ವಿಷಯಕ್ಕೆ ಹೋಗು

ಯೆಹೂದಿ ಮೆನುಹಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


From the film ಸ್ಟೇಜ್ ಡೋರ್ ಕ್ಯಾಂಟೀನ್, ೧೯೪೩
ಯಹುದಿ ಮೆನುಹಿನ್ ರವರ ಹಸ್ತಾಕ್ಷರ


ಯೆಹೂದಿ ಮೆನುಹಿನ್ ಇವರು ೧೯೧೬ ಎಪ್ರಿಲ್ ೨೨ರಂದು ಅಮೇರಿಕದ ನ್ಯೂಯಾರ್ಕ್ ನಗರದಲ್ಲಿ ಜನಿಸಿದರು.ಕೇವಲ ಮೂರು ವರ್ಷದವರಿರುವಾಗಲೆ ಇವರು ಸಿಗ್ಮಂಡ್ ಎ೦ಕರ್ ಎನ್ನುವವರ ಬಳಿ ಪಿಟೀಲು ಕಲಿಯತೊಡಗಿದರು. ಏಳು ವರ್ಷದವರಿದ್ದಾಗಲೆ ತಮ್ಮ ಮೊದಲ ಕಛೇರಿಯನ್ನು ನೀಡಿದರು. ಆ ಬಳಿಕ ರೊಮಾನಿಯಾದ ಸಂಗೀತಗಾರ ಹಾಗು ಪಿಟೀಲುವಾದಕ ಜಾರ್ಜ ಎನೆಸ್ಕು ಇವರ ಬಳಿಯಲ್ಲಿ ಶಿಕ್ಷಣ ಪಡೆದರು. ತನ್ನಂತರ ತಮ್ಮ ಸೋದರಿ, ಪಿಯಾನೊ ವಾದಕಿ ಹೆಪ್ಝಿಬಾ ಜೊತೆಗೆ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಜರುಗಿಸಿದರು.

ಪೂರ್ವಭಾಗ

[ಬದಲಾಯಿಸಿ]

ಎರಡನೆಯ ಮಹಾಯುದ್ಧ ನಡೆದಾಗ ಯೆಹೂದಿ ಮೆನುಹಿನ್ ಇವರು ಮಿತ್ರರಾಷ್ಟ್ರಗಳ ಸೈನಿಕರ ರಂಜನೆಗಾಗಿ ಕಛೇರಿಗಳನ್ನು ನೀಡಿದರು. ಎಪ್ರಿಲ್ ೧೯೪೫ರಲ್ಲಿ, ಬರ್ಗೆನ್-ಬೆಲ್ಸನ್ ಯಾತನಾ ಶಿಬಿರದ ವಿಮೋಚನೆಯ ನಂತರ, ಅಲ್ಲಿದ್ದ ಶಿಬಿರವಾಸಿಗಳ ಎದುರಿಗೆ ತಮ್ಮ ಸಂಗೀತ ಕಚೇರಿ ನೀಡಿದರು. ೧೯೪೭ರಲ್ಲಿ ಜರ್ಮನಿಗೆ ಭೆಟ್ಟಿ ಕೊಟ್ಟು ಅಲ್ಲಿ 'ವಿಲ್ಹೆಲ್ಮ್ ಫುರ್ಟ್ವ್ಯಾಂಗ್ಲರ್ ಎನ್ನುವ ಸಂಗೀತ ನಿರ್ವಾಹಕರ ಜೊತೆಗೆ ಕಚೇರಿ ನಡೆಯಿಸಿದರು. ಯಹೂದಿಗಳ ಯಾತನಾಕಾಂಡದ ಬಳಿಕ ಜರ್ಮನಿಗೆ ಭೆಟ್ಟಿ ನೀಡಿದ ಪ್ರಥಮ ಯಹೂದಿ ಎನ್ನಿಸಿಕೊಂಡರು.

ಎರಡನೆಯ ಜಾಗತಿಕ ಯುದ್ಧದಲ್ಲಿಯ ಘಟನೆಗಳಿಂದ ಮೆನುಹಿನ್ ತ್ರಸ್ತರಾಗಿದ್ದರು. ಈ ಸಂದರ್ಭದಲ್ಲಿ ಮೆನುಹಿನ್‍ರವರಿಗೆ ಯೋಗಶಿಕ್ಷಣ ನೀಡಿದವರು ಬಿ.ಕೆ.ಎಸ್.ಅಯ್ಯಂಗಾರ್. ಯೋಗ ಹಾಗೂ ಧ್ಯಾನಗಳ ಸಾಧನೆಯಿಂದ ಮೆನುಹಿನ್ ಅವರ ಮನಸ್ಸಿಗೆ ಸಮಾಧಾನ ದೊರೆಯಿತು. ಈ ಪೂರ್ವದಲ್ಲಿಯ ಅವರ ಶಿಕ್ಷಣಕ್ರಮಕ್ಕೆ ನಿರ್ದಿಷ್ಟ ವಿಧಾನವಿರಲಿಲ್ಲ. ಯೋಗಸಾಧನೆ ಹಾಗು ಧ್ಯಾನದ ಜೊತೆಗೆ ಕ್ರಮಬದ್ಧವಾಗಿ ಸಂಗೀತದ ಅಧ್ಯಯನವನ್ನು ಮಾಡುವದರಿಂದ ಮೆನುಹಿನ್ ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಂಡರು. ಇದರಿಂದಾಗಿ ಅವರ ಸಂಗೀತಕ್ಕೆ ಹೊಸದೊಂದು ಗುಣ ಲಭಿಸಿತು.

