ವಿಷಯಕ್ಕೆ ಹೋಗು

ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್
ಸಂಸ್ಥೆಯ ಪ್ರಕಾರPublic (NYSEWWE)
ಸ್ಥಾಪನೆ1952
ಸಂಸ್ಥಾಪಕ(ರು)Roderick McMahon
Toots Mondt
ಮುಖ್ಯ ಕಾರ್ಯಾಲಯStamford, Connecticut, U.S.
ಪ್ರಮುಖ ವ್ಯಕ್ತಿ(ಗಳು)Vince McMahon
(Chairman and CEO)
Shane McMahon
(Executive Vice President of Global Media)
Stephanie McMahon-Levesque
(Executive Vice President of Talent Relations, Live Events and Creative Writing)
ಉದ್ಯಮProfessional wrestling, sports entertainment
ಆದಾಯ $526.46 million (2008)[೧]
ಆದಾಯ(ಕರ/ತೆರಿಗೆಗೆ ಮುನ್ನ) $70.29 million (2008)[೧]
ನಿವ್ವಳ ಆದಾಯDecrease $45.42 million (2008)[೧]
ಒಟ್ಟು ಆಸ್ತಿDecrease $429.41 million (2008)[೧]
ಒಟ್ಟು ಪಾಲು ಬಂಡವಾಳDecrease $359.97 million (2008)[೧]
ಉದ್ಯೋಗಿಗಳು564 (as of February 2009, excluding wrestlers)[೨]
ಜಾಲತಾಣOfficial Site
Corporate WWE Web Site

ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್(World Wrestling Entertainment, Inc.) ' ('WWE ) ಸಾರ್ವಜನಿಕವಾಗಿ-ವ್ಯಾಪಾರ ನಡೆಸುತ್ತಿರುವ, ಖಾಸಗಿಯಾಗಿ-ನಿಯಂತ್ರಿಸಲ್ಪಡುತ್ತಿರುವ ಸಂಯೋಜಿತ ಮಾಧ್ಯಮ ಮತ್ತು ಕ್ರೀಡಾ ಮನರಂಜನೆಯ ಸಂಸ್ಥೆಯಾಗಿದ್ದು, (ಇದು ದೂರದರ್ಶನ, ಅಂತರಜಾಲ ಮತ್ತು ನೇರ ಪಂದ್ಯಾವಳಿಗಳ ಮೇಲೆ ಗಮನಹರಿಸುತ್ತಿದೆ), ಪ್ರಮುಖವಾಗಿ ವೃತ್ತಿನಿರತ ರೆಸ್ಟಲಿಂಗ್ ಕ್ರೀಡೆಯನ್ನು ನಡೆಸುತ್ತದೆ. ಇದಕ್ಕೆ ಸಿನೆಮಾ, ಸಂಗೀತ, ಉತ್ಪನ್ನ ಪರವಾನಗಿ ಮಾಡುವಿಕೆ ಮತ್ತು ನೇರ ಉತ್ಪನ್ನ ಮಾರಾಟಗಳೂ ಆದಾಯ ಮೂಲಗಳಾಗಿವೆ. ಈ ಸಂಸ್ಥೆಯಲ್ಲಿ ಹೆಚ್ಚಿನ ಪಾಲು ಹೊಂದಿದ ವಿನ್ಸ್ ಮ್ಯಾಕ್‌ಮೋಹನ್ ರವರು, ಇದರ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿದ್ದಾರೆ. ಅವರ ಹೆಂಡತಿ ಲಿಂಡಾ ಮ್ಯಾಕ್‌ಮೋಹನ್ ಮತ್ತು ಅವರ ಮಕ್ಕಳು, ಗ್ಲೋಬಲ್ ಮೀಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶೇನ್ ಮ್ಯಾಕ್‌ಮೋಹನ್‍, ಪ್ರತಿಭೆ ಮತ್ತು ಸೃಜನಶೀಲ ಬರವಣಿಗೆ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ [[ ಸ್ಟೆಫನಿ ಮ್ಯಾಕ್‌ಮೋಹನ್| ಸ್ಟೀಫನ್ ಮ್ಯಾಕ್‌ಮೋಹನ್-ಲೆವೆಸ್ಕ್]] ಇವರನ್ನೊಡಗೂಡಿ ಮ್ಯಾಕ್‌ಮೋಹನ್ ಕುಟುಂಬದವರು WWEಯ ಸುಮಾರು 70% ನಷ್ಟು ಅರ್ಥಿಕ ಬಂಡವಾಳವನ್ನು ಮತ್ತು 96% ನಷ್ಟು ಮತದಾನದ ಅಧಿಕಾರವನ್ನು ಹೊಂದಿದ್ದಾರೆ.

ಕಂಪೆನಿಯ ಜಾಗತಿಕ ಕೇಂದ್ರಕಾರ್ಯಾಲಯ ಕನೆಕ್ಟಿಕಟ್‌‌ನ ಸ್ಟಾಮ್‌ಫೊರ್ಡ್‌ನಲ್ಲಿ ಸ್ಥಾಪಿತವಾಗಿದೆ, ಜೊತೆಗೆ ಲಾಸ್ ಎಂಜಲೀಸ್, ನ್ಯೂ‌ಯಾರ್ಕ್ ಸಿಟಿ, ಲಂಡನ್ ಮತ್ತು ಟೊರೊಂಟೊಗಳಲ್ಲಿ ಕಛೇರಿಗಳಿವೆ. ಕಂಪೆನಿಯು ಮೊದಲು ವರ್ಲ್ಡ್ ವ್ರೆಸ್ಲಿಂಗ್ ಫೆಡರೇಷನ್ ಎಂಟರ್‌ಟೈನ್‌ಮೆಂಟ್ ಎಂದು ಬದಲಾಗುವ ಮುಂಚೆ ಟೈಟನ್ ಸ್ಪೋರ್ಟ್ಸ್‌ ಎಂದು ಪ್ರಚಲಿತದಲ್ಲಿತ್ತು ಮತ್ತು ನಂತರ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ಎಂದಾಯಿತು.

WWEಯ ವ್ಯವಹಾರ ಪೃತ್ತಿಪರ ಕುಸ್ತಿಯ ಮೇಲೆ ಕೇಂದ್ರೀಕೃತವಾಗಿದೆ. ಇದು ಕುಸ್ತಿಯ ಜೊತೆಗೆ ಅಭಿನಯ ಮತ್ತು ನಾಟಕಕಲೆಯ ಮಿಶ್ರಣವಿರುವ ಒಂದು ಅಭಿನಯಕ್ರೀಡೆ ಯಾಗಿದೆ. ಸದ್ಯಕ್ಕೆ ಇದು ಪ್ರಪಂಚದ ಬೃಹತ್ ವೃತ್ತಿಪರ ಕುಸ್ತಿ ಪ್ರಚಾರವಾಗಿದ್ದು, ಮತ್ತು ವೃತ್ತಿಪರ ಕುಸ್ತಿಯ ದೃಶ್ಯ ಇತಿಹಾಸದ ಪ್ರಮುಖ ಭಾಗಗಳಿರುವ ವ್ಯಾಪಕವಾದ ಒಂದು ವೀಡಿಯೊ ಲೈಬ್ರರಿಯನ್ನು ಹೊಂದಿದೆ. ಈ ಮೊದಲು ಪ್ರಚಾರವು ಕ್ಯಾಪಿಟೊಲ್ ವ್ರೆಸ್ಲಿಂಗ್ ಕಾರ್ಪೊರೇಷನ್ ಎಂದು ಅಸ್ತಿತ್ವದಲ್ಲಿತ್ತು. ಅದನ್ನು ವರ್ಲ್ಡ್ಸ್ ವೈಡ್ ವ್ರೆಸ್ಲಿಂಗ್ ಫೆಡರೇಷನ್(WWWF) ಬ್ಯಾನರ್ ಅಡಿಯಲ್ಲಿ ಪ್ರೋತ್ಸಾಹಿಸಲಾಯಿತು ಮತ್ತು ನಂತರ ಅದು ವರ್ಲ್ಡ್ ವ್ರೆಸ್ಲಿಂಗ್ ಫೆಡರೆಷನ್ (WWF) ಎಂದು ಆಯಿತು. WWE ಈ ಮೂರು ಬ್ರಾಂಡ್‌ಗಳಡಿಯಲ್ಲಿ ಪ್ರಚಾರ ಮಾಡುತ್ತದೆ: ರಾ (Raw), ಸ್ಮ್ಯಾ‌ಕ್‌ಡೌನ್, ಮತ್ತು ECW. WWEಯು ಈ ಮೂರು ವರ್ಲ್ಡ್ ಹೇವಿವೈಟ್ ಚಾಂಪಿಯನ್‌ಶಿಪ್‌ಗಳಿಗೆ ತವರು ಕೂಡ ಆಗಿದೆ: WWE ಚಾಂಪಿಯನ್‌ಶಿಪ್‌, ವರ್ಲ್ಡ್ ಹೇವಿವೈಟ್ ಚಾಂಪಿಯನ್‌ಶಿಪ್, ಮತ್ತು ECW ಚಾಂಪಿಯನ್‌ಶಿಪ್.

ಸಂಸ್ಥೆಯ ಇತಿಹಾಸ[ಬದಲಾಯಿಸಿ]

ಕ್ಯಾಪಿಟೊಲ್ ವ್ರೆಸ್ಲಿಂಗ್[ಬದಲಾಯಿಸಿ]

ರಾಡ್ರಿಕ್ ಜೇಮ್ಸ್ "ಜೇಸ್" ಮ್ಯಾಕ್‌ಮೋಹನ್ ಬಾಕ್ಸಿಂಗ್ ಪ್ರವರ್ತಕನಾಗಿದ್ದು, 1915ರಲ್ಲಿ ಜೆಸ್ ವಿಲ್ಲಿಯಾರ್ಡ್ ಮತ್ತು ಜಾಕ್ ಜಾನ್ಸನ್ ನಡುವೆ ನಡೆದ ಒಂದು ಕುಸ್ತಿಯ ಸುತ್ತಿನ ಸಹಪ್ರವರ್ತಕ ಆಗಿದ್ದು ಅವನ ಸಾಧನೆಗಳಲ್ಲಿ ಒಂದು. 1926ರಲ್ಲಿ,ಟೆಕ್ಸ್ ರಿಕ್‌ಯಾರ್ಡ್(ಇವನು ನಿಜವಾಗಿ ಕುಸ್ತಿಯನ್ನು ಎಷ್ಟು ದ್ವೇಷಿಸುತ್ತಿದ್ದನೆಂದರೆ 1939 ಮತ್ತು 1948ರ ನಡುವೆ ಮ್ಯಾಡಿಸನ್ ಸ್ಕ್ವಯರ್ ಗಾರ್ಡನ್‌ನಲ್ಲಿ ಕುಸ್ತಿ ಪಂದ್ಯಾವಳಿಗಳು ನಡೆಯದಂತೆ ಪ್ರತಿಬಂಧಿಸಿದ್ದನು.) ಜೊತೆ ಕೆಲಸ ಮಾಡುವಾಗ, ನ್ಯೂ ಯಾರ್ಕ್‌ನ ಮ್ಯಾಡಿಸನ್ ಸ್ಕ್ವಯರ್ ಗಾರ್ಡನ್‌ನಲ್ಲಿ ಕುಸ್ತಿಯನ್ನು ಪ್ರವರ್ಧಮಾನಕ್ಕೆ ತರಲು ಪ್ರಾರಂಭಿಸಿದನು. ಇವರ ಸಹಭಾಗಿತ್ವದಲ್ಲಿ ಮೊದಲ ಪಂದ್ಯವು ಜಾಕ್ ಡೆಲಾನೈ ಮತ್ತು ಪೌಲ್ ಬೆರ್ಲೆನ್‌ಬಚ್ ನಡುವೆ ಲೈಟ್ ಹೇವಿವೈಟ್ ಚಾಂಪಿಯನ್‌ಶಿಪ್ ಪಂದ್ಯವಾಗಿತ್ತು. ಹೆಚ್ಚು ಕಡಿಮೆ ಅದೇ ಸಮಯಕ್ಕೆ, ವೃತ್ತಿಪರ ಕುಸ್ತಿಪಟು ಜೋಸೆಫ್ ರೈಮಂಡ್ "ಟೋಟ್ಸ್" ಮೊಂಡ್ಟ್ ಹೊಸ ವಿಧದ ಕುಸ್ತಿ ಸೃಷ್ಟಿ ಮಾಡಿದನು. ವೀಕ್ಷಕರಿಗೆ ಈ ಕ್ರೀಡೆ ಇನ್ನೂ ಹೆಚ್ಚು ಅಕರ್ಷಿತವಾಗಲು ಸೃಷ್ಟಿಸಿದ ಇದನ್ನು ಆತ ಸ್ಲಾಮ್ ಬ್ಯಾಂಗ್ ವೆಸ್ಟರ್ನ್ ಸ್ಟೈಲ್ ವ್ರೆಸ್ಲಿಂಗ್ ಎಂದು ಕರೆದನು.

ನಂತರ ಅವನು ವ್ರೆಸ್ಲಿಂಗ್ ಚಾಂಪಿಯನ್ ಎಡ್ ಲೆವಿಸ್ ಮತ್ತು ಅವನ ಮ್ಯಾನೇಜರ್ ಆದ ಬಿಲ್ಲಿ ಸ್ಯಾಂಡೊ ಜೊತೆ ಸೇರಿ ಒಂದು ಪ್ರಚಾರ ರೂಪಿಸಿದನು. ಅವರು ಅನೇಕ ಕುಸ್ತಿ ಪಟುಗಳಿಗೆ ಅವರ ಜೊತೆ ಗ್ಲೋಡ್ ಡಸ್ಟ್ ಟ್ರಿಯೋ ಒಪ್ಪಂದಕ್ಕೆ ಸಹಿ ಹಾಕಲು ಮನ ಒಲಿಸಿದರು.ಅವರಿಗೆ ಸಾಕಷ್ಟು ಯಶಸ್ಸು ದೊರೆತ ನಂತರ, ಅಧಿಕಾರಕ್ಕಾಗಿ ಜಗಳ ಪ್ರಾರಂಭವಾಯಿತು ಮತ್ತು ಅದರಿಂದಾಗಿ ಟ್ರಿಯೋ ರದ್ದಾಯಿತು. ಜೊತೆಗೆ ಅವರ ಪ್ರಚಾರವೂ ಕೂಡಾ ರದ್ದಾಯಿತು. ನ್ಯೂಯಾರ್ಕ್ ಸಿಟಿಯಲ್ಲಿ ಜಾಕ್ ಕರ್ಲಿ‌ಯನ್ನೂ ಸೇರಿದಂತೆ ಮೊಂಡ್ಟ್ ಹಲವು ಇತರೆ ಪ್ರವರ್ತಕರೊಡನೆ ಸಹಭಾಗಿತ್ವ ರೂಪಿಸಿದ್ದ. ಕರ್ಲಿ ಸಾಯುವ ಸಮಯದಲ್ಲಿ, ಮೊಂಡ್ಟ್ ನ್ಯೂಯಾರ್ಕ್ ವ್ರೆಸ್ಲಿಂಗ್‌ನ್ನು ಹಲವು ಕಾಯ್ದಿರಿಕೆದಾರರ ಸಹಾಯದಿಂದ ವಶಪಡಿಸಿಕೊಳ್ಳಲು ತೀರ್ಮಾನಿಸಿದ, ಅದರಲ್ಲಿ ಜೆಸ್ಸ್ ಮ್ಯಾಕ್‌ಮೋಹನ್ ಒಬ್ಬನಾಗಿದ್ದ.

