ಸದಸ್ಯ:Merin Cherian/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೂಕ್ಲಿಡ್[ಬದಲಾಯಿಸಿ]

ಯೂಕ್ಲಿಡ್ ಒಂದು ಪ್ರಸಿದ್ದವಾದ ಗ್ರೀಕ್ ಗಣಿತಶಾಸ್ತ್ರಜ್ಞರಾಗಿದ್ದರು. ಇವರನ್ನು 'ಯೂಕ್ಲಿಡ್ ಆಫ್ ಅಲೆಕ್ಸಾಂಡ್ರಿಯಾ' ಎಂದು ಕರೆಯುತ್ತಿದ್ದರು. ಇವರು ರೇಖಾಗಣಿತದ ಪಿತಾಮಹಾ ಎಂದು ಪರಿಚಿತರಾಗಿದ್ದರು. ಅವರ 'ದಿ ಎಲಿಮೆಂಟ್ಸ್' ಎಂಬ ಪುಸ್ತಕ ಗಣಿತಶಾಸ್ತ್ರದ ಇತಿಹಾಸದಲ್ಲಿ ಒಂದು ಪ್ರಮುಖವಾದ ಬರವಣಿಗೆ. ಈ ಪುಸ್ತಕ ರೇಖಾಗಣಿತದಲಿ ಕಂಡು ಬರುವ ಮುಖ್ಯವಾದ ಪುಸ್ತಕವಾಗಿದೆ. ಎಲಿಮೆಂಟ್ಸ್ ಎಂಬ ಪುಸ್ತಕ ರೇಖಾಗಣಿತದ್ದ ಬಗ್ಗೆ ಗಮನ ನೀಡಿದ್ದರೂ ಅದರಲ್ಲಿ ಸಂಖ್ಯೆ ಸಿದ್ದಾಂತದ ವಿಷಯದಲ್ಲಿ ಕೂಡ ಅರಿವು ನೀಡಿದ್ದಾರೆ. ಅವರು ಕೋನಿಕ್ ವಿಭಾಗಗಳು, ಗೋಳಾಕಾರದ ರೇಖಾಗಣಿತ, ಸಂಖ್ಯೆ ಸಿದ್ದಾಂತ ಮುಂತಾದ ಪ್ರಮುಖ ಗಣಿತ ವಿಷಯಗಳ ಬಗ್ಗೆ ಬರೆದಿದ್ದಾರೆ.

ಯೂಕ್ಲಿಡ್‍ನ ಪ್ರತಿಮೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯ

ಜೀವನ[ಬದಲಾಯಿಸಿ]

ಯೂಕ್ಲಿಡ್‍ನ ಕೆಲವೇ ಕೆಲವು ಮೂಲ ಉಲ್ಲೇಖಗಳು ಉಳಿದುಕೊಂಡಿವೆ, ಆದ್ದರಿಂದ ಅವರ ಜೀವನದ ಬಗ್ಗೆ ಸ್ವಲ್ಪವೇ ತಿಳಿದಿದೆ. ಯೂಕ್ಲಿಡ್‌ರವರು ಅಲೆಕ್ಸಾಂಡ್ರಿಯಾ, ಈಜಿಪ್ಟ್‌ನಲ್ಲಿ ಶಿಕ್ಷಕರಾಗಿ ಸೇವೆ ಸಲಿಸುತ್ತಿದ್ದರು ಎಂದು ತಿಲಿದು ಬಂದಿದೆ. 'ಯೂಕ್ಲಿಡ್' ಎಂಬ ಗ್ರೀಕ್ ಪದದ ಅರ್ಥ ಹೆಸರಾಂತ ಎಂದಾಗಿದೆ. ಅವರ ಹೆಸರಂತೆ ಅವರು ಇಡೀ ಲೋಕಕ್ಕೆ ಗಣಿತಶಾಸ್ತ್ರ ಒಂದು ಹೆಸರಾಂತ ವ್ಯಕ್ತಿಯಾಗಿದ್ದರು. ಯೂಕ್ಲಿಡ್‌ನ ವಿವರವಾದ ಜೀವನಚರಿತ್ರೆಯನ್ನು ಅರೇಬಿಯನ್ ಲೇಖಕರು ನೀಡಿದ್ದಾರೆ, ಇವರ ಮೂಲಕ ಯೂಕ್ಲಿಡ್‌ನ ಜನ್ಮ ಪಟ್ಟಣ ಟೈರ್ನ. ಅವರ ಜನ್ಮ ಸಿ. ೩೨೫ ಬಿ.ಸಿ ಕಾಲದಲ್ಲಿ ಎಂದು ತಿಲಿದು ಬಂದಿದೆ. ಈ ಜೀವನಚರಿತ್ರೆ ಸಾಮಾನ್ಯವಾಗಿ ಕಾಲ್ಪನಿಕ ಎಂದು ನಂಬಲಾಗಿದೆ. ಆರ್ಕಿಮಿಡೀಸಿನ ಮುಂಚೆ ಯುಕ್ಲಿಡ್ ತನ್ನ ಕೃತಿಗಳನ್ನು ಬರೆದಿದ್ದಾರೆ ಎಂದು ನಂಬಲಾಗಿದೆ.

