ವಿಷಯಕ್ಕೆ ಹೋಗು

ಶೇಂಗಾ ಹೋಳಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶೇಂಗಾ ಹೋಳಿಗೆ[]ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಮಾಡುವ ಒಂದು ಸಿಹಿ ತಿಂಡಿಯಾಗಿದೆ. ಒಬ್ಬಟ್ಟು ಮಾಡುವ ರೀತಿಯಲ್ಲಿಯೇ ಈ ಹೋಳಿಗೆಯನ್ನು ಮಾಡಲಾಗುತ್ತದೆ, ಉತ್ತರ ಕರ್ನಾಟಕದಲ್ಲಿ ಇದನ್ನು ಹೆಚ್ಚಾಗಿ ಹಬ್ಬ,ಮದುವೆ,ಸಿಮಂತ ಸಮಯದಲ್ಲಿ ಮಾಡುತ್ತಾರೆ.

ಬಳಸುವ ಸಾಮಗ್ರಿಗಳು

[ಬದಲಾಯಿಸಿ]

ಮಾಡುವ ವಿಧಾನ

[ಬದಲಾಯಿಸಿ]

ಶೇಂಗಾ ಆಥವಾ ನೆಲಗಡಲೆ ಅಥವಾ ಕಡಲೆಕಾಳು ಬಳಸಿ ಇದನ್ನು ಮಾಡಲಾಗುತ್ತದೆ. ಶೇಂಗಾವನ್ನು ಸ್ವಚ್ಛಗೊಳಿಸಿ ಅದನ್ನು ಚೆನ್ನಾಗಿ ಹುರಿಯಬೇಕು. ಶೇಂಗಾವನ್ನು ರುಬ್ಬಿ ಅದಕ್ಕೆ ಬೆಲ್ಲವನ್ನು ಸೇರಿಸಬೇಕು ನಂತರ ಅದಕ್ಕೆ ಎಳ್ಳನ್ನು ಬೆರೆಸಿ, ಮತ್ತೊಮ್ಮೆ ರುಬ್ಬಿಕೊಳ್ಳಬೇಕು. ಎಲ್ಲವನ್ನು ಚೆನ್ನಾಗಿ ಮಿಶ್ರಣಗೊಳಿಸಬೇಕು. ಒಂದು ಬದಿಯಲ್ಲಿ ಗೋಧಿ ಹಿಟ್ಟನ್ನು ಚಪಾತಿ ಮಾಡುವ ಹಿಟ್ಟಿನ ಹಾಗೇ ನಾದಿಕೊಳ್ಳಬೇಕು. ನಂತರ ಶೇಂಗಾದ[] ಮಿಶ್ರಣವನ್ನು ಉಂಡೆಯ ರೀತಿಯಲ್ಲಿ ಮಾಡಿಕೊಂಡು ಗೋಧಿ ಹಿಟ್ಟಿನೊಂದಿಗೆ ಸೇರಿಸಿ ಚಪಾತಿಯ ಹಾಗೇ ಗುಂಡಗೆ ಮಾಡಬೇಕು ಆಗ ಅದನ್ನು ಚಪಾತಿಯ ಹಾಗೇ ತವೆಯ ಮೇಲೆ ಬೇಯಿಸಿಕೊಂಡರೆ ಸಾಕು. ಇದನ್ನು ತುಪ್ಪದೊಂದಿಗೆ ತಿನ್ನಬಹುದು

ಪೋಷಕಾಂಶಗಳು ಮತ್ತು ಆರೋಗ್ಯ

[ಬದಲಾಯಿಸಿ]

ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ6, ನಯಾಸಿನ್, ಫೋಲೆಟ್, ಪೊಟ್ಯಾಶಿಯಂ[], ಸೋಡಿಯಂ, ಒಳ್ಳೆಯ ಕೊಲೆಸ್ಟ್ರಾಲ್, ಹೃದಯಕ್ಕೆ ಸಹಕಾರಿಯಾದ ಒಳ್ಳೆಯ ಕೊಬ್ಬಿನ ಅಂಶ, ಪ್ರೋಟೀನ್ ಅಂಶ, ನಾರಿನ ಅಂಶ,ಕಾರ್ಬೋಹೈಡ್ರೇಟ್ ಅಂಶ, ಕ್ಯಾಲೋರಿಗಳು, ಸಕ್ಕರೆ ಅಂಶ, ಕಬ್ಬಿಣ, ಮೆಗ್ನೀಷಿಯಂ, ಕ್ಯಾಲ್ಸಿಯಂ ಮತ್ತು ಫಾಸ್ಪರಸ್. ಕಡಲೆ ಬೀಜಗಳನ್ನು ನೆನೆಸಿ ಸೇವನೆ ಮಾಡುವುದರಿಂದ ಉಂಟಾಗುವ ಆರೋಗ್ಯದ ಲಾಭಗಳು ಕಡಲೆ ಬೀಜಗಳಲ್ಲಿ ಹೃದಯಕ್ಕೆ ಸಹಕಾರಿಯಾದ ಕೆಲವೊಂದು ಅಂಶಗಳು ಕಂಡು ಬರುತ್ತವೆ ಎಂಬುದು ತಿಳಿದಿದೆ. ಹೀಗಾಗಿ ಹೃದಯವನ್ನು ಮತ್ತು ಹೃದಯ ರಕ್ತನಾಳಗಳನ್ನು ಕಡಲೆ ಬೀಜಗಳು ಆರೋಗ್ಯಕರವಾಗಿ ಕಾಪಾಡುತ್ತವೆ. ಸಾಧಾರಣವಾಗಿ ಹಸಿ ಕಡಲೆ ಬೀಜ ಅಥವಾ ಹುರಿದು ತಿನ್ನುವುದಕ್ಕಿಂತ ಕಡಲೆ ಬೀಜಗಳನ್ನು ನೆನೆಸಿ ಆಗಾಗ ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಲಾಭಗಳು ಜಾಸ್ತಿ. ಹೃದಯಕ್ಕೆ ಸಂಬಂಧಪಟ್ಟಂತೆ ನೋಡುವುದಾದರೆ ರಕ್ತನಾಳಗಳಲ್ಲಿ ರಕ್ತಸಂಚಾರವನ್ನು ಹೆಚ್ಚು ಮಾಡುವ ಗುಣ ಕಡಲೇ ಬೀಜಗಳಲ್ಲಿ ಕಂಡು ಬರುತ್ತದೆ. []ಹೀಗಾಗಿ ಇಡೀ ದೇಹದ ತುಂಬಾ ಅತ್ಯುತ್ತಮ ಪ್ರಮಾಣದ ರಕ್ತ ಸಂಚಾರ ಉಂಟಾಗುವಂತೆ ಮಾಡುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Shenga holige recipe | How to make kadlekai obbattu | Peanut poli using wheat flour". www.vegrecipesofkarnataka.com (in ಇಂಗ್ಲಿಷ್). Retrieved 29 April 2023.
  2. "Special Shenga Holige / Groundnut Poli available at lowest ever prices!". Flora Foods. Archived from the original on 28 ಏಪ್ರಿಲ್ 2023. Retrieved 29 April 2023.
  3. "Shenga Holige for that rich taste and health". 8 November 2022. Retrieved 29 April 2023.
  4. "Special Shenga Holige / Groundnut Poli available at lowest ever prices!". Flora Foods. Archived from the original on 28 ಏಪ್ರಿಲ್ 2023. Retrieved 29 April 2023.