ರಾಡಿಕ್ ಮ್ಯಾಕ್‌ಮೋಹನ್ ಮತ್ತು ರೇಮಂಡ್ ಮೊಂಡ್ಟ್ ಜೊತೆಸೇರಿ ಕ್ಯಾಪಿಟೊಲ್ ವ್ರೆಸ್ಲಿಂಗ್ ಕಾರ್ಪೊರೇಷನ್(CWC) ಸೃಷ್ಟಿಸಿದರು. 1953ರಲ್ಲಿ CWC ನ್ಯಾಷನಲ್ ವ್ರೆಸ್ಲಿಂಗ್ ಅಲೈನ್ಸ್ ಸೇರಿತು. ಅದೇ ವರ್ಷದಲ್ಲಿ, ಮೊಂಡ್ಟ್‌ನ ಜೊತೆಗಾರರಲ್ಲಿ ಒಬ್ಬನಾದ ರೇ ಫಬಿಯಾನಿಯು ಜೆಸ್‌ನ ಬದಲಿಗೆ ಅವನ ಮಗನಾದ ವಿನ್‌ಸೆಂಟ್ ಜೆ.ಮ್ಯಾಕ್‌ಮೋಹನ್ ಪ್ರಚಾರ ಕಾರ್ಯಕ್ಕಾಗಿ ಕರೆತಂದ. ಮ್ಯಾಕ್‌ಮೋಹನ್ ಮತ್ತು ಮೊಂಡ್ಟ್ ಒಂದು ಯಶಸ್ವಿ ಜೋಡಿಯಾಗಿದ್ದರು, ಮತ್ತು ಕಡಿಮೆ ಸಮಯದಲ್ಲಿ ಅವರು NWAನ ಕಾಯ್ದಿರಿಕೆಯಲ್ಲಿ ಸುಮಾರು 70% ನಿಯಂತ್ರಿಸಿದರು. ಇದಕ್ಕೆ ಕಾರಣ ಹೆಚ್ಚಿನ ಜನಸಂಖ್ಯೆ ಹೊಂದಿದ ಈಶಾನ್ಯ ಪ್ರದೇಶದಲ್ಲಿನ ಅವರ ಪ್ರಾಬಲ್ಯ.

ಮ್ಯಾಕ್‌ಮೋಹನ್‌ಗೆ ಕಾಯ್ದಿರಿಸುವಿಕೆ ಮತ್ತು ಕುಸ್ತಿ ವ್ಯವಹಾರದಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಹೇಳಿಕೊಟ್ಟವನು ಮೊಂಡ್ಟ್. ಈಶಾನ್ಯದಲ್ಲಿನ ಪ್ರಾಬಲ್ಯದಿಂದಾಗಿ ಅಮೆರಿಕಾದ ವ್ರೆಸ್ಲಿಂಗ್ ಅಸೋಸಿಯೇಶನ್ ಮುಖ್ಯಸ್ಥ ಮತ್ತುWWEನ ಹಾಲ್ ಆಫ್ ಫೇಮರ್ ನಿಕ್ ಬಾಕ್ವಿಂಕಲ್ ಅವರು ಪಿಟ್ಸ್‌ಬರ್ಗ್, ವಾಶಿಂಗ್ಟನ್.ಡಿ.ಸಿ ಮತ್ತು ಮೈನ್ ಗಳನ್ನು ಸೇರಿಸಿ ನಾರ್ಥ್ ಈಸ್ಟ್ ತ್ರಿಕೋನವನ್ನು ರಚಿಸಿದರು.[೩]

ವರ್ಲ್ಡ್ ವೈಡ್ ವ್ರೆಸ್ಲಿಂಗ್ ಫೆಡರೇಶನ್[ಬದಲಾಯಿಸಿ]

NWA ಒಂದು ವಿವಾದರಹಿತ NWA ವರ್ಲ್ದ್ ಹೇವಿವೇಯಿಟ್ ಚಾಂಪಿಯನ್‌ ಎಂದು ಗುರುತಿಸಲ್ಪಟ್ಟಿದ್ದು, ಅದು ಒಂದು ವ್ರೆಸ್ಲಿಂಗ್ ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ಹೋಗಿ ಹೋರಾಡಿ ಪ್ರಪಂಚದಾದ್ಯಂತ ಬೆಲ್ಟನ್ನು ಕಾಪಾಡಿಕೊಂಡಿದೆ. 1963ರಲ್ಲಿ, "ನೇಚರ್ ಬಾಯ್" ಬಡ್ಡಿ ರೋಜರ್ಸ್ ಚಾಂಪಿಯನ್ ಆದನು. ಉಳಿದ NWAಗಳು ಮೊಂಡ್ಟ್‌ಯೊಂದಿಗೆ ಅತೃಪ್ತಗೊಂಡಿದ್ದರು. ಏಕೆಂದರೆ ಅವನು ರೋಜರ್ಸ್‌ನನ್ನು ಅಪರೂಪಕ್ಕೆ ನಾರ್ಥ್‌ಈಸ್ಟ್‌‌ನ ಹೊರಗೆ ಕುಸ್ತಿಯಾಡಲು ಅವಕಾಶ ನೀಡುತ್ತಿರಲಿಲ್ಲ. ಮೊಂಡ್ಟ್‌ ಮತ್ತ್ತುಮ್ಯಾಕ್‌ಮೋಹನ್ ರೋಜರ್ಸ್‌ನನ್ನು NWA ವರ್ಲ್ಡ್‌ ಚಾಂಪಿಯನ್‌ಶಿಪ್ ಆಗಿ ಉಳಿಸಿಕೊಳ್ಳಲು ಬಯಸಿದರು, ಆದರೆ ರೊಜರ್ಸ್‌ಗೆ ಅವನ $25,೦೦೦ ಮುಂಗಡ ಹಣವನ್ನು ತ್ಯಾಗಮಾಡಲು ಇಷ್ಟವಿರಲಿಲ್ಲ (ಆ ಸಮಯದಲ್ಲಿ ಬಿರುದು ಪಡೆದವನು ಚಾಂಪಿಯನ್ ಆಗಿ ಅವರ ಬದ್ಧತೆಯ ಮಾನ್ಯತೆಗೆ ವಿಮೆಯಾಗಿ ಮುಂಗಡ ಹಣ ಪಾವತಿಸಬೇಕಾಗಿತ್ತು). ರೋಜರ್ಸ್ ಜನವರಿ 24, 1963 ರಲ್ಲಿ, ಒಂಟಾರಿಯೋನ ಟೋರೊಂಟೊದಲ್ಲಿ ಒಂದು-ಪತನ ಪಂದ್ಯದಲ್ಲಿ Lou Thesz ವಿರುದ್ಧ NWA ವರ್ಲ್ಡ್ ಚಾಂಪಿಯನ್‌ಶಿಪ್‌ನ್ನು ಸೋತನು. ಇದು ಮೊಂಡ್ಟೊ, ಮ್ಯಾಕ್‌ಮೋಹನ್ ಮತ್ತು CWC ಪ್ರತಿಭಟನೆಯಲ್ಲಿ NWAನ್ನು ನಿರ್ಗಮಿಸಲು ದಾರಿಯಾಯಿತು, ಮತ್ತು ಈ ಮೂಲಕ ವರ್ಲ್ಡ್ ವೈಡ್ ವ್ರೆಸ್ಲಿಂಗ್ ಫೆಡರೇಶನ್‌ನ (WWWF) ಹುಟ್ಟಿಗೆ ಕಾರಣವಾಯಿತು.

ಏಪ್ರಿಲ್‍ನಲ್ಲಿ, ರಿಯೋ ಡಿ ಜನೆರೊನಲ್ಲಿ ಒಂದು ಕಲ್ಪಿತ ಪಂದ್ಯಾವಳಿಯಲ್ಲಿ ರೊಜರ್ಸ್‌ಗೆ ಹೊಸ WWWF ವರ್ಲ್ಡ್ ಚಾಂಪಿಯನ್‌ಶಿಪ್ ನೀಡಲಾಯಿತು. ಆದರೆ ಆತನಿಗೆ ಪಂದ್ಯಕ್ಕಿಂತ ಸ್ವಲ್ಪ ಸಮಯ ಮುನ್ನ ಹೃದಯಾಘಾತ ಉಂಟಾದ್ದರಿಂದಾಗಿ, ಒಂದು ತಿಂಗಳ ನಂತರ ಅಂದರೆ ಮೇ ೧೭, ೧೯೬೩ ರಂದು ಬ್ರುನೊ ಸ್ಯಾಮಾರ್ಟಿನೊ ಆ ಪ್ರಶಸ್ತಿಯನ್ನು ಗೆದ್ದನು. ರೋಜರ್ಸ್‌ನ ಅನಾರೋಗ್ಯದ ಸ್ಥಿತಿಯಿಂದಾಗಿ ಆ ಪಂದ್ಯವನ್ನು ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಆಡಿಸಲು ನಿರ್ಧರಿಸಲಾಯಿತು.

ಅರವತ್ತರ ದಶಕದ ಕೊನೆಯಲ್ಲಿ ಮೊಂಡ್ಟ್ ಕಂಪೆನಿಯನ್ನು ತ್ಯಜಿಸಿದ. WWWFನ್ನು NWAಯಿಂದ ಹಿಂತೆಗೆದುಕೊಂಡಿದರೂ, ವಿನ್ಸ್ ಮ್ಯಾಕ್‌ಮೋಹನ್ ಸೀನಿಯರ್ ಬೋರ್ಡ್ ಅಫ್ ಡೈರೆಕ್ಟರ್‌ನಲ್ಲಿ ಇದ್ದರು. ನಾರ್ಥ್‌ಈಸ್ಟ್‌ನಲ್ಲಿ ಬೇರೆ ಯಾವುದೇ ಪ್ರದೇಶ ಮಾನ್ಯತೆ ಪಡೆದಿರಲಿಲ್ಲ ಮತ್ತು ಕೆಲವು ಚಾಂಪಿಯನ್ ವರ್ಸಸ್ ಚಾಂಪಿಯನ್ ಪಂದ್ಯಗಳು ನಡೆಯುತ್ತಿದ್ದವು.(ಸಾಮಾನ್ಯವಾಗಿ ಎರಡು ಅನರ್ಹತೆಯಲ್ಲಿ ಕೊನೆಗೊಳ್ಳುವುದು ಅಥವಾ ನಿರ್ಣಾಯಕವಾಗದೆ ಕೊನೆಗೊಳ್ಳುವುದು) ಮಾರ್ಚ್‌ 1979 ರಲ್ಲಿ WWWF ವರ್ಲ್ಡ್ ವ್ರೆಸ್ಲಿಂಗ್ ಫೆಡರೇಶನ್(WWF) ಅಯಿತು. ಈ ಬದಲಾವಣೆ ಸಂಪೂರ್ಣ ಹೊರನೋಟಕ್ಕೇ ಆದರೂ ಮತ್ತು ಈ ವೇಳೆಯಲ್ಲಿ ಮಾಲಿಕತ್ವ ಮತ್ತು ಮುಖ್ಯ ಕಛೇರಿ ನೌಕರರ ವರ್ಗದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.

ವರ್ಲ್ಡ್ ವ್ರೆಸ್ಲಿಂಗ್ ಫೆಡರೇಶನ್[ಬದಲಾಯಿಸಿ]

ವಿನ್ಸ್ ಮ್ಯಾಕ್‌ಮೋಹನ್,Titan Sports,Inc.ಸ್ಥಾಪಕ ಮತ್ತು ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್‌ಮೆಂಟ್‌ನ ಹಾಲಿ ಬಹುಮತದ ಮಾಲೀಕ

1980ರಲ್ಲಿ, ವಿನ್ಸೆಂಟ್ ಜೆ.ಮ್ಯಾಕ್‌ಮೋಹನ್‌ನ ಮಗ ವಿನ್ಸೆಂಟ್ ಕೆನ್ನೆಡಿ ಮ್ಯಾಕ್‌ಮೋಹನ್, Titan Sports, Inc. ಸ್ಥಾಪಿಸಿದ ಮತ್ತು 1982ರಲ್ಲಿ ಅವನ ತಂದೆಯಿಂದ ಕ್ಯಾಪಿಟೋಲ್ ವ್ರೆಸ್ಲಿಂಗ್ ಕಾರ್ಪೋರೇಶನ್ ಖರೀದಿಸಿದನು. ಹಿರಿಯ ಮ್ಯಾಕ್‌ಮೋಹನ್ ನಾರ್ಥ್‌ಈಸ್ಟ್ ಪ್ರದೇಶ ಸ್ಥಾಪಿತವಾದಾಗಿನಿಂದ NWA ನ ಶಕ್ತಿಶಾಲಿ ಸದಸ್ಯ ಪ್ರದೇಶವನ್ನಾಗಿ ರೂಪಿಸಿದ. ಅವನು ಹಿಂದಿನಿಂದಲೂ ವೃತ್ತಿಪರ ಕುಸ್ತಿಯನ್ನು ನಿಜವಾದ ಕ್ರೀಡೇಗಿಂತ ಮನೋರಂಜನೆ ಎಂದು ಗುರುತಿಸಿದವನು. ಅವನ ತಂದೆಯ ಆಸೆಗಳಿಗೆ ವಿರುದ್ಧವಾಗಿ, ಮ್ಯಾಕ್‌ಮೋಹನ್‍ ವಿಸ್ತರಣೆಯ ಪ್ರಕ್ರಿಯೆಯನ್ನು ಶುರುಮಾಡಿದನು. ಅದು ಮೂಲತ:ವಾಗಿ ಇಡೀ ಕ್ರೀಡೆಯನ್ನೇ ಬದಲಿಸಿತು.

NWA ಜೊತೆಗೆ ಅಧಿಕಾರವನ್ನ್ನು ತೊಡೆದುಕೊಂಡಿದ್ದಿದ್ದು WWF ಒಂದೇ ಅಲ್ಲ; ಅಮೆರಿಕನ್ ವ್ರೆಸ್ಲಿಂಗ್ ಅಸೋಸಿಯೆಷನ್(AWA) ಬಹಳ ಹಿಂದೆಯೇ NWAಯ ಅಧಿಕೃತ ಸದಸ್ಯತ್ವವನ್ನು ಸ್ಥಗಿತಗೊಳಿಸಿತ್ತು (ಅದರೂ WWF ನಂತೆ, ಅವರು ತಮ್ಮ ಸ್ವಂತ ಪ್ರದೇಶವನ್ನು ಬಿಟ್ಟಿರಲಿಲ್ಲ). ಹಾಗಿದ್ದರೂ, ಪಕ್ಷಾಂತರ ಮಾಡುವ ಯಾವುದೇ ಸದಸ್ಯರು ಅರ್ಧಶತಮಾನಕ್ಕಿಂತ ಹೆಚ್ಚಿಗೆ ಉದ್ಯಮದ ಅಡಿಪಾಯವಾಗಿದ್ದ ಈ [[ ರಾಷ್ಟೀಯ ಕುಸ್ತಿ ಒಕ್ಕೂಟ#ಕ್ಷೇತ್ರಗಳು|ಪ್ರದೇಶ ವ್ಯವಸ್ಥೆ]]ಯನ್ನು ವಿಫಲಗೊಳಿಸಲು ಪ್ರಯತ್ನಿಸಲಿಲ್ಲ.

ಮ್ಯಾಕ್‌ಮೋಹನ್ WWF ನ ದೂರದರ್ಶನ ಪ್ರದರ್ಶನಗಳನ್ನು WWFನ ಸಾಂಪ್ರಾದಾಯಿಕ ನಾರ್ಥ್‌ಈಸ್ಟ್‌ನ ಕೋಟೆಯ ಹೊರಗೆ ಅಮೇರಿಕಾ ಸಂಯುಕ್ತ ಸಂಸ್ಥಾನದ ಉದ್ದಗಲಕ್ಕೂ, ದೂರದರ್ಶನ ಕೇಂದ್ರಗಳ ಮೂಲಕ ಪ್ರಕಟಿಸಲು ಪ್ರಾರಂಭಿಸಿದಾಗ ಉಳಿದ ಪ್ರವರ್ತಕರು ರೊಚ್ಚಿಗೆದ್ದರು.ಮ್ಯಾಕ್‌ಮೋಹನ್ ತನ್ನ ಹಂಚಿಕೆ ಕಂಪೆನಿ ಕೊಲಿಸೆಂ ವೀಡಿಯೊ ಮೂಲಕ ನಾರ್ಥ್‌‍ಈಸ್ಟ್‌ನ ಹೊರಗೆ WWFಯ ಘಟನೆಗಳ ವೀಡಿಯೊ ಟೇಪ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದನು. ಅಲಿಖಿತ ಪ್ರಾಂತೀಯ ಕಾನೂನಿನ ಸುತ್ತ ನೆಲೆಯೂರಿದ್ದ ಇಡೀ ಉದ್ಯಮವನ್ನು ಅವನು ಪರಿಣಾಮಕಾರಿಯಾಗಿ ಒಡೆದನು. ಮ್ಯಾಕ್‌ಮೋಹನ್ ಜಾಹೀರಾತುಗಳಿಂದ, ದೂರದರ್ಶನದ ವ್ಯವಹಾರಗಳಿಂದ ಮತ್ತು ಟೇಪ್ ಮಾರಾಟಗಳಿಂದ ಗಳಿಸಿದ ಹಣವನ್ನು ಎದುರಾಳಿಗಳ ಪರ ಕುಸ್ತಿ ಮಾಡುತ್ತಿದ್ದ ಪಟುಗಳನ್ನು ಹಿಡಿದುಕೊಳ್ಳಲು ಉಪಯೋಗಿಸಿಕೊಂಡನು. ಇದು ಪರಿಸ್ಥಿತಿಯನ್ನು ಇನ್ನೂ ಹದಗೆಡಿಸಿತು. ರಾಷ್ಟ್ರದೆಲ್ಲೆಡೆ ಕುಸ್ತಿ ಪ್ರವರ್ತಕರು ಈಗ WWFನೊಂದಿಗೆ ನೇರ ಸ್ಪರ್ಧೆಗೆ ಇಳಿದರು.

