ವಿಷಯಕ್ಕೆ ಹೋಗು

ರೇ ಮೀನುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೇ ಮೀನುಗಳು
Temporal range: Early Jurassic–Present []
Giant devil ray, Mobula mobular
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಕಾರ್ಡೇಟಾ
ವರ್ಗ: ಕಾಂಡ್ರಿಕ್‍ಥೈಸ್
ಏಕಮೂಲ ವರ್ಗ: ನೀಯೊಸೆಲಾಚೀ
ಮೇಲ್ಗಣ: ಬ್ಯಾಟಾಯ್ಡೀ
Compagno, 1973
Orders
Synonyms

ರೇ ಮೀನುಗಳು ಕಾಂಡ್ರಿಕ್‌ತ್ಯಸ್ ವರ್ಗ, ಎಲ್ಯಾಸ್ಮೊಬ್ರಾಂಕಿ ಉಪವರ್ಗದ ಮೃದ್ವಸ್ಥಿ ಮೀನುಗಳ ಪೈಕಿ ರಾಜಿಫಾರ್ಮಿಸ್ ಅಥವಾ ಬ್ಯಾಟಾಯ್ಡಿಯೈ ಗಣಕ್ಕೆ ಸೇರಿದ ಮೀನುಗಳಿಗಿರುವ ಸಾಮನ್ಯ ಹೆಸರು.[][] ಇವುಗಳಲ್ಲಿ ಸುಮಾರು 425 ಪ್ರಭೇದಗಳಿವೆ.

ದೇಹ ರಚನೆ

[ಬದಲಾಯಿಸಿ]

ಉದರಭಾಗದತ್ತ ಬೆನ್ನಿನ ಭಾಗವನ್ನು ಅದುಮಿದಂತೆ ತೋರುವ ಅಗಲವಾದ ಚಪ್ಪಟೆ ದೇಹ, ಮುಂಡದ ಇಕ್ಕೆಲಗಳಲ್ಲಿ ಬಾಲದಿಂದ ತಲೆಯವರೆಗೆ ವಿಸ್ತರಿಸಿರುವ ಎದೆಭಾಗದ (ಪೆಕ್ಟೊರಲ್) ದೊಡ್ಡ ಈಜುರೆಕ್ಕೆಗಳು ಮತ್ತು ವಜ್ರಾಕೃತಿಯನ್ನು  ಸರಿಸುಮಾರಾಗಿ ಹೋಲುವ ದೇಹವಿನ್ಯಾಸ-ಇವು ರೇ ಮೀನುಗಳ ವೈಶಿಷ್ಟ್ಯಗಳು. ಪ್ರತಿಯೊಂದು ಪ್ರಭೇದಕ್ಕೂ ಅದರದೇ ಆದ ವೈಶಿಷ್ಟ್ಯವಿದೆ. ದೊಡ್ಡ ಸ್ಪೈರಕಲ್‌ಗಳು (ತಿಮಿಂಗಿಲಗಳ ‘ಊದುರಂಧ್ರ’ದಂಥ ರಚನೆ) ಮತ್ತು ಕಣ್ಣುಗಳು ಬೆನ್ನಿನ ಪಾರ್ಶ್ವದಲ್ಲೂ ಕಿರಿದಾದ ಬಾಯಿ ಮತ್ತು ಕಿವಿರು ಸೀಳಿಕೆಗಳು ಉದರಪಾರ್ಶ್ವದಲ್ಲೂ ಇವೆ. ವಸ್ತಿಕುಹರದ (ಪೆಲ್ವಿಕ್) ರೆಕ್ಕೆಗಳು ಸಾಪೇಕ್ಷವಾಗಿ ಚಿಕ್ಕವು. ಗುದದ್ವಾರ ಸಮೀಪದ (ಏನಲ್) ರೆಕ್ಕೆಗಳು ಇಲ್ಲ. ಬಾಲದ ಭಾಗ ಸಪುರ ಚಾವಟಿಯಂತಿದೆ. ಎದೆಭಾಗದ ಈಜುರೆಕ್ಕೆಗಳ ನೆರವಿನಿಂದ ನಿಧಾನವಾಗಿ ಚಲಿಸುವ ಇವಕ್ಕೆ ಬಾಲವೇ ಚುಕ್ಕಾಣಿ.

ಮೃದ್ವಂಗಿ (ಮಾಲಸ್ಕ್) ಮತ್ತು ಚಿಪ್ಪುಪ್ರಾಣಿಗಳು (ಕ್ರಸ್ಟೇಷನ್ಸ್) ಆಹಾರ. ಈ ಆಹಾರ ಸೇವನೆಗೆ ಅಗತ್ಯವಾದ ಮೊಂಡುಹಲ್ಲುಗಳು ಬಾಯಿಯಲ್ಲಿವೆ. ಬಣ್ಣ ಬದಲಿಸಿ ಕಪಟರೂಪ ಧರಿಸುತ್ತವೆ.

