ವಿಷಯಕ್ಕೆ ಹೋಗು

ರಾಯಿತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಯಿತಾ
ಸೌತೆಕಾಯಿ ಮತ್ತು ಪುದೀನಾ ರಾಯಿತಾ
ಮೂಲ
ಪರ್ಯಾಯ ಹೆಸರು(ಗಳು)रायता, রাইতা
ಪಚಡಿ
ಪ್ರಾಂತ್ಯ ಅಥವಾ ರಾಜ್ಯಭಾರತೀಯ ಉಪಖಂಡ ಜೊತೆಗೆ ಪ್ರಾದೇಶಿಕ ವೈವಿಧ್ಯಗಳು
ವಿವರಗಳು
ಸೇವನಾ ಸಮಯವ್ಯಂಜನ
ಬಡಿಸುವಾಗ ಬೇಕಾದ ಉಷ್ಣತೆತಣ್ಣಗೆ
ಮುಖ್ಯ ಘಟಕಾಂಶ(ಗಳು)ಮೊಸರು, ಸೌತೆಕಾಯಿ, ಪುದೀನ
ಪ್ರಭೇದಗಳುಪಚಡಿ
ಪೋಷಕಾಂಶಗಳು46

ರಾಯಿತಾ ಮೊಸರು, ಜೊತೆಗೆ ಹಸಿ ಅಥವಾ ಬೇಯಿಸಿದ ತರಕಾರಿಗಳು, ಹೆಚ್ಚು ವಿರಳವಾಗಿ ಹಣ್ಣು, ಅಥವಾ ಬೂಂದಿ ರಾಯಿತಾ ಇದ್ದಲ್ಲಿ, ಬೇಸನ್‍ನಿಂದ ತಯಾರಿಸಲಾದ ಹಿಟ್ಟಿನ ಕರಿದ ಗುಂಡುಗಳಿಂದ ತಯಾರಿಸಲಾದ ಒಂದು ಭಾರತೀಯ, ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ಹೆಚ್ಚುವರಿ ಭಕ್ಷ್ಯ. ಪಾಶ್ಚಾತ್ಯ ಪಾಕಪದ್ಧತಿಯಲ್ಲಿನ ಡಿಪ್ ಅಥವಾ ಬೇಯಿಸಿದ ಸ್ಯಾಲಡ್ ಇದರ ಅತ್ಯಂತ ನಿಕಟ ಅಂದಾಜು. ಕೆಲವು ಏಷ್ಯನ್ ಪಾಕಪದ್ಧತಿಗಳ ಮುಖ್ಯ ತಿನಿಸುಗಳಾದ ಮಸಾಲೆಯುಕ್ತ ಮೇಲೋಗರಗಳು ಮತ್ತು ಕಬಾಬ್‍ಗಳಿಗೆ ವ್ಯತಿರಿಕ್ತವಾಗಿ ರಾಯಿತಾ ತಂಪಾಗಿಸುವ ಪರಿಣಾಮ ಹೊಂದಿರುತ್ತದೆ. ಸಸ್ಯಾಹಾರಿ ಭಾರತೀಯ ಪಾಕಪದ್ಧತಿಯಲ್ಲಿ, ಕೆಲವು ಬಗೆಯ ಫ಼್ಲ್ಯಾಟ್‍ಬ್ರೆಡ್ಅನ್ನು ರಾಯಿತಾ, ಚಟ್ನಿಗಳು ಮತ್ತು ಉಪ್ಪಿನಕಾಯಿಗಳ ಜೊತೆಗೆ ತಿನ್ನಬಹುದು. ಮೊಸರನ್ನು ಕೊತ್ತಂಬರಿ, ಹುರಿದ ಜೀರಿಗೆ, ಮೆಂತ್ಯ, ಕಾಯೆನ್ ಮೆಣಸಿನಕಾಯಿ, ಚಾಟ್ ಮಸಾಲಾ ಮತ್ತು ಇತರ ಮೂಲಿಕೆಗಳು ಹಾಗೂ ಸಂಬಾರ ಪದಾರ್ಥಗಳಿಂದ ರುಚಿಗೊಳಿಸಬಹುದು.

"https://kn.wikipedia.org/w/index.php?title=ರಾಯಿತಾ&oldid=664063" ಇಂದ ಪಡೆಯಲ್ಪಟ್ಟಿದೆ