ವಿಷಯಕ್ಕೆ ಹೋಗು

ಸದಸ್ಯ:Monisha james

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]

ನನ್ನ ಹೆಸರು ಮೋನಿಷಾ  ಜೆ. ಎಲ್  ದೇವರೊಯ್.ನಾನು ಜನಿಸಿದ್ದು ಜೂನ್ ೨೦, ೧೯೯೯ರೆಂದು  ಮುಗೈಯುರ್, ತಮಿಳು ನಾಡಿನಲ್ಲಿ.ಆದರೆ ನಾನು ಜೀವಿಸುವ ಸ್ಥಳ ಬೆಂಗಳೂರು. ನನ್ನ ಮಾತೃ ಭಾಷೆ ತಮಿಳು. ನನ್ನ ತಂದೆಯ ಹೆಸರು ಆರ್. ಜೇಮ್ಸ್ ಪುಷ್ಪ ರಾಜ್. ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್  ಫ್ಯಾಕ್ಟರಿಯಲ್ಲಿ  ಕೆಲಸ ಮಾಡುತ್ತಿದ್ದಾರೆ. ನನ್ನ ತಾಯಿಯ ಹೆಸರು ಲೀಮಾ ಆರೋಕ್ಕಿಯ ಮೇರಿ.ಎ. ಅವರು ಒಂದು ತಮಿಳು ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದಾರೆ. ನನಗೆ ಒಂದು ತಂಗಿ ಮತ್ತು ತಮ್ಮ ಇದ್ದಾರೆ. ತಂಗಿ ಹತ್ತನೇ ತರಗತಿ ಮತ್ತು ತಮ್ಮ ಐದನೇ ತರಗತಿಯಲ್ಲಿ ಓದುತ್ತಿದ್ದಾರೆ.

ನನ್ನ ವಿದ್ಯಾಭ್ಯಾಸ

[ಬದಲಾಯಿಸಿ]
ನಾನು ನಾಲ್ಕನೇ ತರಗತಿಯ ವರೆಗು ಸಂತ. ಥಾಮಸ್ ಸ್ಕೂಲ್, ಬೆಂಗಳೂರಿನಲ್ಲಿ ಓದಿದ್ದೆ . ನಂತರ ಸೇಕ್ರೆಡ್ ಹಾರ್ಟ್ಸ್ ಮಿಡ್ಲ್ ಅಂಡ್ ಗರ್ಲ್ಸ್ ಹೈ ಸ್ಕೂಲಿ,ಬೆಂಗಳೂರಿನಲ್ಲಿ ಎಂಟನೇ ತರಗತಿಯ ವರೆಗು ಹಾಗು ಒಂಬತ್ತು ಹಾಗು ಹತ್ತನೇ ತರಗತಿಯನ್ನುಹೆಚ್. ಏ. ಎಲ್ ಈಸ್ಟ್ ಪ್ರೈಮರಿ ಅಂಡ್ ಗರ್ಲ್ಸ್ ಹೈ ಸ್ಕೂಲ್ , ಬೆಂಗಳೂರಿನಲ್ಲಿ ಮುಗಿಸಿದ್ದೆ. ಇವಾಗ ನಾನು ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಮೊದಲನೆಯ ವರುಷ ಡಿಗ್ರಿ ಮಾಡುತ್ತಿದ್ದೇನೆ.
[ಬದಲಾಯಿಸಿ]

