ಯಶವಂತ ಚಿತ್ತಾಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶ್ರೀ ಯಶವಂತ ಚಿತ್ತಾಲ
ಯಶವಂತ ಚಿತ್ತಾಲ
ಜನನ ಆಗಸ್ಟ್ ೩, ೧೯೨೮
ಹನೇಹಳ್ಳಿ, ಉತ್ತರ ಕನ್ನಡ
ಮರಣ ಮಾರ್ಚ್ ೨೨, ೨೦೧೪
ಮುಂಬಯಿ
ವೃತ್ತಿ ಲೇಖಕ
ರಾಷ್ಟ್ರೀಯತೆ ಭಾರತೀಯ
ಕಾಲ (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಪ್ರಕಾರ/ಶೈಲಿ ಕಥೆ, ಕಾದಂಬರಿ

ಯಶವಂತ ಚಿತ್ತಾಲ - [೧]ಕನ್ನಡದ ಖ್ಯಾತ ಕವಿ ಮತ್ತು ಸಾಹಿತಿ. ಐವತ್ತೊಂದು ಕಥೆಗಳನ್ನು ಬರೆದಿರುವ ಚಿತ್ತಾಲರರು, ಉತ್ತರ ಕನ್ನಡದ ಚಿಕ್ಕ ಗ್ರಾಮ ಹನೇಹಳ್ಳಿಯ ಕಡೆಯವರು. ಪಾಲಿಮರ್ ಟೆಕ್ನೊಲಜಿ ಓದಿ ಮುಂಬಯಿ ಹೋಗಿ ಅಲ್ಲೇ ನೆಲೆಸಿದರು.

ಜೀವನ[ಬದಲಾಯಿಸಿ]

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ, "ಹನೇಹಳ್ಳಿ," ಯಲ್ಲಿ ಜನನ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಹನೇಹಳ್ಳಿ ಎಂಬ ಪುಟ್ಟ ಹಳ್ಳಿ ಚಿತ್ತಾಲರ ಅಂತರಂಗದ ಒಂದು ಅವಿಭಾಜ್ಯ ಅಂಗವಾಗಿ ಇದೆ.ಅದು ಅವರ ಜೀವನ ಮೌಲ್ಯಗಳನ್ನು ಸಾಣೆಹಿಡಿಯುತ್ತಾ ಹೋಗುತ್ತದೆ. ಚಿತ್ತಾಲರ ತಂದೆ ವಿಠೋಬ.[೨] ತಾಯಿ, ರುಕ್ಮಿಣಿ, ದಂಪತಿಗಳ,೭ ಮಕ್ಕಳಲ್ಲಿ ಐದನೆಯವರು ಯಶವಂತರು. ಮನೆಭಾಷೆ ಕೊಂಕಣೀ-ಮರಾಠಿ. ಪ್ರಾರಂಭಿಕ ಶಿಕ್ಷಣ, ಹನೇಹಳ್ಳಿ, ಕುಮಟ, ಧಾರವಾಡ, ಬೊಂಬಾಯಿ ಮುಂತಾದ ಕಡೆಗಳಲ್ಲಿ. ಉಚ್ಚ ಶಿಕ್ಷಣ ಅಮೆರಿಕದ ನ್ಯೂಜರ್ಸಿಯಲ್ಲಿ ಪಡೆದಿದ್ದರು. ಕವಿ, ಗಂಗಾಧರ ಚಿತ್ತಾಲ ರು, ಅಣ್ಣ. ಶಾಂತಿನಾಥ ದೇಸಾಯಿಯವರು, ಮತ್ತು ಗೌರೀಶಕಾಯ್ಕಿಣಿಯವರು, ಚಿತ್ತಾಲರ, ಮೇಲೆ ದಟ್ಟವಾದ ಪ್ರಭಾವ ಬೀರಿದ್ದರು. ಚಿತ್ರಕಲೆಯನ್ನು ಕಲಿಯುವ ಗೀಳು, ಬಾಲ್ಯದಲ್ಲೇ ಅಂತರಾಳದಲ್ಲಿ ಹುದುಗಿತ್ತು.

ಆಸಕ್ತಿಗಳು:[ಬದಲಾಯಿಸಿ]