ಹಲ್ಕ್‌ ಹೊಗನ್ ರಾಕಿ III ನಲ್ಲಿ ಕಾಣಿಸಿಕೊಳ್ಳುವ ಮೂಲಕ ಕೆಲವೇ ಕುಸ್ತಿಪಟುಗಳು ಪಡೆಯಲು ಸಾಧ್ಯವಾದ ರಾಷ್ಟೀಯ ಮಾನ್ಯತೆ ಪಡೆದನು. ಇದರಿಂದಾಗಿ ಮ್ಯಾಕ್‌ಮೋಹನ್‌ ಹೂಗನ್‌ನನ್ನು ತನ್ನ ಸಂಸ್ಥೆಯೊಡನೆ ಸೇರಿಸಿಕೊಳ್ಳಲು ಸಹಿ ಮಾಡಿಸಿಕೊಂಡನು. ರೊಡ್ಡಿ ಪೈಪರ್‍ನ್ನು, ಹಾಗೆಯೇ ಜೆಸ್ಸೆ ವೆನ್‌ಟುರ ನನ್ನೂ ಕರೆತರಲಾಯಿತು. (ಆದರೆ ಈ ಸಮಯದಲ್ಲಿ ವೆನ್‌ಟುರ ಕುಸ್ತಿಯಾಡಿದ್ದು ಕಡಿಮೆ. ಆತ ಶ್ವಾಸಕೋಶದ ತೊಂದರೆಯಿಂದ ನಿವೃತಿ ಹೊಂದಿದ ಮತ್ತು ಗೊರಿಲ್ಲ ಮಾನ್‌ಸನ್ ಜೊತೆಗೆ ವಿಶ್ಲೇಷಕನಾಗಿ ಸೇರಿದ). ಅಂಡ್ರೆ ದ ಜೇಂಟ್, ಜಿಮ್ಮಿ ಸ್ನುಕಾ, ಡಾನ್ ಮುರಾಕೊ, ಪೌಲ್ ಓರ್ನ್‌ಡಾರ್ಫ್, ಗ್ರೆಗ್ ವ್ಯಾಲೆಂಟಿನ್,ರಿಕಿ ಸ್ಟೀಮ್‌ಬೊಟ್ ಮತ್ತು ಐರನ್ ಶೇಕ್ (ಹುಸೇನ್ ಖೋಸ್ರೋ ಅಲಿ ವಜೀರಿ)ಸರದಿಯಾಗಿ ಬಂದರು. ಹೊಗನ್ ಸ್ಪಷ್ಟವಾಗಿ ಮ್ಯಾಕ್‌ಮೋಹನ್‌ನ ಅತಿ ದೊಡ್ಡ ಸ್ಟಾರ್, ಆದರೆ ದೇಶದಲ್ಲಿ ಅವನಿಲ್ಲದೇ WWF ಯಶಸ್ಸು ಗಳಿಸಲು ಸಾದ್ಯವಾಗುತ್ತಿತೇ ಎಂಬ ಚರ್ಚೆಯು ಇತ್ತು.

ಹಲವು ವರದಿಗಾರ ಪ್ರಕಾರ ಹಿರಿಯ ಮ್ಯಾಕ್‌ಮೋಹನ್ ತನ್ನ ಮಗನನ್ನು ಎಚ್ಚರಿಸಿದ್ದ: ವಿನ್ನಿ, "ನೀನು ಏನು ಮಾಡುತ್ತಿದ್ದಿಯಾ? ನೀನು ದಿವಾಳಿಯಾಗುತ್ತಿಯಾ." ಆ ರೀತಿಯ ಎಚ್ಚರಿಕೆಯ ಹೊರತಾಗಿಯೂ, ಕಿರಿಯ ಮ್ಯಾಕ್‌ಮೋಹನ್ ಇನ್ನೂ ದಿಟ್ಟ ಮಹತ್ವಾಕಾಂಕ್ಷೆಯನ್ನು ಹೊಂದಿದ್ದ. ಅದು: WWFನ ದೇಶಾದ್ಯಂತ ಪ್ರವಾಸ. ಆದರೆ ಆ ರೀತಿಯ ಸಾಹಸಕ್ಕೆ ದೊಡ್ಡ ಮೊತ್ತದ ಹಣದ ಅವಶ್ಯಕವಾಗಿತ್ತು. ಅದು WWFನು ಅರ್ಥಿಕ ಪತನಕ್ಕೆ ಇರುಸುವಂತದಾಗಿತ್ತು. ಇದರಿಂದಾಗಿ ಬರಿ ಮ್ಯಾಕ್‌ಮೋಹನ್‌ನ ಪ್ರಯೋಗದ ಭವಿಷ್ಯವಲ್ಲದೆ, WWF, NWA ಗಳು ಮತ್ತು ಇಡೀ ಉದ್ದಿಮೆಯ ಭವಿಷ್ಯ ಕೂಡ ಮ್ಯಾಕ್‌ಮೋಹನ್‌ನ ಉನ್ನತವಾದ ಪರಿಕಲ್ಪನೆ WrestleManiaದ ಯಶಸ್ಸು ಅಥವಾ ವೈಫಲ್ಯದ ಮೇಲೆ ನಿಂತಿತ್ತು. WrestleMania ಒಂದು ಶುಲ್ಕವಿಧಿತ ಪ್ರದರ್ಶನವಾಗಿದ್ದು ( ಕೆಲವು ಪ್ರದೇಶಗಳಲ್ಲಿ; ದೇಶದ ಹಲವು ಭಾಗಗಳಲ್ಲಿ WrestleMania ಕ್ಲೋಸ್ಡ್-ಸರ್ಕ್ಯೂಟ್-ಟೆಲೆವಿಶನ್‌ನಲ್ಲಿ ಲಭ್ಯವಾಗಿತ್ತು) ಅದನ್ನು ಮ್ಯಾಕ್‌ಮೋಹನ್ ವ್ರೆಸ್ಲಿಂಗ್‌ನ ಸೂಪರ್ ಬೌಲ್ ಎಂದು ಹೇಳಿ ಪ್ರಚಾರ ಮಾಡಿದ. ಉತ್ತರ ಅಮೆರಿಕದಲ್ಲಿ ಕುಸ್ತಿಯ ಸೂಪರ್‍ಕಾರ್ಡ್{/0 }ಪರಿಕಲ್ಪನೆ ಹೊಸತೇನಾಗಿರಲಿಲ್ಲ; NWAಯು ವ್ರೆಸಲ್‌ಮೇನಿಯಾಕ್ಕಿಂತ ಹಲವು ವರ್ಷಗಳ ಹಿಂದೆಯೇ ಸ್ಟಾರ್‍ಕೆಡ್‌‍ ನಡೆಸುತ್ತಿತು. ಮತ್ತು ಹಿರಿಯ ಮ್ಯಾಕ್‌ಮೋಹನ್ ಕ್ಲೋಸ್ಡ್-ಸರ್ಕ್ಯೂಟ್-ಟೆಲೆವಿಶನ್‌ನಲ್ಲಿ ನೋಡಬಹುದಾಗಿದ್ದ ಷಿಯಾ ಸ್ಟೇಡಿಯಂ ಕಾರ್ಡ್‌ಗಳನ್ನು ಮಾರಾಟಮಾಡಿದ್ದನು.ಅದಾಗಿಯೂ, ಮ್ಯಾಕ್‌ಮೋಹನ್ ಖಾಯಂ ಕುಸ್ತಿಯ ಅಭಿಮಾನಗಳಲ್ಲದ ಸಾರ್ವಜನಿಕರನ್ನು ಗುರಿಯಾಗಿಟ್ಟುಕೊಂಡು WWFನ್ನು ಮುಖ್ಯವಾಹಿನಿಗೆ ತರಲು ಬಯಸಿದ. ಅವನು ಹೆಸರುವಾಸಿಗಳಾದ ಮಿಸ್ಟರ್.ಟಿ ಮತ್ತು ಸಿಂಡಿ ಲೌಪೆರ್‌ ರನ್ನು ಪಂದ್ಯದಲ್ಲಿ ಭಾಗವಹಿಸಲು ಆಹ್ವಾನಿಸುವುದರ ಮೂಲಕ ಮುಖ್ಯವಾಹಿನಿ ಮಾಧ್ಯಮದ ಗಮನವನ್ನು ಸೆಳೆದ. ಎಮ್‍ಟಿವಿ, ನಿರ್ದಿಷ್ಟವಾಗಿ, WWFನ ವರದಿಯ ಒಂದು ಮುಖ್ಯವಾದ ಕಾರ್ಯಕ್ರಮವನ್ನು ಬಿತ್ತರಿಸಿತ್ತು ಮತ್ತು ಕಾರ್ಯಕ್ರಮ ಮಾಡುವಾಗ ಆ ಸಮಯದಲ್ಲಿ ರಾಕ್ ’ಎನ್’ ರೋಲ್ ವ್ರೆಸ್ಲಿಂಗ್ ಕನೆಕ್ಷನ್ ಎಂದು ಹೆಸರಿಸಿತ್ತು.

ಸುವರ್ಣ ಯುಗ[ಬದಲಾಯಿಸಿ]

ನಿಜವಾದ WrestleMania 1985ರಲ್ಲಿ ನಡೆಯಿತು, ಮತ್ತು ಯಶಸ್ಸನ್ನು ಪ್ರತಿಧ್ವನಿಸಿತು. ಈ ವಿದ್ಯಮಾನ, ಅವನ ತಂದೆಯ ಶುದ್ಧ ಕುಸ್ತಿಯ ಅಭಿಮಾನಕ್ಕೆ ವಿರುದ್ಧವಾಗಿದರೂ, ಯಾವುದನ್ನು ಮ್ಯಾಕ್‌ಮೋಹನ್ "ಕ್ರೀಡಾಮನೋರಂಜನೆ" ಎಂದು ಕರೆದನೋ ಅದಕ್ಕೆ ಪ್ರಥಮ ಪ್ರವೇಶ ಎಂದು ಮನ್ನಣೆ ಪಡೆಯಿತು. WWFನ ವಿಸ್ಮಯಕಾರಿಯಾದ ವ್ಯವಹಾರವನ್ನು ಮ್ಯಾಕ್‌ಮೋಹನ್ ಮತ್ತು ಪೂರ್ಣ ಅಮೆರಿಕದ ಮಗುಮುಖದ ಅವನ ನಾಯಕ, ಹಲ್ಕ್‌ ಹೊಗನ್, ನಿರ್ವಹಿಸಿದರು. ನಂತರದ ಕೆಲವು ವರ್ಷಗಳು, ವೃತ್ತಿಪರ ಕುಸ್ತಿಯ ಎರಡನೆ ಸುವರ್ಣ ಯುಗ ಎಂಬ ಹೆಸರಿನಿಂದ ಕೆಲವರು ಗುರುತಿಸುತ್ತಾರೆ. 1985ರ ಮಧ್ಯದಲ್ಲಿNBCಸ್ಯಾಟರ್‌ಡೇ ನೈಟ್ಸ್‌ ಮೇನ್ ಈವೆಂಟ್‍ ಪರಿಚಯ ವೃತ್ತಿಪರ ಕುಸ್ತಿಯಲ್ಲಿ ದೂರದರ್ಶನ ಜಾಲದಲ್ಲಿನ ಪ್ರಸಾರ 1950ರಿಂದ ಮೊದಲ ಬಾರಿಗೆ ಎಂದು ಗುರುತಿಸಲಾಗಿದೆ. 1987ರಲ್ಲಿ, WWF ಸೃಸ್ಟಿಸಿದೆಲ್ಲಾ 1980ರ ಕುಸ್ತಿಯ ಪರಾಕಾಷ್ಟೆ ಪೂರ್ತಿಯಾಗಿ ಉತ್ಕರ್ಷ ಎಂದು ಪರಿಗಣಿಸಲಾಗಿದೆ, ವ್ರೆಸಲ್‌ಮೇನಿಯಾ III.[೪]

ಹೊಸ ಪಿಳಿಗೆ[ಬದಲಾಯಿಸಿ]

1994ರಲ್ಲಿ ಅದರ ವಿರುದ್ಧ ಎದ್ದಸ್ಟೇರಾಯಿಡ್ ಬಳಕೆ ಮತ್ತು ಹಂಚಿಕೆ ಅಪಾದನೆಗಳು WWFಗೆ ಪ್ರಸಿದ್ಧಿಗೆ ದಕ್ಕೆ ಉಂಟುಮಾಡಿತುWWFನ ನೌಕರರಿಂದ ಸಹ ಲೈಂಗಿಕ ಕಿರುಕಳದ ಅಪಾದನೆಗಳು ಮಾಡಲ್ಪಟ್ಟಿದ್ದವು. ಅಂತಿಮವಾಗಿ ಮ್ಯಾಕ್‌ಮೋಹನ್ ನಿರಪರಾಧಿ ಎಂದು ಘೋಷಿಸಿತು, ಅದರೆ ಇದು WWFಗೆ ಒಂದುಸಾರ್ವಜನಿಕ ಸಂಪರ್ಕಕ್ಕೆ ಘೋರಸ್ವಪ್ನವಾಯಿತು. ಸ್ಟೇರಾಯಿಡ್ ಮೊಕದ್ದಮೆಯ ಖರ್ಚು ಅಂದಾಜು $5 ಮಿಲಿಯನ್ ಆಗಿತ್ತು. ಆದರೆ, ಆ ಸಮಯದಲ್ಲಿ ಆದಾಯಗಳು ಅತಿ ಕಡಿಮೆ ಇತ್ತು. ನಷ್ಟ ತುಂಬಲು, ನಂತರದ ಸನ್ನಿವೇಶದಲ್ಲಿ ಮ್ಯಾಕ್‌ಮೋಹನ್ ಕುಸ್ತಿಪಟುಗಳು ಮತ್ತು ನೌಕರ ವರ್ಗ ಇಬ್ಬರದ್ದು ಸಂಬಳದಲ್ಲಿ ಅಸುಪಾಸು 40% ಕಡಿತಗೊಳಿಸಿದನು(ಮತ್ತು ಸುಮಾರು 50% ಮೇಲ್ಪಟ್ಟು ಮ್ಯಾನೇಜರ್‍ಗಳಾದ ಬಾಬಿ ಹೀನಾನ್ ಮತ್ತುಜಿಮ್ಮಿ ಹಾರ್ಟ್ ಕಡಿತಗೊಳಿಸಲಾಯಿತು, ಮತ್ತು ಅವರಿಬ್ಬರೂ ಕೆಲಸವನ್ನು ತ್ಯಜಿಸಿದರು). ಇದರಿಂದಾಗಿ ಅನೇಕ WWF ಕುಸ್ತಿಪಟುಗಳಿಗೆ 1993 ಮತ್ತು 1996 ನಡುವೆ ಏಕೈಕ ಪ್ರಮುಖ ಸ್ಪರ್ಧೆ [[ ವರ್ಲ್ಡ್ ಚಾಂಪಿಯನ್‌ಶಿಪ್ ವ್ರೆಸ್ಲಿಂಗ್|ವರ್ಲ್ಡ್ ಚಾಂಪಿಯನ್‌ಶಿಪ್ ವ್ರೆಸ್ಲಿಂಗ್]](WCW) ಯಲ್ಲಿ ಮಾತ್ರ ಭಾಗವಹಿಸುವಂತಾಯಿತು. ಈ ಸಮಯದಲ್ಲಿ, "ದ ನ್ಯೂ WWF ಜನೆರೇಷನ್" ಬ್ಯಾನರ್‍ನಡಿಯಲ್ಲಿ ಶಾನ್ ಮೈಕೆಲ್,ಡೀಸೆಲ್, ರೊಜರ್ ರೋಮನ್, ಬ್ರೆಟ್ ಹಾರ್ಟ್ ಮತ್ತು ದ ಅಂಡರ್‍ಟೆಕರ್ ರನ್ನು ವ್ರೆಸ್ಲಿಂಗ್‌ನಲ್ಲಿ ಹೊಂದುವ ಮೂಲಕ ಸ್ವತಃ WWF ಪ್ರೋತ್ಸಾಹ ಪಡೆದುಕೊಂಡಿತು. ಅವರನ್ನು ಮತ್ತು ಇತರ ಹೊಸ ಯುವ ಪ್ರತಿಭೆಗಳನ್ನು ಕಣದ ಹೊಸ ಸೂಪರ್‍ಸ್ಟಾರ್ ಆಗಿ ಪ್ರೋತ್ಸಾಹಿಸುವ ಪ್ರಯತ್ನದಲ್ಲಿ WWF ವಯಸ್ಸಿನ ನಿಯಂತ್ರಣ ಹಾಕಿತು. ಮಾಜಿ ಕುಸ್ತಿಪಟುಗಳಾದ ಹಲ್ಕ್ ಹೊಗನ್ ಮತ್ತು ರಾನ್‌ಡಿ ಸೇವೇಜ್ (ಆ ಹೊತ್ತಿಗೆ ಅವರು WCW ಗೆ ಕೆಲಸ ಮಾಡುತ್ತಿದ್ದರು) ಅದರ ಪರಿಣಾಮ ಅನುಭವಿಸಬೇಕಾಯಿತು. ಇದನ್ನು 1996 ರ ಪ್ರಾರಂಭದ ವರ್ಷಗಳ "ಬಿಲಿಯನೇರ್ ಟೆಡ್" (WCW ನ ಮಾಲೀಕ ಮತ್ತು ಪೋಷಕನಾದ ಮಾಧ್ಯಮ ದೊರೆ ಟೆಡ್ ಟರ್ನರ್ ಗೆ ಸಂಬಂಧಿಸಿ) ಪ್ರಹಸನಗಳಲ್ಲಿ ನೋಡಬಹುದಾಗಿದೆ. ಇದು ಅಂತಿಮವಾಗಿ WrestleMania XII ನ ಆರಂಭ ಕ್ರೀಡೆಯ ಸಂದರ್ಭದಲ್ಲಿ ನಡೆದ "rasslin'" ಪಂದ್ಯದೊಂದಿಗೆ ಕೊನೆಗೊಂಡಿತು.

