ಸದಸ್ಯ:2240559sneha/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮಾನ್ಯವಾಗಿ ಮೂತ್ರ ಪಿಂಡಗಳು ರಕ್ತವನ್ನು ಫಿಲ್ಟರ್ ಮಾಡುತ್ತವೆ , ಹಾನಿಕರ ತ್ಯಾಜ್ಯ ಉತ್ಪನ್ನಗಳನ್ನು ಹಾಗೂ ಹೆಚ್ಚುವರಿ ದ್ರವವನ್ನು ದೇಹದಿಂದ ಮೂತ್ರವಾಗಿ ಹೊರಹಾಕುತ್ತವೆ. ಆದರೆ ಈ ಮೂತ್ರ ಪಿಂಡಗಳಿಗೆ ಏನಾದರೂ ತೊಂದರೆಯಾದರೆ ( ಉದಾಹರಣೆ :ದೀರ್ಘ ಕಾಲದ ಮೂತ್ರ ಪಿಂಡ ಕಾಯಿಲೆಯಿಂದ ಬಳಲುತ್ತಿದ್ದರೆ)  ಮೂತ್ರ ಪಿಂಡಗಳು ಸರಿಯಾಗಿ ರಕ್ತವನ್ನು ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಈ ಸಂಧರ್ಭದಲ್ಲಿ ತ್ಯಾಜ್ಯ ಉತ್ಪನ್ನಗಳು ಹಾಗೂ ದ್ರವವು ನಿಮ್ಮ ದೇಹಕ್ಕೆ ಅಪಾಯಕಾರಿಯಾಗಬಹುದು. ಚಿಕಿತ್ಸೆ ಮಾಡದೆ ಬಿಟ್ಟರೆ, ಹಲವಾರು ಅಹಿತಕರ (ಭಯಾನಕ) ಲಕ್ಷಣಗಳು ಕಾಣಿಸಬಹುದು ಹಾಗೂ ಅಂತಿಮವಾಗಿ ಮಾರಕವಾಗಬಹುದು.

ಈ ಸಂದರ್ಭದಲ್ಲಿ ಮೂತ್ರಪಿಂಡಗಳ ಸಾಮಾನ್ಯ ಕಾರ್ಯ ಚಟುವಟಿಕೆಗೆ ಪರ್ಯಾಯವಾಗಿ ಡಯಾಲಿಸಿಸ್ ಮೂಲಕ  ರಕ್ತ ಶುದ್ಧೀಕರಿಸಬಹುದು. 

      ಡಯಾಲಿಸಿಸ್ : ಕಿಡ್ನಿ ಡಯಾಲಿಸಿಸ್ ಎನ್ನುವುದು ಹೆಚ್ಚುವರಿ ನೀರು, ದ್ರಾವಣಗಳು ತಗೆದು ಹಾಕುವ ಪ್ರಕ್ರಿಯೆ. ಮೊದಲ ಯಶಸ್ವಿ ಡಯಾಲಿಸಿಸ್ ಅನ್ನು ೧೯೪೩ ರಲ್ಲಿ (ನೆದರ್ಲ್ಯಾಂಡ್ಸ್ ನಲ್ಲಿ) ನಡೆಸಲಾಯಿತು.

ಡಯಾಲಿಸಿಸ್ ನಲ್ಲಿ ಎರಡು ವಿಧಗಳಿವೆ:

1. ಹಿಮೋಡಯಾಲಿಸಿಸ್ - ರಕ್ತವನ್ನು ನಿಮ್ಮ ದೇಹದಿಂದ ಕೃತಕ ಮೂತ್ರ ಪಿಂಡದ ಯಂತ್ರಕ್ಕೆ ಟ್ಯೂಬ್ ಗಳ ಮೂಲಕ ಪಂಪ್ ಮಾಡಲಾಗುತ್ತದೆ ಮತ್ತೆ ಅದೇ ಟ್ಯೂಬ್ಗಳ ಮೂಲಕ ನಿಮ್ಮ ದೇಹಕ್ಕೆ ಹಿಂತಿರುಗಿಸಲಾಗುತ್ತದೆ.

2. ಪೆರಿಟೋನಿಯಲ್ ಡಯಾಲಿಸಿಸ್ - ನಿಮ್ಮ ಹೊಟ್ಟೆಯ ಒಳಪದರವು ನೈಸರ್ಗಿಕ ಫಿಲ್ಟರ್ ಆಗಿ ಕಾರ್ಯು ನಿರ್ವಹಿಸುತ್ತದೆ. ಮೂತ್ರಪಿಂಡಗಳಂತೆ, ಪೆರಿಟೊನಿಯಂ ಸಾವಿರಾರು ಸಣ್ಣ ರಕ್ತ ನಾಳಗಳನ್ನು ಹೊಂದಿರುತ್ತದೆ, ಇದು ಉಪಯುಕ್ತ ಫಿಲ್ಟರ್ ಆಗಿ ಸಹಾಯ ಮಾಡುತ್ತದೆ.

ಪೆರಿಟೋನಿಯಲ್ ಡಯಾಲಿಸಿಸ್ :

ನೀವು ಪೆರಿಟೋನಿಯಲ್ ಡಯಾಲಿಸಿಸ್ ಅನ್ನು ಪ್ರಾರಂಭಿಸುವ ಕೆಲವು ವಾರಗಳ ಮೊದಲು, ಶಸ್ತ್ರಚಿಕಿತ್ಸಕರು ನಿಮ್ಮ ಹೊಟ್ಟೆಯಲ್ಲಿ ಕ್ಯಾತಿಟರ್ ಎಂದು ಕರೆಯಲ್ಪಡುವ ಮೃದುವಾದ ಟ್ಯೂಬ್ ಅನ್ನು ಇರಿಸುತ್ತಾರೆ.ಇದನ್ನು ಶಾಶ್ವತವಾಗಿ ಹೊಟ್ಟೆಯಲ್ಲಿ ಬಿಡಲಾಗುತ್ತದೆ. ನೀವು ಚಿಕಿತ್ಸೆಯನ್ನು ಪ್ರಾರಂಭಿಸಿದಾಗ, ಡಯಾಲಿಸಿಸ್ ದ್ರಾವಣ -( ನೀರಿನೊಂದಿಗೆ ಉಪ್ಪು ಮತ್ತು ಇತರ ಸೇರ್ಪಡುಗಳಿರುವ ದ್ರಾವಣ ) ಇದು ಚೀಲದಿಂದ ಕ್ಯಾತಿಟರ್ ಮೂಲಕ ನಿಮ್ಮ ಹೊಟ್ಟೆಗೆ ಹರಿಯುತ್ತದೆ. ಬ್ಯಾಗ್ ಖಾಲಿಯಾಗಿರುವಾಗ, ನೀವು ಅದನ್ನು ಸಂಪರ್ಕ ಕಡಿತಗೊಳಿಸಿ  ನಿಮ್ಮ ಕ್ಯಾತಿಟರ್‌ನಲ್ಲಿ ಕ್ಯಾಪ್ ಅನ್ನು ಇರಿಸಿ  ನಿಮ್ಮ ಸಾಮಾನ್ಯ ಚಟುವಟಿಕೆಗಳನ್ನು ಮಾಡಬಹುದು. ಡಯಾಲಿಸಿಸ್ ದ್ರಾವಣವು ನಿಮ್ಮ ಹೊಟ್ಟೆಯೊಳಗೆ ಇರುವಾಗ, ಅದು ನಿಮ್ಮ ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಹೀರಿಕೊಳ್ಳುತ್ತದೆ. ಕೆಲವು  ಗಂಟೆಗಳ ನಂತರ, ದ್ರಾವಣ ಮತ್ತು ತ್ಯಾಜ್ಯಗಳನ್ನು ನಿಮ್ಮ ಹೊಟ್ಟೆಯಿಂದ ಖಾಲಿ ಚೀಲಕ್ಕೆ ಬರಿದುಮಾಡಲಾಗುತ್ತದೆ. ಬಳಸಿದ ಪರಿಹಾರವನ್ನು ನೀವು ಟಾಯ್ಲೆಟ್ ಅಥವಾ ಟಬ್ನಲ್ಲಿ ಎಸೆಯಬಹುದು.