ಸಂತಾನೋತ್ಪತ್ತಿ

[ಬದಲಾಯಿಸಿ]

ಆಂತರಿಕ ನಿಷೇಚನೆಯ ಮೂಲಕ ಸಂತಾನೋತ್ಪತ್ತಿ. ಇದಕ್ಕೆ ಅಗತ್ಯವಾದ ಸಂರಚನೆ ಗಂಡು ಮೀನುಗಳ ವಸ್ತಿಕುಹರದ ರೆಕ್ಕೆಗಳಲ್ಲಿವೆ. ಮೊಟ್ಟೆ ಇಡುವ ಮತ್ತು ಹೆಣ್ಣಿನ ದೇಹದಲ್ಲಿಯೇ ಮೊಟ್ಟೆಯನ್ನು ಮರಿಮಾಡುವ - ಈ ಎರಡೂ ಬಗೆಯ ಪ್ರಭೇದಗಳಿವೆ.[]

ಆವಾಸಸ್ಥಾನ

[ಬದಲಾಯಿಸಿ]

ಅನೇಕ ರೇಮೀನು ಪ್ರಭೇದಗಳ ವಾಸ ತೀರಕ್ಕೆ ಸಮೀಪದ ಸಾಗರದ ತಳಭಾಗದಲ್ಲಿ. ಸುಮಾರು 3000 ಮೀ ಆಳದಲ್ಲಿ ವಾಸಿಸುವವೂ ಇವೆ. ಅಮೆಜಾನ್ ನದಿಯ ಸಿಹಿನೀರಿನಲ್ಲಿ ವಾಸಿಸುವ ಒಂದು ಜಾತಿಯೂ ಇದೆ.  ಸಾಗರ ತಳದ ಮಣ್ಣಿನಲ್ಲಿ ಅಡಗಿದ್ದು ಸಮೀಪಿಸಿದ ಭೋಜನೀಯ ಜೀವಿಗಳನ್ನು ಬಲಿ ತೆಗೆದುಕೊಳ್ಳುವ ಪ್ರಭೇದಗಳ ಸಂಖ್ಯೆ ಹೆಚ್ಚು.

ಮುಖ್ಯವಾದ ರೇ ಮೀನುಗಳು

[ಬದಲಾಯಿಸಿ]

ಸಾಗರದ ಮೇಲ್ಭಾಗದಲ್ಲಿ ವಾಸಿಸುವ ಗ್ರೇಟ್ ಮ್ಯಾಂಟಾ ರೇ, ಬಾಲದ ತುದಿಯ ಚುಚ್ಚುಮುಳ್ಳಿನ ಮೂಲಕ ಶತ್ರುದೇಹಕ್ಕೆ ಮಾರಕ ವಿಷ ಹುಗಿಸಬಲ್ಲ ಸ್ಟಿಂಗ್ ರೇ, ತೀವ್ರ ವಿದ್ಯುದಾಘಾತ ನೀಡುವ ಟಾರ್ಪೀಡೊ ರೇ ಮಾನವನಿಗೆ ಹೆಚ್ಚು ಪರಿಚಿತ. ಕಡಿಮೆ ಚಪ್ಪಟೆ ವಿನ್ಯಾಸದ ಗಿಟಾರ್ ಮೀನು ಮತ್ತು ಗರಗಸ ಮೀನು ರೇ ಮೀನುಗಳೇ. ದೈತ್ಯ ಡೆವಿಲ್ ರೇ ಮೀನು (ಮಾಂಟಾ ಬೈರಾಸ್ಟ್ರಿಸ್) 22 ಅಡಿ ಅಗಲ (ರೆಕ್ಕೆಗಳ ತುದಿಯಿಂದ ತುದಿಯವರೆಗೆ) ಇದ್ದು ಸುಮಾರು 3500 ಪೌಂಡ್ ತೂಕವಿರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Aschliman, Neil C.; Nishida, Mutsumi; Miya, Masaki; Inoue, Jun G.; Rosana, Kerri M.; Naylor, Gavin J.P. (2012). "Body plan convergence in the evolution of skates and rays (Chondrichthyes: Batoidea)". Molecular Phylogenetics and Evolution. 63 (1): 28–42. doi:10.1016/j.ympev.2011.12.012. PMID 22209858.
  2. Britannica, The Editors of Encyclopaedia. "ray". Encyclopedia Britannica, 29 Jul. 2022, https://www.britannica.com/animal/ray-fish. Accessed 14 October 2023.
  3. "Rays ." The Gale Encyclopedia of Science. . Encyclopedia.com. 19 Sep. 2023 <https://www.encyclopedia.com>.
  4. Adams, Kye R.; Fetterplace, Lachlan C.; Davis, Andrew R.; Taylor, Matthew D.; Knott, Nathan A. (January 2018). "Sharks, rays and abortion: The prevalence of capture-induced parturition in elasmobranchs". Biological Conservation. 217: 11–27. doi:10.1016/j.biocon.2017.10.010. S2CID 90834034. Archived from the original on 2019-02-23. Retrieved 2018-12-09.


ಗ್ರಂಥಸೂಚಿ

[ಬದಲಾಯಿಸಿ]
  • McEachran, J.D.; Dunn, K.A.; Miyake, T. (1996). "Interrelationships of the batoid fishes (Chondrichthyes: Batoidea)". Interrelationships of Fishes. Academic Press.
  • Nelson, Joseph S. (2006). Fishes of the World (4th, illustrated ed.). John Wiley & Sons. ISBN 9780471756446.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: