ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ಭಾರತದಲ್ಲಿನ ಅರೆ-ನ್ಯಾಯಾಂಗ ಸಂಸ್ಥೆಯಾಗಿದ್ದು, ಇದು ಭಾರತೀಯ ಕಂಪನಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಣಯಿಸುತ್ತದೆ.[೧][೨] ಕಂಪನಿಗಳ ಕಾಯ್ದೆ ೨೦೧೩ರ ಅಡಿಯಲ್ಲಿ ಈ ನ್ಯಾಯಮಂಡಳಿಯನ್ನು ಸ್ಥಾಪಿಸಲಾಯಿತು ಮತ್ತು ಇದನ್ನು ೧ ಜೂನ್ ೨೦೧೬ ರಂದು ಭಾರತ ಸರ್ಕಾರವು ರಚಿಸಿತು.[೩] ಅಲ್ಲದೆ ಇದು ಕಂಪನಿಗಳ ದಿವಾಳಿತನ ಮತ್ತು ಅದರ ಅಂತ್ಯಕ್ಕೆ ಸಂಬಂಧಿಸಿದ ಕಾನೂನಿನ ಕುರಿತು ವಿ.ಬಾಲಕೃಷ್ಣ ಎರಾಡಿ ಸಮಿತಿಯ ಶಿಫಾರಸನ್ನು ಆಧರಿಸಿದೆ.

ಕಂಪನಿಗಳ ಕಾಯಿದೆಯಡಿಯಲ್ಲಿರುವ ಮಧ್ಯಸ್ಥಿಕೆ, ರಾಜಿ, ಕಂಪನಿಗಳ ಪುನರ್ನಿರ್ಮಾಣಗಳು, ವ್ಯವಸ್ಥೆಗಳು ಮತ್ತು ಕಂಪನಿಗಳ ಮುಕ್ತಾಯಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಸೇರಿದಂತೆ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ವಿಲೇವಾರಿ ಮಾಡುತ್ತದೆ. ಎನ್‌ಸಿಎಲ್‌ಟಿ ಬೆಂಚ್‌ನ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವವರು, ನಿವೃತ್ತ ಅಥವಾ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲಿರುವ ನ್ಯಾಯಾಂಗ ಸದಸ್ಯ ಮತ್ತು ಭಾರತೀಯ ಕಾರ್ಪೊರೇಟ್ ಕಾನೂನು ಸೇವೆಯಾದ ಐಸಿಎಲ್‌ಎಸ್ ಕೇಡರ್‌ನ ತಾಂತ್ರಿಕ ಸದಸ್ಯರಾಗಿರಬೇಕು.

ಕಂಪೆನಿಗಳ ದಿವಾಳಿತನ ಮತ್ತು ದಿವಾಳಿತನ ಸಂಹಿತೆ, ೨೦೧೬ ರ ಅಡಿಯಲ್ಲಿ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆಗಳ ದಿವಾಳಿತನ ಪರಿಹಾರ ಪ್ರಕ್ರಿಯೆಗಾಗಿ ತೀರ್ಪು ನೀಡುವ ಅಧಿಕಾರವಾಗಿದೆ.