ಪೆರಿಟೋನಿಯಲ್ ಡಯಾಲಿಸಿಸ್‌


ನಂತರ, ನೀವು ಡಯಾಲಿಸಿಸ್ ಪರಿಹಾರದ ತಾಜಾ ಚೀಲದಿಂದ ಪ್ರಾರಂಭಿಸಿ. ದ್ರಾವಣವು ತಾಜಾವಾಗಿದ್ದಾಗ, ಅದು ತ್ಯಾಜ್ಯವನ್ನು ತ್ವರಿತವಾಗಿ ಹೀರಿಕೊಳ್ಳುತ್ತದೆ. ಸಮಯ ಕಳೆದಂತೆ, ಫಿಲ್ಟರಿಂಗ್ ನಿಧಾನವಾಗುತ್ತದೆ. ಈ ಕಾರಣಕ್ಕಾಗಿ, ಬಳಸಿದ ದ್ರಾವಣವನ್ನು ಖಾಲಿ ಮಾಡುವ ಪ್ರಕ್ರಿಯೆಯನ್ನು ನೀವು ಪುನರಾವರ್ತಿಸಬೇಕು ಮತ್ತು ಪ್ರತಿದಿನ ನಾಲ್ಕರಿಂದ ಆರು ಬಾರಿ ತಾಜಾ ದ್ರಾವಣದೊಂದಿಗೆ ನಿಮ್ಮ ಹೊಟ್ಟೆಯನ್ನು ತುಂಬಿಸಬೇಕು. ಈ ಪ್ರಕ್ರಿಯೆಯನ್ನು Exchange (ವಿನಿಮಯ) ಎಂದು ಕರೆಯಲಾಗುತ್ತದೆ.ದ್ರವವನ್ನು ಬದಲಾಯಿಸುವುದು ಸಾಮಾನ್ಯವಾಗಿ ೩೦ ರಿಂದ ೪೦ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸಾಮಾನ್ಯವಾಗಿ ದಿನಕ್ಕೆ ೪ ಬಾರಿ ಪುನರಾವರ್ತಿಸಬೇಕಾಗುತ್ತದೆ.


ದ್ರವವನ್ನು ಒಳಗೆ ಮತ್ತು ಹೊರಗೆ ಪಂಪ್ ಮಾಡುವ ಯಂತ್ರವನ್ನು ಬಳಸಿಕೊಂಡು ನೀವು ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ ನಿಮ್ಮ ವಿನಿಮಯವನ್ನು ಮಾಡಬಹುದು. ಉತ್ತಮ ಫಲಿತಾಂಶಗಳಿಗಾಗಿ, ಸೂಚಿಸಿದಂತೆ ನಿಮ್ಮ ಎಲ್ಲಾ ವಿನಿಮಯವನ್ನು ನಿರ್ವಹಿಸುವುದು ಮುಖ್ಯವಾಗಿದೆ.

ಡಯಾಲಿಸಿಸ್ ನಿಮಗೆ ಉತ್ತಮವಾಗಲು ಮತ್ತು ಹೆಚ್ಚು ಕಾಲ ಬದುಕಲು  ಸಹಾಯ ಮಾಡುತ್ತದೆ, ಆದರೆ ಇದು ಮೂತ್ರಪಿಂಡ ವೈಫಲ್ಯಕ್ಕೆ ಪರಿಹಾರವಲ್ಲ.

ಯಾವುದೇ ಸ್ವಚ್ಛವಾದ, ಚೆನ್ನಾಗಿ ಬೆಳಗಿದ ಸ್ಥಳದಲ್ಲಿ ನೀವು ವಿನಿಮಯವನ್ನು ಮಾಡಬಹುದು.ಡಯಾಲಿಸಿಸ್ ದ್ರಾವಣವು ನಿಮ್ಮ ಹೊಟ್ಟೆಯಲ್ಲಿರುವ ಸಮಯವನ್ನು dwell time ಎಂದು ಕರೆಯಲಾಗುತ್ತದೆ. ಪೆರಿಟೋನಿಯಲ್ ಡಯಾಲಿಸಿಸ್‌ನ ಅನುಕೂಲವನೆಂದರೆ ಡಯಾಲಿಸಿಸ್ ಘಟಕಕ್ಕೆ ನಿಯಮಿತ ಭೇಟಿ ಅಗತ್ಯವಿಲ್ಲ, ಈ ರೀತಿಯ ಡಯಾಲಿಸಿಸ್ ಅನ್ನು ಮನೆಯಲ್ಲಿಯೇ ನಡೆಸಬಹುದು. ಹಿಮೋಡಯಾಲಿಸಿಸ್ ಹೊಂದಿರುವವರಿಗೆ ಹೋಲಿಸಿದರೆ ಪೆರಿಟೋನಿಯಲ್ ಡಯಾಲಿಸಿಸ್ ಹೊಂದಿರುವ ಜನರಿಗೆ ಆಹಾರ ಮತ್ತು ದ್ರವ ಸೇವನೆಯ ಮೇಲೆ ಕಡಿಮೆ ನಿರ್ಬಂಧಗಳಿವೆ.

ಅನುಕೂಲಗಳು :

1. ಇದು ನಿರಂತರ ಚಿಕಿತ್ಸೆಯನ್ನು ನೀಡುತ್ತದೆ, ಇದು ಬಹುತೇಕ ನೈಸರ್ಗಿಕ ಮೂತ್ರಪಿಂಡಗಳಂತೆ ಕಾರ್ಯ ನಿರ್ವಹಿಸುತ್ತದೆ.

2. ನಿಮ್ಮ ಆಹಾರದಲ್ಲಿ ಕಡಿಮೆ ನಿರ್ಬಂಧಗಳು.

3. ಸೂಜಿ-ಮುಕ್ತ ಚಿಕಿತ್ಸೆಗಳು.

4. ಚಿಕಿತ್ಸೆಗಾಗಿ ಡಯಾಲಿಸಿಸ್ ಕೇಂದ್ರಕ್ಕೆ ಪ್ರಯಾಣಿಸುವುದನ್ನು ತಪ್ಪಿಸಬಹುದು.

5. ನಿಮಗೆ ಸೂಕ್ತ ಮತ್ತು ಅನುಗುಣವಾಗಿರುವ ಚಿಕಿತ್ಸೆಯ ವೇಳಾಪಟ್ಟಿಯನ್ನು ಹೊಂದಬಹುದು.

6. ಮಲಗಿರುವಾಗಲೂ ಡಯಾಲಿಸಿಸ್ ಮಾಡಬಹುದು.

ಅನಾನುಕೂಲಗಳು:

ಪೆರಿಟೋನಿಯಲ್ ಡಯಾಲಿಸಿಸ್ ನ ಒಂದು ಮುಖ್ಯ ಅನಾನುಕೂಲ ವೆಂದರೆ ಅದನ್ನು ಪ್ರತಿದಿನ ನಡೆಸಬೇಕಾಗುತ್ತದೆ. ತೆಳುವಾದ ಟ್ಯೂಬ್ (ಕ್ಯಾತಿಟರ್) ಅಸಮಾಧಾನಗೊಳಿಸಬಹುದು. ಕೆಲವು ಜನರು ಪೆರಿಟೋನಿಯಲ್ ಡಯಾಲಿಸಿಸ್ ಮಾಡುತ್ತಾ ೧೫ ಅಥವಾ ೨೦ ವರ್ಷಗಳವರೆಗೆ ಉತ್ತಮವಾಗಿ ಬದುಕುತ್ತಾರೆ , ಆದರೆ PD ಆಯ್ಕೆ ಮಾಡುವ ಅನೇಕರು ಕೇವಲ ೨-೩ವರ್ಷಗಳ ನಂತರ ನಿಲ್ಲಿಸುತ್ತಾರೆ.

