ವಿಷಯಕ್ಕೆ ಹೋಗು

ಸದಸ್ಯ:Sahirabanun1998/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                                                              ==ದಿವ್ಯಾಂಕಾ ತ್ರಿಪಾಠಿ==
'ದಿವ್ಯಾಂಕ ತ್ರಿಪಾಠಿ' ರವರು ರೆಡ್ ಕಾರ್ಪೆಟ್ ನಲ್ಲಿ

ದಿವ್ಯಾಂಕಾ ತ್ರಿಪಾಠಿ'ರವರು ಭಾರತದ ಟೆಲಿವಿಶನ್ ರಂಗದ ಒಬ್ಬ ಬಿಡುವಿಲ್ಲದ ಅಭಿನೇತ್ರಿಯಾಗಿದ್ದು ಹಿಂದಿ ಕಿರುತೆರೆ ಉದ್ಯಮದಲ್ಲಿ ತಮ್ಮ ವೃತ್ತಿಯನ್ನು ನಿಭಾಯಿಸುತ್ತಿದ್ದಾರೆ. ಅವರು ಅತ್ಯಂತ ಹೆಸರುವಾಸಿಯಾದ ನಟಿ ಹಾಗೂ ಅಭಿನೇತ್ರಿಯಾಗಿದ್ದು ಎಲ್ಲಾರ ಜನಪ್ರಿಯರಾಗಿದ್ದಾರೆ. ದಿವ್ಯಾಂಕ ತ್ರಿಪಾಠಿ ರವರು ಜನಿಸಿದ್ದು ೧೪ ಡಿಸೆಂಬರ್ ೧೯೮೪ ಭೋಪಾಲ್ ಮಧ್ಯಪ್ರದೇಶದಲ್ಲಿ. ಅವರ ತಂದೆ ನರೇಂದ್ರ ತ್ರಿಪಾಠಿ ರವರು ವೃತ್ತಿಯಲ್ಲಿ ಔಷಧಿಕಾರರಾಗಿದ್ದಾರೆ ಮತ್ತು ತಾಯಿ ಶ್ರೀಮತಿ ನೀಲಂ ತ್ರಿಪಾಠಿರವರು ಗೃಹಿಣಿಯಾಗಿದ್ದರೆ.ಅವಳ ತಂದೆ ಮತ್ತು ತಾಯಿ ದಿವ್ಯಾಂಕಳಿಗೆ ಅತ್ಯಂತ ಬೆಂಬಲಕಾರರಾಗಿದ್ದಾರೆ. ಮನೆಯಲ್ಲಿ ಅವರ ಹೆಸರನ್ನು ಚನಿ ಎಂದು ಕೂಗುತ್ತಾರೆ. ಅವರ ಧರ್ಮ ಹಿಂದೂ ಧರ್ಮ ಮತ್ತು ಅವರ ರಾಶಿ ಧನು ರಾಶಿ.ದಿವ್ಯಾಂಕ ತ್ರಿಪಾಠಿರವರಿಗೆ ೩೧ ವರುಷವಾಗಿದೆ ಮತ್ತು ಅವರ ವೃತ್ತಿ ಮಾಡೆಲ್ ಮತ್ತು ನಟಿ ಯಾಗಿದೆ.ಅವರ ನೆಚ್ಚಿನ ಬಣ್ಣ ಬಿಳಿ, ನೆಚ್ಚಿನ ಸಿನೆಮಾ 'ದಿ ಗೊಡ್ ಫ಼ಥೆರ್' ಮತ್ತು 'ಹಮ್ ದಿಲ್ ದೇ ಚುಕೇ ಸನಮ್',ನೆಚ್ಚಿನ ನಟ ಸಲ್ಮಾನ್ ಖಾನ್,ನೆಚ್ಚಿನ ನಟಿ ನರ್ಗೀಸ್,ಮೆಚ್ಚಿನ ಸಂಗೀತ ಸಂಯೋಜಕ ಎನ್ರಿಕೆ ಇಗ್ಲೇಷಿಯಸ್, ಖೈಲಶ್ ಖೇರ್ ಮತ್ತು ಶುಭಾ ಮುದ್ಗಲ್,ಮೆಚ್ಚಿನ ಪುಸ್ತಕ ಪಿಎಸ್, ಐ ಲವ್ ಯು ಬೈ ಸೆಸೆಲಿಅ ಅಹಿರ್ನ್. ದಿವ್ಯಾಂಕ ತ್ರಿಪಾಠಿ ರವರ ಆಸಕ್ತಿಗಳು ಓದುವುದು ಮತ್ತು ಶಾಪಿಂಗ್ ಮಾಡುವುದು.ತ್ರಿಪಾಠಿ ರವರ ಸಹೋದರಿಯರು ಪ್ರಿಯಾಂಕ ತಿವಾರಿ ಮತ್ತು ಐಶ್ವರ್ಯ ತ್ರಿಪಾಠಿ. ದಿವ್ಯಾಂಕ ರವರ ಒಂದು ಕುತೂಹಲಕಾರಿ ನಂಗತಿಯೆಂದರೆ ಅವರು ಸೈನ್ಯವನ್ನು ಸೇರಲು ಬಯಸಿದರು.