ಎಲಿಮೆಂಟ್ಸ್[ಬದಲಾಯಿಸಿ]

'ಎಲಿಮೆಂಟ್ಸ್' ಮುದ್ರಣಾಲಯದ ಆವಿಷ್ಕಾರದ ನಂತರ ಮುದ್ರಿತವಾಗಿರುವ ಅತ್ಯಂತ ಮೂದಲ ಗಣಿತಶಾಸ್ತ್ರದ ಕೃತಿಗಳಲ್ಲಿ ಒಂದಾಗಿದೆ.ಎಲಿಮೆಂಟ್ಸ್‌‌ ಎಂಬ ಪುಸ್ತಕ ವ್ಯಾಖ್ಯಾನಗಳು ಮತ್ತು ಐದು ಪೋಸ್ಟ್ಯುಲೇಟ್ಗಳಿಂದ ಆರಂಭಿಸುತ್ತದೆ. ಹೀಗೆ ಈ ಪುಸ್ತಕದ್ದಲಿ ಅನೇಕ ಪೋಸ್ಟ್ಯುಲೇಟ್ಗಳು ಕಂಡು ಬರುತ್ತದೆ. ಮುಂತಾಗಿ ಈ ಪುಸ್ತಕವನ್ನು ೧೩ ಭಾಗಗಳಾಗಿ ಭಾಗಿಸಲಾಗಿದೆ. ೧೩ ಭಾಗಗಳಲ್ಲಿ ೧ ರಿಂದ ೬ನೇ ವರೆಗೆ ಇರುವ ಭಾಗ ಪ್ಲೇನ್ ರೇಖಾಗಣಿತದ ಬಗ್ಗೆ ಮಾಹಿತಿ ನೀಡುತ್ತದೆ. ೭ರಿಂದ ೯ ವರೆಗೆ ಸಂಖ್ಯೆ ಸಿದ್ದಾಂತ ಬಗ್ಗೆ, ೧೦ನೇ ಭಾಗ ಅಭಾಗಲಬ್ಧ ಸಂಖ್ಯೆಗಳ ಬಗ್ಗೆ ಮತ್ತು ೧೧ ರಿಂದ ೧೩ ತಂಕ ಇರುವ ಭಾಗ ಮೂರು ಆಯಾಮಗಳ ವಿಷಯದ ಮೇಲೆ ಮಾಹಿತಿ ನೀಡುತ್ತದೆ. ಯೂಕ್ಲಿಡ್‌ನ ಎಲಿಮೆಂಟ್ಸ್‌ನಲ್ಲಿ ಸಿದ್ಧಾಂತಗಳಲ್ಲಿ ಸ್ಪಷ್ಟತೆಯನ್ನು ಕಂಡು ಬರುತ್ತದೆ.

