ಸದಸ್ಯ:Nanditha62

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ನಮಸ್ಕಾರಗಳು.ನನ್ನ ಹೆಸರು ನಂದಿತ. ನಾನು ಮೊದಲನೆಯ ಬಿ.ಎಸ್.ಸಿ ಕ್ರೈಸ್ಟ್ ಕಾಲೇಜಿನಲ್ಲಿ ಸಿ.ಎಮ್.ಇ ಓದುತ್ತಿದ್ದೇನೆ. ನಾನು ನನ್ನ ಬಾಲ್ಯದ ವಿದ್ಯಭ್ಯಾಸವನ್ನು ಬಿಳೇಕಹಳ್ಳಿಯ ಶಾಂತಿನಿಕೇತನ ಪ್ರೌಢ ಶಾಲೆಯಲ್ಲಿ ಓದಿದ್ದೆನೆ. ಕ್ರೈಸ್ಟ್ ಅಕಾಡೆಮಿಯಲ್ಲಿ ಪಿ.ಯು.ಸಿ ಯನ್ನು ಮುಗಿಸಿದ್ದೇನೆ. ಪಿ.ಯು.ಸಿಯಲ್ಲಿ ನಾನು ಪಿ.ಸಿ.ಎಮ್.ಸಿ ತೆಗೆದುಕೊಂಡಿದ್ದೆ.ನನ್ನ ತಂದೆ ತಾಯಿ ನನಗೆ ಎಲ್ಲಾ ವಿಶಯಗಳ್ಳು ಬೆಂಬಲ ನೀಡಿದ್ದಾರೆ. ನನ್ನ ತಂದೆಯ ಹೆಸರು ಮಲ್ಲಪ್ಪ.ಎ ಮತ್ತು ನನ್ನ ತಾಯಿಯ ಹೆಸರು ಮಂಗಳ ಗೌರಿ. ನನಗೆ ನನಗಿಂತ ಮೂರು ವರ್ಷ ದೊಡ್ಡವಳಾದ ಅಕ್ಕ ಇದ್ದಾಳೆ. ಅವಳ ಹೆಸರು ಹರ್ಷಿತಾ . ಅವಳು ಕೊನೆಯ ವರ್ಷದ ಬಿ.ಕಾಮ್ ಓದುತ್ತಿದ್ಧಾಳೆ. ನನ್ನ ಮನೆಯಲ್ಲಿ ನನ್ನ ಪ್ರೀತಿಯ ನಾಯಿ ಇದೆ . ಅದರ ಹೆಸರು ಪಿಂಟು. ನಾನು ನನ್ನ ಅಕ್ಕ ಬಹಳ ಜಗಳವಾಡುತ್ತೇವೆ. ಆದರು ಒಬ್ಬರಿಗೊಬ್ಬರು ಬಿಟ್ಟಿರಲು ಸಾಧ್ಯವಿಲ್ಲ.ಇದಿಷ್ಟು ನನ್ನ ವಿದ್ಯಭ್ಯಾಸದ ಬಗ್ಗೆ ಮತ್ತು ನನ್ನ ಮನೆಯವರ ಬಗ್ಗೆ ನೀಡಿರುವ ಪರಿಚಯ

ನನ್ನ ಹವ್ಯಾಸ[ಬದಲಾಯಿಸಿ]

