"ಹೃಷಿಕೇಶ್ ಮುಖರ್ಜಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
(~~~~)
((~~~~))
 
ಹೃಷಿಕೇ‍ಶ್ ಮುಖರ್ಜಿ ಯವರು, ಹಿಂದಿ ಚಿತ್ರರಂಗದಲ್ಲಿ ೪೬ ಕ್ಕೂ ಹೆಚ್ಚು ಅಶ್ಲೀಲದ ಲೇಪವೂ ಇಲ್ಲದ, ಕ್ರೌರ್ಯ, ಗಲಭೆ ಗಳಿಲ್ಲದ ನವಿರಾದ ಹಾಸ್ಯಪ್ರಧಾನವಾದ ಮತ್ತು ಅದರಲ್ಲಿಯೇ ಮಾನವೀಯನ್ನು ಸಾರುವ ಚಿತ್ರಗಳನ್ನು ನಿರ್ಮಿಸಿದರು. ಅವರು ತಮ್ಮ ಅನಾರೋಗ್ಯದಿಂದಾಗಿ ಕೆಲವು ವರ್ಷಗಳಿಂದ ಕೆಲಸ ನಿಲ್ಲಿಸಿದ್ದು ಮತ್ತೆ ಇತ್ತೀಚೆಗೆ 'ಝೂಟ್ ಬೋಲೆ ಕವ್ವಾಕಾಟೆ' ಎಂಬ ಚಿತ್ರ ತಯಾರಿಸಿದರು. ಅವರಂತೆಯೇ ಶ್ರೀ. ಸತ್ಯಜಿತ್ ರೆ, ಬಿಮಾಲ್ ರಾಯ್ ತರಹ, ಬಂಗಾಲಿ ಕಲಾವಿದರುಗಳು ಅವರ ಕಲಾತ್ಮಕತೆ, ಸೂಕ್ಷ್ಮಸಂವೇದನೆ, ಸಂಗೀತ, ತೀವ್ರತೆಗಳಿಂದ ಹಲವಾರು ಚಿತ್ರಗಳನ್ನು ತಯಾರಿಸಿದ್ದಾರೆ.ಮುಖರ್ಜಿಯವರು 'ತಲಾಶ್' ಎಂಬ ಟಿ.ವಿ.ಸೀರಿಯಲ್ ಮಾಡಿದ್ದರು. ಅವರ ಇನ್ನೊಂದು ಪಾರಿವಾರಿಕ ಅವಿಭಕ್ತ ಕುಟುಂಬ ವನ್ನು ಕುರಿತು ತಯಾರಿಸಿದ 'ಬಾವರ್ಚಿ' ಚಿತ್ರ ! ಸಾಮರಸ್ಯತೆಇಲ್ಲದ ಸಂಸಾರ ವನ್ನು ಕುರಿತದ್ದು ! ಅವಿಭಕ್ತ ಕುಠುಂಬದ ನೊವು ನಲಿವುಗಳು, ಹೊಂದಾಣಿಕೆ ಕಾಣದೆ ಒಳೊಳಗೇ ನಡೆದಿರುವ ಶೀತ ಸಮರದ ನೈಜ ಚಿತ್ರಣ. ಹಿಂದಿ ಚಿತ್ರದ ಅನುಪಮ ನಿರ್ದೇಶಕ, ಹೃಷಿದಾ , ರವಿವಾರ, ೨೭ನೆ ಆಗಸ್ಟ್, ೨೦೦೬ ರ ಮಧ್ಯಾನ್ಹ ೪-೩೦ ಕ್ಕೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು.
 