ಸೋಮವಾರ ರಾತ್ರಿಯ ಯುದ್ಧಗಳು[ಬದಲಾಯಿಸಿ]

ಚಿತ್ರ:Seriesscrewjob.jpg
ದಿ "Montreal Screwjob"- WWE ಇತಿಹಾಸದಲ್ಲಿ ಒಂದು ವಿಶಿಷ್ಟವಾದ ಕ್ಷಣ

1993ರಲ್ಲಿ, WWF ನ ಕೇಬಲ್ ಕಾರ್ಯಕ್ರಮ WWF ಮಂಡೇ ನೈಟ್ ರಾ ನ ಪ್ರಥಮ ಪ್ರವೇಶದೊಂದಿಗೆ ದೂರದರ್ಶನದ ಪ್ರಸಾರದಲ್ಲಿ ಹೊಸ ನೆಲೆಯನ್ನು ಸ್ಥಾಪಿಸಿಕೊಂಡಿತು. ಮಿತಿಮೀರಿದ ಯಶಸ್ಸಿನ ನಂತರ, 1995ರಲ್ಲಿ WCW ವಿರುದ್ಧವಾಗಿ ಅದರ ಸ್ವಂತ ಕೇಬಲ್ ಕಾರ್ಯಕ್ರಮ WCW ಮಂಡೇ ನೈಟ್ರೋ ಕಾರ್ಯಕ್ರಮದ ಸಮಯದಲ್ಲಿಯೇ Raw ಕಾರ್ಯಕ್ರಮ ನೀಡುವ ಮೂಲಕ ಸವಾಲೆಸೆಯಿತು[೫]. 1996ರ ಮಧ್ಯದವರೆಗೆ, ಈ ಎರಡು ಕಾರ್ಯಕ್ರಮಗಳು ಸ್ಪರ್ಧೆಯ ರೇಟಿಂಗ್ಸ್‌ ಅರುಸುತ್ತಾ ವ್ಯಾಪಾರ ಗಳಿಸಿದವು. WCW ಸುಮಾರು 2 ವರ್ಷದವರೆಗೆ ಪ್ರಾಬಲ್ಯತೆಯನ್ನು ಹೊಂದಿತ್ತು. ಅದಕ್ಕೆ ಮುಖ್ಯ ಉದ್ದೀಪಕನ್ಯೂ ವರ್ಲ್ಡ್ ಅರ್ಡರ್‌, ಮಾಜಿ ಸೂಪರ್‍ಸ್ಟಾರ್‌ಗಳಾದ ಹಲ್ಕ್ ಹೊಗನ್, ಸ್ಕಾಟ್ ಹಾಲ್ ಮತ್ತು ಕೆವಿನ್ ನ್ಯಾಶ್‌ರ ದೃಡ ನೇತೃತ್ವದಲ್ಲಿ ಪ್ರಾರಂಭವಾಯಿತು.

1996–1997[ಬದಲಾಯಿಸಿ]

1990ರ ಮದ್ಯದಲ್ಲಿ ದಾವಾ ಮತ್ತು ಪಂದ್ಯದ ವಿಧಗಳು ಅಭಿವೃದ್ಧಿ ಹೊಂದಿ ಕುಸ್ತಿಯಲ್ಲಿ ಒಂದು ಹೊಸ ಯುಗ ಪ್ರಾರಂಭವಾಯಿತು. WWFನ ಅಭಿಮಾನಿಗಳು ಗುಡ್ ಗೈ ಗಿಂತ [[ ಹೀಲ್ (ವೃತ್ತಿ ನಿರತ ಕುಸ್ತಿ)|ಬ್ಯಾಡ್ ಗೈ]] ಎಂದು ತೋರಿದವರ ಮೇಲೆ ಹೆಚ್ಚಿನ ಒಲವು ತೋರಿಸಿದ ಹಾಗೆ ಕಂಡರು. WWF ಕ್ರಿಯೇಟಿವ್ ಮಂಡಳಿ ಮಾಡಿದ ಸೃಜನಶೀಲ ಬದಲಾವಣೆಗಳು ಕುಸ್ತಿಯನ್ನು "ಬೀದಿ ಜಗಳ", "ಕೆಟ್ಟ ಧೋರಣೆ" ಎಂಬುದಾಗಿ ನೋಡಿತು. ಕ್ರೀಡಾ ಮನೋರಂಜನೆಯಲ್ಲಿ ಕ್ರಾಂತಿಕಾರಿ ಬಲಾವಣೆಯ ಹೊರತಾಗಿಯೂ WCW ಪ್ರತಿಸ್ಪರ್ಧಿಯಾಗಿ ಈ ಎಲ್ಲಾ ವರ್ಷಗಳು WWF ಕಡಿಮೆ ಅರ್ಥಿಕ ಆದಾಯದಲ್ಲಿ ಮತ್ತು ಅಭಿಮಾನಿಗಳ ಹೆಚ್ಚಿನ ನಷ್ಟದಲ್ಲಿ ಉಳಿಯಿತು, 1996 ಮತ್ತು 1997ರಲ್ಲಿ WWFನ ಪ್ರಮುಖ ಪ್ರತಿಭೆಗಳು WCWಗೆ ಸೋತಿದ್ದರು. ರೋಜರ್ ರಾಮೊನ್ ಸ್ಕಾಟ್ ಹಾಲ್, ಡೀಸೆಲ್, ಕೆವಿನ್ ನ್ಯಾಶ್, ಸೈಕೋ ಸಿದ್, ಸಿದ್ ಯುಡಿ ಅಲುಂಡ್ರಾ ಬ್ಲೆಜ್, ಡೆಬ್ರಾ ಮಿಕೆಲಿ ಮತ್ತು ದಿವಂಗತ ರಿಕ್ ರುಡ್‌‌ ಸೇರಿದ್ದರು.WWF ಅವರೆನೆಲ್ಲಾ ಬದಲಿಸಿ WCWಯ ಮಾಜಿ ಪ್ರತಿಭೆಗಳಾದ ವಡೆರ್ (ಲಿಯಾನ್ ವೈಟ್,) ಸ್ಟೋನ್ ಕೊಲ್ಡ್ ಸ್ಟೀವ್ ಅಸ್ಟಿನ್, ಬ್ರೈನ್ ಪಿಲ್ಲ್‌ಮ್ಯಾನ್ಮ್ಯಾನ್‌ಕೈಂಡ್ ([[ ಮೈಕ್ ಫಾಲೆಯ್|ಮಿಕ್ ಫೊಲೇ]]) ಮತ್ತು ಫರೂಕ್ ರಾನ್ ಸಿಮ್ಮನ್ಸ್ ರನ್ನು ಸೇರಿಸಿಕೊಂಡಿತು. ಎರಿಕ್ ಬಿಷಪ್‌ನು ಸಾರ್ವಜನಿಕವಾಗಿ WWFಗೆ ಅವಮಾನ ಮಾಡಿದ, WCWಯಿಂದ ವಜಾ ಮಾಡಿದ ಕುಸ್ತಿ ಪಟುಗಳೊಂದಿಗೆ ಒಪ್ಪಂದ ಮಾಡಿಕೊಂಡಿದಕ್ಕೆ ಮತ್ತು WWF ಕುಸ್ತಿಪಟುಗಳು WCWನೊಂದಿಗೆ ಸಹಿಹಾಕಲು WCWನ ಹೆಚ್ಚಿನ ಸಂದಾಯ ಕಾರಣ ಎಂದು ಟೀಕಿಸಿದನು, ಮಂಡೇ ನೈಟ್ ವಾರ್ಸ್‌ಅನ್ನು ನಿಟ್ರೊ ಗೆ ವಿರುದ್ಧವಾಗಿ ತೀವ್ರಗೊಳಿಸಿತು. WWF ಪ್ರಸಿದ್ಧಿಯನ್ನು ಮರಳಿಪಡೆಯಲು ಹೆಣಗಾಡಿತು.

ಬ್ರೆಟ್ ಹಾರ್ಟ್ WCWಗೆ ಮರಳುವಂತೆ ಮ್ಯಾಕ್‌ಮೋಹನ್ ನಿಭಾಯಿಸಿದನು ಮತ್ತು ಹಾರ್ಟ್ ಮತ್ತು ಅಸ್ಟೀನ್ ಜೊತೆ ದಾವ ಶುರುಮಾಡಿದನು. WrestleMania XII ನಂತರದ ಹಾರ್ಟ್‌ನ ಅನುಪಸ್ಥಿತಿಯಲ್ಲಿ, ಸ್ಟೀವ್ ಆಸ್ಟಿನ್ ಆಸ್ಟಿನ್ 3:16 ಭಾಷಣದಿಂದ ಪ್ರಾರಂಭಿಸಿದ, 1996ರಕಿಂಗ್ ಅಫ್ ರಿಂಗ್‌ನ ಶುಲ್ಕವಿಧಿತ ಪ್ರದರ್ಶನ ಪಂದ್ಯಾವಳಿಯ ಫೈನಲ್‌ನಲ್ಲಿ ಜೇಕ್ ರಾಬರ್ಟ್ಸ್‌ನನ್ನು ಸೋಲಿಸಿದ ನಂತರದಲ್ಲಿ ಸ್ಟೀವ್ ಅಸ್ಟಿನ್ ಆ ಕಂಪೆನಿಯ ಹೊಸ ಮುಖವಾದ.[೬]WrestleMania 13ರ ಒಂದು ಶ್ಲಾಘನೀಯ ಪಂದ್ಯದಲ್ಲಿ ಹಾರ್ಟ್ ಆಸ್ಟಿನ್‌ನನ್ನು ಸೋಲಿಸಿದ, ಮತ್ತು ಅದರ ಸ್ವಲ್ಪ ಸಮಯದ ನಂತರ ಹಾರ್ಟ್ ದಿ ಹಾರ್ಟ್ ಫೌಂಡೇಶನ್‌ ನನ್ನು ಸ್ಥಾಪಿಸಿದ.ಆಸ್ಟಿನ್ ಮತ್ತು ಶಾನ್ ಮೈಕಲ್ಸ್ ಹೆಚ್ಚು ವರ್ಷಗಳಲ್ಲಿ ಅವರಲ್ಲಿ ದಾವೆ ಹೂಡಿದರು. ಇದು ಕಂಪೆನಿಯ ವ್ಯಾಪಾರದಲ್ಲಿ ಬಹುಮುಖ್ಯ ಬದಲಾವಣೆಯ ಘಟ್ಟ ಎಂದು ಸಾಬೀತಾಯಿತು. ತನ್ನ ಬಹುಕಾಲದ ಬಲವಾದ ವರ್ಚಸ್ಸಿನ ಹೊರತು, ಕೆನಡಾದ ಹಾರ್ಟ್ ಒಂದು Anti-USA ಗಿಮಿಕ್‌ನಲ್ಲಿ ಪರಾಭವಗೊಂಡ. ಆತನನ್ನು ಕೆಳಮಟ್ಟಕ್ಕೆ ತರುವ ಹಲವು ಪ್ರಯತ್ನಗಳ ನಂತರವೂ ಸ್ಟೀವ್ ಅಸ್ಟೀನ್ ಅಭಿಮಾನಿಗಳಿಂದ ಪ್ರೋತ್ಸಾಹಿಸಲ್ಪಟ್ಟನು(see tweener).

ರಾಕಿ ಮೈವಿಯಾ ತನ್ನ ಅಭಿಮಾನಿಗಳು ಅವನ "ಒಳ್ಳೆಯ ಹುಡುಗ" ಎಂಬ ವರ್ಚಸ್ಸನ್ನು ತಿರಸ್ಕರಿಸಿದ ನಂತರ ನೆಶನ್ ಆಫ್ ಡಾಮಿನೇಶನ್ ಸ್ಟೇಬಲ್‌ ಸೇರಿದ, ಮತ್ತು ಶಾನ್ ಮೈಕಲ್ಸ್‌ ಟ್ರಿಪಲ್ H ಮತ್ತು ಚೈನಾರೊಂದಿಗೆ D-Generation X ಬೀದಿ ಗುಂಪು ಪಕ್ಷ ಸ್ಥಾಪಿಸಿದ; ಸ್ಟೋನ್ ಕೋಲ್ಡ್ ಸ್ಟೀವ್ ಆಸ್ಟಿನ್ ಪಾತ್ರದಂತೆ, DXನನ್ನು ಅಭಿಮಾನಿಗಳು ಮತ್ತು ಇತರ ಕುಸ್ತಿಪಟುಗಳು ಅವರ ಬಗ್ಗೆ ಏನು ಯೋಚಿಸುತ್ತಾರೆ ಎಂದು ಲಕ್ಷಿಸದೇ ರೂಪಿಸಲಾಯಿತು. ಶಾನ್ ಮೈಕಲ್ಸ್ ಮತ್ತು ದಿ ಅಂಡರ್‍ಟೇಕರ್ ನಡುವಿನ ಹೆಲ್ ಇನ್ ಎ ಸೆಲ್ ಪಂದ್ಯ WWFನ ಕ್ರಿಯೇಟಿವ್ ಬೋರ್ಡ್‌ಗೆ ಹೊಸದಾದ ಮತ್ತು ಬಲವಾದ ಅಡಿಪಾಯವನ್ನು ಒದಗಿಸಿತು. WWFನಿಂದ ಬ್ರೆಟ್‍ ಹಾರ್ತ್‌ನ ವಿವಾದಾತ್ಮಕ ವಿದಾಯದಿಂದ ಮ್ಯಾಕ್‌ಮೋಹನ್ ಅಭಿಮಾನಿಗಳು ವ್ಯಾಪಕವಾಗಿ ಆತನನ್ನು ತಿರಸ್ಕರಿಸುವುದರೊಂದಿಗೆ 1997 ಮುಕ್ತಾಯವಾಯಿತು (ನೋಡಿ: Montreal Screwjob), ಇದು ದಿ ಆ‍ಯ್‌ಟಿಟ್ಯೂಡ್ ಎರಾದ ಸ್ಥಾಪನೆಗೆ ಬಲವಾದ ಪ್ರಾರಂಭ ಎಂದು ಸಾಬೀತಾಯಿತು.