ಕ್ರಿಕೆಟ್ ಮೈದಾನ
ನನಗೆ ಹಾಡು ಎಂದರೆ ಬಹಳ ಇಷ್ಟ . ನನಗೆ ಬಿಡುವು ಇರುವಾಗಲೆಲ್ಲ ಹಾಡನ್ನು ಕೇಳುತ್ತೇನೆ.  ನನಗೆ ಎಸ್.ಪಿ.ಬಾಲಸುಬ್ರಮನ್ಯಮ್ ರವರು ಬಹಳ ಇಷ್ಟ. ನಾನು ಕರ್ನಾಟಕ  ಸಂಗೀತ ಕಲಿತಿದ್ದೇನೆ. ಆದರೆ ಕಾರಣಾಂತರಗಳಿಂದ ಬರಿ ಎರಡು  ವರ್ಷ ಕಲಿತೆನು. ಆದರು ಇಂದಿಗೂ ನನಗೆ ಸಂಗೀತದ ಮೇಲೆ ತುಂಬ ಆಸಕ್ತಿ. ನನಗೆ ಕ್ರಿಕೆಟ್  ಎಂದರೆ ಬಹಳ ಇಷ್ಟ. ವಿರಾಟ್ ಕೊಹ್ಲಿ ತುಂಬ ಇಷ್ಟ. ನಾನು ನನ್ನ ತಂದೆ  ಇಂದಿಗೂ ಒಟ್ಟಿಗೆ ಕ್ರಿಕೆಟ್  ನೋಡುತ್ತೇವೆ. ನನಗೆ ನೃತ್ಯ ಮಾಡಲು ತುಂಬ ಇಷ್ಟ. ನಾನು ಸ್ವಾವಲಂಬಿ ಜೀವಿ. ನನಗೆ ಸಾಕು ಪ್ರಾಣಿಗಳೆಂದರೆ ಬಹಳ ಇಷ್ಟ. ಹಸುವಿನ ಕರು ಚಿನ್ನಾಟ ಆಡುವುದನ್ನು ನೋಡಲು ತುಂಬ ಇಷ್ಟವಾಗುತ್ತದೆ. ಮನೆಯಲ್ಲಿ ಒಬ್ಬಳೆ ಕುಳಿತಾಗ ಹಾಸ್ಯ ಕವಿಗಳು ಬರೆದ ಹಾಸ್ಯ ಕಥೆಗಳನ್ನು ಓದಲು ಇಷ್ಟವಾಗುತ್ತದೆ. ನಾನು ದೂರದರ್ಶನದಲ್ಲಿ ಪ್ರಸಾರವಾಗುವ ಹೊಸ ತರಹದ ಅಡುಗೆ ಮಾಡುವುದನ್ನು ನೋಡಿ ಮನೆಯಲ್ಲಿ ಮಾಡಲು  ಪ್ರಯತ್ನಿಸುತ್ತೇನೆ. ನಾನು   ರೈಲಿನಲ್ಲಿ ದೂರದ ಪ್ರಯಾಣ ಮಾಡಲು ಇಷ್ಟ ಪಡುತ್ತೇನೆ. ಮನೆಯ ಮುಂದೆ ಹೂವಿನ ಗಿಡ-ಬಳ್ಳಿಗಳನ್ನು ತುಂಬ ಇಷ್ಟಾಪಟ್ಟು ಬೆಳೆಸುತ್ತೇನೆ. ಮೇಲೆ ತಿಳಿಸಿರುವ ವಿಶಯಗಳು ನನ್ನ ವಯಕ್ತಿಕ ಅಬಿಪ್ರಾಯಗಳು.

ನನ್ನ ಪ್ರವಾಸ[ಬದಲಾಯಿಸಿ]

ಮುರುಡೇಶ್ವರ
 ಶಾಲೆಯಲ್ಲಿ ಪ್ರತಿಸಲ ಪ್ರವಾಸಿತಾಣಗಳನ್ನು ನೋಡಲು ಹೋಗುತ್ತೇನೆ. ಅದರಲ್ಲಿ ಮಡಿಕೇರಿಯ ಪ್ರವಾಸ ಬಹಳ ಇಷ್ಟವಾಗಿತ್ತು. ಅದು ಐದು ದಿನದ ಪ್ರವಾಸವಾಗಿತ್ತು. ಹತ್ತನೆ ತರಗತಿಯಲ್ಲಿ ಇದ್ದಾಗ ನಾನು ನನ್ನ ಗೆಳತಿಯರು ಹೋಗಿದ್ದೆವು. ನಾವು ಕುಶಾಲ್ ನಗರದಲ್ಲಿರುವ ಟಿಬೇಟಿಯನ್ ದೇಗುಲ , ಬಾಗಮಂಡಲ , ಕಾವೇರಿಯ ಉಗಮಸ್ಥಳವಾದ ತಲಕಾವೇರಿ , ದುಬಾರೆ ಆನೆಗಳ ತರಬೇತಿ ಕೇಂದ್ರ ಹೋಗಿದ್ದೆವು. ಅಲ್ಲಿಂದ ಬೇಲೂರು , ಹಳೆಬೀಡು , ಆದಿ ಚುಂಚನಗಿರಿಹೆ ಹೋಗಿ ಬಂದೆವು. ನನ್ನ ಕುಟುಂಬದವರೊಂದಿಗೆ ಮುರುಡೇಶ್ವರ , ಗೋಕರ್ಣ , ಹೊರನಾಡು , ಉಡುಪಿ , ಕಟಿಲು , ಕಾರಕಾಳ , ಸಿಗಂದೂರ , ಧರ್ಮಸ್ಥಳ , ಕುಕ್ಕೆ ಇತ್ಯಾದಿ ಸ್ಥಳಗಳು ರಮಣೀಯವಾಗಿದ್ದವು. ಅದರಲ್ಲೂ ನಾವು ಮುರುಡೇಶ್ವರ ಸಮುದ್ರದ ದ್ವೀಪಕ್ಕೆ ಹಡಗಿನಲ್ಲಿ ಹೋದ ದೃಶ್ಯ ಅತ್ಯದ್ಬುತವಾಗಿತ್ತು. ಈಗಲು ಆ ಸನ್ನಿವೇಶಗಳನ್ನು ನೆನಸಿಕೊಂಡಾಗ ಮೈ ಪುಳಕಿತವಾಗುತ್ತದೆ. ಹೀಗೆ ನಾವು ಪ್ರವಾಸಿ ತಾಣಗಳನ್ನು ನೋಡಲು ಹೋಗುತ್ತಿರುತ್ತೇವೆ. 
  

