ದಿ ಅಂಡರ್‌ಟೇಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Undertaker
ಜನನ(೧೯೬೫-೦೩-೨೪)೨೪ ಮಾರ್ಚ್ ೧೯೬೫[೧]
ಎತ್ತರ೬ ಅಡಿ ೧ ಇಂಚು[೨]

ಮಾರ್ಕ್‌ ವಿಲಿಯಂ ಕ್ಯಾಲವೆ ರವರು (ಜನನ ಮಾರ್ಚ್‌ ೨೪, ೧೯೬೫)[೧] ಅಮೇರಿಕಾದ ಓರ್ವ ವೃತ್ತಿಪರ ಕುಸ್ತಿಪಟು ಆಗಿದ್ದು, ತನ್ನ ಅಖಾಡದ ಹೆಸರಾದ ದಿ ಅಂಡರ್‌ಟೇಕರ್‌ ಎಂಬ ನಾಮದಿಂದ ಪ್ರಸಿದ್ಧವಾಗಿದ್ದಾರೆ. ಅವರು ವರ್ಲ್ಡ್‌ ರೆಸ್ಲಿಂಗ್‌/ಕುಸ್ತಿ ಎಂಟರ್‌ಟೇನ್‌ಮೆಂಟ್‌ಗೆ (WWE) ಸಹಿ ಹಾಕಿದ್ದು, ಸದ್ಯಕ್ಕೆ ಸ್ಮ್ಯಾಕ್‌ಡೌನ್‌ ರೆಸ್ಲಿಂಗ್ ವಿಭಾಗದಲ್ಲಿ [ಇದ್ದಾರೆ

ಕ್ಯಾಲವೆ ೧೯೮೪ ರಲ್ಲಿ ನಡೆದ ವರ್ಡ್ ಕ್ಲಾಸ್ ಚಾಂಪಿಯನ್‌ಷಿಪ್‌ ರೆಸ್ಲಿಂಗ್‌‌ನಿಂದ ತನ್ನ ಕುಸ್ತಿಯನ್ನು ವೃತ್ತಿಯಾಗಿ ಆರಂಭಿಸಿದರು. ವರ್ಲ್ಡ್‌ ಚಾಂಪಿಯನ್‌ಷಿಪ್‌ ರೆಸ್ಲಿಂಗ್‌ಗೆ (WCW) ೧೯೮೯ ರಲ್ಲಿ "ಮೀನ್" ಮಾರ್ಕ್ ಕ್ಯಾಲಸ್‌ ಎಂಬ ಹೆಸರಿನಲ್ಲಿ ಸೇರಿದರು. ೧೯೯೦ ರಲ್ಲಿ WCW ಕ್ಯಾಲವೆರವರ ಕರಾರನ್ನು ನವೀಕರಿಸಲಿಲ್ಲವಾದುದರಿಂದ, ಅವರು ಅದೇ ವರ್ಷದ ನವೆಂಬರ್‌ನಲ್ಲಿ ದಿ ಅಂಡರ್‌ಟೇಕರ್‌ ಆಗಿ ವರ್ಲ್ಡ್‌ ರೆಸ್ಲಿಂಗ್‌ ಫೆಡರೇಶನ್‌ಗೆ (ನಂತರ ೨೦೦೨ ರಲ್ಲಿ ವರ್ಲ್ಡ್‌ ರೆಸ್ಲಿಂಗ್‌ ಎಂಟರ್‌ಟೇನ್‌ಮೆಂಟ್ ಎಂದು ಬದಲಾಯಿತು) ಸೇರ್ಪಡೆಯಾದರು. ಆಗಿನಿಂದಲೂ ಅದೇ ಕಂಪನಿಯಲ್ಲಿ ಇರುವುದರಿಂದ, ಪ್ರಚಲಿತ ಕ್ಯಾಲವೆ WWEನ ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಮಂಡೇ ನೈಟ್‌ ರಾ ಕಾರ್ಯಕ್ರಮದ ಪ್ರಪ್ರಥಮ ಭಾಗದಲ್ಲಿ ಕಾಣಿಸಿಕೊಂಡಿದ್ದು, ಈಗಲೂ ಅದೇ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಪೂರ್ಣಾವಧಿಯ ಕುಸ್ತಿಪಟುಗಳಲ್ಲಿ ಒಬ್ಬರಾದ ಷಾನ್ ಮೈಕೆಲ್ಸ್‌ನೊಂದಿಗೆ ಅಂಡರ್‌ಟೇಕರ್‌ ಇದ್ದಾರೆ.

ಅಂಡರ್‌ಟೇಕರ್‌ ಎರಡು ವಿಭಿನ್ನ ತಂತ್ರ/ಚಳಕಗಳನ್ನು ಅನುಸರಿಸಿದ್ದಾರೆ: ದಿ ಡೆಡ್‌ಮ್ಯಾನ್‌ ಹಾಗೂ ದಿ ಅಮೇರಿಕನ್ ಬ್ಯಾಡ್ ಆಸ್. ಅಂಡರ್‌ಟೇಕರ್‌ (ಅಥವಾ ನಿರ್ದಿಷ್ಟವಾಗಿ ಅವರ "ಡೆಡ್‌ಮ್ಯಾನ್‌" ರೂಪ) ಆಡಿದ ವಿಶಿಷ್ಟ ಪಂದ್ಯಗಳು ಎಂದರೆ ಕ್ಯಾಸ್ಕೆಟ್ ಪಂದ್ಯ, ಬರೀಡ್ ಅಲೈವ್) ಪಂದ್ಯ, ಕುಖ್ಯಾತ ಹೆಲ್ ಇನ್ ಸೆಲ್, ಹಾಗೂ ಲಾಸ್ಟ್ ರೈಡ್ ಪಂದ್ಯಗಳು.ಬ್ರದರ್ಸ್ ಆಫ್ ಡಿಸ್ಟ್ರಕ್ಷನ್‌ನಲ್ಲಿ ಅಂಡರ್‌ಟೇಕರ್‌ ಕಥಾಭಾಗದಲ್ಲಿನ ತನ್ನ ಮಲ ಸಹೋದರ ಕೇನ್‌ ಜೊತೆಗೂಡಿ ಪಂದ್ಯ ಆಡಿದರು. ಅಂಡರ್‌ಟೇಕರ್‌ ರೆಸಲ್‌ಮೇನಿಯಾದಲ್ಲಿ ೨೦–೦ ದಾಖಲೆಯೊಂದಿಗೆ ಜಯಗಳಿಸಿದ್ದರು ಹಾಗೂ WWE ಅವರನ್ನು ಏಳು ಬಾರಿ ವಿಶ್ವ ಚಾಂಪಿಯನ್ ಎಂದು ಗುರುತಿಸಿದ್ದು, ಅದರಲ್ಲಿ ನಾಲ್ಕು ಬಾರಿ WWE ಚಾಂಪಿಯನ್‌ಷಿಪ್‌ ಜಯಗಳಿಸಿದರೆ ಮೂರು ಬಾರಿ ವಿಶ್ವ ಹೆವಿವೈಟ್ ಚಾಂಪಿಯನ್‌ಷಿಪ್‌ನಲ್ಲಿ ವಿಜಯಿಯಾಗಿದ್ದರು. ಅವರು ಒಂದು ಬಾರಿ WWF ಹಾರ್ಡ್‌ಕೋರ್ ಚಾಂಪಿಯನ್, ಹಾಗೂ ಆರು ಬಾರಿ WWF ಟ್ಯಾಗ್‌ ಟೀಮ್‌ ಚಾಂಪಿಯನ್‌ಷಿಪ್‌ ಪಟ್ಟವನ್ನು ಮತ್ತು ಒಂದು ಬಾರಿ WCW ಟ್ಯಾಗ್‌ ಟೀಮ್‌ ಚಾಂಪಿಯನ್‌ಷಿಪ್‌ ಪಟ್ಟವನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಅಂಡರ್‌ಟೇಕರ್‌ ೨೦೦೭ ರಲ್ಲಿ ನಡೆದ ರಾಯಲ್ ರಂಬಲ್‌ನಲ್ಲಿ ವಿಜಯ ಗಳಿಸಿದ್ದು, ೩೦ ನೇ ಸ್ಥಾನದಲ್ಲಿದ್ದು ರಂಬಲ್‌ಅನ್ನು ಪಟ್ಟವನ್ನು ಗಿಟ್ಟಿಸಿಕೊಂಡ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಕುಸ್ತಿಪಟುವಾಗಿ ವೃತ್ತಿಪಥ[ಬದಲಾಯಿಸಿ]

ಆರಂಭಿಕ ಹಾದಿ (೧೯೮೪–೧೯೯೦)[ಬದಲಾಯಿಸಿ]

ಕ್ಯಾಲವೆಯವರು, "ಟೆಕ್ಸಾಸ್ ರೆಡ್‌" ಎಂಬ ಅಖಾಡದ ಹೆಸರಿನೊಂದಿಗೆ 1984ರಲ್ಲಿ ನಡೆದ ವರ್ಡ್ ಕ್ಲಾಸ್ ಚಾಂಪಿಯನ್‌ಷಿಪ್‌ ರೆಸ್ಲಿಂಗ್‌ನಲ್ಲಿ ಪ್ರಥಮ ಬಾರಿಗೆ ಪ್ರವೇಶ ಮಾಡಿದರು.[೬] ಅವರು ಬ್ರೂಸೆರ್ ಬ್ರಾಡಿ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲನ್ನಪ್ಪಿದರು.[೬] ೧೯೮೮ ರಲ್ಲಿ, ನಾಲ್ಕು ವರ್ಷಗಳ ಅದರಲ್ಲಿ ಸೇವೆ ಸಲ್ಲಿಸಿದ ನಂತರ, ಅವರು ಅದನ್ನು ತ್ಯಜಿಸಿ ಕಾಂಟಿನೆಂಟಲ್ ರೆಸ್ಲಿಂಗ್‌ ಅಸೋಸಿಯೇಷನ್‌ಗೆ (ಜೆರ್ರಿ ಜಾರ್ರೆಟ್ CWAಯನ್ನು WCCWನೊಂದಿಗೆ ವಿಲೀನಗೊಳಿಸಿದ ನಂತರ ಯುನೈಟೆಡ್ ಸ್ಟೇಟ್ಸ್ ರೆಸ್ಲಿಂಗ್‌ ಅಸೋಸಿಯೇಷನ್ ಎಂದಾಯಿತು) ಸೇರಿದರು, ಹಾಗೂ ಅದರಲ್ಲಿ ಹಲವಾರು ತಂತ್ರ/ಚಳಕಗಳನ್ನು ಅನುಸರಿಸಿದರು. ೧೯೮೯ ನೇ ಇಸವಿಯ ಏಪ್ರಿಲ್ 1ರಂದು, "ದಿ ಮಾಸ್ಟರ್ ಆಫ್ ಪೇಯ್ನ್‌" ಎಂಬ ಅಖಾಡದ ಹೆಸರಿನಲ್ಲಿ ಪ್ರಥಮ ವೃತ್ತಿಪರ ರೆಸ್ಲಿಂಗ್‌ ಪದವಿಯಾದ USWA ಯೂನಿಫೈಡ್ ವರ್ಲ್ಡ್ ಹೆವಿವೈಟ್ ಚಾಂಪಿಯನ್‌ಷಿಪ್‌ಅನ್ನು, ಜೆರ್ರಿ "ದಿ ಕಿಂಗ್‌" ಲಾಲೆರ್‌ರನ್ನು ಸೋಲಿಸುವ ಮೂಲಕ ತಮ್ಮದೇ ಗುರುತನ್ನು ಮೂಡಿಸಿಕೊಂಡರು. ೧೯೮೯ನೇ ಇಸವಿಯ ಅಕ್ಟೋಬರ್‌ 5ರಂದು "ದಿ ಪನಿಷರ್‌" ಎಂಬ ಹೆಸರಿನಲ್ಲಿ, ಎರಿಕ್ ಎಂಬ್ರಿರನ್ನು ಸೋಲುವಂತೆ ಮಾಡಿ, ಕ್ಯಾಲವೆ WCWA ಟೆಕ್ಸಾಸ್ ಹೆವಿವೈಟ್ ಚಾಂಪಿಯನ್‌ಷಿಪ್‌ ಪದವಿಯನ್ನು ತಮ್ಮದಾಗಿಸಿಕೊಂಡರು.[೭]

ಅವರು ಪ್ರಥಮ ಬಾರಿಗೆ ವರ್ಲ್ಡ್‌ ಚಾಂಪಿಯನ್‌ಷಿಪ್‌ ರೆಸ್ಲಿಂಗ್‌ಗೆ ೧೯೮೯ ನೇ ಇಸವಿಯ ಕಡೆಯ ಭಾಗದಲ್ಲಿ ಸೇರ್ಪಡೆಗೊಂಡು ಪ್ರಮುಖ ವಾಹಿನಿಯಲ್ಲಿ ಕಾಣಿಸಿಕೊಂಡರು. ಅದರಲ್ಲಿ "ಮೀನ್" ಮಾರ್ಕ್ ಕ್ಯಾಲಸ್‌ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದು, ಟೆಡ್ಡಿ ಲಾಂಗ್ ನಿರ್ವಾಹಕತ್ವದ "ಸ್ಕೈಸ್ಕ್ರೇಪರ್ಸ್‌" ಟ್ಯಾಗ್‌ ಟೀಮ್‌ನಲ್ಲಿ "ಡೇಂಜರಸ್" ಡಾನ್ ಸ್ಪೈವೆ ಜೊತೆಯಾಗಿ ಪಂದ್ಯಗಳನ್ನು ಆಡಿದರು.[೮] ಸ್ಕೈಸ್ಕ್ರಾಪರ್ಸ್‌ನಲ್ಲಿದ್ದ ಸಮಯದಲ್ಲಿ, ಅವರು ಹಾಗೂ ಸ್ಪೈವಿಯವರು ರೋಡ್‌ ವಾರಿಯರ್ಸ್‌ ಜೊತೆ ವೈಷಮ್ಯ ಸಾಧಿಸಿದರು,[೯] ಆದರೆ ಅದು ಮುಗಿಯುವ ವೇಳೆಗೆ ಸ್ಪೈವಿ ಅಲ್ಲಿಂದ ನಿರ್ಗಮಿಸಿದರು.

ಸಿಂಗಲ್ಸ್‌ ಸ್ಪರ್ಧೆಗಳನ್ನು ಆಡಲು ಆರಂಭಿಸಿದ ಮೇಲೆ, ಕ್ಯಾಲವೆ ಪೌಲ್ E. ಡೇಂಜರಸ್ಲಿಯವರ ಮಾರ್ಗರ್ಶನದ ಸಹಾಯದಿಂದ ಜಾನ್ನಿ ಏಸ್‌ರನ್ನು ಕ್ಯಾಪಿಟಲ್ ಕಾಂಬ್ಯಾಟ್‌ನಲ್ಲಿ ಹಾಗೂ ಬ್ರಿಯಾನ್ ಪಿಲ್‌ಮನ್‌ರನ್ನು ಕ್ಲಾಷ್ ಆಫ್ ದಿ ಚಾಂಪಿಯನ್ಸ್‌ ಪಂದ್ಯಗಳಲ್ಲಿ ಮಣಿಸಿದರು. ೧೯೯೦ ನೇ ಇಸವಿಯ ಜುಲೈನಲ್ಲಿ ನಡೆದ, NWA ಯುನೈಟೆಡ್ ಸ್ಟೇಟ್ಸ್‌ ಹೆವಿವೈಯ್ಟ್ ಚಾಂಪಿಯನ್‌ ಪಟ್ಟಕ್ಕಾಗಿ ನಡೆದ ದಿ ಗ್ರೇಟ್ಅಮೇರಿಕನ್‌ ಬಾಷ್‌ ಎಂಬ ಲೆಕ್ಸ್ ಲ್ಯೂಗರ್‌ ವಿರುದ್ಧದ ಪಂದ್ಯದಲ್ಲಿ ಹೋರಾಡಿದರು, ಆದರೆ ಆತ ಅವರನ್ನು ಅಖಾಡದ ಹಗ್ಗದಲ್ಲಿ ಕಟ್ಟಿಹಾಕಿ ಸೋಲಿಸಿದನು. ಕ್ಯಾಲವೆ ೧೯೯೦ ನೇ ಇಸವಿಯ ಸೆಪ್ಟೆಂಬರ್‌ ೧ ರಲ್ಲಿ ನಡೆದ NWA ವರ್ಲ್ಡ್‌ ಹೆವಿವೈಯ್ಟ್ ಚಾಂಪಿಯನ್ ಸ್ಟಿಂಗ್ ವಿರುದ್ಧದ ನೇರ ಪ್ರಸಾರದ ಕಾರ್ಯಕ್ರಮದ ಕೊನೆಯ ಪಂದ್ಯದಲ್ಲಿ ಸೋತಿದ್ದರಿಂದಾಗಿ WCW ಕರಾರನ್ನು ನವೀಕರಿಸುವುದಿಲ್ಲ ಎಂದು ಘೋಷಿಸಿತು.

ಕ್ಯಾಲವೆ WCWನಲ್ಲಿನ ತಮ್ಮ ನಿಯಮಿತ ಅವಧಿಯಲ್ಲಿ, ನ್ಯೂ ಜಪಾನ್‌ ಪ್ರೋ ರೆಸ್ಲಿಂಗ್‌ನಲ್ಲಿ ಪನಿಷರ್ ಡೈಸ್ ಮೊರ್ಗನ್‌ ಎಂಬ ಹೆಸರಿನಿಂದ ಪಂದ್ಯಗಳನ್ನು ಆಡಿದರು. WCWಯಿಂದ ನಿರ್ಗಮಿಸಿದ ನಂತರ, ಹೊಸ USWAನ ಯೂನಿಫೈಡ್‌ ವರ್ಲ್ಡ್‌ ಹೆವಿವೈಯ್ಟ್ ಚಾಂಪಿಯನ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವರು USWAಗೆ ಮರಳಿದರು; ಪ್ರಥಮ ಸುತ್ತಿನಲ್ಲಿ ಬಿಲ್ ಡುನ್‌ಡೀರನ್ನು ಸೋಲಿಸಿದ ಅವರು, ಆದರೆ ಕ್ವಾಟರ್ ಫೈನಲ್ಸ್‌ನಲ್ಲಿ ಜೆರ್ರಿ ಲಾಲೆರ್‌ ವಿರುದ್ಧ ಸೋತರು. ೧೯೯೦ ನೇ ಇಸವಿಯ ಅಕ್ಟೋಬರ್‌ನಲ್ಲಿ, ವರ್ಲ್ಡ್‌ ರೆಸ್ಲಿಂಗ್‌ ಫೆಡರೇಶನ್‌ನೊಂದಿಗೆ (WWF) ಕರಾರು ಮಾಡಿಕೊಂಡರು.

ವರ್ಲ್ಡ್‌ ರೆಸ್ಲಿಂಗ್‌ ಫೆಡರೇಶನ್‌/ಎಂಟರ್‌‌ಟೇನ್‌ಮೆಂಟ್ (೧೯೯೦-ಈ ವರೆಗೆ)[ಬದಲಾಯಿಸಿ]

ಆರಂಭ ಹಾಗೂ ಹಲವಾರು ವೈಷಮ್ಯಗಳು (೧೯೯೦-೧೯೯೪)[ಬದಲಾಯಿಸಿ]

ಕ್ಯಾಲವೆ WWFನಲ್ಲಿ ಪ್ರಥಮ ಬಾರಿಗೆ 1990ನೇ ಇಸವಿಯ ನವೆಂಬರ್‌ 19ರಂದು WWF ಸೂಪರ್‌ಸ್ಟಾರ್ಸ್‌ ಚಿತ್ರೀಕರಿಸುವ ವೇಳೆ "ಕೇನ್‌ ದಿ ಅಂಡರ್‌ಟೇಕರ್‌" ಆಗಿ ಕಾಣಿಸಿಕೊಂಡರು.[೧೦] ಅಂಡರ್‌ಟೇಕರ್‌ರ ಮೊದಲ ರೂಪವಾದ ಡೆಡ್‌ಮ್ಯಾನ್‌ಗೆ ಹಳೆಯ ಪಾಶ್ಚಿಮಾತ್ಯ ಚಲನಚಿತ್ರಗಳಲ್ಲಿ ಬರುತ್ತಿದ್ದ ಶವಸಂಸ್ಕಾರ ಮಾಡುವವನ ಪಾತ್ರದಿಂದ ಪ್ರೇರಣೆ ಪಡೆದಿದ್ದು, ಅದರಂತೆಯೇ ಉದ್ದವಾದ ಟ್ರೆಂಚ್ ಕೋಟ್, ಬೂದು ಬಣ್ಣದ ಕೈಗವಸುಗಳೊಂದಿಗೆ ಕಪ್ಪು ಟೋಪಿ ಹಾಗೂ ಬೂಟುಗಳನ್ನು ಧರಿಸುತ್ತಿದ್ದರು. ಡೆಡ್‌ಮ್ಯಾನ್‌ ರೂಪದಲ್ಲಿ, ಅವರಿಗೆ ಯೂವುದೇ ರೀತಿಯ "ನೋವುಗಳೂ ತಿಳಿದುಬರುತ್ತಿರಲಿಲ್ಲ", ಇದು ಕ್ಯಾಲವೆಯವರ ಒಂದು ವಿಶಿಷ್ಟ ಸಾಧನೆಯಾಗಿದ್ದು ತನ್ನ ಎದುರಾಳಿಗಳ ಯಾವುದೇ ಆಕ್ರಮಣಗಳಿಗೂ ಜಗ್ಗುತ್ತಿರಲಿಲ್ಲ. ತನ್ನ ಅಪರೂಪದ ಜೊತೆಗಾರನಾದ ಟೆಡ್ ಡಿಬಿಯಾಸ್‌ರ ಮಿಲಿಯನ್ ಡಾಲರ್ ತಂಡದ ಪರವಾಗಿ ಹಿಂಬಾಲಕನಾಗಿ ಸರ್ವೈವರ್ ಸರಣಿಯಲ್ಲಿ ಆಡುವಾಗ ನವೆಂಬರ್‌ ೨೨ ರಂದು ಕ್ಯಾಲವೆ ಅಧಿಕೃತವಾಗಿ ತೆರೆಯ ಮೇಲೆ ಕಾಣಿಸಿಕೊಂಡರು ಹಾಗೂ ಅಲ್ಲಿ ಅವರನ್ನು ಸರಳವಾಗಿ ಅಂಡರ್‌ಟೇಕರ್‌ ಎಂದು ಕರೆಯಲಾಗುತ್ತಿತ್ತು.[೧೧] ಪಂದ್ಯ ಶುರುವಾದ ಕೇವಲ ಒಂದೇ ನಿಮಿಷದಲ್ಲಿ, ಅಂಡರ್‌ಟೇಕರ್‌ ಕೊಕೊ B. ವೆರ್ ಹಾಗೂ ಕಡೆಗಳಿಗೆಯಲ್ಲಿ ಬಂದ ಟೂಂಬ್‌ಸ್ಟೋನ್ ಪೈಲ್‌ಡ್ರೈವರ್‌ರನ್ನು ಪಂದ್ಯದಿಂದ ಹೊರನಡೆಯುವಂತೆ ಮಾಡಿದರು. ಇನ್ನೂ ಎಣಿಕೆ ಶುರುವಾಗುವುದಕ್ಕೆ ಮೊದಲೇ ಅವರು ಡಸ್ಟಿ ರ್ರ್ಹೋಡ್ಸ್‌ರನ್ನು ಹೊಡೆದುಹಾಕಿದರು. ಸರ್ವೈವರ್ ಸರಣಿಯ ಕೆಲವೇ ಸಮಯದ ನಂತರ, "ಕೇನ್" ತನ್ನ ಹೆಸರನ್ನು ಬಿಟ್ಟು, ಕೇವಲ ಅಂಡರ್‌ಟೇಕರ್‌ ಎಂಬ ಹೆಸರಿನಿಂದಲೇ ಕರೆಯಲ್ಪಟ್ಟರು. ಈ ಸಮಯದಲ್ಲಿ ಅಂಡರ್‌ಟೇಕರ್‌ ತನ್ನ ಪ್ರಬಂಧಕರಾದ ಬ್ರದರ್ ಲವ್‌ರ ಬದಲಿಗೆ ಪೌಲ್ ಬೇರರ್‌ರನ್ನು ಆಯ್ಕೆಮಾಡಿಕೊಂಡರು — ಅಪ್ರಮಾಣಿಕ, ದೆವ್ವದ ಪಾತ್ರ, ತನಗೆ ವಿಶಿಷ್ಟ ಶಕ್ತಿಯನ್ನು ನೀಡುತ್ತಿದ್ದ ಭಸ್ಮಕುಂಡವನ್ನು ಹೆಚ್ಚೂ ಕಡಿಮೆ ಯಾವಾಗಲೂ ತನ್ನ ಜೊತೆಯಲ್ಲಿ ಇಟ್ಟುಕೊಂಡು, ಅಂಡರ್‌ಟೇಕರ್‌ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಆರಂಭಿಸಿದರು. ಅಖಾಡದಲ್ಲಿ ತನ್ನ ಎದುರಾಳಿಗಳನ್ನು ಮಣಿಸಿದ ನಂತರ, ಎದುರಾಳಿಯನ್ನು ಒಂದು ವ್ಯಕ್ತಿಯನ್ನು ಹಿಡಿಸಬಲ್ಲ ಚೀಲದಲ್ಲಿ ಹಾಕಿ ಹೆಗಲಿಗೇರಿಸಿಕೊಂಡು ಹೋಗಿ ಪಂದ್ಯದ ನಂತರದ ಆಚರಣೆಯನ್ನು ಆಚರಿಸುತ್ತಿದ್ದರು.[೧೨]

ಅವರು ರೆಸಲ್‌ಮೇನಿಯಾ VIIರಲ್ಲಿ "ಸೂಪರ್‌ಫ್ಲೈ" ಜಿಮ್ಮಿ ಸ್ನೂಕರನ್ನು ತ್ವರಿತವಾಗಿ ಸೋಲಿಸುವ ಮೂಲಕ ರೆಸಲ್‌ಮೇನಿಯಾದಲ್ಲಿ ಪ್ರಾರಂಭೋತ್ಸವ ಆಚರಿಸಿದರು.[೧೩] ಈ ವಿಜಯವು ಆ ಕಾರ್ಯಕ್ರಮದಲ್ಲಿನ ತನ್ನ ಪ್ರಥಮ ಅಪ್ರತಿಮ ಗೆಲುವಿನ ಗೆರೆಯಾಗಿತ್ತು. ಅವರ ಕಟ್ಟಿಕೊಂಡ ಪ್ರಮುಖ ವೈಷಮ್ಯವು ದ ಅಲ್ಟಿಮೇಟ್ ವಾರಿಯರ್ ವಿರುದ್ಧ, ಪೌಲ್ ಬೇರರ್‌ರ ಫ್ಯೂನೆರಲ್ ಪಾರ್ಲರ್ ಸಂದರ್ಶನದ ಭಾಗದಲ್ಲಿ ಅವರು ತನ್ನ ಪ್ರಬಂಧಕರ ಸೆಟ್‌ನಲ್ಲಿ ವಾರಿಯರ್ ಮೇಲೆ ದಾಳಿಮಾಡಿ ಗಾಳಿರಹಿತ ಸಂಪುಟದಲ್ಲಿ ಕೂಡಿಹಾಕಿದಾಗಿನಿಂದ ಆರಂಭವಾಯಿತು. ವಾರಿಯರ್‌ನೊಂದಿಗೆ ವರ್ಷದ ಕಾಲ ಸೆಣಸಾಟದ ನಂತರ, ರ್ಯಾಂಡಿ ಸ್ಯಾವೇಜ್,[೧೧] Sgt. ಸ್ಲಾಟರ್, ಹಾಗೂ ಹಲ್ಕ್‌ ಹೋಗನ್‌ರೊಂದಿಗೆ ಕಾದಾಟ ನಡೆಸಿ, ಸರ್ವೈವರ್ ಸರಣಿಯಲ್ಲಿ ಹೋಗನ್‌ರನ್ನು ಸೋಲಿಸಿ WWF ಚಾಂಪಿಯನ್‌ಷಿಪ್‌ ಪದವಿಯನ್ನು ತನ್ನದಾಗಿಸಿಕೊಂಡರು.[೧೪] ಆದಾದ ಆರು ದಿನಗಳ ನಂತರ ಅಂದರೆ ದಿಸ್‌ ಟ್ಯೂಸ್‌ಡೇ ಇನ್‌‌‌ ಟೆಕ್ಸಾಸ್‌ಗೆಂದು WWF ಪ್ರೆಸಿಡೆಂಟ್ ಜಾಕ್ ಟುನ್ನೀರವರು ಮರುಪಂದ್ಯವನ್ನು ಏರ್ಪಡಿಸಿದರು, ಆ ಪಂದ್ಯದಲ್ಲಿ ಅಂಡರ್‌ಟೇಕರ್‌ರವರು ಹೋಗನ್‌ರಿಂದ ಸೋಲಲ್ಪಟ್ಟು ಆ ಪದವಿಯನ್ನು ಪುನಃ ಅವರಿಗೇ ಮರುಕಳಿಸಬೇಕಾಯಿತು.[೧೪]