ನ್ಯಾಯಮಂಡಳಿಯು ಒಟ್ಟು ಹದಿನಾರು ಪೀಠಗಳನ್ನು ಹೊಂದಿದೆ: ಅದರಲ್ಲಿ ಆರು ನವದೆಹಲಿಯಲ್ಲಿದ್ದು(ಒಂದು ಪ್ರಧಾನ ಪೀಠ), ಅಹಮದಾಬಾದ್‌ನಲ್ಲಿ ಎರಡು, ಪ್ರಯಾಗರಾಜ್‌ನಲ್ಲಿ ಒಂದು ಮತ್ತು ಬೆಂಗಳೂರಿನಲ್ಲಿ ಒಂದು ಬೆಂಚ್‍ಗಳನ್ನು ಹೊಂದಿದೆ. ನಂತರ ಚಂಡೀಗಢದಲ್ಲಿ ಒಂದು, ಚೆನ್ನೈನಲ್ಲಿ ಎರಡು, ಕಟಕ್‌ನಲ್ಲಿ ಒಂದು, ಗುವಾಹಟಿಯಲ್ಲಿ ಒಂದು ಮತ್ತು ಹೈದರಾಬಾದ್‌ನಲ್ಲಿ ಮೂರು ಬೆಂಚ್‍ಗಳನ್ನು ಹೊಂದಿದೆ. ಅದರಲ್ಲಿ ಒಂದು ಅಮರಾವತಿಯಲ್ಲಿ, ಒಂದು ಜೈಪುರದಲ್ಲಿ, ಒಂದು ಕೊಚ್ಚಿಯಲ್ಲಿ, ಎರಡು ಕೋಲ್ಕತ್ತಾದಲ್ಲಿ ಮತ್ತು ಐದು ಮುಂಬೈನಲ್ಲಿದೆ.[೪] ಅಂತೆಯೇ ಇಂದೋರ್ ಮತ್ತು ಅಮರಾವತಿಯಲ್ಲಿ ತಲಾ ಒಂದರಂತೆ ಎರಡು ಹೊಸ ಬೆಂಚುಗಳನ್ನು ಸ್ಥಾಪಿಸಲು ಅನುಮೋದಿಸಲಾಗಿದೆ. ಅಮರಾವತಿಯ ಬೆಂಚನ್ನು ಹೊರತುಪಡಿಸಿ, ಉಳಿದ ಎಲ್ಲಾ ಬೆಂಚ್‍ಗಳನ್ನು ವಿಭಾಗೀಯ ಬೆಂಚ‍್‍ಗಳೆಂದು ಸೂಚಿಸಲಾಗಿದೆ. ಮಣಿಪುರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾದ ರಾಮಲಿಂಗಂ ಸುಧಾಕರ್‌ ಅವರು, ೦೧-೧೧-೨೦೧೧ ರಿಂದ ನ್ಯಾಯಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು, ಕಂಪನಿಗಳ ಕಾಯಿದೆಯಡಿಯಲ್ಲಿ ಈ ನಡಾವಳಿಗಳನ್ನು ನಿರ್ಣಯಿಸುವ ಅಧಿಕಾರವನ್ನು ಹೊಂದಿದೆ:

  1. ಕಂಪನಿ ಕಾನೂನು ಮಂಡಳಿಯನ್ನು ಹಿಂದಿನ ಕಾಯಿದೆಯ ಅಡಿಯಲ್ಲಿ (ಕಂಪನಿಗಳ ಕಾಯಿದೆ ೧೯೫೬) ಪ್ರಾರಂಭಿಸಲಾಯಿತು;
  2. ಕೈಗಾರಿಕಾ ಮತ್ತು ಹಣಕಾಸು ಪುನರ್ನಿರ್ಮಾಣ ಮೇಲ್ಮನವಿಯ ಪ್ರಾಧಿಕಾರವು ತೀರ್ಮಾನವಾಗಬೇಕಾಗಿದೆ; ಮತ್ತು
  3. ಕಂಪನಿಯ ದಬ್ಬಾಳಿಕೆ ಮತ್ತು ದುರುಪಯೋಗದ ಹಕ್ಕುಗಳಿಗೆ ಸಂಬಂಧಿಸಿದಂತೆ, ಕಂಪನಿಗಳನ್ನು ಮುಚ್ಚುವುದು ಮತ್ತು ಎಲ್ಲಾ ಇತರ ಅಧಿಕಾರಗಳನ್ನು ಕಂಪನಿಗಳ ಕಾಯಿದೆಯಡಿ ಸೂಚಿಸಲಾಗಿದೆ.

ಪ್ರಸ್ತುತ ಸದಸ್ಯರ ಪಟ್ಟಿ[ಬದಲಾಯಿಸಿ]

