ಸಂಪಿಗೆ
ಸಂಪಿಗೆ | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | M. champaca
|
Binomial name | |
Magnolia champaca |
ಸಂಪಿಗೆ ಒಂದು ಹೂವಿನ ಹೆಸರು. ಮ್ಯಾಗ್ನೊಲಿಯೇಸೀ ಕುಟುಂಬಕ್ಕೆ ಸೇರಿದೆ.[೨] ತೆಳುಹಳದಿ ಬಣ್ಣದ ಈ ಹೂವು ಸಾಮಾನ್ಯವಾಗಿ ಉದ್ಯಾನಗಳಲ್ಲಿ, ಸಸ್ಯೋದ್ಯಾನಗಳಲ್ಲಿ, ದೇವಸ್ಥಾನದ ಅಂಗಳದಲ್ಲಿ, ಹಾಗೂ ಕೆಲವರ ಮನೆಗಳ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕಾಣಸಿಗುತ್ತದೆ.
ಸಂಸ್ಕೃತದಲ್ಲಿ ಚಂಪಕ ಸುವರ್ಣ, ತೆಲುಗಿನಲ್ಲಿ ಚಂಪಕಮು, ಇಂಗ್ಲಿಷ್‌ನಲ್ಲಿ ಗೋಲ್ಡನ್ ಚಂಪಕ್ ಎಂದು ಕರೆಸಿಕೊಳ್ಳುವ ಈ ಹೂವಿನ ಸಸ್ಯನಾಮ ಮೈಕೇಲಿಯ ಚಂಪಕ.
೧೭೩೭ ರಲ್ಲಿ ಅಂದಿನ ಪ್ರಸಿದ್ಧ ವಿಜ್ಞಾನಿ ಮೈಕೆಲ್ ಪಿ.ಎ. ಅವರು ಕಂಡುಹಿಡಿದುದರಿಂದ ಈ ಹೆಸರು. ವಿವಿಧ ದೇಶಗಳಲ್ಲಿ ಪ್ರಮುಖವಾಗಿ ಶ್ರೀಲಂಕಾ, ಫಿಲಿಪೈನ್ಸ್, ಜಪಾನ್, ಚೀನಾ, ಇಂಡೋನೇಷ್ಯ, ದಕ್ಷಿಣ ಆಫ್ರೀಕಾದ ದಟ್ಟ ಕಾಡುಗಳಲ್ಲಿ ಸಂಪಿಗೆ ಮರ ಬೇರು ಬಿಟ್ಟಿದೆ.
ವರ್ಷದ ಮೇ ಅಥವಾ ಅಕ್ಟೋಬರ್ ತಿಂಗಳಲ್ಲಿ ಹೂ ಬಿಡುವುದು. ಕೆಂಡಸಂಪಿಗೆ ಬಹು ಸುವಾಸನೆಯುಳ್ಳದ್ದು. ಬಿಳಿ, ಬೂದು,ಕಡುಹಳದಿ,ನೀಲ ಹಳದಿ ಹೀಗೆ ಹಲವಾರು ಬಣ್ಣಗಳಲ್ಲಿ ಬಿಡುತ್ತದೆ.
ವ್ಯಾಪ್ತಿ
[ಬದಲಾಯಿಸಿ]ಹಿಮಾಲಯ ತಪ್ಪಲು, ಅಸ್ಸಾಮ್, ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಲ್ಲಿ ಇದರ ವ್ಯಾಪ್ತಿ ಇದೆ.
ಸಸ್ಯ ವಿವರಣೆ
[ಬದಲಾಯಿಸಿ]ಎತ್ತರವಾದ, ನೇರವಾದ ಸ್ತಂಭಾಕೃತಿಯ ಕಾಂಡದ ದೊಡ್ಡ ಪ್ರಮಾಣದ ನಿತ್ಯಹರಿದ್ವರ್ಣದ ಮರ. ನುಣುಪು ತೊಗಟೆ ಎಳೆಬೂದಿ ಬಣ್ಣವಿರುವುದು. ಸುವಾಸನೆಯ ಹೂಗಳಿಗೋಸ್ಕರ, ಅಲ್ಲಲ್ಲಿ ದೇವಾಲಯದ ಆವರಣ, ಉದ್ಯಾನವನಗಳಲ್ಲಿ ಬೆಳೆಸುತ್ತಾರೆ.
ಚೌಬೀನೆಯ ಬಿಳಿಮರ ಕಿರಿದಾಗಿದ್ದು ಮಾಸಲು ಬಣ್ಣದ್ದಾಗಿರುತ್ತದೆ. ಕಚ್ಚಾ ಹಳದಿ ಮಿಶ್ರಕಂದು. ಹದಮಾಡಲು ಸುಲಭ. ತಕ್ಕಮಟ್ಟಿಗೆ ಬಲಯುತ ಹಾಗೂ ಬಾಳಿಕೆಯದಾಗಿರುತ್ತದೆ. ಹಗುರ ಕೊಯ್ತಕ್ಕೆ ಮರಗೆಲಸಗಳಿಗೆ ಸುಲಭ.[೩] ಸಿದ್ಧಪಡಿಸಿದಾಗ ಹೊಳಪಿನಿಂದ ಕೂಡಿ ಆಕರ್ಷಕವಾಗಿರುತ್ತದೆ.
