ವಿಷಯಕ್ಕೆ ಹೋಗು

ವೈ. ಸುಬ್ರಹ್ಮಣ್ಯ ರಾಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈ. ಸುಬ್ರಹ್ಮಣ್ಯ ರಾಜು
ಜನನ೩ ಡಿಸೆಂಬರ್‌ ೧೯೦೭
ಮರಣ24 September 1995(1995-09-24) (aged 87)
ಬೆಂಗಳೂರು, ಕರ್ನಾಟಕ, ಭಾರತ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಸರ್‌ ಜೆ. ಜೆ. ಸ್ಕೂಲ್‍ ಆಫ್ ಆರ್ಟ್ಸ್‌
ಸಂಗಾತಿ
ಶ್ರೀಮತಿ ಶಾರದಮ್ಮ
(m. ೧೯೩೦)
ಪ್ರಶಸ್ತಿಗಳುರಾಷ್ಟ್ರೀಯ ಪ್ರಶಸ್ತಿ ೧೯೮೭
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೭೨

ವೈ.ಸುಬ್ರಮಣ್ಯ ರಾಜು (೧೯೦೭ - ೧೯೯೫) ಮೈಸೂರು ಶೈಲಿಯ ಸಾಂಪ್ರದಾಯಿಕ ಕಲೆಯನ್ನು ಪೋಷಿಸಿದ ಭಾರತೀಯ ಕಲಾವಿದ. ಅವರು ಮೈಸೂರು ಸಂಸ್ಥಾನದ ಆಸ್ಥಾನ ವರ್ಣಚಿತ್ರಕಾರರ ಕುಟುಂಬದಲ್ಲಿ ಜನಿಸಿದರು. ಮೈಸೂರು ಅರಮನೆಯ ಕಲ್ಯಾಣ ಮಂಟಪದ ಗೋಡೆಗಳನ್ನು ಅಲಂಕರಿಸುವ ಮೈಸೂರು ದಸರಾ ಮೆರವಣಿಗೆಯ ವರ್ಣಚಿತ್ರಗಳು ಅವರ ಕೆಲವು ಸೊಗಸಾದ ಕೃತಿಗಳಾಗಿವೆ. ನಂತರದ ವರ್ಷಗಳಲ್ಲಿ, ರಾಜು ಅವರು ಕರ್ನಾಟಕ ಚಿತ್ರಕಲಾ ಪರಿಷತ್ತಿನೊಂದಿಗೆ ರಾಜ್ಯದ ಲಲಿತಕಲೆ ಮತ್ತು ಕಲಾವಿದರನ್ನು ಉತ್ತೇಜಿಸಲು ತಮ್ಮನ್ನು ತಾವು ತೊಡಗಿಸಿಕೊಂಡರು. ರಾಜು ತಮ್ಮ ಹೆಚ್ಚಿನ ವರ್ಷಗಳನ್ನು ಮೈಸೂರು ಶೈಲಿಯ ಕಲೆಯನ್ನು ಕಲಿಸಲು ಮತ್ತು ಜನಪ್ರಿಯಗೊಳಿಸಲು ಕಳೆದರು, ಇದನ್ನು ಗುರುತಿಸಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಎಮೆರಿಟಸ್ ಫೆಲೋಶಿಪ್ ಅನ್ನು ನೀಡಿತು ಮತ್ತು ಸಾಂಪ್ರದಾಯಿಕ ಮೈಸೂರು ಚಿತ್ರಕಲೆಯಲ್ಲಿ ಅವರ ಶ್ರೇಷ್ಠತೆಗಾಗಿ ಭಾರತ ಸರ್ಕಾರವು ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿತು.