ಗೌರವಾನ್ವಿತ ಅಧ್ಯಕ್ಷರು ಮತ್ತು ಹಾಲಿ ಸದಸ್ಯರ ಪಟ್ಟಿ ಈ ಕೆಳಗಿನಂತಿದೆ

ಕ್ರಮ.ಸಂ ಹೆಸರು ಉಪನಾಮ ಸೇರುವ ದಿನಾಂಕ ಎನ್‍ಸಿಎಲ್‍ಟಿ ಬೆಂಚ್
ಮುಖ್ಯ ನ್ಯಾಯಮೂರ್ತಿ (ನಿವೃತ್ತ) ರಾಮಲಿಂಗಂ ಸುಧಾಕರ್ ಅಧ್ಯಕ್ಷ ೦೧-೧೧-೨೦೨೧ ಪ್ರಧಾನ ಬೆಂಚ್
ಶ್ಯಾಮ್ ಬಾಬು ಗೌತಮ್ ಸದಸ್ಯ ೩೦-೦೭-೨೦೧೯ ಕೊಚ್ಚಿ
ಪಾಟಿಬಂಡ್ಲ ಸತ್ಯನಾರಾಯಣ ಪ್ರಸಾದ್ ಸದಸ್ಯ ೦೪-೦೭-೨೦೧೯ ಚಂಡೀಗಢ
ವೆಂಕಟ ಸುಬ್ಬ ರಾವ್ ಹರಿ ಸದಸ್ಯ ೦೪-೦೭-೨೦೧೯ ಗುವಾಹಟಿ
ಲಕ್ಷ್ಮಿ ನಾರಾಯಣ ಗುಪ್ತಾ ಸದಸ್ಯ ೦೪-೦೭-೨೦೧೯ ನವದೆಹಲಿ
ಸತ್ಯ ರಂಜನ್ ಪ್ರಸಾದ್ ಸದಸ್ಯ ೨೪-೦೭-೨೦೧೯ ಗುವಾಹಟಿ
ದೀಪ್ ಚಂದ್ರ ಜೋಶಿ ಸದಸ್ಯ ೧೩-೦೯-೨೦೨೧ ಜೈಪುರ
ರಾಹುಲ್ ಪ್ರಸಾದ್ ಭಟ್ನಾಗರ್ ಸದಸ್ಯ ೧೩-೦೯-೨೦೨೧ ನವದೆಹಲಿ
ಅವಿನಾಶ್ ಕೆ ಶ್ರೀವಾಸ್ತವ ಸದಸ್ಯ ೧೩-೦೯-೨೦೨೧ ನವದೆಹಲಿ
೧೦ ಅನುರಾಧಾ ಸಂಜಯ್ ಭಾಟಿಯಾ ಸದಸ್ಯ ೧೨-೦೯-೨೦೨೧ ಅಮರಾವತಿ
೧೧ ರೋಹಿತ್ ಕಪೂರ್ ಸದಸ್ಯ ೧೪-೦೯-೨೦೨೧ ಕೋಲ್ಕತ್ತಾ
೧೨ ಪಿ ಮೋಹನ್ ರಾಜ್ ಸದಸ್ಯ ೧೫-೦೯-೨೦೨೧ ಕಟಕ್
೧೩ ಹರ್ನಾಮ್ ಸಿಂಗ್ ಠಾಕೂರ್ ಸದಸ್ಯ ೧೬-೦೯-೨೦೨೧ ಚಂಡೀಗಢ
೧೪ ಬಾಲರಾಜ್ ಜೋಶಿ ಸದಸ್ಯ ೧೬-೦೯-೨೦೨೧ ಕೋಲ್ಕತ್ತಾ
೧೫ ಮನೋಜ್ ಕುಮಾರ್ ದುಬೆ ಸದಸ್ಯ ೧೬-೦೯-೨೦೨೧ ಬೆಂಗಳೂರು
೧೬ ಸುಬ್ರತಾ ಕುಮಾರ್ ದಾಶ್ ಸದಸ್ಯ ೨೦-೦೯-೨೦೨೧ ಚಂಡೀಗಢ
೧೭ ಕೌಶೇಂದ್ರ ಕುಮಾರ್ ಸಿಂಗ್ ಸದಸ್ಯ ೦೧-೧೦-೨೦೨೧ ಇಂದೋರ್
೧೮ ಡಾ ವಿ ಆರ್ ಬದರಿನಾಥ್ ನಂದುಲ ಸದಸ್ಯ ೦೪-೧೦-೨೦೨೧ ಹೈದರಾಬಾದ್
೧೯ ಸಮೀರ್ ಕಾಕರ್ ಸದಸ್ಯ ೦೯-೧೦-೨೦೨೧ ಅಹಮದಾಬಾದ್
೨೦ ಬಚ್ಚು ವೆಂಕಟ್ ಬಲರಾಮ್ ದಾಸ್ ಸದಸ್ಯ ೧೮-೧೦-೨೦೨೧ ನವದೆಹಲಿ
೨೧ ಕಿಶೋರ್ ವೇಮುಲಪಲ್ಲಿ ಸದಸ್ಯ ೦೬-೧೨-೨೦೨೧ ಮುಂಬೈ
೨೨ ಕುಲದೀಪ್ ಕುಮಾರ್ ಕರೀರ್ ಸದಸ್ಯ ೧೮-೧೧-೨೦೨೨ ಮುಂಬೈ
೨೩ ಪ್ರವೀಣ್ ಕುಮಾರ್ ಗುಪ್ತಾ ಸದಸ್ಯ ೧೮-೧೧-೨೦೨೨ ಅಲಹಾಬಾದ್
೨೪ ಅಶೋಕ್ ಕುಮಾರ್ ಭಾರದ್ವಾಜ್ ಸದಸ್ಯ ೧೮-೧೧-೨೦೨೨ ನವದೆಹಲಿ
೨೫ ಬಿದಿಶಾ ಬ್ಯಾನರ್ಜಿ ಸದಸ್ಯ ೧೮-೧೧-೨೦೨೨ ಕೋಲ್ಕತ್ತಾ
