ಅಂಜು ಬಾಬಿ ಜಾರ್ಜ್
ಅಂಜು ಬಾಬಿ ಜಾರ್ಜ್ | |
---|---|
Born | Changanassery, Kerala, India | ೧೯ ಏಪ್ರಿಲ್ ೧೯೭೭
Nationality | Indian |
ಪದಕ ದಾಖಲೆ | ||
---|---|---|
Representing ಭಾರತ | ||
Women's athletics | ||
World Championships | ||
2003 Paris | Long jump |
ಅಂಜು ಬಾಬಿ ಜಾರ್ಜ್ (ಮಲಯಾಳಂ:അഞ്ജു ബോബി ജോര്ജ്ജ്) (1977 ರ ಏಪ್ರಿಲ್ 19 ರಂದು ಜನಿಸಿದರು.) ಅವರು ಭಾರತೀಯ ಕ್ರೀಡಾಪಟುವಾಗಿದ್ದಾರೆ. ಅಂಜು ಬಾಬಿ ಜಾರ್ಜ್,ಪ್ಯಾರಿಸ್ ನಲ್ಲಿ ನಡೆದ 2003 ರ ವರ್ಲ್ಡ್ ಚ್ಯಾಂಪಿಯನ್ಷಿಪ್ ಇನ್ ಅಥ್ಲೆಟಿಕ್ಸ್(ಅಥ್ಲೆಟಿಕ್ಸ್ ನಲ್ಲಿ ವಿಶ್ವ ಚ್ಯಾಂಪಿಯನ್ಷಿಪ್) ನ ಲಾಂಗ್ ಜಂಪ್(ಉದ್ದನೆಗೆತ) ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಸಾಧನೆಯ ಮೂಲಕ ಅವರು ವರ್ಲ್ಡ್ ಚ್ಯಾಂಪಿಯನ್ಷಿಪ್ ಅಥ್ಲೆಟಿಕ್ಸ್ ನಲ್ಲಿ 6.70 ಮಿ. ಅನ್ನು ಉದ್ದ ಜಿಗಿತದಲ್ಲಿ ಪದಕ ಗಳಿಸಿದ ಭಾರತದ ಮೊದಲ ಕ್ರೀಡಾಪಟುವಾಗಿದ್ದಾರೆ. 2005 ರಲ್ಲಿನ IAAF ವಿಶ್ವ ಅಥ್ಲೆಟಿಕ್ಸ್ ಫೈನಲ್ ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡರು, ಇದು ಅವರ ಅತ್ಯುತ್ತಮ ಪ್ರದರ್ಶನವೆಂದು ಅವರು ಪರಿಗಣಿಸುತ್ತಾರೆ.
ಆರಂಭಿಕ ಜೀವನ
[ಬದಲಾಯಿಸಿ]ಅಂಜು, ಕೇರಳದ ಕೊಟ್ಟಯಮ್ ಜಿಲ್ಲಯಲ್ಲಿ, ಚಂಗನಾಶ್ಶೀರಿಯಲ್ಲಿನ ಕೊಚುಪರಮ್ಬಿಲ್ ಕುಟುಂಬದಲ್ಲಿ K.T.ಮಾರ್ಕೋಸ್ ರವರ ಪುತ್ರಿಯಾಗಿ ಜನಿಸಿದರು. ಅವರ ತಂದೆಯಿಂದಲೇ ಅಥ್ಲೆಟಿಕ್ಸ್ ಅನ್ನು ಪ್ರಾರಂಭಿಸಿದರು. ಅದರ ಜೊತೆಗೆ ಕೊರ್ತೊಡೆ ಶಾಲೆಯಲ್ಲಿದ್ದ ಅವರ ತರಬೇತುದಾರರಿಂದಾಗಿ ಮುಂದೆ ಅವರ ಆಸಕ್ತಿ ಬೆಳೆಯಿತು. ಪ್ರಾಥಮಿಕ ಶಿಕ್ಷಣವನ್ನು CKM ಕೊರ್ತೊಡೆ ಶಾಲೆಯಲ್ಲಿ ಅವರು ಪೂರ್ಣಗೊಳಿಸಿದರು. ಅದಲ್ಲದೇ ವಿಮಲಾ ಕಾಲೇಜಿನಿಂದ ಪದವಿ ಶಿಕ್ಷಣ ಪಡೆದುಕೊಂಡರು. 1991-92 ರಲ್ಲಿ ನಡೆದ ಶಾಲಾ ಅಥ್ಲೆಟಿಕ್ ಕ್ರೀಡೆಗಳಲ್ಲಿ ಅವರು 100 ಮಿ ಹರ್ಡ್ ಲ್ಸ್ (ಓಟದ ಪಂದ್ಯ) ಮತ್ತು ರಿಲೇ ಯನ್ನು ಗೆದ್ದುಕೊಂಡರು. ಅಲ್ಲದೇ ಲಾಂಗ್ ಜಂಪ್ ಮತ್ತು ಹೈಜಂಪ್ (ಎತ್ತರ ನೆಗೆತ) ಕ್ರೀಡೆಗಳಲ್ಲಿ ಎರಡನೆ ಸ್ಥಾನ ಪಡೆದುಕೊಳ್ಳುವ ಮೂಲಕ ಮಹಿಳಾ ಚ್ಯಾಂಪಿಯನ್ ಆದರು. ಅಂಜು ಅವರ ಪ್ರತಿಭೆ ನ್ಯಾಷನಲ್ ಸ್ಕೂಲ್ಸ್ ಆಟಗಳಲ್ಲಿ ಗುರುತಿಸಲ್ಪಟ್ಟಿತು. ಈ ಕ್ರೀಡೆಗಳಲ್ಲಿ ಅವರು 100ಮಿ ಹರ್ಡ್ ಲ್ಸ್ ಮತ್ತು 4x100ಮಿ ರಿಲೇಯಲ್ಲಿ ಮೂರನೆ ಸ್ಥಾನ ಗಳಿಸಿದ್ದರು. ಅವರು ಕ್ಯಾಲಿಕಟ್ ವಿಶ್ವವಿದ್ಯಾನಿಯದಲ್ಲಿದ್ದರು.
ವೃತ್ತಿಜೀವನ
[ಬದಲಾಯಿಸಿ]ಅವರ ವೃತ್ತಿಜೀವನವನ್ನು(ಕ್ರೀಡೆಯ ಏಳು ವಿವಿಧ ಕ್ರೀಡಾ ಸ್ಪರ್ಧೆಗಳು) ಹೆಪ್ಟತ್ಲಾನ್ ನಿಂದ ಪ್ರಾರಂಭಿಸಿದರೂ ಕೂಡ ಅನಂತರ ಅವರು ಉದ್ದದ ಜಿಗಿತದ ಕ್ರೀಡೆಗಳ ಮೇಲೆ ಗಮನ ಹರಿಸತೊಡಗಿದರು. ಅಲ್ಲದೇ 1996 ರ ದೆಹಲಿ ಕಿರಿಯರ ಏಷ್ಯನ್ ಚ್ಯಾಂಪಿಯನ್ಷಿಪ್ ನಲ್ಲಿ ಲಾಂಗ್ ಜಂಪ್ ಪದಕ ಗೆದ್ದರು. 1999 ರಲ್ಲಿ ಅಂಜು ಬೆಂಗಳೂರು ಫೆಡರೇಷನ್ ಕಪ್ ನ ಟ್ರಿಪಲ್ ಜಂಪ್ ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು, ಹಾಗು ನೇಪಾಳದ ಸೌತ್ ಏಷ್ಯನ್ ಫೆಡರೇಷನ್ ಗೇಮ್ಸ್ ನಲ್ಲಿ ಬೆಳ್ಳಿಯ ಪದಕ ಗಳಿಸಿದರು. 2001ರಲ್ಲಿ ತಿರುವನಂತಪುರಂ ನಲ್ಲಿ ನಡೆದ ನ್ಯಾಷನಲ್ ಸರ್ಕಿಟ್ ಮೀಟ್(ರಾಷ್ಟ್ರೀಯ ಶ್ರೇಣಿ ಕೂಟ) ನ, ಲಾಂಗ್ ಜಂಪ್ ನಲ್ಲಿ 6.74 ಮಿ ಉದ್ದ ಜಿಗಿತದ ಮೂಲಕ ಅವರ ಮೊದಲ ದಾಖಲೆಯನ್ನು ಇನ್ನಷ್ಟೂ ಉತ್ತಮಗೊಳಿದರು. ಇದೇ ವರ್ಷದ ಲೂಧಿಯಾನ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಡೆದ ಲಾಂಗ್ ಜಂಪ್ ಮತ್ತು ಟ್ರಿಪಲ್ ಜಂಪ್ ಕ್ರೀಡೆಗಳಲ್ಲಿ ಚಿನ್ನದ ಪದಕವನ್ನೂ ಕೂಡ ಅವರು ಗೆದ್ದುಕೊಂಡರು. ಹೈದ್ರಾಬಾದ್ ರಾಷ್ಟ್ರೀಯ ಕ್ರೀಡಾಕೂಟದಲ್ಲೂ ಅಂಜು ಅವರು ಸ್ಪರ್ಧಿಸಿದ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪದಕದ ರಾಣಿಯಾಗಿ ಮೆರೆದಿದ್ದರು. ಮ್ಯಾಂಚೆಸ್ಟರ್ ನಲ್ಲಿ ನಡೆದ 2002 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 6.49 ಮಿ ಗುರಿ ಸಾಧಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡರು. ಬುಸಾನ್ ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲೂ ಕೂಡ ಅವರು ಚಿನ್ನದ ಪದಕ ಗಳಿಸಿದರು. ಪ್ಯಾರಿಸ್ ನಲ್ಲಿ ನಡೆದ 2003 ರ ವರ್ಲ್ಡ್ ಚ್ಯಾಂಪಿಯನ್ಷಿಪ್ಸ್ ಇನ್ ಅಥ್ಲೆಟಿಕ್ಸ್ ನ ಲಾಂಗ್ ಜಂಪ್ ನಲ್ಲಿ 6.70 ಮಿ ಗಡಿಯನ್ನು ಮೀರಿಸಿ ಕಂಚಿನ ಪದಕ ಗಳಿಸಿ, ಅವರು ದಾಖಲೆ ನಿರ್ಮಿಸಿದರು. ಅಲ್ಲದೇ ವರ್ಲ್ಡ್ ಚ್ಯಾಂಪಿಯನ್ಷಿಪ್ಸ್ ಇನ್ ಅಥ್ಲೆಟಿಕ್ಸ್ ನಲ್ಲಿ ಪದಕ ವಿಜೇತ ಮೊದಲ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 2003 ರ ಆಫ್ರೊ-ಏಷ್ಯನ್ ಕ್ರೀಡಾಕೂಟದಲ್ಲಿಯೂ ಕೂಡ ಚಿನ್ನದ ಪದಕ ಗಳಿಸಿದ್ದರು. ಅಥೆನ್ಸ್ ನಲ್ಲಿ ನಡೆದ 2004 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ 6.83ಮಿ ಜಿಗಿತದ ಮೂಲಕ ಅತ್ಯುತ್ತಮ ಸಾಧನೆಗೈದು ಆರನೇ ಸ್ಥಾನ ಗಳಿಸಿದರು. 2005 ರ ಸೆಪ್ಟೆಂಬರ್ ನಲ್ಲಿ, ದಕ್ಷಿಣ ಕೊರಿಯಾದ ಇನ್ ಚಿಯಾನ್ ನಗರದಲ್ಲಿ ನಡೆದ 16 ನೇ ಏಷ್ಯನ್ ಅಥ್ಲೆಟಿಕ್ಸ್ ಚ್ಯಾಂಪಿಯನ್ಷಿಪ್ಸ್ ನ ಮಹಿಳೆಯರ ಲಾಂಗ್ ಜಂಪ್ ನಲ್ಲಿ 6.65 ಮಿ ದಾಖಲೆ ಮೂಲಕ ಅವರು ಚಿನ್ನದ ಪದಕ ಗೆದ್ದುಕೊಂಡರು. 2005 ರಲ್ಲಿ ನಡೆದ IAAF ವರ್ಲ್ಡ್ ಅಥ್ಲೆಟಿಕ್ಸ್ ಫೈನಲ್ ನಲ್ಲಿ 6.75 ಮಿ ಅನ್ನು ಸಾಧಿಸುವ ಮೂಲಕ ಬೆಳ್ಳಿಯ ಪದಕ ಗೆದ್ದುಕೊಂಡರು. ಇದು ಅವರ ಅತ್ಯುತ್ತಮ ಪ್ರದರ್ಶನವೆಂದು ಅವರು ಭಾವಿಸುತ್ತಾರೆ. ದೋಹಾದಲ್ಲಿ 2006 ರಲ್ಲಿ ನಡೆದ 15ನೇ ಏಷ್ಯನ್ ಕ್ರೀಡಾಕೂಟದ ಮಹಿಳಾ ಲಾಂಗ್ ಜಂಪ್ ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. 