ವಿಷಯಕ್ಕೆ ಹೋಗು

ವನ್ಯಜೀವನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮೆರಿಕಾಗಳು ಮತ್ತು ಯುರೇಶಿಯಾಗಳಲ್ಲಿ ಎಲ್ಲೆಡೆ ಕಾಣಸಿಗುವ ವನ್ಯಜೀವಿಗಳಾದ ಜಿಂಕೆಗಳ ಹಲವಾರು ಪ್ರಭೇದಗಳು.
ವನ್ಯಜೀವಿಗಳಿಗೆ ಇನ್ನೊಂದು ಉದಾಹರಣೆಯಾದ ಒಂದು ಬಾಟಲ್‌ನೋಸ್ ಡಾಲ್‌ಫಿನ್ (Tursiops truncatus) ಕೆನಡಿ ಸ್ಪೇಸ್ ಸೆಂಟರ್ ಬಳಿಯ ಬನಾನಾ ನದಿಯಲ್ಲಿ ಸಂಶೋಧನಾ ದೋಣಿಯೊಂದು ಎಬ್ಬಿಸಿದ ಅಲೆಯ ಮೇಲೆ ಸರ್ಫ್ ಮಾಡುತ್ತಿರುವುದು.

ವನ್ಯಜೀವನ ವು ಎಲ್ಲಾ ಸಾಕಲು-ಆಗದ ಸಸ್ಯಗಳು, ಪ್ರಾಣಿಗಳು ಮತ್ತು ಇತರ ಜೀವಿಗಳನ್ನೊಳಗೊಂಡಿದೆ. ಕಾಡುಪ್ರಾಣಿಗಳನ್ನು ತಮ್ಮ ಉಪಯೋಗಕ್ಕಾಗಿ ಸಾಕುವ, ಬೆಳೆಸುವ ಅಥವಾ ಪಳಗಿಸುವ ಹಲವಾರು ಬಾರಿ ಭೂಮಿಯ ಎಲ್ಲಾ ಭಾಗಗಳಲ್ಲಿ ನಡೆದಿದೆ, ಮತ್ತು ಇದರಿಂದ ನಿಸರ್ಗದ ಮೇಲೆ ಗಣನೀಯವಾದ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳುಂಟಾಗಿವೆ.[]

ವನ್ಯಜೀವಿಗಳು ಎಲ್ಲಾ ರೀತಿಯ ಪರಿಸರದಲ್ಲೂ ಕಂಡು ಬರುತ್ತವೆ. ಮರುಭೂಮಿ, ಮಳೆಕಾಡು, ಬಯಲು ಪ್ರದೇಶ ಹಾಗೂ ಸಂಪೂರ್ಣ ಅಭಿವೃದ್ಧಿ ಹೊಂದಿದ ನಗರ ಪ್ರದೇಶಗಳಲ್ಲೂ ವನ್ಯಜೀವಿ ಪ್ರಭೇದಗಳನ್ನು ಕಾಣಬಹುದು. ಜನಪ್ರಿಯ ಸಂಸ್ಕೃತಿಯ ಸಾಮಾನ್ಯ ಉಲ್ಲೇಖದಂತೆ ವನ್ಯಜೀವಿ ಸಂಕುಲ ಮಾನವ ಸಂಗದಿಂದ ಪ್ರತ್ಯೇಕ ಇರಬಯಸುತ್ತವೆ. ಅದರೆ, ಪ್ರಪಂಚದಾದ್ಯಂತ ವನ್ಯಜೀವಿ ಸಂಕುಲದ ಮೇಲೆ ಮಾನವನ ಚಟುವಟಿಕೆಗಳು ಪ್ರಭಾವ ಬೀರಿವೆ ಎಂಬುದನ್ನು ಬಹಳಷ್ಟು ವಿಜ್ಞಾನಿಗಳೇ ಒಪ್ಪುತ್ತಾರೆ.[]


ಮಾನವನು ಇತಿಹಾಸ ಕಾಲದಿಂದಲೂ ವನ್ಯಜೀವಿಗಳಿಗಿಂತ ಪ್ರತ್ಯೇಕ ನಾಗರೀಕತೆಯನ್ನು ಹೊಂದಿದ್ದಾನೆ, ಅದು ಕಾನೂನು, ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯಂತಹ ಹಲವು ವಿಷಯಗಳಲ್ಲಿ. ಈ ವಿಷಯಗಳು ದಾಖಲೆಯಾದ ಇತಿಹಾಸದ ಉದ್ದಕ್ಕೂ ಚರ್ಚೆಗೆ ಕಾರಣಗಳಾಗಿವೆ. ಕೆಲವು ಪ್ರಾಣಿಗಳು ಪವಿತ್ರವೆಂದು ಧರ್ಮಗಳು ಆಗಾಗ ಘೋಷಣೆ ಮಾಡಿವೆ , ಆಧುನಿದ ಕಾಲಕ್ಕೆ ಸಂಬಂಧಿಸಿದಂತೆ ಪ್ರಕೃತಿದತ್ತ ಪರಿಸರವು ವನ್ಯಜೀವಿ ಪರಿಸರವನ್ನು ಶೋಷಣೆ ಮಾಡುವ ಹೋರಾಟದಿಂದ ಪ್ರಭಾವಿತಗೂಂಡಿದ್ದು, ಅದು ಮಾನವನ ಉಪಯೋಗಕ್ಕೆ ಅಥವಾ ಮನರಂಜನೆಯಾಗಿದೆ. ಸಾಹಿತ್ಯವು ಕೂಡಾ ಮಾನವನು ಸಾಂಪ್ರದಾಯಿಕವಾಗಿ ವನ್ಯಜೀವಿಗಳಿಂದ ಪ್ರತ್ಯೇಕ ಎಂಬುದರ ಉಪಯೋಗ ಪಡೆದಿಕೊಂಡಿದೆ.[]

ಆಹಾರ, ಮುದ್ದು ಪ್ರಾಣಿಗಳು, ಸಾಂಪ್ರದಾಯಿಕ ಔಷಧಗಳು.

