ಸ್ಯಾಲಡ್
Jump to navigation
Jump to search
ಸಲಾಡ್ ಆಹಾರದ ಸಣ್ಣ ಚೂರುಗಳನ್ನು ಹೊಂದಿರುವ, ಮತ್ತು ಒಂದು ಸಾಸ್ ಅಥವಾ ಸಲಾಡ್ ಅಲಂಕರಣದ ಜೊತೆಗೆ ಮಿಶ್ರಣ ಮಾಡಬಹುದಾದ ಒಂದು ಖಾದ್ಯ. ಸಲಾಡ್‌ಗಳು ತರಕಾರಿಗಳು, ಹಣ್ಣುಗಳು, ಚೀಸ್, ಬೇಯಿಸಿದ ಮಾಂಸ, ಮೊಟ್ಟೆ ಮತ್ತು ಆಹಾರ ಧಾನ್ಯಗಳನ್ನು ಒಳಗೊಂಡಂತೆ ವಿವಿಧ ಆಹಾರಗಳನ್ನು ಒಟ್ಟುಗೂಡಿಸಿಕೊಳ್ಳಬಲ್ಲವು. ತೋಟದ ಸಲಾಡ್‌ಗಳು ಎಲೆ ತರಕಾರಿಗಳ ಒಂದು ಆಧಾರವನ್ನು ಬಳಸುತ್ತವೆ; ಅವು ಸಾಕಷ್ಟು ಸಾಮಾನ್ಯವಾಗಿರುವುದರಿಂದ ಬರೀ ಸಲಾಡ್ ಶಬ್ದವು ಹಲವುವೇಳೆ ನಿರ್ದಿಷ್ಟವಾಗಿ ತೋಟದ ಸಲಾಡ್‌ಗಳನ್ನು ನಿರ್ದೇಶಿಸುತ್ತದೆ.[೧]
ತೋಟದ ಸಲಾಡ್ ಲೆಟಿಸ್, ಅರುಗುಲ, ಕೇಲ್ ಅಥವಾ ಪಾಲಕ್ ರೀತಿಯ ಹಸಿರು ಎಲೆಗಳನ್ನು ಒಂದು ತಡಿಪಾಯವಾಗಿ ಬಳಸುತ್ತದೆ.[೨]