2007 ರಲ್ಲಿ, ಅಂಜು ರವರು ಅಮ್ಮನ್ (ಜೋರ್ಡಾನ್) ನಲ್ಲಿ ನಡೆದ 17ನೇ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ನಲ್ಲಿ 6.65ಮಿ ಉದ ಜಿಗಿತದಲ್ಲಿ ಬೆಳ್ಳಿ ಪದಕಕ್ಕೆ ಪಾತ್ರರಾದರು. ಇದರಿಂದಾಗಿ ಅವರು 2007 ರ ಆಗಸ್ಟ್ ನಲ್ಲಿ ನಡೆಯುವ ಒಸಾಕ ವರ್ಲ್ಡ್ ಚ್ಯಾಂಪಿಯನ್ಷಿಪ್ ಗೆ ಆಯ್ಕೆಯಾದರು. ಅಲ್ಲದೇ 9ನೇ ಸ್ಥಾನ ಪಡೆದುಕೊಂಡರು. ಅಂಜು, ಅವರ 2008 ನೇ ವರ್ಷವನ್ನು ದೋಹಾ(ಕತಾರ್)ದಲ್ಲಿ ನಡೆದ 3ನೇ ಏಷ್ಯನ್ ಇನ್ ಡೋರ್ ಚ್ಯಾಂಪಿಯನ್ಷಿಪ್ ಇನ್ ಅಥ್ಲೆಟಿಕ್ಸ್ ನಲ್ಲಿ 6.38ಮಿ ಉದ್ದದ ಜಿಗಿತದ ಮೂಲಕ ಬೆಳ್ಳಿಯ ಪದಕ ಗೆದ್ದುಕೊಳ್ಳುವುದರೊಂದಿಗೆ ಆರಂಭಿಸಿದರು. ಅಲ್ಲದೇ ಕೊಚ್ಚಿ (ಭಾರತದ ಕೇರಳದಲ್ಲಿರುವ )ಯಲ್ಲಿ ನಡೆದ 3ನೇ ದಕ್ಷಿಣ ಏಷ್ಯನ್ ಅಥ್ಲೆಟಿಕ್ಸ್ ಚ್ಯಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದುಕೊಳ್ಳುವ ಮೂಲಕ ಅವರ ಉದ್ದ ನೆಗೆತದ ಅಂತರವನ್ನು 6.50ಮಿ ಗೆಹೆಚ್ಚಿಸಿಕೊಂಡರು. ಇವರನ್ನು ಭಾರತ ಸರ್ಕಾರದ ಶ್ರೇಷ್ಠ ಕ್ರೀಡಾಪಟುವೆಂದು ಪರಿಗಣಿಸಿ 2002-2003 ರ ಸಾಲಿನ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಷ್ಟೇ ಅಲ್ಲದೇ ಅವರು ವಿಶ್ವ ಅಥ್ಲೆಟಿಕ್ ಕೂಟದಲ್ಲಿ ಯಶಸ್ವಿಯಾದರು. ನಂತರ ದೇಶದ ಅತ್ಯಂತ ಗೌರವಾನ್ವಿತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನವನ್ನು 2003-2004 ನೇ ಸಾಲಿನಲ್ಲಿ ನೀಡಲಾಯಿತು. ಇವರಿಗೆ 2004 ರಲ್ಲಿ ಪದ್ಮ ಶ್ರೀ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಇದು ಭಾರತದ ನಾಲ್ಕನೆ ಅತ್ಯಂತ ಉನ್ನತ, ಗೌರವಾನ್ವಿತ ನಾಗರಿಕ ಪ್ರಶಸ್ತಿಯಾಗಿದೆ. ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಷನ್ಸ್ (IAAF) ನ 2007 ರ ಫೆಬ್ರವರಿ 12 ರಂದಿನ ಕ್ರಮಾಂಕದಲ್ಲಿ ಅಂಜುರವರು 28 ನೇ ಕ್ರಮಾಂಕಿತರಾಗಿದ್ದಾರೆ.