==ಹೃಷಿದಾ ನಿರ್ದೇಶಿಸಿದ ಹಲವು ಚಿತ್ರಗಳಲ್ಲಿ, ಜನರ ಮನ್ನಣೆ ಗಳಿಸಿದ ಚಿತ್ರಗಳು ==
 
[[೧೯೬೦]]ರಲ್ಲಿ ನಿರ್ಮಾಣಗೊಂಡ 'ಅನುರಾಧ' ಚಿತ್ರದೊಂದಿಗೆ ಮುಖರ್ಜಿ ಯಶಸ್ಸಿನ ದಾರಿ ಹಿಡಿದರು. ಕರ್ತವ್ಯವನ್ನೇ ದೇವರು ಎಂದು ಭಾವಿಸುವ ವೈದ್ಯನೊನ್ನ ತನ್ನ ಕುಟುಂಬವನ್ನೇ ಕಡೆಗಣಿಸುವ ಕತೆ 'ಅನುರಾಧ'ದಲ್ಲಿತ್ತು. ಈ ಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕವೂ ಲಭಿಸಿತು. ಈ ಚಿತ್ರಕ್ಕೆ ಜಗದ್ವಿಖ್ಯಾತ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರು ಸಂಗೀತ ಸಂಯೋಜಿಸಿದ್ದರು.
 
ಆನಂತರ ಮುಖರ್ಜಿ 'ಅನುಪಮ' 'ಆಶೀರ್ವಾದ್' ಹಾಗೂ 'ಸತ್ಯಕಾಮ್' ಮುಂತಾದ ಹಲವಾರು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದರು. ಆಕ್ಷನ್ ಹೀರೋ ಆಗಿದ್ದ ಧರ್ಮೇಂದ್ರರಿಗೆ ಸಂಪೂರ್ಣ ವಿಭಿನ್ನ ಪಾತ್ರಗಳು ಸಿಕ್ಕಿದ್ದು ಮುಖರ್ಜಿ ಅವರ ಚಿತ್ರಗಳಿಂದಲೇ. ಇವತ್ತು ಮಿಂಚುತ್ತಿರುವ [[ಅಮಿತಾಭ್ ಬಚ್ಚನ್]] ಪ್ರಸಿದ್ಧಿ ಪಡೆದಿದ್ದು ಹೃಷಿಕೇಶ್ ಅವರ 'ಆನಂದ್' ಚಿತ್ರದ ಮೂಲಕ. ಜಯಾ ಬಚ್ಚನ್ ಬೆಳಕಿಗೆ ಬಂದದ್ದು 'ಗುಡ್ಡಿ' ಚಿತ್ರದ ಮೂಲಕ. [[ಚುಪ್ಕೆ ಚುಪ್ಕೆ]], [[ಬಾವರ್ಚಿ]], [[ಗುಡ್ಡಿ]] ಹಾಗೂ [[ರಜನಿಗಂಧ್]] ಮೊದಲಾದ ಚಿತ್ರಗಳು [[ಭಾರತೀಯ ಚಿತ್ರರಂಗ]]ದ ಮೈಲಿಗಲ್ಲುಗಳೆಂದು ಕರೆಸಿಕೊಳ್ಳಲ್ಪಟ್ಟಿವೆ (ಕರೆಸಿಕೊಳ್ಳಲ್ಪಡುತ್ತವೆ). ’ಝೂಟ್ ಬೋಲೆ ಕವ್ವಾ ಕಾಟ” - ಇವರು ನಿರ್ದೇಶಿಸಿದ ಕೊನೆಯ ಚಲನಚಿತ್ರ. ಬಿಮಲ್ ರಾಯ್ ಗರಡಿಯಲ್ಲಿ ಪಳಗಿದ ಇನ್ನೊಬ್ಬ ಪ್ರತಿಭಾನ್ವಿತ ಕವಿ,ನಿರ್ದೇಶಕ ಗುಲ್ಜಾರ್ ಕೂಡ ಒಬ್ಬರು.
ಕನ್ನಡದಲ್ಲಿ== ಕನ್ನಡಭಾಷೆಯಲ್ಲಿ ರೀ-ಮೇಕ್ ಆದ ಇವರ ಚಲನಚಿತ್ರಗಳು, ==
 
ಝೂಟ್ ಬೋಲೆ ಕವ್ವಾ ಕಾಟೆ - ಇವರು ನಿರ್ದೇಶಿಸಿದ ಕೊನೆಯ ಚಲನಚಿತ್ರ.
 
ಬಿಮಲ್ ರಾಯ್ ಗರಡಿಯಲ್ಲಿ ಪಳಗಿದ ಇನ್ನೊಬ್ಬ ಪ್ರತಿಭಾನ್ವಿತ ಕವಿ,ನಿರ್ದೇಶಕ ಗುಲ್ಜಾರ್ ಕೂಡ ಒಬ್ಬರು.
 
