಾದ್ಯಮ ಆಂಗ್ಲ.ಈ ವಿಧದ ಆಂಗ್ಲ ಆಧುನಿಕ ಓದಿಗರಿಗೆ ಸುಲಭವಾಗಿರಲಿಲ್ಲ.

ಆಂಗ್ಲ ನವೋದಯ(೧೫೦೦-೧೬೬೦)

[ಬದಲಾಯಿಸಿ]

೧೪೭೬ ರಲ್ಲಿ ವಿಲಿಯಮ್ ಕಾಕ್ಸ್ಟನ್ ರವರು ಮುದ್ರಣ ಯಂತ್ರವನ್ನು ಪರಿಚಯಿಸಿದ ನಂತರ ದೇಶೀಯ ಸಾಹಿತ್ಯ ಬಹಳ ಏಳಿಗೆಯನ್ನು ಕಂಡಿತು. ಆಂಗ್ಲ ನವೋದಯ ಸಾಂಸ್ಕೃತಿಕ ಮತ್ತು ಕಲಾತ್ಮಕ ಚಳುವಳಿಯಾಗಿತ್ತು. ಈ ಚಳುವಳಿ ೧೬ನೇ ಶತಮಾನದಿಂದ ೧೭ನೇ ಶತಮಾನದವರೆಗು ಇಟಲಿಯಲ್ಲಿ ನಡೆದ ಪಾನ್ ಯುರೋಪಿಯನ್ ನವೋದಯ ಅವಧಿಗೆ ಜೊತೆಗೂಡಿತ್ತು. ಉತ್ತರ ಯುರೋಪ್ ನಂತೆಯೇ ಇಂಗ್ಲೆಂಡ್ ಕೂಡ ಅತಿ ಕಡಿಮೆ ಬೆಳವಣಿಗೆಗಳನ್ನು ಶತಮಾನದವರೆಗೂ ಕಂಡಿತು. ನವೋದಯ ಶೈಲಿ ಮತ್ತು ಆಲೋಚನೆ ನಿಧಾನವಾಗಿ ಭೇದಿಸಿಕೊಂಡು ಇಂಗ್ಲೆಂಡ್ ನೊಳಗೆ ಹೋಗುತಿತ್ತು. ಎಲಿಜಿಬೆತ್ ನ ಅವಧಿ ೧೬ನೇ ಶತಮಾನದ ಕೊನೆಯಧ‌೯ದಲ್ಲಿ ಆಂಗ್ಲ ನವೋದಯ ಅತಿ ಎತ್ತರಕ್ಕೆ ಹೋಯಿತು.

ಎಲಿಜೆಬೆತನ್ ಮತ್ತು ಜಾಕೊಬೆನ್ ಅವಧಿ(೧೫೫೮-೧೬೨೫)

[ಬದಲಾಯಿಸಿ]

ಎಲಿಜೆಬೆತ್ ೧ (೧೫೫೮-೧೬೦೩) ಹಾಗೂ ಜೇಮ್ಸ್ (೧೬೦೩-೨೫) ರವರ ಆಳ್ವಿಕೆಯ ಅವಧಿಯಲ್ಲಿ ಲಂಡನ್ ಕೇಂದ್ರಿತ ಸಂಸ್ಕೃತಿ, ಅದು ಆಸ್ಥಾನದ ಹಾಗು ಜನಪ್ರಿಯವಾದುದಂತದು ಬಹಳ ಕಾವ್ಯ ಮತ್ತು ನಾಟಕಗಳನ್ನು ಉತ್ಪಾದಿಸಿತು. ಆಂಗ್ಲ ನಾಟಕಕಾರರು ಮಧ್ಯಯುಗದ ನಾಟಕಗಳನ್ನು ಸಂಯೋಜಿಸಿ ಹಾಗು ಅದರ ಪ್ರಭಾವವನ್ನು ಮಿಶ್ರಿಸಿ ನವೋದಯ ಅವಧಿಯನ್ನು ಪುನಃ ಕಂಡು ಹಿಡಿಯುವುದರಲ್ಲಿ ಸಫಲರಾದರು. ಈ ಅವಧಿಯ ಷೇಕ್ಸ್ ಪಿಯರ್ ಸಾಹಿತ್ಯ ವಲಯದಲ್ಲಿ ಪ್ರಮುಖ ನಾಟಕಕಾರರಾಗಿ ನಿಶ್ಚಲತೆಯಿಂದ ನಿಲ್ಲುತ್ತಾರೆ. ಇವರು ಬಹಳ ವೈವಿಧ್ಯ ರೀತಿಯ ಸಾಹಿತ್ಯಕ ಶೈಲಿಯಲ್ಲಿ ಹಲವಾರು ನಾಟಕಗಳನ್ನು ರಚಿಸಲಾಗಿತ್ತು.