ಆರಂಭಿಕ ಜೀವನ ಮತ್ತು ಕುಟುಂಬ

[ಬದಲಾಯಿಸಿ]

ವೈ. ಸುಬ್ರಹ್ಮಣ್ಯ ರಾಜುರವರು ೩ ನೇ ಡಿಸೆಂಬರ್ ೧೯೦೭ ರಂದು ಮೈಸೂರಿನಲ್ಲಿ ಜನಿಸಿದರು. ರಾಜು ಅವರ ಕುಟು೦ಬದವರು ಸೋಮವಂಶ ಆರ್ಯ ಕ್ಷತ್ರಿಯ ಪಂಥಕ್ಕೆ ಸೇರಿದವರು. ಅವರ ಪೂರ್ವಜರು ಮೈಸೂರು ಶೈಲಿಯ ಕಲೆಯ ಪ್ರತಿಪಾದಕರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ, ಅವರ ಪೂರ್ವಜರು ಹಿಂದಿನ ಮೈಸೂರು ರಾಜ್ಯಕ್ಕೆ ವಲಸೆ ಬಂದರು. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ದರಿಯಾ ದೌಲತ್ ಅರಮನೆಯಲ್ಲಿ ವಿಶ್ವಪ್ರಸಿದ್ಧ ಭಿತ್ತಿಚಿತ್ರಗಳನ್ನು ರಚಿಸಿದ ಕೀರ್ತಿ ಇವರ ಕುಟುಂಬಕ್ಕೆ ಸೇರಿದೆ.

ಅಂದಿನಿಂದ ವೈ. ಸುಬ್ರಮಣ್ಯ ರಾಜು ಅವರ ಪೂರ್ವಜರು ಮೈಸೂರು ಅರಮನೆಯ ಸೇವೆಯಲ್ಲಿದ್ದರು. ಈ ಸೇವೆಯನ್ನು ವೈ. ಸುಬ್ರಮಣ್ಯ ರಾಜು ಅವರಿಗಿಂತ ಕನಿಷ್ಠ ಮೂರು ತಲೆಮಾರುಗಳ ಹಿಂದೆ ಗುರುತಿಸಬಹುದು. ಇವರ ಅಜ್ಜ ಸುಂದರಯ್ಯ ಅರಮನೆಯಲ್ಲಿ ಬಣ್ಣ ಬಳಿಯುವವರಾಗಿದ್ದರು ಮತ್ತು ಅವರ ತ೦ದೆ ಯಲ್ಲಪ್ಪ ವಾಸ್ತು ಶಿಲ್ಪಿಯಾಗಿದ್ದರು. ರಾಜು ಅವರ ಸಹೋದರ ವೈ. ನಾಗರಾಜು ಮತ್ತು ಚಿಕ್ಕಪ್ಪ ಶಂಕರ ರಾಜು ಕೂಡ ಅರಮನೆಯಲ್ಲಿ ಕಲಾವಿದರಾಗಿದ್ದರು.

ಅವರು ಸುಮಾರು ಹತ್ತು ವರ್ಷರಾಗಿದ್ದಾಗ ಅವರಿಗೆ ಒ೦ದು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ದೊರೆಯಿತು. ಅವರ ತಂದೆ ಸೂಕ್ತ ವಿನ್ಯಾಸವನ್ನು ತಯಾರಿಸಲು ಅರಮನೆಯಲ್ಲಿರುವ ಲಲಿತಕಲೆಗಳ ಹಳೆಯ ಗ್ರಂಥವಾದ ಶ್ರೀ ತತ್ವ ನಿಧಿಯನ್ನು ಉಲ್ಲೇಖಿಸುವಂತೆ ಹೇಳಿದರು. ಈ ಸ್ಪರ್ಧೆ ಅವರಿಗೆ ಅಖಿಲ ಭಾರತ ಪ್ರಶಸ್ತಿಯನ್ನು ತ೦ದಿತು. ಅ೦ದಿನಿ೦ದ ಅವರನ್ನು ಯುವ ಕಲಾವಿದ ಎ೦ದು ಗುರುತಿಸಲಾಯಿತು.[]

ವಿದ್ಯಾಭ್ಯಾಸ

[ಬದಲಾಯಿಸಿ]