ಕನ್ನಡದಲ್ಲಿ ರೀ-ಮೇಕ್ ಆದ ಇವರ ಚಲನಚಿತ್ರಗಳು,
ಗೋಲ್-ಮಾಲ್ --- ಆಸೆಗೊಬ್ಬ ಮೀಸೆಗೊಬ್ಬ
ಚುಪ್ಕೆ-ಚುಪ್ಕೆ --- ಜೋಕ್-ಫಾಲ್ಸ್
ಬಾವರ್ಚಿ --- #೭೩, ಶಾಂತಿ ನಿವಾಸ
 
ಗೋಲ್-ಮಾಲ್ --- [[ಆಸೆಗೊಬ್ಬ ಮೀಸೆಗೊಬ್ಬ]]
ಚುಪ್ಕೆ-ಚುಪ್ಕೆ --- [[ಜೋಕ್-ಫಾಲ್ಸ್]]
ಬಾವರ್ಚಿ --- [[#೭೩, ಶಾಂತಿ ನಿವಾಸ]]
== ಹೃಷಿದಾರವರ ಕಲಾವಂತಿಕೆ, ಹಾಗೂ ಸಾಮಾಜಿಕ ಪ್ರಜ್ಞೆ ಗೆ ಕನ್ನಡಿಹಿಡಿದ ಪ್ರಭಾವಿ ದೃಷ್ಯಮಾಧ್ಯಮ-[[ಬಾವರ್ಚಿ]] ಚಿತ್ರ ==
 
ಚಿತ್ರದ ಮೊದಲು, ಪರಿಚಯವನ್ನು [[ಅಮಿತಾಬ್ ಬಚ್ಚನ್ ]]ಮಾಡುತ್ತಾರೆ. ಕೊನೆಗೆ ಚಿತ್ರದ ಅಂತ್ಯವೂ ಅಮಿತಾಬ್ ರವರ ಧ್ವನಿ '[[ಐಸ ರಹ ರಘು ನಂದನ್ ಕೀ ಯಾತ್ರ]], [[ಎಕ್ ಸೆ ಅನೇಕ್ ನಜಾನೆ ಔರ್ ಕಿತನೆ ಲೋಗೋಂ ಕೊ ಇನ್ ಕ ಜರುರತ ಹೊ]]' ! ಈ ಚಿತ್ರದಲ್ಲಿ ಬರುವ ಹಾಡುಗಳು : '[[ಭೊರ್ ಆಯಿಗಯ ಅಂಧಿಯಾರ]]', (ಮನ್ನಾಡೆ, ಕಿಶೊರ್ ಕುಮಾರ್, ಲಕ್ಷ್ಮೀ ಶಂಕರ್ ), '[[ಕಾಹೆ ಕಾನ್ಹ ಕರತ್ ]]' (ಲಕ್ಷ್ಮಿಶಂಕರ್), '[[ಮೊರೆ ನೈನ ಬಹಾಯೆ ನೀರ್]]' ( ಲತಾ), '[[ತುಮ್ ಬಿನ್ ಜೀವನ್ ಕೈಸಾ]]' ( ಮನ್ನಾಡೆ)
 
==['''[ಬಾವರ್ಚಿ]] ಚಿತ್ರ, ಏಕೆ ಜನರ ಮನಮುಟ್ಟಲು ಸಾಧ್ಯವಾಗಿದೆ.=='''
 
