ಶೈಲಿ ಸಿಂಗ್
ವೈಯುಕ್ತಿಕ ಮಾಹಿತಿ | ||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|
ಜನನ | ಝಾನ್ಸಿ, ಉತ್ತರ ಪ್ರದೇಶ,ಭಾರತ | ೭ ಜನವರಿ ೨೦೦೪|||||||||||||||||||
Sport | ||||||||||||||||||||
ದೇಶ | ಭಾರತ | |||||||||||||||||||
ಕ್ರೀಡೆ | ಉದ್ದ ಜಿಗಿತ | |||||||||||||||||||
Achievements and titles | ||||||||||||||||||||
ವೈಯಕ್ತಿಕ ಪರಮಶ್ರೇಷ್ಠ | ೬.೭೬ ಮೀ ೨೦೨೩) | |||||||||||||||||||
ಪದಕ ದಾಖಲೆ
|
ಶೈಲಿ ಸಿಂಗ್ (ಜನನ ೭ ಜನವರಿ ೨೦೦೪ ) ಉದ್ದ ಜಿಗಿತ ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಭಾರತೀಯ ಕ್ರೀಡಾಪಟು. ಅವರು ವಯೋಮಿತಿಯ ವಿಭಾಗಗಳಲ್ಲಿ, ಭಾರತೀಯ ಜೂನಿಯರ್ ರಾಷ್ಟ್ರೀಯ ಲಾಂಗ್ ಜಂಪ್ ಚಾಂಪಿಯನ್ ಆಗಿದ್ದಾರೆ. ಇವರು ಅಂಡರ್-೧೮ ವಿಭಾಗದಲ್ಲಿ ವಿಶ್ವದ ಅಗ್ರ ೨೦ ಉದ್ದ ಜಿಗಿತಗಾರರಲ್ಲಿ ಸ್ಥಾನ ಪಡೆದಿದ್ದಾರೆ. [೧] [೨] ಅವರು ೧೮ ವರ್ಷದೊಳಗಿನವರ ವಿಭಾಗದಲ್ಲಿ ಉದ್ದ ಜಿಗಿತದಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ. ಅವರು ಭಾರತದ ಅನುಭವಿ ಉದ್ದ ಜಿಗಿತಗಾರ್ತಿ ಅಂಜು ಬಾಬಿ ಜಾರ್ಜ್ ಮತ್ತು ಅವರ ಪತಿ ರಾಬರ್ಟ್ ಬಾಬಿ ಜಾರ್ಜ್ ಅವರಿಂದ ತರಬೇತಿ ಪಡೆದಿದ್ದಾರೆ. [೩]
ವೈಯಕ್ತಿಕ ಜೀವನ ಮತ್ತು ಹಿನ್ನೆಲೆ
[ಬದಲಾಯಿಸಿ]ಸಿಂಗ್ ಅವರು ಉತ್ತರ ಪ್ರದೇಶದ ಝಾನ್ಸಿಯಲ್ಲಿ ೭ ಜನವರಿ ೨೦೦೪ ರಂದು ಜನಿಸಿದರು. ಅವರನ್ನು ತಾಯಿ ವಿನಿತಾ ಸಿಂಗ್ ಬೆಳೆಸಿದರು, ಅವರು ಮೂರು ಮಕ್ಕಳಿಗೆ ಒಂಟಿ ಪೋಷಕಿಯಾಗಿದ್ದಾರೆ. ವಿನಿತಾ ಸಿಂಗ್ ವೃತ್ತಿಯಲ್ಲಿ ಸಣ್ಣ ಸಮಯದ (ಪಾರ್ಟ್ ಟೈಮ್) ಉದ್ಯಮಿ. [೧] [೨]
ಸಿಂಗ್ ಅವರು ಅಂಜು ಬಾಬಿ ಜಾರ್ಜ್ ಸ್ಪೋರ್ಟ್ಸ್ ಫೌಂಡೇಶನ್‌ನಲ್ಲಿ ತರಬೇತಿ ಪಡೆಯಲು ೧೪ ನೇ ವಯಸ್ಸಿನಲ್ಲಿ ಬೆಂಗಳೂರಿಗೆ ತೆರಳಿದರು. [೪] ಜಾರ್ಜ್ ದಂಪತಿಗಳ ಮೇಲ್ವಿಚಾರಣೆಯಲ್ಲಿ ಸಿಂಗ್ ತರಬೇತಿಯನ್ನು ಪ್ರಾರಂಭಿಸಿದರು. [೫] [೨]
ವೃತ್ತಿಪರ ಸಾಧನೆಗಳು