ವೈ. ಸುಬ್ರಮಣ್ಯ ರಾಜು ಅವರು ಮುಮ್ಮಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ರಾಜಾ ಶಾಲೆ ಎಂದು ಕರೆಯಲ್ಪಡುವ ಆಂಗ್ಲೋ ಕನ್ನಡ ಶಾಲೆಗೆ ಪ್ರವೇಶ ಪಡೆದರು. ಅವರು ತಮ್ಮ ಪಾಠಗಳಲ್ಲಿ ನಿಯಮಿತರಾಗಿದ್ದರು, ಆದರೆ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

ರಾಜು ಅವರು ಆಗಾಗ ತನ್ನ ತಂದೆ ಅಥವಾ ಸಹೋದರನೊಂದಿಗೆ ಅರಮನೆಗೆ ಹೋಗುತ್ತಿದ್ದರಿಂದ, ಅವರು ಸರ್ ಚಾರ್ಲ್ಸ್ ಟಾಡ್ಹಂಟರ್ ಅವರ ಗಮನಕ್ಕೆ ಬಂದಿದ್ದರು. ಮಹಾರಾಜರಿಗೆ ಆಶ್ಚರ್ಯಕರ ಕ್ರಿಸ್‍ಮಸ್ ಉಡುಗೊರೆಯನ್ನು ನೀಡುವ ಉದ್ದೇಶದಿಂದ ದೀಪಸ್ತಂಭದ ವಿನ್ಯಾಸವನ್ನು ತಯಾರಿಸಲು ಅವರು ರಾಜುವನ್ನು ಕೇಳಿದರು. ಇದರ ವಿನ್ಯಾಸವು ಪ್ರಸಿದ್ಧ ಮೈಸೂರು ದಸರಾ ಮೆರವಣಿಗೆಯ ಒಂದು ಅನುಕ್ರಮವಾಗಿತ್ತು. ವಿನ್ಯಾಸದಿಂದ ತುಂಬಾ ಪ್ರಭಾವಿತರಾದ ಅವರು, ಉಡುಗೊರೆಯನ್ನು ಮಹಾರಾಜರಿಗೆ ಅರ್ಪಿಸಿದಾಗ, ಅವರು ವಿನ್ಯಾಸದಿಂದ ಸಂತೋಷಪಟ್ಟರು ಮಾತ್ರವಲ್ಲದೆ, ಕಲಾವಿದ ಯಾರು ಎಂದು ವಿಚಾರಿಸಿದರು. ಈ ರೀತಿಯಿ೦ದ ರಾಜು ಅವರು ಮುಮ್ಮಡಿ ಕೃಷ್ಣರಾಜ ಒಡೆಯರ ಗಮನಕ್ಕೆ ಬ೦ದರು. ಮಹಾರಾಜರ ಆಸೆಯ೦ತೆ, ರಾಜು ಅವರು ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗೆ ಸೇರಿದರು. ಅಲ್ಲದೆ ಮಹಾರಾಜರು ಅವರಿಗೆ ತಿಂಗಳಿಗೆ ನಾಲ್ಕು ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಿದರು. ನಂತರ ಅದನ್ನು ಆರು ರೂಪಾಯಿಗೆ ಏರಿಸಲಾಯಿತು.

ಸಿಟಿಐನಲ್ಲಿ, ರಾಜು ದೃಷ್ಟಿಕೋನ, ಸಮತೋಲನ, ಅಂಗರಚನಾಶಾಸ್ತ್ರ ಮತ್ತು ಅನುಪಾತದ ತತ್ವಗಳನ್ನು ಪರಿಚಯಿಸಿದರು. ಕೇಶವಯ್ಯ ಅವರ ಮೇಲ್ವಿಚಾರಣೆಯಲ್ಲಿ, ರಾಜು ಟಂಕಸಾಲೆಯಿಂದ ಭೂದೃಶ್ಯ ಚಿತ್ರಕಲೆ ಮತ್ತು ಯಲವಟ್ಟಿಯಿಂದ ಚಿತ್ರಕಲೆಯ ತಂತ್ರವನ್ನು ಕಲಿತರು. ೧೯೨೬ ರಲ್ಲಿ ಮದ್ರಾಸ್‌ನ ತಾಂತ್ರಿಕ ಸಂಸ್ಥೆಯಿಂದ ಚಿತ್ರಕಲೆ ಮತ್ತು ವಿನ್ಯಾಸದಲ್ಲಿ ಡಿಪ್ಲೊಮವನ್ನು ಪಡೆದರು.