೧೯೯೨ ನೇ ಇಸವಿಯ ಫೆಬ್ರವರಿ ತಿಂಗಳಲ್ಲಿ, ದಿ ಅಂಡರ್‌ಟೇಕರ್‌ರ ಸಹಾಯಕ ಜೇಕ್‌ "ದಿ ಸ್ನೇಕ್" ರಾಬರ್ಟ್ಸ್‌ ರ್ರ್ರ್ಯಾಂಡಿ ಸ್ಯಾವೇಜ್‌ರ ಪ್ರಬಂಧಕ/ಪತ್ನಿಯಾದ ಮಿಸ್ ಎಲಿಜಬೆತ್‌ರ ಮೇಲೆ ಉಕ್ಕಿನ ಕುರ್ಚಿಯಿಂದ ಹಲ್ಲೆ ನಡೆಸಲು ಮುಂದಾದಾಗ ಅಂಡರ್‌ಟೇಕರ್‌ ಅದನ್ನು ತಡೆದುದರಿಂದಾಗಿ ಅವರು ಪ್ರಥಮ ಬಾರಿಗೆ ಅತ್ಯುತ್ತಮ ಅಭಿಮಾನಿಯೊಬ್ಬರನ್ನು ಪಡೆದರು. ಅದರ ನಂತರ, ರೆಸಲ್‌ಮೇನಿಯಾ VIIIರಲ್ಲಿ ಅಂಡರ್‌ಟೇಕರ್‌ ರಾಬರ್ಟ್ಸ್‌ರನ್ನು ಸೋಲಿಸಿದರು.[೧೩] ಅವರು 1992 ಹಾಗೂ 1993ನೇ ಇಸವಿಯ ಸಮಯದಲ್ಲಿ ಕಾಮಲಾ ಸೇರಿದಂತೆ ಹಾರ್ವೆ ವಿಪ್ಪಲ್‌ಮೆನ್ ಅಧೀನದಲ್ಲಿದ್ದ ಹಲವು ಕುಸ್ತಿಪಟುಗಳೊಂದಿಗೆ ದ್ವೇಷ ಕಟ್ಟಿಕೊಂಡರು,[೧೪][೧೫] ಹಾಗೂ ಮೊದಲ ಬಾರಿಗೆ ದೂರದರ್ಶನದಲ್ಲಿ ಪ್ರದರ್ಶನಗೊಂಡ WWFನ ಸರ್ವೈವರ್ ಸರಣಿಕಫಿನ್ (ಶವಪೆಟ್ಟಿಗೆ) ಪಂದ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅವರುಗಳನ್ನು ಮುಖಾಮುಖಿ ಎದುರಿಸಿದರು. ರೆಸಲ್‌ಮೇನಿಯಾ IXರಲ್ಲಿ ಜೈಂಟ್ ಗಾನ್ಸೇಲ್ಸ್‌ರನ್ನು ಅನರ್ಹಗೊಳಿಸುವ ಮೂಲಕ ಹಾಗೂ ಸಮ್ಮರ್‌ಸ್ಲ್ಯಾಮ್‌ನ "ರೆಸ್ಟ್ ಇನ್ ಪೀಸ್‌" ಪಂದ್ಯದಲ್ಲಿ ಪಿನ್‌ಫಾಲ್‌ರನ್ನು ಸೋಲಿಸಿದರು.[೧೩][೧೫] ೧೯೯೪ ನೇ ಇಸವಿಯ ಜನವರಿಯಲ್ಲಿ ನಡೆದ ರಾಯಲ್ ರಂಬಲ್‌ ಪಂದ್ಯದಲ್ಲಿ ಅವರು WWF ಚಾಂಪಿಯನ್ ಯೋಕೊಜುನಾರಿಗೆ ತನ್ನೊಂದಿಗೆ ಕ್ಯಾಸ್ಕೆಟ್‌ ಪಂದ್ಯ ಅಡುವಂತೆ ಸವಾಲುಹಾಕಿದರು. ರಾಯಲ್ ರಂಬಲ್ ಪಂದ್ಯದಲ್ಲಿ, ಯೋಕೊಜುನ ಅನೇಕ ಇತರೆ ಖಳನಾಯಕರಂತಹಾ ಕುಸ್ತಿಪಟುಗಳ ಸಹಾಯದಿಂದ ಅಂಡರ್‌ಟೇಕರ್‌ರನ್ನು ಪೆಟ್ಟಿಗೆಯೊಳಗೆ ಮುಚ್ಚಿಹಾಕಿ, ಪಂದ್ಯವನ್ನು ತಮ್ಮದಾಗಿಸಿಕೊಂಡರು. ವಿಡಿಯೋ ಪರದೆಯಲ್ಲಿ, ಪೆಟ್ಟಿಗೆಯೊಳಗಿಂದ ಅಂಡರ್‌ಟೇಕರ್‌ರ "ಆತ್ಮ" ಕಾಣಿಸಿಕೊಂಡು, ತಾನು ಮರಳಿ ಬರಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿತು.[೧೬]

ಪುನರಾಗಮನ; ಮ್ಯಾನ್‌‌ಕೈಂಡ್‌ ಜೊತೆಗೆ ವೈಷಮ್ಯ (೧೯೪–೧೯೯೭)[ಬದಲಾಯಿಸಿ]

ಈ ಚಿತ್ರದಲ್ಲಿ ಕಾಣುತ್ತಿರುವ ಪೌಲ್ ಬೇರರ್‌ ತೆಗೆದುಕೊಂಡು ಹೋಗುತ್ತಿರುವ ಭಸ್ಮಕುಂಡದಲ್ಲಿ ಅಂಡರ್‌ಟೇಕರ್‌ಗೆ ಮೋಸದಿಂದ ಹೊಡೆದಿದ್ದರು.

ರೆಸಲ್‌ಮೇನಿಯಾ Xರ ನಂತರ, ಟೆಡ್ ಡಿಬಿಯಾಸ್ ಅಂಡರ್‌ಟೇಕರ್‌ರನ್ನು WWFಗೆ ಮರಳಿ ಕರೆತಂದರು. ಆದರೆ ಈ ಬಾರಿ ಅಂಡರ್‌ಟೇಕರ್‌ ಪಾತ್ರವನ್ನು ಬ್ರಿಯಾನ್ ಲೀ ನಿರ್ವಹಿಸಿದರು. ಅಂಡರ್‌ಟೇಕರ್‌ರ ತದ್ರೂಪಾದ (ನಕಲಾದ ಇವರನ್ನು ಅಭಿಮಾನಿಗಳು "ಅಂಡರ್‌ಫೇಕರ್ " ಎಂದು ಕರೆದರು) ಇವರು ಸಮ್ಮರ್‌ಸ್ಲ್ಯಾಮ್‌ನಲ್ಲಿ ಅಂಡರ್‌ಟೇಕರ್‌ ಮರಳಿಬರಲು ಕಾರಣರಾದರು. ಅಂಡರ್‌ಟೇಕರ್‌ ಬೂದಿಬಣ್ಣದ ಕೈಗವುಸುಗಳನ್ನು ನೇರಳೆ ಬಣ್ಣಕ್ಕೆ ಬದಲಿಸಿ ತನ್ನ ಮೂಲ ಡೆಡ್‌ಮ್ಯಾನ್‌ ರೂಪದ ಹೊಸ ಆವೃತ್ತಿಯಾಗಿ ಹೊರಬಂದರು. ಅಂಡರ್‌ಟೇಕರ್‌ ತನ್ನ ನಕಲನ್ನು ಮೂರು ಟೂಂಬ್‌ಸ್ಟೋನ್ ಪೈಲ್‌ಡ್ರೈವರ್ಸ್‌ಗಳ ನಂತರ ಸೋಲಿಸಿದರು.[೧೬] ಸರ್ವೈವರ್ ಸರಣಿಯ ಪುನರ್‌ಪಂದ್ಯವಾದ ಮತ್ತೊಂದು ಕ್ಯಾಸ್ಕೆಟ್‌ ಪಂದ್ಯದಲ್ಲಿ, ಅಂಡರ್‌ಟೇಕರ್‌ ಯೋಕೊಜುನಾರನ್ನು ಸೋಲಿಸಿದರು. ೧೯೯೫ ನೇ ಇಸವಿಯ ಬಹಳಷ್ಟು ಸಂದರ್ಭಗಳಲ್ಲಿ, ಅಂಡರ್‌ಟೇಕರ್‌, ಟೆಡ್‌ ಡಿಬಿಯೇಸ್‌ರವರ ಮಿಲಿಯನ್ ಡಾಲರ್‌ ಕಾರ್ಪೊರೇಶನ್‌‌ನ ಹಲವಾರು ಸದಸ್ಯರುಗಳ ಜೊತೆ ವೈರತ್ವ ಕಟ್ಟಿಕೊಂಡಿದ್ದರು. ರೆಸಲ್‌ಮೇನಿಯಾ XIರಲ್ಲಿ, ಅಂಡರ್‌ಟೇಕರ್‌ ಕಿಂಗ್ ಕಾಂಗ್ ಬಂಡಿಯವರ ವಿರುದ್ಧ ಹೋರಾಡುವ ಸಂದರ್ಭದಲ್ಲಿ, ಕಾಮಾ ಭಸ್ಮಕುಂಡವನ್ನು ಅಪಹರಿಸಿ, ಹಾಗೂ ದ್ವೇಷ ಹುಟ್ಟಿಸುವ ರೀತಿಯಲ್ಲಿ ಅದನ್ನು ಕರಗಿಸಿ ದೊಡ್ಡ ಚಿನ್ನದ ಹಾರವನ್ನಾಗಿ ಮಾಡಿಕೊಂಡು ಅಂಡರ್‌ಟೇಕರ್‌ ಮೇಲೆ ಆಕ್ರಮಣ ನಡೆಸಿದ್ದರು.[೧೬] ನಂತರದಲ್ಲಿ ಅಂಡರ್‌ಟೇಕರ್‌, ಸಮ್ಮರ್‌ಸ್ಲ್ಯಾಮ್‌ನ ಕ್ಯಾಸ್ಕೆಟ್‌ ಪಂದ್ಯದಲ್ಲಿ ಕಾಮಾರನ್ನು ಸೋಲಿಸಿದರು.[೧೬] ಹಲವು ವಾರಗಳ ಬಳಿಕ, ಅಂಡರ್‌ಟೇಕರ್‌ ತನ್ನ ಕಣ್ಣುಗುಳಿಯ ಮೂಳೆಯನ್ನು ಘಾಸಿಮಾಡಿಕೊಂಡು, ಶಸ್ತ್ರಚಿಕಿತ್ಸೆಗಾಗಿ ಕೆಲವು ಸಮಯ ದೂರ ಉಳಿದು ಸರ್ವೈವರ್ ಸರಣಿಯಲ್ಲಿ ಮರಳಿ ಕಾಣಿಸಿಕೊಂಡರು.

ಅಂಡರ್‌ಟೇಕರ್‌ ೧೯೯೫ ರಲ್ಲಿ ನಡೆದ ಸರ್ವೈವರ್ ಸರಣಿಯಲ್ಲಿ, ಭೂತದ/ಫ್ಯಾಂಟಮ್‌‌ ರೀತಿಯಲ್ಲಿ, ಬೂದಿಬಣ್ಣದ ಮೇಲ್ಮುಖವಾಡವನ್ನು ಧರಿಸಿಕೊಂಡು ಪುನರಾಗಮಿಸಿದರು.[೧೬] ರಾಯಲ್ ರಂಬಲ್‌ನ WWF ಚಾಂಪಿಯನ್‌ಷಿಪ್‌ನಲ್ಲಿ ಬ್ರೆಟ್ ಹಾರ್ಟ್ ವಿರುದ್ಧ ನಡೆದ ಪಂದ್ಯದಲ್ಲಿ, ಡೀಸೆಲ್‌ ಮಧ್ಯೆ ಬಂದು ತನ್ನ ಸೋಲಿಗೆ ಕಾರಣವಾದಾಗ ಅಂಡರ್‌ಟೇಕರ್‌ ತನ್ನ ಮುಖವಾಡವನ್ನು ತೆಗೆದುಹಾಕಿದರು.[೧೭] ಒಂದು ತಿಂಗಳ ನಂತರ, ಇನ್ ಯುವರ್ ಹೌಸ್‌: ರೇಜ್ ಇನ್ ದಿ ಕೇಜ್ ಪಂದ್ಯದಲ್ಲಿ, ಡೀಸೆಲ್‌ ಹಾರ್ಟ್‌ ವಿರುದ್ಧ ಉಕ್ಕಿನ ಪಂಜರದಲ್ಲಿ ಹೋರಾಡಬೇಕಾದ ಸಂದರ್ಭದಲ್ಲಿ, ಅಂಡರ್‌ಟೇಕರ್‌ ಅಖಾಡದ ಕೆಳಭಾಗದಿಂದ ಎದ್ದು ಬಂದು, ಡೀಸೆಲ್‌ನನ್ನು ಕೆಳಗೆ ಎಳೆದುಹಾಕಿ, ಹಾರ್ಟ್‌ರ ಗೆಲುವಿಗೆ ಕಾರಣರಾದರು.[೧೭] ಈ ವೈಷಮ್ಯವು ಮತ್ತಷ್ಟು ಬೆಳೆದು ರೆಸಲ್‌ಮೇನಿಯಾ XIIರಲ್ಲಿ ಡೀಸೆಲ್‌ ಹಾಗೂ ಅಂಡರ್‌ಟೇಕರ್‌ ಪಂದ್ಯ ನಡೆದಾಗ ಅಂಡರ್‌ಟೇಕರ್‌ ಜಯಶಾಲಿಯಾದರು.[೧೩]

ಮರು ರಾತ್ರಿಯೇ, ಜಸ್ಟಿನ್‌ ಹಾಕ್ ಬ್ರಾಡ್‌ಷಾ ಜೊತೆಗೆ ಅಂಡರ್‌ಟೇಕರ್‌ ಪಂದ್ಯವಾಡುತ್ತಿದ್ದ ಸಂದರ್ಭದಲ್ಲಿ ಮ್ಯಾನ್‌ಕೈಂಡ್‌ ಮಧ್ಯ ಪ್ರವೇಶಿಸಿ ತನ್ನ ಆಟ ಪ್ರಾರಂಭಿಸಿದ್ದರಿಂದಾಗಿ ಮತ್ತೊಂದು ವೈಷಮ್ಯ ಶುರುವಾಯಿತು. ಮುಂದಿನ ಹಲವು ತಿಂಗಳುಗಳ ಕಾಲ ಮ್ಯಾನ್‌ಕೈಂಡ್, ಆಗ್ಗಾಗ್ಗೆ ಹೊಂಚುದಾಳಿಯಿಟ್ಟು ಅಂಡರ್‌ಟೇಕರ್‌ ಹಲವಾರು ಪಂದ್ಯಗಳನ್ನು ಸೋಲಲು ಕಾರಣರಾದರು.[೧೭] ಈ ಹಗೆತನ ಮತ್ತಷ್ಟು ಹೆಚ್ಚಿತ್ತು, ಹಾಗೂ ತಮ್ಮ ನಡುವಿನ ಕಾದಾಟಗಳನ್ನು ಅವರು ಜನಸಂದಣಿಯ ನಡುವೆ, ತೆರೆಮರೆಯಲ್ಲಿ, ಹಾಗೂ ವಿವಿಧ ಅಖಾಡಗಳ ಬಾಯ್ಲರ್ ಕೋಣೆಗಳಲ್ಲಿಯೂ ಆರಂಭಿಸಿದರು. ಇದರ ಪರಿಣಾಮವಾಗಿ, ಸಮ್ಮರ್‌ಸ್ಲ್ಯಾಮ್‌ನಲ್ಲಿ ಪ್ರಪ್ರಥಮ ಬಾರಿಗೆ ಅವರಿಬ್ಬರ ನಡುವಿನ ಬಾಯ್ಲರ್ ಕೋಣೆಯ ಕಾದಾಟವನ್ನು ಏರ್ಪಡಿಸಲಾಯಿತು. ಈ ಪಂದ್ಯದಲ್ಲಿ, ಅಂಡರ್‌ಟೇಕರ್‌ ಪೌಲ್ ಬೇರರ್‌ರ ಭಸ್ಮಕುಂಡವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದಾಗ, ಬೇರರ್‌ ಅವರಿಗೆ ಅದರಿಂದಲೇ ಹೊಡೆದಿದ್ದಲ್ಲದೆ ಅಂಡರ್‌ಟೇಕರ್‌ರನ್ನು ವಂಚಿಸಿ ಅವರನ್ನು "ಅಶಕ್ತಗೊಳಿಸಲು" ಕೆಳದವಡೆಗೆ ಕೈಯಿಂದ ಜೋರಾಗಿ ಹೊಡೆಯಲು ಮ್ಯಾನ್‌ಕೈಂಡ್‌ಗೆ ಸಹಕರಿಸಿ ತನ್ನ ವಿಜಯ ಪಡೆಯಲು ಯಶಸ್ವಿಯಾದರು.[೧೭] ಬೇರರ್‌ ಮಾಡಿದ ಮೋಸದ ನಂತರ, ಅಂಡರ್‌ಟೇಕರ್‌ ಬ್ಯುರೀಡ್‌ ಅಲೈವ್‌ ಪಂದ್ಯವಾದ ಇನ್ ಯುವರ್ ಹೌಸ್‌: ಬ್ಯುರೀಡ್ ಅಲೈವ್ ಪಂದ್ಯದಲ್ಲಿ ಮ್ಯಾನ್‌ಕೈಂಡ್‌ ವಿರುದ್ಧ ತನ್ನ ವೈಷಮ್ಯವನ್ನು ಹೊಸ ಹಂತಕ್ಕೆ ಕೊಂಡೊಯ್ದರು. ತೆರೆದ ಸಮಾಧಿಯ ಮೇಲೆ ಘಟ್ಟಿಸುವಿಕೆ‌‌ ಪ್ರಹಾರದ ನಂತರ ಅಂಡರ್‌ಟೇಕರ್‌ ಪಂದ್ಯದಲ್ಲಿ ಜಯ ಸಾಧಿಸಿದರು, ಆದರೆ ದ ಎಕ್ಸಿಕ್ಯೂಷನರ್‌‌ರ ಮಧ್ಯಂತರ ಪ್ರವೇಶದಿಂದ ಹಾಗೂ ಇನ್ನಿತರೆ ಹಲವು ಪ್ರಸಿದ್ಧ ಪಟುಗಳ ಸಹಾಯದಿಂದ, ಅಂಡರ್‌ಟೇಕರ್‌ರನ್ನು ಅಂತಿಮವಾಗಿ "ಜೀವಂತವಾಗಿ ಸಮಾಧಿ ಮಾಡಲಾಯಿತು".[೧೭] ಜೀವಂತವಾಗಿ ಸಮಾಧಿ ಮಾಡಿದ ನಂತರ, ಅಂಡರ್‌ಟೇಕರ್‌ ಸರ್ವೈವರ್ ಸರಣಿಯೊಂದರಲ್ಲಿ ಪುನರಾಗಮಿಸಿ ಸರಿಸಾಟಿಯಿಲ್ಲದ ಶರತ್ತಿನೊಂದಿಗೆ ಮ್ಯಾನ್‌ಕೈಂಡ್‌ ವಿರುದ್ಧ ಕಣಕ್ಕಿಳಿದರು. ಉಕ್ಕಿನ ಪಂಜರದ ಮೇಲ್ಛಾವಣಿಗೆ ಪೌಲ್ ಬೇರರ್‌ರನ್ನು ತಲೆಕೆಳಗೆ ಮಾಡಿ ನೇತುಹಾಕಿದರು20 ft (6.1 m). ಅಂಡರ್‌ಟೇಕರ್‌ ಏನಾದರೂ ಪಂದ್ಯದಲ್ಲಿ ಜಯಗಳಿಸಿದ್ದರೆ, ತನ್ನ ತೋಳ್ಬಲವನ್ನು ಬೇರರ್‌ ಮೇಲೆ ತೋರಿಸಬಹುದಾಗಿತ್ತು. ಅಂಡರ್‌ಟೇಕರ್‌ ಆ ಪಂದ್ಯವನ್ನು ಗೆದ್ದ ನಂತರವೂ, ದ ಎಕ್ಸಿಕ್ಯೂಷನರ್‌ರ ಮಧ್ಯಪ್ರವೇಶದಿಂದಾಗಿ ಬೇರರ್‌ ಅಂಡರ್‌ಟೇಕರ್‌ರ ಬಿಗಿಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು.[೧೮] ತಾನು ಬಂದಾಗಿನಿಂದಲೂ ತನ್ನ ಯಶಸ್ಸಿಗೆ ಮುಳ್ಳಿನಂತೆ ಅಡ್ಡಿಪಡಿಸುತ್ತಿದ್ದ ಕಾರಣದಿಂದಾಗಿ, ನಂತರದಲ್ಲಿ ಅಂಡರ್‌ಟೇಕರ್‌ ತನ್ನ ಗಮನವನ್ನು ದ ಎಕ್ಸಿಕ್ಯೂಷನರ್‌ರ ಕಡೆಗೆ ತಿರುಗಿಸಿದರು. ಇನ್ ಯುವರ್ ಹೌಸ್‌: ಇಟ್ಸ್‌ ಟೈಮ್‌ನಲ್ಲಿ ಅಂಡರ್‌ಟೇಕರ್‌ ಅರ್ಮಗೆಡನ್‌ ನಿಯಮಗಳ ಪಂದ್ಯದಲ್ಲಿ ದ ಎಕ್ಸಿಕ್ಯೂಷನರ್‌ರನ್ನು ಸೋಲಿಸಿದರು.[೧೮] ೧೯೯೬ ನೇ ಇಸವಿಯ ಕೊನೆಯ ಹೊತ್ತಿಗೆ, ರಾಯಲ್ ರಂಬಲ್‌ ಪಂದ್ಯದಲ್ಲಿ ಬೇರರ್‌ ತನ್ನಲ್ಲಿ ಹೊಸದಾಗಿ ಆಶ್ರಯ ಪಡೆದವನನ್ನು ರಕ್ಷಿಸಲು ಮಧ್ಯಪ್ರವೇಶಿಸಿದ್ದರಿದಾಗಿ ಅಂಡರ್‌ಟೇಕರ್‌ ವಾಡೆರ್‌ ಜೊತೆ ವೈಷಮ್ಯ ಸಾಧಿಸಿದರು.[೧೮] ಇವುಗಳಲ್ಲಿ ಸೋಲನ್ನು ಅನುಭವಿಸಿದ ನಂತರ, ಅಂಡರ್‌ಟೇಕರ್‌ ತನ್ನ ಗಮನವನ್ನು WWF ಚಾಂಪಿಯನ್‌ಷಿಪ್‌ನೆಡೆಗೆ ಕೇಂದ್ರೀಕರಿಸಲು ಆರಂಭಿಸಿದರು.

ಹೆಲ್ ಇನ್ ಎ ಸೆಲ್‌; ಬ್ರದರ್ಸ್ ಆಫ್ ಡಿಸ್ಟ್ರಕ್ಷನ್‌ (೧೯೯೭–೧೯೯೮)[ಬದಲಾಯಿಸಿ]

ಲಾರ್ಡ್ ಆಫ್ ಡಾರ್ಕ್‌ನೆಸ್‌ನ ಉಡುಗೆಗಳನ್ನು ಧರಿಸಿದ ಅಂಡರ್‌ಟೇಕರ್‌

ರೆಸಲ್‌ಮೇನಿಯಾ ೧೩ರ WWF ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ, ಅಂಡರ್‌ಟೇಕರ್‌ ಸೈಕೊ ಸಿದ್‌ರನ್ನು ಸೋಲಿಸಿ, WWF ಚಾಂಪಿಯನ್‌ ಎಂಬ ಖ್ಯಾತಿಯನ್ನು ಮತ್ತೊಮ್ಮೆ ತಮ್ಮದಾಗಿಸಿಕೊಂಡರು.[೧೯] ಈ ಘಟನೆಯ ನಂತರ, ಪೌಲ್ ಬೇರರ್‌ ಅಂಡರ್‌ಟೇಕರ್‌ರ "ಅತ್ಯಂತ ದೊಡ್ಡ ರಹಸ್ಯ"ವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಅವರ ಜೊತೆ ಪುನಃ ಸೇರಲು ಪ್ರಯತ್ನಿಸಿದರು. ಬೇರರ್ ತನ್ನ ಕಥಾಭಾಗದಲ್ಲಿ ಅಂಡರ್‌ಟೇಕರ್‌ ಒಬ್ಬ ಕೊಲೆಗಾರ, ಆತ ತನ್ನ ಬಾಲ್ಯದಲ್ಲಿಯೇ ಕುಲಕಸುಬಾದ ಶವಸಂಸ್ಕಾರದ ವ್ಯಾಪಾರಕ್ಕೆ (ಬೇರರ್ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ) ಬೆಂಕಿಯಿಟ್ಟಿದ್ದಲ್ಲದೆ, ತನ್ನ ತಂದೆತಾಯಿ ಸೇರಿದಂತೆ ಸಣ್ಣ ಮಲ ಸಹೋದರನ ಸಾವಿಗೂ ಕಾರಣ ಎಂಬುದನ್ನು ಬಹಿರಂಗಪಡಿಸುತ್ತಾರೆ. ಬೇರರ್ ಅದರ ಬಗೆಗಿನ ಮಾಹಿತಿ ಹೊಂದಲು ಯಾವುದೇ ರೀತಿಯಲ್ಲಿಯೂ ಸಾಧ್ಯವಿಲ್ಲ ಎಂದು ಅಂಡರ್‌ಟೇಕರ್‌ ತಿಳಿಸುತ್ತಾರೆ, ಆದರೆ ಇವೆಲ್ಲವನ್ನೂ ತೀವ್ರತರ ಸುಟ್ಟಗಾಯಗಳ ಗುರುತಿನೊಂದಿಗೆ ಬದುಕಿ ಉಳಿದಿದ್ದ ಅಂಡರ್‌ಟೇಕರ್‌ ಮಲ ಸಹೋದರ ಕೇನ್‌ ತನಗೆ ಹೇಳಿದ್ದಾಗಿ ಬೇರರ್ ತಿಳಿಸುತ್ತಾರೆ. ಬೇರರ್ ಕೇನ್‌ರನ್ನು ಬೆಂಕಿಯಿಂದ ಪಾರುಮಾಡಿ, ಆಸ್ಪತ್ರೆಗೆ ಸೇರಿಸುತ್ತಾರೆ. ಈ ವರ್ಷಗಳಲ್ಲಿ, ಕೇನ್‌ ತನ್ನ ಹಗೆ ತೀರಿಸಿಕೊಳ್ಳಲು ಕಾತರಿಸುತ್ತಿದ್ದಾರೆ. ಅದಕ್ಕೆ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸಿದ ಅಂಡರ್‌ಟೇಕರ್‌, ಕೇನ್ ಓರ್ವ ಬೆಂಕಿಯ ಉನ್ಮಾದಿ ಆಗಿದ್ದು, ಬೆಂಕಿ ಹಚ್ಚಿದ್ದು ಅವನೇ ಹಾಗೂ ಅದರಿಂದ ಅವನು ಉಳಿದಿರುವುದೇ ಕಷ್ಟಕರವಾಗಿದೆ ಎಂದಿದ್ದರು.