ಚಿತ್ರದ ಬಗ್ಗೆ ಹೇಳಲೇಬೇಕಾದ ವಿಷಯಗಳಿವೆ. [[ಮನಮುಟ್ಟುವ ಸಂಭಾಷಣೆ]], [[ಪೂರಕವಾದ ಸಂಗೀತ]], ಎಲ್ಲಾ, ಇನ್ನೂ ಹೆಸರು ಗಳಿಸದ ಉದ್ಯೋನ್ಮುಖ ಕಲಾವಿದರು. ರಾಜೇಶ್ ಖನ್ನ, ಮತ್ತು ಜಯ ಬಾಧುರಿ ಜನಪ್ರಿಯತೆಯ ಶಿಖರಕ್ಕೆ ತಲುಪಿದ್ದೂ ಇಲ್ಲಿಂದಲೆ. ಸಿಕ್ಕ ಚಿಕ್ಕ ಪುಟ್ಟ ಸಂದರ್ಭಗಳನ್ನು ಸೊಗಸಾಗಿ ಉಪಯೋಗಿಸಿರುವ ತಂತ್ರ, ಕಲಾತ್ಮಕತೆ ! ಉದಾ: ಪಾತ್ರೆತೊಳೆಯುವ ಕಲ್ಲಿನ, ಅಥವ ಬಟ್ಟೆಒಗೆಯುವ ಕಲ್ಲಿನ ಬಳಿ ಮನೆಮಂದಿಯೆಲ್ಲಾ ಆನಂದದಿಂದ ಹಾಡಿ ಮಾಡಿದ ನೃತ್ಯಕ್ಕೆ ಸರಿಸಾಟಿಯಾದ ಸಾಮ್ಯತೆ ಚಿತ್ರ ಜಗತ್ತಿನಲ್ಲಿ ಕೇವಲ ಹೃಷಿದಾ ಮಾತ್ರ ಮಾಡಬಲ್ಲರು ! " [[ಓ ರಾಹಿ ಗಯ ಅಂಧಿಯಾರಾ]]....ಹಾಡಿನ ಕೊನೆಗೆ [[ಹರೀಂದ್ರನಾಥ ಚಟ್ಟೋಪಾಧ್ಯಾಯ]] ಅಲ್ಲಿಗೆ ಬರುತ್ತಾರೆ. ಅವರು ತಮ್ಮದೇ ಆದ ಶೈಲಿಯಲ್ಲಿ [[ದೇತಾ ಹೈ ಕಿತನಾ]] ....[[ಉತನಾ ಫಲ್ ಪಾತಾ ಹೈ]]....ನಂತರ ಅಸ್ರಾನಿ, ಗಿಟಾರ್ ಬಾರಿಸುತ್ತಾ, [[ಗುಡ್ ಮಾರ್ನಿಂಗ್]], [[ಗುಡ್ ಮಾರ್ನಿಂಗ್ ದಾದಾಜಿ]]...[[ಹ್ಯಾಪಿ ಡೇಸ್ ಆರ್ ಕಾಮಿಂಗ್]]....ಇತ್ಯಾದಿ. ಹಿರಿಯ ಸೊಸೆಯರು ಒಬ್ಬರನ್ನೊಬ್ಬರು ಮುಖ ಕೊಟ್ಟು ಮಾತನಾಡದ ಮನೆಯಲ್ಲಿ ಅವರು ನೃತ್ಯ ಮಾಡುತ್ತಾರೆ. ರಾಜೇಶ್ ಖನ್ನಾ ಅವರ ಹೆಜ್ಜೆಗಳನ್ನು ನಿಯಂತ್ರಿಸುತ್ತಾರೆ. ಒಂದು ಕ್ಷಣದಲ್ಲಿ ಮನೆ [[ಸ್ವರ್ಗ]]ವಾಗುತ್ತದೆ !
 