ಪ್ರತಿಷ್ಠಿತ ಜೆ. ಜೆ. ಶಾಲೆಗೆ ಸೇರಿದ ನಂತರ, ರಾಜು ಚಿತ್ರಕಲೆಯಲ್ಲಿ ತನ್ನ ಪ್ರಾಥಮಿಕ ಪರೀಕ್ಷೆಯಲ್ಲಿ ವಿಶಿಷ್ಟವಾಗಿ ಉತ್ತೀರ್ಣರಾದರು. ಒಮ್ಮೆ ರಾಜು ಅವರನ್ನು ಜೆ. ಜೆ. ಸ್ಕೂಲ್ ವಿದ್ಯಾರ್ಥಿಗಳ ಬ್ಯಾಚ್‍ನಲ್ಲಿ ಬರೋಡಾಗೆ ಗಾಯಕ್‍ವಾಡ್ ಅರಮನೆಯ ಛಾವಣಿಯ ಅಲಂಕಾರವನ್ನು ಸಿದ್ಧಪಡಿಸಲು ಮತ್ತು ಕಾರ್ಯಗತಗೊಳಿಸಲು ಕಳುಹಿಸಲಾಯಿತು. ನಂತರ, ಈ ವಿನ್ಯಾಸಗಳನ್ನು ಲಂಡನ್‍ನಲ್ಲಿ ಭಾರತೀಯ ಕಲಾ ನಿಧಿಗಳ ಪ್ರತಿನಿಧಿ ಎಂಬ ಶೀರ್ಷಿಕೆಯಡಿಯಲ್ಲಿ ಪ್ರದರ್ಶಿಸಲಾಯಿತು. ಅವರು ೧೯೩೦ ರಲ್ಲಿ ತಮ್ಮ ಶಿಕ್ಷಣವನ್ನು ಇಲ್ಲಿ ಪೂರ್ಣಗೊಳಿಸಿದರು.[]

ಕಲಾ ವೃತ್ತಿ

[ಬದಲಾಯಿಸಿ]

೧೯೨೬ ರಲ್ಲಿ, ವೈ. ಸುಬ್ರಮಣ್ಯ ರಾಜು ಅವರಿಗೆ ವೇದಾಂತ ದೇಶಿಕರ ಭಾವಚಿತ್ರವನ್ನು ರಚಿಸುವ ಕಾರ್ಯವನ್ನು ಪರಕಾಲ ಮಠದಿಂದ ನೀಡಲಾಯಿತು. ಈ ನೇಮಕದ ನಂತರ, ರಾಜು ಅವರಿಗೆ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಯಲ್ಲಿ ಶಿಕ್ಷಕರಾಗುವ ನೇಮಕಾತಿ ದೊರೆಯಿತು.

ಶಾರದ ಅವರ ಜೊತೆ ವಿವಾಹವಾದ ನ೦ತರ ರಾಜು ಅವರಿಗೆ ಮೈಸೂರು ನಗರಕ್ಕೆ ಯೋಜನೆ ಸಿದ್ಧಪಡಿಸುವ ಅವಕಾಶ ದೊರೆಯಿತು. ನಿಗದಿತ ಸಮಯದಲ್ಲಿ ವಿನ್ಯಾಸಗೊಳಿಸಲಾದ ಯೋಜನೆಯನ್ನು ಅಂದಿನ ಮೈಸೂರು ಆಯುಕ್ತರಾದ ಶ್ರೀ ಎಂ. ಎ. ಶ್ರೀನಿವಾಸನ್ ಅವರು ಬಹಳ ಮೆಚ್ಚಿಕೊಂಡರು.

