ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:RSHG.JPG
'ಶ್ರೀ.ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ, ಬೆಂಗಳೂರು'

ದಕ್ಷಿಣ ಬೆಂಗಳೂರಿನ 'ಸಜ್ಜನ್ ರಾವ್ ಸರ್ಕಲ್' ಬಳಿ 'ನ್ಯಾಷನಲ್ ಕಾಲೇಜ್' ಗೆ ಸಾಗುವ ದಾರಿಯಲ್ಲಿ ಈಗಿನ ೬೭, 'ಜೈನ್ ಟೆಂಪಲ್ ರಸ್ತೆ'ಯಲ್ಲಿರುವ 'ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ ವಿದ್ಯಾರ್ಥಿನಿಲಯ' ಸನ್, ೧೯೧೯ ರಲ್ಲಿ ಶುರುವಾಗಿ, ತನ್ನ '೯೦ ರ ಜಯಂತ್ಯೋತ್ಸವ'ವನ್ನು ಸನ್, ೧೯೯೪ ರಲ್ಲೇ ನೆರವೇರಿಸಿಕೊಂಡು ಮುಗಿಲೆತ್ತರಕ್ಕೆ ಬೆಳೆದ ಬೃಹತ್ ಸಂಸ್ಥೆ. ಇಲ್ಲಿನ ಶುದ್ಧ ಪರಿಸರದ ವಾಸ್ತವ್ಯದಲ್ಲಿ ತರಪೇತಾದ ವಿದ್ಯಾರ್ಥಿಗಳ ಸಂಖ್ಯೆ, ಮೊದಲು ಕೇವಲ ೧೦ ರಿಂದ ಆರಂಭವಾಗಿದ್ದು, ೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇದುವರೆವಿಗೆ ಒಟ್ಟಾರೆ ವಸತಿ ಸೌಲಭ್ಯಗಳನ್ನು ಹೊಂದಿದ ವಿದ್ಯಾರ್ಥಿಗಳ ಸಂಖ್ಯೆ ೧,೨೦೦ ರ ಹತ್ತಿರ ಹತ್ತಿರ ಬಂದಿದೆ.

ವಿದ್ಯಾರ್ಥಿನಿಲಯ ಬೆಳೆದ ಪರಿ[ಬದಲಾಯಿಸಿ]

ಚಿತ್ರ:RSH47.JPG
'ಹೊಸ ಕೊಠಡಿಯಲ್ಲಿ ಕಂಪ್ಯೂಟರ್ ಸಹಿತದ ಗ್ರಂಥಾಲಯ'

ಇದು ವಿಶ್ವೇಶ್ವರಪುರಂ ನಲ್ಲಿರುವ ಒಂದು ಹಳೆಯ ವಿದ್ಯಾರ್ಥಿ ಗೃಹ. 'ನ್ಯಾಶನಲ್ ಕಾಲೇಜ್' ಗೆ 'ಮೆಡಿಕಲ್ ಕಾಲೇಜ್', ಗೆ ಹತ್ತಿರ. ಇಲ್ಲಿ ವಿದ್ಯಾಭ್ಯಾಸ ಮಾಡಿ ಮೇಲೆ ಬಂದ ವಿದ್ಯಾರ್ಥಿಗಳು ಹಲವಾರು. ಅನೇಕರು ಅಮೆರಿಕ, ಯೂರೋಪ್, ಆಸ್ಟ್ರೇಲಿಯ ಖಂಡಗಳಲ್ಲಿ ಅತ್ಯಂತ ಪ್ರತಿಷ್ಠಿತ ಹುದ್ದೆಗಳಲ್ಲಿ ಕೆಲಸಮಾಡುತ್ತಿದ್ದಾರೆ. ಈ ವಿದ್ಯಾರ್ಥಿ ನಿಲಯ ಅಚ್ಚುಕಟ್ಟಾಗಿದ್ದು, ವಿದ್ಯಾರ್ಥಿಗಳೇ ನಡೆಸಿಕೊಂಡು ಹೋಗುವ ಪದ್ಧತಿಯಿಂದ , ಅವರಿಗೆ ಸ್ವಂತಿಕೆಯನ್ನು ಕಲಿಯಲು ಅವಕಾಶವಿದೆ. ಸಾಮಾನ್ಯವಾಗಿ ಮೆರಿಟ್ ವಿದ್ಯಾರ್ಥಿಗಳೇ ಇಲ್ಲಿ ಭರ್ತಿಯಾಗುವುದರಿಂದ, ಅವರ ವಿದ್ಯಾರ್ಥಿವೇತನ ದಲ್ಲಿ ಸ್ವಲ್ಪಪಾಲು ಹಾಸ್ಟೆಲ್ ಗೆ ಕೊಡಲು ಏರ್ಪಾಟು ಮಾಡಿರುತ್ತಾರೆ. ಅದರಿಂದ ವ್ಯವಸ್ಥಾಪಕರಿಗೆ ಹಣದ ಮುಗ್ಗಟ್ಟು ಬರಲು ಸಾಧ್ಯವಿಲ್ಲ.

ಚಿತ್ರ:RSH46.JPG
'ಒಳಭಾಗದ ದೃಷ್ಯ'
ಚಿತ್ರ:Logo(59).jpg
'ಆರ್.ಕೆ.ಸ್ಟೂಡೆಂಟ್ಸ್ ಹೋಂ ನ ಲಾಂಛನ'
ಚಿತ್ರ:Prayer hall.jpg
'ಹೊಸದಾಗಿ ನಿರ್ಮಿಸಿದ ಪ್ರಾರ್ಥನಾ ಮಂದಿರ'

ಈ ೯ ದಶಕಗಳಿಗಿಂತ ಹೆಚ್ಚಾದ ಬೆಳವಣಿಗೆಗೆ ಕಾರಣಭೂತರಾದ ಹಲವಾರು 'ನಿಸ್ವಾರ್ಥಸೇವಾ ಮನೋಭಾವ'ದಿಂದ ಬಹಳ ಸಮಯ ದುಡಿದ 'ಮಹಾನ್ ಹಸ್ತಿ'ಗಳಲ್ಲಿ ಪ್ರಮುಖರಾದವರು :

ಸಾಹಿತ್ಯಸಂಘದ ಸ್ಥಾಪನೆ[ಬದಲಾಯಿಸಿ]

೧೯೨೭ ರಲ್ಲೇ ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಜೊತೆಗೆ ಸಾಂಸ್ಕೃತಿಕ ವಿದ್ಯೆಯನ್ನು ಬಲಪಡಿಸಿಕೊಳ್ಳಲು ಪ್ರೋತ್ಸಾಹ ನೀಡಲು 'ಡಿಬೇಟಿಂಗ್ ಸೊಸೈಟಿ'ಯ ಸ್ಥಾಪನೆಯಾಯಿತು. ಮುಂದೆ ಇದನ್ನೇ 'ಸ್ಟೂಡೆಂಟ್ಸ್ ಯೂನಿಯನ್' ಎಂದು ಕರೆಸಿಕೊಂಡು ೧೯೪೪-೪೫ ರಲ್ಲಿ 'ಸಾಹಿತ್ಯ ಸಂಘ' ಮೈದಳೆಯಿತು.೧೯೪೭ ರಲ್ಲಿ ಪ್ರಪ್ರಥಮವಾಗಿ ಕೈಬರಹದಲ್ಲಿ ಸಿದ್ಧಪಡಿಸಿದ ಪತ್ರಿಕೆ 'ಸುಧಾ-ಆರ್.ಕೆ.ಹೋಂ ನ ಕೈಬರಹದ ಪತ್ರಿಕೆ' ವಿದ್ಯಾರ್ಥಿನಿಲಯದ ನಿವಾಸಿಗಳ ಆಶಯಗಳನ್ನು ವ್ಯಕ್ತಪಡಿಸುವ ಮಾಧ್ಯಮವಾಗಿ ಸ್ಥಾಪನೆಯಾಯಿತು.

'ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ'ನ, ಧ್ಯೇಯ,ಹಾಗೂ ಆಶೋತ್ತರಗಳನ್ನು ಪ್ರತಿಬಿಂಬಿಸುವ ಲಾಂಛನ[ಬದಲಾಯಿಸಿ]

