ಸದಸ್ಯ:Bindya Nagaraj/sandbox
ಲಗ್ಗರ್ ಗಿಡುಗ
[ಬದಲಾಯಿಸಿ]ಕಂಡು ಬರುವ ಸ್ಥಳಗಳು
[ಬದಲಾಯಿಸಿ]ಲಗ್ಗರ್ ಗಿಡುಗ ಪಕ್ಷಿಯು ಸಮುದ್ರ ಮಟ್ಟಕ್ಕಿಂತ ೧೦೦೦ಮೀ ಹೆತ್ತರದಲ್ಲಿ ವಾಸಿಸುತ್ತದೆ.ಈ ಪಕ್ಷಿಯ ವೈಜ್ನ್ಯಾನಿಕ ಹೆಸರು Falco jugger ,ಲಗ್ಗರ್ ಗಿಡುಗವನ್ನು ಆಂಗ್ಲ ಬಾಷೆಯಲ್ಲಿ ಲಗ್ಗರ್ ಫಾಲ್ಕನ್ ಎಂದು ಕರಿರುತ್ತಾರೆ.ಈ ಪಕ್ಷಿಯು ಒಣ ಕಾಡು, ಕೃಷಿ ಪ್ರದೇಶ ,ಮರುಭೂಮಿಯಲ್ಲಿ ಕಾಣಬಹುದು. ಲಗ್ಗರ್ ಗಿಡುಗವನ್ನು ಫ್ರೆಂಚ್ ಬಾಷೆಯಲ್ಲಿ ಫ್ಯಾಉಕಾಂ ಲಗ್ಗರ್ ,ಜೆರ್ಮನ್ ಬಾಷೆಯಲ್ಲಿ ಲಗ್ಗರ್ ಫಾಲ್ಕೆ , ಸ್ಪ್ಯಾನಿಷ್ ಬಾಷೆಯಲ್ಲಿ ಹಾಲ್ಕೋನ್ ಯಾಜಿಗರ್ ಎಂದು ಕರೆಯಲಾಗುತ್ತಬೆ. ಲಗ್ಗರ್ ಗಿಡುಗದ ತುಕಾ ಸುಮಾರು ೫೨೫ ರಿಂದ ೮೫೦ ಗ್ರಾಮ್ ವರೆಗೆ ಇರುತ್ತದೆ[೧]. ಈ ಪಕ್ಷಿ ನೇಪಾಳ ,ಭೂತಾನ್ ,ಮ್ಯಾನ್ಮಾರ್ ,ಪಾಕಿಸ್ತಾನ್ ಮಣಿಪುರ್ ,ದಕ್ಷಿಣ ಕನ್ಯಾಕುಮಾರಿ ,ಪೂರ್ವ ಅಸ್ಸಾಂ ಅಫ್ಘಾನಿಸ್ತಾನ್ ಮತ್ತು ಮರುಭೂಮಿ ಪ್ರದೇಶದಲ್ಲಿ ಕಾಣಬಹುದು.ಇವು ದಕ್ಷಿಣ ಭಾರತದಲ್ಲಿ ಕಂಡುಬರುವುದಿಲ್ಲ.[೨]
ವಿಶಿಷ್ಟತೆ
[ಬದಲಾಯಿಸಿ]ಲಗ್ಗರ್ ಗಿಡುಗದ ಮೈ ಬಣ್ಣ ಕಂದು ಅದರ ಕತ್ತಿನ ಬಾಗ ಬಿಳಿ ಬಣ್ಣದ್ದು. ಇಂತಹ ಪಕ್ಷಿಗಳಲ್ಲಿ ಕಂಡುಬರುವ ಸಾದಾರಣ ವಿಷಯವೆಂದರೆ ಅವುಗಳ ಕಣ್ಣುಗಳು. ಲಗ್ಗರ್ ಗಿಡುಗದ ಕಣ್ಣುಗಳು ಸುಮಾರು ಒಂದು ಕಿಲೋಮೀಟರ್ ದೂರವಿರುವ ಪಕ್ಷಿಗಳನ್ನು ನೋಡಬಹುದು ಇದರಿಂದ ಅವುಗಳಿಗೆ ಆಹಾರ ಸುಲಭವಾಗಿ ದೊರೆಯುತ್ತದೆ.ಈ ಪಕ್ಷಿಗಳಿಗೆ ರೆಕ್ಕೆಗಳು ೮೦ ಸೆಂಟಿಮೀಟರ್ ರಿಂದ ೧೦೭ ಸೆಂಟಿಮೀಟರ್ ಗಳಷ್ಟು ಅಗಲವಿರುತ್ತ
