ವಿಷಯಕ್ಕೆ ಹೋಗು

ಜಿ.ವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಪ್ರೊ. ಜಿ.ವೆಂಕಟಸುಬ್ಬಯ್ಯ'ನವರು, ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್, ಬೆಂಗಳೂರು-೫೬೦ ೦೦೪'ನ ನಿವಾಸಿಗಳಿಗೆ 'ಜಿ.ವಿ,' ಎಂದೇ ಪ್ರಸಿದ್ಧರಾಗಿದ್ದರು.ಶ್ರೇಷ್ಠ ಶಿಕ್ಷಕ,ಶಿಕ್ಷಣತಜ್ಞ,ಮತ್ತು ಮಾದರಿ ಪೋಷಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರನ್ನು ಪ್ರೊ.ವಿ.ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಶ್ರೀ.ಎನ್.ವರದರಾಜನ್ ರವರುಗಳು ತಮ್ಮ ತರುವಾಯ ಒಬ್ಬ ಸೂಕ್ತ ಉತ್ತರಾಧಿಕಾರಿಯೆಂದು ಕಂಡುಕೊಂಡಿದ್ದರು. ಅಂದಿನಿಂದ ಸುಮಾರು ಎರಡು ತಲೆಮಾರಿನ ವಿದ್ಯಾರ್ಥಿಗಳಿಗೆ, ಸುಮಾರು ೫೦ ವರ್ಷಗಳಕಾಲ ಸತತವಾಗಿ ಅವರ ಮಾರ್ಗದರ್ಶನದ ಲಾಭ ದೊರೆಯಿತು.

'ಜಿ.ವಿ.ಯವರ ವ್ಯಕ್ತಿತ್ವ'[ಬದಲಾಯಿಸಿ]

ಉಡುಪಿನಲ್ಲಿ, ಊಟೋಪಚಾರಗಳಲ್ಲಿ ಮತ್ತು ಎಲ್ಲದರಲ್ಲೂ ಶಿಸ್ತು, ಮತ್ತು ಅಚ್ಚುಕಟ್ಟಿನ ವ್ಯಕ್ತಿತ್ವದ 'ಜಿ.ವಿ' ಯವರು,ಉತ್ತಮ ವಿಷಯಗಳನ್ನು ಕಾರ್ಯಾಚರಣೆಯಲ್ಲಿ ತರುವಲ್ಲಿ ಒಬ್ಬ ಪ್ರೇರಕರಾಗಿದ್ದರು. ಹೋಂ ನ ವಾಚನಾಲಯದ ವ್ಯವಸ್ಥೆಗೆ ಅವರು ಅತಿಹೆಚ್ಚು ಒತ್ತುಕೊಟ್ಟರು.

ಚಿತ್ರ:Venkatasubbiah with old boarder.jpg
'ಡಾ.ಜಿ.ವಿ.ಯವರು ಡಾ.ಚಂದ್ರಶೇಖರ್ ರವರನ್ನು ಅಭಿನಂದಿಸುತ್ತಿದ್ದಾರೆ'

'ಕೈಬರಹದ ಪತ್ರಿಕೆ,ಸುಧಾ'[ಬದಲಾಯಿಸಿ]

ಈವರೆಗೆ ಸುಮಾರು ೫೭ ವರ್ಷಗಳ ಕೃತಿಗಳನ್ನು ಸಂಚಿಗೆಗಳ ರೂಪದಲ್ಲಿ ಹೊರತಂದಿರುವ ಕೈಬರಹದ ಅಪರೂಪದ ಪತ್ರಿಕೆ, 'ಸುಧಾ',ಸಾಹಿತ್ಯಕ್ಷೇತ್ರದಲ್ಲಿ ದಿಗ್ಗಜರಾದ 'ಜಿ.ವಿ'ಯವರ ಮಾರ್ಗದರ್ಶನದ ಛಾಪು' ಸಾಹಿತ್ಯಸಂಘದ ಎಲ್ಲಾ ಚಟುವಟಿಕೆಗಳಲ್ಲೂ ಕಾಣಬರುತ್ತದೆ. ಡಾ.ಚಂದ್ರಶೇಖರ್, ಸನ್, ೨೦೦೯ ರಲ್ಲಿ, ಹೋಂಗೆ ಭೇಟಿಕೊಟ್ಟಾಗ,ಡಾ.ಜಿ.ವಿಯವರನ್ನು ಭೆಟ್ಟಿಮಾಡಿದ್ದರು. ಹಳೆಯ ಕೆಲವು ಸುಂದರ ಸನ್ನಿವೇಶಗಳನ್ನು ನೆನೆಸಿಕೊಂಡು ಸಂತೋಷವನ್ನು ಹಂಚಿಕೊಂಡರು. ಸನ್, ೧೯೬೫ ರಲ್ಲಿ, ಜಿ.ವಿ ಯವರು ಬೆಂಗಳೂರಿನ 'ವಿಜಯ ಕಾಲೇಜ್' ನಲ್ಲಿ 'ಕನ್ನಡ ಪ್ರಾಧ್ಯಾಪಕ'ರಾಗಿದ್ದರು.

'ಫೌಂಡೇಷನ್ ಫಾರ್ ಎಕ್ಸಲೆನ್ಸ್ ಸಂಸ್ಥೆ'[ಬದಲಾಯಿಸಿ]

'ಹೋಂ'ನಲ್ಲಿ 'ಜಿ.ವಿ'.ಯವರ ಅಧಿಕಾರಾಧಿವಧಿಯಲ್ಲಿ ಶುರುವಾದ ಮತ್ತೊಂದು ಮುಖ್ಯಕಾರ್ಯಚಟುವಟಿಕೆಯೆಂದರೆ, 'ಅಮೆರಿಕದ ಅನಿವಾಸಿ ಭಾರತೀಯರ ಸಂಸ್ಥೆ','ಫೌಂಡೇಷನ್ ಫಾರ್ ಎಕ್ಸಲೆನ್ಸ್' ನ ಭಾರತದಲ್ಲಿನ ಸಹ ವ್ಯವಸ್ಥಾಪಕ ಸಂಸ್ಥೆಯ, ಸಂಪರ್ಕಶಾಖೆಯಾಗಿ'ಹೋಂ'ನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಹೊರಗಿನ ಇತರ ಪ್ರತಿಭಾವಂತ ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನಸಹಾಯಮಾಡುವ ಕೆಲಸದಲ್ಲಿ ತನ್ನನ್ನೂ ತೊಡಗಿಸಿಕೊಂಡಿದೆ. ಈ ಸಂಸ್ಥೆ,'ಹೋಂ'ನ ಮೂಲಕ,ಸುಮಾರು ೫೦೦ ವಿದ್ಯಾರ್ಥಿಗಳಿಗೆ ಒಂದು ಕೋಟಿರುಪಾಯಿಗೂ ಅಧಿಕವಾದ ಧನ ಸಹಾಯಮಾಡಿದೆ.

"https://kn.wikipedia.org/w/index.php?title=ಜಿ.ವಿ&oldid=1163953" ಇಂದ ಪಡೆಯಲ್ಪಟ್ಟಿದೆ