೨೬ ಚರಣ್ ಸಿಂಗ್ ಸದಸ್ಯ ೧೮-೧೧-೨೦೨೨ ಹೈದರಾಬಾದ್
೨೭ ಅನು ಜಗಮೋಹನ್ ಸಿಂಗ್ ಸದಸ್ಯ ೧೮-೧೧-೨೦೨೨ ಮುಂಬೈ
೨೮ ಆಶಿಶ್ ಕುಮಾರ್ ವರ್ಮಾ ಸದಸ್ಯ ೧೮-೧೧-೨೦೨೨ ಅಲಹಾಬಾದ್
೨೯ ಅತುಲ್ ಚತುರ್ವೇದಿ ಸದಸ್ಯ ೧೮-೧೧-೨೦೨೨ ನವದೆಹಲಿ
೩೦ ಪ್ರಭಾತ್ ಕುಮಾರ್ ಸದಸ್ಯ ೧೮-೧೧-೨೦೨೨ ಮುಂಬೈ
೩೧ ಟಿ ಕೃಷ್ಣ ವಲ್ಲಿ ಸದಸ್ಯ ೨೨-೧೧-೨೦೨೨ ಕೊಚ್ಚಿ
೩೨ ಮಧು ಸಿನ್ಹಾ ಸದಸ್ಯ ೦೯-೧೨-೨೦೨೨ ಮುಂಬೈ
೩೩ ಸಂಜೀವ್ ಜೈನ್ ಸದಸ್ಯ ೦೪-೦೧-೨೦೨೩ ಚೆನ್ನೈ
೩೪ ಮಹೇಂದ್ರ ಖಂಡೇಲ್ವಾಲ್ ಸದಸ್ಯ ೧೮-೦೧-೨೦೨೩ ನವದೆಹಲಿ
೩೫ ಶಮ್ಮಿ ಖಾನ್ ಸದಸ್ಯ ೨೦-೦೨-೨೦೨೩ ಅಹಮದಾಬಾದ್
೩೬ ವೀರೇಂದ್ರಸಿಂಗ್ ಜ್ಞಾನಸಿಂಗ್ ಬಿಷ್ಟ್ ಸದಸ್ಯ ೧೯-೦೭-೨೦೨೩ ಮುಂಬೈ
೩೭ ಲಕ್ಷ್ಮಿ ಗುರುಂಗ್ ಸದಸ್ಯ ೧೯-೦೭-೨೦೨೩ ಮುಂಬೈ
೩೮ ರೀತಾ ಕೊಹ್ಲಿ ಸದಸ್ಯ ೧೯-೦೭-೨೦೨೩ ಮುಂಬೈ
೩೯ ರಾಜೀವ್ ಭಾರದ್ವಾಜ್ ಸದಸ್ಯ ೧೯-೦೭-೨೦೨೩ ಹೈದರಾಬಾದ್
೪೦ ಮನ್ನಿ ಶಂಕರಯ್ಯ ಷಣ್ಮುಗ ಸುಂದರಂ ಸದಸ್ಯ ೧೯-೦೭-೨೦೨೩ ನವದೆಹಲಿ
೪೧ ಚಿತ್ರಾ ರಾಮ್ ಹಂಕರೆ ಸದಸ್ಯ ೧೯-೦೭-೨೦೨೩ ಅಹಮದಾಬಾದ್
೪೨ ರಾಜೀವ್ ಮೆಹ್ರೋತ್ರಾ ಸದಸ್ಯ ೧೯-೦೭-೨೦೨೩ ಜೈಪುರ
೪೩ ಸಂಜೀವ್ ದತ್ ಸದಸ್ಯ ೧೯-೦೭-೨೦೨೩ ಮುಂಬೈ
೪೪ ಸಂಜಯ್ ಪುರಿ ಸದಸ್ಯ ೧೯-೦೭-೨೦೨೩ ಹೈದರಾಬಾದ್
೪೫ ಉಮೇಶ್ ಕುಮಾರ್ ಶುಕ್ಲಾ ಸದಸ್ಯ ೧೯-೦೭-೨೦೨೩ ಚಂಡೀಗಢ
೪೬ ಅರವಿಂದ್ ದೇವನಾಥನ್ ಸದಸ್ಯ ೧೯-೦೭-೨೦೨೩ ಕೋಲ್ಕತ್ತಾ
೪೭ ರವಿಚಂದ್ರನ್ ರಾಮಸಾಮಿ ಸದಸ್ಯ ೧೯-೦೭-೨೦೨೩ ಚೆನ್ನೈ
೪೮ ವೆಂಕಟರಾಮನ್ ಸುಬ್ರಮಣ್ಯಂ ಸದಸ್ಯ ೧೯-೦೭-೨೦೨೩ ಚೆನ್ನೈ
೪೯ ವೇಲಮೂರ್ ಗೋವಿಂದನ್ ವೆಂಕಟ ಚಲಪತಿ ಸದಸ್ಯ ೧೯-೦೭-೨೦೨೩ ಅಹಮದಾಬಾದ್
೫೦ ಅನಿಲ್ ರಾಜ್ ಚೆಲ್ಲನ್ ಸದಸ್ಯ ೧೯-೦೭-೨೦೨೩ ಮುಂಬೈ
೫೧ ಚರಣ್ಜೀತ್ ಸಿಂಗ್ ಗುಲಾಟಿ ಸದಸ್ಯ ೧೯-೦೭-೨೦೨೩ ಮುಂಬೈ
೫೨ ಕೆ ಆರ್ ಸಜಿ ಕುಮಾರ್ ಸದಸ್ಯ ೦೧-೦೮-೨೦೨೩ ಮುಂಬೈ
೫೩ ಸಂಜೀವ್ ರಂಜನ್ ಸದಸ್ಯ ೧೮-೦೯-೨೦೨೩ ನವದೆಹಲಿ
೫೪ ಜ್ಯೋತಿ ಕುಮಾರ್ ತ್ರಿಪಾಠಿ ಸದಸ್ಯ ೧೧-೧೦-೨೦೨೩[೫] ಚೆನ್ನೈ
೫೫ ಕೆ. ಬಿಸ್ವಾಲ್ ಸದಸ್ಯ ಬೆಂಗಳೂರು