ರಾಜು ಅವರ ಅತ್ಯಂತ ಮೆಚ್ಚುಗೆ ಪಡೆದ ಕೃತಿಗಳು ಮೈಸೂರು ಅರಮನೆಯ ಕಲ್ಯಾಣ ಮಂಟಪದಲ್ಲಿವೆ. ಕಲ್ಯಾಣ ಮಂಟಪದಲ್ಲಿ ಚಿತ್ರಿಸಲಾದ ೨೮ ಗೋಡೆ ಫಲಕಗಳಲ್ಲಿ ೬ ಅನ್ನು ರಾಜು ಅವರು ಕಾರ್ಯಗತಗೊಳಿಸಿದ್ದಾರೆ.[] ಕಲ್ಯಾಣ ಮಂಟಪದಲ್ಲಿನ ಎಲ್ಲಾ ೨೮ ವರ್ಣಚಿತ್ರಗಳ ಪ್ರಮುಖ ರೇಖಾಚಿತ್ರಗಳನ್ನು ವಿನ್ಯಾಸಗೊಳಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

  1. ಸಂಖ್ಯೆ ೫: ೩ ನೇ ಮೈಸೂರು ಬೆಟಾಲಿಯನ್.
  2. ಸಂಖ್ಯೆ ೧೦: ಪಟ್ಟಾಭಿಷೇಕದ ಆನೆ, ಕುದುರೆ ಮತ್ತು ಪಲ್ಲಕ್ಕಿ.
  3. ಸಂಖ್ಯೆ ೧೮: ರಾಮನು ಚಾಮುಂಡೇಶ್ವರಿ ದೇವಿಯ ಎದುರು ಶಸ್ತ್ರಾಸ್ತ್ರಗಳನ್ನು ಪೂಜಿಸುವ ಚಿತ್ರ.
  4. ಸಂಖ್ಯೆ ೨೪: ನೌಪಥ್ ಆನೆ.
  5. ಸಂಖ್ಯೆ ೨೫: ರಿಯರ್‌ಗಾರ್ಡ್ ಕುದುರೆ.
  6. ಸಂಖ್ಯೆ ೨೮: ಆನೆ - ಎಳೆಯುವ ಗಾಡಿ ಮತ್ತು ಆಂಬ್ಯುಲೆನ್ಸ್.

ದಸರಾ ಹಬ್ಬದ ಸಮಯದಲ್ಲಿ, ಆಯುಧ ಪೂಜೆಯ ಸಂದರ್ಭದಲ್ಲಿ, ಮೈಸೂರು ರಾಜಮನೆತನದ ಮುಖ್ಯಸ್ಥರು ಮೈಸೂರು ಅರಮನೆಯಲ್ಲಿ ರಾಜಮನೆತನದ ಶಸ್ತ್ರಾಸ್ತ್ರಗಳನ್ನು ಪೂಜಿಸುತ್ತಾರೆ. ಈ ಕಾರ್ಯಕ್ರಮ ವೈ. ಸುಬ್ರಮಣ್ಯ ರಾಜು ಅವರ ವರ್ಣಚಿತ್ರದ (ಶ್ರೀ ರಾಮನು ಚಾಮುಂಡೇಶ್ವರಿ ದೇವಿಯ ಮುಂದೆ ಶಸ್ತ್ರಾಸ್ತ್ರಗಳನ್ನು ಪೂಜಿಸುವ ಚಿತ್ರ) ಮುಂದೆ ನಡೆಯುತ್ತದೆ.