ಹಾಗಾದರೆ ಹಿಮೋಡಯಾಲಿಸಿಸ್ ವಿರುದ್ಧ ಪೆರಿಟೋನಿಯಲ್ ಡಯಾಲಿಸಿಸ್ ಅನ್ನು ಹೋಲಿಸಿದಾಗ ಯಾವ ಚಿಕಿತ್ಸೆಯು ನಿಮಗೆ ಸೂಕ್ತವಾಗಿದೆ? ಪೆರಿಟೋನಿಯಲ್ ಡಯಾಲಿಸಿಸ್ ನಿರಂತರ ಫಿಲ್ಟರ್ ನೀಡುತ್ತದೆ ಮತ್ತು ನಿಮ್ಮ ಪ್ರತಿದಿನದ ಚಟುವಟಿಕೆಗಳಿಗೆ ಹೆಚ್ಚು ಅಡ್ಡಿಪಡಿಸುವ ಅಗತ್ಯವಿರುವುದಿಲ್ಲ. ಆದರೂ ಕಡಿಮೆ ಮೂತ್ರಪಿಂಡದ ಕಾರ್ಯವನ್ನು ಹೊಂದಿರುವ ರೋಗಿಗಳಿಗೆ ಹಿಮೋಡಯಾಲಿಸಿಸ್ ಸೂಕ್ತವಾಗಿದೆ. ಪೆರಿಟೋನಿಯಲ್ ಡಯಾಲಿಸಿಸ್ ಸ್ಥೂಲಕಾಯದ ರೋಗಿಗಳಿಗೆ (obesity) ಅಥವಾ ಕಿಬ್ಬೊಟ್ಟೆಯ ಗುರುತು ಹೊಂದಿರುವ ಜನರಿಗೆ ಉತ್ತಮ ಆಯ್ಕೆಯಾಗಿಲ್ಲ.

ಪೆರಿಟೋನಿಯಲ್ ಡಯಾಲಿಸಿಸ್ಗೆ ರೋಗಿಗಳ ತರಬೇತಿ ಮತ್ತು ಸಮರ್ಪಣೆಯ ಅಗತ್ಯವಿರುವುದರಿಂದ ಹೆಮೋಡಯಾಲಿಸಿಸ್ ಗೆ ಆರೋಗ್ಯ ವೃತ್ತಿಪರರು ತಮ್ಮ ಹೆಚ್ಚಿನ ಚಿಕಿತ್ಸೆಗಳನ್ನು ನಿರ್ವಹಿಸಲು ಬಯಸುವ ರೋಗಿಗಳು ಆದ್ಯತೆ ನೀಡಬಹುದು.

ನೀವು ಪರ್ಟೋನಿಯಲ್ ಡಯಾಲಿಸಿಸ್ ಅನ್ನು ಎಲ್ಲಿ ಮಾಡಬೇಕು: ನಿಮ್ಮ ವಿನಿಮಯವನ್ನು ಮಾಡಲು ಸ್ಥಳವನ್ನು ಆಯ್ಕೆಮಾಡಿ: ಶುದ್ಧ ಮತ್ತು ಶುಷ್ಕ, ಚೆನ್ನಾಗಿ ಬೆಳಗಿದೆ,ಸರಬರಾಜು ಇರಿಸಿಕೊಳ್ಳಲು ಟೇಬಲ್ ಮತ್ತು ಶೆಲ್ಫ್ ಅನ್ನು ಹೊಂದಿದ ಸ್ಥಳ, ಗಿಡಗಳು ಮತ್ತು ಸಾಕುಪ್ರಾಣಿಗಳಿಂದ ಮುಕ್ತವಾಗಿರುವ ಸ್ಥಳ.

ಪೆರಿಟೋನಿಯಲ್ ಡಯಾಲಿಸಿಸ್ ನ ವಿಧಾನಗಳು:

ನಿರಂತರ ಆಂಬ್ಯುಲೇಟರಿ ಪೆರಿಟೋನಿಯಲ್ ಡಯಾಲಿಸಿಸ್ (CAPD): CAPD ಯೊಂದಿಗೆ, ನೀವು ದಿನಕ್ಕೆ ಮೂರರಿಂದ ನಾಲ್ಕು ಬಾರಿ ವಿನಿಮಯ ಮಾಡಿಕೊಳ್ಳುತ್ತೀರಿ. ಯಂತ್ರಗಳಿಲ್ಲ. ನೀವು ಕ್ಯಾತಿಟರ್ ಮೂಲಕ ಪೆರಿಟೋನಿಯಲ್ ಕುಹರದೊಳಗೆ ಡಯಾಲಿಸೇಟ್ ಚೀಲವನ್ನು (approximately 2 quarts) ಹಾಕುತ್ತೀರಿ. ಡಯಾಲಿಸೇಟ್ ಸುಮಾರು ನಾಲ್ಕೈದು ಗಂಟೆಗಳ ಕಾಲ ಅಲ್ಲಿಯೇ ಇರುತ್ತದೆ, ಅದನ್ನು ಮತ್ತೆ ಚೀಲಕ್ಕೆ ಹರಿಸಲಾಗುತ್ತದೆ ಮತ್ತು ಎಸೆಯಲಾಗುತ್ತದೆ.

Blausen 0160 CAPD

ಸ್ವಯಂಚಾಲಿತ ಪೆರಿಟೋನಿಯಲ್ ಡಯಾಲಿಸಿಸ್ (APD): APD ಅನ್ನು ಸಾಮಾನ್ಯವಾಗಿ ಸೈಕ್ಲರ್ ಎಂಬ ವಿಶೇಷ ಯಂತ್ರವನ್ನು ಬಳಸಿಕೊಂಡು ಮನೆಯಲ್ಲಿ ಮಾಡಲಾಗುತ್ತದೆ, ಅದು ನಿಮಗೆ ಶುದ್ಧೀಕರಣ ದ್ರವವನ್ನು ತಲುಪಿಸುತ್ತದೆ ಮತ್ತು ನಂತರ ಬರಿದು ಮಾಡುತ್ತದೆ.ನೀವು ನಿದ್ದೆ ಮಾಡುವಾಗ ಈ ಚಿಕಿತ್ಸೆಗಳನ್ನು ಮಾಡಲಾಗುತ್ತದೆ.

ತರಬೇತಿಯ ನಂತರ, ಹೆಚ್ಚಿನ ಜನರು ಎರಡೂ ರೀತಿಯ ಪೆರಿಟೋನಿಯಲ್ ಡಯಾಲಿಸಿಸ್ ಅನ್ನು ತಾವೆ ಮಾಡಬಹುದು. ವಿನಿಮಯವನ್ನು ಹೇಗೆ ಮಾಡುವುದು ಮತ್ತು ಸೋಂಕುಗಳನ್ನು ತಪ್ಪಿಸುವುದು ಹೇಗೆ ಎಂದು ತಿಳಿಯಲು ನೀವು ೧ ರಿಂದ ೨ ವಾರಗಳವರೆಗೆ ಡಯಾಲಿಸಿಸ್ ನರ್ಸ್ನೊಂದಿಗೆ ಕೆಲಸ ಮಾಡುತ್ತೀರಿ. ಹೆಚ್ಚಿನ ಜನರು ತರಬೇತಿಗೆ ಕುಟುಂಬದ ಸದಸ್ಯರು ಅಥವಾ ಸ್ನೇಹಿತರನ್ನು ಕರೆತರುತ್ತಾರೆ, ಏಕೆಂದರೆ ನಿಮಗೆ ಹುಷಾರಿಲ್ಲದೆ ಹೋದರೆ ಆ ಸಮಯದಲ್ಲಿ ನಿಮ್ಮ ಸ್ನೇಹಿತ ಅಥವಾ ಕುಟುಂಬಸ್ಥರು ನಿಮ್ಮ ವಿನಿಮಯದಲ್ಲಿ ಸಹಾಯ ಮಾಡುತ್ತಾರೆ.

ನೀವು ಪೆರಿಟೋನಿಯಲ್ ಡಯಾಲಿಸಿಸ್ ಪ್ರಾರಂಭಿಸುವಾಗ ಯಾವ ಬದಲಾವಣೆಗಳನ್ನು ಮಾಡಬೇಕಾಗಿದೆ?

ಉ:ನಿಮ್ಮ ದಿನಚರಿಯಲ್ಲಿ ಕೆಲವು ಬದಲಾವನೆಗಳನ್ನು ಮಾಡಬೇಕಾಗುತ್ತದೆ. ನೀವು ಹಗಲಿನಲ್ಲಿ CAPD ಮಾಡಿದರೆ, ನೀವು ವಿನಿಮಯ ಮಾಡುವಾಗ ನಿಮಗೆ ಸ್ವಲ್ಪ ನಿಯಂತ್ರಣ ವಿರುತ್ತದೆ. ಆದರೂ, ನೀವು ಇನ್ನೂ ನಿಮ್ಮ ಸಾಮಾನ್ಯ ಚಟುವಟಿಕೆಗಳನ್ನು ನಿಲ್ಲಿಸಬೇಕು ಮತ್ತು ವಿನಿಮಯವನ್ನು ನಿರ್ವಹಿಸಲು ಸುಮಾರು ೩0 ನಿಮಿಷಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವು ಸ್ವಯಂಚಾಲಿತ ಪೆರಿಟೋನಿಯಲ್ ಡಯಾಲಿಸಿಸ್ ಮಾಡಿದರೆ, ನೀವು ಪ್ರತಿ ರಾತ್ರಿ ನಿಮ್ಮ ಸೈಕ್ಲರ್ ಅನ್ನು ಹೊಂದಿಸಬೇಕಾಗುತ್ತದೆ.

