ಸದಸ್ಯ:Aina kurian/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ಆಸ್ಕಾರಿಸ್

ದುಂಡು ಹುಳುಗಳು[ಬದಲಾಯಿಸಿ]

ಖಂಡವಿಭಜನೆಯಿಲ್ಲದ ನೀಳವಾದ ದೇಹವನ್ನೊಳಗೊಂಡ ಪ್ರಾಣಿಗಳಾಗಿರುವ ಕಾರಣದಿಮ್ದ, ಈ ವಂಶದ ಪ್ರಾಣಿಗಳಿಗೆ 'ದುಂಡುಹುಳುಗಳು' ( aschelminthes ) ಎಂದು ಹೆಸರು. ಈ ಪ್ರಾಣಿಗಳು ಮಣ್ಣು ನೀರು ಮುಂತಾದೆಡೆಯಲ್ಲಿ ಇರುತ್ತವೆ. ಇವುಗಳಲ್ಲಿ ಕೆಲವು ಸ್ವತಂತ್ರ ಜೀವಿಗಳು ( ಉದಾ :ರ್ಯಾಬ್ಡೈಟಿಸ್ ) ಮತ್ತು ಬಹುತೇಕ ಜೀವಿಗಳು ಪರವಾಲಂಬಿ ಜೀವಿಗಳಾಗಿಯೂ ( ಉದಾ : ದುಂಡುಹುಳು ) ಬದುಕುತ್ತವೆ. ಇವು ಮುಪ್ಪದರದ ಜೀವಿಗಳಾಗಿವೆ. ದೇಹವು ದಪ್ಪನಾದ ಕ್ಯೂಟಿಕಲ್ ಹೊದಿಕೆಯಿಂದ ಆವರಿಸಲ್ಪಟ್ಟಿದೆ.

ಶರೀರಶಾಸ್ತ್ರ[ಬದಲಾಯಿಸಿ]

ಪ್ರಾಣಿಗಳು ದೇಹಾಂತರಾವಾಕಾಶವನ್ನು ಹೊಂದಿದ್ದು, ಜೀರ್ಣನಾಳ ಮತ್ತು ದೇಹಭಿತ್ತಿ ಇವುಗಳ ನಡುವಣ ಸ್ಥಳಾವಕಾಶವನ್ನು ಸೂಡೊಸೀಲ್ ಎಂಬುದಾಗಿ ಕರೆಯಬಹುದು. ಇದು ದ್ರವದಿಂದ ತುಂಬಿದೆ. ಈ ಪ್ರಾಣಿಗಳು ಪೋಷಕ ಜೀವಿಗಳಿಂದ ಆಹಾರವನ್ನು ಪಡೆಯುವುದರಿಂದ ಸರಳವಾದ ಜೀರ್ಣಾಂಗವ್ಯೂಹವನ್ನು ಹೊಂದಿವೆ. ಬಾಯಿ ಮತ್ತು ಮಲದ್ವಾರವನ್ನು ಹೊಂದಿರುವ ಕೊಳವೆಯಾಕಾರದ ಜೀರ್ಣನಾಳವಿರುತ್ತದೆ. ಈ ಪ್ರಾಣಿಗಳಲ್ಲಿ ಉಸಿರಾಟದ ಅಂಗಗಳಾಗಲಿ ಅಥವಾ ಪರಿಚಲನ ಅಂಗಗಳಾಗಲಿ ಇಲ್ಲ. ಪರತಂತ್ರ ಜೀವಿಗಳಾಗಿರುವುದರ ಕಾರಣ ಬೇಕಾಗುವಷ್ಟು ಆಮ್ಲಜನಕವನ್ನು ಪೋಷಕ ಜೀವಿಯಿಂದಲೇ ಪಡೆಯುತ್ತವೆ. ಈ ಕಾರಣ ಉಸಿರಾಟದ ಅಂಗಗಳ ಅಗತ್ಯ ಈ ಪ್ರಾಣಿಗಳಿಗೆ ಇಲ್ಲ. ಪರಿಚಲನಾಂಗಗಳ ಅವಶ್ಯಕತೆಯೂ ಇಲ್ಲ. ದೇಹದುದ್ದಕ್ಕೂ ಚಾಚಿಕೊಂಡಿರುವ ಸರಳವಾದ ನರಗಳನ್ನೊಳಗೊಂಡ ನರಮಂಡಲವಿದೆ. ವಿಸರ್ಜನಾ ಮಂಡಲವು ದುಂಡುಹುಳುಗಳಲ್ಲಿ ವಿಶಿಷ್ಟವಾಗಿದ್ದು ಎರಡು ನೀಳವಾದ ನಾಳಗಳಿವೆ. ಇವು ಪ್ರಾಣಿಯ ದೇಹದ ಎರಡೂ ಕಡೆಗಳಲ್ಲಿರುವ ಹೊರಚರ್ಮದಲ್ಲಿ ಹುದುಗಿರುತ್ತದೆ. ವಿಸರ್ಜನದ್ವಾರದ ಮೂಲಕ ತ್ಯಾಜ್ಯವಸ್ತುಗಳನ್ನು ಹೊರಹಾಕುತ್ತವೆ. ಇವು ಏಕಲಿಂಗಿಗಳು. ಲೈಂಗಿಕ ರೀತಿಯಿಂದ ವಂಶಾಭಿವೃದ್ಧಿ ಮಾಡುತ್ತವೆ.

