ವಿಷಯಕ್ಕೆ ಹೋಗು

ಪಚಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಚಡಿ ಎಂದರೆ ಹಸಿ ತರಕಾರಿಗಳು ಅಥವಾ ಸೊಪ್ಪುಗಳಿಂದ ತಯಾರಿಸಲಾದ ಒಂದು ವ್ಯಂಜನ ಪದಾರ್ಥ. ಕೆಲವು ಬಗೆಯ ಪಚಡಿಗಳಲ್ಲಿ ಮೊಸರನ್ನು ಸೇರಿಸಲಾಗುತ್ತದೆ. ತರಕಾರಿಗಳನ್ನು ರುಬ್ಬಬಹುದು, ಚೌಕಾಕಾರವಾಗಿ ಹೆಚ್ಚಿರಬಹುದು ಅಥವಾ ಸಣ್ಣಗೆ ಹೆಚ್ಚಿರಬಹುದು. ಸೊಪ್ಪುಗಳಿಂದ ಪಚಡಿ ಮಾಡಿದಾಗ ಅವುಗಳನ್ನು ಸಣ್ಣಗೆ ಹೆಚ್ಚಿ ಅದಕ್ಕೆ ಇತರ ತರಕಾರಿಗಳನ್ನು ಸೇರಿಸಬಹುದು.[] ಮಿಶ್ರಣಕ್ಕೆ ಹಸಿ ಕೊಬ್ಬರಿಯನ್ನು ಸೇರಿಸಿ, ಹೆಚ್ಚಿದ ತರಕಾರಿಗಳ ಮಿಶ್ರಣಕ್ಕೆ ಸಾಸಿವೆ, ಶುಂಠಿ, ಕರಿಬೇವಿನ ಎಲೆಗಳು ಮತ್ತು ಮೆಣಸಿನಕಾಯಿ ಹಾಕಿದ ಒಗ್ಗರಣೆಯನ್ನು ಸೇರಿಸಲಾಗುತ್ತದೆ. ಪಚಡಿಯನ್ನು ಸಾಮಾನ್ಯವಾಗಿ ಊಟದಲ್ಲಿ ಪಕ್ಕ ಖಾದ್ಯ/ಭಕ್ಷ್ಯವಾಗಿ ಬಡಿಸಲಾಗುತ್ತದೆ.

ಆಂಧ್ರ ಪ್ರದೇಶದಲ್ಲಿ, ಪಚಡಿಯನ್ನು ತರಕಾರಿಗಳು ಅಥವಾ ಸೊಪ್ಪುಗಳನ್ನು ನುಣ್ಣಗೆ ರುಬ್ಬಿ ಅದಕೆ ಖಾರ, ಉಪ್ಪು, ಒಗ್ಗರಣೆ ಮುಂತಾದ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಇದನ್ನು ಒಂದು ರೀತಿ ಚಟ್ನಿಯೆಂದು ಹೇಳಬಹುದು.

ಕರ್ನಾಟಕದಲ್ಲಿ, ಪಚಡಿಯನ್ನು ಬಹುತೇಕವಾಗಿ ಹಸಿರು ಸೊಪ್ಪುಗಳು, ಮತ್ತು ಗಜ್ಜರಿ, ಟೊಮೇಟೊ, ಈರುಳ್ಳಿ, ಸೌತೆಕಾಯಿಯಂತಹ ತರಕಾರಿಗಳಿಂದ ತಯಾರಿಸಲಾಗುತ್ತದೆ. ಜೊತೆಗೆ ಮೊಸರನ್ನು ಸೇರಿಸಬಹುದು. ಕರ್ನಾಟಕದಲ್ಲಿ ತಂಬುಳಿ ಬಹಳ ಜನಪ್ರಿಯವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2020-06-06. Retrieved 2019-09-17.
"https://kn.wikipedia.org/w/index.php?title=ಪಚಡಿ&oldid=1056273" ಇಂದ ಪಡೆಯಲ್ಪಟ್ಟಿದೆ