ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ
ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ
[ಬದಲಾಯಿಸಿ]೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫
- ಹೆಸರು = ಬೇಸಿಗೆ ಪ್ಯಾರಾಲಿಂಪಿಕ್ಸ್,
- ಭಾಗವಹಿಸುವವರು=
- ಕ್ರೀಡೆಗಳು= = 5
- ಭಾಗವಹಿಸುವ ಕ್ರೀಡಾಪಟುಗಳು=
- ೨೦೧೬ ರ ಬೇಸಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ
- 2016
- 2012
- ೨೦೦೮
- 'ಪದಕಗಳ ಪಟ್ಟಿ
- 1972 ರಿಂದ 2016
- ಚಿನ್ನ =
- ಬೆಳ್ಳಿ
- ಕಂಚು =
- ಶ್ರೇಣಿ =
- ಭಾರತ ಮೊದಲು 1968 ಅದರ ಬೇಸಿಗೆ ಪ್ಯಾರಾಲಿಂಪಿಕ್ ಆಟಗಳಲ್ಲಿ ಭಾಗವಹಿಸಿ ಉತ್ತಮ ಮಟ್ಟ ತಲುಪಿತು. 1972 ರಲ್ಲಿ ಮತ್ತೆ ಸ್ಪರ್ಧಿಸಿತು. ನಂತರ 1984ರ ವರೆಗೆ ಈ ಆಟಗಲಲ್ಲಿ ಆಟಗಳಲ್ಲಿ ಭಾಗವಹಿಸಲಿಲ್ಲ. ನಂತರ ಭಾರತವು ಬೇಸಿಗೆ ಪ್ಯಾರಾಲಿಂಪಿಕ್ ಆಟಗಳಲ್ಲಿ ಪ್ರತಿ ಆವೃತ್ತಿ ಭಾಗವಹಿಸಿದೆ. ಆದರೆ ಇದು ಚಳಿಗಾಲದಲ್ಲಿ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲಿಲ್ಲ.
- ಹೈಡೆಲ್ಬರ್ಗ್ ಆಟಗಳಲ್ಲಿ 1972 ರಲ್ಲಿ, ಮರಳೀಕಾಂತ್ ಪೇಟ್ಕರ್ ಭಾರತಕ್ಕೆ ಮೊದಲ ಚಿನ್ನ ಗೆದ್ದರು. ಅವರು 37,331 ಸೆಕೆಂಡುಗಳ ದಾಖಲೆ ಸಮಯದಲ್ಲಿ 50 ಮೀಟರ್ ಫ್ರೀಸ್ಟೈಲ್ ಈಜಿದರು.[೧]
ಪದಕಗಳ ಪಟ್ಟಿ
[ಬದಲಾಯಿಸಿ]- ೧೯೭೨ ರಿಂದ ೨೦೧೬ರರ ವರೆಗೆ:
ಪದಕ | ಹೆಸರು /ಟೀಮು | ಇಸವಿ; ಊರು ಸ್ಥಳ/ದೇಶ | ಆಟ | ವಿಧ |
---|---|---|---|---|
ಬಂಗಾರ | ಮರಳೀಕಾಂತ್ ಪೇಟ್ಕರ್ | 1972 ಹೈಡೆಲ್ಬರ್ಗ್ | 50 ಮೀಟರ್ ಫ್ರಿಸ್ಟೈಲ್ 3 | ಈಜು |
ಬೆಳ್ಳಿ | ಭಿಮರಾವ್ ಕೇಸಾರ್ಕರ್ | 1984 ಸ್ಟೋಕ್ ಮ್ಯಾಂಡೆವಿಲ್ಲೆ / ನ್ಯೂಯಾರ್ಕ್ | ಜಾವೆಲಿನ್ ಥ್ರೋ ಎಲ್ 6 | ಅಥ್ಲೆಟಿಕ್ಸ್ |
ಬೆಳ್ಳಿ | ಜೋಗಿಂದರ್ ಸಿಂಗ್ ಬೇಡಿ | 1984 ಸ್ಟೋಕ್ ಮ್ಯಾಂಡೆವಿಲ್ಲೆ / ನ್ಯೂಯಾರ್ಕ್ | ಶಾಟ್ ಪುಟ್ ಎಲ್ 6 | ಅಥ್ಲೆಟಿಕ್ಸ್ |
ಕಂಚು | ಜೋಗಿಂದರ್ ಸಿಂಗ್ ಬೇಡಿ | 1984 ಸ್ಟೋಕ್ ಮ್ಯಾಂಡೆವಿಲ್ಲೆ / ನ್ಯೂಯಾರ್ಕ್ | ಜಾವೆಲಿನ್ ಥ್ರೋ ಎಲ್ 6 | ಅಥ್ಲೆಟಿಕ್ಸ್ |