ಆವಾಸಸ್ಥಾನ[ಬದಲಾಯಿಸಿ]

ದುಂಡುಹುಳುಗಳಲ್ಲಿ ಕೇವಲ ಬಾಹ್ಯರಚನೆಯ ಆಧಾರದ ಮೇಲೆ ಗಂಡು ಮತ್ತು ಹೆಣ್ಣು ಪ್ರಾಣಿಗಳನ್ನು ಸುಲಭವಾಗಿ ಗುರುತಿಸಬಹುದು. ಸಾಮಾನ್ಯವಾಗಿ ಹೆಣ್ಣುಹುಳುಗಳು ಗಂಡುಹುಳುಗಳಿಗಿಂತ ಹೆಚ್ಚು ಉದ್ದವಾಗಿರುತ್ತದೆ. ದೊಂಡುಹುಳುಗಳ ಜಾತಿಗೆ ಸೇರಿದ ಜಂತುಹುಳುಗಳ ಮೊಟ್ಟೆಗಳು ಆಹಾರ ಮತ್ತು ನೀರಿನ ಮೂಲಕ ಮಾನವಶರೀರವನ್ನು ಪ್ರವೇಶಿಸಿ ಸೋಂಕನ್ನು ಉಂಟುಮಾಡುತ್ತವೆ. ಹಾಗಾಗಿ ಕೆರೆ, ನದಿಗಳ ನೀರನ್ನು ಕುಡಿಯುವಾಗ ಮತ್ತು ಆಹಾರವನ್ನು ಸೇವಿಸುವಾಗ ಎಚ್ಚರಿಕೆವಹಿಸುವುದು ಅಗತ್ಯ. ಅಲ್ಲದೇ ಶುಚಿತ್ವವನ್ನು ಕಾಪಾಡುವುದೂ ಅಷ್ಟೇ ಮುಖ್ಯ. ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಮತ್ತು ಆಹಾರ ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯವಶ್ಯ. ದುಂಡು ಹುಳುಗಳ ಉದಾಹರಣೆಗಳಾವುವೆಂದರೇ ದುಂಡುಹುಳು, ಕೊಕ್ಕೆಹುಳು, ಪೈಲೇರಿಯಾ ಹುಳು. ಈ ಪ್ರಾಣಿಗಳಲ್ಲಿ ಬಹುತೇಕ ಪರವಾಲಂಬಿಗಳಾಗಿದ್ದು ತಮ್ಮ ಪೋಷಕ ಜೀವಿಗಳಲ್ಲಿ ಹಾನಿಕರಕ ರೋಗಗಳನ್ನು ಉಂಟುಮಾಡುತ್ತದೆ. ಆಷ್ಕೆಲ್ಮಿಂತಸ್ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ, ಆಕ್ಕೋಸ್- ಅಂದರೆ ಕುಹರ ( cavity ), ಮತ್ತು ಹೆಲ್ಮಿನ್ಸ್- ಹುಳು ಇವೆರಡರ ಅರ್ಥವೇ ಆಂತರಿಕ ದೇಹ ಕುಹರದೊಂದಿಗೆ ಒಟ್ಟಿಗೆ ಸೇರಲ್ಪಟ್ಟಾಗಿದೆ ಎಂದು. ಈ ಜಾತಿಗೆ ಸೇರಿದ ಸದಸ್ಯರು ಭೂಮಿಯ ಎಲ್ಲಾ ವಾಸಯೋಗ್ಯ ಸ್ಥಳವನ್ನು ಆಕ್ರಮಿಸುತ್ತಾರೆ.

