ವಿಲ್‍ಹೆಲ್ಮ್ ವೂಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೦೨ರಲ್ಲಿ ವೂಂಟ್

ವಿಲ್‍ಹೆಲ್ಮ್ ವೂಂಟ್ (1832-1920) ಒಬ್ಬ ಜರ್ಮನ್ ಶರೀರವಿಜ್ಞಾನಿ. ವೈದ್ಯಕೀಯದಲ್ಲಿ ಪಿಎಚ್.ಡಿ. ಮತ್ತು ಎಂ.ಡಿ. ಪದವಿ ಗಳಿಸಿದ[೧] ಬಳಿಕ ಹೈಡೆಲ್‌ಬರ್ಗ್ ವಿಶ್ವವಿದ್ಯಾಲಯದ ಅಧ್ಯಾಪಕ ವೃಂದ ಸೇರಿದ (1854). ಅಲ್ಲಿ ಈತನ ಆಸಕ್ತಿ ಮನೋವಿಜ್ಞಾನದತ್ತ ಹೊರಳಿತು. ವೇಬರ್, ಅರ್ನ್‌ಸ್ಟ್ ಹೈನ್ರಿಚ್ ಮತ್ತು ಫೆಕ್ನರ್ ಇವರ ಕೊಡುಗೆಗಳ ಬೆಳಕಿನಲ್ಲಿ ಮನೋವಿಜ್ಞಾನದ ಪುನರ್ವ್ಯಾಖ್ಯಾನಗೈಯಲು ಮುಂದಾದ. ಮಾನವ ವರ್ತನೆಯ ಕೆಲವು ಮುಖಗಳನ್ನು ಅಲ್ಲಿಯೂ ಸಂವೇದನ ಪ್ರಭಾವಗಳನ್ನು ವ್ಯಕ್ತಿ ಗ್ರಹಿಸುವ ಬಗೆಗಳನ್ನು, ಮಾಪನೆಗೆ ಒಳಪಡಿಸಬಹುದೆಂದು ಈತನಿಗೆ ಅನ್ನಿಸಿತು. ದೃಷ್ಟಿ ಮತ್ತು ಶ್ರವಣ ಕುರಿತಂತೆ ಹೆಲ್ಮ್‌ಹಾಲ್ಸ್ ನೀಡಿದ ಕೊಡುಗೆ ಗಮನಾರ್ಹವೆಂದು ಪರಿಗಣಿಸಿ ಈ ನಿಟ್ಟಿನಲ್ಲಿ ಪ್ರಾಯೋಗಿಕ ಮನೋವಿಜ್ಞಾನದ ಅಧ್ಯಯನಾರ್ಥ ವಿಶ್ವವಿದ್ಯಾಲಯದಲ್ಲಿ ತರಗತಿ ಆರಂಭಿಸಿದ. ಮುಂದೆ ಲೈಪ್‌ಜಿಗ್ ವಿಶ್ವವಿದ್ಯಾಲಯದಲ್ಲಿ ಈ ವಿಷಯಕ್ಕೆಂದೇ ಒಂದು ಪ್ರಯೋಗಾಲಯವನ್ನು ಕೂಡ ಸ್ಥಾಪಿಸಿದ.

ಉಲ್ಲೇಖಗಳು[ಬದಲಾಯಿಸಿ]

  1. Wundt, Wilhelm (1856). Untersuchungen über das Verhalten der Nerven in entzündeten und degenerirten Organen [Research on the behaviour of nerves in burned and degenerating organs] (MD thesis). University of Frieburg. {{cite book}}: |work= ignored (help)CS1 maint: location missing publisher (link)

ಹೊರಗಿನ ಕೊಂಡಿಗಳು[ಬದಲಾಯಿಸಿ]