ಬಲಿಷ್ಠತೆ
[ಬದಲಾಯಿಸಿ]ಲಗ್ಗರ್ ಗಿಡುಗದ ರೆಕ್ಕೆಗಳು ಬಲಿಷ್ಠವಾಗಿದ್ದು ಅವುಗಳು ಹಾರುವುದಕ್ಕೆ ಮತ್ತು ಅತೀ ಎತ್ತರವಾಗಿ ಹಾರಲು ಉಪಯೋಗ ವಾಗುತ್ತದೆ. ರೆಕ್ಕೆಗಳ ಮೇಲೆ ಇರುವ ಪುಕ್ಕಗಲ್ಲಿಂದ ತಂಪಾದ ವಾತಾವರಣದಿಂದ ದೇಹದ ತಾಪಮಾನವನ್ನು ಬೆಚ್ಚಗೆ ಇಡುತ್ತದೆ.ರಭಸವಾಗಿ ಗಾಳಿ ಬೀಸಿದರು ಕೂಡ ಎದುರಿಸುವ ಶಕ್ತಿ ಲಗ್ಗರ್ ಗಿಡುಗದ ರೆಕ್ಕೆಗಿರುತ್ತದೆ.ಲಗ್ಗರ್ ಗಿಡುಗಕ್ಕೆ ದೊಡ್ಡ ದೊಡ್ಡ ರೆಕ್ಕೆಗಳಿರುತ್ತದೆ.ಈ ಪಕ್ಷಿಯ ಟೊಳ್ಳು ಮೂಳೆಇಂದ ಹಾರಲು ಸುಲಭವಾಗುತ್ತದೆ.ಲಗ್ಗರ್ ಗಿಡುಗದ ಕಾಲುಗಳು ಹಳದಿ ಬಣ್ಣದು.ಕಾಲ್ಲಲ್ಲಿರುವ ಉಗುರುಗಳು ಚೂಪಾಗಿ ಇರುವ ಕಾರಣ ಬೇಟೆಯಾಡುವಾಗ ಪಕ್ಷಿಗಳನ್ನು ಬಲವಾಗಿ ಹಿಡಿಯಲು ಬಳಕೆಯಾಗುತ್ತದೆ .ಅದರ ಕೊಕ್ಕು ಬಲಿಷ್ಠವಾಗಿರುವದರ ಕಾರಣ ಪಕ್ಷಿಗಳನ್ನು ಹರಿದು ತಿನ್ನನಲು ಉಪಯೋಗವಾಗುತ್ತದೆ.ಈ ಹಕ್ಕಿಗಲು ಗುಂಪಿನಲ್ಲಿ ವಾಸಮಾಡುತ್ತದೆ, ಇದರ ಮುಖ್ಯ ಆಹಾರ ಕಾಡು ಪಾರಿವಾಳ,ಚಿಕ್ಕ ಚಿಕ್ಕ ಪಕ್ಷಿಗಳು,ಕೀಟಗಳು ಮತ್ತು ಹಲ್ಲಿಗಳು[೩].ಲಗ್ಗಾರ್ ಗಿಡುಗ ಗೂಡನ್ನು ಕಟ್ಟುವ ಸಾಧ್ಯತೆ ಅತೀ ಕಡಿಮೆ ಆದಕಾರಣ ಇದು ಬೇರೆ ಪಕ್ಷಿಗಳ(ಉದಾಹರಣೆ: ಕಾಗೆ,ಗಿಡುಗ ಮತ್ತು ಹದ್ದು) ಗುಡಿನಲ್ಲಿ ಮೊಟ್ಟೆ ಇಡುತ್ತದೆ.