ದಿವ್ಯಾಂಕ ತ್ರಿಪಾಠಿರವರು ತಮ್ಮ ಶಾಲಾ ಕಾಲೇಜ'ನ್ನು ಭೋಪಾಲ್'ನ ನೂತನ್ ಕಾಲೇಜಿನಲ್ಲಿ ಮುಗಿಸಿದರು. ನಂತರ ಅವರು ನೆಹ್ರೂ ಪರ್ವತಾರೋಹಣ ಸಂಸ್ಥೆಯಿಂದ ತನ್ನ ಪರ್ವತಾರೋಹಣ ಕೋರ್ಸನ್ನು ಪೂರ್ಣಗೊಳಿಸಿದರು ಮತ್ತು ಭೋಪಾಲ್ ರೈಫಲ್ ಅಕಾಡೆಮಿಯಿಂದ ರೈಫಲ್ ಶೂಟಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಿದರು. ಅವಳು ತನ್ನ ರೈಫಲ್ ಶೂಟಿಂಗ್ ನಲ್ಲಿ ಚಿನ್ನದ ಪದಕಗಳನ್ನು ಗಳಿಸಿದ್ದಾರೆ ಮತ್ತು ಭೋಪಾಲ್ ರೈಫಲ್ ಅಕಾಡೆಮಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

ವೃತ್ತಿ ಜೀವನ

[ಬದಲಾಯಿಸಿ]

ದಿವ್ಯಾಂಕ ತ್ರಿಪಾಠಿ'ಯು ಭೋಪಾಲ್'ನ ಆಕಶವಾಣಿಯಲ್ಲಿ ಆಧಾರರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅವರು ೨೦೦೩ರಲ್ಲಿ "ಪ್ಯಾನ್ ಟಿನ್ ಜೀನ್ ಟೀನ್ ಕ್ಯೊನ್" ನಲ್ಲಿ ಭಾಗವಹಿಸಿದರು ಮತ್ತು ಮಿಸ್ ಬ್ಯೂಟಿಪುಲ್ ಸ್ಕಿನ್ (ಮಿಸ್ ಸುಂದರ ಚರ್ಮದ ಪ್ರಶಸ್ತಿ) ಯನ್ನು ಗೆದ್ದರು. ತ್ರಿಪಠಿ ಭಾರತದ ಅತ್ಯುತ್ತಮ ಚಲನಚಿತ್ರ ನಟಿ (ಇಂಡಿಯಾಸ್ ಬೆಸ್ಟ್ ಸಿನೇಸ್ಟಾರ್ ಕಿ ಕೋಝ್) ಯ ಹುಡುಕಾಟದಲ್ಲಿ ಭಾಗವಹಿಸಿದರು ಮತ್ತು ಭೋಪಾಲ್ ವಲಯದಲ್ಲಿ ವಿಜೇತ ಎಂದು ಘೋಷಿಸಲಾಯಿತು.ತ್ರಿಪಾಠಿ ೨೦೦೫ ರಲ್ಲಿ "ಮಿಸ್ ಭೋಪಾಲ್ ಕಿರೀಟ"ವನ್ನು ಗೆಲ್ಲಿದರು. ನಂತರ ಅವರು ಮ್ನಾದೆಲೀನ್ಗ್ ಮಾಡಲು ನಿರ್ಧರಿಸಿದ್ದರು ಮತ್ತು ತಮ್ಮ ಪಯಣ ವನ್ನು ರೂಪದರ್ಶಿಯಾಗಿ ಆರಂಭಿಸಿದ್ದರು. ತ್ರಿಪಾಠಿ ಚೊಚ್ಚಲ ನಟನೆಯನ್ನು ದೂರದರ್ಶನದ ಟೆಲಿಚಿತ್ರಗಳಲ್ಲಿ ಮಾಡಿದ್ದಳು. ಅವಳು ಝೀ ಟಿವಿಯ ಧಾರಾವಾಹಿ 'ಬನೂ ಮೈ ತೆರಿ ದುಲ್ಹನ್' ನಲ್ಲಿ ಉಭಯ ಪಾತ್ರಗಳ್ಳಾದ -'ವಿದ್ಯಾ' ಮತ್ತು 'ದಿವ್ಯಾ'ಳ ಪಾತ್ರಗಳನ್ನು ನಿಭಾಹಿಸುವ ಮೂಲಕ ಪ್ರಸಿದ್ಧವಾದಳು.