ಇತಿಹಾಸ[ಬದಲಾಯಿಸಿ]

ಗ್ರೊಬ್ಬಿಡ್ ಎಂಬವರು ಮೊದಲು ಆಷ್ಕೆಲ್ಮಿಂತಸ್ ಎಂಬ ಪದವನ್ನು ಇಟ್ಟರು. ಗೆಜೆನ್ಬೌರ್ (1851), ಹಕ್ಸ್ಲೆ (1875) ಮುಂತಾದ ಹಿರಿಯ ಶಾಸ್ತ್ರಗ್ನರು ಈ ಜಾತಿಗೆ ಸೇರಿದ ಗೂಂಪುಗಳನ್ನು ಚೆಟ್ಗ್ನಾಥಸ್, ನೆಮಾಟೊಮೊರ್ಫಾ ಮುಂತಾದ ಹಲವು ಗುಂಪುಗಳು ಎಂದು ಹೆಸರಿಟ್ಟರು. ಹೈಮನ್ (1951) ಈ ಜಾತಿಯ ಕಾರ್ಯಸಾಧ್ಯ ವರ್ಗೀಕರಣವನ್ನು ಪ್ರಸ್ತುತಪಡಿಸಿದರು ಮತ್ತು ಅದರ ಅಡಿಯಲ್ಲಿ ಪ್ರಿಯಾಪ್ಯುಲಿಡಾವನ್ನು ಸೇರಿಸಿಕೊಂಡರು. ಆದರೆ ಸ್ಯಾಪಿರೊ (1961) ದುಂಡು ಹುಳುಗಳ ಜಾತಿಯಿಂದ ಪ್ರಿಯಾಪ್ಯುಲಿಡಾ ವನ್ನು ಬೇರ್ಪಡಿಸಿದರು ಮತ್ತು ಅದನ್ನು ಕೋಲೋಮೆಟ್ ಗುಂಪಿನಲ್ಲಿ ಸೇರಿಸಿದರು. ದುಂಡು ಹುಳುಗಳನ್ನು ಐದು ತರಗತಿಗಳಾಗಿ ವಿಭಜಿಸಲಾಗಿದೆ; ವರ್ಗ ೧- ನೆಮಾಟೊಡಾ(nematoda) ವರ್ಗ ೨- ನೆಮಾಟೊಮಾರ್ಫಾ(nematomorpha) ವರ್ಗ ೩- ರೋಟಿಫೆರಾ(rotifera) ವರ್ಗ ೪- ಗ್ಯಾಸ್ಟ್ರೋಟ್ರೈಕ(gastrotricha) ವರ್ಗ ೫-ಕೈನೊರಿಂಕ(kinorhyncha) [೧] [೨]

  1. http://www.ucmp.berkeley.edu/aschelminthes/aschelminthes.html
  2. http://www.biologydiscussion.com/invertebrate-zoology/phylum-aschelminthes/phylum-aschelminthes-characters-and-classification-animal-kingdom/69864