=='''ಚಿತ್ರಕೊಡುವ ಸಂದೇಶ, ಬಹಳ ಹೃದಯಂಗಮವಾಗಿದೆ.''' ==
 
ಒಂದು ಅಂಶ ಹೇಳಬೇಕೆಂದರೆ, ಚಿತ್ರ ನೋಡಿ ಹಲವು ದಿನಗಳ ನಂತರವೂ ನಮ್ಮಮೇಲೆ ಬೀರಿದ ಅದರ ಛಾಪು ! "[[ ಸಬ್ ಲೊಗ್ ಅಪ್ನ ಕಾಮ್ ಕರ್ತೆಹೈ]] ; [[ಲೆಕಿನ್, ದೂಸ್ರೋಂಕ ಕಾಮ್ ಕರ್ನೆಮೆ ಕಿತನ ಮಜಾ ಹೈ]], [[ವಹ್ ಔರ್ ಭಿ ದುಗನಾ ಹೈ]] " ಇಂತಹ ಅನೇಕ ನೀತಿಯುತ ವಾಕ್ಯಗಳು ಯಾರಿಗೂ ಬೇಸರ ತರದೆ, ಮನರಂಜನೆಯ ಪ್ರಮುಖ ವಾಹಿನಿಯಲ್ಲಿ ಸೇರಿ ಹೋಗುತ್ತವೆ ! ಪ್ರಖ್ಯಾತ ನಿರ್ದೇಶಕ ಬಿಮಾಲ್ ದ ಬಳಿ ಸಹಾಯಕರಾಗಿ ಕಲ್ಕತ್ತಾ ದಲ್ಲಿ ಕೆಲಸಮಾಡಿ ನುರಿತು, ಅವರು ಮಾಡಿದ ಮೊದಲ ಚಿತ್ರ 'ಮುಸಾಫಿರ್' ಇದು ಅಷ್ಟೊಂದು ಜನಪ್ರಿಯತೆಗಳಿಸಲಿಲ್ಲ.ರಾಜ್ ಕಪೂರ್ ಅವರಿಗೆ ತಮ್ಮ 'ಅನಾಡಿ' ಚಿತ್ರದ ನಿರ್ದೇಶನವನ್ನು ವಹಿಸಿದರು.(೧೯೫೯) ಅನುರಾಧ (೧೯೬೦) ಅವರ ಚಿತ್ರಗಳಾದ ಆನಂದ್(೧೯೭೦), ಅಭಿಮಾನ್(೧೯೭೩), ಬಾವರ್ಚಿ(೧೯೭೨), ಸತ್ಯಕಾಂ(೧೯೬೯), ನಮಕ್ ಹರಾಮ್(೧೯೭೩), ಚುಪ್ ಕೆ ಚುಪ್ ಕೆ(೧೯೭೫), ಬೇಮಿಸಾಲ್, ಗೋಲ್ ಮಾಲ್ (೧೯೭೯) ಅಪಾರ ಜನಪ್ರಿಯ ತೆಯನ್ನು ಗಳಿಸಿದವು. ಸುಮಾರಾಗಿ ಅವರ ಕೆಲವು ಚಿತ್ರಗಳಿಗೆ ಎಸ್. ಡಿ. ಬರ್ಮನ್ ರ ಸುಶ್ರಾವ್ಯ ಸಂಗೀತ. ೧೯೪೭ ರಿಂದ ಅವರು ಅತ್ಯಂತ ಪ್ರಿತಿಭಾನ್ವಿತ ವ್ಯಕ್ತಿಗಳ ಸಂಪರ್ಕದಲ್ಲಿದ್ದು ಅನೇಕ ಚಿತ್ರಗಳಲ್ಲಿ ನವ ಕಲ್ಪನೆ,ವಿಚಾರಧಾರೆಗಳಿಂದ ವಿಶಿಷ್ಟ ಕಲೋಪಾಸಕರಾಗಿ ಗುರುತಿಸಲ್ಪಟ್ಟಿದ್ದಾರೆ. ಇಂತಹ ಕಿರಿದಾರ್ ಗಳು ಅವರ ಯಶಸ್ಸನ್ನು ಹೆಚ್ಚಿಸಿದವು. ಫಿಲ್ಮ್ಸ್ ಸೆನ್ಸಾರೆ ಬೋರ್ಡಿನ ಛೇರ್ಮನ್ ಆಗಿಯೂ, ಎನ್.ಎಫ್,ಡಿ.ಸಿ.ಛೇರ್ ಮನ್ ಆಗಿಯೂ ಕೆಲಸ ಮಾಡಿದ್ದಾರೆ.
 
ಇನ್ನೊಂದು ವಿಶೇಷವೆಂದರೆ ಅವರ ಎಲ್ಲಾ ಚಿತ್ರಗಳಲ್ಲೂ, ಮನಮೋಹಕ ಮಧುರ ಸಂಗೀತದ ಹೊನಲನ್ನು ಕಾಣಬಹುದು. ಬೊಂಬಾಯಿಗೆ ಬರುವ ಮೊದಲು ಅವರು ಕಲ್ಕತ್ತಾ ಆಕಾಶವಾಣಿ ಕೇಂದ್ರದಲ್ಲಿ [[ಸಿತಾರ್ ವಾದಕ]] ರಾಗಿದ್ದರು. ಸಂಗೀತದ ಈ ಪರಿಶ್ರಮವೇ ಅವರ ಚಿತ್ರದಲ್ಲಿನ ಹಾಡುಗಳಲ್ಲಿ ಅವರು ತುಂಬಿದ ಮಧುರ ರಸವನ್ನು ನಾವು ಕಾಣಬಹುದು !
 