ಯೇಹ್ ಹೈ ಮೊಹಬ್ಬತೇ ನಲ್ಲಿ ದಿವ್ಯಾಂಕ ತ್ರಿಪಾಠಿ

ಧಾರಾವಾಹಿಗಳು

[ಬದಲಾಯಿಸಿ]

'ದಿವ್ಯಾಂಕ ತ್ರಿಪಾಠಿ' ಇದುವರೆಗೆ ನಟಿಸಿದ ಹಿಂದಿ-ಭಾಷೆಯ ಧಾರಾವಾಹಿಗಳು:೨೦೦೬ ರಲ್ಲಿ 'ಬನೂ ಮೈ ತೆರಿ ದುಲ್ಹನ್' - ವಿದ್ಯಾ ಮತ್ತು ದಿವ್ಯಾ'ಳ ಪಾತ್ರವನ್ನು ನಿಭಾಹಿಸಿದ್ದಾರೆ. ೨೦೦೯ ರಲ್ಲಿ 'ಶ್..ಶ್...ಫಿರ್ ಕೊಯಿ ಹೈ' ಎಂಬ ದಾರಾವಾಹಿಯಲ್ಲಿ ರಾಧಿಕ'ಳ ಪಾತ್ರವನ್ನು ನಿಭಾಹಿಸಿದ್ದಾರೆ. ೨೦೧೦ ರಲ್ಲಿ 'ಶ್ರೀಮತಿ ಔರ್ ಶ್ರೀ ಅಲಹಾಬಾದ್ ವಾಲೆ'ಯಲ್ಲಿ -ರಶ್ಮಿ ಶರ್ಮಾ-ಪ್ರಮುಖ್ಯ ಪತ್ರವನ್ನು ಅಭಿನಯಿಸಿದ್ದಾರೆ. ೨೦೧೧ ರಲ್ಲಿ 'ಚಿಂಟು ಚಿನ್ಕಿ ಔರ್ ಏಕ್ ಬಡಿ ಸಿ ಲವ್ ಸ್ಟೋರಿ 'ದಲ್ಲಿ-ಸುಮನ್ ತ್ರಿಪಾಠಿ ಎಂಬ ಪತ್ರವನ್ನು ಅಭಿನಯಿಸಿದ್ದಾರೆ ಮತ್ತು ೨೦೧೩-ಪ್ರಸ್ತುತ 'ಯೇ ಹೇ ಮೊಹಬ್ಬತೇ'-ಡಾ.ಇಶೀತ ರಮನ್ ಭಲ್ಲಾ ಎಂಬ ಹೆಸರಾಂತ ಪಾತ್ರವನ್ನು ಅಭಿನಯಿಸುತ್ತಿದಾರೆ.[] ಇವೆಲ್ಲಾ ದಾರಾವಾಹಿಗಳು ಬಹಳ ಜನಪ್ರಿಯವಾಗಿವೆ.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

'ನಟಿ ದಿವ್ಯಾಂಕ ತ್ರಿಪಾಠಿ'ಳ ಚಲನಚಿತ್ರಗಳ ಪಟ್ಟಿ ಹೀಗಿವೆ- ತ್ರಿಪಾಠಿ ರವರು ಇದುವರೆಗೆ ಎರಡು ಚಲನಚಿತ್ರಗಳಲ್ಲಿ ಭಾಗವಹಿಸಿದ್ದಾರೆ. ಅವುಗಳು ೨೦೧೨ ರಲ್ಲಿ 'ಲಾಲಾ ಹರ್ದೌಲ್ ಪದ್ಮಾವತಿ ಯಲ್ಲಿ ರಾಣಿ ಪದ್ಮಾವತಿ' ಳ ಪಾತ್ರ ವನ್ನು ನಟಿಸಿದ್ದಾಳೆ ಮತ್ತು ೨೦೧೪ ರಲ್ಲಿ 'ನೆನಪಿಡಿ ವಿಚ್ಛೇದನ (ಅ ದಿವೊರ್ಸ್ ಟೊ ರಿಮೆಮ್ಬರ್) ದಲ್ಲಿ ಜ಼ಾರಾ'ಳ ಪಾತ್ರವನ್ನು ನಟಿಸಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]