ಪೆರಿಟೋನಿಯಲ್ ಡಯಾಲಿಸಿಸ್ ನಿಂದ ಬರಬಹುದಾದ ತೊಂದರೆಗಳು ಯಾವುವು? ಪೆರಿಟೋನಿಯಲ್ ಡಯಾಲಿಸಿಸ್ ನಿಂದ ಸಂಭವನೀಯ ಸಮಸ್ಯೆಗಳೆಂದರೆ ಸೋಂಕು, ಅಂಡವಾಯು (hernia) ಮತ್ತು ತೂಕ ಹೆಚ್ಚಾಗುವುದು.

ಉಲ್ಲೇಖಗಳು:

<ref>https://www.niddk.nih.gov/health-information/kidney-disease/kidney-failure/peritoneal-dialysis#:~:text=Peritoneal%20dialysis%20is%20a%20treatment,a%20catheter%2C%20in%20your%20belly.</ref>








== ಸ್ವಯಂ ಪರಿಚಯ :==

ನನ್ನ ಹೆಸರು ಸ್ನೇಹ.ಆರ್.( ನಾನು ಎಲ್ಲರೊಂದಿಗೂ ಸ್ನೇಹ, ಶಾಂತಿಯಿಂದ ಮಾತನಾಡಬೇಕೆಂದು ನನ್ನ ಪ್ರೀತಿಯ ಅಮ್ಮ ಇಟ್ಟಿರುವ ಹೆಸರು) ನಾನು ಹುಟ್ಟಿದ್ದು ದೀಪ್ತಿ ನರ್ಸಿಂಗ್ ಹೋಮ್, ಲಕ್ಕಸಂದ್ರ ಎಂಬ ಸ್ಥಳದಲ್ಲಿ, ಆದರೆ ನಾನು ತಮಿಳುನಾಡಿನ ಹೊಸೂರು ನಗರದ ಬ್ಯಾಡರಹಳ್ಳಿ ಎಂಬ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇನೆ. ನಾನು ಪ್ರತಿ ದಿನ ೩೦ ಕಿ.ಮೀ ಪ್ರಯಾಣ ಮಾಡಿ ಕಾಲೇಜಿಗೆ ಬರುತ್ತೇನೆ. ನನಗೆ ಓದಿನ ಮೇಲೆ ತುಂಬಾ ಆಸಕ್ತಿಯಿದೆ. ಚಿಕ್ಕ ಗ್ರಾಮ ಆಗಿದ್ರು ಕೂಡಾ ನಮ್ಮ ಊರಿನಲ್ಲಿ ಎಲ್ಲಾ ಅತ್ಯವಸರದ ವಸ್ತುಗಳು ಸುಲಭವಾಗಿ ದೊರೆಯುತ್ತದೆ. ನಮ್ಮ ಹಳ್ಳಿಯ ಜೀವನ ನಗರದ ಅವಸರದ ಜೀವನದ ರೀತಿಯಲ್ಲಿ ಇರುವುದಿಲ್ಲ, ಹಣ ಇಲ್ಲದೆ ಹೋದರೂ ಸಹಾ ಸಂತೋಷದ ಜೀವನವನ್ನು ಹಳ್ಳಿಗಳಲ್ಲಿ ಕಾಣಬಹುದು.

ಕುಟುಂಬಸ್ಥರ ಪರಿಚಯ:

ನನ್ನ ತಂದೆಯ ಹೆಸರು ರಮೇಶ್ ರೆಡ್ಡಿ. ಬಿ.ಟಿ. ಅವರು ಒಬ್ಬ ರೈತರು (ನಮ್ಮ ತೋಟದ ಹಸಿರು ಮನೆಯಲ್ಲಿ ರೋಜಾ ಗಿಡಗಳನ್ನು ಬೆಳೆದು ಆ ಹೂವುಗಳನ್ನು ಪ್ಯಾಕ್ ಮಾಡಿ ಪುಷ್ಪಗುಚ್ಛ ತಯಾರು ಮಾಡಿ ಮಾರುತ್ತಿದ್ದರು ಆದರೆ ಹಸಿರು ಮನೆಯು ವಾತಾವರಣದ ಮೇಲೆ ಹಾಗು ವಾಯುಮಂಡಲದ ಮೇಲೆ ಬೀರುವ ತೊಂದರೆಗಳನ್ನು ಗ್ರಹಿಸಿದ ನಂತರ ಅದನ್ನು ನಿರ್ಗಮಿಸಿ ರಾಗಿ, ಚಂಡು ಹೂವನ್ನು ಬೆಳೆಯ ತೊಡಗಿದೆವು).ಆದರೆ ೨೦೧೮ ರಿಂದ ಮೂತ್ರಪಿಂಡದ ಕಲ್ಲುಗಳು ಹಾಗೂ ಕಿಡ್ನಿ ಡಯಾಲಿಸಿಸ್ (ರಕ್ತ ಶುದ್ಧೀಕರಣ) ರೋಗದಿಂದ ಬಳಲುತ್ತಿದ್ದಾರೆ. ಎರಡು ದಿನಕ್ಕೆ ಒಮ್ಮೆ ಡಯಾಲಿಸಿಸ್ ಮಾಡಿಸಬೇಕು. ಅವರಿಗೆ ದ್ವಿಧ್ರುವಿ ಅಸ್ವಸ್ಥತೆ (ಬೈಪೋಲಾರ್ ಡಿಸಾರ್ಡರ್) ಎಂಬ ಮನ ರೋಗವು ಇದೆ, ಆದ್ದರಿಂದ ಅವರ ನಡವಳಿಕೆ ಪ್ರತಿ ದಿನ ಬದಲಾಗುತ್ತದೆ.

ಜೀವನದ ಮೇಲೆ ವಿಧಿಯ ಆಟ :

೧೮/೧೨/೨೦೨೨ ರಂದು ಡಯಾಲಿಸಿಸ್ ಮಾಡುವ ಸಂದರ್ಭದಲ್ಲಿ ಕೋಮಾಗೆ ಹೋದ ಅಪ್ಪನಿಗೆ C.T. scan ಮಾಡಿ ಹೊಸೂರಿನ ಬಿ.ಎಮ್.ಎಸ್.ಆಸ್ಪತ್ರೆಯಲ್ಲಿ ಮೂಳೆಯ ಲ್ಲಿರುವ ಒಂದು ನರ ಒಡೆದು ಹೋಗಿ ರಕ್ತಸ್ರಾವ ಉಂಟಾಗಿದೆ ಆದ್ದರಿಂದಲೇ ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದರು. ಅವರನು ಈ ಆಸ್ಪತ್ರೆಯಲ್ಲಿ ಇವರು ಬದುಕಲು ಸಾದ್ಯವಿಲ್ಲ ಎಂದು ಹೇಳಿದ್ದರಿಂದ ನಾರಾಯಣ ಹೃದಯಾಲಯ ಎಂಬ ಆಸ್ಪತ್ರೆಗೆ ಅಪ್ಪನನ್ನು ಸೇರಿಸಿದೆವು. ಅಲ್ಲಿ ೪ ದಿನಗಳ ಕಾಲ ಕೋಮಾ ಸ್ಥಿತಿಯಲ್ಲಿ ಇದ್ದರು. ಅಲ್ಲಿ ತಲೆಯ ರಕ್ತಸ್ರಾವವನ್ನು ತೆಗೆಯಲು ಒಂದು ಆಪರೇಶನ್ ಕೂಡ ಮಾಡಿದರು ಆದರೆ ಆಪರೇಶನ್ ಮಾಡುವ ಸಮಯದಲ್ಲಿ ಒಂದು ನರ ಒಡೆದು ಹೋಗಿ ರಕ್ತಸ್ರಾವ ಹೆಚ್ಚಾಗಿ ಮೂಳೆ ಸತ್ತುಹೋಯಿತು. ಅನಂತರ ಅಪ್ಪನನ್ನು ಬದುಕಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದರಿಂದ ವೆಂಟಿಲೇಟರ್ ತೆಗೆದು ಮನೆಗೆ ಕರೆದುಕೊಂಡು ಹೋಗಿ ಎಂದರು ಆ ನೋವನ್ನು ನಾವು ನೋಡಲಾಗದು ಆದ್ದರಿಂದ ನಾವು ಅಪ್ಪನನ್ನು ಕೃಷ್ಣ ಗಿರಿಯ ಸರಕಾರಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಸೇರಿಸಿ ಅಲ್ಲಿ ೩ ದಿನಗಳ ಕಾಲ ಬದುಕಿದರು ತದ ನಂತರ ೨೫/೧೨/೨೦೨೨ ಕ್ರಿಸ್ ಮಸ್ ರಂದು ಬೆಳಗ್ಗೆ ೭.೩೦ ಸಮಯದಲ್ಲಿ ತಮ್ಮ ಕೊನೆಯ ಉಸಿರು ಬಿಟ್ಟರು.. ಅವರು ಆಸ್ಪತ್ರೆಯಲ್ಲಿದ್ದ ಆ ಸಂದರ್ಭದಲ್ಲಿ ಅವರ ನೋವನು ನೋಡುವ ಶಕ್ತಿ ನನಗೆ ಇರಲಿಲ್ಲ. ಅವರ ವೈಕುಂಟ ಸಮಾರಾಧನೆಯನ್ನು ಜನವರಿ 6 ರಂದು ಮುಗಿಸಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ.

