ವಿಷಯಕ್ಕೆ ಹೋಗು

ಶರತ್ ಎಂ ಗಾಯಕ್ವಾಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶರತ್ ಎಂ ಗಾಯಕ್ವಾಡ್
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಶರತ್ ಎಂ ಗಾಯಕ್ವಾಡ್
ರಾಷ್ರೀಯತೆಭಾರತೀಯ
ಜನನ (1991-05-10) ೧೦ ಮೇ ೧೯೯೧ (ವಯಸ್ಸು ೩೩)
ಬೆಂಗಳೂರು, ಭಾರತ
ಆಲ್ಮ ಮಾಟರ್ಜೈನ್ ವಿಶ್ವವಿದ್ಯಾಲಯ, ಬೆಂಗಳೂರು
Sport
ದೇಶಭಾರತ
ಕ್ರೀಡೆಈಜು (ಕ್ರೀಡೆ)
Achievements and titles
ಅತ್ಯುನ್ನತ ವಿಶ್ವ ಶ್ರೆಯಾಂಕ೧೩
Updated on ೧ ಜುಲೈ ೨೦೧೨.

ಶರತ್ ಎಂ ಗಾಯಕ್ವಾಡ್ ಇವರು ಬೆಂಗಳೂರಿನ ಭಾರತೀಯ ಪ್ಯಾರಾಲಿಂಪಿಕ್ಸ್ ಈಜುಗಾರರಾಗಿದ್ದಾರೆ. ೨೦೧೪ ರ, ಏಷ್ಯನ್ ಕ್ರೀಡಾಕೂಟದಲ್ಲಿ, ಇವರು ಯಾವುದೇ ಬಹು-ಶಿಸ್ತಿನ ಸ್ಪರ್ಧೆಯಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದ ಭಾರತೀಯನಾಗಿದ್ದು, ಪಿ.ಟಿ ಉಷಾ ಅವರ ದಾಖಲೆಯನ್ನು ಮೀರಿದ್ದಾರೆ. ಆರ್ಥಿಕ ಹಿನ್ನೆಲೆಯಿಂದ ಬಂದ ಇವರು ೩೦ ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮತ್ತು ೪೦ ರಾಷ್ಟ್ರೀಯ ಪದಕಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಒಂದು ೨೦೧೦ ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕವಾಗಿದೆ. ಇವರು ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಗಾರರಾಗಿದ್ದಾರೆ ಮತ್ತು ಲಂಡನ್‌ನಲ್ಲಿ ನಡೆದ ೨೦೧೨ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ಶರತ್‌ರವರು ೧೯೯೧ ರಲ್ಲಿ, ಭಾರತದ ಬೆಂಗಳೂರಿನಲ್ಲಿ ವಿರೂಪಗೊಂಡ ಎಡಗೈಯೊಂದಿಗೆ ಜನಿಸಿದರು. ಅವರು ಬೆಂಗಳೂರಿನ ಲಿಟ್ಲ್ ಫ್ಲವರ್ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಅವರ ಅಂಗವೈಕಲ್ಯದಿಂದಾಗಿ ಅವರನ್ನು ಕಡ್ಡಾಯವಾಗಿ ಈಜು ತರಗತಿಗಳಿಗೆ ಕಳುಹಿಸಲು ಅವರ ಪೋಷಕರು ಆರಂಭದಲ್ಲಿ ಭಯಪಡುತ್ತಿದ್ದರು.[] ಆದಾಗ್ಯೂ, ಅವರು ಅಂತಿಮವಾಗಿ ೯ ನೇ ವಯಸ್ಸಿನಲ್ಲಿ ತರಗತಿಯ ಉಳಿದವರೊಂದಿಗೆ ಈಜು ತರಗತಿಗಳನ್ನು ತೆಗೆದುಕೊಂಡರು. ನಂತರ, ಅವರು ಅಂಗವಿಕಲರಿಗಾಗಿ ವಿವಿಧ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿದರು. ೨೦೦೩ ರಲ್ಲಿ, ತರಬೇತುದಾರರಾದ ಜಾನ್ ಕ್ರಿಸ್ಟೋಫರ್ ಅವರು ಶಾಲೆಯ ಕಾರ್ಯಕ್ರಮವೊಂದರಲ್ಲಿ ಈಜುವುದನ್ನು ಗುರುತಿಸಿದರು ಮತ್ತು ಶರತ್‌‌ರವರಿಗೆ ೭ ವರ್ಷಗಳ ಕಾಲ ತರಬೇತಿ ನೀಡಿದರು. [] ಶರತ್ ಅವರು ತರಬೇತಿ ನೀಡಿದ ಮೊದಲ ಪ್ಯಾರಾಲಿಂಪಿಕ್ ಈಜುಗಾರ ಎಂದು ಕ್ರಿಸ್ಟೋಫರ್ ಗುರುತಿಸುತ್ತಾರೆ ಮತ್ತು ಶರತ್ ಅವರ ವಿರೂಪತೆಯ ಕಾರಣ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಕಷ್ಟು ಕೆಲಸ ಮಾಡಬೇಕಾಯಿತು. ಅವರು ಪ್ರೌಢಶಾಲಾ ಶಿಕ್ಷಣಕ್ಕಾಗಿ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. .[] ಅಲ್ಲಿ ಅವರಿಗೆ ಶುಲ್ಕ ರಿಯಾಯತಿ ನೀಡಲಾಯಿತು ಮತ್ತು ತರಬೇತಿಗೆ ಪ್ರೋತ್ಸಾಹ ನೀಡಲಾಯಿತು.