ಅವರ ಮತ್ತೊಂದು ಕಥಾಭಾಗವು ೧೯೯೭ ರಲ್ಲಿ ನಡೆದ ಸಮ್ಮರ್‌ಸ್ಲ್ಯಾಮ್‌ನಲ್ಲಿ, ರೆಫರಿ ಷಾನ್ ಮೈಕೆಲ್ಸ್‌ ಬ್ರೆಟ್ ಹಾರ್ಟ್‌ರಿಗೆ ಹೊಡೆಯಲು ಹೋಗಿ, ಆಕಸ್ಮಿಕವಾಗಿ ಅಂಡರ್‌ಟೇಕರ್‌ಗೆ ಉಕ್ಕಿನ ಕುರ್ಚಿಯಿಂದ ಬಲವಾಗಿ ಹೊಡೆದದ್ದರಿಂದ ಅಂಡರ್‌ಟೇಕರ್‌ WWF ಚಾಂಪಿಯನ್‌ಷಿಪ್‌ ಪಟ್ಟವನ್ನು ಕಳೆದುಕೊಂಡದ್ದರಿಂದ ಆರಂಭಗೊಂಡಿತು.[೧೯] ಈ ವೈಷಮ್ಯವು ಇನ್ ಯುವರ್ ಹೌಸ್‌: ಬ್ಯಾಡ್ಡ್ ಬ್ಲಡ್‌ ಪಂದ್ಯದಲ್ಲಿ, ಮತ್ತಷ್ಟು ಹೆಚ್ಚಾಗಿ ಅಂಡರ್‌ಟೇಕರ್‌ ಹೆಲ್ ಇನ್ ಎ ಸೆಲ್‌ನ ಪ್ರಥಮ ಪಂದ್ಯದಲ್ಲಿ ಮೈಕೆಲ್ಸ್‌ರಿಗೆ ಸವಾಲನ್ನು ಹಾಕಿದರು. ಈ ಪಂದ್ಯದಲ್ಲಿ, ದಿ ಅಂಡರ್‌ಟೇಕರ್‌ನ ಕಥಾಭಾಗದ ಮಲ ಸಹೋದರ ಕೇನ್‌ ತನ್ನ ವರಸೆಯನ್ನು ಆರಂಭಿಸಿ, ಬಾಗಿಲನ್ನು ಮುರಿದುಕೊಂಡು ಕೋಣೆಯೊಳಗೆ ಪ್ರವೇಶಿಸಿ ಅಂಡರ್‌ಟೇಕರ್‌ನ ಚಿಹ್ನೆಯಾದ ಟೂಂಬ್‌ಸ್ಟೋನ್ ಪೈಲ್‌ಡ್ರೈವರ್‌‌ ಪ್ರಹಾರವನ್ನು ಅಂಡರ್‌ಟೇಕರ್‌ರವರಿಗೇ ನೀಡಿ, ಮೈಕೆಲ್ಸ್‌ಗೆ ಅವರನ್ನು ಕಟ್ಟಿಹಾಕಲು ಸಹಕರಿಸಿದರು.[೧೯] ಡೇವ್‌ ಮೆಲ್ಟ್‌ಜರ್‌ ಈ ಪಂದ್ಯಕ್ಕೆ ೫-ತಾರಾ ಶ್ರೇಯಾಂಕವನ್ನು ನೀಡಿದರು. ಈ ಕಥಾಭಾಗ ಮುಂದುವರಿದಂತೆ, ಕೇನ್‌, ಪೌಲ್ ಬೇರರ್‌ ಜೊತೆಗೂಡಿ ಅಂಡರ್‌ಟೇಕರ್‌ಗೆ ತಮ್ಮ ವಿರುದ್ಧ ಪಂದ್ಯಗಳನ್ನಾಡುವಂತೆ ಸವಾಲನ್ನು ಹಾಕಿದರು, ಆದರೆ ಅಂಡರ್‌ಟೇಕರ್‌ ತಮ್ಮನ ವಿರುದ್ಧ ಹೋರಾಡಲು ನಿರಂತರವಾಗಿ ತಿರಸ್ಕರಿಸಿದರು. ನಂತರದಲ್ಲಿ D-ಜನರೇಷನ್ X ಅಂಡರ್‌ಟೇಕರ್‌ ಮೇಲೆ ಹಲ್ಲೆ ಮಾಡಲು ಮುಂದಾದಾಗ ಕೇನ್‌ ಅವರನ್ನು ಕಾಪಾಡಿದನು ಇದರಿಂದಾಗಿ ಅಂಡರ್‌ಟೇಕರ್‌ ಹಾಗೂ ಕೇನ್‌ ಆಟಗಳಲ್ಲಿ ಜೊತೆಯಾಗಿ ಪಾಲ್ಗೊಂಡರು. ರಾಯಲ್ ರಂಬಲ್‌ನ ಕ್ಯಾಸ್ಕೆಟ್‌ ಪಂದ್ಯದಲ್ಲಿ ಅಂಡರ್‌ಟೇಕರ್‌ರ ವಿರೋಧಿಯಾದ ಮೈಕೆಲ್ಸ್‌ರೊಂದಿಗೆ ಅಂತಿಮ ಪಂದ್ಯ ಆಡುತ್ತಿರಬೇಕಾದರೆ ಕೇನ್‌ ಅಂಡರ್‌ಟೇಕರ್‌ರವರಿಗೆ ಮೋಸಮಾಡಿ ಅವರನ್ನು ಶವಪೆಟ್ಟಿಗೆಯಲ್ಲಿ ಹಾಕಿ ಬೀಗಹಾಕಿ ಅದಕ್ಕೆ ಬೆಂಕಿ ಹಚ್ಚಿ ಧಗಧಗಿಸುವಂತೆ ಮಾಡಿದ್ದರಿಂದ ಅವರು ಪಂದ್ಯವನ್ನು ಸೋಲಬೇಕಾಯಿತು. ಅಷ್ಟೆಲ್ಲಾ ಮಾಡಿದರೂ, ಪೆಟ್ಟಿಗೆಯ ಮುಚ್ಚಳವನ್ನು ತೆಗೆದುನೋಡಿದಾಗ ಅಲ್ಲಿಂದ ಅಂಡರ್‌ಟೇಕರ್‌ ತಪ್ಪಿಸಿಕೊಂಡಿದ್ದರು.[೨೦] ಈ ವಂಚನೆಯಾದ ಎರಡು ತಿಂಗಳ, ರೆಸಲ್‌ಮೇನಿಯಾ XIVರಲ್ಲಿ ಅಂಡರ್‌ಟೇಕರ್‌ ಮರಳಿಬಂದು ಕೇನ್‌ರನ್ನು ಸೋಲಿಸಿದರು.[೨೦] ಅದಾದ ಒಂದು ತಿಂಗಳ ನಂತರ ಇಬ್ಬರಿಗೂ ಪುನರ್‌ಪಂದ್ಯ ನಡೆಸಲಾಯಿತು, ಪ್ರಥಮ ಬಾರಿಗೆ Unforgiven: In Your Houseನಲ್ಲಿ ನಡೆದ ಅತ್ಯಂತ ಭೀಕರ ಪಂದ್ಯದಲ್ಲಿ, ಅಂಡರ್‌ಟೇಕರ್‌ ಕೇನ್‌ರ ಬಲಗೈಗೆ ಬೆಂಕಿ ಹಚ್ಚಿ ಪಂದ್ಯವನ್ನು ತನ್ನದಾಗಿಸಿಕೊಂಡರು.[೨೦]

ಮ್ಯಾನ್‌ಕೈಂಡ್‌ರ ವಿರುದ್ಧ ಅಂಡರ್‌ಟೇಕರ್‌ರ ವೈಷಮ್ಯವು ಮತ್ತೆ ಆರಂಭಗೊಂಡಿತು, ಹಾಗೂ ಅವರು ಕಿಂಗ್ ಆಫ್ ದಿ ರಿಂಗ್‌ನ ಹೆಲ್ ಇನ್ ಎ ಸೆಲ್‌ ಪಂದ್ಯದಲ್ಲಿ ಮುಖಾಮುಖಿಯಾಗಿ ಹೋರಾಡಿದರು. ಈ ಪಂದ್ಯದ ಸಂದರ್ಭದಲ್ಲಿ, ಮುಂಚೆಯೇ ಯೋಜಿಸಲಾದಂತೆ ಅಂಡರ್‌ಟೇಕರ್‌ ಮ್ಯಾನ್‌ಕೈಂಡ್‌ರನ್ನು 16 ft (4.9 m) ಕೊಠಡಿಯ ಮೇಲ್ಛಾವಣಿಯ ಮೇಲೆ ಎಸೆದು ಸ್ಪ್ಯಾನಿಷ್‌ ಪ್ರಕಟಣಾ ಮೇಜಿನಡಿಯಲ್ಲಿ ಬೀಳುವಂತೆ ಮಾಡಿದರು. ಅವರು ನಂತರದಲ್ಲಿ ಮ್ಯಾನ್‌ಕೈಂಡ್‌ರನ್ನು ಸೆಲ್‌ನ ಛಾವಣಿಗೆ ಘಟ್ಟಿಸಿ ಔಚಿತ್ಯಪೂರ್ಣವಾಗಿಯೇ ಪ್ರಜ್ಞೆ ತಪ್ಪುವಂತೆ ಹೊಡೆದುರುಳಿಸಿ ಮ್ಯಾನ್‌ಕೈಂಡ್‌‌‌ರ ಮೇಲೆ ಟೂಂಬ್‌ಸ್ಟೋನ್‌‌ ಪೈಲ್‌ಡ್ರೈವ್‌ ಪ್ರಹಾರದ ಮೂಲಕ ಪಂದ್ಯವನ್ನು ಮುಗಿಸಿದರು.[೨೦]

ಅಂಡರ್‌ಟೇಕರ್‌ ತನ್ನ ಮಲ ಸಹೋದರನಾದ ಕೇನ್‌ನೊಂದಿಗೆ ಹಲವಾರು ಬಾರಿ ದ್ವೇಷ ಕಟ್ಟಿಕೊಂಡ ರೀತಿಯಲ್ಲೇ ಜೊತೆಗೂಡಿದ್ದೂ ಇದೆ.

ಫುಲ್ಲಿ ಲೋಡೆಡ್‌ ಪಂದ್ಯದಲ್ಲಿ, ಅಂಡರ್‌ಟೇಕರ್‌ ಹಾಗೂ ಸ್ಟೋನ್‌ ಕೋಲ್ಡ್ ಸ್ಟೀವ್ ಆಸ್ಟಿನ್‌ರವರು, ಕೇನ್‌ ಹಾಗೂ ಮ್ಯಾನ್‌ಕೈಂಡ್‌ರನ್ನು ಸೋಲಿಸಿ WWF ಟ್ಯಾಗ್‌ ಟೀಮ್‌ ಚಾಂಪಿಯನ್‌ಷಿಪ್‌ ಪಟ್ಟವನ್ನು ತಮ್ಮದಾಗಿಸಿಕೊಂಡರು.[೨೦] ಅಂಡರ್‌ಟೇಕರ್‌ ಹಾಗೂ ಆಸ್ಟಿನ್‌ರು ಕೇವಲ ಎರಡು ವಾರಗಳ ಮಟ್ಟಿಗೆ ಮಾತ್ರ ಟ್ಯಾಗ್ ಟೀಮ್‌ ಚಾಂಪಿಯನ್‌ ಎಂಬ ಪಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು, ಏಕೆಂದರೆ ರಾ ಈಸ್ ವಾರ್ ಪಂದ್ಯದ ಕಂತಿನಲ್ಲಿ ಕೇನ್‌ ಹಾಗೂ ಮ್ಯಾನ್‌ಕೈಂಡ್‌ ಮರಳಿ ಆ ಪದವಿಯನ್ನು ತಮ್ಮದಾಗಿಸಿಕೊಂಡರು.[೨೧] ಅಂಡರ್‌ಟೇಕರ್‌ರು ಸಮ್ಮರ್‌ಸ್ಲ್ಯಾಮ್‌ನ WWF ಚಾಂಪಿಯನ್‌ಷಿಪ್‌ನಲ್ಲಿ, ಆಸ್ಟಿನ್‌ ಹೊಂದಿದ್ದ ಒಂದನೇ ಸ್ಥಾನದ ಪ್ರತಿಸ್ಪರ್ಧಿಯಾದರು. ಅಂಡರ್‌ಟೇಕರ್‌ರು ಸಮ್ಮರ್‌ಸ್ಲ್ಯಾಮ್‌ಗಿಂತ ಸ್ವಲ್ಪ ಕಾಲ ಮುನ್ನ, ಕೇನ್‌ ಹಾಗೂ ತಾನು ಸಹೋದರರಂತೆ ಕೆಲಸ ಮಾಡಿದ್ದೇವೆ ಎಂಬುದನ್ನು ಹೊರಗೆಡವಿದರು. ಈ ವಿಚಾರ ಹೊರಗೆಡವಿದ ನಂತರವೂ, ಅಂಡರ್‌ಟೇಕರ್‌ ಆಸ್ಟಿನ್‌ ವಿರುದ್ಧದ ಪಂದ್ಯದಲ್ಲಿ ಕೇನ್‌ರಿಗೆ ದೂರ ಉಳಿಯುವಂತೆ ಸೂಚಿಸಿದರು, ಹಾಗೂ ಅಂಡರ್‌ಟೇಕರ್‌ ಪಂದ್ಯದಲ್ಲಿ ಸೋತರೂ ಕೂಡ, ಆಸ್ಟಿನ್‌ರಿಗೆ ಸೊಂಟಪಟ್ಟಿಯನ್ನು ಗೌರವಪೂರ್ವಕವಾಗಿ ಮರಳಿಸಿದರು.[೨೦] ಸೆಪ್ಟೆಂಬರ್‌ ತಿಂಗಳಲ್ಲಿ, ಕಥಾಭಾಗವು ಮುಂದುವರೆದು, ಅಂಡರ್‌ಟೇಕರ್‌ ಹಾಗೂ ಕೇನ್‌, ಆಸ್ಟಿನ್‌ ತನ್ನ ಪದವಿಯನ್ನು ವಿನ್ಸ್‌ ಮೆಕ್‌ಮಹನ್‌ರಿಗೆ ಬಿಟ್ಟುಕೊಡಲೆಂದು, ಒಳಸಂಚು ನಡೆಸಿದೆವು ಎಂಬ ವಾಸ್ತವವನ್ನು ತಿಳಿಸಿ, ತನ್ನಲ್ಲಿರುವ ಕೆಲವು ಸಂಚುಕೋರ ಗುಣಗಳನ್ನು ತೋರಿಸಲು ಆರಂಭಿಸುತ್ತಾರೆ. Breakdown: In Your Houseನಲ್ಲಿ, ಆಸ್ಟಿನ್‌ ಜೊತೆಗೆ ಅಂಡರ್‌ಟೇಕರ್‌ ಹಾಗೂ ಕೇನ್‌ WWF ಚಾಂಪಿಯನ್‌ಷಿಪ್‌ನ ಟ್ರಿಪಲ್ ಥ್ರೆಟ್ ಪಂದ್ಯವನ್ನು ಆಡಲು ನಿಗದಿಮಾಡಲಾಗಿತ್ತು; ಸೋದರರು ಪರಸ್ಪರರನ್ನು ಬಂಧಿಸಲು ಸಾಧ್ಯವಾಗದಂತೆ ನೋಡಿಕೊಂಡರು ಎಂದು ಮೆಕ್‌ಮಹನ್‌ ತಿಳಿಸುತ್ತಾರೆ. ಅಂಡರ್‌ಟೇಕರ್‌ ಹಾಗೂ ಕೇನ್‌ ಎರಡು ಬಾರಿ ಆಸ್ಟಿನ್‌ರ ಮೇಲೆ ಸತತವಾದ ಘಟ್ಟಿಸುವಿಕೆ[೨೦] ಗಳ ನಂತರ ನೆಲಕಚ್ಚಿಸಿದರು, ಇದರಿಂದಾಗಿ ಮೆಕ್‌ಮಹನ್‌ ತಮ್ಮ ಪದವಿಯನ್ನು ತ್ಯಜಿಸಬೇಕಾಯಿತು. ಈ ಘಟನೆಯಿಂದಾಗಿ Judgment Day: In Your Houseರಲ್ಲಿ ವಿಶೇಷ ಆಹ್ವಾನಿತ ರೆಫರಿಯಾಗಿ ಆಸ್ಟಿನ್‌, ಇಬ್ಬರು ಸಹೋದರರ ನಡುವೆ ಟೈಟಲ್‌ಗಾಗಿ ಪಂದ್ಯವನ್ನು ಏರ್ಪಡಿಸಿದರು. ಪಂದ್ಯದ ಕೊನೆಯ ಹಂತದಲ್ಲಿ, ಅಂಡರ್‌ಟೇಕರ್‌ಗೆ ಹೊಡೆಯಲು ಪೌಲ್ ಬೇರರ್‌ ಕೇನ್‌ರಿಗೆ ಸಹಕರಿಸಲು ಉಕ್ಕಿನ ಕುರ್ಚಿಯನ್ನು ನೀಡಲು ಮುಂದಾದರು, ಆದರೆ ಕೇನ್‌ ಹಿಂದಿರುಗಿದ್ದರಿಂದಾಗಿ, ಬೇರರ್ ಹಾಗೂ ಅಂಡರ್‌ಟೇಕರ್‌ ಇಬ್ಬರೂ ಸೇರಿ ಕೇನ್‌ರಿಗೆ ಕುರ್ಚಿಯಿಂದ ಹೊಡೆದರು. ಅಂಡರ್‌ಟೇಕರ್‌ ಆತನನ್ನು ನೆಲಕಚ್ಚಿಸಿದೆನೆಂದು ಹೇಳಲು ಮುಂದಾದಾಗ, ಆಸ್ಟಿನ್‌ ಈ ಕುಸಿತವನ್ನು ಗಣನೆಮಾಡಲು ತಿರಸ್ಕರಿಸಿ, ಅಂಡರ್‌ಟೇಕರ್‌ ಮೇಲೂ ಹಲ್ಲೆ ನಡೆಸಿ, ಇಬ್ಬರು ಸಹೋದರರ ಮೇಲೂ ಗಣನೆ ಆರಂಭಿಸಿದರು.[೨೦] ಅಂತಿಮವಾಗಿ, ಅಂಡರ್‌ಟೇಕರ್‌ ಮುಂದಿನ ರಾತ್ರಿಯಲ್ಲಿ ನಡೆದ ರಾ ಈಸ್ ವಾರ್‌ ಪಂದ್ಯದಲ್ಲಿ ಬೇರರ್ ಜೊತೆ ರಾಜಿ ಮಾಡಿಕೊಂಡ ಆರು ವರ್ಷಗಳಲ್ಲಿ ಪ್ರಥಮ ಬಾರಿಗೆ ತನ್ನಲ್ಲಿರುವ ದುರುಳತನವನ್ನು ಹೊರಗೆಡವಿದರು, ಹಾಗೂ ಬೇರರ್‌ ಮತ್ತು ತಾನು‌, ತಮ್ಮ ಕತ್ತಲ ಲೋಕದ ಖಾತೆಯನ್ನು ವರ್ಲ್ಡ್‌ ರೆಸ್ಲಿಂಗ್‌ ಫೆಡರೇಶನ್ನಿನಲ್ಲಿ ಹೊರಗೆಡವುತ್ತೇವೆ ಎಂಬುದನ್ನು ತಿಳಿಸಿದರು. ಕಥಾಭಾಗದ ಈ ಹಂತದಲ್ಲಿ, ಈ ಮೊದಲು ಕೇನ್‌ ಮೇಲೆ ಹೊರಿಸಿದ ಆಪಾದನೆಯನ್ನು ತಿರಸ್ಕರಿಸಿ, ತನ್ನ ತಂದೆತಾಯಿಯರನ್ನು ಬೆಂಕಿಯಿಂದ ಬಲಿ ತೆಗೆದುಕೊಂಡದ್ದು ತಾನೆ ಎಂದು ಒಪ್ಪಿಕೊಂಡರು.[೨೧]

ಸರ್ವೈವರ್ ಸರಣಿಯ ನಂತರ, ಅಂಡರ್‌ಟೇಕರ್‌ ತನ್ನ ಗಮನವನ್ನು ಪುನಃ ಆಸ್ಟಿನ್‌ರೊಂದಿಗಿದ್ದ ಜಡ್ಜ್‌ಮೆಂಟ್‌ ಡೇ ಪಂದ್ಯದಲ್ಲಿ ಸೋಲಲು ಕಾರಣವಾಗಿದ್ದರಿಂದ ಉಂಟಾಗಿದ್ದ ಹಳೆಯ ವೈಷಮ್ಯದ ಮೇಲೆ ಕೇಂದ್ರೀಕರಿಸಿ, ದಿ ರಾಕ್‌ ಜೊತೆ ಪಂದ್ಯದಲ್ಲಿ ಪಾಲ್ಗೊಂಡಾಗ ಆಸ್ಟಿನ್‌ರ ತಲೆಯ ಮೇಲೆ ಸಲಿಕೆಯಿಂದ ಬಲವಾಗಿ ಹೊಡೆದು ಒಂದು ತಿಂಗಳ ಹಿಂದಷ್ಟೇ ಆತ ಮಾಡಿದ ಉಪಕಾರವನ್ನು ಸ್ಮರಿಸಿಕೊಂಡರು. ಕಥಾಭಾಗದಲ್ಲಿ ಈ ರೀತಿಯ ತಿರುವು ಪಡೆದುಕೊಂಡು, ಮೆಕ್‌ಮಹನ್‌ರವರು ಅಂಡರ್‌ಟೇಕರ್‌ ಹಾಗೂ ಆಸ್ಟಿನ್‌ ನಡುವೆ Rock Bottom: In Your Houseರಲ್ಲಿ ಬ್ಯುರೀಡ್ ಅಲೈವ್‌ ಪಂದ್ಯವನ್ನು ಏರ್ಪಡಿಸಿದರು. ರಾಕ್‌ ಬಾಟಮ್‌ ಪಂದ್ಯಗಳ ಸನಿಹದ ಆ ವಾರವೆಲ್ಲಾ ಪಂದ್ಯದಲ್ಲಿ ಮುನ್ನಡೆ ಸಾಧಿಸಿ, ಅಂಡರ್‌ಟೇಕರ್‌ ಆಸ್ಟಿನ್‌ರನ್ನು ಜೀವಂತ ಸಮಾಧಿ ಮಾಡಿ, ಕೇನ್‌ರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಲು ಪ್ರಯತ್ನಿಸಿದರು, ಹಾಗೂ ಆಸ್ಟಿನ್‌ರ ಮಾಂತ್ರಿಕ ಸರವನ್ನು ತನ್ನ ಲಾಂಛನಕ್ಕೆ ಹಾಕಿ ಕಣದ ಎತ್ತರದಲ್ಲಿ ಹಿಡಿದುಕೊಂಡರು.[೨೧] ಅಷ್ಟೆಲ್ಲಾ ಮಾಡಿದರೂ, ಕೇನ್‌ರ ಮಧ್ಯಪ್ರವೇಶದಿಂದಾಗಿ ಅಂಡರ್‌ಟೇಕರ್‌ ಪಂದ್ಯದಲ್ಲಿ ಸೋಲಬೇಕಾಗಿ ಬಂತು.[೨೨]

ಕತ್ತಲ ಲೋಕದ ಖಾತೆ (೧೯೯೯)[ಬದಲಾಯಿಸಿ]

೧೯೯೯ ನೇ ಇಸವಿಯ ಜನವರಿಯಲ್ಲಿ ಮರಳಿದ ಅಂಡರ್‌ಟೇಕರ್‌, ಕತ್ತಲ ಲೋಕದ ಖಾತೆಯನ್ನು ರಚಿಸಿದರು. ಪ್ರಸ್ತುತ ಇದ್ದುದಕ್ಕಿಂತಲೂ ಅತ್ಯಂತ ಹೆಚ್ಚು ದುಷ್ಟಗುಣಗಳೊಂದಿಗೆ, ತಾನು "ಉನ್ನತ ಶಕ್ತಿ"ಯಿಂದ ಆಜ್ಞೆಗಳನ್ನು ಸ್ವೀಕರಿಸುತ್ತಿರುವುದಾಗಿ ತಿಳಿಸಿದರು. ಅವರು ಆಗಿಂದಾಗೆ ಕಪ್ಪು ನಿಲುವಂಗಿ ಧರಿಸಿ ಸಿಂಹಾಸನದಲ್ಲಿ ಕುಳಿತು ಕಾಣಿಸಿಕೊಳ್ಳುತ್ತಿದ್ದರು. ತನ್ನ ಅಡಿಯಾಳುಗಳ ಸಹಾಯದಿಂದ ಅವರು, WWEನ ಹಲವು ಸುಪ್ರಸಿದ್ಧತಾರೆಯರನ್ನು ಬಲಿ ತೆಗೆದುಕೊಂಡರು, ಸುಪ್ರಸಿದ್ಧತಾರೆಯರಲ್ಲಿರುವ ದುಷ್ಟಶಕ್ತಿಯನ್ನು ವ್ಯಕ್ತವಾಗುವಂತೆ ಮಾಡಿ ಅಂತಹವರನ್ನು ತನ್ನ ಗುಂಪಿನಲ್ಲಿ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದರು. ಅಂತಿಮವಾಗಿ ಈ ಗುಂಪನ್ನು ವೃತ್ತಿಪರ ವರ್ಗದ ಜೊತೆ ವಿಲೀನಗೊಳಿಸಿ ಒಂದು ವೃತ್ತಿಸಂಘವಾಗಿ ಪರಿವರ್ತಿಸಲಾಯಿತು.[೨೩] ಈ ಸಮಯದಲ್ಲಿ, ಓವರ್‌ ದ ಎಡ್ಜ್‌‌ನಲ್ಲಿ WWF ಚಾಂಪಿಯನ್‌ಷಿಪ್‌ನ ಮೂರನೇ ಪಂದ್ಯದಲ್ಲಿ ವಿಶೇಷ ರೆಫರಿಯಾದ ಶೇನ್‌ ಮೆಕ್‌ಮಹನ್‌ರ ಸಹಾಯ ಪಡೆದು ಆಸ್ಟಿನ್‌ರನ್ನು ಸೋಲಿಸಲು ಅಂಡರ್‌ಟೇಕರ್‌ರನ್ನು ನೇಮಿಸಲಾಯಿತು.[೨೪] ಎರಡು ವಾರಗಳ ನಂತರ, ರಾ ಈಸ್ ವಾರ್‌ ಪಂದ್ಯದಲ್ಲಿ ಇಷ್ಟು ದಿನ ಅಂಡರ್‌ಟೇಕರ್‌ರ "ಉನ್ನತ ಶಕ್ತಿ"ಯಾಗಿದ್ದದ್ದು ವಿನ್ಸ್‌ ಮೆಕ್‌ಮಹನ್‌ ಎಂಬುದನ್ನು ಬಹಿರಂಗ ಪಡಿಸಿದರು. ಕಿಂಗ್ ಆಫ್ ದಿ ರಿಂಗ್‌ ಪಂದ್ಯದ ಮರುರಾತ್ರಿ ಅಂಡರ್‌ಟೇಕರ್‌ WWF ಚಾಂಪಿಯನ್‌ಷಿಪ್‌ ಪಟ್ಟವನ್ನು ಆಸ್ಟಿನ್‌ರಿಗೆ ಸೋತ ನಂತರ,[೨೩] ಹಾಗೂ ಫುಲ್ಲಿ ಲೋಡೆಡ್‌ನಲ್ಲಿ ಫಸ್ಟ್ ಬ್ಲಡ್ ಪಂದ್ಯವನ್ನು ಕಳೆದುಕೊಂಡ ನಂತರದಲ್ಲಿ ಮೆಕ್‌ಮಹನ್‌ ಜೊತೆಗಿನ ಸಂಬಂಧವನ್ನು ಕಡಿದುಕೊಂಡು ವೃತ್ತಿಸಂಘವನ್ನು ಚದುರಿಹೋಗುವಂತೆ ಮಾಡಿದರು.