ಮೇಲ್ಮನವಿ[ಬದಲಾಯಿಸಿ]

ಯುನೈಟೆಡ್ ಸ್ಟೇಟ್ಸ್ ಸೆನೆಟ್ ಗಾವೆಲ್ಸ್.

ನ್ಯಾಯಮಂಡಳಿಯ ನಿರ್ಧಾರಗಳನ್ನು ಪ್ರಶ್ನಿಸಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ ಮೇಲ್ಮನವಿಯನ್ನು ಸಲ್ಲಿಸಬಹುದು.[೬] ಅಲ್ಲಿನ ನಿರ್ಧಾರಗಳನ್ನು, ಭಾರತದ ಭಾರತದ ಸರ್ವೋಚ್ಛ ನ್ಯಾಯಾಲಯಕ್ಕೆ ಕಾನೂನಿನ ಅಂಶಗಳ ಮೇಲೆ ಮೇಲ್ಮನವಿಯನ್ನು ಸಲ್ಲಿಸಬಹುದು.[೭] ಭಾರತದ ಸರ್ವೋಚ್ಛ ನ್ಯಾಯಾಲಯ, ದಿವಾಳಿತನ ಮತ್ತು ದಿವಾಳಿತನ ಸಂಹಿತೆಯನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ.[೮]

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/Quasi-judicial_body
  2. https://en.wikipedia.org/wiki/Indian_companies
  3. https://en.wikipedia.org/wiki/Companies_Act_2013
  4. "Archived copy" (PDF). Archived from the original (PDF) on 27 August 2019. Retrieved 27 July 2019.{{cite web}}: CS1 maint: archived copy as title (link)
  5. "Reconstituted of Bench at NCLT Chennai- Court No. II- order dated 11.10.2023.pdf" (PDF). Retrieved 2 December 2023.
  6. https://en.wikipedia.org/wiki/National_Company_Law_Appellate_Tribunal
  7. https://en.wikipedia.org/wiki/Supreme_Court_of_India
  8. https://en.wikipedia.org/wiki/Insolvency_and_Bankruptcy_Code,_2016

ಬಾಹ್ಯಕೊಂಡಿಗಳು[ಬದಲಾಯಿಸಿ]