==ಹೄಷಿದಾ ಚಿತ್ರಗಳಲ್ಲಿ ಜಾಡುಕಂಡ ಕೆಲವೇ, ಅತಿ ಜನಪ್ರಿಯ ಗೀತೆಗಳು :==
 
೧. ಅನಾಡಿ : ಕಿಸಿಕಿ ಮುಸ್ಕುರಾಹಟೊಮ್ ಪೆ ಸಿಸಾರ್.............ಜೀನಾ ಇಸೀಕ ನಾಮ್ ಹೈ- (ಮುಕೇಶ್)
 
೨. ಸಬ್ ಕುಛ್ ಸಿಖಾ ಹಮ್ ನೆ,......... (ಮುಖೇಶ್).
೩. ಆಶೀರ್ವಾದ್: ರೇಲ್ ಗಾಡಿ..........ಛುಕ್, ಛುಕ್...., (ಅಶೋಕ್ ಕುಮಾರ್)
 
೪. ಆನಂದ್ : ಜಿಂದಗೀ ಕೈಸಿ ಏ ಪಹೇಲಿ ..........(ಮನ್ನಾಡೆ)
೩. ಆಶೀರ್ವಾದ್: ರೇಲ್ ಗಾಡಿ..........ಛುಕ್, ಛುಕ್...., (ಅಶೋಕ್ ಕುಮಾರ್)
೫. ಗುಡ್ಡಿ : ಹಮ್ ಕೊ ಮನ್ ಕಿ ಶಕ್ತಿ ದೇನ ..........(ವಾಣಿ ಜೈರಾಮ್)
 
೪. ಆನಂದ್ : ಜಿಂದಗೀ ಕೈಸಿ ಏ ಪಹೇಲಿ ..........(ಮನ್ನಾಡೆ)
 
೫. ಗುಡ್ಡಿ : ಹಮ್ ಕೊ ಮನ್ ಕಿ ಶಕ್ತಿ ದೇನ ..........(ವಾಣಿ ಜೈರಾಮ್)
 
೬. ನಮಕ್ ಹರಾಮ್ : ದಿಯೆ ಜಲ್ತೆ ಹೈ.........(ಕಿಶೊರ್)
 
೭. ಗೊಲ್ ಮಾಲ್ : ಆನೆವಾಲ ಪಲ್........ (ಕಿಶೊರ್)
೮. ಖೂಬ್ ಸೂರತ್ : ಸುನ್ ಸುನ್ ಸುನ್ ದೀದಿ.........(ಆಶಾ ಭೌನ್ಸ್ಲೆ) ಮುಂತಾದವುಗಳು.
 
೮. ಖೂಬ್ ಸೂರತ್ : ಸುನ್ ಸುನ್ ಸುನ್ ದೀದಿ.........(ಆಶಾ ಭೌನ್ಸ್ಲೆ) ಮುಂತಾದವುಗಳು.
 