ತನ್ನದೇ ಕಥಾಭಾಗವನ್ನು ಆರಂಭಿಸಿದ, ಅಂಡರ್‌ಟೇಕರ್‌ ಟ್ಯಾಗ್‌ ಟೀಮ್‌ನಲ್ಲಿ ದಿ ಬಿಗ್ ಷೋ ಜೊತೆಗೂಡಿ ದಿ ಅನ್‌ಹೋಲಿ ಏಲಿಯನ್ಸ್‌ ಎಂಬ ತಂಡ ರಚಿಸಿ, WWF ಟ್ಯಾಗ್‌ ಟೀಮ್‌ ಚಾಂಪಿಯನ್‌ಷಿಪ್‌ ಪಟ್ಟವನ್ನು ಎರಡು ಬಾರಿ ತಮ್ಮದಾಗಿಸಿಕೊಂಡರು.

ಅಮೇರಿಕನ್ ಬ್ಯಾಡ್ ಆಸ್/ಬಿಗ್ ಈವಿಲ್‌ (2000–2003)[ಬದಲಾಯಿಸಿ]

ಅಂಡರ್‌ಟೇಕರ್‌ ರೆಸಲ್‌ಮೇನಿಯಾ XIXರಲ್ಲಿ ತನ್ನ "ಬಿಗ್ ಈವಿಲ್‌" ತಂತ್ರದೊಂದಿಗೆ.

ಅಂಡರ್‌ಟೇಕರ್‌ WWF ವೃತ್ತಿಯ ಈ ಭಾಗದಲ್ಲಿ ತನ್ನ ಎರಡನೇ ಅವತಾರ ತಾಳಿದರು. ಅವರು ಗಾಥಿಕ್ ಶವಸಂಸ್ಕಾರ ನಿರ್ವಾಹಕರ-ಆಧರಿಸಿದ ದಿರಿಸುಗಳು, ಶವಸಂಸ್ಕಾರದಲ್ಲಿ ಬಳಸುವ ಚರಮಗೀತೆ ಆವರ್ತಕ ಸಂಗೀತ, ಅಲೌಕಿಕ ಸೂಚನೆಗಳು, ಹಾಗೂ ಅಖಾಡಕ್ಕೆ ಪ್ರವೇಶಮಾಡುವ ಸಂದರ್ಭದಲ್ಲಿ ನಡೆಸುವ ತಂತ್ರಗಳನ್ನು ತ್ಯಜಿಸಿದರು. ಈಗ ಅಂಡರ್‌ಟೇಕರ್‌ ಬೈಕರ್‌ ವ್ಯಕ್ತಿತ್ವವನ್ನು ತಳೆದು, ಅಖಾಡದಲ್ಲಿ ದ್ವಿಚಕ್ರವಾಹನದ ಸವಾರಿ ಮಾಡಿ, ಹಾಗೂ ತಂಪುಕನ್ನಡಕಗಳನ್ನು ಧರಿಸಿ ಅಖಾಡಕ್ಕೆ ಪ್ರವೇಶಿಸಿದನು. ಅಂಡರ್‌ಟೇಕರ್‌ರ ಮೂಲ ಆವರ್ತಕ ಗೀತೆಯಾದ ಪ್ರಥಮ ಘಂಟೆಯ ಘೋಷದೊಂದಿಗೆ ಜೊತೆಗಿದ್ದರೂ, ಅವರ ಪ್ರವೇಶ ಸಂಗೀತವು ಲಿಂಪ್ ಬಿಸ್ಕಿಟ್‌ರ "ರೋಲಿನ್' (ಏರ್ ರೈಯ್ಡ್ ವೆಹಿಕಲ್)" ಹಾಗೂ ಕಿಡ್ ರಾಕ್‌ರ "ಅಮೇರಿಕನ್ ಬ್ಯಾಡ್ ಆಸ್" (ಇದರಿಂದಾಗಿ ಅಂಡರ್‌ಟೇಕರ್‌ರ ಹೊಸ ತಂತ್ರದ ಹೆಸರು ಹುಟ್ಟಿಕೊಂಡಿತು)ನಂತಹಾ ಆ ಕಾಲದ ಸುಪ್ರಸಿದ್ಧ ಗೀತೆಗಳಿಗೆ ಬದಲಾಯಿತು.

೨೦೦೦ ನೇ ಇಸವಿಯ ಮೇ ತಿಂಗಳಿನಲ್ಲಿ ಪುನರಾಗಮನದ ನಂತರ, ಮೆಕ್‌ಮಹನ್‌-ಹೆಲ್ಮ್‌ಸ್ಲೆರವರ ಗುಂಪಿನಲ್ಲಿದ್ದವರನ್ನು ಸೋಲಿಸಿ, ಇದರಿಂದಾಗಿ ಮತ್ತೊಮ್ಮೆ ಅವರು ತನ್ನ ಅಭಿಮಾನಿ ಬಳಗವನ್ನು ಪಡೆದುಕೊಂಡರು. ಅಷ್ಟೇ ಅಲ್ಲದೆ ಆತ ಅವರ ನಾಯಕನಾದ WWF ಚಾಂಪಿಯನ್‌ ಟ್ರಿಪಲ್‌ Hನ್ನು ಗುರಿಯಾಗಿಸಿಕೊಂಡರು. ಕಿಂಗ್ ಆಫ್ ದಿ ರಿಂಗ್‌ ಪಂದ್ಯದಲ್ಲಿ, ಅಂಡರ್‌ಟೇಕರ್‌ ದಿ ರಾಕ್‌ ಹಾಗೂ ಕೇನ್‌ ಜೊತೆ ಸೇರಿಕೊಂಡು ಟ್ರಿಪಲ್‌ H, ಶೇನ್‌ ಮೆಕ್‌ಮಹನ್‌, ಹಾಗೂ ವಿನ್ಸ್‌ ಮೆಕ್‌ಮಹನ್‌ರ ತಂಡವನ್ನು ಸೋಲಿಸಿದರು.[೨೫] ಅದರ ನಂತರ, ಅವರನ್ನು WWF ಟ್ಯಾಗ್‌ ಟೀಮ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಭಾಗವಹಿಸಲು ಕೇನ್‌ರಿದ್ದ ತಂಡಕ್ಕೆ ನೇಮಿಸಲಾಯಿತು. ಅವರು ಎಡ್ಜ್‌ ಹಾಗೂ ಕ್ರಿಶ್ಚಿಯನ್‌ರನ್ನು ಸೋಲಿಸಿ, ಅವರ ಜೊತೆ ಬರುವ ವಾರ ನಡೆಯುತ್ತಿದ್ದ ಟ್ಯಾಗ್ ಪದವಿಗಾಗಿ ಹೋರಾಡಲು ಅರ್ಹತೆಗಳಿಸಿದರೂ, ಆದರೆ ಎಡ್ಜ್‌ ಹಾಗೂ ಕ್ರಿಶ್ಚಿಯನ್‌ ಅದನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಸಫಲರಾದರು. ಆಗಸ್ಟ್‌ ೧೪ ರಂದು ನಡೆದ ರಾ ಈಸ್ ವಾರ್‌ ನ ಕಂತಿನಲ್ಲಿ ಕೇನ್‌ರು ಅಂಡರ್‌ಟೇಕರ್‌ಗೆ ಎರಡು ಬಾರಿ ಘಟ್ಟಿಸುವಿಕೆಯ ಪ್ರಹಾರ ನೀಡಿ ವಂಚಿಸಿದರು.[೨೬] ಈ ಘಟನೆಯು ಸಮ್ಮರ್‌ಸ್ಲ್ಯಾಮ್‌ನಲ್ಲಿ ಮತ್ತೊಂದು ಪಂದ್ಯ ನಡೆಸಲು ಕಾರಣವಾಯಿತು, ಹಾಗೂ ಇದರಲ್ಲಿ ಅಂಡರ್‌ಟೇಕರ್‌ ಕೇನ್‌ರ ಮುಖವಾಡವನ್ನು ತೆಗೆದುಹಾಕಿದ್ದರಿಂದಾಗಿ, ಕೇನ್‌ ಪಲಾಯನ ಮಾಡಿದ್ದರಿಂದ ಅದು ಶೂನ್ಯ ಫಲಿತಾಂಶದ ಪಂದ್ಯವಾಯಿತು.[೨೫]

ಇದಾದ ನಂತರ WWF ಚಾಂಪಿಯನ್‌ಷಿಪ್‌ನ ಸರ್ವೈವರ್ ಸರಣಿಯಲ್ಲಿ ತನ್ನೊಂದಿಗೆ ಹೋರಾಡುವಂತೆ ಅಂಡರ್‌ಟೇಕರ್‌ ಕುರ್ತ್‌ ಆಂಗಲ್‌‌ರಿಗೆ ಸವಾಲು ಹಾಕಿದರು.[೨೭] ಆಂಗಲ್‌, ತನ್ನ ನಿಜ ಜೀವನದ ಸಹೋದರ ಎರಿಕ್ ಆಂಗಲ್‌ ಜೊತೆ ಸೇರಿಕೊಂಡಿದ್ದರಿಂದಾಗಿ ಕುರ್ತ್‌ ಅಂಡರ್‌ಟೇಕರ್‌ರನ್ನು ಸೋಲಿಸಿದರು. ಅರ್ಮಗೆಡನ್‌ನಲ್ಲಿ ಅಂಡರ್‌ಟೇಕರ್‌ರು ಹಕ್ಕೊತ್ತಾಯ ಮಾಡಿದ್ದರ ಪರಿಣಾಮ WWF ಚಾಂಪಿಯನ್‌ಷಿಪ್‌ಗಾಗಿ ಆರು ಜನರು ಪಾಲ್ಗೊಂಡ ಹೆಲ್ ಇನ್ ಎ ಸೆಲ್‌ ಪಂದ್ಯವನ್ನು ಆರಂಭಿಸಿದರು. ಅಂಡರ್‌ಟೇಕರ್‌ ಯಾರೊ ಒಬ್ಬರನ್ನು "ಪ್ರಸಿದ್ಧ" ಮಾಡುವುದಾಗಿ ವಚನ ನೀಡಿದ್ದು, ಘಟ್ಟಿಸುವಿಕೆಯಿಂದ ರಿಕಿಷಿಯನ್ನು ಅಖಾಡದ ಮೇಲ್ಛಾವಣಿ ಮುಟ್ಟುವಂತೆ ಎತ್ತಿ ಎಸೆದು ಅದನ್ನವರು ಪೂರೈಸಿದರು.[೨೭]

ಅಂಡರ್‌ಟೇಕರ್‌ ಬ್ರದರ್ಸ್ ಆಫ್ ಡಿಸ್ಟ್ರಕ್ಷನ್‌ಗಾಗಿ ೨೦೦೧ ರಲ್ಲಿ, ಕೇನ್‌ ಜೊತೆ ಮತ್ತೆ ಒಂದಾದರು, ಹಾಗೂ ಮತ್ತೊಮ್ಮೆ WWF ಟ್ಯಾಗ್‌ ಟೀಮ್‌ ಚಾಂಪಿಯನ್‌ಷಿಪ್‌ನಲ್ಲಿ ಸವಾಲನ್ನು ಒಡ್ಡಿದರು. ನೋ ವೇ ಔಟ್‌ನಲ್ಲಿ ಅವರು, ಎಡ್ಜ್‌ ಹಾಗೂ ಕ್ರಿಶ್ಚಿಯನ್‌ರನ್ನು ಹಾಗೂ ನಂತರ ಟೇಬಲ್ಸ್‌ ಪಂದ್ಯದಲ್ಲಿ ಚಾಂಪಿಯನ್‌ಗಳಾದ ಡೂಡ್ಲಿ ಬಾಯ್ಸ್‌ರನ್ನು ಎದುರಿಸಿ ಪ್ರಶಸ್ತಿಯ ಪಡೆಯುವಿಕೆಯಲ್ಲಿ ಸರಿಯಾದ ಪೆಟ್ಟು ತಿಂದರು. ಬ್ರದರ್ಸ್ ಆಫ್ ಡಿಸ್ಟ್ರಕ್ಷನ್‌ ಮೊದಲು ಸಂಪೂರ್ಣ ಪಂದ್ಯದಲ್ಲಿ ಮೇಲುಗೈ ಸಾಧಿಸಿದರಾದರೂ ಅವರಿಂದ ಜಯ ಗಳಿಸಲು ಆಗಲಿಲ್ಲ.[೨೭] ನಂತರ ರೆಸಲ್‌ಮೇನಿಯಾ X-ಸೆವೆನ್‌/ಏಳು ಪಂದ್ಯದಲ್ಲಿ ಅಂಡರ್‌ಟೇಕರ್‌ ಟ್ರಿಪಲ್‌ Hರನ್ನು ಸೋಲಿಸಲು ನೇಮಕಗೊಂಡು, ತನ್ನ ರೆಸಲ್‌ಮೇನಿಯಾ ಗೆಲುವಿನ ಗೆರೆಯನ್ನು ೯–೦ ಕ್ಕೆ ಹೆಚ್ಚಿಸಿಕೊಂಡರು.[೧೩] ಅವರು ಹಾಗೂ ಕೇನ್‌ ತಮ್ಮ ಕಥಾಭಾಗದಲ್ಲಿ ಟ್ರಿಪಲ್‌ H ಗಮನ ಕೇಂದ್ರೀಕರಿಸಿ, ಅವರು WWF ಚಾಂಪಿಯನ್‌ ಸ್ಟೋನ್‌ ಕೋಲ್ಡ್ ಸ್ಟೀವ್‌ ಆಸ್ಟಿನ್‌ ಜೊತೆ "ವಿಸ್ಮಯ ಮೈತ್ರಿ" ಮಾಡಿಕೊಂಡರು. ಟ್ರಿಪಲ್‌ H ಹಾಗೂ ಆಸ್ಟಿನ್‌ ಜೊತೆ ತಮ್ಮ ಪ್ರಶಸ್ತಿಗಳಿಗಾಗಿ ಹೋರಾಟ ನಡೆಸಲು ಬ್ರದರ್ಸ್ ಆಫ್ ಡಿಸ್ಟ್ರಕ್ಷನ್‌ಗೆ ಅವಕಾಶ ಮಾಡಿಕೊಟ್ಟರು. ಅಂಡರ್‌ಟೇಕರ್‌ ಹಾಗೂ ಕೇನ್‌ WWF ಟ್ಯಾಗ್ ಪ್ರಶಸ್ತಿಯನ್ನು ಎಡ್ಜ್‌ ಹಾಗೂ ಕ್ರಿಶ್ಚಿಯನ್‌ರಿಂದ ಕಸಿದುಕೊಂಡ ನಂತರ,[೨೮] ಟ್ರಿಪಲ್‌ H ಕೇನ್‌ರಿಗೆ ಬ್ಯಾಕ್‌‌ಲ್ಯಾಷ್‌ ಪಂದ್ಯದಲ್ಲಿ ಚಮ್ಮಟಿಗೆಯಿಂದ ಏಟು ಹಾಕಿ ಘಟ್ಟಿಸಿದರು, ಇದರಿಂದಾಗಿ ಬ್ರದರ್ಸ್ ಆಫ್ ಡಿಸ್ಟ್ರಕ್ಷನ್‌ ತಮ್ಮ ಪದವಿಯನ್ನು ಬಿಡಬೇಕಾಯಿತು.[೨೯] ಕೇನ್‌ ಗಾಯಗೊಂಡರೂ, ಅಂಡರ್‌ಟೇಕರ್‌ ತಮ್ಮ WWF ಚಾಂಪಿಯನ್‌ಷಿಪ್‌ ಪಡೆಯಲು ಸ್ಟೀವ್‌ ಆಸ್ಟಿನ್‌ ಜೊತೆ ಸಂಕ್ಷಿಪ್ತ ಹೋರಾಟ ನಡೆಸಿದರು, ಆದರೆ ಜಡ್ಜ್‌ಮೆಂಟ್‌‌ ಡೇ ಪಂದ್ಯದಲ್ಲಿ, ಆಸ್ಟಿನ್‌ ತಮ್ಮ ಪದವಿಯನ್ನು ಉಳಿಸಿಕೊಳ್ಳಲು ಶಕ್ತರಾದರು.[೨೯]

"ದ ಇನ್‌ವೇಷನ್‌"ನ ಕಥಾಭಾಗದಲ್ಲಿ, ಅಂಡರ್‌ಟೇಕರ್‌ ತಮ್ಮ ಪತ್ನಿಯಾದ ಸಾರಾಳನ್ನು ನಿರಂತರವಾಗಿ ಪೀಡಿಸುತ್ತಿದ್ದ ಡೈಮಂಡ್ ಡಲ್ಲಾಸ್ ಪೇಜ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಕಾತರಿಸುತ್ತಿದ್ದರು.[೨೯] ಸಮ್ಮರ್‌ಸ್ಲ್ಯಾಮ್‌ನಲ್ಲಿ, WCW ಟ್ಯಾಗ್‌ ಟೀಮ್‌ ಚಾಂಪಿಯನ್‌ಗಳಾದ ಅಂಡರ್‌ಟೇಕರ್‌ ಹಾಗೂ ಕೇನ್‌ ಪೇಜ್‌ ಹಾಗೂ ಅವರ ಸಹಭಾಗಿಯಾದ ಕ್ರಿಸ್ ಕೇನ್ಯನ್‌ರನ್ನು ಉಕ್ಕಿನ ಪಂಜರದ ಪಂದ್ಯದಲ್ಲಿ ಸೋಲಿಸಿ WWF ಟ್ಯಾಗ್‌ ಟೀಮ್‌ ಚಾಂಪಿಯನ್‌ಷಿಪ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.[೨೯] ಸರ್ವೈವರ್ ಸರಣಿಯಲ್ಲಿ, ಅಂಡರ್‌ಟೇಕರ್‌ ತಮ್ಮ ವಿರೋಧಿಗಳಾದ ದ ಅಲಯನ್ಸ್‌ನ ಸ್ಟೀವ್‌ ಆಸ್ಟಿನ್‌, ಬೂಕರ್‌ T, ರಾಬ್ ವಾನ್ ಡಾಮ್‌, ಶೇನ್‌ ಮೆಕ್‌ಮಹನ್‌, ಹಾಗೂ ಕುರ್ತ್‌ ಆಂಗಲ್‌‌ರನ್ನು (೨೦೦ ೬ ನೇ ಇಸವಿಯಲ್ಲಿ ಕೇನ್‌ ಜೊತೆ ಅಂಡರ್‌ಟೇಕರ್‌ ಕೊನೆಯ ಬಾರಿಗೆ ಆಡಿದ ಪಂದ್ಯ) ಸೋಲಿಸುವ ಸಲುವಾಗಿ ಕೇನ್‌, ದಿ ರಾಕ್‌, ಕ್ರಿಸ್ ಜೆರಿಕೊ, ಹಾಗೂ ದಿ ಬಿಗ್ ಷೋರ ಜೊತೆ ಸೇರಿದರು. ಆಸ್ಟಿನ್‌ರ ಮಧ್ಯಪ್ರವೇಶದಿಂದಾಗಿ ಆಂಗಲ್‌ ಅಂಡರ್‌ಟೇಕರ್‌ರನ್ನು ನೆಲಕಚ್ಚಿಸಿದರು.[೨೯] ದ ಅಲಯನ್ಸ್‌‌ರನ್ನು ಸೋಲಿಸಿದ ನಂತರ, ಅಂಡರ್‌ಟೇಕರ್‌ ನಿರೂಪಕ ಜಿಮ್ ರಾಸ್‌ರನ್ನು ವಿನ್ಸ್‌ ಮೆಕ್‌ಮಹನ್‌ರ ಪೃಷ್ಠಕ್ಕೆ ಮುತ್ತು ನೀಡುವಂತೆ ಮಾಡಿ ಮತ್ತೊಮ್ಮೆ ದುರುಳ ಎಂದು ಎನಿಸಿಕೊಂಡರು.[೩೦] ಇದು ಅಂಡರ್‌ಟೇಕರ್‌, ತನ್ನ ಉದ್ದವಾದ ಕೂದಲನ್ನು ಕತ್ತರಿಸಿ ಚಿಕ್ಕದಾಗಿ ಮಾಡಿ ಹೊಸ ರೂಪ ಪಡೆದ ನಂತರದ "ಬಿಗ್ ಈವಿಲ್‌" ಎಂಬ ಹೆಸರಿನ ಪಾತ್ರದ ಆರಂಭವಾಗಿತ್ತು. ವೆಂಜಿಯೆನ್ಸ್‌ ಪಂದ್ಯದಲ್ಲಿ, ಅಂಡರ್‌ಟೇಕರ್‌ ವಾನ್ ಡಾಮ್‌ರನ್ನು ಸೋಲಿಸಿ WWF ಹಾರ್ಡ್‌ಕೋರ್ ಚಾಂಪಿಯನ್‌ಷಿಪ್‌ ಪಟ್ಟವನ್ನು ತನ್ನದಾಗಿಸಿಕೊಂಡರು.[೩೧]

ಅಂಡರ್‌ಟೇಕರ್‌ ತನ್ನ "ಬಿಗ್ ಈವಿಲ್‌" ರೂಪದಲ್ಲಿ

ಅಂಡರ್‌ಟೇಕರ್‌ 2002ನೇ ಇಸವಿಯಲ್ಲಿ ನಡೆದ ರಾಯಲ್ ರಂಬಲ್‌ನಲ್ಲಿ ಮಾವೆನ್ ಅವರನ್ನು ಹಿಂದಿನಿಂದ ಬೆನ್ನಿಗೆ ಬಲವಾಗಿ ಒದ್ದು ಅವರನ್ನು ಸೋಲಿಸಿದ್ದರಿಂದ, ಅವರ ಮುಂದಿನ ಕಥಾಭಾಗ ಪ್ರಾರಂಭವಾಯಿತು. ತರುವಾಯದಲ್ಲಿ, ಅದಕ್ಕೆ ಪ್ರತಿಯಾಗಿ ಮಾವೆನ್‌ರನ್ನು ಪಂದ್ಯದಲ್ಲಿ ಹೊರಗಟ್ಟಿದ ಅಂಡರ್‌ಟೇಕರ್‌ ತೆರೆಯಹಿಂದೆ ಕೂಡಾ ಅವರನ್ನು ಅತ್ಯುಗ್ರವಾಗಿ ಥಳಿಸಿದರು.[೩೧] ಸ್ಮ್ಯಾಕ್‌ಡೌನ್‌! ನ ಕಂತಿನಲ್ಲಿ, ರಾಯಲ್ ರಂಬಲ್ ಸ್ಪರ್ಧೆಯಿಂದ ಅಂಡರ್‌ಟೇಕರ್‌ರನ್ನು ತೆಗೆದುಹಾಕಲಾಗಿದೆ ಎಂದು ದಿ ರಾಕ್‌ ತಿಳಿಸಿದ್ದರಿಂದ, ಅಂಡರ್‌ಟೇಕರ್‌ ಕೋಪಗೊಂಡರು. ಇದಕ್ಕೆ ಅಂಡರ್‌ಟೇಕರ್‌ ಪ್ರತಿಕ್ರಿಯಿಸಿದುದರಿಂದ, ದಿ ರಾಕ್‌ರು WWF ಅನ್‌ಡಿಸ್ಪ್ಯೂಟೆಡ್‌ ಚಾಂಪಿಯನ್‌ಷಿಪ್‌ನ ಪ್ರಥಮ ಸ್ಥಾನದ ಪ್ರತಿಸ್ಪರ್ಧಿ ಎಂಬ ಬಿರುದನ್ನು ಕಳೆದುಕೊಳ್ಳಬೇಕಾಯಿತು.[೩೨] ಈ ಕಥಾಭಾಗ ಹೀಗೆಯೇ ಮುಂದುವರಿದು ದಿ ರಾಕ್‌ರಿಂದಾಗಿ ಅಂಡರ್‌ಟೇಕರ್‌ ಹಾರ್ಡ್‌ಕೋರ್‌ ಚಾಂಪಿಯನ್‌ಷಿಪ್‌ ಪಂದ್ಯವನ್ನು ಮಾವೆನ್‌ರೆದುರು ಸೋತರು.[೩೩] ಇಬ್ಬರೂ ಸ್ಪರ್ಧಿಸಿದ್ದ ನೋ ವೇ ಔಟ್‌ನಲ್ಲಿ ರಿಕ್ ಫ್ಲೇರ್‌ರ ಮಧ್ಯಪ್ರವೇಶದಿಂದ ಅಂಡರ್‌ಟೇಕರ್‌ ಸೋಲನಪ್ಪಿದ್ದರು.[೩೧] ಈ ಮಧ್ಯಪ್ರವೇಶವು ಫ್ಲೇಯ್ರ್‌‌ರೊಂದಿಗೆ ಮತ್ತೊಂದು ಕಥೆಯನ್ನು ಹುಟ್ಟುಹಾಕಿತು, ರೆಸಲ್‌ಮೇನಿಯಾ X8[೩೪] ರಲ್ಲಿ ಅವರು ಅಂಡರ್‌ಟೇಕರ್‌ರೊಂದಿಗೆ ಪಂದ್ಯ ಆಡಲು ತಿರಸ್ಕರಿಸಿದರು, ಹಾಗೂ ಇದರ ಪರಿಣಾಮವಾಗಿ, ಅಂಡರ್‌ಟೇಕರ್‌ ಅವರ ಮಗ ಡೇವಿಡ್ ಫ್ಲೇಯ್ರ್‌ರ ಮೇಲೆ ಹಲ್ಲೆ ನಡೆಸಿದರು‌.[೩೫] ಅಂಡರ್‌ಟೇಕರ್‌ ಫ್ಲೇಯ್ರ್‌‌ರ ಮಗಳಿಗೂ ಅದೇ ರೀತಿಯಲ್ಲಿ ಶಿಕ್ಷಿಸುವುದಾಗಿ ಹೇಳಿ ಬೆದರಿಸಿದ್ದರಿಂದಾಗಿ ಫ್ಲೇಯ್ರ್‌ ಪಂದ್ಯವನ್ನಾಡಲು ಅಂತಿಮವಾಗಿ ಒಪ್ಪಿಕೊಳ್ಳಬೇಕಾಯಿತು.[೩೫] ಪಂದ್ಯದಲ್ಲಿ ಅಂಡರ್‌ಟೇಕರ್‌ ಮೇಲೆ ಯಾವುದೇ ಅನರ್ಹತೆಯ ನಿಯಮಗಳನ್ನು ಹೇರಲಿಲ್ಲವಾದ್ದರಿಂದ ಅವರು ಫ್ಲೇಯ್ರ್‌‌ರನ್ನು ಸೋಲಿಸಿದರು.[೧೩]

