ವಿಷಯಕ್ಕೆ ಹೋಗು

ಸಣ್ಣ ಮೊಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jasminum auriculatum
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ಆಸ್ಟರಿಡ್ಸ್
ಗಣ: ಲ್ಯಾಮಿಯೇಲ್ಸ್
ಕುಟುಂಬ: ಓಲಿಯೇಸೀ
ಕುಲ: ಜಾಸ್ಮಿನಮ್
ಪ್ರಜಾತಿ:
J. auriculatum
Binomial name
Jasminum auriculatum
Rain drops on jasmine bud
Shot at Chittoor in Andhra Pradesh, India

ವಸಂತ ಮೊಲ್ಲೆ, ಮಧ್ಯಾಹ್ನ ಮಲ್ಲಿಗೆ, ಕಾಡರಮಲ್ಲಿಗೆ ಎಂಬ ಹೆಸರುಗಳಿಂದ ಸಹ ಪ್ರಸಿದ್ಧವಾಗಿರುವ ಸಣ್ಣ ಮೊಲ್ಲೆ ಅಗಲವಾಗಿ ಹರಡಿಕೊಂಡು ಬೆಳೆಯುವ ಪೊದೆ ಸಸ್ಯ. ಇದು ಭಾರತ, ನೇಪಾಳ, ಶ್ರೀಲಂಕಾ, ಭೂತಾನ್ ಮತ್ತು ಅಂಡಮಾನ್ ದ್ವೀಪಗಳಲ್ಲಿ ಕಂಡುಬರುತ್ತದೆ.[][] ದಕ್ಷಿಣ ಭಾರತದಲ್ಲೆಲ್ಲ ಕಾಣದೊರೆಯುವ ಇದನ್ನು ಉತ್ತರಪ್ರದೇಶ, ಬಿಹಾರ ಹಾಗೂ ಬಂಗಾಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿಮಾಡಲಾಗುತ್ತದೆ.

ವಿವರಣೆ

[ಬದಲಾಯಿಸಿ]

ಇದರ ಎಲೆಗಳು ಸರಳ ಬಗೆಯವು; ಬಲು ಅಪೂರ್ವವಾಗಿ ಮೂರು ಪತ್ರಕಗಳನ್ನು ಒಳಗೊಂಡ ಸಂಯುಕ್ತ ಬಗೆಯವಾಗಿರುವುದುಂಟು. ಆಗಲೂ ಮಧ್ಯದ ಪತ್ರವೇ ಪ್ರಧಾನವಾಗಿರುತ್ತದೆ. ಹೂಗಳು ಬಿಳಿ ಬಣ್ಣದವು; ಹಲವಾರು ಹೂಗಳು ಸೀಮಾಕ್ಷಿ ಮಂಜರಿಗಳಲ್ಲಿ ಜೋಡಣೆಗೊಂಡಿವೆ.

ಉಪಯೋಗಗಳು

[ಬದಲಾಯಿಸಿ]

ಅಲಂಕಾರಿಕ ಉದ್ದೇಶಗಳಿಗೆ ಮತ್ತು ಹಬ್ಬಗಳಲ್ಲಿ ಇದನ್ನು ಬಳಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: