ರಕ್ತನಾಳದ ಉಬ್ಬು ಗುಳ್ಳೆ (ಅಗಲುಬ್ಬು)
ರಕ್ತನಾಳದ ಉಬ್ಬು ಗುಳ್ಳೆ (ಅಗಲುಬ್ಬು) ಎಂಬುದು ಅಸಹಜವಾಗಿ ಅಗಲಕ್ಕೆ ಹಿಗ್ಗಿಕೊಂಡಿರುವ ಯಾವುದಾದರೂ ಒಂದು ದೊಡ್ಡ ಧಮನಿಯ ಉಬ್ಬು/ಗುಳ್ಳೆಗೆ ನೀಡಲಾಗುವ ಹೆಸರು (ಅನ್ಯೂರಿಸಮ್).[೧] ನಾಳದ ಗೋಡೆಯ ಒಂದೆಡೆಯಲ್ಲಿ ದುರ್ಬಲಗೊಳಿಸುವ ಅನೇಕ ಬಗೆಯ ಪೆಟ್ಟು, ಗಾಯ, ರೋಗಗಳಿಂದ ಧಮನಿ ಹೀಗೆ ಹಿಗ್ಗುತ್ತದೆ. ಧಮನಿಗಳ ಉಬ್ಬುಗಳು ಬರಬರುತ್ತಾ ಹಿರಿದಾಗುತ್ತ, ಕೊನೆಗೆ ಒಡೆಬಿರಿದು ರಕ್ತಸ್ರಾವ ಆಗುತ್ತದೆ.[೨] ಇವುಗಳಿಂದ ಮೊರೆವ ದನಿ ಹುಟ್ಟುವುದು. ಮುಖ್ಯವಾಗಿ ಹಿರಿಹಿಗ್ಗುತ್ತ ನಾಡಿ ಬಡಿಯುತ್ತ ಒತ್ತುವುದರಿಂದಲೂ ಸವೆತಕ್ಕೆ (ಎರೋಷನ್) ಒಳಗಾಗುವುದರಿಂದ ಅವುಗಳ ಸುತ್ತಮುತ್ತ ಇರುವ ಕಣಜಾಲಗಳಲ್ಲಿ ವ್ಯತ್ಯಾಸಗಳನ್ನುಂಟುಮಾಡುತ್ತವೆ. ಕೆಲವು ವೇಳೆ ಹತ್ತಿರದ, ಪಕ್ಕದ ರಕ್ತನಾಳಗಳಾದ ಸಿರೆಗಳೊಂದಿಗೆ ನಾಳಗೂಡಲೂಬಹುದು. ಉಬ್ಬುಗಳ ಬಗೆಗಳ ಹೆಸರುಗಳು ಅವುಗಳ ಆಕಾರ, ಗುಣ, ಎಡೆಗಳಂತೆ ಇರುತ್ತವೆ. ರೋಗಿಯ ಹೇಳಿಕೆ, ಮೈಪರೀಕ್ಷೆ, ವಿಶೇಷ ರಕ್ತನಾಳಗಳ ಕ್ಷ-ಕಿರಣ, ಸ್ಕ್ಯಾನಿಂಗ್ ಪರೀಕ್ಷೆಗಳಿಂದ ಇವು ಇರುವುದನ್ನು ಕಂಡುಹಿಡಿಯುಬಹುದು. ಎಂಥ ಅಗಲುಬ್ಬು, ಎಲ್ಲಿದೆ ಎನ್ನುವುದನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುವುದು.
ಉಲ್ಲೇಖಗಳು
[ಬದಲಾಯಿಸಿ]- ↑ "Aneurysms". Society of NeuroInterventional Surgery. Retrieved 23 February 2018.
- ↑ Cronenwett JL, Murphy TF, Zelenock GB, Whitehouse WM, Lindenauer SM, Graham LM, Quint LE, Silver TM, Stanley JC (September 1985). "Actuarial analysis of variables associated with rupture of small abdominal aortic aneurysms". Surgery. 98 (3): 472–83. PMID 3898453.
ಹೊರಗಿನ ಕೊಂಡಿಗಳು
[ಬದಲಾಯಿಸಿ]