೧೯೭೦ ರಲ್ಲಿ ರಾಜು ಅವರ ವಿದ್ಯಾರ್ಥಿ ಎಂ. ಎಸ್. ನಂಜುಂಡ ರಾವ್ ಮತ್ತು ಸ್ನೇಹಿತ ಎಂ. ಆರ್ಯ ಮೂರ್ತಿ ಚಿತ್ರಕಲಾ ಪರಿಷತ್‍ (ಈಗ ಕರ್ನಾಟಕ ಚಿತ್ರಕಲ ಪರಿಷತ್) ಎ೦ಬ ಕಲಾ ಸಂಕೀರ್ಣವನ್ನು ಸ್ಥಾಪಿಸಿದರು. ರಾಜ್ಯದ ಲಲಿತಕಲೆ ಮತ್ತು ಕಲಾವಿದರ ಪ್ರಚಾರಕ್ಕಾಗಿ ಕೆಲಸ ಮಾಡಲು ಅವರೊಂದಿಗೆ ಸೇರಲು ರಾಜು ಅವರನ್ನು ಸಂಪರ್ಕಿಸಿದರು.[] ೧೯೭೦ ರಲ್ಲಿ ಮಲ್ಲೇಶ್ವರಂನ ಗಾಂಧಿ ಸಾಹಿತ್ಯ ಸಂಘದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಜು, ಪರಿಷತ್‍ಗೆ ಸೇರಿದರು.[] ಶೀಘ್ರದಲ್ಲೇ ಪರಿಷತ್ ಈ ಪ್ರದೇಶದ ಸಾಂಪ್ರದಾಯಿಕ ವರ್ಣಚಿತ್ರಗಳ ಸಮೀಕ್ಷೆ ನಡೆಸುವ ಯೋಜನೆಗಳನ್ನು ಕೈಗೆತ್ತಿಕೊಂಡಿತು. ಕಲಾವಿದರಿಗೆ ಸಾಂಪ್ರದಾಯಿಕ ತಂತ್ರದಲ್ಲಿ ತರಬೇತಿ ನೀಡಲು ಕೇಂದ್ರ ಕರಕುಶಲ ಅಭಿವೃದ್ಧಿ ಮಂಡಳಿಯಿಂದ ಮಂಜೂರಾದ ಯೋಜನೆಯನ್ನು ನಂಜುಂಡ ರಾವ್ ಪಡೆದರು, ಇದಕ್ಕೆ ರಾಜು ಅವರಿಗೆ ಸಂಪೂರ್ಣ ಉಸ್ತುವಾರಿ ವಹಿಸಲಾಯಿತು.[]

ಯಾತ್ರಾ ಪಟ್ಟಣ ಶ್ರವಣಬೆಳಗೊಳದ ಜೈನ ಮಠದ ಗೋಡೆಗಳ ಮೇಲೆ ಕೆತ್ತಲಾದ ವರ್ಣಚಿತ್ರಗಳು ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಉಳಿದಿವೆ, ಇದು ೨೦೦ ವರ್ಷಗಳ ಹಿಂದಿನ ಸಮುದಾಯದ ಜೀವನ ವಿಧಾನವನ್ನು ಚಿತ್ರಿಸುತ್ತದೆ. ಮುರುಗಪ್ಪ ಚೆಟ್ಟಿ, ವೈ. ಸುಬ್ರಮಣ್ಯ ರಾಜು, ಎಸ್. ಎಸ್. ಕುಕ್ಕೆ, ಎಂ. ಇ. ಗುರು, ಎಸ್. ಕಾಳಪ್ಪ, ಎಸ್. ಆರ್. ಸ್ವಾಮಿ, ವಿ. ಟಿ. ಕಾಳೆ, ಪುಷ್ಪಾ ದ್ರಾವಿಡ್, ಕಾಳಿದಾಸ್ ಪತ್ತಾರ್, ಎಂ. ಎಸ್. ನಂಜುಂಡರಾವ್ ಮತ್ತು ಎಂ. ಜೆ. ಕಮಲಾಕ್ಷಿ ಎಂಬ ಹನ್ನೊಂದು ಹಿರಿಯ ಕಲಾವಿದರನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ೧೯೭೧ ರಲ್ಲಿ ೨೪ ನೇ ತೀರ್ಥಂಕರರಿಗೆ ಸಂಬಂಧಿಸಿದ ಘಟನೆಗಳನ್ನು ಸುತ್ತುವರೆದಿರುವ ಈ ವರ್ಣಚಿತ್ರಗಳನ್ನು ಪುನರುತ್ಪಾದಿಸಲು ನೇಮಿಸಿತು. ಇದರ ಪರಿಣಾಮವಾಗಿ, ೧೯೭೧ ಮತ್ತು ೧೯೭೮ ರಲ್ಲಿ ಒಟ್ಟು ೯೬ ವರ್ಣಚಿತ್ರಗಳನ್ನು ನಿಯೋಜಿಸಲಾಯಿತು.[]

