ವಿಷಯಕ್ಕೆ ಹೋಗು

ವೈಶಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈಶಾಲಿಯ ಅಶೋಕ ಸ್ತಂಭದ ಬೋದಿಗೆ

ವೈಶಾಲಿ ಅಥವಾ ವೇಸಾಲಿ ಭಾರತದ ಇಂದಿನ ಬಿಹಾರ ರಾಜ್ಯದ ನಗರವಾಗಿತ್ತು. ಈಗ ಇದು ಪುರಾತತ್ವ ತಾಣವಾಗಿದೆ. ಇದು ತಿರ್ಹುತ್ ವಿಭಾಗದ ಭಾಗವಾಗಿದೆ.[]

ಇದು ಕ್ರಿ.ಪೂ ೬ ನೇ ಶತಮಾನದ ಸುಮಾರು ಗಣರಾಜ್ಯದ ಮೊದಲ ಉದಾಹರಣೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ವಜ್ಜಿ ಮಹಾಜನಪದ (ವೃಜ್ಜಿ ಮಹಾಜನಪದ) ರಾಜಧಾನಿಯಾಗಿತ್ತು. ಗೌತಮ ಬುದ್ಧ ಕ್ರಿ.ಪೂ. ೪೮೩ರಲ್ಲಿ ತನ್ನ ಮರಣದ ಮೊದಲು ತನ್ನ ಕೊನೆಯ ಧರ್ಮೋಪದೇಶವನ್ನು ಇಲ್ಲಿ ನೀಡಿದ. ನಂತರ ಕ್ರಿ.ಪೂ. ೩೮೩ರಲ್ಲಿ ಎರಡನೇ ಬೌದ್ಧ ಪರಿಷತ್ತನ್ನು ಕಾಲಸೋಕ ರಾಜನು ಇಲ್ಲಿ ನಡೆಸಿದನು. ಹಾಗಾಗಿ ಇದು ಜೈನ ಮತ್ತು ಬೌದ್ಧ ಧರ್ಮ ಎರಡರಲ್ಲೂ ಪ್ರಮುಖ ಸ್ಥಾನವಾಗಿದೆ.[][][] ಇದು ಅತ್ಯುತ್ತಮವಾಗಿ ಸಂರಕ್ಷಿತವಾಗಿರುವ ಒಂದು ಅಶೋಕ ಸ್ತಂಭವನ್ನು ಹೊಂದಿದೆ. ಸ್ತಂಭದ ತುದಿಯಲ್ಲಿ ಒಂದು ಸಿಂಹವಿದೆ ( 26°00′51″N 85°06′33″E / 26.014162°N 85.109220°E / 26.014162; 85.109220 ) .

ವೈಶಾಲಿಯಲ್ಲಿ ಸ್ತೂಪ
ಅಭಿಷೇಕ್ ಪುಷ್ಕರಿಣಿ, ಪಟ್ಟಾಭಿಷೇಕದ ತೊಟ್ಟಿ, ಬುದ್ಧನ ಅವಶೇಷ ಸ್ತೂಪ, ವೈಶಾಲಿ ಬಳಿ ಇದೆ.

ಬೌದ್ಧಧರ್ಮ ಮತ್ತು ಜೈನ ಧರ್ಮದ ಆಗಮನಕ್ಕೂ ಮುಂಚೆಯೇ, ವೈಶಾಲಿಯು ಗಣತಂತ್ರವಾದಿ ಲಿಚ್ಚವಿ ರಾಜ್ಯದ ರಾಜಧಾನಿಯಾಗಿತ್ತು.[][] ಆ ಅವಧಿಯಲ್ಲಿ, ವೈಶಾಲಿ ಒಂದು ಪ್ರಾಚೀನ ಮಹಾನಗರ ಮತ್ತು ವೈಶಾಲಿ ರಾಜ್ಯ ಗಣತಂತ್ರದ ರಾಜಧಾನಿಯಾಗಿತ್ತು. ಅದು ಇಂದಿನ ಬಿಹಾರ ರಾಜ್ಯದ ಹಿಮಾಲಯ ಗಂಗಾ ಪ್ರದೇಶದ ಬಹುಭಾಗವನ್ನು ಒಳಗೊಂಡಿತ್ತು. ಆದಾಗ್ಯೂ, ವೈಶಾಲಿಯ ಆರಂಭಿಕ ಇತಿಹಾಸದ ಬಗ್ಗೆ ಬಹಳ ಕಡಿಮೆ ತಿಳಿದುಬಂದಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Tirhut Division". tirhut-muzaffarpur.bih.nic.in. Archived from the original on 16 ಮಾರ್ಚ್ 2015. Retrieved 26 December 2019.
  2. Bindloss, Joe; Sarina Singh (2007). India: Lonely planet Guide. Lonely Planet. p. 556. ISBN 978-1-74104-308-2.
  3. Hoiberg, Dale; Indu Ramchandani (2000). Students' Britannica India, Volumes 1-5. Popular Prakashan. p. 208. ISBN 0-85229-760-2.
  4. Kulke, Hermann; Dietmar Rothermund (2004). A history of India. Routledge. p. 57. ISBN 0-415-32919-1.
  5. "BSTDC". BSTDC. Archived from the original on 22 ಜುಲೈ 2015. Retrieved 26 December 2019.
  6. VaishaliEncyclopædia Britannica

ಹೆಚ್ಚಿನ ಓದಿಗೆ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]

"https://kn.wikipedia.org/w/index.php?title=ವೈಶಾಲಿ&oldid=1127381" ಇಂದ ಪಡೆಯಲ್ಪಟ್ಟಿದೆ