ಸದಸ್ಯ:Muthamma473

ವಿಕಿಪೀಡಿಯ ಇಂದ
Jump to navigation Jump to search
ಕೊಡಗಿನ ಉಡುಗೆ
ಕೊಡಗು

ಜೀವನ[ಬದಲಾಯಿಸಿ]

ನನ್ನ ಹೆಸರು ಮುತ್ತಮ್ಮ,ನಾನು ಕೊಡಗು ಮೂಲದ ವೀರಾಜಪೇಟೆ ತಾಲೂಕಿನ ಹರಿಹರ ಗ್ರಾಮದವಳು.ನಾನು ದಕ್ಷಿಣ ಭಾರತಕಾಶ್ಮೀರ ಎಂದೇ ಪ್ರಸಿದ್ದವಾಗಿರುವ ಕೊಡಗು ಜಿಲ್ಲೆಯಲ್ಲಿ ಜನಿಸಿರುವೆನು .ಬಾಲ್ಯದಲ್ಲಿ ಅತಿ ಸುಂದರವಾದ ಕ್ಷಣಗಳನು ಕಳೆದಿದ್ದೇನೆ.ನಮ್ಮ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ಜೊತೆ ಸೇರಿಕೊಂಡು ಕ್ರಿಕೆಟ್ , ಫುಟ್ಬಾಲ್,ಬ್ಯಾಡ್ಮಿಂಟನ್ ,ಕಬಡ್ಡಿ  ಮುಂತಾದ ಆಟಗಳನ್ನು ನಾನು ಮತ್ತು ನನ್ನ ಸಹೋದರಿಯರು ಸೇರಿಕೊಂಡು ಆಡುತಿದ್ದೆವು .ಹೀಗೆ ಹಲವಾರು ಮಧುರ ಕ್ಷಣಗಳನ್ನು ಕಳಿದಿದ್ದೇವೆ.ನಮ್ಮದು ಕೂಡು ಕುಟುಂಬ.ಪ್ರೀತಿ , ವಿಶ್ವಾಸ,ಸ್ನೇಹದಿಂದ ಜೀವನ ಸಾಗಿಸುವುದ್ದನು ಕಲಿತಿದ್ದೇವೆ ,ಎಲ್ಲಾದಿಕ್ಕು ಹೊಂದಿಕೊಂಡು ಹೋಗುವುದ್ದನು ಕಲಿತಿದ್ದೇವೆ.

ವಿದ್ಯಾಭ್ಯಾಸ[ಬದಲಾಯಿಸಿ]

ಓದುವುದರಲ್ಲಿ ಆಸಕ್ತಿ ಇರುವುದರಿಂದ ಹಾಗು ರಸಾಯನ ಶಾಸ್ತ್ರದಲ್ಲಿ ಆಸಕ್ತಿಯನ್ನು ಹೊಂದಿರುವುದರಿಂದ ಸಂಶೋಧನೆಯನ್ನು ಮಾಡಲು ಇಚ್ಚಿಸುತ್ತೆನೆ. ನಾನು ನನ್ನ ಮನೆಯ ಹತ್ತಿರವಿರುವ ಶಾಲೆಯಲ್ಲಿ ೫ ನೇಯ ತರಗತಿಯವರೆಗೆ ವ್ಯಾಸಾಂಗ ಮಾಡುತ್ತಿದೆ, ನಂತರ ಮಂಗಳೂರಿನಲ್ಲಿ ಕಲೀತು ಇದೀಗ ಬೆಂಗಳೂರಿನ ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿ.ಎ.ಸಿ ಮಾಡುತ್ತಿದ್ದೇನೆ.ಮೂಲತಃ ಕೊಡಗಿನವಳಾದ ನನಗೆ ತೋಟಗಳಲ್ಲಿ ಮತ್ತು ಡ್ರೈವಿಂಗ್ ನಲ್ಲಿ ಆಸಕ್ತಿ ಹೆಚ್ಚು.ಚಿಕ್ಕ ವಯಸ್ಸಿನಲ್ಲಿಯೇ ವಾಹನ ಚಲಾವಣೆಯಲ್ಲಿ ಅತೀವ್ರವಾದ ಆಸಕ್ತಿಯನ್ನು ಹೊಂದಿದ್ದ ನನಗೆ ವಾಹನ ಚಲಾವಣೆಯನ್ನು ಕಲಿತೆನು. ನಮಲ್ಲಿನ ಕಾರು,ಜೀಪು, ಟ್ರಾಕ್ಟರ್ ಇವೆಲ್ಲವನ್ನೂ ಚಲಿಸುತ್ತೆನೆ. ನನಗೆ ಹೆಚ್ಚು ಓದಬೇಕೆಂಬ ಬಯಕೆ ಇದೆ. ನನಗೆ ರಸಾಯನಶಾಸ್ತ್ರ ಅಂದರೆ ತುಂಬ ಇಷ್ಟ , ಅದರಲ್ಲೇ ನಾನು ಉನ್ನತ ಶಿಕ್ಷಣ ಪಡೆಯಬೇಕೆಎಂದಿದ್ದೇನೆ.ನನ್ನ ತಂದೆ ಪ್ಲಾಂಟರ್ ಆಗಿರುವರು .ಅವರು ತೋಟಗಳನ್ನು ಮತ್ತು ಜಮೀನುಗಳನ್ನು ಹೊಂದಿದ್ದಾರೆ.