ಫ್ಲೇಯ್ರ್‌‌ರೊಂದಿಗೆ ಜಟಾಪಟಿ ನಡೆಸಿದ ನಂತರ, ಅಂಡರ್‌ಟೇಕರ್‌ ಬ್ಯಾಕ್‌ಲ್ಯಾಷ್‌ ಪಂದ್ಯದಲ್ಲಿ ಸ್ಟೋನ್‌ ಕೋಲ್ಡ್ ಸ್ಟೀವ್‌ ಆಸ್ಟಿನ್‌ರನ್ನು ಸೋಲಿಸಿ WWF ಅನ್‌ಡಿಸ್ಪ್ಯೂಟೆಡ್ ಚಾಂಪಿಯನ್‌ಷಿಪ್‌ನ ಒಂದನೇ ಸ್ಥಾನದ ಸಮರ್ಥ ಪ್ರತಿಸ್ಪರ್ಧಿ ಎಂದೆನಿಸಿಕೊಂಡರು. ಮರುರಾತ್ರಿಯಲ್ಲಿ, ಅನ್‌ಡಿಸ್ಪ್ಯೂಟೆಡ್‌‌ ಚಾಂಪಿಯನ್‌ ಟ್ರಿಪಲ್‌ H ವಿರುದ್ಧ ಹೋರಾಡಿ ತನ್ನ ಪದವಿಯನ್ನು ಪಡೆಯಲು ಹಲ್ಕ್‌ ಹೋಗನ್‌ರಿಗೆ ಸಹಕರಿಸಿದನು.[೩೧] ಆನಂತರದಲ್ಲಿ, ಜಡ್ಜ್‌ಮೆಂಟ್‌ ಡೇದಂದು ತನ್ನ ನಾಲ್ಕನೇ ವಿಶ್ವ ಚಾಂಪಿಯನ್‌ಷಿಪ್‌ ಪಟ್ಟಕ್ಕಾಗಿ ಅಂಡರ್‌ಟೇಕರ್‌ ಹೋಗನ್‌ರನ್ನು ಸೋಲಿಸಿದರು.[೩೬] ಜುಲೈ 1ನೇ ತಾರೀಖಿನಂದು ರಾ ಪಂದ್ಯದ ಕಂತಿನಲ್ಲಿ, ಅಂಡರ್‌ಟೇಕರ್‌ ಜೆಫ್‌ ಹಾರ್ಡಿರನ್ನು ಲ್ಯಾಡರ್ ಪಂದ್ಯದಲ್ಲಿ ಸೋಲಿಸಿ ಹಾರ್ಡಿಯವರ ಕೈಯನ್ನು ಗೌರವಪೂರ್ವಕವಾಗಿ ಮೇಲೆತ್ತಿ ತನ್ನ ಅಭಿಮಾನಿ ಬಳಗವನ್ನು ಪುನಃ ಪಡೆದುಕೊಂಡರು. ಹಾಗಿದ್ದೂ, ದಿ ರಾಕ್‌ನೊಂದಿಗೆ ಕುರ್ತ್‌ ಆಂಗಲ್‌ ಕೂಡ ಭಾಗವಹಿಸಿದ್ದ ವೆಂಜಿಯನ್ಸ್‌ಟ್ರಿಪಲ್ ತ್ರೆಟ್ ಪಂದ್ಯ ಎಂಬ ಪಂದ್ಯದಲ್ಲಿ ಅಂಡರ್‌ಟೇಕರ್‌ ಪ್ರಶಸ್ತಿಯನ್ನು ಕಳೆದುಕೊಳ್ಳಬೇಕಾಯಿತು.[೩೬] ಅಂದಿನ ರಾ ಮಾಜಿ ಪ್ರತಿಭಾನ್ವಿತರಾದ ಬ್ರೊಕ್ ಲೆಸ್ನರ್‌, ಕ್ರಿಸ್ ಬೆನಾಯ್ಟ್, ಹಾಗೂ ಎಡ್ಡೀ ಗುಯೆರೆರೊರೊಂದಿಗೆ ಅಂಡರ್‌ಟೇಕರ್‌ ರಾನಿಂದ ಸ್ಮ್ಯಾಕ್‌ಡೌನ್‌! ಸ್ಪರ್ಧೆಗಳಿಗೆ ಬದಲಾದರು. ಅಂಡರ್‌ಟೇಕರ್‌ ತನ್ನೊಂದಿಗೆ ಅನ್‌ಫರ್ಗೀವನ್‌ನ ಪ್ರಶಸ್ತಿಗಾಗಿ ಲೆಸ್ನರ್‌ ಸವಾಲೊಡ್ಡಿದರು ಆದರೆ ಆ ಪಂದ್ಯದಲ್ಲಿ ಇಬ್ಬರನ್ನೂ ಅನರ್ಹಗೊಳಿಸಲಾಯಿತು.[೩೬] ಅವರ ದ್ವೇಷವು ಹೆಲ್ ಇನ್ ಎ ಸೆಲ್‌ ಪಂದ್ಯದ ನೋ ಮರ್ಸಿಯಲ್ಲಿ ಕೂಡ ಮುಂದುವರಿಯಿತು. ಅಂಡರ್‌ಟೇಕರ್‌ ಪಂದ್ಯದಲ್ಲಿ ನಿಜವಾಗಿಯೂ ಮುರಿದ ಕೈನಿಂದ ಹೋರಾಟ ನಡೆಸಿ ಚಾಂಪಿಯನ್‌ರಿಗೆ ಪಂದ್ಯವನ್ನು ಸೋತರು.[೩೬]

ದಿ ಬಿಗ್ ಷೋನಿಂದ ದ್ವೇಷ ಹುಟ್ಟಿಸುವ ರೀತಿಯಲ್ಲಿ ಅವರನ್ನು ವೇದಿಕೆಯಿಂದ ಎಸೆದದ್ದರಿಂದಾಗಿ ಅಂಡರ್‌ಟೇಕರ್‌, ರೆಸ್ಲಿಂಗ್‌ನಿಂದ ಕೆಲವು ಕಾಲ ದೂರವುಳಿದಿದ್ದರು.[೩೭] ಅಂಡರ್‌ಟೇಕರ್‌ 2003ನೇ ಇಸವಿಯಲ್ಲಿ ನಡೆದ ರಾಯಲ್ ರಂಬಲ್ ಸ್ಪರ್ಧೆಯಲ್ಲಿ ಮರಳಿಬಂದರು.[೩೮] ಅವರು ತಕ್ಷಣವೇ ಬಿಗ್ ಷೋರ ಮೇಲೆ ತನ್ನ ದ್ವೇಷವನ್ನು ಮುಂದುವರೆಸಿ ನೋ ವೇ ಔಟ್‌ ಪಂದ್ಯದಲ್ಲಿ ಟ್ರೈಯಾಂಗಲ್ ಚೋಕ್‌ನಿಂದ ಅವರನ್ನು ಸೋಲಿಸಿದರು. ಪಂದ್ಯ ಮುಗಿದ ನಂತರ ಅಂಡರ್‌ಟೇಕರ್‌ ಮೇಲೆ A-ಟ್ರೈನ್‌ ದಾಳಿಮಾಡಲು ಯತ್ನಿಸಿದರು, ಆಷ್ಟರಲ್ಲಿ ನಾಥನ್ ಜೋನ್ಸ್‌ ಅವರಿಗೆ ಸಹಾಯ ಮಾಡಿದರು.[೩೮] ಅಂಡರ್‌ಟೇಕರ್‌ ಜೋನ್ಸ್‌ರಿಗೆ ಕುಸ್ತಿಯಾಡಲು ಕಲಿಸಿದರು, ಹಾಗೂ ಇಬ್ಬರೂ ಜೊತೆಯಾಗಿ ರೆಸಲ್‌ಮೇನಿಯಾ XIXರಲ್ಲಿ ನಡೆದ ಟ್ಯಾಗ್‌ ಟೀಮ್‌ ಪಂದ್ಯದಲ್ಲಿ ಬಿಗ್ ಷೋ ಹಾಗೂ A-ಟ್ರೈನ್‌ ವಿರುದ್ಧ ಹೋರಾಡಲು ತೀರ್ಮಾನಿಸಿದಾಗ ಈ ಕಥಾಭಾಗವು ಅಲ್ಲಿಂದ ಪುನಃ ಆರಂಭವಾಯಿತು.[೧೩] ಹಾಗಿದ್ದರೂ, ಪಂದ್ಯ ನಡೆಯುವುದಕ್ಕೂ ಮುಂಚೆಯೇ ಜೋನ್ಸ್‌ರನ್ನು, ತೆಗೆದುಹಾಕಿ ಪಂದ್ಯವನ್ನು ಏಕಾಂಗಿಯಾಗಿ ಹೋರಾಡುವಂತೆ ಮಾಡಿದರೂ, ಅಂಡರ್‌ಟೇಕರ್‌ ಜೋನ್ಸ್‌ ಸಹಾಯದಿಂದ ಗೆಲುವು ಸಾಧಿಸಿದರು.[೩೮]

ಆ ವರ್ಷದ ಉಳಿದ ದಿನಗಳಲ್ಲಿ, ಅವರಿಗೆ ಎರಡು WWE ಚಾಂಪಿಯನ್‌ಷಿಪ್‌ ಪಂದ್ಯಗಳನ್ನಾಡಲು ಅವಕಾಶಗಳನ್ನು ನೀಡಿದರು. ಪ್ರಥಮ ಬಾರಿಗೆ, ಸೆಪ್ಟೆಂಬರ್‌ 4ನೇ ತಾರೀಖಿನಂದು ನಡೆದ ಸ್ಮ್ಯಾಕ್‌ಡೌನ್‌! ನಲ್ಲಿ, ಕುರ್ತ್‌ ಆಂಗಲ್‌ ವಿರುದ್ಧ, ನಡೆದ ಪಂದ್ಯವು ಬ್ರೊಕ್ ಲೆಸ್ನರ್‌ರ ಮಧ್ಯಪ್ರವೇಶದಿಂದಾಗಿ ಶೂನ್ಯ ಫಲಿತಾಂಶದ ಸ್ಪರ್ಧೆಯಾಯಿತು.[೩೯] ಎರಡನೇ ಬಾರಿಗೆ, ನೋ ಮರ್ಸಿಯಲ್ಲಿ, ಅಂಡರ್‌ಟೇಕರ್‌ ಹಾಗೂ ಲೆಸ್ನರ್‌ ನಡುವೆ ನಡೆದ ಬೈಕರ್ ಚೈನ್‌ ಪಂದ್ಯದಲ್ಲಿ, ಲೆಸ್ನರ್‌ ವಿನ್ಸ್‌ ಮೆಕ್‌ಮಹನ್‌ರ ಸಹಾಯ ಪಡೆದು ಗೆಲುವು ಸಾಧಿಸಿದರು.[೪೦] ಈ ಪಂದ್ಯವು ಮೆಕ್‌ಮಹನ್‌ರೊಂದಿಗೆ ಹಗೆ ಸಾಧಿಸಲು ಕಾರಣವಾಯಿತು, ಸರ್ವೈವರ್ ಸರಣಿಯಲ್ಲಿ ಇದು ಮತ್ತಷ್ಟು ಹೆಚ್ಚಾಗಿ ಮೆಕ್‌ಮಹನ್‌ ವಿರುದ್ಧದ ಬ್ಯುರೀಡ್ ಅಲೈವ್‌ ಪಂದ್ಯದಲ್ಲಿ ಕೇನ್‌ರ ಮಧ್ಯಪ್ರವೇಶ ಅಂಡರ್‌ಟೇಕರ್‌ ಪಂದ್ಯದಲ್ಲಿ ಸೋಲಲು ಕಾರಣವಾಯಿತು.[೪೦] "ಪಂದ್ಯದ ನಂತರ ಕೆಲವು ಕಾಲ ಅಂಡರ್‌ಟೇಕರ್‌ ಕಾಣೆಯಾದರು, ಇದಕ್ಕೆ ಕೇನ್‌ "ಅವರು ಸತ್ತುಹೋಗಿದ್ದು ಶಾಶ್ವತವಾಗಿ ಸಮಾಧಿ ಮಾಡಲಾಗಿದೆ" ಎಂದು ಹೇಳಿಕೆ ನೀಡಿದ್ದರು.[೪೧]

ಡೆಡ್‌ಮ್ಯಾನ್‌ನ ಪುನರಾಗಮನ (2004–2006)[ಬದಲಾಯಿಸಿ]

ರೆಸಲ್‌ಮೇನಿಯಾ XXರಲ್ಲಿ ಈ ಕಥೆಯು ಮತ್ತಷ್ಟು ಮುಂದೆ ಹೋಗಿ, ಕೇನ್‌ರನ್ನು ಮುಖಪತ್ರಗಳು ನೆರಳಿನಂತೆ ಕಾಡುತ್ತಾರೆ ಇದು ಅಂಡರ್‌ಟೇಕರ್‌ರು ಮರಳಿ ಬಂದಿದ್ದಾರೆ ಎಂಬುದನ್ನು ಸೂಚಿಸುತ್ತವೆ. ಪ್ರಥಮ ಬಾರಿಗೆ ರಾಯಲ್ ರಂಬಲ್‌ ಸ್ಪರ್ಧೆಯಲ್ಲಿ ಅಂಡರ್‌ಟೇಕರ್‌ರ ಘಂಟೆ ಸದ್ದು ಮೊಳಗಿದ್ದು, ಕೇನ್‌ರನ್ನು ತಬ್ಬಿಬ್ಬಾಗಿಸಿತು ಹಾಗೂ ಬೂಕರ್‌ T ಅವರನ್ನು ಸೋಲಿಸಿದರು.[೪೦] ರೆಸಲ್‌ಮೇನಿಯಾ XXರಲ್ಲಿ, ಅಂಡರ್‌ಟೇಕರ್‌, ಪೌಲ್ ಬೇರರ್‌ ಜೊತೆಗೆ ತನ್ನ "ಡೆಡ್‌ಮ್ಯಾನ್‌" ರೂಪದಲ್ಲಿ, ಮರುಕಳಿಸಿ ಕೇನ್‌ರನ್ನು ಸೋಲಿಸಿದರು.[೪೨] ಮೂರು ತಿಂಗಳ ನಂತರ, ಪೌಲ್ ಹೇಮನ್‌ರ ನಿರ್ದೇಶನದ ಮೇರೆಗೆ ಡೂಡ್ಲಿ ಬಾಯ್ಸ್‌ ಬೇರರ್‌‌ರನ್ನು ಅಪಹರಿಸಿದರು,[೪೩] ಹಾಗೂ ನಂತರದಲ್ಲಿ ಅಂಡರ್‌ಟೇಕರ್‌ರನ್ನೂ ಸಹ "ನಿಯಂತ್ರಿಸಿದರು".[೪೪] ದಿ ಗ್ರೇಟ್ ಅಮೇರಿಕನ್‌ ಬ್ಯಾಷ್ ಪಂದ್ಯದಲ್ಲಿ ಅಂಡರ್‌ಟೇಕರ್‌ ಪಂದ್ಯದಲ್ಲಿ ಸೋತರೆ, ಹೇಮನ್‌ ಬೇರರ್‌‌ರನ್ನು ಸಿಮೆಂಟಿನಲ್ಲಿ ಸಮಾಧಿಮಾಡಿಬಿಡುತ್ತಾರೆ ಎನ್ನುವ ಕಾರಣಕ್ಕಾಗಿ ಡೂಡ್ಲಿಸ್‌ರ ವಿರುದ್ಧ ಪ್ರತಿಬಂಧಕ ಪಂದ್ಯವನ್ನು ಆಡಿದರು. ಅಂಡರ್‌ಟೇಕರ್‌ ಗೆದ್ದರೂ, ಆತ ಕೇವಲ ಹೊರೆಯಾಗಿದ್ದು ತನಗಿನ್ನು ಯಾವುದೇ ರೀತಿಯಲ್ಲಿಯೂ ಕೆಲಸಕ್ಕೆ ಬಾರದವರು ಎಂದು ತಿಳಿಸಿ ಬೇರರ್‌ರನ್ನು ಸಮಾಧಿ ಮಾಡಲಾಯಿತು.[೪೨]

ಸ್ಮ್ಯಾಕ್‌ಡೌನ್‌!ನ ಕಂತಿನಲ್ಲಿ ಅಂಡರ್‌ಟೇಕರ್‌ ಪ್ರವೇಶ ಮಾಡುತ್ತಿರುವುದು

ಡೂಡ್ಲಿ ಬಾಯ್ಸ್‌ರನ್ನು ಸೋಲಿಸಿದ ನಂತರ, ಅಂಡರ್‌ಟೇಕರ್‌ WWE ಚಾಂಪಿಯನ್ ಜಾನ್ "ಬ್ರಾಡ್‌ಷಾ" ಲೇಫೀಲ್ಡ್‌ (JBL)ರಿಗೆ ಸಮ್ಮರ್‌ಸ್ಲ್ಯಾಮ್‌ನ ಪ್ರಶಸ್ತಿ ಪಂದ್ಯ ಆಡುವಂತೆ ಸವಾಲು ಹಾಕಿದರು, ಆದರೆ ಅದರಲ್ಲಿ ಅಂಡರ್‌ಟೇಕರ್‌‌ ಅನರ್ಹಗೊಂಡು ಪಂದ್ಯವನ್ನು ಸೋತರು.[೪೨] ನೋ ಮರ್ಸಿಯಲ್ಲಿ, ಅಂಡರ್‌ಟೇಕರ್‌ ಹಾಗೂ JBL ಪ್ರಥಮ ಬಾರಿಗೆ"ಲಾಸ್ಟ್ ರೈಡ್" ಪಂದ್ಯದಲ್ಲಿ ಭಾಗವಹಿಸಿದರು, ಹೇಡೆನ್‌ರೀಚ್‌ರ ಮಧ್ಯ ಪ್ರವೇಶದಿಂದಾಗಿ ಅಂಡರ್‌ಟೇಕರ್‌ ಪಂದ್ಯದಲ್ಲಿ ಸೋಲನ್ನಪ್ಪಿದರು.[೪೨] ಹೇಡೆನ್‌ರಿಚ್‌‌ರೊಂದಿಗಿನ ಈ ಸಂಕ್ಷಿಪ್ತ ಕಾರ್ಯಕ್ರಮದ ನಂತರ,[೪೫] ಅಂಡರ್‌ಟೇಕರ್‌ ತನ್ನ ಗಮನವನ್ನು ಪುನಃ WWE ಚಾಂಪಿಯನ್‌ಷಿಪ್‌ನತ್ತ ಕೇಂದ್ರೀಕರಿಸಿದರು. ಎಡ್ಡೀ ಗುಯೆರೆರೊ ಹಾಗೂ ಬೂಕರ್‌ T ಜೊತೆಯಾಗಿ, ಅವರು ಅರ್ಮಗೆಡನ್‌ನ ಫ್ಯಾಟಲ್‌ ಫೋರ್-ವೇ ಚಾಂಪಿಯನ್‌ಷಿಪ್‌ನ ಪುನರ್‌ಪಂದ್ಯದಲ್ಲಿ, ಭಾಗವಹಿಸುವಂತೆ ಸವಾಲೆಸೆದರು, ಆದರೆ ಮತ್ತೆ ಹೇಡೆನ್‌ರಿಚ್‌‌‌ರ ಮಧ್ಯ ಪ್ರವೇಶದಿಂದಾಗಿ ಅಂಡರ್‌ಟೇಕರ್‌ ಸೋಲನ್ನಪ್ಪಿದರು.[೪೫] ಈ ದ್ವೇಷವು ಮತ್ತಷ್ಟು ಹೆಚ್ಚಾಗಿ ರಾಯಲ್ ರಂಬಲ್‌ನ ಕ್ಯಾಸ್ಕೆಟ್‌ ಪಂದ್ಯದಲ್ಲಿ ಅಂಡರ್‌ಟೇಕರ್‌ ಹಾಗೂ ಹೇಡೆನ್‌ರಿಚ್‌‌ ನಡುವೆ ನಡೆದ ಪಂದ್ಯದಲ್ಲಿ, ಅಂಡರ್‌ಟೇಕರ್‌ ಹೇಡೆನ್‌ರಿಚ್‌‌ರನ್ನು ಪೆಟ್ಚಿಗೆಯಲ್ಲಿ ದಿಗ್ಭಂದಿಸಿ ವಿಜಯ ಸಾಧಿಸಿದರು.[೪೫]

ಇದಾದ ನಂತರ, ರೆಸಲ್‌ಮೇನಿಯಾ ೨೧ರಲ್ಲಿ ರಾಂ(ರ್ಯಾಂ)ಡಿ ಆರ್ಟನ್‌ ಅಂಡರ್‌ಟೇಕರ್‌ಗೆ ಸವಾಲು ಹಾಕಿದರು, ಈ ಕಥಾಭಾಗದಲ್ಲಿ, ಆರ್ಟನ್‌ ಅಂಡರ್‌ಟೇಕರ್‌ರ ರೆಸಲ್‌ಮೇನಿಯಾ ಗೆಲುವನ್ನು ಕೊನೆಗೊಳಿಸುವುದು ತಾನೆ ಎಂದು ಘೋಷಿಸುತ್ತಾರೆ.[೪೬] ತನ್ನ ತಂದೆ "ಕೌಬಾಯ್‌" ಬಾಬ್‌ ಆರ್ಟನ್‌ರ ಸಹಾಯ ಪಡೆದ ನಂತರವೂ, ರ್ಯಾಂಡಿ ಸೋತು, ಹಾಗೂ ಅಂಡರ್‌ಟೇಕರ್‌ ತನ್ನ ರೆಸಲ್‌ಮೇನಿಯಾ ಸಾಧನೆಗಳನ್ನು ೧೩–೦ ಗೆ ಏರಿಸಿಕೊಳ್ಳುತ್ತಾರೆ.[೪೫] ಜೂನ್‌ ೧೬ ರಂದು ನಡೆದ ಸ್ಮ್ಯಾಕ್‌ಡೌನ್‌! ಸ್ಪರ್ಧೆಯ ಕಂತಿನಲ್ಲಿ ಮರಳುತ್ತಾರೆ ಆದರೆ ಪಂದ್ಯದಲ್ಲಿ ರಾಂ(ರ್ಯಾಂ)ಡಿ ಆರ್ಟನ್‌ರ ಮಧ್ಯಪ್ರವೇಶದಿಂದ JBLರ ಎದುರು ಸೋಲನ್ನಪ್ಪುತ್ತಾರೆ.[೪೭] ದಿ ಗ್ರೇಟ್ ಅಮೇರಿಕನ್‌ ಬ್ಯಾಷ್‌ ಸ್ಪರ್ಧೆಯ ನಂತರ, ವರ್ಲ್ಡ್ ಹೆವಿವೈಟ್ ಚಾಂಪಿಯನ್‌ಷಿಪ್‌ನ ಆಟಗಾರರ ಪೈಕಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಳ್ಳಬೇಕೆಂದು ಆಸೆ ಪಟ್ಟಿದ್ದ JBL ಬದಲಿಗೆ, ಪ್ರಥಮ ಸ್ಥಾನವನ್ನು ಅಂಡರ್‌ಟೇಕರ್‌ ತನ್ನದಾಗಿಸಿಕೊಳ್ಳುತ್ತಾರೆ. ದ್ವೇಷದ ಭಾಗವಾಗಿ, ಮುಂದಿನ ಸ್ಮ್ಯಾಕ್‌ಡೌನ್‌! ಸ್ಪರ್ಧೆಯಲ್ಲಿ, ಮತ್ತೊಮ್ಮೆ ಆರ್ಟನ್‌ರ ಮಧ್ಯಪ್ರವೇಶದಿಂದ ಅಂಡರ್‌ಟೇಕರ್‌ ತನ್ನ ಸ್ಥಾನವನ್ನು JBLರಿಗೆ ಬಿಟ್ಟುಕೊಡಬೇಕಾಗಿ ಬರುತ್ತದೆ.[೪೮] ಇದರಿಂದಾಗಿ, ಅಂಡರ್‌ಟೇಕರ್‌ ಆರ್ಟನ್‌ರೊಂದಿಗಿನ ದ್ವೇಷವನ್ನು ಮುಂದುವರಿಸುತ್ತಾರೆ. ಸಮ್ಮರ್‌ಸ್ಲ್ಯಾಮ್‌ನಲ್ಲಿ ನಡೆದ ರೆಸಲ್‌ಮೇನಿಯಾದ ಮರುಪಂದ್ಯದಲ್ಲಿ ಆರ್ಟನ್‌ ಅಂಡರ್‌ಟೇಕರ್‌ರನ್ನು ಸೋಲಿಸುತ್ತಾರೆ.[೪೯] ಈ ಕಥಾಭಾಗವು ತೀವ್ರತರದಲ್ಲಿ ಹೆಚ್ಚಿತು ಕ್ಯಾಸ್ಕೆಟ್‌ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಹಂಗಿಸಿಕೊಳ್ಳುತ್ತಾರೆ, ಇದರಿಂದಾಗಿ ನೋ ಮರ್ಸಿಯ ಕ್ಯಾಸ್ಕೆಟ್‌ ಪಂದ್ಯವನ್ನು ಏರ್ಪಡಿಸಲಾಯಿತು, ಅದರಲ್ಲಿ ಅಂಡರ್‌ಟೇಕರ್‌ ರ್ಯಾಂಡಿ ಹಾಗೂ ಆತನ ತಂದೆ "ಕೌಬಾಯ್‌" ಬಾಬ್ ಆರ್ಟನ್‌ರ ಎದುರು ಸೋಲಬೇಕಾಯಿತು.[೪೯] ಈ ಪಂದ್ಯದ ನಂತರ, ಆರ್ಟನ್‌ ಕ್ಯಾಸ್ಕೆಟ್‌ಗೆ ಗ್ಯಾಸೋಲಿನ್‌/ಪೆಟ್ರೋಲ್‌‌ ಸುರಿದು ಬೆಂಕಿ ಹಚ್ಚುತ್ತಾನೆ. ಅದೆಲ್ಲಾ ಆದ ನಂತರ ಸಂಪೂರ್ಣವಾಗಿ ಕರಕಲಾದ ಪೆಟ್ಟಿಗೆಯನ್ನು ತೆರೆದು ನೋಡಿದಾಗ, ಅಂಡರ್‌ಟೇಕರ್‌ ಮತ್ತೊಮ್ಮೆ ಅಲ್ಲಿಂದ ಅದೃಶ್ಯನಾಗಿದ್ದರು. ಧಗಧಗಿಸುತ್ತಿರುವ ಪೆಟ್ಟಿಗೆಯಿಂದ ಆಗಮಿಸುವ ಮೂಲಕ ಅವರು ಸರ್ವೈವರ್ ಸರಣಿಯಲ್ಲಿ ಮರಳಿ ಬಂದರು.[೫೦] ಅಂಡರ್‌ಟೇಕರ್‌ ಡಿಸೆಂಬರ್‌ ತಿಂಗಳ ಆರಂಭದಲ್ಲಿ ಸ್ಮ್ಯಾಕ್‌ಡೌನ್‌! ಸ್ಪರ್ಧೆಗೆ ಮರಳಿದ್ದುದು ಆರ್ಟನ್‌ರನ್ನು ಸೋಲಿಸುವ ಸಲುವಾಗಿ, ನಂತರ ಅರ್ಮಗೆಡನ್‌ನಲ್ಲಿ ಹೆಲ್ ಇನ್ ಎ ಸೆಲ್‌ ಪಂದ್ಯವನ್ನು ಏರ್ಪಡಿಸಿದರು.[೫೧] ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ,[೫೦] ರೆಸ್ಲಿಂಗ್‌ನಲ್ಲಿ ಕ್ಯಾಲವೆ ಸ್ವಲ್ಪ ಮಟ್ಟಿಗೆ ಬಿಡುವು ತೆಗೆದುಕೊಂಡರು.

ಅಂಡರ್‌ಟೇಕರ್‌ ರೆಸಲ್‌ಮೇನಿಯಾ ೨೨ ರಲ್ಲಿ ತನ್ನ ಬಿರುದನ್ನು ಉಳಿಸಿಕೊಂಡಿದ್ದು.