ನನ್ನ ತಾಯಿಯ ಹೆಸರು ಮಂಜುಳ. ಸಿ.ವಿ. ಅವರ ಹುಟ್ಟೂರು ಚಿಂತಲ ಮಡಿವಾಳ. ಅವರು ೧೦ನೇ ತರಗತಿ ಮುಗಿಸಿ ಮಂದೆ ಓದಬೇಕು ಎಂಬ ಸಂದರ್ಭದಲ್ಲಿ ಮನೆಯ ಆರ್ಥಿಕ ಸ್ಥಿತಿಯಿಂದ ಅವರು ಬೇರೆಯವರ ತೋಟದಲ್ಲಿ ತನ್ನ ಅಣ್ಣಂದಿರೊಂದಿಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂತು. ಮದುವೆಯಾದ ನಂತರ ಅವರು ಒಬ್ಬ ಗೃಹಿಣಿ. ಅವರಿಗೆ ಒಬ್ಬ ಕನ್ನಡ ಟೀಚರ್ ಆಗಬೇಕೆಂಬ ಆಸಕ್ತಿ ಇತ್ತು. ಆದರೆ ವಿಧಿ ತಮ್ಮನು ಒಬ್ಬ ಗೃಹಿಣಿಯಾಗಿ ಮಾಡಿತ್ತು. ಆದರೂ ಅವರು ಚಿಕ್ಕ ಮಕ್ಕಳಿಗೆ ಪಾಠ ಹೇಳುವ ಮೂಲಕ ತಮ್ಮ ಆಸೆಯನ್ನು ಪೂರೈಸುತ್ತಿದ್ದಾರೆ. ನನಗು ಕನ್ನಡ ಓದುವುದರಲ್ಲಿ ಸಹಾಯ ಮಾಡುತ್ತಾರೆ. ನಮ್ಮ ಅಮ್ಮನ ಪ್ರೇರಕ ಶಕ್ತಿಯೇ ನನ್ನ ಜೀವನದ ತೊಂದರೆಗಳನ್ನು ಸರಿಪಡಿಸಲು ಸಹಾಯಮಾಡುತ್ತದೆ. ಅಮ್ಮನೊಂದಿಗೆ ಒಂದು ದಿನ ಮಾತನಾಡದೆ ಹೋದರೆ ನನ್ನ ದಿನ ಸಂಪೂರ್ಣ ಆಗುವುದಿಲ್ಲ. ಕಾಲೇಜಿನಲ್ಲಿ ನಡೆದ ವಿಷಯಗಳನ್ನು ಅಮ್ಮನ ಜೊತೆ ಹಂಚಿಕೊಳ್ಳುವ ಅಭ್ಯಾಸವಿದೆ. ಅವರೂ ಸಹ ತಮ್ಮ ಕಷ್ಟಗಳನ್ನು ಹಂಚಿಕೊಳ್ಳುತ್ತಾರೆ. ಅವರೇ ನನ್ನ ಜೀವನದ ದೇವರು. ಅಮ್ಮನಿಗೆ ಗರ್ಭ ಕೋಶದ ಆಪರೇಷನ್ ಮಾಡಿಸಿದ ಸಮಯದಲ್ಲಿ ಅವರಿಗಿಂತ ನನಗೆ ತುಂಬಾ ನೋವಾಯಿತು. ಜೀವನದ ಅತಿ ಮುಖ್ಯವಾದ ಭಾಗ ವಿವಾಹ ಅದು ದೃಢವಾಗಿ,ಸಂತೋಷವಾಗಿ ಹಾಗೂ ಪ್ರೀತಿ ಮಮತೆಯಿಂದ ಇಲ್ಲದೆ ಹೋದರೆ ಹೇಗೆ ಇರುತ್ತದೆ ಎಂಬುದನ್ನು ನಾನು ನಮ್ಮ ಮನೆಯಲ್ಲಿ ನೋಡಿದ್ದೇನೆ. ಎಷ್ಟೆಲ್ಲ ತೊಂದರೆಗಳು ಬಂದರು ನಮ್ಮ ಅಮ್ಮ ನಮ್ಮ ಅಪ್ಪನನ್ನು ಪ್ರೀತಿಯಿಂದ ಸಾಕುತ್ತಿದ್ದರು. ಅವರ ಮರಣ ನಮ್ಮ ಅಮ್ಮನ ಮನದಲ್ಲಿ ಆಳವಾದ ನೋವನ್ನು ಉಂಟು ಮಾಡಿದ್ದರೂ ಅವರು ಧೈರ್ಯದಿಂದ ಎಲ್ಲಾ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ನನ್ನ ಅಣ್ಣನ ಹೆಸರು ಪವನ್.ಆರ್. ಅವನು ಬಿ.ಕಾಮ್. ಮುಗಿಸಿ ಕೆಲಸ ಮಾಡುತ್ತಿದ್ದಾನೆ. ಎಂ.ಕಾಮ್ ಪದವಿ ಮಾಡುವ ಪ್ರಯತ್ನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ನಾವಿಬ್ಬರು ಪ್ರತಿ ದಿನ ಸಣ್ಣ ಪುಟ್ಟ ಜಗಳ ಮಾಡಿದ್ರು ನನ್ನ ಅಣ್ಣನಿಗೆ ನಾನು ಎಂದರೆ ಪ್ರೀತಿ, ಆದರ ಇದ್ದೇ ಇದೆ. ಅವನಿಗೆ ಅಮ್ಮ ಎಂದರೆ ಪ್ರಾಣ ನಾನೇನಾದರೂ ನಮ್ಮ ಅಮ್ಮನನ್ನು ತಮಾಷೆಗೆ ಬೈದರೂ ನನ್ನನ್ನು ನಮ್ಮ ಅಣ್ಣ ಬೈಯುತ್ತಾರೆ.

ನಮ್ಮ ಮನೆಯಲ್ಲಿ ಒಂದು ಚಿಕ್ಕ ನಾಯಿ ಇದೆ. ಅದರ ಹೆಸರು ರಾಮು. ಅವನು ನಮ್ಮ ಅಪ್ಪನ ಪ್ರೀತಿಯ ಸ್ನೇಹಿತನಂತೆ ಅಪ್ಪನ ಜೊತೆಯೇ ಕಾಲ ಕಳೆಯುತ್ತಾ ಇದ. ನಮ್ಮ ಅಪ್ಪ ಊಟ ಮಾಡುವ ವರೆಗು ರಾಮು ಊಟ ಮಾಡುತ್ತಿರಲಿಲ್ಲ. ನಮ್ಮ ಅಪ್ಪನ ಸಾವು ಅವನಿಗೂ ನೋವು ಉಂಟು ಮಾಡಿದೆ. ನಮ್ಮ ಅಣ್ಣನ ಪ್ರೀತಿಯಿಂದ ರಾಮು ಸ್ವಲ್ಪ ಸಂತೋಷವಾಗಿದೆ.