(ಒಮ್ಮೆ ಅವರು ವಿಶ್ವದ 4 ನೇ ಕ್ರಮಾಂಕಿತರಾಗಿದ್ದರು). ಅಂಜು ಅವರ ಕಠಿಣ ಪರಿಶ್ರಮ ಮತ್ತು ದೃಢವಾದ ಯೋಜನೆಯಿಂದಾಗಿ ಕೇವಲ ಎರಡು ವರ್ಷಗಳಲ್ಲಿ 2001 ರ 61 ನೇ ಕ್ರಮಾಂಕದಿಂದ 2003 ರ ಹೊತ್ತಿಗೆ 6 ನೇ ಕ್ರಮಾಂಕದ ಪದೋನ್ನತಿ ಸಾಧಿಸಿದರು. ಅವರ ಯಶಸ್ಸಿನ ಕೀರ್ತಿಯು ಅವರ ಪತಿ ಮತ್ತು ತರಬೇತುದಾರರಾದ ರಾಬರ್ಟ್ ಬಾಬಿ ಜಾರ್ಜ್ ಅವರಿಗೆ ಸಲ್ಲುತ್ತದೆ. ಅಂಜು ಪ್ರಕಾರ ಇವರು ತಮ್ಮ ಮೇಲೆ ಅತ್ಯಂತ ಪ್ರಭಾವಬೀರಿದ ವ್ಯಕ್ತಿಯಾಗಿದ್ದಾರೆ, ಅಲ್ಲದೇ ಅವರ ಗುರಿ ತಲುಪಲು ಮತ್ತು ಅವರ ಸಾಮರ್ಥ್ಯವನ್ನು ಮನಗಾಣಲು ಸಹಾಯ ಮಾಡಿದವರಾಗಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಟ್ರಿಪಲ್ ಜಂಪ್ ನಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಬಾಬಿಯವರು ಅಂಜುರವರಿಗೆ ಪೂರ್ಣಾವಧಿಯ ತರಬೇತುದಾರರಾಗಲು 1998 ರಲ್ಲಿ ಅವರ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಇವರು ಗೌರವಾನ್ವಿತ ಕ್ರೀಡಾ ಕುಟುಂಬಕ್ಕೆ ಸೇರಿದವರಾಗಿದ್ದು, ಪ್ರಖ್ಯಾತ ವಾಲಿಬಾಲ್ ಆಟಗಾರ ಜಿಮ್ಮಿ ಜಾರ್ಜ್ ರವರ ಕಿರಿಯ ಸಹೋದರರಾಗಿದ್ದಾರೆ. ಅಂಜು ಮತ್ತು ಬಾಬಿಯವರು, ವಿಶ್ವ ಮಟ್ಟದ ಕ್ರೀಡಾಪಂದ್ಯಗಳಲ್ಲಿ ಸ್ಪರ್ಧಿಸಲು ಅಂತರರಾಷ್ಟ್ರೀಯವಾಗಿ ಪಾಲ್ಗೊಳ್ಳುವ ಅಗತ್ಯವಿದೆ ಎಂಬುದನ್ನು ಮನಗಂಡರು. ಅಲ್ಲದೇ ಅದಕ್ಕೆ ಅಗತ್ಯ ತರಬೇತಿ ವ್ಯವಸ್ಥೆ ಮಾಡಿದರು. ವಿಶ್ವ ಅಥ್ಲೆಟಿಕ್ಸ್ ಕೂಟದ ಮೊದಲು ವಿಶ್ವ ದಾಖಲೆ ಹೊಂದಿರುವ ಮೈಕ್ ಪಾವೆಲ್ ರವರಿಂದ ತರಬೇತಿ ಪಡೆದರು. ಇದು ಅವರಿಗೆ ಆಟವಾಡುವ ತಂತ್ರದಲ್ಲಿ ಅಮೂಲ್ಯ ಅನುಭವ- ಖ್ಯಾತಿಯನ್ನು ತಂದುಕೊಟ್ಟಿತು. ಅವರು 2004 ರ ಅಥೆನ್ಸ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದರು, ಆದರೆ ಪದಕ ಗೆಲ್ಲುವಲ್ಲಿ ವಿಫಲರಾದರು. ಅವರು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲೂ ಕೂಡ ಸ್ಪರ್ಧಿಸಿದರು, ಆದರೆ ಅವರ ಎಲ್ಲಾ ಮೂರು ಪ್ರಯತ್ನಗಳಲ್ಲೂ ಫೌಲ್ (ನಿಯಮ ಉಲ್ಲಂಘನೆ)ಆಗುವ ಮೂಲಕ ಮಹಿಳಾ ಲಾಂಗ್ ಜಂಪ್ ಆಟಕ್ಕೆ ಆಯ್ಕೆಯಾಗುವಲ್ಲಿ ವಿಫಲರಾದರು.