2006ನೇ ಇಸವಿಯ ಆರಂಭದಲ್ಲಿ ನಡೆದ ರಾಯಲ್ ರಂಬಲ್ ಸ್ಪರ್ಧೆಯಲ್ಲಿ, ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ನಡೆದ ಪಂದ್ಯದಲ್ಲಿ ಕುರ್ತ್‌ ಆಂಗಲ್‌ ಕುದುರೆಗಾಡಿಯಲ್ಲಿ ಬಂದ ಮಾರ್ಕ್‌ ಹೆನ್ರಿಯನ್ನು ಸೋಲಿಸಿ ತನ್ನ ಪಟ್ಟವನ್ನು ರಕ್ಷಿಸಿಕೊಂಡ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪದವಿ ಪಡೆಯುವ ಸಂಜ್ಞೆಯೊಂದಿಗೆ ಅಂಡರ್‌ಟೇಕರ್‌ ಮರಳಿ ಬಂದರು. ಈ ಕಥಾಭಾಗದ ದ್ವೇಷದ ಭಾಗದಲ್ಲಿ, ನೋ ವೇ ಔಟ್‌ ಪಂದ್ಯದಲ್ಲಿ ಅಂಡರ್‌ಟೇಕರ್‌ ಮೂವತ್ತು ನಿಮಿಷಗಳ ಆಟದ ನಂತರ ಆಂಗಲ್‌‌ರಿಗೆ ಸೋತರು. ಪಂದ್ಯ ಮುಗಿದ ನಂತರ ಅಂಡರ್‌ಟೇಕರ್‌ ಆಂಗಲ್‌‌ರನ್ನು ಸುತ್ತುವರಿದರು, ಹಾಗೂ ಮೆಟ್ಟಿಲುಗಳನ್ನು ಇಳಿದ ನಂತರ, ಆಂಗಲ್‌‌ರನ್ನು ಕುರಿತು ತನ್ನ ಸ್ಥಾನವನ್ನು ತಾನು ಉಳಿಸಿಕೊಂಡಿದ್ದು ನಿನ್ನೊಂದಿಗೆ ಮಾಡಬೇಕಾಗಿರುವುದು ಇನ್ನೂ ಹಾಗೆಯೇ ಇದೆ ಎಂದು ತಿಳಿಸುತ್ತಾರೆ. ಅಂಡರ್‌ಟೇಕರ್‌ ನೋ ವೇ ಔಟ್‌ನ ಸ್ಮ್ಯಾಕ್‌ಡೌನ್‌! ವರ್ಲ್ಡ್ ಹೆವಿವೈಟ್ ಚಾಂಪಿಯನ್‌ಷಿಪ್‌ಗಾಗಿ ನಡೆದ ಮರುಪಂದ್ಯದಲ್ಲಿ ಆಂಗಲ್‌ ವಿರುದ್ಧ ಸೆಣಸಬೇಕಾದರೆ ಹೆನ್ರಿ ಹಿಂದಿನಿಂದ ದಾಳಿನಡೆಸಿದ್ದರ ಪರಿಣಾಮ ಅಂಡರ್‌ಟೇಕರ್‌ ಪ್ರಶಸ್ತಿಯನ್ನು ಕಳೆದುಕೊಳ್ಳಬೇಕಾಯಿತು. ಇದರಿಂದಾಗಿ ಇಬ್ಬರಲ್ಲೂ ಬಿರುಕು ಮೂಡಿ, ರೆಸಲ್‌ಮೇನಿಯಾ ೨೨ರಲ್ಲಿ ಅಂಡರ್‌ಟೇಕರ್‌ ಹೆನ್ರಿಗೆ ಕ್ಯಾಸ್ಕೆಟ್‌ ಪಂದ್ಯವಾಡುವಂತೆ ಸವಾಲು ಹಾಕಿದರು, ಹಾಗೂ ವರ್ಷದ ಹಿಂದೆ ಆರ್ಟನ್‌ ಮಾಡಿದಂತೆಯೇ ಹೆನ್ರಿ ಕೂಡ, ಅಂಡರ್‌ಟೇಕರ್‌ರ ರೆಸಲ್‌ಮೇನಿಯಾ ಗೆಲುವಿನ ಗೆರೆಯನ್ನು ಕೊನೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿದರು. ಅಂಡರ್‌ಟೇಕರ್‌ ಹೆನ್ರಿಯನ್ನು ಸೋಲಿಸಿ ರೆಸಲ್‌ಮೇನಿಯಾದಲ್ಲಿ ೧೪-೦ಯತ್ತ ಮುನ್ನಡೆ ಸಾಧಿಸಿ, ಈ ಕಥಾಭಾಗದಲ್ಲಿ ತನ್ನದಿನ್ನೂ ಅಪರಾಜಿತ ರೇಖೆ ಎನ್ನುವುದನ್ನು ಸಾಬೀತುಪಡಿಸಿದರು. ಸ್ಮ್ಯಾಕ್‌ಡೌನ್‌!ನ ಮುಂದಿನ ಭಾಗದಲ್ಲಿ ನಡೆದ ಮರುಪಂದ್ಯದ ವೇಳೆ, ದಿ ಗ್ರೇಟ್ ಖಲಿ ಇದರಲ್ಲಿ ಪ್ರಥಮ ಬಾರಿಗೆ ಪ್ರವೇಶ ಮಾಡಿದರು ಹಾಗೂ ಅಂಡರ್‌ಟೇಕರ್‌ ಮೇಲೆ ಹಲ್ಲೆ ನಡೆಸಿದರು, ಪಂದ್ಯದಲ್ಲಿ ಆ ಕಥಾಭಾಗಕ್ಕೆ ಅಂತ್ಯ ಹಾಡಿ ಹೊಸದೊಂದನ್ನು ಹುಟ್ಟುಹಾಕಿದರು.

ಜಡ್ಜ್‌‌ಮೆಂಟ್‌‌‌ ಡೇನಲ್ಲಿ ಅಂಡರ್‌ಟೇಕರ್‌ ಖಲಿಯೊಂದಿಗೆ ಹೋರಾಡುತ್ತಾರೆ ಎಂದು ಥಿಯೋಡರ್ ಲಾಂಗ್ ಸವಾಲು ಹಾಕಿದ್ದುದು ಮೇ ೫ ನೇ ತಾರೀಖಿನಂದು ನಡೆದ ಸ್ಮ್ಯಾಕ್‌ಡೌನ್‌! ಸ್ಪರ್ಧೆಯ ತನಕ ಅಂಡರ್‌ಟೇಕರ್‌ಗೆ ಇನ್ನೂ ತಿಳಿದಿರಲಿಲ್ಲ.[೫೨] ಅಂಡರ್‌ಟೇಕರ್‌ ಖಲಿಯೊಂದಿಗೆ ಹೋರಾಡಿ ಸೋತರು,[೫೩][೫೪] ಹಾಗೂ ಅದರ ನಂತರ ನಡೆದ ಸ್ಮ್ಯಾಕ್‌ಡೌನ್‌! ನ ಮತ್ತೊಂದು ಕಂತಿನ ತನಕ ಅವರು ಕಾಣಿಸಿಕೊಳ್ಳದೆ ಜುಲೈ ೪ ನೇ ತಾರೀಖಿನಂದು ಅವರು ದಿ ಗ್ರೇಟ್ ಅಮೇರಿಕನ್‌ ಬ್ಯಾಷ್‌ನಲ್ಲಿ ಖಲಿ ಪಂಜಾಬಿ ಪ್ರಿಸನ್‌ ಪಂದ್ಯವನ್ನಾಡುವ ಸವಾಲನ್ನು ಒಪ್ಪಿಕೊಂಡರು.[೫೫] ಖಲಿರ ಬದಲಿಗೆ ECW ಚಾಂಪಿಯನ್‌ ಆದ ದಿ ಬಿಗ್ ಷೋನನ್ನು ಆ ಪಂದ್ಯದಲ್ಲಿ ಸೇರಿಸಿಕೊಂಡರು, ಹಾಗಿದ್ದರೂ, ಅಂಡರ್‌ಟೇಕರ್‌ ವಿಜಯ ಸಾಧಿಸಿದರು. ಈ ಕಥೆಯಲ್ಲಿ, ಟೆಡ್ಡಿ ಲಾಂಗ್‌ ಆದರೆ ಪಂದ್ಯಕ್ಕೂ ಮುಂಚೆ ಅಂಡರ್‌ಟೇಕರ್‌ ಮೇಲೆ ಹಲ್ಲೆ ನಡೆಸಿದ್ದರಿಂದಾಗಿ ಶಿಕ್ಷೆಯಾಗಿ ಖಲಿಯ ಬದಲಿಗೆ ಬಿಗ್ ಷೋರನ್ನು ಸೇರಿಸಿದರು.[೫೩] ನಂತರದಲ್ಲಿ ಖಲಿ, ಅಂಡರ್‌ಟೇಕರ್‌ ಹಾಗೂ ವರ್ಲ್ಡ್‌ ಹೆವಿವೈಯ್ಟ್ ಚಾಂಪಿಯನ್ ಕಿಂಗ್‌ ಬೂಕರ್‌ ನಡುವಿನ ಪಂದ್ಯದಲ್ಲಿ ಮಧ್ಯಪ್ರವೇಶಿಸಿದುದರಿಂದ ಸಮ್ಮರ್‌ಸ್ಲ್ಯಾಮ್‌ಲಾಸ್ಟ್‌ ಮ್ಯಾನ್ ಸ್ಟ್ಯಾಂಡಿಂಗ್ ಪಂದ್ಯದಲ್ಲಿ ತನ್ನೊಂದಿಗೆ ಹೋರಾಡುವಂತೆ ಸವಾಲು ಪಡೆದರು.[೫೬] ಖಲಿ ಸಮ್ಮರ್‌ಸ್ಲ್ಯಾಮ್‌ ನಲ್ಲಿ ಆಡಲು ತಿರಸ್ಕರಿಸಿದರೂ ಅದರ ಬದಲಿಗೆ ಲಾಂಗ್‌ ಆಗಸ್ಟ್‌ 18ನೇ ತಾರೀಖಿನಲ್ಲಿ ನಡೆದ ಸ್ಮ್ಯಾಕ್‌ಡೌನ್‌! ಕಂತಿನಲ್ಲಿ ಪಂದ್ಯವನ್ನು ನಡೆಸಲು ತೀರ್ಮಾನಿಸಿದರು. ಅಂಡರ್‌ಟೇಕರ್‌ ಖಲಿಗೆ ಉಕ್ಕಿನ ಕುರ್ಚಿಗಳಿಂದ ಹೊಡೆಯುತ್ತಾ, ಕುರ್ಚಿಯಿಂದ ಹಲವಾರು ಹೊಡೆತಗಳನ್ನು ಹೊಡೆದು, ಹಾಗೂ ಆತನನ್ನು ಘಟ್ಟಿಸಿ ಕೆಡವಿಹಾಕಿ ಜಯ ಗಳಿಸಿದರು.[೫೭]

ಬ್ರದರ್ಸ್ ಆಫ್ ಡಿಸ್ಟ್ರಕ್ಷನ್‌ ಪುನರ್‌ಸೇರ್ಪಡೆ (2006–2007)[ಬದಲಾಯಿಸಿ]

ಬ್ರದರ್ಸ್ ಆಫ್ ಡಿಸ್ಟ್ರಕ್ಷನ್‌ ಪುನರ್‌ಸೇರ್ಪಡೆ

ಅಂಡರ್‌ಟೇಕರ್‌ ತಮ್ಮ ಮುಂದಿನ ಪಂದ್ಯ ನೋ ಮರ್ಸಿಯಲ್ಲಿ WWE ಯುನೈಟೆಡ್‌ ಸ್ಟೇಟ್ಸ್‌ ಚಾಂಪಿಯನ್‌ Mr. ಕೆನ್ನಡಿಯೊಂದಿಗೆ ನಡೆಸಿದರು ಆದರೆ ಕೆನ್ನಡಿಗೆ ಚಾಂಪಿಯನ್‌ಷಿಪ್‌ ಬೆಲ್ಟ್‌ನಿಂದ ಹೊಡೆದದ್ದರಿಂದಾಗಿ ಪಂದ್ಯದಿಂದ ಅನರ್ಹಗೊಂಡರು.[೫೮] ನವೆಂಬರ್‌ 3ನೇ ತಾರೀಖಿನಲ್ಲಿ ನಡೆದ ಸ್ಮ್ಯಾಕ್‌ಡೌನ್‌! ಸ್ಪರ್ಧೆಯ ಕಂತಿನಲ್ಲಿ, ಐದು ವರ್ಷಗಳ ನಂತರ ಪ್ರಥಮ ಬಾರಿಗೆ ಅಂಡರ್‌ಟೇಕರ್‌ ಕೇನ್‌ರೊಂದಿಗೆ ಮತ್ತೊಮ್ಮೆ ಒಂದಾಗಿ ಬ್ರದರ್ಸ್ ಆಫ್ ಡಿಸ್ಟ್ರಕ್ಷನ್‌ ಎಂಬುದನ್ನು ಆರಂಭಿಸಿ, ವಿರೋಧಿ ತಂಡದಲ್ಲಿದ್ದುಕೊಂಡು ಸೆಣಸುತ್ತಿರುವ ಹಾಗೂ ಕೇನ್‌ ಆ ಕಾಲದಲ್ಲಿ ಹಗೆ ಸಾಧಿಸುತ್ತಿದ್ದ Mr. ಕೆನ್ನಡಿ ಹಾಗೂ MVPರನ್ನು ಸೋಲಿಸಿದರು.[೫೯] ಈ ಕಥಾಭಾಗದ ಅಂಗವಾಗಿ ಕೆನ್ನಡಿ, ಸರ್ವೈವರ್ ಸರಣಿಫಸ್ಟ್ ಬ್ಲಡ್ ಪಂದ್ಯದಲ್ಲಿ MVP ಮಧ್ಯಪ್ರವೇಶದ ನಂತರ ಅಂಡರ್‌ಟೇಕರ್‌ರನ್ನು ಸೋಲಿಸಿದರು,[156] ಆದರೆ ಕೊನೆಗೆ ಅರ್ಮಗೆಡನ್‌ನ ಲಾಸ್ಟ್ ರೈಡ್ ಪಂದ್ಯದಲ್ಲಿ ಕೆನ್ನಡಿರನ್ನು ಸೋಲಿಸಿದರು.[೫೮] ಕೆನ್ನಡಿರವರು ಅಂಡರ್‌ಟೇಕರ್‌ರ ರಾಯಲ್ ರಂಬಲ್‌ನಲ್ಲಿ ಚಾಂಪಿಯನ್‌ಷಿಪ್‌ಗಾಗಿ ನಡೆದ ಪಂದ್ಯದ ಎರಡು ವರ್ಲ್ಡ್ ಹೆವಿವೈಟ್ ಚಾಂಪಿಯನ್‌ಷಿಪ್‌ ಪಟ್ಟ ಪಡೆದುಕೊಳ್ಳುವ ಅವಕಾಶಗಳನ್ನು ಕಳೆದುಕೊಳ್ಳುವಂತೆ ಮಾಡಿದ್ದರಿಂದಾಗಿ ಅವರಿಬ್ಬರ ವೈರತ್ವ ಮತ್ತಷ್ಟು ಹೆಚ್ಚಾಗಿ 2007ನೇ ಇಸವಿಯಲ್ಲಿ ಮುಂದುವರೆಯಿತು.[೬೦][೬೧]

ವರ್ಲ್ಡ್‌ ಹೆವಿವೈಯ್ಟ್ ಚಾಂಪಿಯನ್ (2007–2008)[ಬದಲಾಯಿಸಿ]

ಅಂಡರ್‌ಟೇಕರ್‌ 2007ನೇ ಇಸವಿಯಲ್ಲಿ ನಡೆದ ರಾಯಲ್ ರಂಬಲ್ ಪಂದ್ಯವನ್ನು ಪ್ರಥಮ ಬಾರಿಗೆ ಜಯಗಳಿಸಿದರು [೬೧] ಹಾಗೂ 30ನೇ ಸ್ಥಾನದಲ್ಲಿ ಪ್ರವೇಶಿಸಿ ಪಂದ್ಯವನ್ನು ಜಯಿಸಿದ ಪ್ರಥಮ ವ್ಯಕ್ತಿಯಾದರು.[೬೨] ಅವರು ನಂತರದಲ್ಲಿ ಬಟಿಸ್ಟಾ ಜೊತೆ ತನ್ನ ಕಥಾಭಾಗವನ್ನು ಆರಂಭಿಸಿದರು, ರೆಸಲ್‌ಮೇನಿಯಾ 23ರಲ್ಲಿ ಅವರನ್ನು ಸೋಲಿಸಿ ಪ್ರಥಮ ಬಾರಿಗೆ ವರ್ಲ್ಡ್ ಹೆವಿವೈಟ್ ಚಾಂಪಿಯನ್‌ಷಿಪ್‌ ಪಟ್ಟವನ್ನು ತನ್ನದಾಗಿಸಿಕೊಂಡರು. ಬ್ಯಾಕ್‌ಲ್ಯಾಷ್‌ನ ಲಾಸ್ಟ್ ಮ್ಯಾನ್ ಸ್ಟ್ಯಾಂಡಿಗ್ ಪಂದ್ಯದಲ್ಲಿ, ಅವರು ಮರುಪಂದ್ಯ ಆಡಿ ಕೊನೆಯಲ್ಲಿ ಹತ್ತು ಎಣಿಕೆ ಮಾಡುವಾಗ ಯಾರೊಬ್ಬರೂ ಉತ್ತರಿಸಲಿಲ್ಲವಾದ್ದರಿಂದ ಪಂದ್ಯವನ್ನು ಸರಿಸಮ ಮಾಡಿಕೊಂಡರು, ಇದರಿಂದಾಗಿ ಅಂಡರ್‌ಟೇಕರ್‌ ತನ್ನ ಚಾಂಪಿಯನ್‌ಷಿಪ್‌ ಪಟ್ಟವನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಸಾಧ್ಯವಾಯಿತು. ಮೇ 11ನೇ ತಾರೀಖಿನಂದು ಸ್ಮ್ಯಾಕ್‌ಡೌನ್‌! ಕಂತಿನಲ್ಲಿ, ಅಂಡರ್‌ಟೇಕರ್‌ ಹಾಗೂ ಬಟಿಸ್ಟಾ ಉಕ್ಕಿನ ಪಂಜರದ ಪಂದ್ಯದಲ್ಲಿ ಭಾಗವಹಿಸಿದರು ಆದರೆ ಅವರಿಬ್ಬರೂ ಒಂದೇ ಸಮಯಕ್ಕೆ ಪ್ರಜ್ಞೆ ಕಳೆದುಕೊಂಡಿದ್ದರಿಂದಾಗಿ ಪಂದ್ಯ ಸರಿಸಮವಾಯಿತು. ಪಂದ್ಯ ಮುಗಿದ ನಂತರ, ಮಾರ್ಕ್‌ ಹೆನ್ರಿ ಮರಳಿಬಂದು ಅಂಡರ್‌ಟೇಕರ್‌ ಮೇಲೆ ಹಲ್ಲೆ ನಡೆಸಿದರು. ಹಲ್ಲೆ ನಡೆದ ಮರುಕ್ಷಣದಲ್ಲಿಯೇ, ಅದನ್ನೇ ಸಮಯಕ್ಕಾಗಿ ಕಾಯುತ್ತಿದ್ದ ಎಡ್ಜ್‌ ಮನಿ ಇನ್‌ ದ ಬ್ಯಾಂಕ್ ಟೈಟಲ್ ಷಾಟ್‌ ನೀಡಿದರು, ಹಾಗೂ ಅಂಡರ್‌ಟೇಕರ್‌ ವಿಶ್ವ ಹೆವಿವೈಟ್ ಚಾಂಪಿಯನ್‌ಷಿಪ್‌ ಪಟ್ಟವನ್ನು ಎಡ್ಜ್‌ಗೆ ಬಿಟ್ಟುಕೊಡಬೇಕಾಯಿತು. ಅಂಡರ್‌ಟೇಕರ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಖಾಡದಲ್ಲಿ ಮಲಗಿದ್ದಾಗ, ಮಾಂತ್ರಿಕರು ಅವರನ್ನು ತೆರೆಯ ಹಿಂಭಾಗಕ್ಕೆ ಎತ್ತಿಕೊಂಡು ಹೋದರು.

ರೆಸಲ್‌ಮೇನಿಯಾ XXIVರಲ್ಲಿ ಅಂಡರ್‌ಟೇಕರ್‌ ಎಡ್ಜ್‌ರನ್ನು ಸೋಲಿಸಿದ ನಂತರ.

ಕ್ಯಾಲವೇರು ಚೇತರಿಸಿಕೊಳ್ಳುವ ಸಂದರ್ಭದಲ್ಲಿ, ಹೆನ್ರಿ ಲೋಕಲ್ ಜಾಬರ್ಸ್‌ರನ್ನು ಬಹುಬೇಗನೆ ಸೋಲಿಸಿದರು ಹಾಗೂ ವರ್ಣಚಿತ್ರಗಳು ದಿ ಅಂಡರ್‌ಟೇಕರ್‌ರ ಪುನರಾಗಮನವನ್ನು ತಿಳಿಸುವ ತನಕ ಅಂಡರ್‌ಟೇಕರ್‌ ಮೇಲೆ ತಾನು ನಡೆಸಿದ ಹಲ್ಲೆಯನ್ನು ಜಂಬದಿಂದ ಹೇಳಿಕೊಳ್ಳುತ್ತಿದ್ದರು. ಅಂಡರ್‌ಟೇಕರ್‌ ಪುನರಾಗಮಿಸಿ ಅನ್‌ಫರ್ಗೀವನ್‌ನಲ್ಲಿ ಹಾಗೂ ಎರಡು ವಾರಗಳ ನಂತರ ನಡೆದ ಸ್ಮ್ಯಾಕ್‌ಡೌನ್‌! ನಲ್ಲಿ ಕೂಡ, ಹೆನ್ರಿಯನ್ನು ಯಶಸ್ವಿಯಾಗಿ ಸೋಲಿಸಿದರು.[೬೩] ಬಟಿಸ್ಟಾ ಹಾಗೂ ಅಂಡರ್‌ಟೇಕರ್‌ ತಮ್ಮ ವೈರತ್ವವನ್ನು ಸೈಬರ್ ಸಂಡೇಯಲ್ಲಿ ಪುನಃ ಆರಂಭಿಸಿದರು ಹಾಗೂ ಅಭಿಮಾನಿಗಳು ವಿಶೇಷ ಆಹ್ವಾನಿತ ರೆಫರಿಯಾಗಿ ಸ್ಟೋನ್‌ ಕೋಲ್ಡ್ ಸ್ಟೀವ್‌ ಆಸ್ಟಿನ್‌ರನ್ನು ಆಯ್ಕೆ ಮಾಡಿದರು, ಆದರೆ ಬಟಿಸ್ಟಾ ಆ ಪಟ್ಟವನ್ನು ತಮ್ಮಲ್ಲಿಯೇ ಉಳಿಸಿಕೊಂಡರು.[೬೪] ಸರ್ವೈವರ್ ಸರಣಿಯ ಹೆಲ್ ಇನ್ ಎ ಸೆಲ್‌ನಲ್ಲಿ ಮತ್ತೊಮ್ಮೆ ಹೋರಾಡುವ ಸಂದರ್ಭದಲ್ಲಿ ಎಡ್ಜ್‌ ಪುನರಾಗಮಿಸಿದರು ಹಾಗೂ ಬಟಿಸ್ಟಾರಿಗೆ ಸಹಾಯ ಮಾಡುವ ಉದ್ದೇಶದಿಂದ ಮಧ್ಯಪ್ರವೇಶಿಸಿ ವರ್ಲ್ಡ್ ಹೆವಿವೈಟ್ ಚಾಂಪಿಯನ್‌ಷಿಪ್‌ ಪಟ್ಟವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಸಹಕರಿಸಿದರು.[೬೫] ಇದಕ್ಕೆ ಪ್ರತ್ಯುತ್ತರವಾಗಿ ಮುಂದಿನ ಸ್ಮ್ಯಾಕ್‌ಡೌನ್‌! ನಲ್ಲಿ ಅಂಡರ್‌ಟೇಕರ್‌, ಮುಖ್ಯ ನಿರ್ವಾಹಕಿಯಾದ ವಿಕಿ ಗುಯೆರ್ರೆರೊರಿಗೆ ಟೂಂಬ್‌ಸ್ಟೋನ್‌ ಪಿಲಿಡ್ರೈವರ್‌ ಪ್ರಹಾರ ನೀಡಿ ಅವರು ಆಸ್ಪತ್ರೆಗೆ ಸೇರುವಂತೆ ಮಾಡಿದರು. ಸಹಾಯಕ ಮುಖ್ಯ ನಿರ್ವಾಹಕರಾದ ಥಿಯೋಡರ್ ಲಾಂಗ್ ಮರಳಿಬಂದು ಆ ಪದವಿಗಾಗಿ ಅರ್ಮಗೆಡನ್‌ನಲ್ಲಿ ಟ್ರಿಪಲ್ ಥ್ರೆಟ್ ಪಂದ್ಯವನ್ನು ಘೋಷಿಸಿದರು, ಅದನ್ನು ಎಡ್ಜ್‌ ತಮ್ಮದಾಗಿಸಿಕೊಂಡರು.