ನನ್ನ ಬಾಲ್ಯ:

ನಾನು ೧ನೇ ತರಗತಿಯಿಂದ ೭ನೇ ತರಗತಿಯವರೆಗೆ ವಿಶ್ವಭಾರತಿ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಓದಿದ್ದೇನೆ. ಅದು ನಮ್ಮ ಊರಾದ ಬ್ಯಾಡರಹಳ್ಳಿ ಗ್ರಾಮದಲ್ಲೇ ಇತ್ತು. ಚಿಕ್ಕಂದಿನಿಂದಲೂ ನಾನು ಸ್ವಲ್ಪ ತರಳೆ ಮಾಡುವ ಹುಡುಗಿ ನನ್ನನ್ನು ಒಂದು ಸರಿದಾರಿಯಲ್ಲಿ ನಡೆಸಿದ ಗುರು ಎಂದರೆ ಅದು ನಮ್ಮ ಯೋಗ ಗುರುಗಳು , ಅವರ ಮಾತುಗಳು ಎಲ್ಲರನೂ ಪ್ರೇರೇಪಿಸದೇ ಹೋದರು ಕೆಲವರನಾದರೂ ಒಂದು ಒಳ್ಳೆಯ ಮಾರ್ಗದಲ್ಲಿ ಜೀವನ ನಡೆಸಬೇಕು ಎಂಬುದನು ತಿಳಿಸಿದ್ದಾರೆ. ನಾನು ೭ನೇ ತರಗತಿಯ ವರೆಗು ತಮಿಳು ಬಾಷೆಯನ್ನು ಕಲಿತೆ. ಅಲ್ಲಿ ನನಗೆ ತುಂಬಾ ಜನ ಸ್ನೇಹಿತರಾಗಿದ್ದರು. ನಮಗೆ ಕನ್ನಡ ಕಲಿಸಿದ ಗುರುವಿನ ಹೆಸರು ರೇವಣ್ಣ ಸರ್.ನಮ್ಮ ಬಂಧು ಮಿತ್ರರ ಮೂಲಕ ಕರ್ನಾಟಕದಲ್ಲಿ ಶಿಕ್ಷಣ ಬಹಳ ಚೆನ್ನಾಗಿದೆ ಎಂದು ತಿಳಿದು ನನ್ನನ್ನು ನಮ್ಮ ತಂದೆ ತಾಯಿಯು ನೆರಳೂರಿನ ಸ್ವಾಮಿ ವಿವೇಕಾನಂದ ವಿದ್ಯಾನಿಕೇತನ ಎಂಬ ಶಾಲೆಗೆ ಸೇರಿಸಿದರು. ನನಗೆ ಆಂಗ್ಲ ಭಾಷೆ ಮಾತನಾಡಲು ಕಷ್ಟವಾಗುತ್ತಿತ್ತು, ಕನ್ನಡ ಬರೆಯುವುದು ಹಾಗೂ ಹಿಂದಿ ಕಲಿಯುವುದು ನನಗೆ ದೊಡ್ಡ ಗಂಡಾಂತರ ವಾಗಿತ್ತು. ಕೆಲವು ತಿಂಗಳು ನನಗೆ ಈ ಶಾಲೆ ಬೇಡಾ ನಾನು ಈ ಶಾಲೆಗೆ ಹೋಗುವುದಿಲ್ಲ ಎಂದು ಹಟ ಮಾಡಿದೆ. ತದ ನಂತರ ಯಾವುದೆ ಭಾಷೆಯನ್ನು ಕಷ್ಟದಿಂದ ಕಲಿಯದೆ ಇಷ್ಟದಿಂದ ಕಲಿತರೆ ಆ ಭಾಷೆಯನ್ನು ಸುಲಭವಾಗಿ ಕಲಿಯಬಹುದು ಎಂದು ಅರಿತು ಕನ್ನಡ ಹಾಗೂ ಹಿಂದೀ ಭಾಷೆಯನ್ನು ಕಲಿತು ೧೦ನೇ ತರಗತಿಯ (ಸಿ.ಬಿ.ಎಸ್.ಸಿ.) ಕನ್ನಡ ಪರೀಕ್ಷೆಯಲ್ಲಿ ೯೪ ಅಂಕಗಳನ್ನು ಗಳಿಸಿದೆ.೮ನೇ ತರಗತಿಯಲ್ಲಿ ರಾಮಾಯಣ ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಗಳಿಸಿದೆ. ೯ನೇ ತರಗತಿಯಲ್ಲಿ ಮಹಾಭಾರತ ಪರೀಕ್ಷೆಯಲ್ಲಿ ೯೦ ಅಂಕಗಳನ್ನು ಗಳಿಸಿದ್ದೇನೆ. ಶಾಲಾ ದಿನಗಳು ಕಷ್ಟವಾಗಿದರೂ ಬಹು ಸುಂದರ ನೆನಪುಗಳನ್ನು ಜೀವನದಲ್ಲಿ ಮರೆಯಲಾಗದ ಅನುಭವಗಳನ್ನು ಕೊಟ್ಟಿದೆ. ನಮ್ಮನು ೮ನೇ ತರಗತಿಯಲ್ಲಿ ಹಂಪಿ, ಶ್ರೀರಂಗ ಪಟ್ಟಣ, ಮೈಸೂರು, ಚಾಮುಂಡಿ ಬೆಟ್ಟ ಮುಂತಾದ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದರು. ಕರ್ನಾಟಕದ ಇತಿಹಾಸದ ಬಗ್ಗೆ ಈ ಪ್ರಯಾಣ ಒಂದು ಒಳ್ಳೆಯ ಅಭಿಪ್ರಾಯ ಉಂಟುಮಾಡಿತು. ೯ನೇ ತರಗತಿಯಲ್ಲಿ ಹೈದರಾಬಾದಿಗೆ ಟ್ರಿಪ್ ಕರೆದು ಕೊಂಡು ಹೋಗಿದ್ದರು. ೧೦ನೇ ತರಗತಿಯಲ್ಲಿ ರಾಯಲ್ ಮೀನಾಕ್ಷಿ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದರು.

ನನಗೆ ಇದ್ದ ಇನ್ನೊಂದು ಮುಖ್ಯವಾದ ತೊಂದರೆ ಎಂದರೆ ವೇದಿಕೆಯ ಭಯ. ೮ನೇ ತರಗತಿಯವರೆಗೂ ನನಗೆ ವೇದಿಕೆ ಮೇಲೆ ಮಾತಾಡ ಬೇಕೆಂದರೆ ಭಯವಿತ್ತು. ಆದರೆ ೮ನೇ ತರಗತಿಯಲ್ಲಿ ಸುಶೀಲ್ ಸರ್ ನನ್ನನ್ನು ಪ್ರೆರೇಪಿಸಿ ವೇದಿಕೆಯಲ್ಲಿ ಮಾತನಾಡುವ ಮೊದಲು ನಮ್ಮ ವರ್ಗದಲ್ಲಿ(ಕ್ಲಾಸಿನಲ್ಲಿ) ಮಾತನಾಡಬೇಕು ಎಂದು ಒಂದು ಕಥೆ ಹೇಳು ಎಂದರು. ಭಯವಿದ್ದರು ಧೈರ್ಯ ತಂದುಕೊಂಡು ಕಥೆ ಹೇಳಿದೆ. ತದನಂತರ ಪರಿಸರ ದಿನಾಚರಣೆಯಂದು ವೇದಿಕೆಯಲ್ಲಿ ಭಾಷಣ ಕೊಡುವ ಅವಕಾಶ ಕೊಟ್ಟರು. ವೇದಿಕೆಯಲ್ಲಿ ನಿಂತ ಬಳಿಕ ನನ್ನ ಮುಂದೆ ಇರುವ ಎಲ್ಲರೂ ನನ್ನ ಸ್ನೇಹಿತರೇ ಎಂದು ಊಹಿಸಿಕೊಂಡು ಭಾಷಣ ಶುರು ಮಾಡಿದೆ ಆ ದಿನ (೫- ಜೂನ್) ಚಪ್ಪಾಳೆಯ ಶಬ್ದದಿಂದಲೇ ನನ್ನ ಮನಸ್ಸು ಆನಂದದಿಂದ ತುಂಬಿ ತುಳುಕುತ್ತಿತ್ತು. ೯ ನೇ ತರಗತಿಯಲ್ಲಿ ಅಸಿಸ್ಟೆಂಟ್ ಹೆಡ್ ಗರ್ಲ್ ಪದವಿಗೆ ನಿಂತು ಶಾಲೆಯ ಚುನಾವಣೆಯಲ್ಲಿ ಗೆದ್ದೆ. ೧೦ನೇ ತರಗತಿಯಲ್ಲಿ ಹೆಡ್ ಗರ್ಲ್ ಪದವಿಗೆ ನಿಂತು ಆ ಚುನಾವಣೆಯಲ್ಲೂ ಗೆದ್ದೆ. ೧೦ನೇ ತರಗತಿಯಲ್ಲಿ ಶಾಲಾ ವಾರ್ಷಿಕ ದಿನದಂದು ನಾನು ನಿರೂಪಣೆಯನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಮಾಡಿ ಪ್ರೇಕ್ಷಕರ ಮನ ಗೆದ್ದುಕೊಂಡಿದೆ .ಶಾಲಾ ದಿನಗಳ ನೆನಪುಗಳೇ ಹಾಗೆ ಸಾಗರದಲ್ಲಿ ದೊರಕೋ ಮುತ್ತುಗಳಂತೆ ತೆಗೆದಷ್ಟೂ ಸಿಗುತ್ತಲೇ ಇರುತ್ತವೆಯೇ ಹೊರತು ಖಾಲಿಯಾಯ್ತು ಅನ್ನೋ ಮಾತೇ ಇಲ್ಲ!