ವಲಸೆ
[ಬದಲಾಯಿಸಿ]ಈ ಗಿಡುಗದ ಸಂತಾನವೃದ್ಧಿ ಋತುವಿನ ಜನವರಿ - ಏಪ್ರಿಲ್ ಮತ್ತು ಫೆಬ್ರವರಿ - ಮೇ[೪]. ಇದು ಗೂಡು ಕಟ್ಟುವಾಗ ಒಣ ಕಡ್ಡಿಗಳು ಮತ್ತು ಒಣ ಹುಲ್ಲುಗಳು ಬಳಸುತ್ತದೆ.ಮರಗಳ್ಳಲಿ ಗೂಡು ಕಟ್ಟುತ್ತದೆ.ಇದು ಗೂಡನ್ನು ಕಟ್ಟುವಾಗ ಬಲವಾಗಿ ಕಟ್ಟುತದೆ ಏಕೆಂದರೆ ಇದರ ತೂಕವನ್ನು ತಡಯಬೇಕು.ಸುಮಾರು ೩ ರಿಂದ ೪ ಮೊಟ್ಟೆಗಖಳನ್ನು ಇಡುತ್ತದೆ.ಹೆಣ್ಣು ಮತ್ತು ಗಂಡು ಪಕ್ಷಿ ಕಾವುಕೊಡುತ್ತದೆ.ಭಾಗಶಃ ವಲಸೆ ಹೋಗುತ್ತದೆ.ಪಕ್ಷಿಗಳು ನಾಶವಾಗಲು ಕಾರಣ ನಗರೀಕರಣ,ಕೈಗಾರೀಕರಣ ಮತ್ತು ವ್ಯವಸಾಯ ಪದ್ಧತಿಗಳು.ಹೆಚ್ಚಿನ ವ್ಯವಸಾಯ ಚಟುವಟಿಕೆ ಮತ್ತು ನೀರಿರಾವ ಯೋಜನೆಗಲ್ಲಿಂದ ಲಗ್ಗರ್ ಗಿಡುಗದ ಸಂಖ್ಯೆ ಕಡಿಮೆಯಾಗಿದೆ.ಈ ಪಕ್ಷಿಗಳು ಮುಖ್ಯವಾಗಿ ಮರುಭೂಮಿಯಲ್ಲಿ ವಾಸಮಾಡುತ್ತದೆ.ವ್ಯವಸಾಯ ಮತ್ತು ನೀರಾವರಿ ಯೋಜನೆಯಿಂದ ರಾಜಸ್ಥಾನದಂತ ಮರುಭೂಮಿ ಬಾಗದಲ್ಲಿ ಮರೆಯಾಗುತ್ತಾ ಬಂದಿದೆ.
ದುರುಪಯೋಗಗಳು
[ಬದಲಾಯಿಸಿ]ಲಗ್ಗರ್ ಗಿಡುಗವನ್ನು ಮಾರಾಟಮಾಡುವುದು ನಿಷೇಧವಾಗಿದೆ. ಆದರೆ ಕೆಲವರು ಕಳ್ಳತನದಿಂದ ಲಗ್ಗರ್ ಗಿಡುಗವನ್ನಿಡಿದು ಮಾರಾಟಮಾಡಲು ಪ್ರಯತ್ನಿಸುತ್ತಾರೆ. ಸರ್ಕಾರವು ಹಲವಾರು ಕ್ರಮಗಳನ್ನು ಇದರ ವಿಚಾರವಾಗಿ ತೆಗೆದುಕೊಂಡಿದೆ. ಆದರೂ ಕಳ್ಳತನದಿಂದ ಈ ಪಕ್ಷಿಯನ್ನು ಇಡಿಯುವುದು ಇನ್ನು ನಿಂತಿಲ್ಲ.ಲಗ್ಗರ್ ಗಿಡುಗವು ೧೦ ವರ್ಷಗಳ ಹಿಂದೆ ಬಹಳ ಹೆಚ್ಚಿನ ಸಂಖ್ಯೆದಲ್ಲಿ ಕಾಣಿಸುತ್ತಿತ್ತು ನಂತರದ ವರ್ಷಗಳಲ್ಲಿ ಕಡಿಮೆಯಾಗುತ್ತ ಬಂದಿದೆ.ಸರ್ಕಾರ ಕಟ್ಟುನಿಟ್ಟಿನ ಕ್ರಮಗಲ್ಲನು ಕೈಗೊಳ್ಳ ಬೇಕು.