[[ಅಂಡರ್‌ಟೇಕರ್‌ ರೆಸಲ್‌ಮೇನಿಯಾ XXIVರಲ್ಲಿ ನಡೆದ ಎಡ್ಜ್‌ರ ವರ್ಲ್ಡ್ ಹೆವಿವೈಟ್ ಚಾಂಪಿಯನ್‌ಷಿಪ್‌ನ ನೋ ವೇ ಔಟ್‌|ಅಂಡರ್‌ಟೇಕರ್‌ ರೆಸಲ್‌ಮೇನಿಯಾ XXIVರಲ್ಲಿ ನಡೆದ ಎಡ್ಜ್‌ರ ವರ್ಲ್ಡ್ ಹೆವಿವೈಟ್ ಚಾಂಪಿಯನ್‌ಷಿಪ್‌ನ ನೋ ವೇ ಔಟ್‌]]‌ನಲ್ಲಿ, ಎಲಿಮಿನೇಷನ್ ಕೊಠಡಿಯಲ್ಲಿ ಫಿನ್ಲೆ, ಬಟಿಸ್ಟಾ, ದಿ ಗ್ರೇಟ್‌ ಖಲಿ, ಮಾಂಟೆಲ್ ವಾಂಟಾವಿಯಸ್ ಪೋರ್ಟರ್, ಹಾಗೂ ಬಿಗ್ ಡ್ಯಾಡಿ Vರನ್ನು ಸೋಲಿಸಿ ಒಂದನೇ ಸ್ಥಾನದ ಪ್ರತಿಸ್ಪರ್ಧಿಯಾಗಿ ನಿಂತರು. ರೆಸಲ್‌ಮೇನಿಯಾದಲ್ಲಿ ತನ್ನ "ಹೆಲ್ಸ್‌ ಗೇಟ್" ಎಂಬ ಅವತಾರದಿಂದ ಎಡ್ಜ್‌ರನ್ನು ಸೋಲಿಸಿ, ತನ್ನ ಎಡರನೇ ವರ್ಲ್ಡ್ ಹೆವಿವೈಟ್ ಚಾಂಪಿಯನ್‌ಷಿಪ್‌ ಪಟ್ಟವನ್ನು ಕೂಡ ತಮ್ಮದಾಗಿಸಿಕೊಂಡು ರೆಸಲ್‌ಮೇನಿಯಾದಲ್ಲಿ ತಮ್ಮ ಗೆಲುವಿನ ಸರಮಾಲೆಯನ್ನು 16–0ಕ್ಕೆ ಹೆಚ್ಚಿಸಿಕೊಂಡರು.[೬೬] ರೆಸಲ್‌ಮೇನಿಯಾದ ಬ್ಯಾಕ್‌ಲ್ಯಾಷ್‌ ಮರುಪಂದ್ಯದಲ್ಲಿ, ಅಂಡರ್‌ಟೇಕರ್‌ ಎಡ್ಜ್‌ರನ್ನು ಮತ್ತೊಮ್ಮೆ ಸೋಲಿಸಿ ವರ್ಲ್ಡ್ ಹೆವಿವೈಟ್ ಚಾಂಪಿಯನ್‌ಷಿಪ್‌ಅನ್ನು ತಮ್ಮಲ್ಲಿಯೇ ಉಳಿಸಿಕೊಂಡರು.[೬೭] ಅಂಡರ್‌ಟೇಕರ್‌ "ಹೆಲ್ಸ್‌ ಗೇಟ್‌" ಪ್ರಶಸ್ತಿಯನ್ನು ಅಕ್ರಮವಾಗಿ ಪಡೆದಿದ್ದು ಎಂದು ಘೋಷಿಸಿ ಅವರಿಂದ ಪ್ರಶಸ್ತಿಯನ್ನು ವಿಕಿ ಗುಯೆರ್ರರೊ ಕಸಿದುಕೊಳ್ಳುತ್ತಾರೆ. ಜಡ್ಜ್‌ಮೆಂಟ್‌ ಡೇನಲ್ಲಿ ಅಂಡರ್‌ಟೇಕರ್‌ ತಮ್ಮಿಂದ ಕಸಿದುಕೊಳ್ಳಲಾದ ಆ ಪದವಿಗಾಗಿ ಎಡ್ಜ್‌ರೊಂದಿಗೆ ಹೋರಾಡಿ ಕೌಂಟ್‌ಔಟ್‌ನಿಂದ ಗೆಲುವು ಸಾಧಿಸಿದರು. ವಿಕೀರವರು ಪದವಿಯು ಯಾರ ಬಳಿಯೂ ಇರುವುದು ಸರಿಯಲ್ಲ ಯಾಕೆಂದರೆ ಪದವಿಗಳನ್ನು ಹಾಗೆಲ್ಲಾ ಬದಲಾಯಿಸುವುದು ತಪ್ಪು ಎಂಬ ನಿರ್ದೇಶನ ನೀಡಿದರು. ಎಡ್ಜ್‌ ಹಾಗೂ ಅಂಡರ್‌ಟೇಕರ್‌ ಖಾಲಿಯಾದ ಚಾಂಪಿಯನ್‌ಷಿಪ್‌ಗಾಗಿ ಒನ್ ನೈಟ್ ಸ್ಟ್ಯಾಂಡ್‌ಟೇಬಲ್ಸ್, ಲ್ಯಾಡರ್ಸ್, ಅಂಡ್ ಚೇರ್ಸ್ ಪಂದ್ಯದಲ್ಲಿ ಮುಖಾಮುಖಿಯಾಗಿ ಹೋರಾಡಿದರು, ಆದರೆ ಲಾ ಫೆಮಿಲಿಯಾರ ಮಧ್ಯಪ್ರವೇಶದಿಂದಾಗಿ ಅಂಡರ್‌ಟೇಕರ್‌ ಸೋಲಬೇಕಾಯಿತು. ಕರಾರಿನ ಪರಿಣಾಮವಾಗಿ, ಅಂಡರ್‌ಟೇಕರ್‌ರನ್ನು WWE ಸ್ಪರ್ಧೆಯಿಂದಲೇ ಬಹಿಷ್ಕರಿಸಲಾಯಿತು.

ಹಲವಾರು ವೈಷಮ್ಯಗಳು (2008–2009)[ಬದಲಾಯಿಸಿ]

ರೆಸಲ್‌ಮೇನಿಯಾ XXVರಲ್ಲಿ ಅಂಡರ್‌ಟೇಕರ್‌ ಷಾನ್ ಮೈಕೆಲ್ಸ್‌ರನ್ನು ಸೋಲಿಸಿದ ನಂತರ.

2008ನೇ ಇಸವಿಯ ಜುಲೈ 25ರಂದು ನಡೆದ ಸ್ಮ್ಯಾಕ್‌ಡೌನ್‌! ಕಂತಿನಲ್ಲಿ, ವಿಕಿ ಗುಯೆರ್ರೆರೊ ಸಮ್ಮರ್‌ಸ್ಲ್ಯಾಮ್‌ನಲ್ಲಿ ನಡೆಯುವ ಹೆಲ್ ಇನ್ ಎ ಸೆಲ್‌ ಪಂದ್ಯದಲ್ಲಿ ಎಡ್ಜ್‌, ಅಂಡರ್‌ಟೇಕರ್‌ ವಿರುದ್ಧ ಹೋರಾಡಲಿದ್ದಾರೆ ಎಂಬುದನ್ನು ಘೋಷಿಸುತ್ತಾರೆ,[೬೮] ಇದರಲ್ಲಿ ಅಂಡರ್‌ಟೇಕರ್‌ ವಿಜಯ ಸಾಧಿಸಿದರು. ಪಂದ್ಯ ಮುಗಿದ ನಂತರ, ಏಣಿಯ ಮೇಲ್ಭಾಗದಿಂದ ಹಾಗೂ ಅಖಾಡದ ಪರದೆಯ ಮೇಲಿನಿಂದ ಅಂಡರ್‌ಟೇಕರ್‌ ಎಡ್ಜ್‌ರಿಗೆ ಘಟ್ಟಿಸುವ ಪ್ರಹಾರ ನೀಡಿದರು.[೬೯] ಅದರ ನಂತರದ ನಡೆದ ಸ್ಮ್ಯಾಕ್‌ಡೌನ್‌ ಪಂದ್ಯದ ನಂತರ ಗುಯೆರ್ರೆರೊ, ಅಂಡರ್‌ಟೇಕರ್‌ಗೆ ಕ್ಷಮೆಯಾಚಿಸಿ ರಾಜಿಮಾಡಿಕೊಳ್ಳಲು ಪ್ರಯತ್ನಿಸಿದರು, ಆದರೆ ನಾನು ಕ್ಷಮಿಸುವ ರೀತಿಯವನಲ್ಲ ಎಂಬುದನ್ನು ಅಂಡರ್‌ಟೇಕರ್‌ ಹೇಳುತ್ತಾರೆ. ಅನ್‌ಫರ್ಗೀವನ್‌ ಪಂದ್ಯದಲ್ಲಿ, ಅಂಡರ್‌ಟೇಕರ್‌ ಅಖಾಡಕ್ಕೆ ಬರುತ್ತಿದ್ದಂತೆಯೇ "ಗುಯೆರ್ರರೊ ಜೀವ ತೆಗೆಯುವುದಾಗಿ ಹೇಳುತ್ತಾ ಮುನ್ನುಗ್ಗಿದರು" ಹಾಗೂ ಆಕೆಯನ್ನು ಕ್ಯಾಸ್ಕೆಟ್‌ನಲ್ಲಿ ಹಾಕಿಕೊಂಡರು, ಅಂಡರ್‌ಟೇಕರ್‌ನ ಸಹಾಯಕ್ಕೆಂದು ಬಂದ ಬಿಗ್ ಷೋ ಅವರನ್ನು ವಂಚಿಸಿ ಹಲ್ಲೆ ನಡೆಸಿದರು.[೭೦] ಇದರ ಹೋರಾಟದ ಪರಿಣಾಮವಾಗಿ, ಅಂಡರ್‌ಟೇಕರ್‌ ಹಾಗೂ ಬಿಗ್ ಷೋ ನೋ ಮರ್ಸಿ ಪಂದ್ಯದಲ್ಲಿ ಒಬ್ಬರನ್ನೊಬ್ಬರು ಎದುರಿಸಿದರು, ಅದರಲ್ಲಿ ಬಿಗ್ ಷೋ, ಅಂಡರ್‌ಟೇಕರ್‌ರ ತಲೆಗೆ ಹಿಂಬದಿಯಿಂದ ಮುಷ್ಠಿಯಿಂದ ಗುದ್ದಿ ಅವರನ್ನು ಕೆಡವಿದರು.[೭೧] ಸೈಬರ್ ಸಂಡೇಯ ಲಾಸ್ಟ್ ಮ್ಯಾನ್ ಸ್ಟ್ಯಾಂಡಿಗ್ ಪಂದ್ಯದಲ್ಲಿ ಹೆಲ್ಸ್‌ ಗೇಟ್‌ ಪ್ರಹಾರವನ್ನು ಬಳಸಿಕೊಂಡು ಅಂಡರ್‌ಟೇಕರ್‌ ಬಿಗ್ ಷೋರನ್ನು ಸೋಲಿಸಿದರು.[೭೨] ನಂತರ ಕ್ಯಾಸ್ಕೆಟ್‌ ಪಂದ್ಯದ ಸರ್ವೈವರ್ ಸರಣಿಯಲ್ಲಿ ಅಂಡರ್‌ಟೇಕರ್‌ ಮತ್ತೊಮ್ಮೆ ಬಿಗ್ ಷೋರನ್ನು ಸೋಲಿಸಿ ತಮ್ಮ ವೈಷಮ್ಯವನ್ನು ತೀರಿಸಿದರು.[೭೩]

WWE ಚಾಂಪಿಯನ್‌ಷಿಪ್‌ ಎಲಿಮಿನೇಷನ್ ಚೇಂಬರ್‌ನಲ್ಲಿ ಅಂಡರ್‌ಟೇಕರ್‌ ನೋ ವೇ ಔಟ್‌ ಪಂದ್ಯದ ಭಾಗವಾಗಿ, ಪಂದ್ಯದಲ್ಲಿ ಟ್ರಿಪಲ್‌ H ಜಯಗಳಿಸಿದರು. ರೆಸಲ್‌ಮೇನಿಯಾ ಗೆಲುವಿನ ಸರಮಾಲೆಯ ನಂತರ ಷಾನ್ ಮೈಕೆಲ್ಸ್‌ರೊಂದಿಗೆ ತಮ್ಮ ವೈರತ್ವವನ್ನು ಮತ್ತಷ್ಟು ಹೆಚ್ಚಿಸಿಕೊಂಡರು, ನಿಜವಾಗಿ ಹೇಳಬೇಕೆಂದರೆ ಅಂಡರ್‌ಟೇಕರ್‌ ಮೈಕೆಲ್ಸ್‌ರನ್ನು ಸಿಂಗಲ್ಸ್‌ ಪಂದ್ಯದಲ್ಲಿ ಸೋಲಿಸಲು ಯಾವಾಗಲೂ ಸಾಧ್ಯವಾಗಿರಲಿಲ್ಲ. ರೆಸಲ್‌ಮೇನಿಯಾ XXVರಲ್ಲಿ ಈ ವೈರತ್ವ ಮತ್ತಷ್ಟು ಹೆಚ್ಚಾಯಿತು, ಈ ಪಂದ್ಯದಲ್ಲಿ ಅಂಡರ್‌ಟೇಕರ್‌ ಜಯ ಸಾಧಿಸಿ ರೆಸಲ್‌ಮೇನಿಯಾದಲ್ಲಿ ತನ್ನ ಗೆಲುವನ್ನು 17–0ಕ್ಕೆ ಹೆಚ್ಚಿಸಿಕೊಂಡರು.[೭೪] ರೆಸಲ್‌ಮೇನಿಯಾ ಸ್ಪರ್ಧೆಯ ನಂತರ, ಬಿಡುವನ್ನು ತೆಗೆದುಕೊಂಡರು.

ಮೂರನೇ ವಿಶ್ವ ಹೆವಿವೈಟ್ ಚಾಂಪಿಯನ್‌ಷಿಪ್‌ ಪದವಿ (2009–ಪ್ರಸ್ತುತ)[ಬದಲಾಯಿಸಿ]

ಅಂಡರ್‌ಟೇಕರ್‌ ತನ್ನ ಮೂರನೇ ವರ್ಲ್ಡ್‌ ಹೆವಿವೈಯ್ಟ್ ಚಾಂಪಿಯನ್ ಎಂಬ ಪಟ್ಟ ದೊರಕಿಸಿಕೊಂಡ ನಂತರ.

ನಾಲ್ಕು ತಿಂಗಳ ಕಾಲ ಅನುಪಸ್ಥಿತಿಯ ನಂತರ, ಅಂಡರ್‌ಟೇಕರ್‌ ಆಗಸ್ಟ್‌ ತಿಂಗಳಲ್ಲಿ ನಡೆದ ಸಮ್ಮರ್‌ಸ್ಲ್ಯಾಮ್‌ ಪಂದ್ಯದಲ್ಲಿ ಮರಳಿಬಂದು, ಟೇಬಲ್ಸ್, ಲ್ಯಾಡರ್ಸ್, ಅಂಡ್ ಚೇರ್ಸ್ ಪಂದ್ಯದಲ್ಲಿ ಜೆಫ್‌ ಹಾರ್ಡಿಯವರನ್ನು ಸೋಲಿಸಿ ವಿಶ್ವ ಹೆವಿವೈಟ್ ಚಾಂಪಿಯನ್‌ಷಿಪ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದ CM ಪಂಕ್‌ ಮೇಲೆ ಹಲ್ಲೆ ನಡೆಸುತ್ತಾರೆ.[೭೫] ಗಮನಿಸಬಹುದಾದ ಹಂತದಲ್ಲಿ, ಬ್ರೇಕಿಂಗ್‌ ಪಾಯಿಂಟ್‌ನಲ್ಲಿ ವಶವರ್ತಿಗೊಳ್ಳುವ ಪಂದ್ಯದಲ್ಲಿ ಅಂಡರ್‌ಟೇಕರ್‌ ಪಂಕ್‌ರನ್ನು ಎದುರಿಸಿದರು. ತನ್ನ ಹೆಲ್ಸ್‌ ಗೇಟ್‌ ಬಳಸಿಕೊಂಡು ಅಂಡರ್‌ಟೇಕರ್‌ ನಿಜವಾಗಿಯೂ ಜಯ ಸಾಧಿಸಿರುತ್ತಾರೆ, ಆದರೆ ಸ್ಮ್ಯಾಕ್‌ಡೌನ್‌ನ ಮುಖ್ಯ ನಿರ್ವಾಹಕ ಥಿಯೋಡರ್ ಲಾಂಗ್‌, ವಿಕಿ ಗುಯೆರ್ರೆರೊ ನಿರ್ಬಂಧಿಸಿದ ಕೆಲವು ಪಟ್ಟುಗಳನ್ನು ಬಳಸಿದರು ಎಂಬ ಕಾರಣವನ್ನು ಮುಂದೊಡ್ಡಿ ಪಂದ್ಯವನ್ನು ಮತ್ತೊಮ್ಮೆ ಆರಂಭಿಸುತ್ತಾರೆ. ರೆಫರಿ ಸ್ಕಾಟ್ ಆರ್ಮ್‌ಸ್ಟ್ರಾಂಗ್‌ ಪಂದ್ಯದ ಸಮಯವನ್ನು ಮುಗಿಸಲು ತೀರ್ಮಾನಿಸಿದ ಸಂದರ್ಭದಲ್ಲಿ ಪಂಕ್‌ ತನ್ನ ಅನಕೊಂಡ ವೈಸ್ ಬಳಸಿ ಪಂದ್ಯದಲ್ಲಿ ಗೆಲುವು ಸಾಧಿಸಿದರು, ಆದರೆ ಅಂಡರ್‌ಟೇಕರ್‌ ಅದನ್ನು ಒಪ್ಪಿಕೊಳ್ಳಲಿಲ್ಲ (1997ನೇ ಇಸವಿಯಲ್ಲಿ ಅದೇ ಜಾಗದಲ್ಲಿ ನಡೆದ ಮಾಂಟ್ರಿಯಲ್ ಸ್ಕ್ರೂಜಾಬ್ ಪಂದ್ಯವನ್ನು ನೆನಪಿಗೆ ತರುತ್ತದೆ).[೭೬] ಸೆಪ್ಟೆಂಬರ್‌ 25ನೇ ತಾರೀಖಿನಂದು ನಡೆದ ಸ್ಮ್ಯಾಕ್‌ಡೌನ್‌ನ ಕಂತಿನಲ್ಲಿ, ಅಂಡರ್‌ಟೇಕರ್‌ ಅವರನ್ನು ಇಳಿಸಿದ್ದ ಪೆಟ್ಟಿಗೆಯಿಂದ ಹೊರಬಂದ ನಂತರ ಈ ನಿರ್ಬಂಧವನ್ನು ಅಧಿಕೃತವಾಗಿ ತೆರವುಗೊಳಿಸಲಾಗಿದೆ ಎಂದು ಥಿಯೋಡರ್ ಲಾಂಗ್ ಘೋಷಿಸಿದರು.[೭೭] ಇಬ್ಬರ ನಡುವಿನ ವೈರತ್ವ ಮತ್ತಷ್ಟು ಹೆಚ್ಚಾಯಿತು ಹಾಗೂ ಹೆಲ್ ಇನ್ ಎ ಸೆಲ್‌ನ ಪೇ-ಪೆರ್-ವ್ಯೂ ಪಂದ್ಯದಲ್ಲಿ, ಅಂಡರ್‌ಟೇಕರ್‌ ಪಂಕ್‌ರನ್ನು ಸೋಲಿಸುವ ಮೂಲಕ ವಿಶ್ವ ಹೆವಿವೈಟ್ ಚಾಂಪಿಯನ್‌ಷಿಪ್‌ ಪಟ್ಟವನ್ನು ತಮ್ಮದಾಗಿಸಿಕೊಂಡರು.[೭೮] ಬ್ರಾಗಿಂಗ್ ರೈಟ್ಸ್‌ನಲ್ಲಿ ನಡೆದ ಫ್ಯಾಟಲ್‌ ಫೋರ್ ವೇ ಪಂದ್ಯದಲ್ಲಿ, ಹಾಗೂ ಸರ್ವೈವರ್ ಸರಣಿಯ ಟ್ರಿಪಲ್ ಥ್ರೆಟ್ ಪಂದ್ಯ ಹಾಗೂ ಸ್ಮ್ಯಾಕ್‌ಡೌನ್‌ ನಲ್ಲಿ ನಡೆದ ಮರುಪಂದ್ಯದಲ್ಲಿ ಅಂಡರ್‌ಟೇಕರ್‌ CM ಪಂಕ್‌ ವಿರುದ್ಧ ಹೋರಾಡಿ ತಮ್ಮ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಚಾಂಪಿಯನ್‌ಷಿಪ್‌ಗಾಗಿ ನಡೆದ TLC: ಟೇಬಲ್ಸ್‌‌, ಲ್ಯಾಡರ್ಸ್‌ & ಚೇರ್ಸ್‌‌ ಪಂದ್ಯದಲ್ಲಿ ಬಟಿಸ್ಟಾರನ್ನು ಎದುರಿಸಿದರು, ಅದರಲ್ಲಿ ಬಟಿಸ್ಟಾ ಲೋ ಬ್ಲೋ ಬಳಸಿ ಗೆಲುವು ಸಾಧಿಸಿದ್ದರಿಂದ ಲಾಂಗ್‌ ಪಂದ್ಯವನ್ನು ಮತ್ತೊಮ್ಮೆ ಆರಂಭಿಸಿದರು, ಇದರಿಂದಾಗಿ ಅಂಡರ್‌ಟೇಕರ್‌ ಜಯ ಸಾಧಿಸಿದರು.

ಇತರೆ ಮಾಧ್ಯಮಗಳು[ಬದಲಾಯಿಸಿ]

ಕ್ಯಾಲವೆ 1991ನೇ ಇಸವಿಯಲ್ಲಿ ಸಬರ್ಬನ್ ಕಮ್ಯಾಂಡೊ ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು.[೭೯] ಅವರು 1999ನೇ ಇಸವಿಯಲ್ಲಿ ಬಂದ Poltergeist: The Legacy [೮೦] ಗಳ ಕಂತುಗಳಲ್ಲಿ ಹಾಗೂ ಸೆಲೆಬ್ರಿಟಿ ಡೆತ್‌ಮ್ಯಾಚ್ ಎಂಬ ಚಿತ್ರದ ಭಾಗಗಳಲ್ಲೂ ಕಾಣಿಸಿಕೊಂಡರು.

ಅಂಡರ್‌ಟೇಕರ್‌ರ ಪಾತ್ರದ ಹಲವಾರು ಉಪಪಾತ್ರಗಳನ್ನು ನಿರ್ವಹಿಸಲಾಗಿದೆ. ಚಾವೊಸ್‌‌! ಕಾಮಿಕ್ಸ್‌ ಸಂಸ್ಥೆಯು ಅಂಡರ್‌ಟೇಕರ್‌ ಕಾಮಿಕ್‌ ಅನ್ನು ತಯಾರಿಸಿದೆ.[೮೧] 2005ನೇ ಇಸವಿಯಲ್ಲಿ, ಪಾಕೆಟ್ ಬುಕ್ಸ್ ಕಾದಂಬರಿಯೊಂದನ್ನು ಬಿಡುಗಡೆ ಮಾಡಿದರೂ, Journey into Darkness: An Unauthorized History of Kane ಅದರಲ್ಲಿ ಹೆಚ್ಚಾಗಿ ಕೇನ್‌ ಕುರಿತು ಪ್ರಸ್ತಾಪ ಮಾಡಿದ್ದು ಅವರ ಅಣ್ಣನಾಗಿ ಅಂಡರ್‌ಟೇಕರ್‌ರನ್ನೂ ತೋರಿಸಿದ್ದಾರೆ, ಆದರೆ ಅವುಗಳಲ್ಲಿ ಯಾವುದೂ ನಿಜ ಜೀವನಕ್ಕೆ ಸಂಬಂಧಿಸಿದ್ದಲ್ಲ.[೮೨]

ಅಂಡರ್‌ಟೇಕರ್‌ ಬ್ರಿಯಾನ್ ಲೀಯವರು ಖಿಲಾಡಿಯೋಂ ಕಾ ಖಿಲಾಡಿ ಎಂಬ ಹಿಂದಿ ಚಲನಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ (WWF ಪಂದ್ಯದಲ್ಲಿ 'ನಕಲಿ ಅಂಡರ್‌ಟೇಕರ್‌' ಆಗಿ ಕಾಣಿಸಿಕೊಂಡವರು). ಅದರಲ್ಲಿ ಅಂಡರ್‌ಟೇಕರ್‌ 1990 ರಿಂದ 1993ನೇ ಇಸವಿಯವರೆಗೆ ಧರಿಸಿದ್ದ ರೀತಿಯಲ್ಲಿ ಅವರು ಪಾಶ್ಚಿಮಾತ್ಯ ಶವಸಂಸ್ಕಾರಕನ ರೀತಿಯಲ್ಲಿ ಉಡುಗೆಗಳನ್ನು ಧರಿಸಿದ್ದು, ಚಿತ್ರದ ಅಂತಿಮ ಪ್ರಹಾರವಾಗಿ ಟೂಂಬ್‌ಸ್ಟೋನ್‌ ಪೈಲ್‌ಡ್ರೈವರ್‌ ಬಳಸುತ್ತಾರೆ. ನವೆಂಬರ್‌ 6ನೇ ತಾರೀಖಿನಂದು, ತಮ್ಮ ಪಾತ್ರದಲ್ಲಿ ಅಂಡರ್‌ಟೇಕರ್‌ ತಾವೇ ನಟಿಸಲಿದ್ದು, ಈ ಚಿತ್ರದಲ್ಲಿ ತನ್ನ ಮೂಲ ಹಾಗೂ ತನ್ನಲ್ಲಿದ್ದ ಶಕ್ತಿ ಕುರಿತಾದ ಪಾತ್ರಗಳ ಮೇಲೆ ಗಮನ ಹರಿಸಲಾಗಿದೆ ಎಂದು ಹೇಳುತ್ತಾರೆ. ಇದರಲ್ಲಿ ಕ್ಯಾಲವೆ ತಮ್ಮ ಪಾತ್ರವನ್ನು ತಾವೇ ನಿರ್ವಹಿಸಿದ್ದಾರೆ.[೮೩]

ವೈಯಕ್ತಿಕ ಜೀವನ[ಬದಲಾಯಿಸಿ]

ರಾದ 800ನೇ ಭಾಗದ ಆಚರಣೆಯ ಸಂದರ್ಭದಲ್ಲಿ ದಿ ಅಂಡರ್‌ಟೇಕರ್‌ ಪ್ರವೇಶ ಮಾಡುತ್ತಿರುವುದು

ಆತ 1983ರಲ್ಲಿ ವಾಲ್‌ಟ್ರಿಪ್‌ ಹೈ ಸ್ಕೂಲ್‌ನಿಂದ ಶಿಕ್ಷಣ ಪಡೆದಿದ್ದು, ಅಲ್ಲಿ ಅವರು ಬ್ಯಾಸ್ಕೆಟ್‌ಬಾಲ್ ತಂಡದಲ್ಲಿ ಸದಸ್ಯರಾಗಿದ್ದರು.[೮೪] ಕ್ಯಾಲವೆ 1989ರಲ್ಲಿ ಜೊಡಿ ಲಿನ್ನ್‌ರನ್ನು ಮದುವೆಯಾದರು, ಆದರೆ 1999ರಲ್ಲಿ ಅವರ ಮದುವೆ ಮುರಿದು ಬೀಳುವುದರ ಒಳಗೆ 1993ರಲ್ಲಿ ಅವರಿಗೆ ಗನ್ನರ್ ಎಂಬ ಮಗ ಹುಟ್ಟಿದನು. ಕ್ಯಾಲಿಫೋರ್ನಿಯಾಸ್ಯಾನ್‌ ಡಿಯಾಗೊದಲ್ಲಿ WWF ಆಟೋಗ್ರಾಫ್‌ಗೆ ಸಹಿಹಾಕುವಾಗ, ಕ್ಯಾಲವೆ ತನ್ನ ಎರಡನೇ ಪತ್ನಿ ಸಾರಾಳನ್ನು ಭೇಟಿಯಾದರು.[ಸೂಕ್ತ ಉಲ್ಲೇಖನ ಬೇಕು] ಅವರು ಅಂತಿಮವಾಗಿ ಸಾರಾರನ್ನು 2000ನೇ ಇಸವಿಯ ಜುಲೈ 21ರಂದು ಫ್ಲೋರಿಡಾದ St. ಪೀಟರ್ಸ್‌ಬರ್ಗ್‌ನಲ್ಲಿ ಧಾರ್ಮಿಕ ಪದ್ಧತಿಯಂತೆ ಮದುವೆಯಾದರು. ಮಾರ್ಕ್‌ ಹಾಗೂ ಸಾರಾ ಜೋಡಿಯು ಎರಡು ಹೆಣ್ಣುಮಕ್ಕಳನ್ನು ಹೊಂದಿದ್ದಾರೆ: ಚೇಸಿ, (ಜನನ 2002ರ ನವೆಂಬರ್‌ 21ರಂದು) ಹಾಗೂ ಗ್ರೇಸಿ, (ಜನನ 2005ರ ಮೇ 15ರಂದು).[೩]

