ಮೂತ್ರಪಿಂಡ ಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವ ಮೂತ್ರಪಿಂಡ

ಮೂತ್ರಪಿಂಡ ಶಾಸ್ತ್ರವು ಮೂತ್ರಪಿಂಡದ ಕ್ರಿಯೆ ಮತ್ತು ರೋಗಗಳ ಅಧ್ಯಯನಕ್ಕೆ ಸಂಬಂಧಿಸಿದ ಅಂತರ್ವೈದ್ಯಶಾಸ್ತ್ರ ಮತ್ತು ಶಿಶುವೈದ್ಯ ಶಾಸ್ತ್ರದ ಒಂದು ಶಾಖೆ. ಮೂತ್ರಪಿಂಡ ಶಾಸ್ತ್ರವು, ವಿದ್ಯುದ್ವಿಚ್ಛೇದ್ಯ ವಿಕ್ಷೇಪಗಳು ಹಾಗೂ ಅಧಿಕ ರಕ್ತದೊತ್ತಡವನ್ನು ಒಳಗೊಂಡಂತೆ, ಮೂತ್ರಪಿಂಡ ರೋಗಗಳ ರೋಗನಿದಾನ ಹಾಗೂ ಚಿಕಿತ್ಸೆ, ಮತ್ತು, ವಿಗಲನ ಹಾಗೂ ಮೂತ್ರಪಿಂಡ ಕಸಿ ರೋಗಿಗಳನ್ನು ಒಳಗೊಂಡಂತೆ, ಮೂತ್ರಪಿಂಡ ಬದಲಿ ಚಿಕಿತ್ಸೆಯ ಅಗತ್ಯವಿರುವ ವ್ಯಕ್ತಿಗಳ ಶುಶ್ರೂಷೆಗೆ ಸಂಬಂಧಿಸಿದೆ. ಮೂತ್ರಪಿಂಡದ ಮೇಲೆ ಪರಿಣಾಮ ಬೀರುವ ಅನೇಕ ರೋಗಗಳು ಆ ಅಂಗಕ್ಕೆ ಮಾತ್ರ ಸೀಮಿತವಾಗದ ಇಡೀ ದೇಹದ ಕಾಯಿಲೆಗಳಾಗಿರುತ್ತವೆ, ಮತ್ತು ವಿಶೇಷ ಚಿಕಿತ್ಸೆಯ ಅಗತ್ಯವಿರಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]