ವಿಷಯಕ್ಕೆ ಹೋಗು

ಶ್ರೀರಂಗಂ ಗೋಪಾಲರತ್ನಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀರಂಗಂ ಗೋಪಾಲರತ್ನಂ (೧೯೩೯ - ೧೬ ಮಾರ್ಚ್ ೧೯೯೩) ಒಬ್ಬ ಭಾರತೀಯ ಶಾಸ್ತ್ರೀಯ ಮತ್ತು ಚಲನಚಿತ್ರ ಹಿನ್ನೆಲೆ ಗಾಯಕ. ಕೂಚಿಪುಡಿ, ಯಕ್ಷಗಾನ, ಜಾವಳಿ ಮತ್ತು ಯೆಂಕಿ ಪಟಾಲುಗಳ ನಿರೂಪಣೆಯಲ್ಲಿ ಅವರು ಗುರುತಿಸಿಕೊಂಡಿದ್ದರು . ಅವರು ವಿಜಯನಗರ ಜಿಲ್ಲೆಯ ಪುಷ್ಪಗಿರಿಯಲ್ಲಿ ವರದಾಚಾರಿ ಮತ್ತು ಸುಭದ್ರಮ್ಮ ದಂಪತಿಗಳಿಗೆ ಜನಿಸಿದರು.

ಸಂಗೀತ

[ಬದಲಾಯಿಸಿ]

ಅವರು ಕವಿರಾಯುನಿ ಜೋಗಾ ರಾವ್ ಮತ್ತು ಡಾ. ಶ್ರೀಪಾದ ಪಿನಾಕಪಾಣಿಯವರಲ್ಲಿ ಸಂಗೀತದಲ್ಲಿ ತರಬೇತಿ ಪಡೆದರು. ಅವರು ೧೯೫೬ ರಲ್ಲಿ ಸಂಗೀತದಲ್ಲಿ ಡಿಪ್ಲೊಮಾ ಪಡೆದರು. ಬಾಲ ಪ್ರತಿಭೆಯಾಗಿದ್ದ ಈಕೆ ಹರಿಕಥೆಗಳನ್ನೂ ನಡೆಸಿದ್ದರು. []

ಅವರು ಹೈದರಾಬಾದ್‌ನ ಸರ್ಕಾರಿ ಸಂಗೀತ ಕಾಲೇಜಿನ ಪ್ರಾಂಶುಪಾಲರಾಗಿ, ತೆಲುಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಮತ್ತು ಡೀನ್ ಆಗಿ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ೧೯೭೯ ಮತ್ತು ೧೯೮೦ ರ ನಡುವೆ ವಿಜಯನಗರದ ಮಹಾರಾಜರ ಸರ್ಕಾರಿ ಸಂಗೀತ ಮತ್ತು ನೃತ್ಯ ಕಾಲೇಜಿನ ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದರು. ಅವರು ಆಕಾಶವಾಣಿಯಲ್ಲಿ ಭಕ್ತಿ ರಂಜನಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. []

‘ಸುಬ್ಬಾಶಾಸ್ತ್ರಿ’ (೧೯೬೬) ಚಲನಚಿತ್ರಕ್ಕಾಗಿ ಶ್ರೀರಂಗಂ ಅವರು ರಚಿಸಿದ್ದ ಪ್ರಸಿದ್ಧ ಕನ್ನಡ ಚಲನಚಿತ್ರ ಗೀತೆ ಕೃಷ್ಣನ ಕೊಳಲಿನ ಕರೆ ಐದು ದಶಕಗಳ ನಂತರವೂ ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ.

ಪ್ರಶಸ್ತಿಗಳು

[ಬದಲಾಯಿಸಿ]
  • ಅವರಿಗೆ ೧೯೯೨ ರಲ್ಲಿ ' ಪದ್ಮಶ್ರೀ ' ಪುರಸ್ಕಾರ ನೀಡಿ ಗೌರವಿಸಲಾಯಿತು []
  • ಅವರು ತಿರುಮಲ ತಿರುಪತಿ ದೇವಸ್ಥಾನಗಳ ಆಸ್ಥಾನ ವಿದುಷಿ ಆಗಿದ್ದರು.
  • ಕರ್ನಾಟಕ ಸಂಗೀತ ಗಾಯಕ ಯಾದಯ್ಯ ಮತ್ತು ಅನೇಕರು ಅವರ ಶಿಷ್ಯರು.

ಉಲ್ಲೇಖಗಳು

[ಬದಲಾಯಿಸಿ]
  1. "Srirangam Gopalaratnam - rasikas.org". www.rasikas.org. Retrieved 2022-04-02.
  2. "Indian Heritage - Profiles of Artistes, Composers, Musicologists - G". www.indian-heritage.org. Retrieved 2022-04-02.
  3. "Padma Awards" (PDF). Ministry of Home Affairs, Government of India. 2015. Archived from the original (PDF) on 15 ಅಕ್ಟೋಬರ್ 2015. Retrieved 21 July 2015.


ಬಾಹ್ಯ ಕೊಂಡಿಗಳು

[ಬದಲಾಯಿಸಿ]