ಸ್ಟಿಂಗ್ರೇ
ಸ್ಟಿಂಗ್ರೇ - ಇದೊಂದು ವಿಷಯುಕ್ತ ಮೀನು. ಸಾಮಾನ್ಯವಾಗಿ ಏಷ್ಯಾ, ಆಫ್ರಿಕಾ, ಫ್ಲೋರಿಡಾದ ಸಾಗರಗಳಲ್ಲಿ ಕಾಣಸಿಗುತ್ತದೆ. ಇದರ ದೇಹ ರಚನೆ ಚಪ್ಪಟೆಯಾಗಿದ್ದು, ಉದ್ದನೆಯ ಬಾಲವನು? ಹೊಂದಿರುತ್ತದೆ. ಇದು ಈಜುವ ರೀತಿಯೂ ವಿಚಿತ್ರ ತಟ್ಟೆಯಂಥ ದೇಹವಿರುವುದರಿಂದ ಇದು ಈಜುತ್ತಿದ್ದರೆ ಹಾರುತ್ತಿರುವಂತೆ ಭಾಸವಾಗುತ್ತದೆ. ಇದು ಅತ್ಯಂತ ಕುಶಾಗ್ರ ಹಾಗೂ ಆಕ್ರಮಣಕಾರಿ ಸ್ವಭಾವದ ಜೀವಿ.
ಇದರ ಬಾಲದಲ್ಲಿ ಚೂಪನೆಯ ಮುಳ್ಳು ಇರುತ್ತದೆ. ಇದರ ಮೇಲ್ಮೈ ಮುಳ್ಳುಗಳಿಂದ ಕೂಡಿರುತ್ತದೆ ಹಾಗೂ ಇದು ವಿಷಯುಕ್ತವಾಗಿರುತ್ತದೆ. ಆಮ್ಲೀಯ ಗುಣವಿರುತ್ತದೆ. ಶತ್ರುವಿನ ಸುಳಿವು ಸಿಕ್ಕುತ್ತಿದ್ದಂತೆ ಮೀನು ಈ ಮುಳ್ಳನ್ನು ಬಾಣದಂತೆ ಹಾರಿಸುತ್ತದೆ. ಮುಳ್ಳು ಶತ್ರುವಿನ ದೇಹ ಸೇರುತ್ತಿದ್ದಂತೆ, ಊತ, ನೋವು, ಕಾಣಿಸಿಕೊಳ್ಳುತ್ತದೆ. ದೇಹದ ಅಂಗಗಳಲ್ಲಿ ರಂಧ್ರವುಂಟುಮಾಡುತ್ತದೆ. ಇದರಿಂದ ಸಾವು ಸಂಭವಿಸುತ್ತದೆ.
ವಿಶ್ವದ ಪ್ರಸಿದ್ಧ ಮೊಸಳೆ ಬೇಟೆಗಾರ, ವನ್ಯಜಗತ್ತಿನ ಅನೇಕ ರಹಸ್ಯಗಳನ್ನು ಜಗತ್ತಿಗೆ ತೆರೆದಿಟ್ಟ ಸಾಹಸಿ ಸ್ಟೀವ್ ಇರ್ವಿನ್ ಅವರ ಸಾವಿಗೆ ಕಾರಣವಾಗಿದ್ದು ಇದೇ ಮೀನು.
ಸ್ಟಿಂಗ್ರೇ ಸಿಟಿ
[ಬದಲಾಯಿಸಿ]ಸ್ಟಿಂಗ್ರೇ ಮೀನಿನ ಹೆಸರಿನಲ್ಲಿಯೇ ಒಂದು ಸುಂದರ ದ್ವೀಪವಿದೆ. ಗ್ರಾಂಡ್ ಕೆನ್ಯನ್ ದ್ವೀಪ ಸಮೂಹದಲ್ಲಿ ವಿಭಿನ್ನ ರೀತಿಯ ಸ್ಟಿಂಗ್ರೇ ಮೀನುಗಳನ್ನು ಹೊಂದಿರುವ ಸ್ಟಿಂಗ್ರೇ ಸಿಟಿ ಎಂಬ ದ್ವೀಪವಿದೆ. ಪ್ರವಾಸಿಗಳು ಹತ್ತಿರದಿಂದ ಸ್ಟಿಂಗ್ರೇ ಮೀನುಗಳನ್ನು ನೋಡುವ ಸೌಲಭ್ಯವಿದೆ. ಇಲ್ಲಿ ಸ್ಟಿಂಗ್ರೇ ಮೀನುಗಳನ್ನು ಹಿಡಿದು, ಆಹಾರವನ್ನು ಹಾಕಿ ಅವುಗಳನ್ನು ಸಾಕಲಾಗುತ್ತದೆ. ಇಲ್ಲಿಯ ಮೀನುಗಳು ಮನುಷ್ಯರಿಗೆ ಚಿರಪರಿಚಿತವಾಗಿದ್ದು, ಯಾತ್ರಿಕರನ್ನು ಹೊತ್ತ ದೋಣಿಗಳು ಇಂಜಿನ್ ಶಬ್ದ ಕೇಳಿದೊಡನೆ ಮೀನುಗಳು ದಡಕ್ಕೆ ಆಗಮಿಸುತ್ತವೆಂದು ಹೇಳಲಾಗುತ್ತದೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಸ್ಟಿಂಗ್ರೇ ಸಿಟಿ ದ್ವೀಪ ಪ್ರವಾಸದ ಬಗೆಗಿನ ಮಾಹಿತಿ ಇಲ್ಲಿದೆ Archived 2017-09-22 ವೇಬ್ಯಾಕ್ ಮೆಷಿನ್ ನಲ್ಲಿ.