 
==ಹೄಷಿದಾ ರವರ ಅಂತಿಮ ದಿನಗಳು, ಅವರಿಗೆ ನೆಮ್ಮದಿ ನೀಡಲಿಲ್ಲ ==
 
ಹೃಷಿಕೇಶ್ ಮುಖರ್ಜಿಯವರು ಮುಂಬೈನ ಲೀಲಾವತಿ ಆಸ್ಪತ್ರೆಗೆ ಆಗಸ್ಟ್ ೬ನೆ ತಾರೀಖು ಸೇರಿಸಲ್ಪಟ್ಟಿದ್ದು ಅಲ್ಲಿನ ಐ.ಸಿ.ಯು. ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾದರು. ಮತ್ತೆ ಅವರು 'ಲೀಲಾವತಿ ಆಸ್ಪತ್ರೆಗೆ' ಭರ್ತಿಯಾದರು. ಈ ಬಾರಿ 'ನ್ಯುಮೋನಿಯ ಜ್ವರ' ಅವರನ್ನು ಆವರಿಸಿತ್ತು. 'ಡಯಾಲಿಸಿಸ್' ಗೋಸ್ಕರ ಸದಾ ಅವರು ಅಲ್ಲಿಗೆ ಹೋಗುತ್ತಲೇ ಇದ್ದರು. ಹೀಗೆ ನರಳುತ್ತಿದ್ದ ಹೃಷಿದಾ ಅವರು ೨೭ ನೆಯ ತಾರೀಖು ಕೊನೆಯುಸಿರೆಳೆದರು ! ಇಹ ಲೋಕದ ದುಃಖವನ್ನು ಸಾಕಷ್ಟು ಅನುಭವಿಸಿ ಸೋತಿದ್ದರು. ಮೃತರಿಗೆ ೮೪ ವರ್ಷ ವಯಸ್ಸಾಗಿತ್ತು. ವೃದ್ಧಾಪ್ಯದಲ್ಲಿ ಅವರ ಬಳಿ ಯಾರೂ ಇರಲಿಲ್ಲ. ಅವರ ಕಿರಿಯ ಮಗ 'ಟೂಟು' ನ ಅಕಾಲಿಕ ಸಾವಿನಿಂದ ನೊಂದಿದ್ದರು. ಹೆಂಡತಿ ಮೊದಲೇ ಗತಿಸಿದ್ದರು. ಅವರಿಗೆ ಜೊತೆಯೆಂದರೆ ೪-೫ ಸಾಕು [[ನಾಯಿಗಳು]], ಹಳೆಯ ನಂಬಿಕಸ್ತ [[ಕಾರ್ ಡ್ರೈವರ್]], [[ವಾಚ್ ಮನ್ ]]! '[[ಚಾರ್ಲಿ ಚಾಪ್ಲೈನ್ ಡಿವಿಡಿ]]' ಗಳೇ ಅವರಿಗೆ ದಿನಪುರ್ತಿ ಒದಗಿಸುತ್ತಿದ್ದ ಮನರಂಜನೆಯ ಸಾಮಗ್ರಿಗಳು. ಒಂಟಿತನ ಅವರ ತಲೆಗೆ ಚಿಟ್ಟು ಹಿಡಿಸಿತ್ತು.
 
