ಸುಧಾ-ಆರ್.ಕೆ.ಹೋಂ ನ ಕೈಬರಹದ ಪತ್ರಿಕೆ
ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಬೆಂಗಳೂರಿನಲ್ಲಿ 'ಸುಧಾ' ಎಂಬ ಹೆಸರಿನ 'ಕೈಬರಹದ ಪತ್ರಿಕೆ' ಇದೆ. ಇದು 'ಮೈಸೂರ್ ಪ್ರಿಂಟರ್ಸ್' ಯಜಮಾನತ್ವದ ಮುದ್ರಿತ ಪತ್ರಿಕೆಯಲ್ಲ. ದಕ್ಷಿಣ ಬೆಂಗಳೂರಿನ ವಿಶ್ವೇಶ್ವರಪುರಂನ ಸಜ್ಜನ್ ರಾವ್ ವೃತ್ತಕ್ಕೆ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ, ಬೆಂಗಳೂರು-೫೬೦ ೦೦೪ನಲ್ಲಿ ವಾಸ್ತವ್ಯಹೊಂದಿ, ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿರುವ, ಪ್ರತಿಭಾವಂತ ವಿದ್ಯಾರ್ಥಿಗಳಿಂದ ಬರೆಯಲ್ಪಟ್ಟು, ಸಂಪಾದಿಸಲ್ಪಟ್ಟಿದೆ. ಅದರಲ್ಲಿರುವ ಕವಿತೆ, ನಾಟಕ, ವಿಚಾರಪೂರ್ಣಲೇಖನಗಳು, ಹಾಸ್ಯ-ಚುಟಕಗಳು, ಮುಂತಾದ ಲೇಖನಗಳು ಆದರ್ಶಪ್ರಾಯವಾಗಿವೆ. ವಿದ್ಯಾರ್ಥಿಗಳೇ ಸುಂದರವಾದ ಮುಖಪುಟದ ವಿನ್ಯಾಸವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ.
'ಕೈಬರಹದ ಸುಧಾಪತ್ರಿಕೆಯ ಆರಂಭ'
[ಬದಲಾಯಿಸಿ]ಸನ್, ೧೯೨೭ ರಲ್ಲೇ ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಜೊತೆಗೆ ಸಾಂಸ್ಕೃತಿಕ ವಿದ್ಯೆಯನ್ನು ಬಲಪಡಿಸಿಕೊಳ್ಳಲು ಪ್ರೋತ್ಸಾಹ ನೀಡಲು, 'ಡಿಬೇಟಿಂಗ್ ಸೊಸೈಟಿ'ಯ ಸ್ಥಾಪನೆಯಾಯಿತು. ಮುಂದೆ ಇದನ್ನೇ 'ಸ್ಟೂಡೆಂಟ್ಸ್ ಯೂನಿಯನ್' ಎಂದು ಕರೆಸಿಕೊಂಡು ೧೯೪೪-೪೫ ರಲ್ಲಿ 'ಸಾಹಿತ್ಯ ಸಂಘ' ಮೈದಳೆಯಿತು. ೧೯೪೭ ರಲ್ಲಿ ಪ್ರಪ್ರಥಮವಾಗಿ ಕೈಬರಹದ ಸುಧಾ ಎಂಬ ಪತ್ರಿಕೆಯನ್ನು ಹಾಸ್ಟೆಲ್ ನ ಇನ್ಮೇಟ್ ಗಳು ಹೊರತಂದರು. ಈ ಅಭಿಯಾನದ ಹಿಂದೆ. ಜಿ.ವಿ.ಯವರ 'ಪ್ರೋತ್ಸಾಹದ ಅಭಯ ಹಸ್ತ' ವಿತ್ತು.
ಕೃಪೆ
[ಬದಲಾಯಿಸಿ]- ಈ ಪ್ರತಿಯನ್ನು ಹಳೆಯ ವಿದ್ಯಾರ್ಥಿ, ಡಾ.ಎಚ್.ಆರ್.ಚಂದ್ರಶೇಖರ್, ರವರ 'ಖಾಸಗೀ ಫೈಲ್' ನಿಂದ ಪಡೆಯಲಾಗಿದೆ.