ವಿಶ್ಲೇಷಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ಲೇಷಣೆಯು ಒಂದು ಸಂಕೀರ್ಣ ವಿಷಯ ಅಥವಾ ವಸ್ತುವಿನ ಬಗ್ಗೆ ಹೆಚ್ಚು ಉತ್ತಮ ತಿಳುವಳಿಕೆ ಪಡೆಯಲು ಅದನ್ನು ಹೆಚ್ಚು ಸಣ್ಣ ಭಾಗಗಳಾಗಿ ಒಡೆಯುವ ಪ್ರಕ್ರಿಯೆ. ಈ ತಂತ್ರವನ್ನು ಗಣಿತ ಮತ್ತು ತರ್ಕಶಾಸ್ತ್ರದ ಅಧ್ಯಯನದಲ್ಲಿ ಅರಿಸ್ಟಾಟಲ್‌‍ಗಿಂತ (ಕ್ರಿ.ಪೂ. ೩೮೪-೩೨೨) ಹಿಂದಿನ ಕಾಲದಿಂದ ಅನ್ವಯಿಸಲಾಗಿದೆ. ಆದರೆ ಒಂದು ವಿಧ್ಯುಕ್ತ ಪರಿಕಲ್ಪನೆಯಾಗಿ ವಿಶ್ಲೇಷಣೆಯು ತುಲನಾತ್ಮಕವಾಗಿ ಇತ್ತೀಚಿನ ಬೆಳವಣಿಗೆಯಾಗಿದೆ.[೧]

ಒಂದು ವಿಧ್ಯುಕ್ತ ಪರಿಕಲ್ಪನೆಯಾಗಿ, ಈ ವಿಧಾನಕ್ಕೆ ನಾನಾ ಬಗೆಯಾಗಿ ಅಲ್ಹೇಜ಼ನ್, ರೆನೆ ಡೆಸ್ಕಾರ್ಟೆ ಮತ್ತು ಗೆಲಿಲಿಯೋ ಗೆಲಿಲಿರನ್ನು ಹೊಣೆಮಾಡಲಾಗಿದೆ. ಇದಕ್ಕೆ ಸರ್ ಐಸಾಕ್ ನ್ಯೂಟನ್‍‍ರನ್ನೂ ಹೊಣೆಮಾಡಲಾಗಿದೆ, ಭೌತಿಕ ಪರಿಶೋಧನೆಯ ವ್ಯಾವಹಾರಿಕ ವಿಧಾನದ ರೂಪದಲ್ಲಿ (ಇದನ್ನು ಅವರು ಹೆಸರಿಸಲಿಲ್ಲ).

ರಸಾಯನಶಾಸ್ತ್ರದ ಕ್ಷೇತ್ರವು ವಿಶ್ಲೇಷಣೆಯನ್ನು ಕನಿಷ್ಠಪಕ್ಷ ಮೂರು ರೀತಿಗಳಲ್ಲಿ ಬಳಸುತ್ತದೆ: ಒಂದು ನಿರ್ದಿಷ್ಟ ರಾಸಾಯನಿಕ ಸಂಯುಕ್ತದ ಘಟಕಗಳನ್ನು ಗುರುತಿಸಲು (ಗುಣಾತ್ಮಕ ವಿಶ್ಲೇಷಣೆ), ಒಂದು ಮಿಶ್ರಣದಲ್ಲಿನ ಘಟಕಗಳ ಪ್ರಮಾಣಗಳನ್ನು ಗುರುತಿಸಲು (ಪರಿಣಾಮಾತ್ಮಕ ವಿಶ್ಲೇಷಣೆ), ಮತ್ತು ರಾಸಾಯನಿಕೆ ಪ್ರಕ್ರಿಯೆಗಳನ್ನು ವಿಘಟಿಸಿ ದ್ರವ್ಯಮೂಲಧಾತುಗಳ ನಡುವಿನ ರಾಸಾಯನಿಕ ಕ್ರಿಯೆಗಳನ್ನು ಪರೀಕ್ಷಿಸುವುದು.

ಉಲ್ಲೇಖಗಳು[ಬದಲಾಯಿಸಿ]

  1. Michael Beaney (Summer 2012). "Analysis". The Stanford Encyclopedia of Philosophy. Michael Beaney. Retrieved 23 May 2012.