ಕಂಚು | ಜೋಗಿಂದರ್ ಸಿಂಗ್ ಬೇಡಿ | 1984 ಸ್ಟೋಕ್ ಮ್ಯಾಂಡೆವಿಲ್ಲೆ / ನ್ಯೂಯಾರ್ಕ್ | ಡಿಸ್ಕಸ್ ಥ್ರೋ ಎಲ್ 6 | ಅಥ್ಲೆಟಿಕ್ಸ್ |
ಬಂಗಾರ | ದೇವೇಂದ್ರ ಜಜರಿಯಾ | 2004 ರ ಅಥೆನ್ಸ್ | ಜಾವೆಲಿನ್ ಥ್ರೋ F44/46 | ಅಥ್ಲೆಟಿಕ್ಸ್ |
ಕಂಚು | ರಾಜೇಂದ್ರಸಿಂಗ್ ರಹೇಲು | 2004 ರ ಅಥೆನ್ಸ್ | 56 ಕೆಜಿ ವಿಭಾಗದಲ್ಲಿ | ಪವರ್ಲಿಫ್ಟಿಂಗ್ |
ಬೆಳ್ಳಿ | ಗಿರೀಶ ನಾಗರಾಜೇಗೌಡ | 2012 ಲಂಡನ್ | ಪುರುಷರ ಹೈ ಜಂಪ್ ಎಫ್ 42 | ಅಥ್ಲೆಟಿಕ್ಸ್ |
ಬಂಗಾರ | ಮರಿಯಪ್ಪನ್ ತಂಗವೇಲು | 2016 ರಿಯೊ ಡಿ ಜನೈರೊ | ಪುರುಷರ ಹೈ ಜಂಪ್ T42 | ಅಥ್ಲೆಟಿಕ್ಸ್ |
ಕಂಚು | ವರುಣ್ ಭಾತಿ | 2016 ರಿಯೊ ಡಿ ಜನೈರೊ | ಪುರುಷರ ಹೈ ಜಂಪ್ T42 | ಅಥ್ಲೆಟಿಕ್ಸ್ |
ಒಟ್ಟು | ಚಿನ್ನ ೩ | ಬೆಳ್ಳಿ ೩ | ಕಂಚು ೪ |
೨೦೧೬
[ಬದಲಾಯಿಸಿ]- ಪುರುಷರ ಟಿ 42 ಹೈ ಜಂಪ್ ಫೈನಲ್ ನಲ್ಲಿ ಮರಿಯಪ್ಪನ್ ತಂಗವೇಲು 1.89 ಮೀಟರ್ ದೂರ ಜಿಗಿದು ಚಿನ್ನ ಗೆದ್ದಿದ್ದಾರೆ. ಇನ್ನು ಇದೇ ಗೇಮ್ ನಲ್ಲಿ ವರುಣ್ ಭಾಟಿ ಅವರು 1.86 ಮೀಟರ್ ದೂರ ಜಿಗಿದು ಕಂಚಿನ ಪದಕವನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.೧
ರಾಷ್ಟ್ರೀಯ ಮಕ್ಕಳ ಪುರಸ್ಕಾರ ಪಡೆದ ರೇವತಿ ಎಂ.ನಾಯಕಗೆ
[ಬದಲಾಯಿಸಿ]- 15 Nov, 2016
- ಪ್ಯಾರಾಲಿಂಪಿಯನ್‌ನಲ್ಲಿ ತೋರಿದ ಅಸಾಧಾರಣ ಸಾಧನೆಗಾಗಿ ಸೋಮವಾರ ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ರಾಷ್ಟ್ರೀಯ ಮಕ್ಕಳ ಪುರಸ್ಕಾರ ಹಾಗೂ ಚಿನ್ನದ ಪದಕ ಪಡೆದಿರುವ ದಾವಣಗೆರೆಯ ಪ್ಯಾರಾಲಿಂಪಿಯನ್ ಈಜುಪಟು ರೇವತಿ ಎಂ. ನಾಯಕ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ.
ರೇವತಿ ಎಂ. ನಾಯಕ
[ಬದಲಾಯಿಸಿ]- ‘ರೇವತಿ ದಾವಣಗೆರೆಯ ಸಿದ್ಧಗಂಗಾ ಪಿಯು ಕಾಲೇಜು ವಿದ್ಯಾರ್ಥಿನಿ. ತಂದೆ ಹುಚ್ಚವ್ವನಹಳ್ಳಿ ಮಂಜುನಾಥ ಅವರು ಕರ್ನಾಟಕ ರಾಜ್ಯ ರೈತ ಸಂಘ–ಹಸಿರುಸೇನೆ ಬಣದ ಅಧ್ಯಕ್ಷ. ತಾಯಿ ಸುನಂದಾ ಗೃಹಿಣಿ. ರೇವತಿ ಸೇರಿ ಮೂವರೂ ಮಕ್ಕಳು ಕ್ರೀಡಾಪಟುಗಳು ಎನ್ನುವುದು ವಿಶೇಷ.