ಉಪಯೋಗಗಳು
[ಬದಲಾಯಿಸಿ]- ಸಂಪಿಗೆ ಮರವನ್ನು ತೇಗದ ಮರದಂತೆ ಉಪಯೋಗಿಸುತ್ತಾರೆ. ವಿಮಾನ, ಹಡಗು ನಿರ್ಮಾಣಕ್ಕೆ, ಮಠಾಧೀಶ್ವರರನ್ನು ಹೊರುವ ಅಡ್ಡಪಲ್ಲಕ್ಕಿ, ಆಟದ ಗೊಂಬೆ, ಬರೆಯುವ ಪೆನ್ಸಿಲ್, ಪೆಟ್ಟಿಗೆ ತಯಾರಿಕೆಗೆ, ದೋಣಿ ತಯಾರಿಕೆಗೆ, ಪ್ಲೈವುಡ್ ಪೀಠೋಪಕರಣಗಳ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. ಮರ ರಕ್ಷಕ ಸಂಸ್ಕರಣೆಯಿಂದ ಇದನ್ನು ಹೆಚ್ಚು ಬಗೆಯಲ್ಲಿ ಉಪಯೋಗಿಸಬಹುದು.
- ಆಯುರ್ವೇದದಲ್ಲಿ ಇದರ ಬೀಜದಿಂದ ಆರೋಗ್ಯಕಾರಿ ತೈಲವನ್ನು ಉತ್ಪಾದಿಸುತ್ತಾರೆ. ಇದರ ಬೀಜದಿಂದ ಮೇಣವನ್ನೂ ತಯಾರಿಸಲಾಗುತ್ತದೆ. ಸಂಪಿಗೆ ಹೂವಿನ ತೈಲದಲ್ಲಿ 'ಐಸೊಯುಜಿನಾರ್' ಎಂಬ ಅಂಶವಿರುತ್ತದೆ. ಮರದ ತೊಗಟೆಯಲ್ಲಿ ಮೀತೈಲ್ ಆಲ್ಕೋಹಾಲ್, ಟ್ಯಾನಿನ್ ಅಂಶಗಳಿರುತ್ತದೆ. ವಿವಿಧ ರೋಗಗಳಿಗೆ ಇದರ ತೊಗಟೆ, ಹೂವಿನ ಪಕಳೆ, ಬೇರು, ಎಲೆ, ಬೀಜ, ಹಸಿಕಾಯಿಗಳಿಂದ ಒಸರುವ ಹಾಲಿನಿಂದ, ಅಂಟು, ಒಣಗಿದ ಚಕ್ಕೆ ಕಡ್ಡಿಯಿಂದ ಔಷಧಿಯನ್ನು ತಯಾರಿಸುತ್ತಾರೆ.
- ಸಂಧಿವಾತವಿದ್ದರೆ, ಒಂದು ಕಪ್ ಹರಳೆಣ್ಣೆಯಲ್ಲಿ ಸಂಪಿಗೆಯ ಐದಾರು ಹೂಗಳನ್ನು ಹಾಕಿ ಬೆಚ್ಚಗೆ ಮಾಡಿ ನೋವಿರುವ ಜಾಗಕ್ಕೆ ಸವರಿದರೆ ನೋವು ನಿವಾರಣೆಯಾಗುತ್ತದೆ. ತಲೆಕೂದಲು ಉದುರುತ್ತಿದ್ದರೆ , ಹೊಟ್ಟು ಹೆಚ್ಚಾದರೆ , ನಿಂಬೇಹಣ್ಣಿನ ರಸದಲ್ಲಿ ಸಂಪಿಗೆ ಹೂವುಗಳನ್ನು ರಾತ್ರಿ ಪೂರಾ ನೆನೆಹಾಕಿ ಮುಂಜಾನೆ ಹೂಗಳನ್ನು ಹಿಸುಕಿ ತೆಗೆದು ತಲೆಕೂದಲಿನ ಬುಡಕ್ಕೆ ಹಚ್ಚಬೇಕು.
ಉಲ್ಲೇಖಗಳು
[ಬದಲಾಯಿಸಿ]- ↑ Fl. Forest. Cochinch. 1: t. 3 (1880). "WCSP (2013). World Checklist of Selected Plant Families. Facilitated by the Royal Botanic Gardens, Kew". Archived from the original on 2021-09-24.
- ↑ efloras.org: Flora of China treatment of Michelia (Magnolia) champaca. accessed 7.12.2015
- ↑ Pacific Horticulture Society: "Striving for Diversity: Fragrant Champaca" . accessed 7.12.2015