[ಬದಲಾಯಿಸಿ]ಸಿಂಗ್ ಅವರು ೨೦೧೮ ರಲ್ಲಿ ರಾಂಚಿಯಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಯು-೧೬ ವಿಭಾಗದಲ್ಲಿ ಉದ್ದ ಜಿಗಿತದಲ್ಲಿ ಚಿನ್ನದ ಪದಕವನ್ನು ಗೆದ್ದರು, ಅಲ್ಲಿ ಅವರು ೫.೯೪-ಮೀಟರ್ ಜಿಗಿತವನ್ನು ದಾಖಲಿಸಿಸುವ ಮೂಲಕ ಜೂನಿಯರ್ ಉದ್ದ ಜಿಗಿತದ ರಾಷ್ಟ್ರೀಯ ದಾಖಲೆಯನ್ನು ಮುರಿದರು. ೨೦೧೯ ರಲ್ಲಿ, ಅವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆಲ್ಲಲು ೬.೧೫ ಮೀಟರ್‌ಗಳಷ್ಟು ಜಿಗಿಯುವ ಮೂಲಕ ಅಂಡರ್-೧೮ ರಲ್ಲಿ ತಮ್ಮದೇ ಆದ ದಾಖಲೆಯನ್ನು ಉತ್ತಮಪಡಿಸಿದರು. ಇದು ೨೦೨೦ ರಲ್ಲಿ ಐಎಎಎಫ್ ಅಂಡರ್-೨೦ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅರ್ಹತಾ ಮಾರ್ಕ್‌ಗಿಂತ ಮುಂದಿತ್ತು. [೬] ಭಾರತದ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಸಿಂಗ್ ಅವರ ಯಶಸ್ಸಿಗೆ ಅಭಿನಂದನೆ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. [೭] [೨] ಜೂನ್ ೨೦೨೧ ರಲ್ಲಿ, ಪಟಿಯಾಲಾದಲ್ಲಿ ನಡೆದ ಹಿರಿಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗಳಲ್ಲಿ (ರಾಷ್ಟ್ರೀಯ ಅಂತರ-ರಾಜ್ಯ) ಶೈಲಿ ೬.೪೮ ಮೀ ಜಿಗಿದ, ಹೊಸ ಯು೨೦ ದಾಖಲೆ ಸೃಷ್ಟಿಸಿದರು. ಶೈಲಿ ಸಿಂಗ್ ೨೦೨೧ ರ ವಿಶ್ವ ಅಥ್ಲೆಟಿಕ್ ಯು೨೦ ಚಾಂಪಿಯನ್‌ಶಿಪ್‌ನಲ್ಲಿ ಉದ್ದ ಜಿಗಿತದಲ್ಲಿ ೬.೫೯ ಮೀ ಜಿಗಿತವನ್ನು ದಾಖಲಿಸಿ ಬೆಳ್ಳಿ ಪದಕವನ್ನು ಪಡೆದರು. [೮]
ಅಂತರರಾಷ್ಟ್ರೀಯ ಸ್ಪರ್ಧೆಗಳು
[ಬದಲಾಯಿಸಿ]ವರ್ಷ | ಪಂದ್ಯ | ಸ್ಥಳ | ಸ್ಥಾನ | ಫಲಿತಾಂಶ | ಶರಾ |
---|---|---|---|---|---|
Representing ಭಾರತ | |||||
೨೦೨೧ | ವಿಶ್ವ ಯು೨೦ ಚಾಂಪಿಯನ್‌ಶಿಪ್ | ನೈರೋಬಿ, ಕೀನ್ಯಾ | ದ್ವಿತೀಯ | ಉದ್ದ ಜಿಗಿತ | ೬.೫೯ ಮೀ |
೨೦೨೩ | ಏಷ್ಯನ್ ಚಾಂಪಿಯನ್‌ಶಿಪ್ | ಬ್ಯಾಂಕಾಕ್, ಥೈಲ್ಯಾಂಡ್ | ದ್ವಿತೀಯ | ಉದ್ದ ಜಿಗಿತ | ೬.೫೪ ಮೀ |
ಏಷ್ಯನ್ ಚಾಂಪಿಯನ್‌ಶಿಪ್ |
ಹ್ಯಾಂಗ್ಝೌ, ಚೀನಾ |
೫ ನೇ | ಉದ್ದ ಜಿಗಿತ | ೬.೪೮ ಮೀ |
ಪದಕಗಳು
[ಬದಲಾಯಿಸಿ]- ಚಿನ್ನದ ಪದಕ - ೧೬ ವಯೋಮಿತಿಯ ಉದ್ದ ಜಿಗಿತದಲ್ಲಿ ರಾಷ್ರೀಯ ಜುನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ರಾಂಚಿ, ೨೦೧೮
- ಚಿನ್ನದ ಪದಕ - ೧೮ ವಯೋಮಿತಿಯ ರಾಷ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ೨೦೧೯ ಗುಂಟುರ್ ,ಆ೦ಧ್ರಪ್ರದೇಶ