ರೇವತಿ ಈಜು ಕಲಿತಿದ್ದು ಎಂಟನೇ ವಯಸ್ಸಿನಲ್ಲಿ. ಜಗಳೂರು ತಾಲ್ಲೂಕಿನ ಹುಚ್ಚವ್ವನಹಳ್ಳಿಯ ಗ್ರಾಮದ ಕಾಲುವೆಯೊಂದರಲ್ಲಿ. ಮಗಳಿಗೆ ಉತ್ತಮ ಕ್ರೀಡಾ ಸೌಲಭ್ಯ ಒದಗಿಸಲು ವ್ಯಾಸಂಗವನ್ನು ಹಳ್ಳಿಯಿಂದ ದಾವಣಗೆರೆ ನಗರಕ್ಕೆ ಬದಲಾಯಿಸಿದರು. ತಂದೆಯ ಶ್ರಮ ವ್ಯರ್ಥವಾಗಲಿಲ್ಲ. ಈಜಿನಲ್ಲಿ ಉತ್ತಮ ಪ್ರದರ್ಶನವನ್ನೂ ನೀಡತೊಡಗಿದಳು.
ಎರಡು ವರ್ಷಗಳಿಂದ ಪ್ಯಾರಾಲಿಂಪಿಯನ್ ಸ್ಪರ್ಧಿಗಳಿಗಾಗಿ ನಡೆಯುವ ಐವಾಸ್ ಈಜು ಕೂಟದಲ್ಲಿ ರೇವತಿ ಪದಕಗಳ ಸಾಧನೆ ದಾಖಲಿಸಿದಳು. ಕಳೆದ ವರ್ಷ ನೆದರ್‌ಲೆಂಡ್‌ನಲ್ಲಿ ಪದಕ. ಕಳೆದ ಜೂನ್– ಜುಲೈನಲ್ಲಿ ಚೆಕ್ ಗಣರಾಜ್ಯದ ಪ್ರಾಗ್‌ನಲ್ಲಿ ನಡೆದ ಐವಾಸ್ ಕೂಟದಲ್ಲಿ (ಎಸ್‌ಬಿ–9 ವಿಭಾಗ) ಈಕೆಗೆ ಒಂದು ಬೆಳ್ಳಿ, ಒಂದು ಕಂಚಿನ ಪದಕ. ಅಮೆರಿಕದ ಪಸಡೇನಾದ ರೋಸ್‌ಬೌಲ್‌ನಲ್ಲಿ 2014ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಈಜು ಕೂಟದಲ್ಲಿ ಆರನೇ ಸ್ಥಾನವನ್ನೂ ಪಡೆದಿದ್ದಳು.16 ವರ್ಷದ ರೇವತಿಗೆ ಕಾಲುಗಳ ಉದ್ದ ಒಂದೇ ಸಮನಾಗಿಲ್ಲ. ಆದರೆ ಅದನ್ನು ಈಕೆ ಒಂದು ಸಮಸ್ಯೆ ಎಂದು ಭಾವಿಸಿಯೂ ಇಲ್ಲ. ‘ನನಗೆ ಮುಂದೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕೆಂಬ ಗುರಿಯಿದೆ’ ಎನ್ನುವ ಮೂಲಕ ದೊಡ್ಡ ಕನಸನ್ನೂ ಹೊಂದಿದ್ದಾಳೆ.[೩]
ನೋಡಿ
[ಬದಲಾಯಿಸಿ]- ೨೦೦೮ ಒಲಂಪಿಕ್ ಕ್ರೀಡಾಕೂಟ
- ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ
- ರಿಯೊ ಒಲಿಂಪಿಕ್ಸ್ 2016
- ಲಂಡನ್ ಬೇಸಿಗೆ ಒಲಂಪಿಕ್ಸ್ 2012
- ಒಲಿಂಪಿಕ್ಸ್‌ನಲ್ಲಿ ಭಾರತ=ಒಲಿಂಪಿಕ್ಸ್‌ನಲ್ಲಿ ಭಾರತ (ಪದಕಗಳ ಪಟ್ಟಿ)
ಉಲ್ಲೇಖ
[ಬದಲಾಯಿಸಿ]- ↑ "India at the Paralympics on paralympic.org". Archived from the original on 2016-08-19. Retrieved 2016-09-12.
- ↑ "ಪ್ಯಾರಾಲಿಂಪಿಕ್ಸ್ ಜೀವ ಚೈತನ್ಯದ ಸೆಲೆ...ಗಿರೀಶ ದೊಡ್ಡಮನಿ:12 Sep, 2016". Archived from the original on 2016-09-12. Retrieved 2016-09-12.
- ↑ ರಾಷ್ಟ್ರೀಯ ಮಕ್ಕಳ ಪುರಸ್ಕಾರ ಪಡೆದ ರೇವತಿ ಎಂ.ನಾಯಕಗೆ