ಆ‍ಯ್‌ಟಿಟ್ಯೂಡ್ ಎರಾ (ದೋರಣೆಯ ಯುಗ)[ಬದಲಾಯಿಸಿ]

ಜನವರಿ 1998ರಷ್ಟರಲ್ಲಿ, WCW ಜೊತೆಗೆ ಸ್ಪರ್ಧಿಸುವ ಪ್ರಯತ್ನದಲ್ಲಿ WWF ಹೆಚ್ಚಿನ ಹಿಂಸೆ, ಶಪಥ ಮಾಡುವುದು ಮತ್ತು ಹೆಚ್ಚಿನ ಹರಿತ ಕೋನಗಳಲ್ಲಿ ಪ್ರಸಾರ ಮಾಡಲು ಶುರುಮಾಡಿತು. ಮೊಂಟ್‌ರಿಯಲ್‍ ಸ್ಕ್ರೂಜಾಬ್ ಘಟನೆಯ ನಂತರ ಬ್ರೆಟ್ ಹಾರ್ಟ್ WCWಗೆ ಸೇರಿಕೊಂಡ,[೭] ವಿನ್ಸ್ ಮ್ಯಾಕ್‌ಮೋಹನ್ ಅನಿರೀಕ್ಷಿತ ಆಘಾತದ ನಂತರ "[[ ವಿನ್ಸ್ ಮ್ಯಾಕ್‌ಮೋಹನ್#ಮಿ.ಮ್ಯಾಕ್‌ಮೋಹನ್|ಮಿ.ಮ್ಯಾಕ್‌ಮೋಹನ್]]" ಪಾತ್ರವನ್ನು ಸೃಷ್ಟಿಸಿದನು. ಈ ಪಾತ್ರವು ನಿರಕುಂಶ, ಉತ್ತಮ ಆಡಳಿತಗಾರ ಮತ್ತು "ವ್ಯವಹಾರಕ್ಕೆ ಉತ್ತಮ" ಸ್ಥಾನಕ್ಕೆ ಹೊಂದುವ ಪಾತ್ರವಾಗಿ, "ಸರಿಹೊಂದದ" ಆಸ್ಟಿನ್‌ಗಿಂತ ಉತ್ತಮ ಎಂಬ ರೀತಿಯಲ್ಲಿ ಚಿತ್ರಿತವಾಗಿತ್ತು. ಇದರ ಪ್ರತಿಫಲವಾಗಿ, ಆ‍ಯ್‌ಸ್ಟಿನ್ ಮತ್ತು ಮ್ಯಾಕ್‌ಮೋಹನ್ ವ್ಯಾಜ್ಯಕ್ಕೆ, ಮತ್ತು ಡಿ-ಜೆನರೆಷನ್ X ನೊಂದಿಗೆ, ಆ‍ಯ್‌ಟಿಟ್ಯೂಡ್ ಎರಾ ಅಥವಾ ದೋರಣೆಯ ಯುಗ ಪ್ರಾರಂಭವಾಯಿತು. ಇದರಲ್ಲಿ ಸ್ಥಾಪಿತ ಸೋಮವಾರ ರಾತ್ರಿಯ ಕುಸ್ತಿಯನ್ನು ಸಹಾ ಹೊಂದಿತ್ತು. WCW ಮತ್ತು WWF ಎರಡೂ ಸಹಾ ಸೋಮವಾರ ರಾತ್ರಿ ಶೋಗಳನ್ನು ಹೊಂದಿದ್ದು ಅವು ರೇಟಿಂಗ್‌ನಲ್ಲಿ ಪ್ರತಿಸ್ಪರ್ಧಿಗಳಾದವು. WWF ಗೆ ಹಲವು ಹೊಸ ಕುಸ್ತಿ ಪಟುಗಳಾದಕ್ರಿಸ್‍ ಜೆರಿಕೋ, ದಿ ರಾಡಿಕಾಲ್ಜ್ (ಕ್ರಿಸ್ ಬೆನೊಯಿಟ್, ಎಡ್ಡಿ ಗುರೆರೊ, ಪೆರ್ರಿ ಸ್ಯಾಟರ್ನ್, ಡೀನ್ ಮಲೆನ್ಕೋ) ಮತ್ತು 1996 ಓಲಂಪಿಕ್ ಚಿನ್ನದ ಪದಕ ವಿಜೇತ, ಕರ್ಟ್ ಯಾಂಗಲ್, WWFಗೆ ಸೇರಿಕೊಂಡರು, ಅವುಗಳಲ್ಲಿ ರಾಕ್ (ಮೊದಲ ಹೆಸರು ರಾಕಿ ಮೈವೈ), ಮತ್ತು ಮಿಕ್ಕಿ ಫೊಲೆ (ಮ್ಯಾನ್‌ಕೈಂಡ್, ಕಾಕ್ಟಸ್ ಜಾಕ್ ಮತ್ತು ಡ್ಯೂಡ್ ಲವ್) ಮುಖ್ಯ ವಿಭಾಗದಲ್ಲಿ ಸ್ಪರ್ಧಿಸುವವರಾದರು. ಈ ಯುಗ ವೀಕ್ಷಕರನ್ನು ಹೆಚ್ಚಿಸಲು ವಿವಿಧ ಶರತ್ತುಗಳ ಹೆಚ್ಚಿನ ಮೃಗೀಯ ಪಂದ್ಯಗಳ ಕ್ರಾಂತಿ ಕಂಡಿತು. ಮುಖ್ಯವಾಗಿ ಹೆಲ್‍ ಇನ್‍ ಸೆಲ್ (ಇದರ ಎರಡನೆಯ ಪ್ರವೇಶದಲ್ಲಿ ಅಂಡರ್‍ಟೇಕರ್ ವಿರುದ್ಧವಾಗಿ ಮ್ಯಾನ್‌ಕೈಂಡ್‌ ಕಾಣಿಸಿಕೊಳ್ಳುವುದು) ಮತ್ತು ಇನ್‌ಫರ್ನೊ ಪಂದ್ಯ (ಕೆನ್ ವಿರುದ್ಧ ಅಂಡರ್‌ಟೇಕರ್ ಎದುರಾಗಿದ್ದು).[೮]

ವ್ಯವಹಾರದ ಅಭಿವೃದ್ಧಿ[ಬದಲಾಯಿಸಿ]

ಏಪ್ರಿಲ್ 29, 1999 ರಂದು, ಅನನುಭವಿUPN ನೆಟ್‌ವರ್ಕ್‌ನಲ್ಲಿ WWF ಸ್ಮಾಕ್‌ಡೌನ್ ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೂಲಕ ದೂರದರ್ಶನ ಪ್ರಪಂಚಕ್ಕೆ ವಾಪಸಾಯಿತು. ಅಗಸ್ಟ್‌ 26, 1999ರಂದು, ಮಂಗಳವಾರ ರಾತ್ರಿ ಶೋ ವಾರದ ಸರಣಿಯಾಯಿತು. ಆ‍ಯ್‌ಟಿಟ್ಯೂಡ್ ಎರಾದ ಯಶಸ್ಸಿನ ಹಿನ್ನಲೆಯಲ್ಲೇ, ಅಕ್ಟೋಬರ್ 19, 1999ರಂದು ಪೋಷಕ WWFನ ಕಂಪನಿ, ಟೈಟಾನ್ ಸ್ಪೋರ್ಟ್ಸ್ (ಆ ವೇಳೆಗೆ World Wrestling Federation Entertainment, Inc. ಎಂದು ಪುನರ್‍ನಾಮಕರಣಗೊಂಡಿತ್ತು) ಸಾರ್ವಜನಿಕ ಉದ್ದಿಮೆ ಕಂಪೆನಿಯಾಯಿತು, ಒಂದಕ್ಕೆ $17 ಬೆಲೆಯ 10ಮಿಲಿಯನ್ ಶೇರುಗಳನ್ನು ಮಾರಾಟಕ್ಕಿಟ್ಟಿತು.[೯] ಟೈಮ್ಸ್ ಸ್ಕ್ವೇರ್‌ನಲ್ಲಿ ಒಂದು ನೈಟ್‍ಕ್ಲಬ್‌ನ ಸೃಷ್ಟಿ, ಚಲಚಿತ್ರ ನಿರ್ಮಾಣ, ಮತ್ತು ಪುಸ್ತಕ ಪ್ರಕಟಣೆಯನ್ನು ಒಳಗೊಂಡ ತನ್ನ ವೈವಿಧ್ಯೀಕರಣದ ಆಸೆಯನ್ನು ‎WWF ಪ್ರಕಟಿಸಿತು.

2000ರಲ್ಲಿ, WWF, ದೂರದರ್ಶನ ಜಾಲ NBCಯ ಸಹಕಾರದೊಂದಿಗೆ,XFL ಎಂಬ ಒಂದು ಹೊಸ ವೃತ್ತಿಪರ ಫುಟ್ಬಾಲ್ ಲೀಗ್‌ನ್ನು ಸೃಸ್ಟಿಸುವ ಬಗ್ಗೆ ಘೊಷಿಸಿತು.ಅದು 2001ರಲ್ಲಿ ಪ್ರಾರಂಭವಾಯಿತು.[೧೦] ಆ ಲೀಗ್ ಅಶ್ಚರ್ಯಕರ ರೀತಿಯಲ್ಲಿ, ಮೊದಲ ಕೆಲವು ವಾರಗಳಲ್ಲಿ ಹೆಚ್ಚು ರೇಟಿಂಗ್ ಗಳಿಸಿತು, ಅದರೆ ಪ್ರಾರಂಭದ ಆಸಕ್ತಿ ನಂತರದಲ್ಲಿ ನಾಶವಾದ ಕಾರಣದಿಂದಾಗಿ ಅದರ ರೇಟಿಂಗ್ ಕೆಳಮಟ್ಟಕ್ಕಿಳಿಯಿತು(ಅದರ ಒಂದು ಆಟ ಅಮೆರಿಕದ ದೂರದರ್ಶನ ಇತಿಹಾಸದಲ್ಲಿ ಅತ್ಯಂತ ಕಡಿಮೆ ರೇಟಿಂಗ್ ಇರುವ ಪ್ರೈಮ್‌ಟೈಮ್ ಕಾರ್ಯಕ್ರಮ). ಒಂದೇ ಒಂದು ಸಿಸನ್ ನಂತರ NBC ಈ ಸಾಹಸದಿಂದ ಹೊರ ನಡೆಯಿತು, ಅದರೆ ಮ್ಯಾಕ್‌ಮೋಹನ್ ಒಬ್ಬನೇ ಮುಂದುವರಿಯಲು ಯೋಚಿಸಿದ.ಅದರೆ, UPN ಜೊತೆ ವ್ಯವಹಾರ ನಡೆಸಲು ಸಾಧ್ಯವಾಗದಿದ್ದಾಗ, ಮ್ಯಾಕ್‌ಮೋಹನ್ XFLನ್ನು ಮುಚ್ಚಿದ.[೧೧]

WCW ಮತ್ತು ECW ಗಳನ್ನು ಗಳಿಸಿದ್ದು[ಬದಲಾಯಿಸಿ]

ಧೋರಣೆಯ ಯುಗವು ಸೋಮವಾರ ರಾತ್ರಿ ಯುದ್ಧಗಳ ಅಲೆಯನ್ನು WWFನ ಹಿತಪಕ್ಷಕ್ಕೆ ತಿರುಗಿಸಿತು. ಟೈಮ್ ವಾರ್ನರ್ AOL ಜೊತೆಗೆ ಸೇರಿದ ಮೇಲೆ,ಟೆಡ್ ಟರ್ನರ್ ರವರ ಪ್ರಭಾವ WCW ಮೇಲೆ ಗಮನಾರ್ಹವಾಗಿ ಕಡಿಮೆಯಾಯಿತು, ಮತ್ತು ಹೊಸ ಕಂಪನಿ WCWಯನ್ನು ಪೂರ್ತಿಯಾಗಿ ತೊಡೆದುಹಾಕಲು ನಿರ್ಧರಿಸಿತು.ಮಾರ್ಚ್ 2001ರಲ್ಲಿ WWF Entertainment,Inc. ಸುಮಾರು $7 ಮಿಲಿಯನ್‌ಗೆ World Championship Wrestling, Inc. AOL ಟೈಮ್ ವಾರ್ನರ್ ಇವರಿಂದ ಗಳಿಸಿತು ಎಂದು ವರದಿಯಾಗಿದೆ.[೧೨] ಈ ಖರೀದಿಯಿಂದ WWF ಕುಸ್ತಿಯು ವಿಶ್ವದಲ್ಲಿಯೇ ದೊಡ್ಡ ಪ್ರಚಾರವಾಯಿತು, ಮತ್ತು ಇಡೀ ಉತ್ತರ ಅಮೇರಿಕದಲ್ಲಿ ಹೆಚ್ಚಿನ ಪ್ರಚಾರವಿರುವ ಏಕೈಕ ಪ್ರಕಾರವಾಯಿತು. ಇದು 2002 ರಲ್ಲಿ ಟೋಟಲ್ ನಾನ್‌ಸ್ಟಾಪ್ ಆಕ್ಷನ್ ಕುಸ್ತಿ ಸ್ಥಾಪನೆಯಾಗುವರೆಗೂ ಹಾಗೆಯೇ ಉಳಿಯಿತು.

ಎಕ್ಸಟ್ರೀಮ್ ಚಾಂಪಿಯನ್‌ಶಿಪ್ ಕುಸ್ತಿ (ECW)ಯ ಆಸ್ತಿ ದಿವಾಳಿಯಾಗದಂತೆ ಸಂರಕ್ಷಿಸಬೇಕೆಂದು ಎಪ್ರಿಲ್ 2001ರಲ್ಲಿ ಕೋರಿದಾಗ, ಅದನ್ನು WWE ಮಧ್ಯ-2003ರಲ್ಲಿ ಖರೀದಿಸಿತು..[೧೩]

ಹೆಸರಿನ ವಿವಾದ[ಬದಲಾಯಿಸಿ]

2000ರಲ್ಲಿ ವರ್ಲ್ಡ್ ವೈಡ್ ಫನ್ಡ್ ಫಾರ್ ನೇಚರ್ (ಇದು ಕೂಡ WWF) ಎಂಬ ಪರಿಸರ ಸಂಘಟನೆಯವರು ವರ್ಲ್ ವ್ರೆಸ್ಲಿಂಗ್ ಫೆಡರೇಷನ್ ಮೇಲೆ ಮೊಕದ್ದಮೆ ಹಾಕಿದರು. ನ್ಯಾಯಾಧಿಪತಿಗಳು ಟೈಟನ್ ಸ್ಪೋರ್ಟ್ಸ್ 1994ರ ಒಪ್ಪಂದ ಉಲ್ಲಂಘಿಸಿತು ಎಂದು ಒಪ್ಪಿದರು. ಆ ಒಪ್ಪಂದದ ಪ್ರಕಾರ WWF ಹೆಸರಿನ ಮೊದಲಕ್ಷರಗಳ ಬಳಕೆ ಹೊರದೇಶಗಳಲ್ಲಿ ವಿಶೇಷವಾಗಿ ಮಾರಾಟಕ್ಕೆ ಸಂಬಂಧಿಸಿದಂತೆ ಸೀಮಿತವಿರಬೇಕಾಗಿತ್ತು. ಈ ಎರಡು ಕಂಪನಿಗಳು ಈ ಹೆಸರಿನ ಮೊದಲಕ್ಷರಗಳನ್ನು ಮಾರ್ಚ್ 1979ಯಿಂದ ಬಳಸಿದರು.[೧೪] ಮೇ 5,2002ರಂದು ಈ ಕಂಪನಿ ನಿಶ್ಯಬ್ಧವಾಗಿ ತನ್ನ ವೆಬ್‌ಸೈಟಿನಿಂದ ಎಲ್ಲಾ ಉಲ್ಲೇಖಗಳನ್ನು "WWF" ಯಿಂದ "WWE"ಗೆ ಬದಲಿಸಿತು ಹಾಗೂ ತನ್ನ URL ಅನ್ನು WWF.com ನಿಂದ WWE.com ಗೆ ಬದಲಿಸಿತು. ಮರುದಿನ ತನ್ನ ಅಧಿಕೃತ ಹೆಸರನ್ನು World Wrestling Federation Entertainment, Inc ರಿಂದ World Wrestling Entertainment, Inc. ಅಥವಾ WWEಯೆಂದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿತು. ಮತ್ತು ಈ ಬದಲಾವಣೆಯನ್ನು ನಂತರ ಅದೇ ದಿನ ಮಂಡೆ ನೈಟ್ ರಾ ದ ಪ್ರಸಾರದಲ್ಲಿ ಪ್ರಕಟಿಸಲಾಯಿತು. ಇದನ್ನು ಕನೆಕ್ಟಿಕಟ್‌ನ ಹಾರ್ಟ್‌ಫರ್ಡ್‌ನಲ್ಲಿರುವ ಹಾರ್ಟ್‌ಫರ್ಡ್ ಸಿವಿಕ್ ಸೆಂಟರ್ ನಿಂದ ಪ್ರಸಾರ ಮಾಡಲಾಯಿತು. ಸ್ವಲ್ಪ ಸಮಯದವರೆಗೆ WWE ಯವರು "ಗೆಟ್ ದ ’ಎಫ್’ ಔಟ್" ಎಂಬ ಘೋಷಣೆ ಬಳಸುತ್ತಿದ್ದರು.[೧೫] ಹಳೇಯ WWF ಧೋರಣೆ ಚಿನ್ಹೆಗಳನ್ನು ತನ್ನ ಯಾವುದೆ ಸ್ವತ್ತುಗಳ ಮೇಲೆ ಬಳಸುವುದು ನಿಲ್ಲಿಸುವಂತೆ ಮತ್ತು ಹಿಂದಿನ ಎಲ್ಲಾ ಉಲ್ಲೇಖಗಳಲ್ಲಿ WWF ಹೆಸರನ್ನು ತೆಗೆಯುವಂತೆ ಕಂಪನಿಗೆ ಆದೇಶಿಸಲಾಯಿತು. ಏಕೆಂದರೆ ನಿರ್ದಿಷ್ಟ ಸಂದರ್ಭಗಳಲ್ಲಿ WWF ಹೆಸರಿನ ಮೊದಲಕ್ಷರಗಳ ಸ್ವಾಮ್ಯದ ಮುದ್ರೆ ಈಗ ಅವರ ಸ್ವಂತದಾಗಿರಲಿಲ್ಲ.[೧೬] ಹಲವು ವಿವಾದಗಳಿದ್ದರೂ WWEಗೆ 1984ರಿಂದ 1997ರ ವರೆಗೆ ಬಳಸಿದ ಆರಂಭದ WWF ಚಿನ್ಹೆ ಮತ್ತು 1994ರಿಂದ 1998ರ ವರೆಗೆ ಉಪಯೋಗಿಸುತ್ತಿದ "ಹೊಸ WWF ಪೀಳಿಗೆ" ಚಿನ್ಹೆಯನ್ನು ಬಳಸಲು ಅನುಮತಿಯಿತ್ತು. ಇಷ್ಟೇ ಅಲ್ಲದೇ, ಈ ಕಂಪನಿಯು "ವರ್ಲ್ಡ್ ವ್ರೆಸ್ಲಿಂಗ್ ಫೆಡರೇಷನ್" ಮತ್ತು "ವರ್ಲ್ಡ್ ವ್ರೆಸ್ಲಿಂಗ್ ಫೆಡರೇಷನ್ ಎಂಟರ್‌ಟೈನ್‌ಮೆಂಟ್" ಎಂಬ ಪೂರ್ತಿ ಹೆಸರುಗಳನ್ನು ಯಾವುದೇ ಅಡಚಣೆಯಿಲ್ಲದೆ ಉಪಯೋಗಿಸಬಹುದು.

ಬ್ರಾಂಡ್ ವಿಸ್ತಾರ[ಬದಲಾಯಿಸಿ]

ಹೆಸರು ಬದಲಾಯಿಸುವ ಸುಮಾರು ಎರಡು ತಿಂಗಳ ಮುಂಚೆ ಮಾರ್ಚ್ 2002ರಲ್ಲಿ WWE ಎರಡು ಸರದಿಗಳನ್ನು ಸೃಷ್ಟಿಸಲು ನಿರ್ಧರಿಸಿತು. ಅವು ರಾ ಮತ್ತು ಸ್ಮ್ಯಾಕ್‌ಡೌನ್! ಇದಕ್ಕೆ ಕಾರಣವೆಂದರೆ ಅವರಲ್ಲಿ ಇನ್ವೇಶನ್ ಸ್ಟೋರಿ‌ಲೈನ್‌ನಿಂದ ಉಳಿದ ಪ್ರತಿಭೆಗಳು ಅತ್ಯಂತ ಹೆಚ್ಚು ಜನರಿದ್ದದ್ದು. ಇದನ್ನೇ WWEನ ಬ್ರಾಂಡ್ ವಿಸ್ತಾರ ಎನ್ನುತ್ತಾರೆ. ಬ್ರಾಂಡ್ ವಿಸ್ತಾರದ ಜೊತೆಗೆ, WWE ಪ್ರತೀ ವರ್ಷ ಕರಡು ಲಾಟರಿಯನ್ನು ಆಯೋಜಿಸುತದೆ.

ಬದಲಾಗುತ್ತಿರುವ ನೆಟ್‌ವರ್ಕ್‌ಗಳು[ಬದಲಾಯಿಸಿ]

2005ರ ಕೊನೆಯಲ್ಲಿ,WWE ರಾ TNN(ಈಗ Spike TV ಆಗಿದೆ)ನಲ್ಲಿನ ತನ್ನ ಐದು ವರ್ಷದ ನಿಗದಿತ ಕಾಲದ ಕೆಲಸವನ್ನು ಮುಗಿಸಿ ತನ್ನ ಆರಂಭದ ನಿವಾಸ USA ನೆಟ್‌ವರ್ಕ್‌ಗೆ ಹಿಂತಿರುಗಿತು. USA ನೆಟ್‌ವರ್ಕ್‌ನ ಮಾತೃ ಕಂಪನಿಯಾದ NBC ಯುನಿವರ್ಸಲ್‌ನೊಡನೆ ಮಾಡಿಕೊಂಡ ಕರಾರಿನ ಕಾರಣ 2006ರಲ್ಲಿ WWEಗೆ ಅದರ ಪ್ರಸಿದ್ಧ ಶನಿವಾರ ರಾತ್ರಿಯ ಶೋ ಆದ ಸ್ಯಾಟರ್‌ಡೇ ನೈಟ್ಸ್ ಮೇನ್ ಈವೆಂಟ್(SNME)ಗೆ, ಹದಿಮೂರು ವರ್ಷದ ಬಿಡುವಿನ ನಂತರ, ಮತ್ತೆ NBCಯಲ್ಲಿ ಕಾಣಿಸಿಕೊಳ್ಳಲು ಅವಕಾಶ ದೊರಕಿತು. ಹೀಗಾಗಿ WWE ಕಂಪನಿಗೆ ಹೆಚ್ಚಿನ ಪ್ರಸಿದ್ಧಿಯಿಲ್ಲದ ಕೇಬಲ್ ಚಾನಲ್ USA ನೆಟ್‌ವರ್ಕ್ ಅಥವಾ CW ಗಳಿಗಿಂತ ಹೆಚ್ಚು ಪ್ರಮುಖವಾದ ರಾಷ್ಟ್ರೀಯ ಜಾಲದಲ್ಲಿ ಪ್ರಚಾರ ಮಾಡಲು ಅವಕಾಶ ಸಿಕ್ಕಿತು. NBCಯಲ್ಲಿ WWE ಯ ವಿಶೇಷ ಸರಣಿಗಳನ್ನು SNME ಕೆಲವು ಸಲ ಪ್ರಸಾರಮಾಡುತ್ತದೆ.

ECW ಮರಳುವಿಕೆ, HDಯ ಪರಿಚಯ[ಬದಲಾಯಿಸಿ]

ಚಿತ್ರ:WWEHD logo.jpg
ಹಾಲಿಯ WWE HD ಲೊಗೊ

ಮೇ 26,2006ಗೆ WWE ಯು ಎಕ್ಸಟ್ರೀಮ್ ಚಾಂಪಿಯನ್‌ಶಿಪ್ ವ್ರೆಸ್ಲಿಂಗ್‌ ನ ಪುನಃಸ್ಥಾಪನೆಯನ್ನು ವ್ವೆ ಬ್ರಾಂಡ್ ಎಂದು ಘೋಷಿಸಿತು. ಹೊಸ ECW ಕಾರ್ಯಕ್ರಮ ಅಂತರರಾಷ್ಟ್ರೀಯವಾಗಿ ಪ್ರತಿ ಮಂಗಳವಾರ ರಾತ್ರಿ ಅಮೇರಿಕಾ ಸಂಯುಕ್ತ ಸಂಸ್ಥಾನದ Syfyಯಲ್ಲಿ ಪ್ರಸಾರವಾಗುತ್ತದೆ.[೧೭] ಸೆಪ್ಟೆಂಬರ್ 26,2007ರಲ್ಲಿ WWEಯು ಅಂತರರಾಷ್ಟ್ರೀಯ ಕಾರ್ಯಚರಣೆಯನ್ನು ವಿಸ್ತರಿಸಲಿದೆ ಎಂದು ಘೋಷಿಸಿತು. ಹಾಲಿ ಲಂಡನ್ ಮತ್ತು ಟೊರಾಂಟೋದಲ್ಲಿನ ಅಂತರರಾಷ್ಟ್ರೀಯ ಕಛೇರಿಗಳ ಜೊತೆಗೆ ಸಿಡ್ನಿಯಲ್ಲಿ ಕೂಡ ಒಂದು ಹೊಸ ಕಛೇರಿಯನ್ನು ಸ್ಥಾಪಿಸಲಾಗುವುದು.[೧೮] ಜನವರಿ 21,2008ರಂದು WWE ಹೈ-ಡೆಫಿನಿಷನ್ (HD)ಗೆ ಬದಲಾಯಿತು. ಈ ನಂತರ ಎಲ್ಲಾ TV ಪ್ರದರ್ಶನಗಳು ಮತ್ತು ಶುಲ್ಕವಿಧಿತ ಪ್ರದರ್ಶನಗಳು HDಯಲ್ಲಿ ಪ್ರಸಾರವಾಗತೊಡಗಿದವು. ಇದರ ಜೊತೆಗೆ, WWE ಒಂದು ಹೊಸ ಸ್ಟೇಟ್ ಆಫ್ ಆರ್ಟ್ ಶ್ರೇಣಿಯನ್ನು ಪರಿಚಯಿಸಿತು. ಇದನ್ನು ಮೂರೂ ಬ್ರಾಂಡ್‌ಗಳಿಗೆ ಬಳಸುತ್ತಾರೆ.[೧೯]

WWE ಯೂನಿವರ್ಸ್[ಬದಲಾಯಿಸಿ]

ನವೆಂಬರ್ 19,2008ರಲ್ಲಿ WWE,"WWE ಯೂನಿವರ್ಸ್" ಎಂಬ ತನ್ನ ಆನ್‌ಲೈನ್ ಸಾಮಾಜಿಕ ಸಂಪರ್ಕ ಜಾಲವನ್ನು ಸ್ಥಾಪಿಸಿತು. ಏಪ್ರಿಲ್ ತಿಂಗಳ ಆರಂಭದಲ್ಲಿ ಇದು WWE ಫಾನ್ ನೇಶನ್ ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿತು. ಮೈಸ್ಪೇಸ್‌ನ ಹಾಗೆ ಇದು ಕೂಡ ಬ್ಲಾಗ್‌ಗಳು,ಫೋರಮ್‌ಗಳು ಮತ್ತು ಇನ್ನಿತರ ವೈಶಿಷ್ಟ್ಯಗಳನ್ನು WWE ಅಭಿಮಾನಿಗಳಿಗೆ ನೀಡುತ್ತದೆ.[೨೦] ಜನವರಿ 9,2009ರಂದು WWE, $20 ಮಿಲಿಯನ್ ವೆಚ್ಚವನ್ನು ಉಳಿಸಲು ತನ್ನ ಒಟ್ಟು ಸಿಬ್ಬಂದಿಯ ಶೇಖಡಾ 10% ಸಿಬ್ಬಂದಿಯನ್ನು ತೆಗೆಯಲಾಗುವುದು ಎಂದು ಘೋಷಿಸಿತು.[೨೧]

ಸ್ವಾಸ್ಥ್ಯ ಕಾರ್ಯಕ್ರಮ[ಬದಲಾಯಿಸಿ]

ಪ್ರತಿಭೆ ಸ್ವಾಸ್ಥ್ಯ ಕಾರ್ಯಕ್ರಮ, ವಿಶಿಷ್ಟವಾಗಿ ವರ್ಲ್ಡ್ ವ್ರೆಸ್ಲಿಂಗ್ ಎನ್‍ಟರಟೇನ್‌ಮೆಂಟ್‌ಗಾಗಿನ ಒಂದು ವ್ಯಾಪ್ತವಾದ ಔಷಧ,ಮದ್ಯ ಮತ್ತು ಹೃದಯಕ್ಕೆ ಸಂಬಂಧಿಸಿದ ಪರೀಕ್ಷಾ ಕಾರ್ಯಕ್ರಮವಾಗಿದೆ. ಇದನ್ನು ಮೂವತ್ತೆಂಟು ವರ್ಷದ ಎಡ್ಡಿ ಗುರೇರೊ ಅವರ ಆಕಸ್ಮಿಕ ಸಾವಿನ ಕೆಲ ಸಮಯದ ನಂತರ ಫೆಬ್ರವರಿ 2006ರಲ್ಲಿ ಶುರು ಮಾಡಿದರು. ಎಡ್ಡಿ ಗುರೇರೊ WWEನ ಒಬ್ಬ ಅತ್ಯುತ್ತಮ ಪ್ರತಿಭೆ ಆಗಿದ್ದರು.[೨೨] ಈ ಕಾರ್ಯನೀತಿಯು ಚೈತನ್ಯ ನೀಡುವ ಔಷಧಿಗಳ ಬಳಕೆಯನ್ನು ಮತ್ತು ಅನಾಬೊಲಿಕ್ ಸ್ಟೇರಾಯ್ಡ್ ಒಳಗೊಂಡಂತೆ ವೈದ್ಯರ ಲಿಖಿತ ಔಷಧೀಕರಣದ ಸಲಹೆಯ ದುರ್ಬಳಕೆಯನ್ನು ಪರೀಕ್ಷೆ ಮಾಡುತ್ತದೆ.[೨೨] ಈ ಕಾರ್ಯನೀತಿಯ ಮಾರ್ಗದರ್ಶನದಲ್ಲಿ ಪ್ರತಿಭೆಗಳ ಪೂರ್ವ-ಅಸ್ತಿತ್ವದ ಅಥವಾ ಬೆಳೆಯುತ್ತಿರುವ ಹೃದಯದ ಕಾಯಿಲೆಗಳ ತಪಾಸಣೆಗಳನ್ನು ವಾರ್ಷಿಕವಾಗಿ ಮಾಡುತ್ತಾರೆ. ಉದ್ದೀಪನ ಔಷಧ ತಪಾಸಣೆಯನ್ನು ಏಜಿಸ್ ಸೈನ್ಸಸ್ ಕಾರ್ಪೊರೇಷನ್ ನಿರ್ವಹಿಸುತ್ತದೆ. ಹೃದಯದ ಪರೀಕ್ಷೆಗಳನ್ನು ನ್ಯೂಯಾರ್ಕ್ ಕಾರ್ಡಿಯಾಲಜಿ ಅಸೋಶಿಯೇಟ್ಸ್ P.C.ಯವರು ನಿರ್ವಹಿಸುತ್ತಾರೆ.[೨೨]