[ಬದಲಾಯಿಸಿ]

ಮಾನವಶಾಸ್ತ್ರಜ್ಞರ ಪ್ರಕಾರ ಶಿಲಾಯುಗದ ಕಾಲದಲ್ಲಿ ಮನುಷ್ಯರು ಮತ್ತು ಬೇಟೆಗಾರರು ವನ್ಯಜೀವನದೊಂದಿಗೆ ಮಿಳಿತಗೊಂಡಿದ್ದರು. ಅಂದಿನ ಕಾಲಕ್ಕೆ ಪ್ರಾಣಿಗಳು ಮತ್ತು ಸಸ್ಯ ಸಂಬಂಧಿ ಗೆಡ್ಡೆಗೆಣಸುಗಳು ಅವರ ಅಹಾರವಾಗಿದ್ದವು. ಬಹಳ ಹಿಂದೆ ಮಾನವನ ಬೇಟೆಗೆ ಸಿಲುಕಿದ ಅನೇಕ ತಳಿಗಳು ನಿರ್ನಾಮವಾಗಿವೆ. ಇಂದಿಗೂ ಕೂಡ ಪ್ರಪಂಚದ ಕೆಲವು ಭಾಗಗಳಲ್ಲಿ ವನ್ಯಜೀವಿ ಸಾಕಣೆ, ಬೇಟೆಗಾರಿಕೆ,ಮೀನುಗಾರಿಕೆ ಗಳು ಆಹಾರದ ಮೂಲಗಳಾಗಿವೆ. ಹಾಗೆ ಪ್ರಪಂಚದ ಇನ್ನಿತರ ಪದೇಶಗಳಲ್ಲಿ ಕಂಡು ಬರುವಂತೆ ಬೇಟೆಗಾರಿಕೆ ಮತು ವಾಣಿಜ್ಯೇತರ ಮೀನುಗಾರಿಕೆಯು ಮುಖ್ಯವಾಗಿ ಕ್ರೀಡೆ ಅಥವಾ ಮನೋರಂಜನೆಯಾಗಿದೆ.ಬಹುಷ: ಭಾಗಷ: ಲಾಭವಾಗಿ ಮಾಂಸಾಹಾರವನ್ನು ಪರಿಗಣಿಸುತ್ತಾರೆ.[ಸಾಕ್ಷ್ಯಾಧಾರ ಬೇಕಾಗಿದೆ] ವನ್ಯಜೀವಿ ಮೂಲದ ಮಾಂಸಾಹಾರ ಸಾಂಪ್ರಾದಾಯಿಕವಾದ ಬುಶ್ ಮೀಟ್ ಎಂದು ಕರೆಯಲ್ಪಡುವ ಆಟ ಎಂದು ಭಾವಿಸಲಾಗಿಲ್ಲ. ಪೂರ್ವ ಏಷಿಯಾ ದೇಶಗಳಲ್ಲಿ ವನ್ಯಸಂಪತ್ತನ್ನು ಸಾಂಪ್ರದಾಯಿಕ ಆಹಾರದ ಮೂಲವಾಗಿಸುವ ಬೇಡಿಕೆ ಹೆಚ್ಚುತ್ತಿದೆ ಅದು ಶಾರ್ಕ್, ಸಸ್ತನಿ ವರ್ಗದ ಪ್ರಾಣಿಗಳು , ಪೆಂಗೋಲಿನ್‌ಗಳು ಮತ್ತು ಇತರ ಪ್ರಾಣಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ, ಅಲ್ಲದೆ ಈ ಪ್ರಾಣಿಗಳನ್ನು ತಿನ್ನುವುದರಿಂದ ಕಾಮೋತ್ತೇಜನವಾಗುತ್ತದೆಂಬ ನಂಬಿಕೆ ಈ ಜನರಲ್ಲಿ ಇದೆ.

2008ರ ನವೆಂಬರ್‌ನಲ್ಲಿ, TRAFFICನ ವರದಿಯ ಪ್ರಕಾರ ಮಲೇಶಿಯಾದ ವನ್ಯಜೀವಿ ಮತ್ತು ರಾಷ್ಟ್ರೀಯ ಉದ್ಯಾನಗಳ ಇಲಾಖೆ ಸುಮಾರು 900ರಷ್ಟು ಪುಕ್ಕಕಿತ್ತು "ಓವನ್‌ಗೆ ಹಾಕಲು ಸಿದ್ಧ"ವಾಗಿದ್ದ ಗೂಬೆಗಳು ಮತ್ತು ಇತರ ಸಂರಕ್ಷಿತ ವನ್ಯಜೀವಿ ಪ್ರಭೇದಗಳನ್ನು ಮುಟ್ಟುಗೋಲು ಹಾಕಿಕೊಂಡಿತು. ಈ ಪ್ರಾಣಿಪಕ್ಷಿಗಳನ್ನು ಚೀನಾದ ಕಾಡುಪ್ರಾಣಿಗಳ ಮಾಂಸವನ್ನು ಮಾರುವ ರೆಸ್ಟುರಾಗಳಿಗೆ ಕಳುಹಿಸಲಾಗುತ್ತಿತ್ತು ಎನ್ನಲಾಗಿದೆ. CITES(the Convention on International Trade in Endangered Species of Wild Fauna and Flora)ನಲ್ಲಿ ಪಟ್ಟಿ ಮಾಡಿದ ಅನೇಕ ನಗರಗಳಲ್ಲಿ ಇಂತಹ ವ್ಯಾಪಾರವನ್ನು ನಿರ್ಬಂಧಿಸಲಾಗಿದೆ.


ವನ್ಯಜೀವಿ ವ್ಯಾಪಾರ ಮೇಲ್ವಿಚಾರಣ ಜಾಲವಾದ TRAFFICನ ವರದಿಯ ಸಹ ಲೇಖಕ ಕ್ರಿಸ್ ಎಸ್. ಶೆಪರ್ಡ್ ಹೇಳುವಂತೆ, "ಮಲೇಶಿಯಾ ದೇಶವು ಅತ್ಯದ್ಭುತ ವನ್ಯಜೀವಿ ಸಂಪತ್ತಿನ ತವರಾಗಿದೆ". "ಆದಾಗ್ಯೂ, ಮಲೇಶಿಯಾದ ಪ್ರಕೃತಿದತ್ತ ಜೀವವೈವಿದ್ಧ್ಯತೆಗೆ ಕಾನೂನುಬಾಹಿರ ಬೇಟೆಗಾರಿಕೆ ಮತ್ತು ವ್ಯಾಪಾರದಿಂದ ಬೆದರಿಕೆಯಿದೆ."

