ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ
ಅನಂತಕೃಷ್ಣ ಶರ್ಮ
ಜನನ೨೩ ಜನವರಿ ೧೮೯೩
ಅನಂತಪುರ್
ವೃತ್ತಿಸಂಗೀತ ಮತ್ತು ಸಾಹಿತ್ಯ
ರಾಷ್ಟ್ರೀಯತೆಭಾರತೀಯ

ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ (೨೩ ಜನವರಿ ೧೮೯೩-೧೧ ಮಾರ್ಚ್ ೧೯೭೯) ಇಪತ್ತನೆಯ ಶತಮಾನದ ಶ್ರೇಷ್ಠ ಸಂಗೀತ ಮತ್ತು ಸಾಹಿತ್ಯಗಾರರು. [೧] ಅವರು ಕನ್ನಡ, ತೆಲುಗು,ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು ಮತ್ತು ಈ ಭಾಷೆಗಳಲ್ಲಿ ಪುಸ್ತಕಗಳು ಮತ್ತು ಕವನಗಳನ್ನು ಬರೆದರು. ೧೯೭೨ ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ, ಸಂಗೀತ, ನೃತ್ಯ, ಮತ್ತು ನಾಟಕ ಭಾರತದ ರಾಷ್ಟ್ರೀಯ ಅಕಾಡೆಮಿಯಿಂದ ಅತ್ಯುನ್ನತ ಗೌರವ, ಸಂಗೀತ ನಾಟಕ ಅಕಾಡಮಿ ಫೆಲೋಶಿಪ್ ಪಡೆದರು.

ಜೀವನ[ಬದಲಾಯಿಸಿ]

ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ, ಅವರು ಅನಂತಪುರ[೨] ಜಿಲ್ಲೆಯ, ಕಂಬದೂರು ಮಂಡಲದ ರಾಳ್ಳಪಲ್ಲಿ ಗ್ರಾಮದಲ್ಲಿ ಜನವರಿ ೨೩, ೧೮೯೩ ರಂದು ಜನಿಸಿದರು. ಅವರ ತಂದೆ ಕೃಷ್ಣಮಾಚಾರ್ಯ ಮತ್ತು ತಾಯಿ ಅಲಮೇಲು ಮಂಗಮ್ಮ ಮೂಲಕ ತೆಲುಗು, ಸಂಸ್ಕೃತ ಮತ್ತು ಸಂಗೀತ ಶಿಕ್ಷಣವನ್ನು ಪಡೆದರು.

ಅವರು ಮೈಸೂರಿಗೆ ಬಂದ ಮೇಲೆ, ಪ್ರಸಿದ್ಧಿ ಮುಖ್ಯ ಮಠಾಧೀಶ ಬೋಧನೆಯನ್ನು ಪರಕಾಲ ಮಠದಿಂದ ಪಡೆದರು. ಶರ್ಮ ಅವರು ಚಾಮರಾಜ ಪಾಠಶಾಲೆಯಲ್ಲಿ ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳ ಅಧ್ಯಯನ ಮಾಡಿದರು. ಬಿಡಾರಂ ಕೃಷ್ಣಪ್ಪ ಹಾಗೂ ಕರಿಗಿರಿ ರಾವ್ ಅವರಿಂದ ಸಂಗೀತ ಜ್ಞಾನವನ್ನು ಪಡೆದರು. ೧೯೧೧ ರಲ್ಲಿ ಅವರು ರುಕ್ಮಿಣಮ್ಮರವರನ್ನು ವಿವಾಹವಾದರು.

ಅನಂತಕೃಷ್ಣ ಶರ್ಮ ಅವರು ಮಾರ್ಚ್ ೧೧, ೧೯೭೯ ರಲ್ಲಿ ನಿಧನರಾದರು. [೩]

ಶಿಕ್ಷಣ[ಬದಲಾಯಿಸಿ]