ಕುಟುಂಬ[ಬದಲಾಯಿಸಿ]

ನನ್ನ ತಂದೆಯ ಹೆಸರು ಮುರಳಿ ತಿಮ್ಮಯ್ಯ, ತಾಯಿ ತಾಜ್ ಕಾವೇರಿ. ನನಗೆ ಇಬ್ಬರು ಸೋದರಿಯರು, ನಾವು ಮೂವರು ಓದಿನಲ್ಲಿ ಮುಂದು,ಒಬ್ಬರಿಗಿಂತ ಒಬ್ಬರು ಹೆಚ್ಚು ಅಂಕಗಳನ್ನು ತೆಗೆಯುತ್ತಿದೆವು.ನನ್ನ ತಾಯಿ ಅವರು ಫ್ಯಾಷನ್ ಡಿಸೈನರ್ ಆಗಿರುವುದರಿಂದ ಪೇಂಟಿಂಗ್, ಲೋಂಗ್ಸ್ಟಿಕ್,ಕ್ರೋಶಾ ವರ್ಕ್,ಎಂಬ್ರಾಯಿಡರಿ ಮುಂತಾದವುಗಳನು ಕಲಿತಿದ್ದೇನೆ. ಮ್ಮ ಅಜ್ಜ ಮಿಲಿಟರಿಯಲ್ಲಿ ಸೇವೆಸಲ್ಲಿಸಿದ್ದಾರೆ, ಅಜ್ಜಿ ನಿವರ್ತ ಪ್ರಾಂಶುಪಾಲರು. ನಮ್ಮದೊಂದು ಸ್ವರ್ಗದಂತಹ ಕುಟುಂಬ, ನಮ್ಮ ಮನೆಯಲ್ಲಿ ಚಿಕಪ್ಪನನ್ನ ಸೇರಿಸಿ ೮ ಜನ. ಯಾವಾಗಲು ಜೊತೆಯಲ್ಲಿಯೇ ಕುಳಿತು ಊಟಮಾಡುತ್ತೇವೆ.ಜೀವನದಲ್ಲಿ ಒಳ್ಳೆಯ ಮಾರ್ಗದಲ್ಲಿ ನಡೆಯುತ ಒಬ್ಬ ಒಳ್ಳೆಯ ಮಗಳಾಗಿ ,ಪ್ರೀತಿಯ ಸಹೋದರಿಯಾಗಿ ,ಜವಾಬ್ಧಾರಿಯುಕ್ತ ವಿದ್ಯಾರ್ಥಿಯಾಗಿ ,ಒಳ್ಳೆಯ ಸ್ನೇಹಿತೆಯಾಗಿ ಬದುಕಲು ಇಚ್ಛಿಸುತ್ತೆನೆ .