ಭೌತಶಾಸ್ತ್ರಜ್ಞೆ ಮತ್ತು ಲೇಖಕಿ ಸ್ಯಾಲೀ ನೀಡೆಲ್ 2008ರ ನವೆಂಬರ್ ವರದಿಯಲ್ಲಿ ದಾಖಲಿಸಿರುವಂತೆ ಅಮೆಝಾನ್ ನದಿಯ ಉದ್ದಕ್ಕೂ ಅಸಂಖ್ಯಾತ ಜೀವಿಗಳು ಮತ್ತು ಕಾಡಿನಿಂದ ಹಿಡಿದ ಮರ್ಮೋಸೆಟ್‌ಗಳೂ ಸೇರಿ ಸುತ್ತಲಿನ ವನ್ಯಜೀವಿಗಳು ಅನಧಿಕೃತ ಮಾರುಕಟ್ಟೆಗೆ ಕಡಿಮೆ ಬೆಲೆ $1.60 (5 ಪೆರೂವಿಯನ್ ಸೋಲ್ಸ್)ಗೆ ಮಾರಲ್ಪಡುತ್ತವೆ. Veggie Revolution: Monkeys and parrots pouring out from the jungle ಅಮ್ಹೆಝಾನ್‌ನ ಅಸಂಖ್ಯ ಜೀವಪ್ರಭೇದಗಳಾದ ಮತ್ತು ಪೆಕ್ಕಾರೀಗಳು, ಅಗೋಟೀಗಳು, ಆಮೆಗಳು, ಆಮೆಮೊಟ್ಟೆಗಳು, ಅನಕೊಂಡಾಗಳು, ಆರ್ಮಡಿಲ್ಲೋಗಳು ಮುಂತಾದ ಜೀವಿಗಳೂ ಕೂಡ ಪ್ರಾಥಮಿಕವಾಗಿ ಆಹಾರವಾಗಿ ಮಾರಾಟಗೂಳ್ಳುತ್ತವೆ. ಈ ಅನಧಿಕೃತ ಮಾರುಕಟ್ಟೆಗಳಿಗೆ ಬರುವ ಇತರ ಜೀವಿಗಳಾದ ಮಂಗಗಳು ಮತ್ತು ಗಿಳಿಗಳನ್ನು ಸಾಕುಪ್ರಾಣಿಗಳ ಧಂಧೆಗೆ ಸೇರಿಸಲಾಗುತ್ತದೆ ಮತ್ತು ಇವನ್ನು ಸಾಧಾರಣವಾಗಿ ಆಗಾಗ ಯುನೈಟೆಡ್ ಸ್ಟೇಟ್ಸ್‌ಗೆ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಮತ್ತೂ ಕೆಲವು ಅಮೆಜಾನ ಜೀವಪ್ರಭೇದಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಲಾಗುವ ಸಾಂಪ್ರದಾಯಿಕ ಔಷಧಿಗಳ ಜನಪ್ರಿಯ ಪದಾರ್ಥಗಳ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಪ್ರಾಣಿಗಳ ಅಂಗಾಂಗಗಳ ಔಷಧೀಯ ಮೌಲ್ಯವು ಹೆಚ್ಚಾಗಿ ಮೂಢನಂಬಿಕೆಗಳನ್ನು ಆಧರಿಸಿದ್ದಾಗಿದೆ.

ರಿಲಿಜನ್

[ಬದಲಾಯಿಸಿ]

ಹಲವಾರು ವನ್ಯಜೀವಿ ಪ್ರಭೇದಗಳು ಪ್ರಪಂಚದೆಲ್ಲೆಡೆ ಹರಡಿರುವ ಸಂಸ್ಕೃತಿಗಳಲ್ಲಿ ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ, ಮತ್ತು ಅವುಗಳನ್ನು ಹಾಗೂ ಅವುಗಳ ಉತ್ಪನ್ನಗಳನ್ನು ಧಾರ್ಮಿಕ ಕ್ರಿಯಾವಿಧಿಗಳಲ್ಲಿ ಪವಿತ್ರ ವಸ್ತುಗಳನ್ನಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಗರುಡಗಳು, ಗಿಡುಗಗಳು ಮತ್ತು ಅವುಗಳ ಗರಿಗಳು ಮೂಲ ಅಮೆರಿಕನ್ರಲ್ಲಿ ಧಾರ್ಮಿಕ ವಸ್ತುಗಳಾಗಿ ಅತಿ ಹೆಚ್ಚು ಮಹತ್ವದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯವನ್ನು ಹೊಂದಿವೆ.