ಶಾಲಾ ದಿನಗಳ ಸಿಹಿ ನೆನಪುಗಳು :

೯ನೇ ತರಗತಿಯಲ್ಲಿ ವಿದ್ಯಾರ್ಥಿ ಸಂಗದ ಅಧ್ಯಕ್ಷರ ಪದವಿಗೆ ಚುನಾವಣೆಗೆ ನಿಂತಿದ್ದೆ. ನನ್ನ ಚುನಾವಣಾ ಚಿಹ್ನೆಯಾಗಿ ನಾನು ಗ್ಲೋಬ್ ಆಯ್ಕೆ ಮಾಡಿದ್ದೆ. ನನ್ನ ಸ್ನೇಹಿತರ ಸಹಾಯದಿಂದ ಹಾಗು ನನ್ನ ಪ್ರಯತ್ನದಿಂದ ಆ ಚುನಾವಣೆಯಲ್ಲಿ ನಾನು ಬಹು ದೊಡ್ಡ ಒಟ್ಟಿನ ವ್ಯತ್ಯಾಸದಿಂದ ಗೆದ್ದೆ. ೧೦ನೇ ತರಗತಿಯಲ್ಲಿ ತಾಲ್ಲುಕು ಮಟ್ಟದ ಆಶುಭಾಷಣ ದಲ್ಲಿ ಎರಡನೇ ಸ್ಥಾನ ಗಳಿಸಿದೆ, ಹಾಗೂ ಗಣಿತ ಶಾಸ್ತ್ರಜ್ಞ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದೆ. ಶಾಲಾ ಸ್ನೇಹಿತರೊಂದಿಗೆ ಗ್ರೂಪ್ ಟ್ರಿಪ್ ಹೋದ ದಿನಗಳ ಸಂತೋಷವೇ ಅತಿ ತೃಪ್ತಿಕರವಾದ ಆನಂದ.

ಕಾಲೇಜು ದಿನಗಳು :

ಬಹು ದಿನಗಳಿಂದ ಕ್ರೈಸ್ಟ್ ಯುನಿವರ್ಸಿಟಿ ಗೆ ಸೇರಬೇಕೆಂಬ ಹಂಬಲ ಇತ್ತು. ಈಗ ಆ ಆಸೆಯಿಂದಲೇ ಅದೇ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಮಾಡುತ್ತಿರುವೆ. ನಮಗೆ ಇಷ್ಟವಾದ ಪದವಿಯನ್ನು ಆಯ್ಕೆ ಮಾಡಿ ಅದನ್ನು ಓದಲೇ ಬೇಕು ಎಂಬ ದೃಡ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕೇವಲ ಕೆಲವೇ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ಪ್ರತಿಯೊಂದು ವ್ಯಕ್ತಿಗೂ ತನ್ನದೆ ಆದ ಒಂದು ವಿಶಿಷ್ಠ ಶಕ್ತಿ ಇರುತ್ತದೆ ಅದನ್ನು ಗುರುತಿಸಿ ಆ ದಿಕ್ಕಿನಲ್ಲಿ ಜೀವನ ಸಾಗಿಸಬೇಕು ಎಂಬುದೇ ನನ್ನ ಆಸೆ.

ನನಗೆ ಇಷ್ಟವಾದ ಆಟಗಳು :

ನನ್ನ ಚಿಕ್ಕ ವಯಸ್ಸಿನಲ್ಲಿ ಚೆಂಡಾಟ, ಕುಂಟೆ ಬಿಲ್ಲೆ, ಗಿಲಿ ದಾಂಡು, ಕಣ್ಣಾಮುಚ್ಚಾಲೆ, ಕಬಡ್ಡಿ ಮುಂತಾದ ಆಟಗಳನ್ನು ಆಡುತ್ತಿದ್ದೆವು. ಕಾಲೇಜಿನಲ್ಲಿ ಬ್ಯಾಡ್ಮಿಂಟನ್ ಆಟವನ್ನು ಆಡುತ್ತಿದ್ದೆ. ಹಲವು ವಿಜ್ಞಾನ ಪರೀಕ್ಷೆಯಲ್ಲಿ ಪಾಲ್ಗೊಂಡು ಪದಕಗಳನ್ನು ಗೆದ್ದಿದ್ದೇನೆ.

ನನ್ನ ಕನಸು :

ನಾನು ಪಿಯುಸಿ ಸ್ವಾಮಿ ವಿವೇಕಾನಂದ ವಿದ್ಯಾ ನಿಕೇತನ ಪಿಯು ಕಾಲೇಜಿನಲ್ಲಿ ಮುಗಿಸಿದೆ. ನಮ್ಮ ತಂದೆಯವರ ನೋವನ್ನು ನೋಡಿರುವೆ (ಈಗ ಅವರ ಕೊನೆಯ ದಿನಗಳ ನರಳಾಟವನ್ನು,ಅನುಭವಿಸಿದ ನರಕವನ್ನು ನೋಡಿದ್ದೇನೆ ಹಾಗೂ ನನ್ನ ಪ್ರೀತಿಯ ಸ್ನೇಹಿತೆಯ ಮರಣದ ನೋವನ್ನು ನೋಡಿದ್ದೇನೆ (ನನ್ನ ಗೆಳತಿ ತೀವ್ರವಾದ ಕಾಮಾಲೆ Jaundice ಜ್ವರದಿಂದ ನರಳಿ ಸಾವನ್ನಪ್ಪಿದರು). ನನ್ನ ಮನದಲ್ಲಿ ಒಂದು ಒಳ್ಳೆಯ ವೈದ್ಯರಾಗಿ ಜನರ ಪ್ರಾಣವನ್ನು ಉಳಿಸಬೇಕೆಂಬ ದೃಡವಾದ ಸಂಕಲ್ಪ ಇತ್ತು. NEET ಪರೀಕ್ಷೆಯಲ್ಲಿ dental seat ಸಿಕ್ಕರೂ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಹಾಸ್ಟಲ್ ಗೆ ಸೇರಿಸಲು ಆಗಲಿಲ್ಲ. ಕಾಲೇಜಿನ ಫೀಸ್ ಕಟ್ಟಲು ಹಣವಿಲ್ಲದ ಕಾರಣದಿಂದ ಒಂದು ವರ್ಷ ನಾನು ಹಾಗೂ ನಮ್ಮ ಅಣ್ಣ ದುಡಿಯ ಬೇಕಾದ ಪರಿಸ್ಥಿತಿ ಬಂತು. ಆದ್ದರಿಂದ ೨೦೨೧ ನೇ ವರ್ಷ ಕಾಲೇಜಿಗೆ ಸೇರದೆ ಒಂದು ಕೆಲಸ ಮಾಡಿ ಅದರಲ್ಲಿ ಬಂದ ಹಣದಿಂದ ನನ್ನ ಕನಸಿನ ಕಾಲೇಜು- ಕ್ರೈಸ್ಟ್ ಯುನಿವರ್ಸಿಟಿ ಅಲ್ಲಿ ಬಿ.ಎಸ್.ಸಿ(ಸಿ.ಬಿ.ಜೆಡ್) ಪದವಿಗೆ ಸೇರಿದೆ.ನನ್ನ ಎರಡನೆಯ ಕನಸಾದ ಯು.ಪಿ.ಎಸ್.ಸಿ ಪರೀಕ್ಷೆಯ ತಯಾರಿಯನ್ನು ಮಾಡುತ್ತಾ ನನ್ನ ಜೀವನವನ್ನು ನಗುಮುಖದಿಂದ ಮುಂದುವರೆಸುತ್ತಿದ್ದೇನೆ. ತಂದೆಯ ಸಾವಿನ ನಂತರ ಅವರು ಬದುಕಿದರೆ ಅವರಿಗೆ ಹೇಗೆ ನನ್ನ ಸಾಧನೆಯಿಂದ ಹೆಮ್ಮೆ ಆಗುವಂತೆ ಮಾಡಬೇಕೆಂದು ಆಸೆ ಪಡುತ್ತಿದ್ದೆನೋ ಹಾಗೆಯೇ ಈಗಲು ನಾನು ಜೀವನದಲ್ಲಿ ಏನಾದರು ಸಾಧನೆ ಮಾಡಿದ್ದರೆ ನನ್ನ ತಂದೆಯ ಆತ್ಮಕ್ಕೆ ಸಂತೋಷ ದೊರೆಯುತ್ತದೆ ಎಂದು ನಾನು ಧೃಡವಾಗಿ ನಂಬುತ್ತಿದ್ದೇನೆ.

