ಸದಸ್ಯ:Niekambli Nagaraj Shetty/ಸದಾಶಿವ ಬ್ರಹ್ಮಾವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{Infobox person | ಹೆಸರು = ಸದಾಶಿವ ಬ್ರಹ್ಮಾವರ | image = | caption = | birth_name = | ಜನ್ಮ ದಿನಾಂಕ = 1928 | ಜನ್ಮಸ್ಥಳ = ಬೆಳಗಾವಿ, British India (Present-day Karnataka, India) ಬ್ರಹ್ಮಾವರ್ ಎಂದು ಕರೆಯಲ್ಪಡುವ ಸದಾಶಿವ ಬ್ರಹ್ಮಾವರ್ (೧೯೨೮ - ೨೦೧೮), ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಭಾರತೀಯ ನಟ. ಗುರಿ (೧೯೮೬), ಸಂಯುಕ್ತ (೧೯೯೮) ಮತ್ತು ಶ್ರೀ ಮಂಜುನಾಥ (೨೦೦೧) ಸೇರಿದಂತೆ ಅಂತಹ ಚಲನಚಿತ್ರಗಳಲ್ಲಿನ ಪೋಷಕ ಪಾತ್ರಗಳಿಗೆ ಅವರು ಹೆಚ್ಚು ಸುಪರಿಚಿತರಾಗಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಉಡುಪಿ ಜಿಲ್ಲೆಯ ಬ್ರಹ್ಮಾವರ ಮೂಲದ ಸದಾಶಿವ ಅವರು ಬೆಳಗಾವಿಯ ಬೈಲಹೊಂಗಲದಲ್ಲಿ ಹುಟ್ಟಿ ಬೆಳೆದವರು. ಅವರಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳು ಇದ್ದರು. [೧] ಸದಾಶಿವ ಅವರು ೨೦೧೭ರಲ್ಲಿ ಕುಮಟಾ ನಗರದಲ್ಲಿ ಏಕಾಂಗಿಯಾಗಿ ತಿರುಗಾಡುತ್ತಿರುವುದನ್ನು ಕಂಡು ಸ್ಥಳೀಯರು ಅನೇಕರು ನೆರವು ನೀಡಿ ಸುದ್ದಿ ಮಾಡಿದ್ದರು. [೨] ನಂತರ ಅವರು ತನ್ನ ಮಕ್ಕಳೊಂದಿಗೆ ಮತ್ತೆ ಸೇರಿಕೊಂಡರು. [೩]

ವೃತ್ತಿ[ಬದಲಾಯಿಸಿ]

ಸದಾಶಿವ ಅವರು ರಂಗಭೂಮಿಯಲ್ಲಿ ನಟರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರನ್ನು ಚಲನಚಿತ್ರ ನಿರ್ಮಾಪಕ ಸಿದ್ದಲಿಂಗಯ್ಯ ಅವರು ಗಮನಿಸಿದರು. ಅವರು ೧೯೭೭ [೪] ಅವರ ಹೇಮಾವತಿ ಚಿತ್ರದಲ್ಲಿ ಸದಾಶಿವ್‌ಗೆ ಪಾತ್ರವನ್ನು ನೀಡಿದರು. ಅವರು ಶಿಕ್ಷಕ, ತಂದೆ, ಪಾದ್ರಿ ಮತ್ತು ಕಾವಲುಗಾರನ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡವರು. ಸಂಯುಕ್ತ, ಗರುಡ ಧ್ವಜ ಮತ್ತು ನಿಗೂಡ ರಹಸ್ಯದಂತಹ ಕೆಲವು ಚಲನಚಿತ್ರಗಳಲ್ಲಿ ಅವರು ಖಳನಾಯಕನ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ೧೯೭೭ ರಲ್ಲಿ ಹೇಮಾವತಿಯಿಂದ ಪ್ರಾರಂಭವಾಗಿ ೨೦೧೭ ರಲ್ಲಿ ಅವರ ನಟಿಸಿದ ಕೊನೆಯ ಚಿತ್ರ ಬಂಗಾರದ s/o ಬಂಗಾರದ ಮನುಷ್ಯ ತನಕ, ಬ್ರಹ್ಮಾವರ್ ಅವರು ಕನ್ನಡದಲ್ಲಿ ಸುಮಾರು ೧೫೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. [೪]

ಸಾವು[ಬದಲಾಯಿಸಿ]

ಬ್ರಹ್ಮಾವರ್ ಅವರು ಬುದ್ಧಿಮಾಂದ್ಯತೆ ಸೇರಿದಂತೆ ವಯೊ ಸಹಜ ಕಾಯಿಲೆಗಳಿಂದ ೧೯ ಸೆಪ್ಟೆಂಬರ್ ೨೦೧೮ ರಂದು ನಿಧನರಾದರು. ಆಗ ಅವರಿಗೆ ೯೦ವರ್ಷ. [೫] ನಟನ ಆಶಯದಂತೆ, ಮಾಧ್ಯಮದ ವೈಭವ ತಪ್ಪಿಸಲು ಬನಶಂಕರಿ ಸ್ಮಶಾನದಲ್ಲಿ ನಡೆದ

ಅಂತ್ಯಕ್ರಿಯೆಯ ಒಂದು ದಿನದ ನಂತರ ಅವರ ಸಾವಿನ ಸುದ್ದಿಯನ್ನು ಪ್ರಕಟಿಸಲಾಯಿತು. [೧]

ಆಯ್ದ ಚಿತ್ರಕಥೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Sandesh M. S. (20 Sep 2018). "Veteran actor Sadashiva Brahmavar passes away". Deccan Herald. Retrieved 12 Oct 2020.
  2. "Thrown out of home by children, this veteran Kannada actor is now wandering on streets". Coastal Digest. 15 Aug 2017. Retrieved 12 Oct 2020.
  3. "Veteran Kannada actor Sadashiva Brahmavar who was forced to leave home in 2017 dies aged 90". Coastal Digest. 20 Sep 2018. Retrieved 12 Oct 2020.
  4. ೪.೦ ೪.೧ "Sadashiva Brahmavar was Kannada industry's 'father figure'". The Hindu. 21 Sep 2018. Retrieved 12 Oct 2020.
  5. "Veteran actor Sadashiva Brahmavar no more". Star of Mysore. 21 Sep 2018. Retrieved 12 Oct 2020.

{[Reflist}} https://newsable.asianetnews.com/karnataka/veteran-actor-sadashiv-brahmavar-dies-at-90-news-spreads-after-completion-of-last-rites-pfcq5i

sadashiv brahmavra [[ವರ್ಗ:೧೯೨೮ ಜನನ]]