ವಿಷಯಕ್ಕೆ ಹೋಗು

ಸಂತುಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂತುಲಾ
ସନ୍ତୁଳା
ಸಂತುಲಾ ಒಡಿಯಾ ತಿನಿಸು
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಒಡಿಶಾ
ವಿವರಗಳು
ನಮೂನೆಮೇಲೋಗರ
ಮುಖ್ಯ ಘಟಕಾಂಶ(ಗಳು)ಆಲೂಗಡ್ಡೆ, ಬದನೆಕಾಯಿ, ಪಪ್ಪಾಯಿ ಕಾಯಿ, ಹುರುಳಿಕಾಯಿ, ಟೋಮೇಟೊ, ಈರುಳ್ಳಿ, ಮತ್ತು ಹಸಿರು ಮೆಣಸಿನಕಾಯಿ
ಪ್ರಭೇದಗಳುಭಾಜಾ ಸಂತುಲಾ, ಸೀಝಾ ಸಂತುಲಾ

ಸಂತುಲಾ ಪೂರ್ವ ಭಾರತದ ಒಡಿಶಾ ರಾಜ್ಯದ ಒಂದು ತರಕಾರಿ ಖಾದ್ಯವಾಗಿದೆ. ಇದನ್ನು ಕರಿದಿರಬಹುದು (ಭಾಜಾ ಸಂತುಲಾ) ಅಥವಾ ಬೇಯಿಸಿರಬಹುದು (ಸೀಝಾ ಸಂತುಲಾ). ಬಳಸಲಾದ ಘಟಕಾಂಶಗಳಲ್ಲಿ ಆಲೂಗಡ್ಡೆ, ಬದನೆ, ಪಪ್ಪಾಯಿ ಮತ್ತು ಟೊಮೇಟೊ ಸೇರಿವೆ. ಮೊದಲು ಇವುಗಳನ್ನು ಒಟ್ಟಾಗಿ ಬೇಯಿಸಲಾಗುತ್ತದೆ ಮತ್ತು ನಂತರ ಕತ್ತರಿಸಿದ ಈರುಳ್ಳಿ, ಪಂಚ್ ಫೋರನ್ ಹಾಗೂ ಹಸಿರು ಮೆಣಸಿನಕಾಯಿಗಳೊಂದಿಗೆ ಎಣ್ಣೆಯಲ್ಲಿ ಕರಿಯಲಾಗುತ್ತದೆ.

ಪ್ರಯೋಜನಗಳು

[ಬದಲಾಯಿಸಿ]

ಈ ಖಾದ್ಯವು ಖಾರವಿರದಿರುವುದರಿಂದ ಜೀರ್ಣ ಮಾಡಿಕೊಳ್ಳುವುದು ಸುಲಭವೆಂದು ಹೇಳಲಾಗುತ್ತದೆ. ಹೊಟ್ಟೆಯ ತೊಂದರೆಗಳಿಂದ ನರಳುತ್ತಿರುವವರಿಗೆ ಈ ಖಾದ್ಯವು ಉತ್ತಮವಾಗಿದೆ.[] ತಾಜಾ ಹಸಿರು ತರಕಾರಿಗಳನ್ನು ಸಂಬಾರ ಪದಾರ್ಥಗಳು ಮತ್ತು ಎಣ್ಣೆ ಇಲ್ಲದೇ ತಿನ್ನಬೇಕು ಎಂದು ವಿಧಿಸಲಾದವರಿಗೆ, ಸಂತುಲಾಗಿಂತ ಉತ್ತಮವಾದ ಬೇರೊಂದಿರಲಿಕ್ಕಿಲ್ಲ.[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2018-11-13. Retrieved 2020-05-14.
  2. "ಆರ್ಕೈವ್ ನಕಲು". Archived from the original on 2019-01-17. Retrieved 2020-05-14.
"https://kn.wikipedia.org/w/index.php?title=ಸಂತುಲಾ&oldid=1162909" ಇಂದ ಪಡೆಯಲ್ಪಟ್ಟಿದೆ