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]
  • ೧೯೩೧ ರ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ "ದಸರಾ ಪ್ರದರ್ಶನ ಪೋಸ್ಟರ್"ಗಾಗಿ ಚಿನ್ನದ ಪದಕ
  • ೧೯೩೧ ರಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ "ಲ್ಯಾಂಡ್‍ಸ್ಕೇಪ್‍" ವಿಭಾಗದಲ್ಲಿ ಬೆಳ್ಳಿ ಪದಕ.
  • ೧೯೩೧ ರಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ "ವಾಟರ್‌ ಕಲರ್‌" ವಿಭಾಗದಲ್ಲಿ ಬೆಳ್ಳಿ ಪದಕ.
  • ೧೯೩೧ ರಲ್ಲಿ ತಿರುವಾಂಕೂರು ಚಿತ್ರ ತಿರುನಾಳ್ ಐ.ಸಿ. ಪ್ರದರ್ಶನದಲ್ಲಿ ಚಿನ್ನದ ಪದಕ.
  • ೧೯೩೧ ರಲ್ಲಿ ಮೈಸೂರು ಫೈನ್ ಆರ್ಟ್ ಸೊಸೈಟಿಯಿಂದ "ಹುಸ್ಕೂರ್ ಚನ್ನಾ ಬಸಪ್ಪ" ಪ್ರಶಸ್ತಿ.
  • ೧೯೩೧ ರಲ್ಲಿ ಬಾಂಬೆ ಆರ್ಟ್ ಸೊಸೈಟಿಯಿಂದ "ಒ. ವಿ. ಮುಲ್ಲರ್ಸ್ ಸ್ಮಾರಕ ನಿಧಿ ಪ್ರಶಸ್ತಿ".
  • ೧೯೩೧ ರಲ್ಲಿ ಮದ್ರಾಸ್ ಫೈನ್ ಆರ್ಟ್ ಸೊಸೈಟಿ ಪ್ರಶಸ್ತಿ
  • ೧೯೩೨ ರಲ್ಲಿ ಬೆಂಗಳೂರು ಕಲಾಮಂದಿರ ಪ್ರದರ್ಶನದಲ್ಲಿ ಚಿನ್ನದ ಪದಕ.
  • ೧೯೩೨ ರಲ್ಲಿ ಸಿಮ್ಲಾ ಫೈನ್ ಆರ್ಟ್ ಸೊಸೈಟಿ ಪ್ರಶಸ್ತಿ.
  • ೧೯೩೫ ರಲ್ಲಿ ಮೈಸೂರು ಕಲಾವಿದನ ಅತ್ಯುತ್ತಮ ಕೃತಿಗಾಗಿ "ಎಚ್. ಎಚ್. ಯುವರಾಜ ಪ್ರಶಸ್ತಿ".
  • ೧೯೫೩ ರಲ್ಲಿ ಗಣತಿದಾರರಾಗಿ ಜನಗಣತಿಗಾಗಿ ಭಾರತ ಸರ್ಕಾರದಿಂದ ಬೆಳ್ಳಿ ಪದಕ.
  • ೧೯೬೨ ರಲ್ಲಿ ಮೈಸೂರು ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ.
  • ೧೯೭೧ ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗೌರವ ಪ್ರಶಸ್ತಿ.[]
  • ೧೯೭೨ ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರಿಂದ ರಾಜ್ಯ ಪ್ರಶಸ್ತಿ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ).
  • ಸೋಮವಂಶ ಆರ್ಯ ಕ್ಷತ್ರಿಯ ಸಮಾಜವು ೧೯೭೩ ರಲ್ಲಿ "ಚಿತ್ರಕಲಾ ಪ್ರವೀಣ" ಎಂಬ ಬಿರುದನ್ನು ನೀಡಿತು.
  • ೧೯೭೭ ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ.
  • ೧೯೭೭ ರಲ್ಲಿ ರಾಜ್ಯ ಯುವ ಬರಹಗಾರರ ಮತ್ತು ಕಲಾವಿದರ ಸಂಘ, ಬೆಂಗಳೂರು ಈ ಗೌರವಕ್ಕೆ ಪಾತ್ರವಾದರು.
  • ೧೯೮೫ ರಲ್ಲಿ ಅಖಿಲ ಭಾರತ ಲಲಿತಕಲೆ ಮತ್ತು ಕರಕುಶಲ ಸೊಸೈಟಿ ಪ್ರಶಸ್ತಿ.
  • ೧೯೮೬ ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ "ಎಮೆರಿಟಸ್ ಫೆಲೋಶಿಪ್".
  • ೧೯೮೭ ರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಶ್ರೀ ಆರ್. ವೆಂಕಟರಾಮನ್ ಅವರಿಂದ ಭಾರತ ಸರ್ಕಾರದಿಂದ "ಸಾಂಪ್ರದಾಯಿಕ ಮೈಸೂರು ಚಿತ್ರಕಲೆಯಲ್ಲಿ ಅವರ ಶ್ರೇಷ್ಠತೆಗಾಗಿ ರಾಷ್ಟ್ರೀಯ ಪ್ರಶಸ್ತಿ".
  • ೧೯೮೯ ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಶ್ರೀ ನೀಲಂ ಸಂಜೀವ ರೆಡ್ಡಿ ಅವರಿಂದ ಸನ್ಮಾನ.
  • ೧೯೯೩ ರಲ್ಲಿ ಶ್ರೀಮತಿ ದೇವಿಕಾ ರಾಣಿ ರೋರಿಚ್ ಅವರ ರೋರಿಚ್ ಆರ್ಟ್ ಸೆಂಟರ್‌ನಿಂದ "ಸ್ವೆಟೋಸ್ಲಾವ್ ರೋರಿಚ್ ಪ್ರಶಸ್ತಿ".