ಬೇರೆಬೇರೆ ಸ್ಥಳಗಳು ಭಿನ್ನವಾದ್ದ ದೇವರುಗಳನ್ನು ಹೊಂದಿರುವುದ್ದರಿಂದ ಎಲ್ಲೆಡೆಯಲ್ಲೂ ಭಿನ್ನಭಿನ್ನವಾದ ಪ್ರಾಣಿಗಳು ಪವಿತ್ರಸ್ಥಾನವನ್ನು ಪಡೆದುಕೊಂಡಿವೆ. ಪ್ರಾಣಿಗಳು ಪೂಜ್ಯವೆನಿಸಿಕೊಳ್ಳಲು ಅಥವಾ ಪವಿತ್ರವೆಂದು ಪರಿಗಣಿಸಲು ಸಾಮಾನ್ಯವಾಗಿ ದೇವರುಗಳು ಕಾರಣವಾಗಿರುತ್ತಾರೆ. ಉದಾಹರಣೆಗೆ: ಗ್ರೀಕ್ ಪುರಾಣದಲ್ಲಿ ನವಿಲುಗಳು ಮತ್ತು ಆಕಳುಗಳು ಹೆರಾ ದೇವತೆಗಳಿಗೆ ಪ್ರಿಯವಾಗಿದ್ದುವೆಂದು ಕಾರಣದಿಂದಾಗಿ ಪವಿತ್ರವಾಗಿವೆ. ಇದರಜತೆಗೇ ಗ್ರೀಕ್ ಪುರಾಣದಲ್ಲಿ ಪವಿತ್ರವೆಂದು ಪರಿಗಣಿಸಲಾಗೀರುವ ಜೀವಿಗಳೆಂದರೆ ನಾಯಿಗಳು ಮತ್ತು ಗೂಬೆಗಳು; ಏಕೆಂದರೆ ನಾಯಿಯು ಏರ್‌ಳ ಪ್ರೀತಿಯ ಪ್ರಾಣಿಯಾಗಿದ್ದಿತು ಮತ್ತು ಗೂಬೆಯು ಅಥೀನಾಳ ಮೆಚ್ಚಿನ ಪ್ರಾಣಿಯಾಗಿದ್ದಿತು. ಇನ್ನು ಕೆಲವು ಪ್ರಾಣಿಗಳು ದೇವರುಗಳಿಗೆ ಬಲಿಯ ರೂಪದಲ್ಲಿ ಅರ್ಪಿಸಲಾಗುವವೆಂಬ ಕಾರಣದಿಂದಾಗಿ ಅವುಗಳಿಗೆ ಪವಿತ್ರಸ್ಥಾನವನ್ನು ನೀಡಲಾಗಿದೆ. ಆಕಳನ್ನು ಈ ಕಾರಣದಿಂದಾಗಿಯೂ ಕೂಡ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಕೊನೆಯದಾಗಿ, ಒಬ್ಬ ದೇವತೆಯು ಯಾವುದೇ ಕಾರಣದಿಂದಾಗಿ ಒಂದು ಪ್ರಾಣಿಯ ರೂಪವನ್ನು ಧರಿಸಿದಲ್ಲಿ ಆ ಪ್ರಾಣಿಯು ಪವಿತ್ರವೆನಿಸಿಕೊಳ್ಳುತ್ತದೆ. ಉದಾಹರಣೆಗೆ ಜಿಯೂಸ್ ದೇವರು ತನ್ನ ಹೆಂಡತಿ ಹೆರಾಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಲವಾರು ಪ್ರಾಣಿಗಳ ರೂಪ ತಾಳುತ್ತಿದ್ದನು. []

ದೂರದರ್ಶನ

[ಬದಲಾಯಿಸಿ]
ಡಗ್ಲಸ್ ಅಳಿಲು (Tamiasciurus douglasii) ವನ್ಯಜೀವನಕ್ಕೆ ಒಂದು ಉದಾಹರಣೆಯಾಗಿದೆ.

ವನ್ಯಜೀವನವು ಶೈಕ್ಷಣಿಕ ಟೆಲಿವಿಶನ್ ಕಾರ್ಯಕ್ರಮಗಳ ಪ್ರಧಾನ ವಿಷಯವಾಗಿದೆ. National Geographicನ ವಿಶೇಷ ಕಾರ್ಯಕ್ರಮಗಳನ್ನು CBSನಲ್ಲಿ 1965ರಲ್ಲಿ ಮೊದಲಿಗೆ ತೋರಿಸಲಾಗುತ್ತಿದ್ದು, ನಂತರ ಇದು ABCಗೆ ಬದಲಾವಣೆಯಾಗಿ ಆಮೇಲೆ PBS ಬಳಿ ಹೋಯಿತು. 1963ರಲ್ಲ್ಲಿNBCಯು ಹೊಸತಾಗಿ ವೈಲ್ಡ್ ಕಿಂಗ್‌ಡಮ್ ಎಂಬ ಜನಪ್ರಿಯ ಕಾರ್ಯಕ್ರಮವನ್ನು ಆರಂಭಿಸಿತು ಹಾಗೂ ಇದನ್ನು ಪ್ರಾಣಿಶಾಸ್ತ್ರಜ್ಞರಾದ ಮಾರ್ಲಿನ್ ಪರ್ಕಿನ್ಸ್ ನಡೆಸಿಕೊಡುತ್ತಿದ್ದರು. ಯು.ಕೆBBC ನ್ಯಾಚುರಲ್ ಹಿಸ್ಟರಿ ಯುನಿಟ್ ಕೂಡ ಇದೇ ತರಹದ ಕೆಲಸಲ್ಲಿ ಅಗ್ರಗಾಮಿಯಾಗಿದ್ದು, ಇದರ ಪ್ರಥಮ ವನ್ಯಜೀವನ ಸರಣಿಯಾದ ಸರ್ ಪೀಟರ್ ಸ್ಕಾಟ್ ನಡೆಸಿಕೊಡುತ್ತಿದ್ದ LOOK ಎಂಬುದು ಚಿತ್ರೀಕರಣಗೊಂಡ ಘಟಕಗಳನ್ನು ನಡುನಡುವೆ ಪ್ರದರ್ಶಿಸುತ್ತಿದ್ದ ಸ್ಟುಡಿಯೋ ಆಧರಿತ ಕಾರ್ಯಕ್ರಮವಾಗಿತ್ತು. ಇಡೇ ಸರಣಿಯಲ್ಲಿ ಡೇವಿಡ್ ಅಟೆನ್‌ಬರೋರವರು ಮೊದಲ ಬಾರಿ ಭಾಗವಹಿಸಿದರು ಹಾಗೂ ಇದು Zoo Quest ಎಂಬ ಅನ್ನೊಂದು ಸರಣಿಗೆ ಕಾರಣವಾಯಿತು. ಈ ಸರಣಿಯಲ್ಲಿ ಅವರು ಕ್ಯಾಮೆರಾಮನ್ ಚಾರ್ಲ್ಸ್ ಲಾಗಸ್‌ಜತೆಗೆ ಸಾಮಾನ್ಯವಾಗಿ ಕಾಣಸಿಗದ ವಿಶೇಷ ವನ್ಯಜೀವಿಗಳನ್ನು ಹುಡುಕಾಡುತ್ತಾ ಹಲವಾರು ವಿದೇಶೀ ಸ್ಥಳಗಳಿಗೂ ಭೇಟಿನೀಡಿದರು - ಇದರಲ್ಲಿ ಪ್ರಮುಖವಾಗಿ ಉಲ್ಲೇಖಿಸಬಹುದಾದುವೆಂದರೆ, ಇಂಡೋನೇಶಿಯಾದಲ್ಲಿ ಕೊಮೋಡೋ ಡ್ರ್ಯಾಗನ್ಗಳು ಹಾಗೂ ಮಡಗಾಸ್ಕರ್‌ನಲ್ಲಿ ಲೆಮ್ಯೂರ್‌ಗಳು. 1984ರಿಂದೀಚೆಗೆ, Discovery Channel ಮತ್ತು ಅದರ ಸಹೋದರ ಚ್ಯಾನೆಲ್ ಆದ Animal Planet ಕೇಬಲ್ ಟೆಲಿವಿಶನ್ ಜಾಲದ ತಮ್ಮ ವನ್ಯಜೀವನ ಕಾರ್ಯಕ್ರಮಗಳಿಂದಾಗಿ ಯು.ಎಸ್.ಎ.ನಲ್ಲಿ ಮಾರುಕಟ್ಟೆ ಪ್ರಾಬಲ್ಯವನ್ನು ಹೊಂದಿವೆ, ಹಾಗೂ ಇದೇ ವೇಳೆಗೆ PBS ನಲ್ಲಿ ಪ್ರಸಾರವಾಗುವ ನ್ಯೂಯಾರ್ಕ್‌ನ WNET-13 ನಿರ್ಮಿಸಿರುವ NATURE ಸರಣಿ ಹಾಗೂ ಬಾಸ್ಟನ್‌ನ WGBH ನಿರ್ಮಿಸಿರುವ NOVA ಕಾರ್ಯಕ್ರಮಗಳೂ ಗಮನಸೆಳೆಯುವಂತಿವೆ. ನೇಚರ್ ಡಾಕ್ಯುಮೆಂಟರಿಯನ್ನು ಕೂಡಾ ನೋಡಿರಿ. ವನ್ಯಜೀವನ ದೂರದರ್ಶನವು ಈಗ ಒಂದು ಕೋಟಿಗಟ್ಟಲೆ ಡಾಲರ್ ಬೆಲೆಬಾಳುವ ಉದ್ಯಮವಾಗಿದ್ದು, ಯು,ಕೆ, ಯು.ಎಸ್.ಎ, ನ್ಯೂಜಿಲ್ಯಾಂಡ್ ,ಆಸ್ಟ್ರೇಲಿಯಾ, ಆಸ್ಟ್ರಿಯಾ, ಜರ್ಮನಿ, ಜಪಾನ್, ಮತ್ತು ಕೆನಡಾ ಒಳಗೊಂಡ ದೇಶಗಳಲ್ಲಿನ ಹಲವಾರು ಪರಿಣತ ಸಾಕ್ಷ್ಯಚಿತ್ರ ನಿರ್ದೇಶಕರನ್ನೊಳಗೊಂಡಿದೆ.

