ವಿಷಯಕ್ಕೆ ಹೋಗು

ರೂಪೇಶ್ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೂಪೇಶ್ ಶೆಟ್ಟಿ
ಜನನ೧೫ ಆಗಸ್ಟ್ ೧೯೯೧
ವೃತ್ತಿಗಳುನಟ, ಗಾಯಕ, ಮಾಡೆಲ್, ಸಂಗೀತ ನಿರ್ದೇಶಕ ಮತ್ತು ಮಂಗಳೂರಿನಲ್ಲಿ ಆರ್‌ಜೆ

ರೂಪೇಶ್ ಶೆಟ್ಟಿ ಇವರು ಕನ್ನಡ, ತುಳು ಚಿತ್ರರಂಗದ ನಟ.[೧] ಅವರು ಮಂಗಳೂರಿನ ಪ್ರಸಿದ್ಧ ರೇಡಿಯೋ ಜಾಕೀ ಮತ್ತು ಮಾಡೆಲ್. ಅವರು ಕನ್ನಡ, ತುಳು ಮತ್ತು ಕೊಂಕಣಿ ಯಂತಹ ೩ ಭಾಷೆಗಳಲ್ಲಿ ಅಭಿನಯಿಸಿದ್ದಾರೆ.

ಜನನ ಮತ್ತು ವೃತ್ತಿ

[ಬದಲಾಯಿಸಿ]

ರೂಪೇಶ್ ಇವರು ೧೫ ಆಗಸ್ಟ್ ೧೯೯೧ ರಂದು ಕಾಸರಗೋಡಿನ ಉಪ್ಪಳದಲ್ಲಿ ಜನಿಸಿದರು.[೨] ರೂಪೇಶ್ ಶೆಟ್ಟಿಯವರು ಮೊದಲಿಗೆ ನಮ್ಮಟಿವಿ ಚಾನೆಲ್ ನಲ್ಲಿ ನಿರೂಪಕನಾಗಿ ಕಾಣಿಸಿಕೊಂಡರು ಹಾಗೂ ಮಂಗಳೂರಿನಲ್ಲಿ ಆರ್ಜೆಯಾಗಿ ಜನಪ್ರಿಯತೆ ಗಳಿಸಿದರು. ಅವರು ತಮ್ಮ ವೃತ್ತಿಜೀವನವನ್ನು ದಿಬ್ಬಣ ಎಂಬ ತುಳು ಚಿತ್ರದಲ್ಲಿ ಕಿರು ಪಾತ್ರದಲ್ಲಿ ನಟಿಸುವ ಮೂಲಕ ಪ್ರಾರಂಭಿಸಿದರು ಹಾಗೂ ೨೦೧೫ ರ ಡೇಂಜರ್ ಜ಼ೋನ್ ಎಂಬ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಪ್ರಾಮುಖ್ಯತೆಯನ್ನು ಪಡೆದರು.[೩] ಇವರು ತಮಿಳಿನ ಅತ್ಯಂತ ಪ್ರಸಿದ್ಧಿ ಹೊಂದಿರುವ ಕೊಲವೆರಿ ಡಿ ಎಂಬ ಹಾಡನ್ನು ಪುನರ್ ನಿರ್ದೇಶಿಸಿ ಹಾಡಿದ್ದಾರೆ.[೪] ೨೦೧೬ ರಲ್ಲಿ ಇವರು ಐಸ್ ಕ್ರೀಮ್ ಎಂಬ ತುಳು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ೨೦೧೭ ರಲ್ಲಿ ಪಿಶಾಚಿ ೨, ನಿಶಬ್ಧ ೨ ಮತ್ತು ಸ್ಮೈಲ್ ಪ್ಲೀಜ್ ಎಂಬ ಕನ್ನಡ ಚಲನಚಿತ್ರಗಳಲ್ಲಿ ಕಿರು ಪಾತ್ರವನ್ನು ವಹಿಸಿದರು. ಹಾಗೂ ಇವರು ೨೦೧೭ ರ, ಕೃಷ್ಣಪ್ರಸಾದ್ ಉಪ್ಪಿನಕೋಟೆ ನಿರ್ದೇಶಿಸಿರುವ ರಂಗ್ ರಂಗ್ ದ ದಿಬ್ಬಣ ಎಂಬ ಚಿತ್ರದಲ್ಲೂ ನಟಿಸಿದರು ಮತ್ತು ೨೦೧೮ ರ ಅಮ್ಮೆರ್ ಪೋಲಿಸಾ ಎಂಬ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ವಹಿಸಿ ನಟಿಸಿದ್ದಾರೆ.