ಪುಸ್ತಕಗಳು

[ಬದಲಾಯಿಸಿ]

ವೈ. ಸುಬ್ರಮಣ್ಯ ರಾಜು ಅವರ ಬಗ್ಗೆ ಈ ಕೆಳಗಿನ ಪುಸ್ತಕಗಳಲ್ಲಿ ಬರೆಯಲಾಗಿದೆ.

  • ವೈ.ಸುಬ್ರಮಣ್ಯ ರಾಜು: ಕರ್ನಾಟಕ ಲಲಿತಕಲಾ ಅಕಾಡೆಮಿ ೧೯೮೭ ರಲ್ಲಿ ಪ್ರಕಟಿಸಿದ ಎಸ್.ಎನ್.ಚಂದ್ರಶೇಖರ್ ಅವರು ಬರೆದ ಜೀವನಚರಿತ್ರೆ.
  • ೨೦೦೮ ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರಕಟಿಸಿದ ಚಿತ್ರಗಾರುಡಿಗ ವೈ. ಸುಬ್ರಮಣ್ಯ ರಾಜು.
  • ೨೦೦೮ ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರಕಟಿಸಿದ ವೈ.ಸುಬ್ರಮಣ್ಯ ರಾಜು ಶತಮಾನೋತ್ಸವ ಆಚರಣೆ.
  • ಹಿರಿಯ ಕಲಾವಿದರ ಶತಮಾನೋತ್ಸವ, ಕರ್ನಾಟಕ ಲಲಿತಕಲಾ ಅಕಾಡೆಮಿ ೨೦೧೧ ರಲ್ಲಿ ಪ್ರಕಟಿಸಿತು.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ Y. Subramanya Raju. Karnataka: Karnataka Lalithakala Academy. 1987.
  2. "In their true colours". Deccan Herald.
  3. "Tracing an artistic journey". Deccan Herald.
  4. "Chitrakala Parishath: An art haven like no other". The Hindu.
  5. "Rare Jain paintings to be displayed at Chitrakala Parishath". The Times Of India. 19 Jan 2018. Retrieved 27 Sep 2019.
  6. "Karnataka Chitrakala Parishath". Archived from the original on 2020-01-02. Retrieved 2024-05-04.

ಮತ್ತಷ್ಟು ಓದಿ

[ಬದಲಾಯಿಸಿ]