'ಹೋಂ ನ ಸ್ಥಾಪನೆ'ಯ ಸಮಯದಲ್ಲಿ ಇಟ್ಟುಕೊಂಡಿದ್ದ ನಿಷ್ಟಾವಂತ,ಪ್ರತಿಭಾವಂತ,ಬಡ ವಿದ್ಯಾರ್ಥಿಗಳ ವಸತಿ ಹಾಗೂ ಊಟೋಪಚಾರಗಳನ್ನು ಬಿಂಬಿಸುವ ಶುದ್ಧಮನಸ್ಸಿನ ಮೂಲ-ಧ್ಯೇಯೋದ್ದೇಶಗಳನ್ನು ಪ್ರತಿಬಿಂಬಿಸುವ ಪ್ರತೀಕವಾದ ಒಂದು ಅರ್ಥಪೂರ್ಣ ಲಾಂಛನವನ್ನು ಹೊಂದಿಸಲಾಯಿತು. 'ಲೋಗೊ'ವಿನಲ್ಲಿ ಎರಡು ವೃತ್ತಗಳಿವೆ, ಹೊರವೃತ್ತ ಹಳದಿಬಣ್ಣದ್ದಾಗಿದ್ದು, ಮೇಲ್ಭಾಗದಲ್ಲಿ 'ಹೋಂ'ನ ಹೆಸರನ್ನು ಹೊಂದಿದೆ. ಕೆಳಭಾಗದಲ್ಲಿ ಉಪನಿಷತ್ತಿನ ವಾಕ್ಯ'ವಿದ್ಯಯಾ ಅಮೃತಮಶ್ನುತೇ' ಎಂಬ ವಾಕ್ಯವನ್ನು ಉದ್ಧರಿಸಲಾಗಿದೆ. ಒಳಗಿನ 'ರಾಣಿ ಬಣ್ಣದ ವೃತ್ತ'ದ ಕೆಳಭಾಗದಲ್ಲಿ ನೀರಿನಲ್ಲಿ ಕಮಲದ ಪುಷ್ಪವನ್ನು ತೋರಿಸಲಾಗಿದೆ. ಇದು ಶುದ್ಧಮನಸ್ಸು ಹಾಗೂ ಧ್ಯೇಯದ ಪ್ರತೀಕವಾಗಿದೆ. ಕಮಲದ ಹೂವಿನ ಮೇಲ್ಭಾಗದಲ್ಲಿ ತೆರೆದ ಪುಸ್ತಕವಿದೆ. ಇದು ವಿದ್ಯೆಯ ಪ್ರಸಾರದ ಚಿನ್ಹೆ. ಇದರ ಮೇಲ್ಭಾಗದಲ್ಲಿ 'ಓಂ' ಎಂಬ ಪ್ರಣವ ಸ್ವರೂಪವನ್ನು ಬಿಂಬಿಸುವ ವಿಶ್ವದ ಅನಂತ ಸ್ವರೂಪವನ್ನು ರೂಪಿಸುವ ಅಕ್ಷರವಿದೆ. ಒಳ ವೃತ್ತದ ಪರಿಧಿಯುದ್ದಕ್ಕೂ 'ನಮಸ್ಕಾರವನ್ನು ಸೂಚಿಸುವ ಜೋಡಿ ಕೈಗಳು' ಎಲ್ಲಾ ಕಾಲದಲ್ಲೂ ಸೇವೆಯ ಪ್ರತೀಕವಾಗಿ, ಸುತ್ತಲೂ ಬಳ್ಳಿಯಂತೆ ಆವರಿಸಿವೆ. ಒಟ್ಟಾರೆಯಾಗಿ ಯೋಚಿಸಿದರೆ, 'ಹೋಂನ ಸಂಸ್ಥಾಪಕ'ರ ಮೂಲ ಧ್ಯೇಯೋದ್ಧೇಶಗಳನ್ನು ಸ್ವಲ್ವವೂ ಸಡಿಲಿಸದೆ, ನಿರಂತರ ಸೇವೆಯನ್ನು ಅನುಮೋದಿಸಿ ಕಾಲಕಾಲಕ್ಕೂ ಆಗುವ ಬದಲಾವಣೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಾ 'ಹೊಂ' ನ ಸರ್ವತೋಮುಖದ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಈಗಿನ ಸಹೃದಯರ ಬಗ್ಗೆ ತಮ್ಮ ಧೃಡ ವಿಶ್ವಾಸವನ್ನು ತೋರ್ಪಡಿಸುವ ಮಾರ್ಗದಲ್ಲಿ 'ಲೋಗೋ' ಪ್ರಜ್ವಲಿಸುತ್ತಿದೆ.