ಮದುವೆಯ ಉಡುಗೊರೆಯಾಗಿ, ಕ್ಯಾಲವೆ ಪತ್ನಿಯ ಹೆಸರನ್ನು ತನ್ನ ಕುತ್ತಿಗೆಯ ಮೇಲೆ ಹಚ್ಚೆ ಹಾಕಿಸಿಕೊಂಡರು, ಹಾಗೂ ನಂತರದಲ್ಲಿ ತಾನು ಹಾಕಿಸಿಕೊಂಡ ಹಚ್ಚೆಗಳಲ್ಲಿ ಇದು ತುಂಬಾ ನೋವು ನೀಡಿತು ಎಂದು ತಿಳಿಸಿದ್ದಾರೆ. ಅಂಡರ್‌ಟೇಕರ್‌ ಇತರೆ ಹಲವಾರು ಹಚ್ಚೆಗಳನ್ನೂ ಹಾಕಿಸಿಕೊಂಡಿದ್ದಾರೆ: ಅವುಗಳಲ್ಲಿ ಅವರು "ಓರಿಜಿನಲ್ ಡೆಡ್‌ಮ್ಯಾನ್‌" ಎನ್ನುವ ಶವಶೋಧಕವೂ ಒಂದು, , ತಲೆಬುರುಡೆಗಳು, ಭೂತದ ಕೋಟೆ, ಹಾಗೂ ಮಾಂತ್ರಿಕರಿಗೆ ಹೋಲಿಸುತ್ತಾರೆ. ತನ್ನಲ್ಲಿರುವ ದೇಹದ ಮೇಲಿರುವ ಚಿತ್ತಾರಗಳ ಬಗ್ಗೆ ಮಾತನಾಡುವಾಗ, ಅವರು ತನ್ನ ತೋಳುಗಳಲ್ಲಿ ಹಳೇ ಕಾಲದ ವಸ್ತುವಿದೆ ಎಂದು ಹೇಳುತ್ತಾರೆ. ಅವರ ಕುತ್ತಿಗೆಯ ಹಿಂಬದಿಯಲ್ಲಿ ನರ್ತಿಸುವ ಅಸ್ಥಿಪಂಜರ ಹಚ್ಚೆ ಇದ್ದು, ಅವರ ಹೊಟ್ಟೆಯ ಭಾಗದಲ್ಲಿ ಮೇಲೆ BSK ಪ್ರೈಡ್ ಎನ್ನುವ ಹಚ್ಚೆ ಕೂಡ ಇದೆ.[೮೫]

ಕುಸ್ತಿಪಂದ್ಯವನ್ನು ಹೊರತುಪಡಿಸಿ, ಕ್ಯಾಲವೆಗೆ ಇನ್ನೂ ಹಲವಾರು ಹವ್ಯಾಸ ಹಾಗೂ ಆಸಕ್ತಿಗಳಿವೆ. ಅವರು ಹಾರ್ಲಿ-ಡೇವಿಡ್‌ಸನ್ ಹಾಗೂ ವೆಸ್ಟ್ ಕೋಸ್ಟ್ ಚಾಪರ್ಸ್ ದ್ವಿಚಕ್ರಗಳನ್ನು ಸಂಗ್ರಹಿಸುತ್ತಾರೆ ಹಾಗೂ WWF ಚಾಂಪಿಯನ್‌ಷಿಪ್‌1991ರ ಸರ್ವೈವರ್ ಸರಣಿಯಲ್ಲಿ ಹಲ್ಕ್‌ ಹೋಗನ್‌ರನ್ನು ಸೋಲಿಸಿ ತಮ್ಮ ಮೊಟ್ಟ ಮೊದಲ ಹೊಚ್ಚ ಹೊಸ ದ್ವಿಚಕ್ರವನ್ನು ಖರೀದಿಸಿದರು. ಕ್ಯಾಲವೆ, ವೆಸ್ಟ್ ಕೋಸ್ಟ್ ಚಾಪರ್ಸ್ ಸ್ಥಾಪಕರಾದ ಜೆಸ್ಸೀ ಜೇಮ್ಸ್‌ ತಯಾರಿಸಿದ ತಮಗೆಂದೇ ಬದಲಾವಣೆ ಮಾಡಲಾದ ದ್ವಿಚಕ್ರವನ್ನೂ ಹೊಂದಿದ್ದಾರೆ. ಅವರು, ನಿಕ್ ಕೇವ್‌ ಹಾಗೂ ಆತನ ಎಲ್ಲ ಸಂಗೀತ ಪ್ರಕಾರಗಳ ಅಗಾಧ ಅಭಿಮಾನಿಯಾಗಿದ್ದಾರೆ (ದಿ ಬರ್ತ್‌ಡೇ ಪಾರ್ಟಿ ಮತ್ತು ದಿ ಬ್ಯಾಡ್ ಸೀಡ್ಸ್‌). ವಾದ್ಯವೃಂದಗಳಾದ ZZ ಟಾಪ್, AC/DC, ಕಿಸ್, ಬ್ಲ್ಯಾಕ್ ಸಬ್ಬತ್, ಗನ್ಸ್ N' ರೋಸಸ್, ಮೆಟಾಲಿಕಾ, ಜುಡಾಸ್ ಪ್ರೀಸ್ಟ್, ಐರನ್ ಮೇಯ್ಡನ್‌, ಹಾಗೂ ಬ್ಲ್ಯಾಕ್ ಲೇಬಲ್ ಸೊಸೈಟಿಗಳನ್ನು ಕೇಳುತ್ತಾ ಆನಂದಿಸುತ್ತಾರೆ. ಇನ್ನಿತರೆ ಮೆಚ್ಚಿನ ಸಂಗೀತ ಪ್ರಕಾರಗಳಲ್ಲಿ ಕಂಟ್ರಿ ಹಾಗೂ ಬ್ಲೂಸ್‌ ಸೇರಿವೆ. ಕುಸ್ತಿಪಂದ್ಯದ ಉತ್ಸುಕ ಅಭಿಮಾನಿಯಾದ ಕ್ಯಾಲವೆ, 2005ರಲ್ಲಿ ಪೆಕ್ವಿಯಾಓ ಹಾಗೂ ವೆಲಾಸ್‌ಕ್ವೆಜ್ ನಡುವಿನ ಪಂದ್ಯದ ವೇಳೆ ಪೆಕ್ವಿಯಾಓ ತಂಡವನ್ನು ಅಖಾಡಕ್ಕೆ ತಲುಪಿಸುವಾಗ ಯುನೈಟೆಡ್ ಸ್ಟೇಟ್ಸ್‌ನ ಧ್ವಜವನ್ನು ಹಿಡಿದು ಮುಂದೆ ಸಾಗಿದರು.[೮೬] ಇದನ್ನು ಸಹಕುಸ್ತಿಪಟುವಾದ ಬಟಿಸ್ಟಾರು ಫಿಲಿಪ್ಪೀನ್‌ ವಾರ್ತಾ ಕಾರ್ಯಕ್ರಮವಾದ TV ಪ್ಯಾಟ್ರೋಲ್ ವರ್ಲ್ಡ್‌ ಗೆ ಸಂದರ್ಶನ ನೀಡುವಾಗ ದೃಢಪಡಿಸಿದರು. ಕ್ಯಾಲವೆ ಮಿಶ್ರ ಸಮರಕಲೆಯ ಉತ್ಸುಕ ಅಭಿಮಾನಿಯಾಗಿದ್ದು, ಹಲವಾರು ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‌ಷಿಪ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ತನ್ನ ತೋಳು ಗಾಯಗೊಂಡ ಕಾರಣಕ್ಕಾಗಿ ದಿ ಅಂಡರ್‌ಟೇಕರ್‌ 2007ರಿಂದ WWEನಲ್ಲಿ ಕಾಣಿಸಿಕೊಳ್ಳಲಿಲ್ಲ, ಕ್ಯಾಲವೆ ತನ್ನ ಪಾಲುಗಾರ ಸ್ಕಾಟ್ ಎವರ್ಹಾತ್‌ರೊಂದಿಗೆ ಸ್ಥಿರಾಸ್ತಿ ವ್ಯವಹಾರದತ್ತ ಗಮನ ಹರಿಸಿದರು. ಕ್ಯಾಲವೆ ಹಾಗೂ ಎವರ್ಹಾತ್‌, ಕೊಲರಾಡೊನ ಲವ್‌ಲೆಂಡ್‌ನಲ್ಲಿ ಅಂದಾಜು $2.7m ಬೆಲೆಯ ಕಟ್ಟಡವನ್ನು ನಿರ್ಮಿಸಿದರು. ವಿಶಾಲವಾದ ಕಛೇರಿ ಸ್ಥಳ ಹೊಂದಿದ್ದ ಆ ಕಟ್ಟಡಕ್ಕೆ, ತಮ್ಮ ಹೆಸರುಗಳ ಅಂತಿಮ ಭಾಗವನ್ನು ಸೇರಿಸಿ "ದಿ ಕ್ಯಾಲಹರ್ತ್" ಎಂಬ ಹೆಸರನ್ನಿಟ್ಟರು. ದೂರದರ್ಶನದ ತಾರೆಯಾಗಿರುವುದರಿಂದ ತನಗೆ ಸ್ಥಿರಾಸ್ತಿ ವ್ಯಾಪಾರದಲ್ಲಿ ಅನುಕೂಲವಾಗುವುದು ಎಂಬ ಮಾತನ್ನು ಕ್ಯಾಲವೆ ಹೀಗೆ ಹೇಳಿದರು, "ಯಾವುದೇ ಕಾರಣಕ್ಕೂ ಇದು ವ್ಯಾಪಾರವನ್ನು ದೃಢಪಡಿಸುವುದಿಲ್ಲ, ಅದರ ಬದಲಿಗೆ ಜನರು ನಿಮ್ಮ ಜೊತೆಗೆ ಕುಳಿತು ಮಾತನಾಡಲು ಇಚ್ಛಿಸುತ್ತಾರೆ. ಇದು ನಮಗೆ ಅನೇಕ ಜನರನ್ನು ತಿಳಿಯಲು ಹಾಗೂ ನಾವು ಏನನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂಬುದನ್ನು ತಿಳಿಸಲು ಸಹಾಯಕವಾಗಿದೆ" ಎಂಬುದನ್ನೂ ಸೇರಿಸುತ್ತಾರೆ.[೮೭] ಕ್ಯಾಲವೆ ಮತ್ತು ಅವರ ಪತ್ನಿ, ಟೆಕ್ಸಾಸ್‌ನ A&M ಪಶುವೈದ್ಯ ಔಷಧ & ಜೀವವೈದ್ಯಕೀಯ ವಿಜ್ಞಾನಗಳ ಕಾಲೇಜಿನಲ್ಲಿ ಜೀಯಸ್ ಕಾಂಪ್ಟನ್ ಎಂಬ ಸಂಸ್ಥಯನ್ನು ಸ್ಥಾಪನೆ ಮಾಡಿದ್ದು ಅದರಲ್ಲಿ ದೊಡ್ಡ ಶ್ವಾನ ತಳಿಗಳ ಪ್ರಾಣ ಉಳಿಸುವ ಚಿಕಿತ್ಸೆಗಳಲ್ಲಿ ಧನಸಹಾಯ ನೀಡಿದ್ದಾರೆ.[೮೮]

ಕುಸ್ತಿ ಅಖಾಡದಲ್ಲಿ[ಬದಲಾಯಿಸಿ]

ಟೆಂಪ್ಲೇಟು:Image stack

ಚಾಂಪಿಯನ್‌ಷಿಪ್‌ಗಳು ಹಾಗೂ ಸಾಧನೆಗಳು[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ೧.೦ ೧.೧ ""Texas Births 1926–1995". "Family Tree Networks". Archived from the original on 2011-07-10. Retrieved 2010-01-23.
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ ೨.೮ "WWE Bio". World Wrestling Entertainment. Retrieved 2008-03-31.
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ ೩.೧೧ ೩.೧೨ ೩.೧೩ ೩.೧೪ ೩.೧೫ ೩.೧೬ ೩.೧೭ ೩.೧೮ ೩.೧೯ ೩.೨೦ "Wrestler Profiles: The Undertaker". Online World of Wrestling. Retrieved 2007-12-09.
  4. CAGEMATCH: The Internet Wrestling Database CAGEMATCH. Retrieved on 2013-02-22.
  5. Steve Austin. The Stone Cold Truth (p.72)
  6. ೬.೦೦ ೬.೦೧ ೬.೦೨ ೬.೦೩ ೬.೦೪ ೬.೦೫ ೬.೦೬ ೬.೦೭ ೬.೦೮ ೬.೦೯ "Bio". Accelerator. Retrieved 2008-05-06.
  7. ೭.೦ ೭.೧ "Texas Heavyweight Title history". Wrestling-Titles.com. Retrieved 2008-04-09.
  8. "NWA/WCW United States Heavyweight Title history". wrestling-titles.com.
  9. "NWA Clash of the Champions Results (X)". Retrieved 2007-04-16.
  10. "WWEಯ ಇತಿಹಾಸ - 1990ರ ಫಲಿತಾಂಶಗಳು". Archived from the original on 2003-02-01. Retrieved 2003-02-01.
  11. ೧೧.೦ ೧೧.೧ 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್", p. 88–89.
  12. "About.com: ಅತ್ಯಂತ ಭೀತಿಹುಟ್ಟಿಸುವ 10 ಮಂದಿ ಕುಸ್ತಿಪಟುಗಳು". Archived from the original on 2011-07-07. Retrieved 2010-01-23.
  13. ೧೩.೦೦ ೧೩.೦೧ ೧೩.೦೨ ೧೩.೦೩ ೧೩.೦೪ ೧೩.೦೫ ೧೩.೦೬ ೧೩.೦೭ ೧೩.೦೮ ೧೩.೦೯ ೧೩.೧೦ ೧೩.೧೧ ೧೩.೧೨ ೧೩.೧೩ ೧೩.೧೪ ೧೩.೧೫ "WrestleMania Legacy". World Wrestling Entertainment. Retrieved 2008-07-10.
  14. ೧೪.೦ ೧೪.೧ ೧೪.೨ PWI ಉದ್ಯೋಗಿಗಳು. 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌", p. 89–90.
  15. ೧೫.೦ ೧೫.೧ 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌", p. 90–91.
  16. ೧೬.೦ ೧೬.೧ ೧೬.೨ ೧೬.೩ ೧೬.೪ ೧೬.೫ PWI ಉದ್ಯೋಗಿಗಳು. 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌", p. 92–94.
  17. ೧೭.೦ ೧೭.೧ ೧೭.೨ ೧೭.೩ ೧೭.೪ 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.95)
  18. ೧೮.೦ ೧೮.೧ ೧೮.೨ PWI ಉದ್ಯೋಗಿಗಳು. ೨೦೦೭ ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.96–97)
  19. ೧೯.೦ ೧೯.೧ ೧೯.೨ ೧೯.೩ ೨೦೦೭ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.98–99)
  20. ೨೦.೦ ೨೦.೧ ೨೦.೨ ೨೦.೩ ೨೦.೪ ೨೦.೫ ೨೦.೬ ೨೦.೭ ೨೦.೮ PWI ಉದ್ಯೋಗಿಗಳು. 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.100–101)
  21. ೨೧.೦ ೨೧.೧ ೨೧.೨ "Raw 1998 results". Online World of Wrestling. Archived from the original on 2012-12-08. Retrieved 2008-07-10.
  22. 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.102)
  23. ೨೩.೦ ೨೩.೧ "Raw 1999 Results". Online World of Wrestling. Archived from the original on 2008-06-07. Retrieved 2007-05-01.
  24. ೨೦೦೭ ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.103)
  25. ೨೫.೦ ೨೫.೧ PWI ಉದ್ಯೋಗಿಗಳು. ೨೦೦೭ ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.106)
  26. "Raw 2000 Results". Online World of Wrestling. Archived from the original on 2008-06-07. Retrieved 2007-05-01.
  27. ೨೭.೦ ೨೭.೧ ೨೭.೨ 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.107)
  28. "World Tag Team Title History". World Wrestling Entertainment. Retrieved 2009-06-21.
  29. ೨೯.೦ ೨೯.೧ ೨೯.೨ ೨೯.೩ ೨೯.೪ 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.108–109)
  30. "Raw - November 26, 2001 Results". Online World of Wrestling. Archived from the original on 2007-09-30. Retrieved 2007-05-01.
  31. ೩೧.೦ ೩೧.೧ ೩೧.೨ ೩೧.೩ 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.109–110)
  32. Michael McAvennie (2003). "WWE The Yearbook: 2003 Edition". Pocket Books. p. 52.
  33. Michael McAvennie (2003). "WWE The Yearbook: 2003 Edition". Pocket Books. p. 56.
  34. McAvennie, Michael (2003). "WWE The Yearbook: 2003 Edition". Pocket Books. pp. 79–80.
  35. ೩೫.೦ ೩೫.೧ Michael McAvennie (2003). "WWE The Yearbook: 2003 Edition". Pocket Books. pp. 80–81.
  36. ೩೬.೦ ೩೬.೧ ೩೬.೨ ೩೬.೩ PWI ಉದ್ಯೋಗಿಗಳು. 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.110–111)
  37. McAvennie, Michael (2003). "WWE The Yearbook: 2003 Edition". Pocket Books. p. 288.
  38. ೩೮.೦ ೩೮.೧ ೩೮.೨ 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.112–113)
  39. "SmackDown-September 4, 2003 Results". Online World of Wrestling. Archived from the original on 2007-10-01. Retrieved 2007-05-01.
  40. ೪೦.೦ ೪೦.೧ ೪೦.೨ PWI ಉದ್ಯೋಗಿಗಳು. 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.113–114)
  41. "SmackDown-November 20, 2003 Results". Online World of Wrestling. Archived from the original on 2007-09-30. Retrieved 2007-05-01.
  42. ೪೨.೦ ೪೨.೧ ೪೨.೨ ೪೨.೩ ೪೨.೪ 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.115–116)
  43. "SmackDown-May 27, 2004 Results". Online World of Wrestling. Archived from the original on 2007-09-27. Retrieved 2007-05-01.
  44. "SmackDown-June 17, 2004 Results". Online World of Wrestling. Archived from the original on 2007-08-29. Retrieved 2007-05-01.
  45. ೪೫.೦ ೪೫.೧ ೪೫.೨ ೪೫.೩ ೪೫.೪ PWI ಉದ್ಯೋಗಿಗಳು. 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.116–117)
  46. "Raw-March 7, 2005 Results". Online World of Wrestling. Archived from the original on 2007-10-01. Retrieved 2007-05-01.
  47. "SmackDown-June 16, 2005 Results". Online World of Wrestling. Archived from the original on 2017-12-31. Retrieved 2007-05-01.
  48. "SmackDown-July 28, 2005 Results". Online World of Wrestling. Archived from the original on 2007-05-15. Retrieved 2007-05-01.
  49. ೪೯.೦ ೪೯.೧ PWI ಉದ್ಯೋಗಿಗಳು. ೨೦೦೭ ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.118)
  50. ೫೦.೦ ೫೦.೧ 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.119)
  51. "SmackDown-December 2, 2005 Results". Online World of Wrestling. Archived from the original on 2007-05-17. Retrieved 2007-05-01.
  52. "SmackDown-May 5, 2006 Results". Online World of Wrestling. Archived from the original on 2010-01-01. Retrieved 2007-05-01.
  53. ೫೩.೦ ೫೩.೧ 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.121)
  54. Ed Williams III (2006-05-21). "The Great Khali makes Undertaker rest in peace". World Wrestling Entertainment. Retrieved 2008-01-05.
  55. "SmackDown-July 4, 2006 Results". Online World of Wrestling. Archived from the original on 2008-01-10. Retrieved 2007-05-01.
  56. "SmackDown-August 4, 2006 Results". Online World of Wrestling. Archived from the original on 2008-08-29. Retrieved 2007-05-01.
  57. "SmackDown-April 18,2007 Results". Online World of Wrestling. Archived from the original on 2008-09-06. Retrieved 2007-05-01.
  58. ೫೮.೦ ೫೮.೧ PWI ಉದ್ಯೋಗಿಗಳು. 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.122)
  59. "SmackDown-November 3, 2006 Results". Online World of Wrestling. Archived from the original on 2015-09-06. Retrieved 2007-05-01.
  60. "SmackDown-January 12, 2007 Results". Online World of Wrestling. Archived from the original on 2007-05-21. Retrieved 2007-05-01.
  61. ೬೧.೦ ೬೧.೧ 2007ರ ಕುಸ್ತಿಗಳ ಸವಿವರ & ಸತ್ಯ ಘಟನೆಗಳ ಪುಸ್ತಕ. "ರೆಸ್ಲಿಂಗ್ಸ್‌ ಹಿಸ್ಟಾರಿಕಲ್ ಕಾರ್ಡ್ಸ್‌" (p.130)
  62. Dee, Louie (2007-01-28). "A Phenom-enal Rumble". World Wrestling Entertainment.com. Retrieved 2007-08-23.
  63. "Unforgiven 2007 Results". World Wrestling Entertainment. Retrieved 2007-09-16.
  64. "Cyber Sunday 2007 Results". PWWEW.net. Retrieved 2007-11-19.
  65. Dee, Louie (2007-11-18). "On the Edge of Hell". World Wrestling Entertainment. Retrieved 2007-11-19.
  66. ೬೬.೦ ೬೬.೧ Dee, Louie (2008-02-17). "No Way Out Match results". World Wrestling Entertainment. Retrieved 2008-02-17.
  67. Dee, Louie (2008-04-27). "Second verse, same as the first". World Wrestling Entertainment. Retrieved 2008-05-02.
  68. "SmackDown: A woman's scorn, a Deadman reborn". Retrieved 2008-06-25.
  69. DiFino, Lennie (2008-08-17). "Unleashed in Hell". World Wrestling Entertainment. Retrieved 2008-08-18.
  70. "Big Show lends Guerrero a giant hand". World Wrestling Entertainment. 2008-09-07. Retrieved 2008-09-07.
  71. Burdick, Michael (2008-10-05). "The knockout heard 'round the WWE Universe". World Wrestling Entertainment. Retrieved 2008-10-06.
  72. Passero, Mitch. "Deadman's revenge". World Wrestling Entertainment. Retrieved 2009-09-17. {{cite web}}: Text "2008-10-26" ignored (help)
  73. DiFino, Lennie (2008-11-23). "Beantown burial". World Wrestling Entertainment. Retrieved 2009-09-16.
  74. Adkins, Greg (2009-05-09). "Deadman Alive". World Wrestling Entertainment. Retrieved 2009-09-17.
  75. Murphy, Ryan (2009-08-23). "CM Punk comes out on top". World Wrestling Entertainment. Retrieved 2009-09-17.
  76. Tello, Craig (2009-09). "Hell's Gate-crasher". World Wrestling Entertainment. Retrieved 2009-09-26. {{cite web}}: Check date values in: |date= (help); Text "13" ignored (help)
  77. "Preview:Undertaker vs. World Heavyweight Champion CM Punk (Hell in a Cell Match)". World Wrestling Entertainment. 2009-10-04. Retrieved 2009-10-04.
  78. Sokol, Brian (2009-10-05). "Title changes highlight Hell in a Cell". Slam Wrestling. Canadian Online Explorer. Archived from the original on 2015-04-19. Retrieved 2009-10-05. {{cite web}}: Unknown parameter |coauthors= ignored (|author= suggested) (help)
  79. "Suburban Commando cast". Artist Direct. Archived from the original on 2010-10-29. Retrieved 2010-01-23.
  80. "Poltergeist: The Legacy". Fortune City. Archived from the original on 2008-12-25. Retrieved 2010-01-23.
  81. Radford, Bill (1999-09-19). "Proessional wrestling slams into comics". Colorado Springs Gazette/FindArticles. Archived from the original on 2010-08-14. Retrieved 2010-01-23.
  82. Chiappetta, Michael. "Journey Into Darkness The Unauthorized History Of Kane". TexbookX.com.
  83. WWE ಅಂಡರ್‌ಟೇಕರ್‌ ಉದಯಿಸಿದ ಚಿತ್ರ ಬರುತ್ತಿದೆ
  84. "Waltrip trivia page". Waltrip High School. Archived from the original on 2012-08-31. Retrieved 2010-01-23.
  85. ದಿ ಅಂಡರ್‌ಟೇಕರ್‌ನ ಹಚ್ಚೆಯ ಚಿತ್ರಗಳು.
  86. Martin, Adam (2005-09-02). "The Undertaker to lead Pacquiao's entourage". WrestleView.
  87. Martin, Adam (2007-06- 17). "The Undertaker gets involved in real estate venture; his return to WWE". WrestleView. Retrieved 2007-08-21. {{cite web}}: Check date values in: |date= (help)
  88. "The Zeus Compton Calaway Save the Animals fund". Texas A&M College of Veterinary Medicine & Biomedical Sciences. Archived from the original on 2009-04-12. Retrieved 2010-01-23.
  89. "Jr's Blog/Said at Cyber Sunday". JR/WWE. Archived from the original on 2008-11-08. Retrieved 2008-10-28.
  90. Ross, Jim (2008-11-26). "Jerry "The RING" Lawler...Ignorent, Fan Feedback...Knox/Brody...Orton/Male Fans...Swagger". JR's BBQ. Archived from the original on 2009-02-07. Retrieved 2009-03-02.
  91. "Undertaker def. Mark Henry (Casket Match)". World Wrestling Entertainment. Retrieved 2008-07-15.
  92. Burdick, Michael (2009-02-27). "No Cena Allowed". World Wrestling Entertainment. Retrieved 2009-03-02.
  93. ೯೩.೦ ೯೩.೧ ೯೩.೨ ೯೩.೩ ೯೩.೪ ೯೩.೫ ೯೩.೬ "The Undertaker". Wrestling-Caricatures. Retrieved 2008-03-31.
  94. ೯೪.೦ ೯೪.೧ ೯೪.೨ ೯೪.೩ ೯೪.೪ ೯೪.೫ Reynolds, R. D. (2007). The WrestleCrap Book of Lists!. ECW Press. p. 21. ISBN 1550227629.
  95. "'Mania Matches That Made Us Sweat: 1: Batista vs. Undertaker". World Wrestling Entertainment. Retrieved 2009-01-14.
  96. Ross, Jim (2007-02-19). "J.R.'s Superstar of the Week - Roddy Piper". World Wrestling Entertainment. Archived from the original on 2007-12-21. Retrieved 2021-07-16.{{cite web}}: CS1 maint: bot: original URL status unknown (link)
  97. Ross, Jim (2006-10-12). "J.R.'s Superstar of the Week - Mr. McMahon?". World Wrestling Entertainment.
  98. "Pro Wrestling Illustrated Award Winners Feud of the Year". Wrestling Information Archive. Archived from the original on 2011-07-07. Retrieved 2009-02-03.
  99. "Pro Wrestling Illustrated Award Winners Match of the Year". Wrestling Information Archive. Retrieved 2009-02-03.
  100. "Pro Wrestling Illustrated Top 500 - 2002". Wrestling Information Archive. Archived from the original on 2011-07-07. Retrieved 2009-02-03.
  101. WCW ವರ್ಲ್ಡ್ ಟ್ಯಾಗ್‌ ಟೀಮ್‌ ಟೈಟಲ್ ಇತಿಹಾಸ wrestling-titles.comನಲ್ಲಿ
  102. ವಿಶ್ವ ಹೆವಿವೈಟ್ ಪ್ರಶಸ್ತಿ (WWE ಸ್ಮ್ಯಾಕ್‌ಡೌನ್‌!) ಇತಿಹಾಸ wrestling-titles.comನಲ್ಲಿ
  103. WWWF/WWF/WWE ವಿಶ್ವ ಹೆವಿವೈಟ್ ಪ್ರಶಸ್ತಿ ಇತಿಹಾಸ wrestling-titles.comನಲ್ಲಿ
  104. WWF/WWE ಹಾರ್ಡ್‌ಕೋರ್‌ ಪ್ರಶಸ್ತಿ ಇತಿಹಾಸ wrestling-titles.comನಲ್ಲಿ
  105. WWWF/WWF/WWE ವಿಶ್ವ ಟ್ಯಾಗ್‌ ಟೀಮ್‌ ಪ್ರಶಸ್ತಿ ಇತಿಹಾಸ wrestling-titles.comನಲ್ಲಿ
  106. ಕ್ರೀಡೆಗಳು' ಅತ್ಯುನ್ನತ 10 ಗೆಲುವಿನ ಹೋರಾಟಗಳು Mirror.co.ukನಲ್ಲಿ
  107. "WrestleMania XV". Pro Wrestling History. Retrieved 2007-12-09.
  108. "WrestleMania 23". Pro Wrestling History. Retrieved 2007-12-09.

ಹೊರಗಿನ ಕೊಂಡಿಗಳು[ಬದಲಾಯಿಸಿ]