- ಬೆಳ್ಳಿ ಪದಕ - ೨೦ ವಯೋಮಿತಿಯ ವಲ್ಡ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ ನೈರೋಬಿ, ೨೦೨೧
- ಬೆಳ್ಳಿ ಪದಕ - ಓಪನ್ ಕೆಟಗರಿ ರಾಷ್ಟ್ರೀಯ ಗೇಮ್ ೨೦೨೨, ಗುಜರಾತ್
- ಚಿನ್ನದ ಪದಕ - ಉದ್ದ ಜಿಗಿತ ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಬೆಂಗಳೂರು ಅಕ್ಟೋಬರ್ ೨೦೨೨
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Long Jumper Shaili Broke Two National Records. Is She The Next Big Thing In Indian Athletics?". IndiaTimes (in Indian English). 2019-11-05. Retrieved 2021-02-17.
- ↑ ೨.೦ ೨.೧ ೨.೨ ೨.೩ "शैली सिंह: भारतीय एथलीटों की दुनिया का चमकता सितारा". BBC News हिंदी (in ಹಿಂದಿ). Retrieved 2021-02-17.
- ↑ "Coach tips Olympics future for teen prodigy Shaili Singh". The New Indian Express. Retrieved 2021-02-17.
- ↑ "Jr National Athletics: Long Jumper Shaili Singh Breaks National Record - SheThePeople TV" (in ಅಮೆರಿಕನ್ ಇಂಗ್ಲಿಷ್). Retrieved 2021-02-17.
- ↑ Rayan, Stan (2019-01-25). "Shaili Singh: Made for the long jump". The Hindu (in Indian English). ISSN 0971-751X. Retrieved 2021-02-17.
- ↑ "Long-jumping and breaking records: Shaili Singh, remember the name". The Indian Express (in ಇಂಗ್ಲಿಷ್). 2019-11-07. Retrieved 2021-02-17.
- ↑ ANI (2019-11-05). "Rijiju lauds Shaili Singh for scripting national record". Business Standard India. Retrieved 2021-02-17.
- ↑ "Shaili Singh wins silver at World U-20 Athletics Championships". The Bridge (in ಇಂಗ್ಲಿಷ್). 2021-08-22. Retrieved 2021-10-01.