ವಿದ್ಯಾರ್ಥಿನಿಲಯದ ೯ ದಶಕಗಳ ಇತಿಹಾಸದಲ್ಲಿ ಮೂಡಿಬಂದ ಹೆಜ್ಜೆಗುರುತುಗಳು[ಬದಲಾಯಿಸಿ]

  • ೧೯೯೧೯-೨೦- 'ಶ್ರೀ. ರಾಮಕೃಷ್ಣ ಮಠ'ದ ಎದುರಿಗೆ ಒಂದು ಬಾಡಿಗೆಗೆ ಕಟ್ಟಡದಲ್ಲಿ ವಿದ್ಯಾರ್ಥಿನಿಲಯದ ಸ್ಥಾಪನೆ.
  • ಮೇ, ೧೯೨೦-ಬೆಂಗಳೂರಿನ 'ಬಸವನಗುಡಿ ಸ್ಕೌಟ್ ಕ್ಲಬ್' ಪರಿಸರಕ್ಕೆ ಅದನ್ನು ತಾತ್ಕಾಲಿಕವಾಗಿ ವರ್ಗಾಯಿಸಲಾಯಿತು.
  • ಆಗಸ್ಟ್, ೧೯೨೦-'ರಾಮಕೃಷ್ಣ ಆಶ್ರ'ಮದ ಹತ್ತಿರವೇ ಬಾಡಿಗೆ ಮನೆಯಲ್ಲಿ,
  • ಜೂನ್. ೧೯೨೨, 'ಗವಿಪುರಮ್ ಬಡಾವಣೆ'ಯಲ್ಲಿ ನಂ.೨೧ ಕಟ್ಟಡಕ್ಕೆ ವರ್ಗಾಯಿಸಲಾಯಿತು.
  • ಜೂನ್, ೧೯೨೯-'ವಿಶ್ವೇಶ್ವರಪುರಮ್ ಬಡಾವಣೆ'ಯ.ನಂ. ೯೯೯ ಕಟ್ಟಡಕ್ಕೆ ವರ್ಗಾವಣೆ.
  • ಆಗಸ್ಟ್ ೧೯೩೨-ಶಂಕರಪುರದ, 'ಶಂಕರಪುರಂ ಹೌಸ್' ಬಾಡಿಗೆ ಮನೆಗೆ ವರ್ಗಾವಣೆ.
  • ೨೭-೭-೧೯೩೫-ಬೆಂಗಳೂರು ಸಿಟಿ ಮುನಿಸಿಪಾಲಿಟಿಯಿಂದ 'ಉಚಿತ ಸೈಟ್' ದೊರೆಯಿತು. (೧೦೦ ಅಡಿ‍‌‍‍‍‌ ಉದ್ದ ಮತ್ತು ೧೫೦ ಅಡಿ ಅಗಲದ),
  • ಅಕ್ಟೋಬರ್, ೧೯೩೬-ಮೊದಲನೆಯ ರಸ್ತೆ, 'ಚಾಮರಾಜಪೇಟೆ'ಯಲ್ಲಿ ಒಂದು(೧೦೫-೬) ಮನೆ ಬಾಡಿಗೆಗೆ ಪಡೆದರು.
  • ೧೯೩೭-೩೯-೨೨ ಸಾವಿರ ರುಪಾಯಿಗಳ ವೆಚ್ಚದ ಹೊಸ ಕಟ್ಟಡ ಕಟ್ಟಿದರು, ಗ್ರೌಂಡ್ ಫ್ಲೋರ್ ನಲ್ಲಿ.
  • ೨೨-೧೦-೧೯೩೯-'ವಿಜಯದಶಮಿಯ ದಿನ'ದಂದು ವಿಧ್ಯುಕ್ತವಾಗಿ ಹೊಸ ಕಟ್ಟಡದ ಗೃಹಪ್ರವೇಶದ ಸಂಭ್ರಮ.
  • ೧೨-೧೧-೧೯೩೯-೬೭, 'ವಿಶ್ವೇಶ್ವರ ಪುರಂ ನ ಜೈನ್ ದೇವಸ್ಥಾನದ ರಸ್ತೆ'ಯಲ್ಲಿರುವ ಹೊಸ ಕಟ್ಟಡಕ್ಕೆ ವರ್ಗಾಯಿಸಲಾಯಿತು.
  • ೧೯೪೮- ರೀಡಿಂಗ್ ರೂಂ ಮತ್ತು 'ಅಸೆಂಬ್ಲಿ ಹಾಲ್' ಪಶ್ಚಿಮ ವಲಯಕ್ಕೆಸೇರಿದ, ಮೊದಲನೆಯ ಅಂತಸ್ತಿನಲ್ಲಿ,
