ವಿಷಯಕ್ಕೆ ಹೋಗು

ಚಾಟ್ ಮಸಾಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾಟ್ ಮಸಾಲಾ ದಕ್ಷಿಣ ಏಷ್ಯಾದ ಪಾಕಪದ್ಧತಿಯಲ್ಲಿ, ಪ್ರಮುಖವಾಗಿ ಭಾರತೀಯ, ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ಪಾಕಪದ್ಧತಿಯಲ್ಲಿ ಬಳಸಲಾಗುವ ಒಂದು ಸಂಬಾರ ಪದಾರ್ಥಗಳ ಪುಡಿ ಮಿಶ್ರಣ. ಅದು ಪ್ರಾತಿನಿಧಿಕವಾಗಿ ಆಮ್‍ಚೂರ್, ಜೀರಿಗೆ, ಧನಿಯಾ, ಒಣ ಶುಂಠಿ, ಉಪ್ಪು (ಹಲವುವೇಳೆ ಸೈಂಧವ ಲವಣ), ಮೆಣಸು, ಇಂಗು ಮತ್ತು ಖಾರದ ಪುಡಿಯನ್ನು ಹೊಂದಿರುತ್ತದೆ. ಭಾರತದಲ್ಲಿ ಚಾಟ ಮಸಾಲಾವನ್ನು ಹಣ್ಣು, ಎಗ್ ಟೋಸ್ಟ್ ಮತ್ತು ಸಾಮಾನ್ಯ ಸಲಾಡ್‍ಗಳ ಮೇಲೆ ಉದುರಿಸಲಾಗುತ್ತದೆ.