ಈಜು ವೃತ್ತಿ

[ಬದಲಾಯಿಸಿ]

ಶರತ್‌ ಗಾಯಕ್ವಾಡ್‌ರವರು ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ೨೦೦೮ ರ ಐಡ್ಬ್ಲ್ಯೂಎ‌ಎಸ್ ವಿಶ್ವ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚು ಪದಕಗಳನ್ನು ಗೆದ್ದರು.

ಅವರು ೨೦೧೦ ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚೀನಾದ ಗುವಾಂಗ್‌ಝೌನಲ್ಲಿ ೧೦೦ ಮೀ.ನ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ೧:೨೦.೯೦ ರ ಸಮಯದಲ್ಲಿ ಕಂಚಿನ ಪದಕವನ್ನು ಗೆದ್ದರು. ಈ ಪ್ರದರ್ಶನವು ೨೦೧೨ ರ, ಲಂಡನ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಶರತ್‌‌ರವರಿಗೆ ಅನುವು ಮಾಡಿಕೊಟ್ಟಿತು. ಈ ವರ್ಷದಲ್ಲಿ ಅವರು ೧೦೦ ಮೀ ಬ್ರೆಸ್ಟ್‌ಸ್ಟ್ರೋಕ್ ಈವೆಂಟ್‌ನಲ್ಲಿ ಅವರ ವಿಭಾಗದಲ್ಲಿ ವಿಶ್ವದ ನಂ. ೧೩ ಶ್ರೇಣಿಯನ್ನು ಪಡೆದರು. []

ಅವರು ಲಂಡನ್ ಪ್ಯಾರಾಲಿಂಪಿಕ್ಸ್, ೨೦೧೨ ರ ಅರ್ಹತಾ ಸಮಯವನ್ನು ಸಾಧಿಸಿದ ಮೊದಲ ಭಾರತೀಯ ಈಜುಗಾರರಾಗಿದ್ದಾರೆ. ಹಾಗೂ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ೨೦೧೧ ರ ಇಂಟರ್ನ್ಯಾಷನಲ್ ಡಾಯ್ಚ ಮೀಸ್ಟರ್‌ಶಾಫ್ಟನ್ (ಐಡಿಎಮ್) ಈಜು ಚಾಂಪಿಯನ್‌ಶಿಪ್‌ನಲ್ಲಿ 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಶರತ್ ಅವರು ಎರಡು ಸ್ಪರ್ಧೆಗಳಲ್ಲಿ ಏಷ್ಯನ್ ದಾಖಲೆಯನ್ನು ಹೊಂದಿದ್ದಾರೆ: ೫೦ ಮೀ. ಬಟರ್‌ಫ್ಲೈ, ೫೦ ಮೀ. ಬ್ರೆಸ್ಟ್‌ಸ್ಟ್ರೋಕ್. []

೨೦೧೨ ರಲ್ಲಿ, ಗೋಸ್ಪೋರ್ಟ್ಸ್ ಫೌಂಡೇಶನ್ ಲಂಡನ್ ೨೦೧೨ ರ ಪ್ಯಾರಾಲಿಂಪಿಕ್ ಗೇಮ್ಸ್‌ಗೆ ಮುಂಚಿತವಾಗಿ ಶರತ್ ಅವರನ್ನು ಉನ್ನತ-ಕಾರ್ಯಕ್ಷಮತೆಯ ತರಬೇತಿ ಶಿಬಿರಕ್ಕೆ ಕಳುಹಿಸಿತು. ಶಿಬಿರವು ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಲ್ಲಿ ನಡೆಯಿತು. [] ಮುಖ್ಯ ತರಬೇತುದಾರರಾದ ಮೆಲ್ ಟಂಡ್ಟ್ರಮ್ ಚಿನ್ನದ ಪರವಾನಗಿ ಪಡೆದ ಈಜು ತರಬೇತುದಾರರಾಗಿದ್ದಾರೆ. ಉನ್ನತ-ಕಾರ್ಯಕ್ಷಮತೆಯ ತರಬೇತಿಯಿಂದ ಪ್ರಯೋಜನ ಪಡೆದ ಶರತ್‌ರವರು ೨೦೧೨ ರಲ್ಲಿ, ಲಂಡನ್ ಎಲ್ಲಾ ನಾಲ್ಕು ಈವೆಂಟ್‌ಗಳಲ್ಲಿ ವೈಯಕ್ತಿಕ ಅತ್ಯುತ್ತಮ ಸಮಯವನ್ನು ಗಳಿಸಿದರು. []

ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ಗೆ ಮುನ್ನ ಭುಜದ ಗಾಯದಿಂದ ಬಳಲುತ್ತಿದ್ದ ಶರತ್‌ರವರು ೬ ಪದಕಗಳನ್ನು ಗೆದ್ದುಕೊಂಡರು. [] ಇದು ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯರ ಅತ್ಯಧಿಕ ಪದಕವಾಗಿದೆ. ೧೯೮೬ ರ ಸಿಯೋಲ್ ಏಷ್ಯನ್ ಗೇಮ್ಸ್‌ನಲ್ಲಿ[೧] ೫ ಪದಕಗಳನ್ನು ಗೆದ್ದ ಪಿ.ಟಿ. ಉಷಾ ಈ ಹಿಂದೆ ಈ ದಾಖಲೆಯನ್ನು ಹೊಂದಿದ್ದರು. ಶರತ್ ಗಾಯಕ್ವಾಡ್‌ರವರು ೨೦೦ ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ಬೆಳ್ಳಿ (ಎಸ್‌ಎಮ್‌೮), ಪುರುಷರ ೧೦೦ ಮೀ. ಬಟರ್‌ಫ್ಲೈ (ಎಸ್‌೮) ನಲ್ಲಿ ಕಂಚು, ಪುರುಷರ ೧೦೦ ಮೀ. ಬ್ರೆಸ್ಟ್‌ಸ್ಟ್ರೋಕ್ (ಎಸ್‌ಬಿ೮) ನಲ್ಲಿ ಕಂಚು, ಪುರುಷರ ೧೦೦ ಬ್ಯಾಕ್‌ಸ್ಟ್ರೋಕ್ (ಎಸ್೮) ನಲ್ಲಿ ಕಂಚು (ಎಸ್೮) ಮತ್ತು ೫೦ ಮೀ. ಅವರ ೬ ನೇ ಪದಕ ಪುರುಷರ ೪x೧೦೦ ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕವಾಗಿತ್ತು. []

ಕೋಚಿಂಗ್ ವೃತ್ತಿ

[ಬದಲಾಯಿಸಿ]

೨೦೧೪ ರಲ್ಲಿ ಶರತ್ ಅವರು ಸ್ಪರ್ಧಾತ್ಮಕ ಈಜುಗಳಿಂದ ನಿವೃತ್ತರಾದ ನಂತರ, ಅವರು ಭಾರತದ ಹಲವಾರು ಈಜು ಕ್ಲಬ್‌ಗಳಿಂದ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜುಗಾರರಿಗೆ ತರಬೇತಿ ನೀಡಿದರು. ಪ್ರಸ್ತುತ, ಅವರು ಬೆಂಗಳೂರಿನ ಈಜು ಕ್ಲಬ್ ಝೀ ಸ್ವಿಮ್ ಅಕಾಡೆಮಿಯ ಕಾರ್ಯಕ್ರಮ ನಿರ್ದೇಶಕರಾಗಿದ್ದಾರೆ. [೧೦]

ಉಲ್ಲೇಖಗಳು

[ಬದಲಾಯಿಸಿ]
  1. Kumar, Nandini (5 March 2012). "Disability is not a challenge for Sharath". Sportskeeda. Retrieved 29 June 2012.
  2. Jha, Nishita (2 June 2012). "This Is Ability". Tehelka. Archived from the original on 22 ಸೆಪ್ಟೆಂಬರ್ 2012. Retrieved 29 June 2012.
  3. Ashok, Kalyan (19 January 2011). "Sailing over rough waters". The Hindu. Retrieved 29 June 2012.
  4. https://www.parentcircle.com/interview-with-paralympian-swimmer-sharath-m-gayakwad-about-extraordinary-journey/article
  5. "GoSports Foundation | Our Athletes". www.gosportsfoundation.in. Archived from the original on 2011-09-16.
  6. "Swimming, twirling and whacking our way to gold". The University of Western Australia. 26 July 2012. Retrieved 4 December 2018.
  7. "Mel Tantrum Coaching | Mel Tantrum is Head Coach at the University of Western Australia". Archived from the original on 2014-07-28. Retrieved 2014-07-24.
  8. https://leadcampus.org/rolemodels/sharath-gayakwad
  9. https://newhorizoncollegeofengineering.in/sharath-gayakwad/
  10. https://www.nishantratnakar.com/portfolio/conversation-with-sharath-gaekwad/