ವೈಯಕ್ತಿಕ ಜೀವನ
[ಬದಲಾಯಿಸಿ]ಅಂಜು, ರಾಬರ್ಟ್ ಬಾಬಿ ಜಾರ್ಜ್ ರವರನ್ನು ಮದುವೆಯಾದರು. ಇವರು ಟ್ರಿಪಲ್ ಜಂಪ್ ನಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದು, ಅವರ ತರಬೇತುದಾರರೂ ಕೂಡ ಆಗಿದ್ದಾರೆ. ಇವರು ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಮತ್ತು ತರಬೇತಿಪಡೆಯುತ್ತಿದ್ದಾರೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಭಾರತೀಯ ಮಹಿಳಾ ಕ್ರೀಡಾಪಟುಗಳ ಪಟ್ಟಿ
- ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಕೇರಳದವರ ಪಟ್ಟಿ
- 2008 ರ ಒಲಿಂಪಿಕ್ಸ್ ಗಾಗಿ ಭಾರತದ ತಂಡ
- ಅಥ್ಲೆಟಿಕ್ಸ್ ನಲ್ಲಿ ಭಾರತದ ರಾಷ್ಟ್ರೀಯ ದಾಖಲೆ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using infobox person with unknown parameters
- Articles with hCards
- Persondata templates without short description parameter
- 1977ರಲ್ಲಿ ಜನಿಸಿದವರು
- ಬದುಕಿರುವ ವ್ಯಕ್ತಿಗಳು
- ಭಾರತೀಯ ಕ್ರೀಡಾಪಟುಗಳು
- 2004 ರ ಬೇಸಿಗೆಯ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು
- 2008 ರ ಬೇಸಿಗೆಯ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು
- ಭಾರತಕ್ಕೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಟ್ಟವರು
- 2002 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು
- ಭಾರತದ ಪರವಾಗಿ ಆಡಿದ ಕಾಮನ್ ವೆಲ್ತ್ ಕ್ರೀಡಾಕೂಟದ ಸ್ಪರ್ಧಿಗಳು
- ರಾಜೀವ್ ಗಾಂಧಿ ಖೇಲ್ ರತ್ನ ಸ್ವೀಕೃತರು
- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
- ಕೊಟ್ಟಾಯಂ ನಿಂದ ಬಂದ ಜನರು
- ಮಲಯಾಳಿಗಳು
- ಭಾರತದ ಒಲಿಂಪಿಕ್ ಕ್ರೀಡಾಪಟುಗಳು
- ಕೇರಳದ ಜನರು
- ಕೇರಳದ ಕ್ರೀಡಾಳುಗಳು
- ಅರ್ಜುನ್ ಪ್ರಶಸ್ತಿಯನ್ನು ಪಡೆದವರು
- ಭಾರತದ ಲಾಂಗ್ ಜಂಪರ್ ಗಳು
- ಭಾರತಕ್ಕೆ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಟ್ಟವರು
- ಭಾರತೀಯ ರೋಮನ್ ಕ್ಯಾಥೊಲಿಕ್ಕರು
- ಕ್ರೀಡಾಪಟುಗಳು