ಈ ಕಾರ್ಯನೀತಿಯನ್ನು ಅನುಸರಣೆಗೆ ತಂದ ಮೇಲೂ ಕೆಲವು WWE ಪಟುಗಳು ಸ್ಟೇರಾಯ್ಡ್‌ಗಳನ್ನು ಖರೀದಿಸಿದ ಕುರಿತು ಹಲವು ಅಕ್ರಮ ಔಷಧಿಗಳ ದಾಳಿಯಲ್ಲಿ ಕಂಡುಬಂದುದರಿಂದಾಗಿ, ಈ ಕಾರ್ಯನೀತಿಯನ್ನು WWE ಹಾಗು ಅದರ ನೌಕರರು ಗಂಭೀರವಾಗಿ ಬೆಂಬಲಿಸಬೇಕಾಯಿತು. 11 ಜನ ಕುಸ್ತಿಪಟುಗಳ ಹೆಸರು ಅನಾಬೊಲಿಕ್ ಸ್ಟೇರಾಯ್ಡಿನ ಖರೀದಿಯ ಸಂಬಂಧವಾಗಿ ಪ್ರಕಟಗೊಂಡಾಗ, WWE ಬಹಿರಂಗವಾಗಿ ಅವರನ್ನು ಅಮಾನತ್ತು ಮಾಡಿದರು.[೨೩][೨೪]

ಪ್ರಾಯಶಃ ಅನಾಬಾಲಿಕ್ ಸ್ಟೇರಾಯಿಡ್‌ ದುರ್ಬಳಕೆಗೆ ಸಂಬಂಧಿಸಿ, WWEನ ಕ್ರಿಸ್ ಬೆನೊಯಿಟ್‌ ಎಂಬ ಕುಸ್ತಿಪಟುವಿನ ಸಾವಿನ ನಂತರ, ಯುನಿಟೆಡ್ ಸ್ಟೇಟ್ಸ್ ಹೌಸ್ ಕಮಿಟಿ ಆನ್ ಓವರ್‌ಸೈಟ್ ಅಂಡ್ ಗವರ್ನಮೆಂಟ್ ರೀಫಾರ್ಮ್ ನಿಂದ ಪ್ರಸ್ತುತ WWE ತನಿಖೆ ನಡೆಸಲ್ಪಡುತ್ತಿದೆ.[೨೫]

ಆಗಸ್ಟ್ 2007ರಲ್ಲಿ WWE ತನ್ನ ಹತ್ತು ಕುಸ್ತಿಪಟುಗಳನ್ನು ಸಮರ್ಪಕ ಕಾರ್ಯನೀತಿ ಉಲ್ಲಂಘಿಸಿದ ಕಾರಣ ಅಮಾನತು ಮಾಡಿತು. ಇವರುಗಳು ಫ್ಲೊರಿಡಾದ ಓರ್ಲ್ಯಾಂಡೊ ಸಿಗ್ನೇಚರ್ ಔಷಧಿ ಅಂಗಡಿಯ ಗಿರಾಕಿಗಳಾಗಿದ್ದರು ಎಂದು ವರದಿ ಬಂದಿತ್ತು. WWEಯ ಅಟಾರ್ನಿ ಜೆರ್ರಿ ಮ್ಯಾಕ್‌ಡೆವಿಟ್ ಅವರ ಒಂದು ಹೇಳಿಕೆ ಪ್ರಕಾರ, ನಂತರ ಒಬ್ಬ ಹನ್ನೊಂದನೆಯ ಕುಸ್ತಿಪಟುವನ್ನು ಸಹಾ ಅಮಾನತ್ತು ಮಾಡಲಾಯಿತು[೨೬].

ಇನ್ನೊಂದೆಡೆ, ಸ್ವಾಸ್ಥ್ಯ ಕಾರ್ಯನೀತಿಯ ಕಾರಣ ವೈದ್ಯರು ಒಬ್ಬ ಕುಸ್ತಿಪಟುವಿನ ಹೃದಯ ರೋಗವನ್ನು ಕಂಡುಹಿಡಿಯಲು ಸಾಧ್ಯವಾಯಿತು. ಇಲ್ಲದಿದ್ದರೆ ಇದು ಕೊನೆಯವರೆಗೂ ಯಾರ ಗಮನಕ್ಕೆ ಬರುತ್ತಿರಲಿಲ್ಲ. ಆಗಸ್ಟ್ 2007ರಲ್ಲಿ ಆಗ ಪ್ರಬಲವಾಗಿದ್ದ ಯುನೈಟಡ್ ಸ್ಟೇಟ್ಸ್ ಚಾಂಪಿಯನ್ ಆಲ್ವಿನ್ ಬರ್ಕ್ ಜೂನಿಯರ್ (ಆತನ ಅಖಾಡದಲ್ಲಿನ ಹೆಸರು ಮಾಂಟೆಲ್ ವೊಂಟಾವಿಯಸ್ ಪೋರ್ಟರ್) ಗೆ ವೋಲ್ಫ್-ಪಾರ್ಕಿನ್‌ಸನ್-ವ್ಹೈಟ್ ಸಿಂಡ್ರೋಮ್ ಎಂಬ ಕಾಯಿಲೆಯಿದೆ ಎಂದು ಗುರುತಿಸಲಾಯಿತು.[೨೭] ಇದನ್ನು ಗಮನಿಸದಿದ್ದಲ್ಲಿ ಇದು ಮಾರಕವಾಗುತ್ತಿತ್ತು. ಈ ರೋಗವನ್ನು MVPರವರ ನಿಯಮಿತ ಸ್ವಾಸ್ಥ್ಯ ಕಾರ್ಯನೀತಿಯ ತಪಾಸಣೆಯನ್ನು ಮಾಡಿದಾಗ ಕಂಡುಹಿಡಿಯಲಾಯಿತು.

ವ್ರೆಸ್ಲಿಂಗ್ ಮೀರಿ ವಿಸ್ತರಿಸುವಿಕೆ[ಬದಲಾಯಿಸಿ]

ಕುಸ್ತಿಪಟುಗಳು ಹಾಗೂ ನಿರ್ವಾಹಕರು ಬಯಸುವ ಅಕ್ಲೈಮ್,THQ ಮತ್ತು ಜಾಕ್ಸ್ ಪೆಸಿಫಿಕ್ ಕಂಪನಿಗಳಿಗೆ ವಿಡಿಯೊ ಗೆಮ್ಸ್ ಹಾಗು ಆಕ್ಷನ್ ಫಿಗರ್ಸ್ ಸೃಷ್ಟಿಸಲು ಅನುಮತಿ ಕೊಡುವುದರ ಜೊತೆಗೆ, WWE ತನ್ನ ಉತ್ಪನ್ನಗಳ ಮಾರಾಟ ಹೆಚ್ಚಿಸಲು ಬೇರೆ ಆಸಕ್ತ ಕ್ಷೇತ್ರಗಳತ್ತ ಕೂಡ ತಿರುಗಿತು.

 • WWE ಸ್ಟೂಡಿಯೋಗಳು: ಚಲನಚಿತ್ರಗಳ ವೈಶಿಷ್ಟ್ಯಗಳನ್ನು ಸೃಷ್ಟಿಸಲು ಹಾಗು ವೃದ್ಧಿಸಲು 2002ರಲ್ಲಿ WWEಯ ಶಾಖೆಯೊಂದನ್ನು ಸೃಷ್ಟಿಸಲಾಯಿತು. ಪ್ರಾರಂಭದಲ್ಲಿ WWE ಫಿಲ್ಮ್ಸ್ ಎಂದು ಪ್ರಚಲಿತವಾಗಿತ್ತು.
 • WWE ನಯಾಗಾರಾ ಫಾಲ್ಸ್: ಇದು ಒಂಟಾರಿಯೊದಲ್ಲಿರುವ ನಯಾಗಾರಾ ಜಲಪಾತದ ಸ್ಥಳದಲ್ಲಿರುವ ಒಂದು ಬಿಡಿ ಮಾರಾಟ ಮಾಡುವ ಹಾಗೂ ಮನೋರಂಜನೆಯ ನೆಲೆಗಟ್ಟಾಗಿದ್ದು, WWE ಇದರ ಮಾಲಿಕತ್ವ ಹೊಂದಿದೆ.
 • ಆರಂಭದಲ್ಲಿ WWF ನ್ಯೂಯಾರ್ಕ್ ಎಂದು ಪ್ರಚಲಿತವಿದ್ದ ದಿ ವರ್ಲ್ಡ್: ನ್ಯೂಯಾರ್ಕ್ ನಗರದ ಒಂದು ಉಪಹಾರ ಗೃಹ,ರಾತ್ರಿ ಕ್ಲಬ್ ಮತ್ತು ಸ್ಮರಣಾರ್ಹ ವಸ್ತುಗಳ ಅಂಗಡಿ.
 • WWE ಮ್ಯೂಸಿಕ್ ಗ್ರೂಪ್: WWE ಕುಸ್ತಿಪಟುಗಳ ಪ್ರವೇಶ ನಿರೂಪಣಾ ವಿಷಯದ ವಿಡಿಯೋ ಸಂಗ್ರಹ ಸಂಕಲನವನ್ನು ಮಾಡುವುದರಲ್ಲಿ ವಿಶೇಷತೆ ಪಡೆದ ಒಂದು ಶಾಖೆ. ಕುಸ್ತಿಪಟುಗಳು ಸ್ವತಃ ವಾಸ್ತವಿಕವಾಗಿ ನಿರ್ವಹಿಸಿದ ಬಿರುದುಗಳನ್ನು ಕೂಡ ಬಿಡುಗಡೆ ಮಾಡುತ್ತದೆ.
 • WWE ಹೊಮ್ ವಿಡಿಯೋ: WWE ಶುಲ್ಕವಿಧಿತ ಪ್ರದರ್ಶನಗಳ VHS ಸಂಕಲನ,DVD ಹಾಗು ಬ್ಲು-ರೇ ಡಿಸ್ಕ್ ಪ್ರತಿಗಳನ್ನು, WWE ಕುಸ್ತಿಪಟುಗಳ ಕುಸ್ತಿಗಳ ಸಂಕಲನಗಳು ಮತ್ತು WWE ನಿರ್ವಾಹಕರ ಜೀವನ ಚರಿತ್ರೆಯನ್ನು ವಿತರಿಸುವ ಕಾರ್ಯದಲ್ಲಿ ವಿಶೇಷತೆ ಪಡೆದ ಒಂದು ಶಾಖೆ.
 • WWE ಪುಸ್ತಕಗಳು: WWEಯ ಗಣ್ಯವ್ಯಕ್ತಿಗಳ ಆತ್ಮಚರಿತ್ರೆ ಮತ್ತು ದಂತ-ಕಥೆ, WWEನ ದೃಶ್ಯದ ಹಿಂದಿನ ನೋಟಗಳ ನಿರ್ದೇಶನ,ದೃಷ್ಟಾಂತವಿರುವ ಪುಸ್ತಕಗಳು,ಕಿರಿಯ ಯುವಕರ ಪುಸ್ತಕಗಳು ಹಾಗೂ ಇತರ ಸಾರ್ವತ್ರಿಕ ಘೋಷಣೆಗಳ ಪುಸ್ತಕಗಳನ್ನು ಪ್ರಕಟಿಸುವಲ್ಲಿ ಸಹಾಯ ಮಾಡುವ WWEಯ ಒಂದು ಶಾಖೆ.
 • WWE ಕಿಡ್ಸ್: ಮಕ್ಕಳ ದೃಷ್ಟಿಯ ವ್ರೆಸ್ಲಿಂಗ್ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಒಂದು ವೆಬ್‌ಸೈಟ್ ಮತ್ತು ಹಾಸ್ಯಪತ್ರಿಕೆಯ ವ್ಯವಸ್ಥೆಯನ್ನು ತಯಾರಿಸಿದ್ದಾರೆ. ಹಾಸ್ಯಪತ್ರಿಕೆಗಳು ಎರಡು ತಿಂಗಳಿಗೆ ಒಮ್ಮೆ ಪ್ರಕಟಗೊಳ್ಳುತ್ತಿದ್ದು, ಇದನ್ನು ಏಪ್ರಿಲ್ 15,2008ರಂದು ಆರಂಭಿಸಲಾಯಿತು.

ಮುಖ್ಯ ಅಂಕಿ ಅಂಶಗಳು[ಬದಲಾಯಿಸಿ]

ಕಾರ್ಯನಿರ್ವಾಹಕ ಅಧಿಕಾರಿಗಳು[ಬದಲಾಯಿಸಿ]

ವ್ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೇನ್‌ಮೆಂಟ್‌ನ ರಾಜಧಾನಿ,ಸ್ಟಾಂಫೋರ್ಡ್,ಕನೆಕ್ಟಿಕಟ್
 • ವಿನ್ಸ್ ಮ್ಯಾಕ್‌ಮೋಹನ್ವಿನ್ಸೆಂಟ್ ಕೆ. ಮ್ಯಾಕ್‌ಮೋಹನ್ [೨೮](ಚೇರ್ಮನ್ ಮತ್ತು CEO)
 • ಮೈಕಲ್ ಸೈಲೆಕ್ (ಚೀಫ್ ಆಪರೇಟಿಂಗ್ ಆಫೀಸರ್)[೨೯]
 • ಶೇನ್ ಬಿ. ಮ್ಯಾಕ್‌ಮೋಹನ್(ಎಕ್ಸೆಕ್ಯುಟಿವ್ ವೈಸ್ ಪ್ರೆಸಿಡೆಂಟ್, ಗ್ಲೋಬಲ್ ಮೀಡಿಯಾ)[೩೦]
 • ಕೆವಿನ್ ಡನ್ (ಕಾರ್ಯನಿರ್ವಾಹಕ ಉಪಾಧ್ಯಕ್ಷರು,ಚಲನಚಿತ್ರ ತಯಾರಿಕೆ)[೩೧]
 • ಫ್ರಾಂಕ್ ಜಿ. ಸರ್ಪ್ (ಮುಖ್ಯ ಹಣಕಾಸು ಅಧಿಕಾರಿ)[೩೨]
 • ಡೊನ್ನಾ ಗೋಲ್ಡ್‌ಸ್ಮಿತ್ (ಕಾರ್ಯನಿರ್ವಾಹಕ ಉಪಾಧ್ಯಕ್ಷರು,ಬಳಕೆದಾರ ಉತ್ಪನ್ನಗಳು)[೩೩]
 • ಸ್ಟೆಫಾನಿ ಮ್ಯಾಕ್‌ಮೋಹನ್-ಲೆವೆಸ್ಕ್(ಕಾರ್ಯನಿರ್ವಾಹಕ ಉಪಾಧ್ಯಕ್ಷರು,ಸೃಜನಶೀಲ ವಿಕಾಸ ಮತ್ತು ಕಾರ್ಯಾಚರಣೆ)[೩೪]
 • ಎಡ್ವರ್ಡ್ ಎಲ್. ಕಾಫ್‌ಮನ್ (ಕಾರ್ಯನಿರ್ವಾಹಕ ಉಪಾಧ್ಯಕ್ಷರು ಮತ್ತು ಜೆನರಲ್ ಕೌನ್ಸಿಲ್)[೩೫]
 • ಜಾನ್ ಲಾರನೆಟಿಸ್(ಹಿರಿಯ ಉಪಾಧ್ಯಕ್ಷರು,ಪ್ರತಿಭಾ ಸಂಪರ್ಕ)[೩೬]
 • ಮೈಕಲ್ ಲೇಕ್ (ಅಧ್ಯಕ್ಷರು,WWE ಫಿಲ್ಮ್ಸ್)[೩೭]
 • ಜಾನ್ ಪಿ.ಸೆಬೂರ್ ಹಿರಿಯ ಉಪಾಧ್ಯಕ್ಷರು,ವಿಶೇಷ ಕಾರ್ಯಕ್ರಮಗಳು. [೩೮]

ನಿರ್ದೇಶಕರ ಸಮಿತಿ[ಬದಲಾಯಿಸಿ]

ಆರಂಭದಲ್ಲಿ ಸ್ಟೆಟ್ ಅಫ್ ಕನೆಕ್ಟಿಕಟ್‌ನ ಗೌವರ್ನರ್ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದ ಸೆನೆಟರ್ ಆಗಿದ್ದರು)[೩೯]

