ವಿಲಿಯಮ್ ರಾಮ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಲಿಯಮ್ ರಾಮ್ಸೆ

ವಿಲಿಯಮ್ ರಾಮ್ಸೆ(ಒಕ್ಟೋಬರ್ 2, 1852 – ಜುಲೈ 23, 1916)ಸ್ಕಾಟ್ಲಂಡ್ ನ ರಸಾಯನಶಾಸ್ತ್ರಜ್ಞ.ಇವರು ಬೆರೋನ್ ರೆಲಿಗ್ ರವರೊಂದಿಗೆ ಆರ್ಗಾನ್ ಮೂಲಧಾತುವನ್ನು ಕಂಡುಹಿಡಿದರು.ಇದಲ್ಲದೆ ಶ್ರೇಷ್ಠಾನಿಲಗಳಾದ ಹೀಲಿಯಮ್,ನಿಯಾನ್,ಕ್ರಿಪ್ಟಾನ್ ಮತ್ತು ಝೆನಾನ್ ಗಳನ್ನು ಸಂಶೋಧಿಸಿದರು. ಈ ಮೂಲಧಾತುಗಳ ಸ್ವರೂಪದ ಬಗ್ಗೆ ಇವರು ನೀಡಿದ ವಿವರಣೆಗಳು ಮುಂದೆ ಅಣು ಸ್ವರೂಪದ ಬಗ್ಗೆ ತಿಳಿಯಲು ಸಹಕಾರಿಯಾದವು.ಇವರಿಗೆ ೧೯೦೪ ರಲ್ಲಿ ರಸಾಯನಶಾಸ್ತ್ರಕ್ಕೆ ನೊಬಲ್ ಪ್ರಶಸ್ತಿ ಲಭಿಸಿತು.