ನನ್ನ ಜೀವನದ ಮುಖ್ಯ ದಿನಾಂಕಗಳು:

೨೫/೦೫/೨೦೦೩- ನಾನು ಹುಟ್ಟಿದ ದಿನಾಂಕ.

೧೮/೦೩/೩೦೧೮- ಅಪ್ಪನಿಗೆ ಮೊದಲ ಬಾರಿ ಹಾರ್ಟ್ ಅಟ್ಯಾಕ್ ಆಗಿದ್ದ ದಿನಾಂಕ.

೦೨/೦೯/೨೦೧೯- ನನ್ನ ಗೆಳತಿ ತೀರಿಕೊಂಡ ದಿನಾಂಕ.

೦೧/೧೦/೨೦೨೦- ಅಮ್ಮನಿಗೆ ಗರ್ಭ ಕೋಶ ಆಪರೇಶನ್ ನಡೆದ ದಿನಾಂಕ.

೨೫/೬/೨೦೨೦- ಶಾಲೆಯ ಚುಣಾವಣೆ ಯಲ್ಲಿ ಗೆದ್ದ ದಿನಾಂಕ.

೨೫/೧೨/೨೦೨೨- ಅಪ್ಪ ಪರಲೋಕ ಸೇರಿಕೊಂಡ ದಿನಾಂಕ.

ಗುರಿಗಳು:

•ಯುವ್.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವುದು

• ಎಮ್.ಬಿ.ಎ (Human Resources development ) ಮುಗಿಸುವುದು

•ಅಮ್ಮನಿಗೆ ಸ್ವತಂತ್ರವಾಗಿ ಓಡಾಡುವ ಶಕ್ತಿಯನ್ನು ನೀಡುವುದು

•ಒಂದು ಚಿಕ್ಕ ಅನಾಥ ಆಶ್ರಮವನ್ನು ಸ್ಥಾಪಿಸುವುದು. (ಅದು ನಮ್ಮ ಅಮ್ಮನ ಜೀವನದ ಅತಿ ದೊಡ್ಡ ಆಸೆ )

•ನನ್ನ ಜೀವನದಲ್ಲಿ ನನಗೆ ಸರಿ ಅನಿಸುವ ದಾರಿಯಲ್ಲಿ ನಡೆಯುವುದು.

•ನಮ್ಮ ಕೈಲಾದ ಸಹಾಯವನ್ನು ಬೇಕಾದವರಿಗೆ ಮಾಡುವುದು.

ನನ್ನ ಅಭ್ಯಾಸಗಳು :

ಕಥೆ ಪುಸ್ತಕಗಳನ್ನು ಓದುವುದು, ಚಿತ್ರ ಬಿಡಿಸುವುದು (ನನಗೆ ಬೇಜಾರಾದಾಗ ಚಿತ್ರ ಬಿಡಿಸುವುದು ಮನಸ್ಸಿಗೆ ಬಹಳ ಶಾಂತಿ ನೆಮ್ಮದಿ ನೀಡುತ್ತದೆ.), ಮಂಡಲ ಕಲೆ ಬಿಡಿಸುವುದು, ಅಮ್ಮನ ಜೊತೆ ಸಮಯ ಕಳೆಯುವುದು, ಅಡುಗೆ ಮಾಡುವುದು, ಸೈಕ್ಲಿಂಗ್ ಮಾಡುವುದು ನನ್ನ ಮುಖ್ಯವಾದ ಹವ್ಯಾಸಗಳು.


ಜೀವನ ಕಲಿಸಿದ ಪಾಠಗಳು:

•ನಾವು ಯಾರನ್ನು ಹೆಚ್ಚಾಗಿ ನಂಬಬಾರದು, ತುಂಬಾ ಹತ್ತಿರವಾಗಿ ಇರಬಾರದು . ಏಕೆಂದರೆ ಯಾರೂ ನಮ್ಮೊಂದಿಗೆ ಕೊನೆಯವರೆಗೂ ಇರುವುದಿಲ್ಲ.

• ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು.

• ಪ್ರತಿ ದಿನ ನಮಗೆ ನಾವು ಸಮಯ ನೀಡಬೇಕು.

• ತೊಂದರೆಯಿಂದ ಓಡಬಾರದು ಅದನ್ನು ಎದುರಿಸಬೇಕು.

•ಜೀವನ ಚಿಕ್ಕದು ಆದ್ದರಿಂದ ಸತ್ತ ಸಮಯವನ್ನು ಬಿಟ್ಟು ಪ್ರಸ್ತುತ ನುಡಿಮುತ್ತುಗಳನ್ನು ಆನಂದಿಸುತ್ತಾ ಭವಿಷ್ಯದ ಬಗ್ಗೆ ಯೋಚಿಸಬೇಕು.

• ದೇವರೆಂದರೆ ಒಂದು ನಂಬಿಕೆ. ಕೆಲವರಿಗೆ ಆ ನಂಬಿಕೆ ಇರಬಹುದು ಅಥವಾ ಇಲ್ಲದೇ ಆದರೂ ಇರಬಹುದು. ನನಗೆ ದೇವರೆಂದರೆ ಒಂದು ದೃಢ ನಂಬಿಕೆ.

• ನಮ್ಮ ಆತ್ಮೀಯರ ಸಾವು ನಮ್ಮ ಜೀವನವನ್ನು ಒಂದಲ್ಲಾ ಒಂದು ರೀತಿಯಲ್ಲಿ ತಳಮಳದ ಸ್ಥಿತಿಗೆ ತಳ್ಳುತ್ತದೆ ಎಂಬ ವಿಷಯವನ್ನು ನನ್ನ ಅಪ್ಪನ ಸಾವಿನಿಂದ ನಾನು ತಿಳಿದುಕೊಂಡೆ. •ಜೀವನದ ಮತ್ತೊಂದು ಮುಖವನ್ನು ಕಂಡವರು ಮಾತ್ರ ಆ ನೋವನ್ನು ಅರ್ಥ ಮಾಡಿಕೊಳ್ಳಲು ಸಾದ್ಯ ಆದ್ದರಿಂದ ಬೇರೆಯವರ ಜೀವನವನ್ನು ತಿಳಿಯದೆ ಅವರ ಬಗ್ಗೆ ಮಾತನಾಡುವ ಕೆಲಸ ಮಾಡಬಾರದು.