ವಿಪರ್ಯಾಸವೆಂದರೆ, ಇಂತಹ ಮಹಾನ್ ಕಲಾವಿದನಿಗೆ 'ಬಾಲಿವುಡ್' ನಲ್ಲಿ ಸರಿಯಾದ ಸನ್ಮಾನ ದೊರೆಯಲಿಲ್ಲ. ಮರಣದ ಸಮಯದಲ್ಲಿ ಅವರ ಮಗ [[ಪ್ರದೀಪ್ ]]ಅಮೆರಿಕೆಯಲ್ಲಿದ್ದರು. ಅವರು ಬರುವ ವರೆಗೆ ಅಂತ್ಯ ಕ್ರಿಯೆಗಳನ್ನು ಮಾಡಲಾಗಲಿಲ್ಲ. ೨ ಹೆಣ್ಣು ಮಕ್ಕಳು ಮುಂಬೈನಲ್ಲಿದ್ದಾರೆ. ಒಬ್ಬ ಮಗಳು ಕೊಲ್ಕತ್ತಾ ದಲ್ಲಿದ್ದಾಳೆ. ಚಿಕ್ಕ ಮಗ [[ಸಂದೀಪ್]] (ಟೂಟು) ಅಕಾಲಮರಣಕ್ಕೆ ತುತ್ತಾದನು. ಮೊಮ್ಮಗಳ ಹೆಸರು ಪ್ರೀತ. ಅವನು ಅಸ್ಥಮಾ ದಿಂದ ನರಳುತ್ತಿದ್ದ. ದೆಹಲಿಯಲ್ಲಿದ್ದಾಗ ಅಲ್ಲಿ ಮರಣ ಹೊಂದಿದನು. ಅವರ ತಮ್ಮ [[ಕಾಳಿಕಾಪ್ರಸಾದ ಮುಖರ್ಜೀ]]. (ನೆನೋ) ಅಣ್ಣ [[ದ್ವಾರಕಾ ಪ್ರಸಾದ್ ಮುಖರ್ಜಿ]] ತೀರಿಹೋದರು. ಒಬ್ಬ ಅಡುಗೆಯವರು [[ಕಾರ್ತಿಕ್]], ಸುಮಾರು ೪೫ ವರ್ಷಗಳಿಂದ ಅವರ ಬಳಿ ಸೇವೆ ಸಲ್ಲಿಸುತ್ತಿದ್ದಾರೆ. ಸದಾ ಅವರ ಹಾಸಿಗೆಯ ಬಳಿ ೪-೫ ಸಾಕು ನಾಯಿಗಳು ; ಇವೇ ಅವರ ಆಪ್ತ ಬಂಧುಗಳು ! ದಿನವೆಲ್ಲಾ ಚಾರ್ಲಿ ಚಾಪ್ಲಿನ್ ರ ಡಿವಿಡಿಗಳನ್ನು ನೋಡಿಕೊಂಡು ಅಥವ '[[ಕ್ರಾಸ್ ವರ್ಡ್ಸ್]]' ಮಾಡಿಕೊಂಡೋ ದಿನ ನೂಕುತ್ತಿದ್ದರಂತೆ. ಇಲ್ಲವಾದರೆ ದೂರ ದಿಗಂತದಲ್ಲಿ, ಕಡಲಿನಾಚೆಯ ಲೊಕದಲ್ಲಿ ಮೈ ಮರೆಯುತ್ತಿದ್ದರಂತೆ ! ಹೀಗೆಯೇ ಹಾಸಿಗೆಯಮೇಲೆ ಮಲಗಿಕೊಂಡೊ, ಅಥವ ಗಾಲಿಚಕ್ರದ ಮೇಲೆ ಕುಳಿತುಕೊಂಡೋ ತಮ್ಮ ಕೊನೆಗಾಲದ ಹಲವು 'ವಸಂತ' ಗಳನ್ನು ಕಳೆದ 'ಹೃಷಿದ' ಒಬ್ಬ ಅಪರುಪದ ವ್ಯಕ್ತಿ ! '[[ಬಾಬು ಮೊಷಾಯ್]]' ಇನ್ನಿಲ್ಲವಾದರು ! ರಾಜ್ ಕಪೂರ್ ಅವರನ್ನು ಯಾವಾಗಲೂ ಹೀಗೆಯೇ ಸಂಬೊಧಿಸುತ್ತಿದ್ದದ್ದು ! ಅದರ ಅರ್ಥ- ಸಂಭಾವಿತ, ಮೃದು ಮಧುರ ಭಾಷಿ, ಗೌರವಾನ್ವಿತ, ಒಳ್ಳೆ ಮನೆತನದವ ಇತ್ಯಾದಿ ; ಅದೇ ಪದವನ್ನು ಅವರು ತಮ್ಮ '[[ಆನಂದ್]]' ಚಿತ್ರದಲ್ಲಿ ಬಳಸಿಕೊಂಡರು !
 
==ಪ್ರಶಸ್ತಿಗಳು==
 
* [[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]
* [[ಫಿಲ್ಮ್ ಫೇರ್ ಪ್ರಶಸ್ತಿಗಳು]]
 
==ನಿಧನ==
 
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹೃಷಿಕೇಶ ಮುಖರ್ಜಿಯವರು [[ಆಗಸ್ಟ್ ೨೭]], [[೨೦೦೬]]ರ [[ ಭಾನುವಾರ]] [[ಮುಂಬಯಿ|ಮುಂಬಯಿಯಲ್ಲಿ]] ನಿಧನರಾದರು. ಮಂಗಳವಾರ ೨೯ ನೆಯ ತಾರೀಖು ಮಧ್ಯಾನ್ಹ ೨ ಘಂಟೆಗೆ, ಮುಂಬೈನ ಶಿವಾಜಿ ಪಾರ್ಕಿನ 'ಶವಾಗಾರ'ದಲ್ಲಿ ದಹನಕ್ರಿಯೆಯನ್ನು ಮಾಡಲಾಯಿತು.
 
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/74331" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