೧೯೬೨ರಲ್ಲಿ ಮೆನುಹಿನ್ ಅವರು ಸರ್ರೆಯ ಸ್ಟೋಕ್ ಡಿ’ ಅಂಬರನಾನ್ ದಲ್ಲಿ ಯೆಹೂದಿ ಮೆನುಹಿನ್ ಸ್ಕೂಲ್ ಸ್ಥಾಪಿಸಿದರು. ಕ್ಯಾಲಿಫೋರ್ನಿಯಾಹಿಲ್ಸ್ಬರೋದಲ್ಲಿರುವ ನ್ಯೂವಾ ಸ್ಕೂಲಿನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿದರು.

ಉತ್ತರ ಭಾಗ

[ಬದಲಾಯಿಸಿ]

೧೯೮೦ರಲ್ಲಿ ಸ್ಟಿಫಾನ್ ಗ್ರ್ಯಾಪೆಲ್ಲಿ ಯವರ ಜೊತೆಗೆ ಮೆನುಹಿನ್ ಜಾಝ್ ಸಂಗೀತ ನೀಡಿದರು. ಅಲ್ಲದೆ ಖ್ಯಾತ ಸಿತಾರವಾದಕ ರವಿಶಂಕರ ಜೊತೆಗೆ ಸಂಗೀತ ನೀಡಿದರು. ೧೯೯೦ರಲ್ಲಿ ಏಶಿಯನ್ ಯೂಥ್ ಆರ್ಕೆಸ್ಟ್ರಾದ ಜೊತೆಗೆ ಇವರು ಜಪಾನ್, ತೈವಾನ್, ಸಿಂಗಾಪುರ ಮತ್ತು ಹಾಂಗ್ ಕಾಂಗ್ ಗಳಿಗೆ ಭೆಟ್ಟಿ ನೀಡಿ ಸಂಗೀತ ನಿರ್ವಹಣೆ ಮಾಡಿದರು.

ಪುರಸ್ಕಾರ

[ಬದಲಾಯಿಸಿ]

೧೯೬೫ರಲ್ಲಿ ಬ್ರಿಟಿಷ್ ಸರಕಾರವು ಇವರಿಗೆ ಗೌರವ ನೈಟ್‍ಹುಡ್ ಪುರಸ್ಕಾರ ನೀಡಿ ಗೌರವಿಸಿತು. ೧೯೮೫ರಲ್ಲಿ ಮೆನುಹಿನ್ ಅವರಿಗೆ ಬ್ರಿಟಿಷ್ ನಾಗರಿಕತ್ವವನ್ನು ನೀಡಲಾಯಿತು. ೧೯೯೦ರಲ್ಲಿ ಮೆನುಹಿನ್‍ರ ಜೀವಮಾನ ಸಾಧನೆಗಾಗಿ ಗ್ಲೆನ್ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಬ್ರುಸ್ಸೆಲ್‍ದಲ್ಲಿರುವ ವ್ರಿಜೆ ವಿಶ್ವವಿದ್ಯಾಲಯವು ಯೆಹುದಿ ಮೆನುಹಿನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

ಆಸಕ್ತಿಕಾರಕ ವಿಷಯ

[ಬದಲಾಯಿಸಿ]

ಮೆನುಹಿನ್ ಜನನದ ಪೂರ್ವದಲ್ಲಿ ಅವರ ತಂದೆ,ತಾಯಿ ವಾಸಕ್ಕಾಗಿ ಮನೆ ಹುಡುಕುತ್ತಿದ್ದಾಗ, ಆ ಮನೆಯೊಡತಿ ಇವರು ಯಹೂದಿಗಳೆಂದು ತಿಳಿಯದೆ ಮನೆ ಕೊಡಲು ಒಪ್ಪಿದ್ದಳಂತೆ. ಆದರೆ ಮೆನುಹಿನ್‍ರ ತಂದೆ, ತಾಯಿ ಆ ಮನೆಯನ್ನು ತಿರಸ್ಕರಿಸಿ ಬೇರೊಂದು ಮನೆಯನ್ನು ಹುಡುಕಿಕೊಂಡರು. ಆಗಲೇ ಅವರ ತಾಯಿ ಒಂದು ಆಣೆ ಹಾಕಿಕೊಂಡರಂತೆ. “ನನಗೆ ಹುಟ್ಟುವ ಮಗನ ಹೆಸರಿಗೆ ಯೆಹೂದಿ ಎಂದು ಜೋಡಿಸುತ್ತೇನೆ. ಜಗತ್ತಿಗೆಲ್ಲ ಗೊತ್ತಾಗಲಿ, ಇವನು ಯೆಹೂದಿ ಎಂದು!”

ಯೆಹೂದಿ ಮೆನುಹಿನ್ ಇಂದು ಅತ್ಯಂತ ಗೌರವಿತ ಹೆಸರು. ಅವರ ತಾಯಿಯ ಅತ್ಮಕ್ಕೆ ಸಮಾಧಾನವಾಗಿರಬೇಕಲ್ಲವೆ?

೧೯೯೩ರಲ್ಲಿ ಬ್ರೊಂಕೈಟಿಸ್ ರೋಗದ ಅಡ್ಡ ಪರಿಣಾಮಗಳಿಂದಾಗಿ ಯೆಹೂದಿ ಮೆನುಹಿನ್ ಬರ್ಲಿನ್‍ದಲ್ಲಿ ನಿಧನರಾದರು.