ಫಿಲ್ಮೋಗ್ರಾಫಿ

[ಬದಲಾಯಿಸಿ]

ನಟನಾಗಿ

[ಬದಲಾಯಿಸಿ]
ಸಿನಿಮಾಭಾಷೆಟಿಪ್ಪಣಿ
ದಿಬ್ಬಣತುಳುಪೋಷಕ ಪಾತ್ರ[೫]
ಐಸ್ ಕ್ರೀಮ್ತುಳುಮುಖ್ಯ ಪಾತ್ರ[೬]
ಡೇಂಜರ್ ಜ಼ೋನ್ಕನ್ನಡಮುಖ್ಯ ಪಾತ್ರ[೭]
ಅಶೆಂ ಜ಼ಲೆಂ ಕಶೆಂಕೊಂಕಣಿಮುಖ್ಯ ಪಾತ್ರ[೮]
ಸ್ಮೈಲ್ ಪ್ಲೀಜ್ ಕನ್ನಡಕಿರು ಪಾತ್ರ [೯]
ನಿಶಬ್ಧ ೨ಕನ್ನಡಮುಖ್ಯ ಪಾತ್ರ[೧೦]
ಅಮ್ಮೆರ್ ಪೋಲಿಸಾತುಳುಮುಖ್ಯ ಪಾತ್ರ [೧೧]
ಲಾಸ್ಟ್ ಬೆಂಚ್ತುಳುಮುಂಬರುವ ಚಿತ್ರ
ಅನುಷ್ಕಾಕನ್ನಡಮುಂಬರುವ ಚಿತ್ರ[೧೨]
ಗೋಲ್ ಮಾಲ್ ಬ್ರದರ್ಸ್ಕನ್ನಡಮುಂಬರುವ ಚಿತ್ರ[೧೩]
ಲೈಫ್ ಈಸ್ ಗಿರ್ಗಿಟ್ತುಳುಮುಂಬರುವ ಚಿತ್ರ[೧೪]

(ನಿರ್ದೇಶನ - ರೂಪೇಶ್ ಶೆಟ್ಟಿ)

ಮಂಕು ಭಾಯಿ ಫಾಕ್ಸಿ ರಾಣಿಕನ್ನಡಮುಂಬರುವ ಚಿತ್ರ[೧೫]

ಗಾಯಕನಾಗಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ↑ imbd.com
  2. ↑ ಜನನ
  3. ↑ ಟೈಮ್ಸ್ ಆಫ್ ಇಂಡಿಯಾ Updated: Sep 22, 2016, 05.52 PM IST
  4. ↑ "ಮಂಗಳೂರಿನ ರಾಕ್‌ಸ್ಟಾರ್‌". Archived from the original on 2019-06-09. Retrieved 2019-06-09.
  5. ↑ ದಿಬ್ಬಣ ಚಲನಚಿತ್ರದಲ್ಲಿ ರೂಪೇಶ್ ಶೆಟ್ಟಿ
  6. ↑ "ಐಸ್ ಕ್ರೀಮ್ (೨೦೧೫)". Archived from the original on 2019-06-09. Retrieved 2019-06-09.
  7. ↑ ಡೇಂಜರ್ ಜ಼ೋನ್
  8. ↑ ಅಶೆಂ ಜ಼ಲೆಂ ಕಶೆಂ -ತುಳು ಸಿನಿಮಾದಲ್ಲಿ ರೂಪೇಶ್ ಶೆಟ್ಟಿ
  9. ↑
  10. ↑ ಕನ್ನಡದ ನಿಶಬ್ಧ ೨ ಚಿತ್ರದಲ್ಲಿ ಅಭಿನಯಿಸಿದ ರೂಪೇಶ್ ಶೆಟ್ಟಿ
  11. ↑ ಟೈಮ್ಸ್ ಆಫ್ ಇಂಡಿಯಾ
  12. ↑ ಅನುಷ್ಕಾ -ಕನ್ನಡ ಚಲನಚಿತ್ರ
  13. ↑ "ನಮ್ಮಟಿವಿ". Archived from the original on 2019-10-26. Retrieved 2019-06-09.
  14. ↑ Tulucinema.com
  15. ↑ ಮಂಕು ಭಾಯ್ ಫಾಕ್ಸಿ ರಾಣಿ ಕನ್ನಡ ಚಿತ್ರ
  16. ↑ ರೋಹಿತ್ ಶೆಟ್ಟಿ ಯವರಿಂದ - ಈ ಸಲ ಕಪ್ ನಮ್ಮದೇ