ಪ್ರವಾಸೋದ್ಯಮ

[ಬದಲಾಯಿಸಿ]

ಮಾಧ್ಯಮದ ಮೂಲಕ ಪ್ರಚಾರ ಮತ್ತು ಪ್ರಾಥಮಿಕ ಶಿಕ್ಷಣ ಪಠ್ಯಕ್ರಮದಲ್ಲಿ ಸಂರಕ್ಷನಾ ಶಿಕ್ಷಣವನ್ನು ಒಳಗೊಳ್ಳಲಾಗಿರುವುದರಿಂದಾಗಿ ವನ್ಯಜೀವನ ಪ್ರವಾಸೋದ್ಯಮ ಜೀವಪ್ರವಾಸೋದ್ಯಮಗಳು ತೀವ್ರಗತಿಯಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವುದೇ ಅಲ್ಲದೆ ಸಮೃದ್ಧ ವನ್ಯಜೀವನ ವೈವಿಧ್ಯಗಳನ್ನು ಹೊಂದಿರುವ ಅಭಿವೃದ್ಧಿಶೀಲ ದೇಶಗಳು, ವಿಶೇಷವಾಗಿ ಆಫ್ರಿಕಾ and ಭಾರತಗಳು ಗಣನೀಯ ಪ್ರಮಾಣದ ಆದಾಯ ದೊರಕಲು ಕಾರಣವಾಗಿದೆ. ಈ ಬೆಳೆಯುತ್ತಿರುವ ಜನಪ್ರಿಯ ಪ್ರವಾಸೋದ್ಯಮದ ಪ್ರಕಾರವು ಬಡರಾಷ್ಟ್ರಗಳು ತಮ್ಮ ಸಮೃದ್ಧ ವನ್ಯಜೀವನ ಪರಂಪರೆ ಮತ್ತು ಅವುಗಳ ನೆಲೆಗಳನ್ನು ಕಾಪಾಡಲು ಬಹಳ ಅವಶ್ಯಕವಿರುವ ನೆಲೆಗಳನ್ನು ಒದಗಿಸಿದೆ.

ವಿನಾಶ/ಅಳಿವು

[ಬದಲಾಯಿಸಿ]
ಮೈಟೋಕಾಂಡ್ರಿಯಲ್ ಪಾಪ್ಯುಲೇಶನ್ ಜೆನೆಟಿಕ್ಸ್ ಪ್ರಕಾರ ಮೊತ್ತಮೊದಲ ಮಾನವ ವಲಸೆಗಳು. ಸಂಖ್ಯೆಗಳು ಈಗಿನದ್ದಕ್ಕಿಂತ ಹಿಂದಿನ ಸಹಸ್ರಮಾನಗಳನ್ನು ಸೂಚಿಸುತ್ತವೆ.

ಈ ವಿಭಾಗವು ವನ್ಯಜೀವನ ವಿನಾಶದ ಮಾನವಜನ್ಯ ರೂಪಗಳ ಬಗ್ಗೆ ಗಮನ ಹರಿಸಿದೆ.

130,000 – 70,000 ವರ್ಷಗಳ ಹಿಂದೆ ಆಫ್ರಿಕಾದಿಂದ ನಮ್ಮ ವಲಸೆಹೋಗುವಿಕೆಯ ಸಮಯದಿಂದಲೂ ವನ್ಯಜೀವಸಮೂಹಗಳ ಶೋಷಣೆಯು ಆಧುನಿಕ ಮಾನವನ ಗುಣಲಕ್ಷಣವಾಗಿದೆ. ಕೆಲವು ಶತಮಾನಗಳಿಂದಲೂ ಕೆಲವು ಸಸ್ಯಗಳು ಹಾಗೂ ಪ್ರಾಣಿಗಳ ಸಂಕುಲಗಳ ಅಳಿವುಗಳ ಮಟ್ಟವು ಎಷ್ಟು ಹೆಚ್ಚಾಗಿದೆಯೆಂದರೆ, ನಾವು ಈ ಗ್ರಹದ ಆರನೇ ಬೃಹತ್ ಅಳಿವಿನ ವಿದ್ಯಮಾನವಾದ Holocene Mass Extinctionನ ಘಟ್ಟದಲ್ಲಿದ್ದೇವೆ ಎನ್ನಲಾಗುತ್ತಿದೆ.

ವನ್ಯಜೀವನದ ವಿನಾಶವು ಯಾವಾಗಲೂ ಒಂದು ಪ್ರಭೇದದ ಅಳಿವಿಗೆ ಕಾರಣವಾಗಲಾರದು, ಆದರೆ, ಪ್ರಪಂಚದಾದ್ಯಂತ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿರುವ ಇಡೀ ಪ್ರಭೇದಗಳ ಅಳಿವುಗಳು ವನ್ಯಜೀವನ ವಿನಾಶದ ಯಾವುದೇ ಪರಾಮರ್ಶೆಗಿಂತ ವ್ಯತಿರಿಕ್ತವಾಗಿದೆ, ಏಕೆಂದರೆ ಯಾವುದೇ ವನ್ಯಜೀವಿಯು ಅಳಿವಿನ ಮಟ್ಟವನ್ನು ಮುಟ್ಟಿದರೆ ಮತ್ತೆ ತಿರುಗಿ ಬರಲು ಸಾಧ್ಯವಾಗುವುದಿಲ್ಲ.

ವನ್ಯಜೀವನದ ವಿನಾಶಕ್ಕೆ ಕಾರಣವಾಗುವ ನಾಲ್ಕು ಅತಿ ಸಾಮಾನ್ಯ ಕಾರಣಗಳೆಂದರೆ: ಅತಿಕೊಲ್ಲುವಿಕೆ, ನೆಲೆಯ ವಿನಾಶ ಮತ್ತು ವಿಚ್ಛೇದ, ಹೊಸದಾಗಿ ಪರಿಚಯಿಸಲಾದ ಪ್ರಭೇದಗಳ ಪರಿಣಾಮ ಹಾಗೂ ಅಳಿವಿನ ಸರಣಿಗಳು.[]

ಅತಿಕೊಲ್ಲುವಿಕೆ

[ಬದಲಾಯಿಸಿ]

ಒಂದು ಪ್ರದೇಶದ ವನ್ಯಜೀವಿಗಳ ಸಂತಾನೋತ್ಪತ್ತಿಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬೇಟೆಯಾಡುವುದು ನಡೆದಲ್ಲಿ ಅದನ್ನು ಅತಿಕೊಲ್ಲುವಿಕೆ ಎನ್ನಲಾಗುತ್ತದೆ. ಇದರ ಪರಿಣಾಮಗಳು ಮಂದಗತಿಯ ಬೆಳವಣಿಗೆಯ ಪ್ರಭೇದಗಳ ಮೇಲೆ ಗಣನೀಯವಾಗಿ ಆಗುವುದು ಕಂಡುಬರುತ್ತದೆ, ಉದಾಹರಣೆಗೆ ದೊಡ್ಡ ಗಾತ್ರದ ಮೀನುಗಳ ಪ್ರಭೇದಗಳು. ಮೊದಲಿಗೆ ವನ್ಯಜೀವಿ ಸಮೂಹದ ಒಂದು ಭಾಗವನ್ನು ಬೇಟೆಯಾಡಿದಾಗ, ಸಾಂದ್ರತೆಯನ್ನವಲಂಬಿಸಿದ ಅವರೋಧವು ಕಡಿಮೆಯಾಗುವ ಕಾರಣ ಹೆಚ್ಚಿನ ಸಂಪನ್ಮೂಲಗಳ (ಆಹಾರ, ಮತ್ತಿತರ) ಲಭ್ಯತೆಯ ಕಾರಣದಿಂದ ಹೆಚ್ಚಿನ ಬೆಳವಣಿಗೆ ಹಾಗೂ ಪುನರುತ್ಪತ್ತಿಗಳು ಕಂಡುಬರುತ್ತವೆ. ಬೇಟೆ, ಮೀನುಗಾರಿಕೆ ಮುಂತಾದವುಗಳು ಒಂದು ಸಮೂಹದ ಸದಸ್ಯರ ನಡುವಿನ ಸ್ಪರ್ಧೆಯನ್ನು ಕಡಿಮೆಮಾಡಿವೆ. ಆದರೆ ಈ ಬೇಟೆಯ ಪ್ರಮಾಣವು ಪ್ರಾಣಿಸಮೂಹದ ಹೊಸ ಸದಸ್ಯರು ಬೆಳೆದು, ಸಂತಾನೋತ್ಪತ್ತಿಯ ವಯಸ್ಸಿಗೆ ಬಂದು, ಮತ್ತೆ ಹೊಸ ಸದಸ್ಯರನ್ನು ಉತ್ಪಾದಿಸುವ ಪ್ರಮಾಣಕ್ಕಿಂತ ಹೆಚ್ಚಾದಲ್ಲಿ, ಪ್ರಾಣಿಸಮೂಹದ ಸಂಖ್ಯೆ ಕ್ಷೀಣಿಸಲು ಆರಂಭವಾಗುವುದು.

ವನ್ಯಪ್ರಾಣಿಸಮೂಹಗಳು ತಮ್ಮ ದ್ವೀಪಗಳ ಮಿತಿಯಲ್ಲಿರುತ್ತವೆ - ಇವು ನಿಜವಾದ ದ್ವೀಪಗಳಾಗಿರಬಹುದು ಅಥವಾ ಸಂಬಂಧಿಸಿದ ಪ್ರಭೇದದ ನೆಲೆಪ್ರದೇಶಳೇ ಆ ಪ್ರಭೇದಕ್ಕೆ ’ದ್ವೀಪ’ಗಳಂತಿರಬಹುದು - ಇವುಗಳಲ್ಲಿ ಕೂಡಾ ಅಸಂರಕ್ಷಿತ ಬೇಟೆಯಿಂದಾಗಿ ಪ್ರಾಣಿಸಮೂಹವು ವಿನಾಶದ ಅಪಾಯವನ್ನೆದುರಿಸುತ್ತಿರುವುದು ಕಂಡುಬರುತ್ತಿದೆ.

ನೆಲೆಯ ವಿನಾಶ ಮತ್ತು ವಿಚ್ಛೇದ

[ಬದಲಾಯಿಸಿ]

ಯಾವುದೇ ಪ್ರಭೇದದ ನೆಲೆಯನ್ನು ಅದರ ಆಯ್ಕೆಯ ಪ್ರದೇಶ ಅಥವಾ ಪ್ರಾಂತ್ಯ ಎಂದು ಪರಿಗಣಿಸಲಾಗಿದೆ. ಮಾನವ ನೆಲೆಗಳನು ಸ್ಥಾಪಿಸುವ ಹಲವಾರು ಪ್ರಕ್ರಿಯೆಗಳು ಈ ಪ್ರದೇಶದಲ್ಲಿ ನಷ್ಟವನ್ನುಂಟುಮಾಡಿ ಭೂಮಿಯು ಆ ಪ್ರಭೇದವನ್ನು ಪೋಷಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವಂತೆ ಆಗಬಹುದು. ಹಲವಾರು ಸಂದರ್ಭದಲ್ಲಿ ಭೂಮಿಯ ಮೇಲಿನ ಈ ಬದಲಾವಣೆಗಳು ವನ್ಯ ಒಳಪ್ರದೇಶದಲ್ಲಿ ತೇಪೆಯಂತಹ ವಿಚ್ಛೇದಗಳುಂಟಾಗಲು ಕಾರಣವಾಗುತ್ತವೆ. ಕೃಷಿಭೂಮಿಯಲ್ಲಿ ಈ ರೀತಿಯ ಬಹಳ ವಿಚ್ಛೇದಗೊಂಡ ಅಥವಾ ಅವಶೇಷಗಳಂತಹ ನೆಲೆಗಳು ಕಂಡುಬರುತ್ತವೆ. ಭೂಪ್ರದೇಶಗಳುದ್ದಕ್ಕೂ ಹರಡಿದ ಹೊಲಗದ್ದೆಗಳ ನಡುನಡುವೆ ಆಗಾಗ ಹಾಗೇ ಉಳಿದುಕೊಂಡಿರುವ ಮರಗಳ ಪ್ರದೇಶಗಳು ಇಲ್ಲವೇ ಕಾಡುಗಳು ಮತ್ತು ಒಮ್ಮೊಮ್ಮೆ ಕಾಡುಗಳ ನಡುವೆ ಅಲ್ಲಲ್ಲಿ ಸಣ್ಣಸಣ್ಣ ಹೊಲಗಳು ಕಂಡುಬರುವುದಿದೆ.

ನೆಲೆಗಳ ವಿನಾಶಕ್ಕೆ ಉದಾಹರಣೆಗಳೆಂದರೆ ಗದ್ದೆ ತೋಟಗಳಲ್ಲಿ ಸಾಕಲಾದ ಪ್ರಾಣಿಗಳ ಮೇಯುವಿಕೆಯಿಂದ ಹಸಿರುಪ್ರದೇಶಗಳ ನಾಶವಾಗುವಿಕೆ, ನೈಸರ್ಗಿಕ ಕಾಳ್ಗಿಚ್ಚುಗಳ ಕ್ರಮದಲ್ಲಿ ಬದಲಾವಣೆ, ಟಿಂಬರ್ ಉತ್ಪಾದನೆಗಾಗಿ ಕಾಡುಗಳ ಕಡಿಯುವಿಕೆ ಮತ್ತು ನಗರಗಳ ವಿಸ್ತರಣೆಗಾಗಿ ಜೌಗುಪ್ರದೇಶಗಳ ಒಣಗಿಸುವಿಕೆ.

ಪರಿಚಯಿಸಲಾದ ಪ್ರಭೇದಗಳ ಪರಿಣಾಮ

[ಬದಲಾಯಿಸಿ]

ಇಲಿಗಳು, ಬೆಕ್ಕುಗಳು, ಮೊಲಗಳು, ಡ್ಯಾಂಡೆಲಿಯನ್ಗಳು ಮತ್ತು ಪಾಯ್ಸನ್ ಐವಿಗಳು ಪ್ರಪಂಚದೆಲ್ಲೆಡೆ ವನ್ಯಜೀವ ಪ್ರಭೇದಗಳಿಗೆ ಆಕ್ರಮಣಕಾರೀ ಅಪಾಯವನ್ನೊಡ್ಡಿವೆ.[ಸಾಕ್ಷ್ಯಾಧಾರ ಬೇಕಾಗಿದೆ]. ಸಾಧಾರಣವಾಗಿ ತಮ್ಮ ಮೂಲ ನೆಲೆಗಳಲ್ಲಿ ಕಡಿಮೆಸಂಖ್ಯೆಯಲ್ಲಿರುವ ಪ್ರಭೇದಗಳು ದೂರದ, ಆದರೆ ಮೂಲನೆಲೆಯಂತಹುದೇ ಹವಾಗುಣವಿರುವ ಪ್ರದೇಶಗಳಲ್ಲಿ ಮಿತಿಯಿಲ್ಲದಂತೆ ಬೆಳೆದು ಆ ನೆಲೆಗಳನ್ನಾಕ್ರಮಿಸಿಕೊಳ್ಳುವುದು ಕಂಡುಬರುತ್ತದೆ. ಇದಕ್ಕೆ ಕಾರಣಗಳು ಯಾವಾಗಲೂ ಸ್ಪಷ್ಟವಾಗಿಲ್ಲ, ಆದರೆ ಚಾರ್ಲ್ಸ್ ಡಾರ್ವಿನ್ ಅತಿವಿಶೇಷವಾದ ಜೀವಪ್ರಭೇದಗಳು ಈ ಮೊದಲು ವಿಕಾಸವಾಗದೆ ಇದ್ದ ಪ್ರದೇಶಗಳಲ್ಲಿ ಹೆಚ್ಚುಸಂಖ್ಯೆಯಲ್ಲಿ ಅಭಿವೃದ್ಧಿ ಹೊಂದುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸತ್ಯವೇನೆಂದರೆ ಹೆಚ್ಚಿನ ಸಂಖ್ಯೆಯ ಜೀವಪ್ರಭೇದಗಳು ಹೊಸ ನೆಲೆಗೆ ಬಂದು ನೆಲೆಸಿದಾಗ ಯಶಸ್ವಿಯಾಗಿ ಸಂತಾನೋತ್ಪತ್ತಿ ಮಾಡುವುದಿಲ್ಲ. ಆದರೆ, ಒಮ್ಮೊಮ್ಮೆ ಕೆಲವು ಸಮೂಹಗಳು ಚೆನ್ನಾಗಿ ನೆಲೆಯೂರುವುದುಂಟು ಮತ್ತು ಅವು ಹವಾಗುಣಗೆ ಒಗ್ಗಿದ ನಂತರ ಕ್ರಮೇಣ ಗಣನೀಯ ಸಂಖ್ಯೆಯಲ್ಲಿ ಹೆಚ್ಚಿಕೊಳ್ಳಬಹುದು, ಹಾಗೂ ಇದರಿಂದ ಅವುಗಳ ಹೊಸ ನೆಲೆಗಳ ಹಲವಾರು ಮೂಲತತ್ವಗಳ ಮೇಲೆ ವಿನಾಶಕಾರೀ ಪರಿಣಾಮವನ್ನು ಬೀರಬಹುದು.

