ನಿಗೂಢ ರಹಸ್ಯ (ಚಲನಚಿತ್ರ)
ನಿಗೂಢ ರಹಸ್ಯ (ಚಲನಚಿತ್ರ) | |
---|---|
ನಿಗೂಢ ರಹಸ್ಯ | |
ನಿರ್ದೇಶನ | ಪೇರಾಲ |
ನಿರ್ಮಾಪಕ | ಜಗದೀಶ್ ಮಲ್ನಾಡ್ |
ಪಾತ್ರವರ್ಗ | ಶಂಕರನಾಗ್ ಗೀತಾ ವನಿತಾವಾಸು, ತಾರ, ದೊಡ್ಡಣ್ಣ, ಮೈಸೂರು ಲೋಕೇಶ್,ಸದಾಶಿವ ಬ್ರಹ್ಮಾವರ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಮನೋಹರ್ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ಜೆ.ಆರ್.ಕೆ.ವಿಷನ್ಸ್ |
ನಿಗೂಢ ರಹಸ್ಯ - ಇದು 1990ರ ಕನ್ನಡ ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಇದನ್ನು ಪೇರಾಲ ಅವರು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ಶಂಕರ್ ನಾಗ್, ಗೀತಾ , ವನಿತಾ ವಾಸು ಮತ್ತು ತಾರಾ ಪ್ರಮುಖ ಪಾತ್ರಗಳಲ್ಲಿದ್ದರು. ಚಿತ್ರಕ್ಕೆ ಸಂಗೀತವನ್ನು ಹಂಸಲೇಖ ಒದಗಿಸಿದರು. ಈ ಚಿತ್ರವು ಶಂಕರ್ ನಾಗ್ ಅವರ ಮರದ ನಂತರ ಬಿಡುಗಡೆ ಆಯಿತು. ಅವರ ಸೋದರ ಅನಂತ್ ನಾಗ್ ಅವರು ಶಂಕರ್ ನಾಗ್ ಅವರ ಪಾತ್ರಕ್ಕೆ ಧ್ವನಿ ನೀಡಿದರು.
ಚಿತ್ರಕಥೆ
[ಬದಲಾಯಿಸಿ]ಇಂಜಿನಿಯರ್ ಮೋಹನನು ಒಂದು ದೊಡ್ಡ ಕಟ್ಟಡ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಾನೆ. ಆದರೆ ಅವನು ಇರಬೇಕಾಗಿ ಬರುವ ಸ್ಥಳವು ನಿಗೂಢವಾಗಿ ಪರಿಣಮಿಸುತ್ತದೆ. ಅಲ್ಲಿ ಕೆಲವು ವಿಶೇಷ ದಿನಗಳಲ್ಲಿ ಯಾರಾದರೂ ಒಬ್ಬರು ಸುದೀರ್ಘ ವಿದ್ಯುತ್ ನಿಲುಗಡೆಯ ಸಂದರ್ಭದಲ್ಲಿ ಕಾಣೆಯಾಗುತ್ತಿರುತ್ತಾರೆ ಮತ್ತು ಕೆಲ ದಿನಗಳ ನಂತರ ಊರ ಹೊರಗಡೆ ಅವರ ಶವವು ಸಿಗುತ್ತಿರುತ್ತದೆ. ಅಷ್ಟೇ ಅಲ್ಲದೆ ಒಂದು ದೆವ್ವ,ಒಂದು ದೆವ್ವದ ಮನೆ, ಕಾಣೆಯಾಗುವ ಜನರ ಗುಂಪು, ಮತ್ತು ಒಬ್ಬ ಶಕ್ತಿಶಾಲಿ ದೈತ್ಯ ಇವೆಲ್ಲ ಇವನಿಗೆ ಎದುರಾಗುತ್ತವೆ. ಚಲನಚಿತ್ರದ ಉಳಿದ ಭಾಗವು ಮೋಹನನು ಸತ್ಯವನ್ನು ಹೀಗೆ ಬಯಲಿಗೆಳೆಯುತ್ತಾನೆ ಎಂಬುದನ್ನು ತೋರಿಸುತ್ತದೆ.
ಪಾತ್ರವರ್ಗ
[ಬದಲಾಯಿಸಿ]- ಶಂಕರ್ ನಾಗ್ ಮೋಹನ್ ಪಾತ್ರದಲ್ಲಿ (ಧ್ವನಿ ನೀಡಿದ್ದು ಅನಂತನಾಗ್)
- ಗೀತಾ ದೀಪಾ ಮತ್ತು ರೂಪಾ ಆಗಿ ದ್ವಿಪಾತ್ರದಲ್ಲಿ
- ವನಿತಾ ವಾಸು ರೋಹಿಣಿ ಪಾತ್ರದಲ್ಲಿ
- ತಾರಾ
- ದೊಡ್ಡಣ್ಣ
- ಸುಧೀರ್
- ಕೆ.ಎಸ್. ಅಶ್ವಥ್
- ಸದಾಶಿವ ಬ್ರಹ್ಮಾವರ್
- ರಮೇಶ್ ಭಟ್
- ಮೈಸೂರು ಲೋಕೇಶ್
- ಸಿಹಿ ಕಹಿ ಚಂದ್ರು
- ಉಮಾಶ್ರೀ
- ಕಾಮಿನಿ ಧರನ್
- ಲೋಹಿತಾಶ್ವ
- ರತ್ನಾಕರ್
- ಶೃಂಗಾರ ನಾಗರಾಜ್
- ಲಲಿತಾ
- ಸೀಮಾ
- ಕಲಾ
- ಬೇಬಿ ರಶ್ಮಿ
- ಬೇಬಿ ಲಕ್ಷ್ಮಿ
- ಹಾಸ್ಟೆಲ್ ಸಂಜು
- ರಾಮಮೂರ್ತಿ
- ಶ್ರೀಶೈಲನ್
- ರಾಮಚಂದ್ರ
- ಶ್ರೀಮತಿ ರಾಮಚಂದ್ರ
- ಚಿಕ್ಕಣ್ಣ
- ರಮೇಶ್ ಪಂಡಿತ್
ಹಿನ್ನೆಲೆ ಸಂಗೀತ
[ಬದಲಾಯಿಸಿ]ಸಮಸಂಖ್ಯೆ | ಹಾಡು | ಹಾಡುಗಾರರು |
---|---|---|
1 | "ಮದನ ಮೋಹನ" | ಎಸ್. ಜಾನಕಿ |
2 | " ತಿಳಿಯ ನೀರ" | ಕೆ.ಜೆ.ಜೇಸುದಾಸ್, ಮಂಜುಳಾ ಗುರುರಾಜ್ |
3 | "ಮಾನಸ ರಾಗವಿದು" | ಎಸ್ ಜಾನಕಿ |
4 | "ಏನಪ್ಪಾ ಯಜಮಾನ" | ಹಂಸಲೇಖ |
5 | "ಲಾಲಿ ಜೋ" | ಕೆ.ಜೆ.ಜೇಸುದಾಸ್, ಎಸ್ ಜಾನಕಿ |