ಶಿಲಾ ಮೆಹ್ತಾ
ಶಿಲಾ ಮೆಹ್ತಾ | |
---|---|
ಜನನ | |
ವೃತ್ತಿ(ಗಳು) | ನೃತ್ಯ ಕಲಾವಿದೆ, ನೃತ್ಯ ಸಂಯೊಜಕಿ, ಶಿಕ್ಷಕಿ |
Dances | ಕಥಕ್ |
ಜಾಲತಾಣ | www |
ಶಿಲಾ ಮೆಹ್ತಾ ಭಾರತೀಯ ಶಾಸ್ತ್ರೀಯ ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ, ಶಿಕ್ಷಕಿ. ಇವರು ಉತ್ತರ ಭಾರತದ ಕಥಕ್ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದಾರೆ. ತಮ್ಮ ನೃತ್ಯದಿಂದ ಇವರು ಭಾರತ ಸೇರಿದಂತೆ ಉತ್ತರ ಅಮೇರಿಕಾ, ಆಸ್ಟ್ರೇಲಿಯ ಯುರೋಪ್ ಸೇರಿದಂತೆ ಜಗತ್ತಿನಾದ್ಯಂತ ಪ್ರೇಕ್ಷಕರನ್ನು ಹೊಂದಿದ್ದು ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ[೧]. ಮೆಹ್ತಾ ಅವರು ಮುಂಬೈನಲ್ಲಿ ನೂಪುರ್ ಝಂಕಾರ್ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಅಂಡ್ ರಿಸರ್ಚ್[ಶಾಶ್ವತವಾಗಿ ಮಡಿದ ಕೊಂಡಿ][೨] ಎಂಬ ಸಂಸ್ಥೆಯನ್ನು ನವ ದೆಹಲಿಯ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ನಲ್ಲಿ ನೋಂದಾಯಿಸಿದ್ದು ೧೯೮೦ರಿಂದ ಇಲ್ಲಿ ಉತ್ತಮ ಗುಣಮಟ್ಟದ ನೃತ್ಯವನ್ನು ಕಲಿಸಿಕೊಡುತ್ತಿದ್ದಾರೆ.
ಆರಂಭಿಕ ಜೀವನ ಮತ್ತು ತರಬೇತಿ
[ಬದಲಾಯಿಸಿ]ಶಿಲಾ ಅವರು ಜನಿಸಿದ್ದು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತದಲ್ಲಿ (ಜನವರಿ ೧), ಇವರು ವಾಣಿಜ್ಯ ಶಾಸ್ತ್ರದಲ್ಲಿ ಪದವಿಯನ್ನು ಕೊಲ್ಕತ್ತ ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡಿದ್ದು, ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಮಹಾರಾಷ್ಟ್ರದ ಕವಿ ಕುಲಗುರು ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾನಿಲಯ Archived 24 August 2023[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.ದಿಂದ ಪಡೆದಿದ್ದಾರೆ. ಇವರು ಅಲಹಬಾದ್ ನ ಪ್ರಯಾಗ್ ಸಂಗೀತ ಸಮಿತಿಯಿಂದ ``ನೃತ್ಯ ಪ್ರವೀಣ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಇವರು ಯಾರ್ಕ್ ವಿಶ್ವವಿದ್ಯಾಲಯ, ಟೊರೊಂಟೊ, ಕೆನಡಾಗಳಲ್ಲಿ ಸಮಕಾಲೀನ ನೃತ್ಯ, ನೃತ್ಯ ಚಿಕಿತ್ಸೆ ಮತ್ತು ನಿರ್ದಿಷ್ಟ ನೃತ್ಯವನ್ನು ಅನ್ವೇಷಿಸುತ್ತಿರುವ ಮೂಲಕ ವೃತ್ತಿಪರ ಬೆಳವಣಿಗೆಯನ್ನು ಕಂಡಿದ್ದಾರೆ[೩]. ಮೆಹ್ತಾ ನೃತ್ಯ ಮಾಡುವುದಕ್ಕೆ ತನ್ನ ಐದನೇ ವಯಸ್ಸಿನಲ್ಲೇ ನೃತ್ಯಚಾರ್ಯ ಪ್ರಹ್ಲಾದ್ ಅವರ ಬಳಿ ಪ್ರಾರಂಭಿಸುತ್ತಾರೆ. ತಮ್ಮ ಹದಿನಾರನೇ ವಯಸ್ಸಿನಿಂದ ಪಂಡಿತ್ ಚಿತ್ರೇಶ್ ದಾಸ್, ಪಂಡಿತ್ ವಿಜಯ್ ಶಂಕರ್ ಮತ್ತು ಪಂಡಿತ್ ಬಿರ್ಜು ಮಹಾರಾಜ್ ಅವರ ಬಳಿ ನೃತ್ಯ ಕಲಿಕೆಗಾಗಿ ತಮ್ಮ ಹೆಚ್ಚು ಸಮಯವನ್ನು ಕಳೆದರು. ಜೊತೆಯಲ್ಲಿ ಕುಮುದಿನಿ ಲಖಿಯಾರಂತಹ ಶ್ರೇಷ್ಠ ಕಲಾವಿದರ ಬಳಿಯಲ್ಲಿ ಹೆಚ್ಚು ಹೆಚ್ಚು ಕಲಿತರು. ಇವರು ಲಯ ಮತ್ತು ತಾಳದ ಅಭ್ಯಾಸವನ್ನು ತಾಳಯೋಗಿ ಪಂಡಿತ್ ಸುರೇಶ್ ತಳವಾಲ್ಕರ್ ಅವರ ಬಳಿ ಅಭ್ಯಾಸ ಮಾಡುತ್ತಾರೆ. ಇವರು ತಮ್ಮ ಕಥಕ್ ನೃತ್ಯದ ಮೂಲಕ ಅನೇಕ ಪಾತ್ರಗಳಿಗೆ ಜೀವ ತುಂಬುವ ಪ್ರದರ್ಶನಗಳನ್ನು ನೀಡಿದ್ದಾರೆ.[೪]
References
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://odishabytes.com/shila-mehtas-kathak-recital-enthrals-audience-in-odisha-capital/
- ↑ "ಆರ್ಕೈವ್ ನಕಲು". Archived from the original on 8 ಏಪ್ರಿಲ್ 2023. Retrieved 16 ಸೆಪ್ಟೆಂಬರ್ 2023.
- ↑ https://narthaki.com/info/gtsk/gtsk185.html
- ↑ https://www.asianage.com/life/more-features/090719/shila-mehtas-kathak-magic-in-belgium-making-vivid-characters-come-to-life.html
- Use dmy dates from November 2018
- Articles with invalid date parameter in template
- Use Indian English from November 2018
- All Wikipedia articles written in Indian English
- Articles with hCards
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2024
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ವಿಕಿಪೀಡಿಯ ಅನುವಾದ ಶಿಬಿರ ಲೇಖನ
- ನೃತ್ಯ ಕಲಾವಿದರು