ತ್ರಿಪಾಠಿ ರವರು ಗೆದ್ದ ಪ್ರಶಸ್ತಿಗಳು ಹೀಗಿವೆ- []೨೨ ಸ್ಟಾರ್ ಪರಿವಾರ್ ಪ್ರಶಸ್ತಿಗಳು, ೧೫ ಝೀ ಗೋಲ್ಡ್ ಪ್ರಶಸ್ತಿಗಳು, ೦೬ ಭಾರತೀಯ ಟೆಲ್ಲಿ ಪ್ರಶಸ್ತಿಗಳು, ೦೩ ಭಾರತೀಯ ದೂರದರ್ಶನ ಅಕಾಡೆಮಿ ಪ್ರಶಸ್ತಿಗಳು, ೦೧ ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಪ್ರಶಸ್ತಿ ಮತ್ತು ೦೧ ಲಯನ್ಸ್ ಗೋಲ್ಡ್ ಪ್ರಶಸ್ತಿ ದೊರೆಯಿತು.ಭೋಪಾಲ್‍ನ ರೈಫಲ್ ಅಕಾಡೆಮಿಯಲ್ಲಿ ಗೋಲ್ಡ್ ಮೆಡಲ್ ಪಡೆದ ದಿವ್ಯಾಂಕಾ ಗುರಿತಪ್ಪಿ ಸೀರಿಯಲ್‍ಗೆ ಬಂದಿರೋ ಹಾಗಿದೆ. ಈಗ ಈ ಸುಂದರಿ ಪ್ರೇಮದ ಬಾಣವನ್ನು ವಿವೇಕ್‍ನ ಹೃದಯದತ್ತ ಛೂ ಬಿಟ್ಟಿದ್ದಾಳೆ.

ಮಾರ್ಚ್ ೨೦೧೧ ರಲ್ಲಿ ದಿವ್ಯಾಂಕ ತ್ರಿಪಾಠಿ ಅವರು ಮಕ್ಕಳು ಮತ್ತು ಪರಿಸರ ಹಕ್ಕುಗಳಿಗೆ ಮೀಸಲಾದ ವಾಣಿಜ್ಯ ಗ್ಲೋಬಲ್ ಇನಿಶಿಯೇಟಿವ್ "ಸೈಬರ್ ಡೋಡೋ ದ ಡಿಫ಼ೆಂಡರ್ ಆಫ್ ಲೈಫ್' ನ ರಾಯಭಾರಿಯಾಗಿದ್ದರು. ೧೬ ಜನವರಿ ೨೦೧೬ ರಲ್ಲಿ ದಿವಾಂಕ ತ್ರಿಪಾಠಿ ಯು 'ಯೇ ಹೇ ಮೊಹಬ್ಬತೇ'ಯಲ್ಲಿ ತಮ್ಮ ಸಹ ನಟ ರಾದ ವಿವೆಕ್ ದಹಿಯಾ ರವರ ಜೊತೆ ನಿಶ್ಚಿತಾರ್ಥ ವಾದರು ಮತ್ತು ೦೮ ಜುಲೈ ೨೦೧೬ ಭೋಪಾಲ್ ನಲ್ಲಿ ಅವರೊಂದಿಗೆ ವಿವಾಹವಾದರು.ಹೀಗೆ ಅವರ ವೈಯಕ್ತಿಕ ಜೀವನವು ನೆಮ್ಮದಿಯಿಂದ ಮುಂದುವರೆದಿದೆ. ದಿವ್ಯಾಂಕ ತ್ರಿಪಾಠಿ ದಹಿಯಾ ರವರು ತಮ್ಮ ಅಭಿನಯ ದಿಂದ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅತೀ ಜನಪ್ರಿಯ ಅಭಿನೆತ್ರಿ ಮತ್ತು ನಟಿಯಾಗಿದ್ದಾರೆ. []

ಉಲ್ಲೇಖನಗಳು

[ಬದಲಾಯಿಸಿ]
  1. "'Yeh Hai Mohabbatein' Actress Divyanka Tripathi Hits Milestone, Gets Pampered in Unique Way". ibtimes.co.in. Retrieved 12 July 2015.
  2. "Zee Gold Awards 2015 Highlights, Complete Winners' List: 'Yeh Hai Mohabbatein' Bags Most Honours; Karan-Divyanka's Romance Steals the Show". International Business Times.
  3. PTI (9 July 2016). "Divyanka Tripathi, Vivek Dahika get married". The Hindu. Retrieved 21 July 2016.