ನನ್ನ ಆಸಕ್ತಿ[ಬದಲಾಯಿಸಿ]

ಲಕ್ಷ್ಮಿ ದೇವರು
 ನನಗೆ ಹಬ್ಬಗಳೆಂದರೆ ತುಂಬ ಇಷ್ಟ . ಅದರಲ್ಲು ವರಮಹಾಲಕ್ಷ್ಮಿ ಹಬ್ಬದಂದು ಎಲ್ಲರು ಲಕ್ಷ್ಮಿಗೆ ಮಾಡಿರುವ ಅಲಂಕಾರಗಳು , ತಳಿರು ತೋರಣಗಳು , ಹೂವಿನ ಅಲಂಕಾರ ನೋಡಿವುದೆಂದರೆ ತುಂಬ ಸಂತೋಶ. ನಮ್ಮ ಮನೆಯಲ್ಲಿ ಅಂದು  ಲಕ್ಷ್ಮಿಯನ್ನು ಅಂದವಾಗಿ ಅಲಂಕರಿಸಿ ಕೂರಿಸುತ್ತೇವೆ. ಎಲ್ಲಾ ಹೆಣ್ಣು ಮಕ್ಕಳನ್ನು ಮಹಿಳೆಯರನ್ನು ಹರಿಶಿಣ ಕುಂಕುಮಕ್ಕೆ ಕರಿಯುತ್ತೇವೆ. ಮನೆ ಎಲ್ಲಾ ಹಬ್ಬದ ವಾತವರಣದಿಂದ ಕೂಡಿರುವುದನ್ನು ಅನುಭವಿಸುವುದೇ ಒಂದು ಸಂತೋಶ.
              ಈಗಲು ಸಹಾ ನಾನು ನನ್ನ ಬಾಲ್ಯ ಸ್ನೇಹತರೆಲ್ಲರು ಕೂಡಿ ಪ್ರತಿಯೊಬ್ಬರ ಹುಟ್ಟುಹಬ್ಬವನ್ನು ಆಚರಿಸುತ್ತಾ ನಮ್ಮ ಶಾಲಾದಿನಗಳ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತೇವೆ. ನಮಗೆ ವಿದ್ಯಭ್ಯಾಸದ ಅರಿವು ಮೂಡಿಸಿದ ಶಾಲಾ ಶಕ್ಷಕರನ್ನು ಸ್ಮರಿಸುತ್ತಾ ಅವರೊಂದಿಗೆ ನಾವು ಮಾಡಿದ ಚಟುವಟಿಕೆಗಳನ್ನು ನೆನಪಿಸಿಕೊಳುತ್ತಾ ಸುಂದರವಾದ ಸಮಯವನ್ನು ಕಳೆಯುತ್ತೇವೆ. ಈಗಲು ಸಹ ನಾನು ಎಲ್ಲಾ ಸ್ನೇಹಿತರೊಂದಿಗೆ ಸುಮದುರ ಭಾಂಧವ್ಯವನ್ನು ಉಳಿಸಿಕೊಂಡಿದ್ದೇನೆ. 
                 ಶಿಕ್ಷಕರಿಗೆ ನಮಸ್ಕರಿಸುತ್ತ ಸ್ನೇಹಿತರನ್ನು ಸ್ಮರಿಸುತ್ತ ಗುರು ಹಿರಿಯರಿಗೆ ನಮಿಸುತ್ತ ನನ್ನ ಈ ಪರಿಚಯವನ್ನು ಮುಗಿಸುತ್ತೇನೆ. 
                                                                    
                                                                     ಧನ್ಯವಾದಗಳು.