ಯೂಕ್ಲಿಡ್‌ನ ಪುರಾವೆ

ಯೂಕ್ಲಿಡಿಯನ್ ರೇಖಾಗಣಿತವು, ಯುಕ್ಲಿಡ್ ಬರೆದ ಎಲಿಮೆಂಟ್ಸ್‌ನಲ್ಲಿ ಕಂಡು ಬರುವ ಗಣಿತಶಾಸ್ತ್ರದ ಪದ್ದತಿಯಾಗಿದೆ. ಈ ಯೂಕ್ಲಿಡಿಯನ್ ರೇಖಾಗಣಿತದ ಬಗ್ಗೆ ಯೂಕ್ಲಿಡ್‌ರವರು ಎಲಿಮೆಂಟ್ಸ್ನಲ್ಲಿ ವಿವರಿಸಿದಾರೆ. ಯೂಕ್ಲಿಡ್ನ ಪದ್ದತಿಯಲ್ಲಿ ಒಂದು ಸಣ್ಣ ಸೆಟ್ ಅಂತರ್ಬೋಧೆಯಿಂದ ಮನವಿ ಮಾಡುವ ಮೂಲತತ್ವಗಳನ್ನು ಹೊಂದಿದರು, ಇವುಗಳಿಂದ ಅನೇಕ ಇತರ ಸಿಧಾತಗಳನ್ನು ತಯಾರಿಕೆ ಮಾಡುತ್ತಿದರು. ಅನೇಕ ಸ್ವಯಂ-ಸ್ಥಿರವಾದ ನೋನ್-ಯೂಕ್ಲಿಡ್‌‌ಯನ ರೇಖಾಗಣಿತ ೧೯ನೇ ಶತಮಾನದ ಆರಂಭದಲ್ಲಿ ತಿಳಿದು ಬಂದಿದೆ. ಗಣಿತಶಾಸ್ತ್ರದಲ್ಲಿ, ಯುಕ್ಲಿಡಿಯನ್ ಅಲ್ಗಾರಿದಮ್, ಎರಡು ಸಂಖ್ಯೆಗಳ ಶ್ರೇಷ್ಠ ಸಾಮಾನ್ಯ ಜಿಸಿಡಿವನ್ನು ಗಣನೆಗೆ ತೆಗೆದುಕೊಳ್ಳುವ ದಕ್ಷ ವಿಧಾನವಾಗಿದೆ, ಉಳಿದ ಎರಡು ಭಾಗಗಳನ್ನು ಉಳಿದಿಲ್ಲದೆಯೇ ವಿಭಜಿಸುವ ದೊಡ್ಡ ಸಂಖ್ಯೆ.

ಕೃತಿ ಮತ್ತು ಸಾಧನೆಗಳು[ಬದಲಾಯಿಸಿ]

ಎಲಿಮೆಂಟ್ಸ್ ಜೊತೆಗೆ ಯೂಕ್ಲಿಡ್‌ರವರ ಕನಿಷ್ಠ ಐದು ಕೃತಿಗಳ ಇಂದಿನವರೆಗೂ ಉಳಿದುಕೊಂಡಿವೆ. ಅವುಗಳು ಡೇಟಾ, ಡಿವಿಶನ್ ಅಫ್ ಫ಼ಿಗರ್‌ಸ್, ಕ್ಯಾಟೊಪ್ಟಿಕ್ಸ್, ಫೀನೊಮೆನಾ ಮತ್ತು ಒಪ್‌ಟಿಕ್ಸ್. ಇವರ ಇಂತಹ ಅನೇಕ ಕೃತಿಗಳು ಕಳೆದುಹೋಗಿವೆ. ಪೈಥಾಗರಿಯನವರು ಗೋಲ್ಡನ್ ಅನುಪಾತವನ್ನು ತಿಳಿದಿದ್ದರು, ಅನುಪಾತಗಳ ಪರಿಭಾಷೆಯಲ್ಲಿ ಯೂಕ್ಲಿಡ್ ಇದನ್ನು ಮೊದಲ ಬಾರಿಗೆ ವಿವರಿಸಿದರು.


ಇವರು ಸಿ. ೨೭೦ ಬಿ.ಸಿ.ಯಲಿ ಮರಣ ಹೊಂದಿದ್ದರು. ಅವರು ಸಂಭಾವ್ಯವಾಗಿ ಅಲೆಕ್ಸಾಂಡ್ರಿಯಾದಲ್ಲಿ ಮರಣ ಹೊಂದಿರ ಬಹುದು. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಯೂಕ್ಲಿಡ್ ಗಗನನೌಕೆಯನ್ನು ಯೂಕ್ಲಿಡ್ ಆಫ್ ಅಲೆಕ್ಸಾಂಡ್ರಿಯಾರವರ ಗೌರವದಲಿ ಹೆಸರಿಸಲಾಯಿತು. ಯೂಕ್ಲಿಡ್ ಎಂದಿಗು ಗಣಿತ ಲೋಕದಲ್ಲಿ ಅವರ ಕೊಡುಗೆಗೆ ನೆನಪಿನಲ್ಲಿರುತ್ತಾರೆ. [೧] [೨] [೩]

  1. https://www.thefamouspeople.com/profiles/euclid-436.php
  2. http://www-groups.dcs.st-and.ac.uk/history/Biographies/Euclid.html
  3. https://www.ancient.eu/Euclid/