ನನ್ನ ಅವ್ಯಾಸಗಳು

[ಬದಲಾಯಿಸಿ]
ಮೈಸೂರು ಅರಮನೆ
ಚಿಕ್ಕ ವಯಸ್ಸಿನಿಂದಲೇ ನನಗೆ ಸಂಗೀತದಲ್ಲಿ ಆಸಕ್ತಿ ಇದೆ. ಒಂದು ದಿನವೂ ಹಾಡು ಕೇಳದೆ ಕಳೆಯುವುದಿಲ್ಲ. ನಾನು ಚಿಕ್ಕ ವಯಸಿನಿಂದಲ್ಲೇ ಓಡುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ಬರುತ್ತಿದ್ದೇನೆ. ಅದರಲ್ಲಿ ನಾನು ಅನೇಕ ಬಹುಮಾನಗಳನ್ನು ಗೆದ್ದಿದ್ದೇನೆ. ಇದು ಇಲ್ಲದೆ ಇನ್ನು ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಕ್ರಿಕೆಟ್ ಮುಂತಾದ  ಕ್ರೀಡೆಗಳಲ್ಲೂ ಆಸಕ್ತಿ ಇದೆ. ಚಿತ್ರ ಬಿಡಿಸುವುದಲ್ಲಿ ನನಗೆ ತುಂಬ ಆಸಕ್ತಿ ಇದೆ. ಆದರಿಂದ ನಾನು ಮನೆಯಲ್ಲಿ ಸುಮ್ಮನೆ ಇರುವಾಗ ದೇವರ ಹಾಗು ಕಾರ್ಟೂನ್ ಪಾತ್ರಗಳ ಚಿತ್ರ ಬಿಡಿಸುತ್ತೇನೆ. ನನಗೆ ಪ್ರವಾಸದಲ್ಲಿ ಆಸಕ್ತಿ ಇದೆ. ವೇಲಾಂಕನ್ನಿ, ಕೋಲ್ಕತಾದ  ಹೌರಹ್ ಬ್ರಿಜ್, ಚೆನ್ನೈನ ಮೆರೀನ ಬೀಚ್, ಪಾಂಡಿಚೆರಿ , ಡೆಲ್ಲಿಯಾ ಕೆಂಪು ಕೋಟೆ , ಆಗ್ರಾ, ದುಬೈ ಮುಂತಾದ ಸ್ಥಳಗಳಿಗೆ ಪ್ರವಾಸ ಮಾಡಿದ್ದೇನೆ. ಅದರಲ್ಲೂ ಆಗ್ರಾದ ತಾಜ್ ಮಹಲ್ ಪ್ರವಾಸ ಮಾಡಿದ್ದು ನನ್ನ ಮನಸ್ಸಿಗೆ ಸಂತೋಷವನ್ನು ತಂದಿದೆ. ಕರ್ನಾಟಕದ ಪ್ರಸಿದ್ಧ ಉತ್ಸವವಾದ ಹಂಪಿ ಉತ್ಸವಕ್ಕೆ ಹೋಗಿದ್ದು ಮನೋರಂಜನೀಯವಾಗಿತ್ತು. ಮೈಸೂರಿನ ಅರಮನೆ, ಮೃಗಾಲಯ, ಸಂತ ಫಿಲೋಮಿನಾಸ್ ಚರ್ಚ್, ಕೆ.ಆರ್. ಎಸ್ ಅಣೆಕಟ್ಟು, ಚಾಮುಂಡಿ ಬೆಟ್ಟ ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಟ್ಟಿದೇನೆ. ಆ ಸ್ಥಳಗಳು ನನ್ನ  ಮನಸ್ಸಿಗೆ ಸಂತೋಷ ಮತ್ತು ಶಾಂತಿಯನ್ನು ಉಂಟುಮಾಡಿದೆ. ನನಗೆ ಪುಸ್ತಕಗಳೆಂದರೆ ಇಷ್ಟ. ಅದರಲ್ಲಿಯೂ ತೆನಾಲಿ ರಾಮ, ಅಕ್ಬರ್ ಮತ್ತು ಬೀರ್ಬಲ್ ಇವರ ಕತೆಗಳೆಂದರೆ ಪ್ರೀತಿ. ರಸ್ಕಿನ್ ಬಾಂಡ್ ಮತ್ತು ಷೇಕ್ಸ್ಪಿಯರ್  ನನಗೆ ಇಷ್ಟವಾದ ಕವಿಗಳು. ಅದರಲ್ಲಿಯೂ ರಸ್ಕಿನ್ ಬಾಂಡಿನ ವಿಥ್ ಲವ್ ಫ್ರಮ್ ದಿ ಹಿಲ್ಸ್, ರೂಮ್ ಆನ್ ದಿ ರೂಫ್ ಮುಂತಾದ ಕಾದಮ್ಬರಿ ಹಾಗು ಷೇಕ್ಸ್ಪೀರಿನ ರೋಮಿಯೋ ಅಂಡ್ ಜೂಲಿಯೆಟ್, ದಿ ಕಾಮಿಡಿ ಹಾಫ್ ಎರ್ರರ್ಸ್ , ದಿ ಮರ್ಚೆಂಟ್ ಹಾಫ್ ವೆನಿಸ್ ಮುಂತಾದ ನಾಟಕಗಳೆಂದರೆ ಇಷ್ಟ.
[ಬದಲಾಯಿಸಿ]

ನನ್ನ ಜೀವನದ ಗುರಿ

[ಬದಲಾಯಿಸಿ]
ನನಗೆ ಪ್ರಾಧ್ಯಾಪಕಿಯಾಗಬೇಕೆಂದು ತುಂಬ ಆಸೆ.ಯಾರಿಗೆಲ್ಲ ಓದಲು ಆಸಕ್ತಿ ಇದ್ದು ಓದಲು ಅವಕಾಶವಿಲ್ಲವೋ ಅವರಿಗೆ ಹಣ ತೆಗೆದುಕೊಳ್ಳದೆ ವಿದ್ಯೆಯನ್ನು ಕಲಿಸಿಕೊಡುವುದೇ ನನ್ನ ಗುರಿ ಹಾಗು ನನ್ನಿಂದ ಆಗುವ ಸಹಾಯವನ್ನು ಪರರಿಗೆ ಮಾಡುವುದು.ಬಡವರಿಗೆ ಸಹಾಯ ಮಾಡಿ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡುವುದು.
[ಬದಲಾಯಿಸಿ]