ಶರ್ಮರು ಸುಮಾರು ೮ ವರ್ಷದ ಹುಡುಗನಾಗಿದ್ದಾಗಲೇ ಭೋಜರಾಜನ (ಕ್ರಿ.ಶ.೧೦೧೮-೧೦೬೩) ಚಂಪೂ ರಾಮಾಯಣವನ್ನು ಓದಿ ಮುಗಿಸಿದ್ದರು. ೧೨ ವರ್ಷ ತುಂಬುವ ಹೊತ್ತಿಗೆ ರಾಮಾಯಣ ಸಂಗ್ರಹ, ಕಾಳಿದಾಸನ ರಘುವಂಶ[೪], ವಿಶ್ವಗುಣಾದರ್ಶ ಮುಂತಾದ ಸಂಸ್ಕೃತ ಗ್ರಂಥಗಳು ಪಾಠವಾಗಿದ್ದವು. ತೆಲುಗಿನಲ್ಲಿ ಅಚ್ಚ ತೆಲುಗು ರಾಮಾಯಣ, ನೀಲಾ ಸುಂದರಿಯ ಪರಿಣಯ ಮುಂತಾದವನ್ನು ಓದಿ ಆಗಿತ್ತು. ಶ್ರೀ ಕೃಷ್ಣ ಬ್ರಹ್ಮತಂತ್ರರು ವೇದೋಪನಿಷತ್ತುಗಳಲ್ಲಿ ಪ್ರಡಂಡ ವಿದ್ವಾಂಸರು. ಸಂಸ್ಕೃತ-ತೆಲುಗು ಸಾಹಿತ್ಯಗಳಲ್ಲಿ ಆಳವಾದ ವ್ಯಾಪ್ತಿ ಇತ್ತು. ಅವರು ಮಹಾಜ್ಞಾನಿಗಳು ,ಬಹಳ ಬೇಗ ಬಾಲಕ ಆನಂದ ಕೃಷ್ಣನಿಗೆ ಗುರುಗಳ ಕೃಪಾದೃಷ್ಟಿ ದೊರೆಯಿತು. ಸುಮಾರು ಆರು ವರ್ಷಗಳ ಕಾಲ ಗುರುಕುಲವಾಸ ಕಳೆಯಿತು. ಶರ್ಮರ ಬದುಕಿನಲ್ಲಿ ಅದು ಪ್ರಮುಖ ಘಟ್ಟ. ಶ್ರೀಕೃಷ್ಣ ಬ್ರಹ್ಮತಂತ್ರರಿಂದ ಶಿಕ್ಷಣ ನಡೆದ ಮೇಲೂ ಅವರು ವ್ಯಾಸಂಗವನ್ನು ಮುಂದುವರಿಸಿದರು. ಅವರು ಕೆಲಕಾಲ ಪಂಡಿತವರ್ಯ ರಾಮಾಶಾಸ್ತ್ರಗಳಿಗೆ ಬಳಿ ಸಾಹಿತ್ಯವನ್ನು ಕಲಿತರು. ಆ ಹೊತ್ತಿಗೆ ಶಾಸ್ತ್ರಗಳಿಗೆ ತೀರಾ ಇಳಿವಯಸ್ಸು. ವ್ಯಾಕರಣದಲ್ಲಿಯೂ ಅವರನ್ನು ಮೀರಿಸಿದವರಿರಲಿಲ್ಲ. ೧೯೧೨ಕ್ಕಿಂತ ಸ್ವಲ್ಪ ಹಿಂದೆಯೇ ಶರ್ಮರ ಪ್ರೊಫೆಸರ ಸಿ.ಆರ್.ರೆಡ್ಡಿಯವರ ಪರಿಚಯವಾಯಿತು. ಅವರು ಪ್ರಕಾಂಡ ಪಂಡಿತರು. ಆಂಗ್ಲಭಾಷೆಯನ್ನು ತುಂಬಾ ಚೆನ್ನಾಗಿ ಬಳಸಬಲ್ಲವರಾಗಿದ್ದರು. ತೆಲುಗಿನಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದರು. ಅವರು ಶರ್ಮರಿಗೆ ಪಾಶ್ಚಾತ್ತ್ಯ ಸಾಹಿತ್ಯವನ್ನು ಪರಿಚಯ ಮಾಡಿಕೊಟ್ಟರು. ತೆಲುಗಿನಲ್ಲಿ ಸ್ವಂತವಾಗಿ ಬರೆಯುವಂತೆ ಶರ್ಮರನ್ನು ಒತ್ತಾಯಪಡಿಸಿದರು.

ವೃತ್ತಿ[ಬದಲಾಯಿಸಿ]

ಪ್ರೊಫೆಸರ್ ‌ರೆಡ್ಡಿಯವರು ಶಿಕ್ಷಕರಾಗಿ ಕೆಲಸಮಾಡುತ್ತಿದ್ದ ಮೈಸೂರಿನ ಮಹಾರಾಜರ ಕಾಲೇಜು ಅಂದು ಇಡೀ ದೇಶದಲ್ಲೇ ಒಂದು ಮಾದರಿ ವಿದ್ಯಾಸಂಸ್ಥೆಯಾಗಿತ್ತು. ಆಗ ಅಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್‌, ಎ.ಆರ್.ವಾಡಿಯ, ಜೆ.ಸಿ.ರಾಲೋ, ಎ.ಹಿರಿಯಣ್ಣ,ಬಿ.ಎಂ.ಶ್ರೀಕಂಠಯ್ಯ, ಎನ್.ಎಸ್.ಸುಬ್ಬರಾವ್ ಮುಂತಾದವರು ಪ್ರಾಧ್ಯಾಪಕರಾಗಿದ್ದರು. ಅವರೆಲ್ಲರೂ ತಮ್ಮ ತಮ್ಮ ಜ್ಞಾನ ಕ್ಷೇತ್ರಗಳಲ್ಲಿ ದೊಡ್ಡ ವಿದ್ವಾಂಸರಾಗಿದ್ದರು. ೧೯೧೨ ರಲ್ಲಿ ಆಗತಾನೆ ವಿದ್ಯಾಭ್ಯಾಸವನ್ನು ಮುಗಿಸಿದ್ದ ಶರ್ಮರಿಗೆ ಆ ಕಾಲೇಜಿನಲ್ಲಿ ತೆಲುಗು ಅಧ್ಯಾಪಕರ ಹುದ್ದೆ ಸಿಕ್ಕಿತು. ಅದಕ್ಕೆ ಬೇಕಾದ ಎಲ್ಲಾ ಅರ್ಹತೆಯನ್ನು ಅವರು ಆ ವೇಳೆಗೆ ಗಳಿಸಿದ್ದರು. ಜ್ಞಾನವನ್ನು ಎಲ್ಲ ದಿಕ್ಕುಗಳಿಂದಲೂ ಗ್ರಹಿಸಿದರು. ವೇದೋಪನಿಷತ್ತುಗಳು, ಸಂಸ್ಕೃತ- ಪ್ರಾಕೃತ ಸಾಹಿತ್ಯಗಳ ಜತೆಗೆ ಪಾಶ್ಚತ್ಯ ಸಾಹಿತ್ಯವನ್ನು ಓದಿ ಅರಗಿಸಿಕೊಂಡಿದ್ದರು. ಅರಮನೆಯಲ್ಲಿ ಅತ್ಯದ್ಭುತ ಸಂಗೀತ ಕೇಳಿ ಮೈಮರೆತ ಶರ್ಮರು ನೇರವಾಗಿ ಬಿಡಾರಂ ಅವರ ಬಳಿಗೆ ಹೋದರು.

ಸೇವೆ[ಬದಲಾಯಿಸಿ]

೧೯೫೦ರಲ್ಲಿ ಅವರ ಸೇವೆಯನ್ನು ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾನಿಲಯದವರು ಬೇಡಿದರು. ಅವರನ್ನು ಅಲ್ಲಿನ ಓರಿಯಂಟಲ್‌ರಿಸರ್ಚ್ ಸಂಸ್ಥೆಯಲ್ಲಿ ರೀಡರ್‌ ಆಗಿ ನೇಮಿಸಿದರು. ಅಲ್ಲಿ ಶರ್ಮರಿಗೆ ಸಂಗೀತಶಾಸ್ತ್ರದ ಬಗ್ಗೆ ಸಂಶೋಶಧನೆ ನಡೆಸಲು ಅವಕಾಶ ಸಿಕ್ಕಿತು. ತಾವು ಬದುಕಿನಲ್ಲಿ ಗಳಿಸಿದ ವಿದ್ಯೆಯ ಫಲವನ್ನು, ಚಿಂತನೆಯ ಸಾರವನ್ನು ಗ್ರಂಥಗಳ ರೂಪದಲ್ಲಿ ಪ್ರಕಟಿಸಿದರು. ಸ್ವಂತ ಕೃತಿಗಳ ಜತೆಗೆ ಹಳೆಯ ಗ್ರಂಥಗಳನ್ನು ಶೋಧಿಸಿ ನೋಡಿ ತಿದ್ದಿ ಪ್ರಕಟಿಸಿದರು. ಈ ಕೆಲಸಕ್ಕೆ ಗ್ರಂಥ ಸಂಪಾದನೆ ಎಂದು ಹೆಸರು. ಇದನ್ನು ಅವರು ಚೆನ್ನಾಗಿ ನಿರ್ವಹಿಸಿದರು. ಅಲ್ಲದೆ ಸಂಸ್ಕೃತದಿಂದ ತೆಲುಗಿಗೆ ಉತ್ತಮ ಕೃತಿಗಳನ್ನು ತಂದುಕೊಟ್ಟರು. ಅವರು ಮೊದಲು ತೆಲುಗಿನಲ್ಲಿ ಪ್ರಕಟಿಸಿದ ಗ್ರಂಥ-ತೆನಾಲಿ ರಾಮ ಕವಿಯ ಪಾಂಡುರಂಗ ಮಹಾತ್ಮ್ಯಮು. ಹಾಲ ಎಂಬ ಕವಿ ಪ್ರಾಕೃತದಲ್ಲಿ ಗಾಥಾಸಪ್ತಶತಿ ಎಂಬ ಕಾವ್ಯ ಬರೆದಿದ್ದ. ಶರ್ಮರು ಅದನ್ನು ತೆಲುಗಿನಲ್ಲಿ ಪದ್ಯ ರೂಪಕ್ಕೆ ಎಳಿಸಿ ತೆಲುಗು ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನಿತ್ತರು. ಆಂಧ್ರಪ್ರದೇಶದ ಹಲವಾರು ಕಡೆ ಕಾವ್ಯ-ನಾಟಕಗಳ ಬಗ್ಗೆ ಉಪನ್ಯಾಸಗಳನ್ನು ಕೊಟ್ಟು ಜ್ಞಾನ ಪ್ರಸಾರ ನಡೆಸಿದರು. ಅವರ ಸ್ವಂತ ಕೃತಿಗಳಲ್ಲಿ ಈ ಕೆಲಸವನ್ನು ಹೆಸರಿಸಬಹುದು. ತೆಲುಗಿನಲ್ಲಿ ಬರೆದ ಸಾರಸ್ವತ ಲೋಕಮು, ಕಾವ್ಯವಲೋಕವು ಶ್ರೇಷ್ಠ ಪ್ರಬಂಧ ಸಂಕಲನ. ಇದಲ್ಲದೆ ಕನ್ನಡದಲ್ಲಿ ಅವರು ಬರೆದ ಪ್ರಬಂಧಗಳು ಗಾನಕಲೆ ಸಾಹಿತ್ಯ ಮತ್ತು ಜೀವನ ಕಲೆ ಎಂಬ ಎರಡು ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಆಂಧ್ರ ವಿಶ್ವವಿದ್ಯಾನಿಲಯದಲ್ಲಿ ಅವರು ವೇಮನನನ್ನು ಕುರಿತು ನೀಡಿದ ಎರಡು ವಿಶೇಷ ಉಪನ್ಯಾಸಗಳು ಗ್ರಂಥರೂಪವಾಗಿ ಪ್ರಕಟವಾಗಿವೆ. ಜೊತೆಗೆ ನಾಟಕೋಪನ್ಯಾಸಮು, ಕಾವ್ಯವಲೋಕಮು ಎಂಬ ಬಿಡಿ ಲೇಖನಗಳೂ ಅಚ್ಚಾಗಿವೆ. ಈ ಎಲ್ಲಾ ಕೃತಿಗಳಲ್ಲಿ ಶರ್ಮರ ಆಳವಾದ ಪಾಂಡಿತ್ಯ ವಿಮರ್ಶನಾ ಶಕ್ತಿ, ರಸಾಭಿಜ್ಞತೆಗಳು ಎದ್ದು ಕಾಣುತ್ತವೆ. ಅವರು ಸ್ವಂತವಾಗಿ ಬರೆದುದು ಸ್ವಲ್ಪವೇ ಆದರೂ ಅದೆಲ್ಲಾ ಅಪ್ಪಟ ಬಂಗಾರದ ಹಾಗೆ ಬೆಲೆಯುಳ್ಳವು, ನಾಲ್ಕುಕಾಲ ನಿಲ್ಲುವ ಯೋಗ್ಯತೆ ಅವಕ್ಕೆ ಉಂಟು. ತಾಳ್ಳಪಾಕು ಅಣ್ಣಮಾಚಾರ್ಯರೆಂಬುವರು (ಕ್ರಿ.ಶ. ೧೪೦೮-೧೫೦೩) ಆಂಧ್ರ ರಾಜ್ಯದಲ್ಲಿ ೧೫ನೆಯ ಶತಮಾನದಲ್ಲಿ ಜೀವಿಸಿದ ಒಬ್ಬ ಮಹಾಕವಿ. ಅವರಿಗೆ ಪದಕವಿ ಪಿತಾಮಹ ಎಂಬ ಬಿರುದು ಇತ್ತು. ಅವರು ತೆಲುಗಿನಲ್ಲಿ ಸಾವಿರಾರು ಕೀರ್ತನೆ ಅಥವಾ ’ಪದ’ ಗಳನ್ನು ರಚಿಸಿದರು. ಅವರು ತಿರುಪತಿ ವೆಂಕಟೇಶ್ವರನ ಭಕ್ತರು. ಇದು ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲೇ ಒಂದು ಅಸಾಧಾರಣ ಸಂದರ್ಭ. ದೇವಸ್ಥಾನದ ಕತ್ತಲೆಯ ಮೂಲೆಯಲ್ಲಿ ಸಾವಿರಾರು ತಾಮ್ರದ ಗತಡುಗಳಲ್ಲಿ ಕೆತ್ತಿದ ಕೀರ್ತನೆ ರಾಶಿಗಳು ಪತ್ತೆಯಾದವು. ದೇವಸ್ಥಾನದ ಅಧಿಕಾರಿಗಳು ಈ ತಗಡುಗಳನ್ನು ಸಂಗ್ರಹಿಸಿಟ್ಟರು.

ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ
ಅನಂತಕೃಷ್ಣ ಶರ್ಮ

ಪ್ರಮುಖ ಕೃತಿಗಳು[ಬದಲಾಯಿಸಿ]

 1. ಅನಂತ ಭಾರತಿ (ಸಂಸ್ಕೃತ ಕೃತಿಗಳ ಸಂಗ್ರಹ).
 2. ಮೀರಾ ಬಾಯಿ(೧೯೧೩).
 3. ತಾರಾದೇವಿ(೧೯೧೧).
 4. ಮೇವನ ನಟಕೊಪ್ಯನಸಮುಲು(೧೯೨೮-೨೯)
 5. ಅನಾಮಚರ್ಯ [೫]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ರಾಳ್ಳಪಲ್ಲಿ ಅನಂತ ಕೃಷ್ಣ ಶರ್ಮ

ಪ್ರಶಸ್ತಿಗಳು[ಬದಲಾಯಿಸಿ]

 1. ಅವರು ೧೯೭೯ ರಲ್ಲಿ ತಿರುಮಲ ತಿರುಪತಿ ದೇವಾಸ್ತನ ಮೂಲಕ ಆಸ್ಥಾನ ವಿದ್ವಾನ್[೬] ಎಂಬ ಗೌರವಕ್ಕೆ ಪಾತ್ರರಾದರು.
 2. ೧೯೭೪ ರಲ್ಲಿ ಸಂಗೀತಾ ಕಲಾನಿಧಿ ಗೌರವವನ್ನು ಪಡೆದರು.
 3. ೧೯೭೪ ರಲ್ಲಿ ಶ್ರೀ ವೆಂಕಟೇಶ್ವರ ವಿಶ್ವಾವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಪಡೆದರು.
 4. ಬೆಂಗಳೂರು ಜ್ಞಾನ ಸಮಾಜದಿಂದ ಸಂಗೀತ ಕಲಾರತ್ನ.

ಉಲ್ಲೇಖಗಳು[ಬದಲಾಯಿಸಿ]

 1. ಕರ್ನಾಟಕ್ ಸಂಗೀತ
 2. "ಅನಂತಪುರ್". Archived from the original on 2013-05-15. Retrieved 2015-10-21.
 3. http://vijaykarnataka.indiatimes.com/home/-/articleshow/20384470.cms
 4. "ಚಂಪೂ ಭಾರತ". Archived from the original on 2016-03-06. Retrieved 2015-10-21.
 5. anamacharya
 6. "ಆಸ್ತಾನ ವಿದ್ವಾನ್". Archived from the original on 2007-11-26. Retrieved 2015-10-21.