ಇಲ್ಲದಿದ್ದರೆ ಈ ಜಾತಿಯ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತ ಬರುತ್ತದೆ ಲಗ್ಗರ್ ಗಿಡುಗವನ್ನು ಮಾರಾಟಮಾಡುವುದು ನಿಷೇಧವಾಗಿದೆ. ಆದರೆ ಕೆಲವರು ಕಳ್ಳತನದಿಂದ ಲಗ್ಗರ್ ಗಿಡುಗವನ್ನಿಡಿದು ಮಾರಾಟಮಾಡಲು ಪ್ರಯತ್ನಿಸುತ್ತಾರೆ. ಸರ್ಕಾರವು ಹಲವಾರು ಕ್ರಮಗಳನ್ನು ಇದರ ವಿಚಾರವಾಗಿ ತೆಗೆದುಕೊಂಡಿದೆ. ಆದರೂ ಕಳ್ಳತನದಿಂದ ಈ ಪಕ್ಷಿಯನ್ನು ಇಡಿಯುವುದು ಇನ್ನು ನಿಂತಿಲ್ಲ.ಮುಂದೆ ನೋಡುವುದಕ್ಕೆ ಸಿಗಲಾರದೆ ಪುಸ್ತಕದಲ್ಲಿ ಮಾತ್ರ ನೋಡಬಹುದಷ್ಟೆ.ಬುಡಕಟ್ಟು ಜನಾಂಗದವರು ಲಗ್ಗರ್ ಗಿಡುಗವನ್ನು ಬೇಟೆಯಾಡುತ್ತಾರೆ ಆದ ಕಾರಣ ಅವುಗಳ ಸಂಖ್ಯೆ ಕಡಿಮೆಯಾಗುತ್ತ ಬರುತಿದೆ. ಅವರಿಗೆ ಲಗ್ಗರ್ ಗಿಡುಗ ನಾಶವಾಗುತ್ತೆ ಎಂಬ ಜ್ಞಾನವಿರುವುದಿಲ್ಲ.ಕೀಟನಾಶಕವು ಕೂಡ ಲಗ್ಗರ್ ಗಿಡುಗದ ನಾಶಕ್ಕೆ ಕಾರಣವಾಗಿದೆ. ಕಾನೂನು ಪ್ರಕಾರವಾಗಿ ಲಗ್ಗರ್ ಗಿಡುಗ ಇಂಡಿಯನ್ ವೈಲ್ದಲಿಫೆ ಪ್ರೊಟೆಕ್ಷನ್ ಆಕ್ಟ್ ೧೯೭೨ ಕೆಳಗೆ ರಕ್ಷಿಸಲಾಗುತ್ತದೆ. ಬಿರ್ಡ್ಲಿಫ್ ಇಂಟರ್ನಾಷನಲ್ ೨೦೦೭ ಪ್ರಕಾರ ಕ್ರಮಗಳನ್ನು ಕೈಗೊಳ್ಳಬೇಕು : ೧] ಲಗ್ಗರ್ ಗಿಡುಗದ ಸಂಖ್ಯೆಯ ಬಗ್ಗೆ ಎಚ್ಚರ ಇಡಬೇಕು. ೨] ಕೀಟನಾಶಕಗಳನ್ನು ಬಳಕೆ ಮಾಡಬಾರದು. ೩] ಸ್ಥಳಿಯರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ೪] ಕಾನೂನು ರಕ್ಷಣೆಗಳನ್ನು ಸರಿಯಾಗಿ ಜಾರಿಗೆ ತರಬೇಕು ಇದರಿಂದ ಲಗ್ಗರ್ ಗಿಡುಗವನ್ನು ರಕ್ಷಿಸಬಹುದು. ೫] ಲಗ್ಗರ್ ಗಿಡುಗವನ್ನು ಬೇಟೆಯಾಡುವ ಮಟ್ಟ ಮತ್ತು ಒಟ್ಟು ಸಂಖ್ಯೆಗಳನ್ನು ಲೆಕ್ಕ ಹಾಕಬೇಕು. ೬] ಕಾರ್ಯಕ್ರಮಗಳನ್ನು ಕೈಗೊಂಡು ಲಗ್ಗರ್ ಗಿಡುಗವನ್ನು ವಿರೋಧಿಸಲು ಶಿಕ್ಷಣ ಕೊಡಬೇಕು. ೭] ಲಗ್ಗರ್ ಗಿಡುಗದ ನಡವಳಿಕೆ ಮತ್ತು ಅದರ ಆಹಾರದ ಪದ್ದತಿಯ ಬಗ್ಗೆ ತಿಳಿದು ಕೊಳ್ಳಬೇಕು.
ಉಲ್ಲೇಖನಗಳು
[ಬದಲಾಯಿಸಿ]