 • ಡೇವಿಡ್ ಕೆನಿನ್ (ಕಾರ್ಯಕ್ರಮ ಕಾರ್ಯನಿರ್ವಾಹಕ ಉಪಾಧ್ಯಕ್ಷರು - ಹಾಲ್‌ಮಾರ್ಕ್ ಚಾನೆಲ್)[೩೯]
 • ಜೊಸೆಫ್ ಪರಕಿನ್ಸ್ (ಅಧ್ಯಕ್ಷರು - Communications Consultants,Inc.)[೩೯]
 • ಮೈಕಲ್ ಬಿ.ಸೊಲೊಮನ್ (ಮ್ಯಾನೆಜಿಂಗ್ ಪ್ರಿನ್ಸಿಪಲ್ - Gladwyne Partners,LLC)[೩೯]
 • ರಾಬರ್ಟ್ ಏ. ಬೌಮ್ಯಾನ್ (ಮುಖ್ಯ ಕಾರ್ಯನಿರ್ವಹಣಾಧಿಕಾರಿ - ಮೇಜರ್ ಲೀಗ್ ಬೇಸ್‌ಬಾಲ್ ಅಡ್ವಾನ್ಸ್‌ಡ್ ಮೀಡಿಯಾ)[೩೯]

ಚಾಂಪಿಯನ್‌ಗಳು[ಬದಲಾಯಿಸಿ]

ಹಾಲಿ ಚಾಂಪಿಯನ್‌ಶಿಪ್ ಗೆದ್ದ ದಿನಾಂಕ ಪಂದ್ಯ ಹಿಂದಿನ ಚಾಂಪಿಯನ್ಸ್
ರಾ
WWE ಚಾಂಪಿಯನ್‌ಶಿಪ್ ಜಾನ್ ಸೇನಾ ಸೆಪ್ಟೆಂಬರ್ 13, 2009 ಬ್ರೇಕಿಂಗ್ ಪಾಯಿಂಟ್ ರೇಂಡಿ ಓರ್ಟನ್
WWE ಯುನೈಟೆಡ್ ಸ್ಟೇಟ್ಸ್ ಚಾಂಪಿಯನ್‌ಶಿಪ್ ಕೊಫಿ ಕಿಂಗಸ್ಟನ್ ಜೂನ್ 1, 2009 ರಾ ಮೊಂಟೆಲ್ ವೊಂಟಾವಿಯಸ್ ಪೋರ್ಟರ್
WWE ದಿವಸ್ ಚಾಂಪಿಯನ್‌ಶಿಪ್ ಮೈಕಿ ಜೆಮ್ಸ್ ಜುಲೈ 26, 2009 ನೈಟ್ ಆಫ್ ಚಾಂಪಿಯನ್‌ಶಿಪ್(2009) ಮೆರೈಸ್
ECW
ECW ಚಾಂಪಿಯನ್‌ಶಿಪ್ ಕ್ರಿಸ್ಚಿಯನ್ ಜುಲೈ 26, 2009 ನೈಟ್ ಚಾಂಪಿಯನ್‌ಶಿಪ್ (2009) ಟೊಮಿ ಡ್ರೀಮರ್
ಸ್ಮ್ಯಾಕ್‌ಡೌನ್
World ಹೆವಿ ವೈಟ್ ಚಾಂಪಿಯನ್‌ಶಿಪ್ CM ಪನ್ಕ್ ಆಗಸ್ಟ್ 23, 2009 ಸಮ್ಮರ್ ಸ್ಲ್ಯಾಮ್ (2009) ಜೆಫ್ ಹಾರ್ಡಿ
WWE Intercontinental Championship ಜಾನ್ ಮೊರಿಸನ್ ಸೆಪಟೆಂಬರ್ 1, 2009 ಫ್ರೈಡೇ ನೈಟ್ ಸ್ಮ್ಯಾಕ್‌ಡೌನ್ ರೆ ಮಿಸ್ಟೀರಿಯೊ
WWE Women's Championship ಮೈಕಲ್ ಮ್ಯಾಕ್‌ಕೂಲ್ ಜೂನ್ 28, 2009 ದಿ ಬಾಶ್ (2009) ಮೆಲಿನಾ
ಯುನಿಫೈಡ
WWE Tag Team Championship*

ಕ್ರಿಶ್ ಜೆರಿಖೊಕ್ರಿಸ್ ಜೆರಿಕೊ ಮತ್ತು ಪೌಲ್ ವೈಟ್ದಿ ಬಿಗ್ ಶೋ

ಜೂನ್ 28, 2009 ದಿ ಬಾಶ್ (2009) ದಿ ಕೊಲೊನ್ಸ್
(Carlito and Primo)
World Tag Team Championship*

' *ಈ ಬಿರುದುಗಳನ್ನು ಚಾಂಪಿಯನ್‌ಶಿಪ್ ಏಕೀಕರಣಒಗ್ಗೂಡಿಸಿದ್ದಾರೆ; ಇವುಗಳ ಪ್ರವೇಶಾಧಿಕಾರ ಮೂರೂ ಬ್ರಾಂಡ್‌ಗಳಿಗೆ[೪೦] ಇದೆ.

ಇತರ ಸಾಧನೆಗಳು[ಬದಲಾಯಿಸಿ]

ಇತ್ತೀಚಿನ ವಿಜೇತರು ಗೆದ್ದ ದಿನಾಂಕ
ರಾಯಲ್ ರಂಬಲ್ ರೇಂಡಿ ಓರ್ಟನ್ ಜನವರಿ 25, 2009
ಮನಿ ಇನ್ ದಿ ಬ್ಯಾಂಕ್ CM ಪನ್ಕ್ ಏಪ್ರಿಲ್ 5, 2009
ಕಿಂಗ್ ಆಪ್ ದಿ ರಿಂಗ್ ವಿಲಿಯಮ್ ರೀಗಲ್ ಏಪ್ರಿಲ್ 21, 2008

ವೃದ್ಧಿಸುತ್ತಿರುವ ಕ್ಷೇತ್ರ ಚಾಂಪಿಯನ್ಸ್[ಬದಲಾಯಿಸಿ]

ಹಾಲಿ ಚಾಂಪಿಯನ್ಸ್ ಗೆದ್ದ ದಿನಾಂಕ ಹಿಂದಿನ ಚಾಂಪಿಯನ್ಸ್
ಫ್ಲೋರಿಡಾ ಚಾಂಪಿಯನಶಿಪ್ ವ್ರೆಸ್ಲಿಂಗ್
FCW ಪ್ಲಾರಿಡಾ ಹೆವಿವೈಟ್ ಚಾಂಪಿಯನ್‌ಶಿಪ್ ಹೀತ್ ಸ್ಲಾಟರ್ ಆಗಸ್ಟ್ 13, 2009 ಟೈಲರ್ ರೆಕ್ಸ್
FCW ಫ್ಲಾರಿಡಾ ಟ್ಯಾಗ್ ಟೀಮ್ ಟೇಲರ್ ರೊಟಂಡಾಬೊ ಮತ್ತು ಡ್ಯುಕ್ ರೊಟನ್‌ಡೋವಿಂಧಾಮ್ ರೊಟಂಡಾ ಜುಲೈ 23, 2009

ಪೌಲ್ ಲಾಯ್ಡ್ಜಸಟಿನ್ ಏಂಜೆಲ್ ಮತ್ತು ಕ್ರಿಸ್ ಲೋಗನ್

ಅಸ್ತಿತ್ವದಲ್ಲಿಲ್ಲದ ಚಾಂಪಿಯನ್‌ಶಿಪ್ಸ್[ಬದಲಾಯಿಸಿ]

50 ವರ್ಷದ ಇತಿಹಾಸದಲ್ಲಿ, WWE ಇಪ್ಪತ್ತಕ್ಕೂ ಹೇಚ್ಚು ವಿಭಿನ್ನ ಚಾಂಪಿಯನ್‌ಶಿಪ್ಚಾಂಪಿಯನ್‌ಶಿಪ್‌ಗಳ ಕಾರ್ಯಚರಣೆ ನಡೆಸಿದೆ. ಇದರ ಮೊದಲನೆಯ ಟೈಟಲನ್ನು 1958ರಲ್ಲಿ ಸೃಷ್ಟಿಸಲಾಗಿತ್ತು. WWWF ಯುನೈಟಡ್ ಸ್ಟೆಟ್ಸ್ ಟ್ಯಾಗ್ ಟೀಮ್ ಚಾಂಪಿಯನ್‌ಶಿಪ್; ಇದು 1967ರಲ್ಲಿ ನಿವೃತ್ತಿ ಹೊಂದಿತು. ಇತಿಹಾಸದ ಉದ್ದಕ್ಕೂ, WWE ಇತರ ಅಂತರರಾಷ್ಟೀಯ ಪ್ರೋತ್ಸಾಹಕರ ಜೊತೆ ಪಾಲುದಾರಿಕೆ ರಚಿಸಿದೆ. ಇದರಿಂದ ಈ ಪ್ರೋತ್ಸಾಹಕರಿಗೆ ಹಲವು ಟೈಟಲ್‌ಗಳನ್ನು ಸೃಷ್ಟಿ ಮಾಡಲು ದಾರಿ ಆಯಿತು. ಆದರೆ, ಪಾಲುದಾರಿಕೆ ಕೊನೆಗೊಂಡಾಗ, ಈ ಟೈಟಲ್‌ಗಳನ್ನು ತೆಗೆದುಹಾಕಲಾಯಿತು ಅಥವಾ ಇವುಗಳನ್ನು WWE ಯುನೈಟಡ್ ಸ್ಟೆಟ್ಸ್‌ನ ಅಡಿಯಲ್ಲಿ ಬಳಸಿಕೊಳ್ಳಲಾಯಿತು. ಎಲ್ಲಾ ಸೇರಿ 17 ಚಾಂಪಿಯನ್‌ಶಿಪ್‌ಗಳನ್ನು ಈ ಕಂಪನಿ ತೆಗೆದುಹಾಕಿದೆ. ಇತ್ತಿಚೆಗೆ ಮಾರ್ಚ್ 2008ರಲ್ಲಿ WWE ಕ್ರೂಸರ್‌ವೇಟ್ ಚಾಂಪಿಯನ್‌ಶಿಪ್‌ ನ್ನು ತೆಗೆದುಹಾಕಿತು.

ಆಕರಗಳು[ಬದಲಾಯಿಸಿ]

 1. ೧.೦ ೧.೧ ೧.೨ ೧.೩ ೧.೪ "WWE Reports 2008 Fourth Quarter and Full Year Results" (PDF). p. 5. Retrieved 2008-02-24.
 2. "WWE 2008 10-K Report" (PDF). WWE. Archived from the original (PDF) on 2009-03-24. Retrieved 2009-04-10.
 3. The Spectacular Legacy of the AWA DVD
 4. Powell, John. "Steamboat — Savage rule WrestleMania 3". SLAM! Wrestling. Archived from the original on 2015-04-16. Retrieved 2007-10-14.
 5. Shields, Brian; Sullivan, Kevin (2009). WWE: History of WrestleMania. p. 53. {{cite book}}: |access-date= requires |url= (help)
 6. Mick Foley (2000). Have a Nice Day: A Tale of Blood and Sweatsocks. HarperCollins. p. 229. ISBN 0061031011.
 7. Mick Foley (2000). Have a Nice Day: A Tale of Blood and Sweatsocks. HarperCollins. p. 648. ISBN 0061031011.
 8. "Specialty Matches". WWE. Archived from the original on 2008-03-19. Retrieved 2008-12-20.
 9. "WWF Enters the Stock Market". 1999-10-19. Retrieved 2007-05-05.
 10. "WWE Entertainment, Inc. announces the formation of the XFL -- a new professional football league". 03. Archived from the original on 2007-04-06. Retrieved 2007-05-05. {{cite web}}: Check date values in: |date= and |year= / |date= mismatch (help); Unknown parameter |month= ignored (help)
 11. "XFL folds after disappointing first season". 2001-05-10. Archived from the original on 2013-10-23. Retrieved 2007-05-05.
 12. "WWE Entertainment, Inc. Acquires WCW from Turner Broadcasting". 23. Archived from the original on 2014-03-13. Retrieved 2007-05-05. {{cite web}}: Check date values in: |date= and |year= / |date= mismatch (help); Unknown parameter |month= ignored (help)
 13. Shields, Brian; Sullivan, Kevin (2009). WWE: History of WrestleMania. p. 58. {{cite book}}: |access-date= requires |url= (help)
 14. "Agreement-WWF-World Wide Fund for Nature and Titan Sports Inc". Retrieved 2006-11-23.
 15. "World Wrestling Federation Entertainment Drops The "F" To Emphasize the "E" for Entertainment". WWE. Archived from the original on 2009-01-19. Retrieved 2006-08-28.
 16. "World Wrestling Federation Entertainment Drops The "F" To Emphasize the "E" for Entertainment". WWE. 2002-05-06. Archived from the original on 2009-01-19. Retrieved 2008-12-20.
 17. "WWE brings ECW to Sci Fi Channel". WWE.com. Retrieved 2006-08-28.
 18. "WWE: Flexing its Muscle". 2007-09-01. Archived from the original on 2014-10-16. Retrieved 2009-11-13.
 19. "WWE Goes HD". WWE. Archived from the original on 2008-01-18. Retrieved 2008-01-25.
 20. "WWE.com launches much anticipated online social network". WWE. Archived from the original on 2008-12-17. Retrieved 2008-12-29.
 21. "ಆರ್ಕೈವ್ ನಕಲು". Archived from the original on 2010-12-05. Retrieved 2009-11-13.
 22. ೨೨.೦ ೨೨.೧ ೨೨.೨ "WWE Talent Wellness Program" (PDF). Corporate WWE Web Site. 2007-02-27. Archived from the original (PDF) on 2014-08-31. Retrieved 2007-10-11.
 23. "Fourteen wrestlers tied to pipeline". Sports Illustrated. 2007-08-30. Archived from the original on 2013-02-27. Retrieved 2007-10-11.
 24. Farhi, Paul (2007-09-01). "Pro Wrestling Suspends 10 Linked to Steroid Ring". Washington Post. Retrieved 2007-10-11.
 25. "Congress wants WWE's info on steroids, doping". Archived from the original on 2007-11-17. Retrieved 2007-07-29.
 26. ""WWE Suspends Yet Another Wrestler"". Headline Planet. 2007-09-01. Archived from the original on 2009-05-16. Retrieved 2009-11-13.
 27. "MVP's Most Valuable Program". WWE. 2007-08-10. Retrieved 2007-12-07.
 28. ೨೮.೦ ೨೮.೧ "WWE Corporate Biography of Vince McMahon". Archived from the original on 2007-12-15. Retrieved 2007-05-20.
 29. "WWE Corporate Biography of Michael Sileck". Archived from the original on 2008-12-20. Retrieved 2007-05-20.
 30. "WWE Corporate Biography of Shane McMahon". Archived from the original on 2007-12-14. Retrieved 2007-05-20.
 31. "WWE Corporate Biography of Kevin Dunn". Archived from the original on 2007-05-18. Retrieved 2007-05-20.
 32. "WWE Corporate Biography of Frank Serpe". Archived from the original on 2009-07-27. Retrieved 2007-05-20.
 33. "WWE Corporate Biography of Donna Goldsmith". Archived from the original on 2014-01-29. Retrieved 2007-05-20.
 34. "WWE Corporate Biography of Stephanie McMahon-Levesque". Archived from the original on 2011-04-29. Retrieved 2007-05-20.
 35. "WWE Corporate Biography of Edward Kaufman". Archived from the original on 2008-12-20. Retrieved 2007-05-20.
 36. "WWE Corporate Biography of John Laurinaitis". Archived from the original on 2010-02-14. Retrieved 2007-05-20.
 37. "WWE Corporate Biography of Michael Lake". Archived from the original on 2009-05-03. Retrieved 2008-01-08.
 38. "Saboor New WWE Ambassador". WWE Corporate. 2008-07-28. Archived from the original on 2014-10-27. Retrieved 2008-12-20.
 39. ೩೯.೦ ೩೯.೧ ೩೯.೨ ೩೯.೩ ೩೯.೪ ೩೯.೫ ೩೯.೬ "Corporate Board of Directors". Archived from the original on 2009-09-24. Retrieved 2007-05-20.
 40. "Superstars of SmackDown". World Wrestling Entertainment. Retrieved 2009-04-06.

ಹೊರಗಿನ ಕೊಂಡಿಗಳು[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.