ಅಳಿವಿನ ಸರಣಿಗಳು

[ಬದಲಾಯಿಸಿ]

ಈ ಕೊನೆಯ ವಿಧವು ಅನುಷಂಗಿಕ ಪರಿಣಾಮಗಳಲ್ಲೊಂದಾಗಿದೆ. ಜೀವಿಗಳ ಎಲ್ಲಾ ವನ್ಯ ಸಮೂಹಗಳು ತಮ್ಮ ಸುತ್ತಮುತ್ತಲೂ ಇರುವ ಇತರ ಜೀವಿಗಳ ಜತೆ ಬಹಳ ಸಂಕೀರ್ಣವಾದ, ಒಳಗೊಳಗೇ ಹಬ್ಬಿಕೊಂಡ ಸಂಬಂಧಗಳಿವೆ. ಹಿಪ್ಪೋಪೊಟಮಸ್ನಂತಹ ದೊಡ್ಡ್ಶ ಸಸ್ಯಾಹಾರೀ ಪ್ರಾಣಿಗಳ ದೇಹದ ಮೇಲೆ ಬೆಳೆಯುವ ಪರಾವಲಂಬೀ ಕೀಟಗಳನ್ನು ಹಲವಾರು ರೀತಿಯ ಕೀಟಾಹಾರೀ ಪಕ್ಷಿಗಳು ತಿನ್ನುತ್ತವೆ. ಹಿಪ್ಪೋ ಏನಾದರೂ ಸತ್ತುಹೋದಲ್ಲಿ ಈ ಪಕ್ಷಿಗಳ ಗುಂಪುಗಳೂ ಸತ್ತುಹೋಗುತ್ತವೆ, ಹಾಗೂ ಮುಂದಕ್ಕೆ ಇದರಿಂದಾಗಿ ಈ ಪಕ್ಷಿಗಳ ಮೇಲೆ ಅವಲಂಬಿತವಾಗಿರುವ ಇತರ ಪ್ರಭೇದಗಳ ನಾಶವೂ ಉಂಟಾಗುವುದು. ಡೊಮಿನೋ ಎಫೆಕ್ಟ್ ಎಂದು ಕರೆಯಲ್ಪಡುವ ಈ ಸರಣಿ ಪ್ರತಿಕ್ರಿಯೆಯ ಸರಪಳಿಯು ಇಲ್ಲಿಯವರೆಗೆ ಯಾವುದೇ ಸಮುದಾಯ ಜೀವವ್ಯವಸ್ಥೆಯಲ್ಲಿ ಉಂಟಾಗಬಹುದಾದ ಅತ್ಯಂತ ವಿನಾಶಕಾರೀ ಪ್ರಕ್ರಿಯೆಯಾಗಿದೆ. ಇನ್ನೊಂದು ಉದಾಹರಣೆಯ ಪ್ರಕಾರ, ಬ್ಲ್ಯಾಕ್ ಡ್ರೋಂಗೋಗಳು ಮತ್ತು ಕ್ಯಾಟಲ್ ಎಗ್ರೆಟ್‌ಗಳು ಜಾನುವಾರುಗಳ ಬೆನ್ನಮೇಲಿರುವ ಹುಳಹುಪ್ಪಡಿಗಳನ್ನು ತಿನ್ನುವುದರ ಮೂಲಕ ಅವುಗಳನ್ನು ಶುಚಿಯಾಗಿಡುತ್ತವೆ. ನಾವು ಈ ಪಕ್ಷಿಗಳ ನೆಲೆಗಳನ್ನೇನಾದರೂ ಹಾಳುಗೆಡವಿದಲ್ಲಿ, ಜಾನುವಾರುಗಳಿಗೆ ಕಾಯಿಲೆಗಳು ಬಂದು, ಹರಡಿ, ಅವುಗಳ ಸಂಖ್ಯೆ ಕ್ಷೀಣಿಸುವುದು.

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. https://www.thebetterindia.com/topics/wildlife/
  2. https://www.thrillophilia.com/wildlife-india
  3. http://www.wti.org.in/
  4. ಜಗಾಟಾ, ಡಾರ್ಲೀನ್. "Sacred Animals in Religion, Mythology & Culture."Associated Content.N.p., 23 ಜನವರಿ. 2007. Last Time Viewed 2009-10-12
  5. ಡೈಮಂಡ್, ಜೆ.ಎಮ್. (1989). Overview of recent extinctions. Conservation for the Twenty-first Century. D. Western and M. Pearl. ನ್ಯೂಯಾರ್ಕ್: ಆಕ್ಸ್‌ಫರ್ಡ್ ಯ‌ೂನಿವರ್ಸಿಟಿ ಪ್ರೆಸ್, 2001:121–237.

ಹೊರಗಿನ್ನ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Sister links