  • ೧೯೫೨-ಹೋಂನ, ಹಿಂಭಾಗದಲ್ಲಿ 'ವಾರ್ಡನ್ ರವರ ಮನೆ' ಮತ್ತು ಪರಿಕರಗಳನ್ನು ದಾಸ್ತಾನು ಮಾಡುವ ವ್ಯವಸ್ಥೆ.
  • ೧೯೫೭-ಒಂದು ಪ್ರತ್ಯೇಕವಾದ ಕೊಠಡಿ, ಹಾಗೂ 'ಪ್ರಾರ್ಥನಾಕೊಠಡಿ'ಗಳ ಸೇರ್ಪಡೆ, ದಕ್ಷಿಣ ವಲಯದಲ್ಲಿ,
  • ೧೯೭೦-'ಪ್ರೊ.ಗೋಪಾಲಸ್ವಾಮಿ ಮೆಮೋರಿಯಲ್ ಹಾಲ್' ನಿರ್ಮಾಣ ಮೊದಲನೆಯ ಅಂತಸ್ತಿನ ಉತ್ತರಭಾಗದಲ್ಲಿ ಸೇರಿಸಲಾಯಿತು.
  • ೧೯೮೮-ಒಂದು 'ಕೊಳವೆ ಭಾವಿ'ಯನ್ನು ತೋಡಲಾಯಿತು.
  • ೧೯೯೦ ಕೆಲವು ಪ್ರಮುಖ ದುರಸ್ತಿಕಾರ್ಯಗಳು.
  • ೧೯೯೨-ಹೊಯ್ಸಳ ಶೈಲಿಯಲ್ಲಿ ನಿರ್ಮಿತ 'ಗಣೇಶನ ವಿಗ್ರಹ'ವನ್ನು ಪ್ರಾರ್ಥನಾಮಂದಿರದಲ್ಲಿ ಒಂದು ಅಮೃತಶಿಲೆಯ ಕಟ್ಟೆಯಮೇಲೆ, ಪ್ರತಿಷ್ಟಾಪಿಸಲಾಯಿತು.
  • ೧೯೯೪-'ಎನ್.ವರದರಾಜನ್ ಮೆಮೋರಿಯಲ್ ಹಾಲ್' ನ್ನು 'ಹೋಂನ ವಜ್ರಮಹೋತ್ಸವ'ದ ಸಂದರ್ಭದಲ್ಲಿ ಕಟ್ಟಡದ ಪೂರ್ವ ವಲಯದ ಮೊದಲನೆಯ ಅಂತಸ್ತಿನಲ್ಲಿ ಸ್ಥಾಪನೆಮಾಡಲಾಯಿತು.
  • ೨೦೦೨-ಹೊಸ 'ಆರ್.ಸಿ.ಸಿ.ನಿರ್ಮಿತ ಕಟ್ಟಡ'ವನ್ನು ಪ್ರಮುಖ ಕಟ್ಟಡದ ಹಿಂಭಾಗದಲ್ಲಿ ನಿರ್ಮಿಸಲಾಯಿತು. ಅದರಲ್ಲಿ ಪ್ರಾರ್ಥನಾ ಮಂದಿರ, ಊಟದ ಕೊಠಡಿ, ಅಡುಗೆ ಮನೆ, ಉಗ್ರಾಣ ಮುಂತಾದ ಉಪಯುಕ್ತ ಸ್ಥಾನಗಳನ್ನು ಸೇರಿಸಲಾಯಿತು.
  • ೨೦೧೦-೨೩ ಅಡಿ ಉದ್ದ, ಮತ್ತು ೯೬ ಅಡಿ ಅಗಲದ 'ವಿವಿಧೋದ್ದೇಶಗಳನ್ನು ಹೊಂದಿದ ಹಾಲ'ನ್ನು ಮೊದಲನೆಯ ಅಂತಸ್ತಿನಲ್ಲಿ ನಿರ್ಮಾಣಮಾಡಲಾಯಿತು. ಕಟ್ಟಡದ ಮೇಲ್ಭಾಗದಲ್ಲಿ 'ಸೋಲಾರ್ ಹೀಟಿಂಗ್ ಸಿಸ್ಟಮ್' ನ್ನೂ ಸಹಿತ ಅಳವಡಿಸಲಾಗಿದೆ.
  • ಗೀತೆಯ ಪಠನದ ನಿಜವಾದ ಅರ್ಥ ತಿಳಿದಮೇಲೆ ; ವಿದ್ಯಾರ್ಥಿನಿಲಯದ ನಿವಾಸಿಗಳು [೧]

ಉಲ್ಲೇಖಗಳು[ಬದಲಾಯಿಸಿ]

  1. ಗೀತಾ ಪಠನದ ನಿಜವಾದ ಅರ್ಥತಿಳಿದಾಗ, 'ಗೀತೆ ನಾಕಂಡಂತೆ'

ಕೃಪೆ[ಬದಲಾಯಿಸಿ]