ಅವರು ಬೊಂಬಾಯಿಗೆ ಬಂದು, "ಕಲಾನಿಕೇತನ, " ಎಂಬ ಶಾಲೆಗೆ ಸಂಜೆ-ತರಗತಿಗೆ ಸೇರಿದರು. ಎಮ್. ಎನ್. ರಾಯ್ ರವರ ವಿಚಾರಧಾರೆಗಳಿಗೆ ಸ್ಪಂದಿಸಿ, ರ‍್ಯಾಡಿಕಲ್ ಡೆಮೊಕ್ರಾಟಿಕ್ ಪಕ್ಷದ ಸದಸ್ಯರಾದರು. ನವಮಾನವತಾವಾದಿ ಮಾರ್ಕ್ಸ್, ಎರಿಕ್ ಪ್ರಾಂ, ಎಡಿಂಗ್ ಟನ್, ಹಕ್ಸ್ಲಿ, ಫ್ರಾಯ್ಡ್, ಎಡ್ಲರ್, ಮುಂತಾದ ಹಲವು ಧೀಮಂತರ ವಿಚಾರಧಾರೆಗಳಿಗೆ ತಮ್ಮ ಮನಸ್ಸನ್ನು ತೆರೆದಿಟ್ಟರು. ಪ್ಲಾಸ್ಟಿಕ್-ತಂತ್ರಜ್ಞಾನದಲ್ಲಿ, ಶಿಕ್ಷಣ- ಪ್ರಶಿಕ್ಷಣಗಳನ್ನು ಪಡೆದು, "ಬೇಕ್ಲೈಟ್ ಹೈಲಂ," ಎಂಬ ಸಂಸ್ಥೆಯಲ್ಲಿ ನೌಕರಿಗೆ ಸೇರಿಕೊಂಡರು. ೩೦ ವರ್ಷಕ್ಕೂ ಮೀರಿ ಸಲ್ಲಿಸಿದ ಸೇವೆಯಿಂದ, ಆಧುನಿಕ ಜಗತ್ತಿನ ಸ್ವರೂಪವನ್ನೆ ನಿಯಂತ್ರಿಸುವ, ಬಂಡವಾಳಶಾಹೀ, ಕೈಗಾರಿಕಾ ಜಗತ್ತಿನ ನಿಕಟ-ಪರಿಚಯವನ್ನು ಮಾಡಿಕೊಂಡರು. ಉದ್ಯೋಗದ ಪರಿಸರದಲ್ಲೂ, ವೈಯಕ್ತಿಕಜೀವನದಲ್ಲೂ, ಆದ ದುರಂತಗಳೂ, ಬಿಕ್ಕಟ್ಟುಗಳೂ, ಅವರ ಬರವಣಿಗೆಯ ಗ್ರಾಸಗಳಾದವು. ಅವೆಲ್ಲವನ್ನೂ ಮೆಟ್ಟಿ, ತಮ್ಮ ಜೀವನಶ್ರದ್ಧೆಯ ಸೋಪಾನದ ಮೇಲೆನಿಂತು, ಆತ್ಮವಿಶ್ವಾಸದಿಂದ ಮುನ್ನುಗ್ಗಿದರು. ತಮ್ಮ ಸೃಜನಶೀಲ ವ್ಯಕ್ತಿತ್ವದಿಂದ, ತಮ್ಮ ಕಥೆ-ಕದಂಬರಿಗಳಲ್ಲಿ ಅದರ ವಿಶಿಷ್ಟರೂಪಗಳ ಅನನ್ಯ ಬರಣಿಗೆಯನ್ನು ನೀಡಿದ್ದಾರೆ.[೩]

೧೯೫೭ ರಲ್ಲಿ ಮೈತಳೆದ, "ಸಂದರ್ಶನ," ಕಥಾಸಂಕಲನಿಂದ ಹಿಡಿದು, ೧೯೯೦ ರಲ್ಲಿ ಹೊರಬಂದ, "ಪುರುಷೋತ್ತಮ, "ದ ವರೆಗೆ, ಚಿತ್ತಾಲರು ಬರೆದ, ವಿವಿಧ ಕೃತಿಗಳನ್ನು ಪರಿಶೀಲಿಸಿದರೆ, ಆ ಬರಣಿಗೆಯ ಹಿಂದಿರುವ ತುಡಿತಗಳನ್ನು ನಾವು ಗುರುತಿಸಬಹುದು. ಅವರ ಜನ್ಮಭೂಮಿ, 'ಹನೇಹಳ್ಳಿ,' ಅವರ ಹಲವಾರು ಬರಹಗಳ ಕೇಂದ್ರಬಿಂದು. ಬಾಲ್ಯದ ಭೂತಕಾಲವನ್ನು, ವರ್ತಮಾನದ ಸಂಕೀರ್ಣ ಬದುಕಿನೊಂದಿಗೆ ಹೋಲಿಸಿ, ಅದನ್ನು ಇಡೀಮನುಕುಲದಲ್ಲಿ ಸಂಭವಿಸಿರುವ ಅಸ್ತಿತ್ವದಬಿಕ್ಕಟ್ಟಿಗೆ ಪ್ರತಿಮೆಯಗಿ, ಪರಿವರ್ತಿಸುತ್ತಾರೆ ; ಅವರ ಪ್ರಶಸ್ತಿವಿಜೇತ ಕಾದಂಬರಿ, "ಪುರುಷೋತ್ತಮ," ದಲ್ಲಿ, ನಾಯಕನ ಸಿದ್ಧಿಯ ಚರಮ-ಕ್ಷಣಗಳೆಂದರೆ, ಅವನ ಹನೇಹಳ್ಳಿಗೆ ಮತ್ತೆ ಜೀವತುಂಬಿ-ತುಳುಕಾಡುವುದೇ ಆಗಿದೆ.

ಅವರು ಏಕೆಬರೆಯುತ್ತಾರೆ, ಎನ್ನುವ ಬಗ್ಗೆ ಕೊಟ್ಟಿರುವ ನಿರೂಪಣೆ ಅನನ್ಯವಾಗಿದೆ. " ಒಟ್ಟಿನಲ್ಲಿ ನಾನು ಬರೆಯುತ್ತಿದ್ದದ್ದು, ನಾನು ನಾನೇ ಆಗಲು. ನಾನು ನಾನಾಗಿಯೇ ಉಳಿದು, ಉಳಿದವರಿಂದ ಬರೆಯಲು ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ, ಜೀವಂತ ಸಂಬಂಧಗಳನ್ನು ಹುಟ್ಟಿಸಲು. ಉಳಿದವರನ್ನು ತಿದ್ದುವುದಕ್ಕಲ್ಲ- ಆ ಯೋಗ್ಯತೆಯಾಗಲೀ ಅಧಿಕಾರವಾಗಲೀ ನನಗಿಲ್ಲ."[೪]

" ಇಂದಿನ ಸಮಾಜದಲ್ಲಿ ನಾವು, ಮನುಷ್ಯರಾಗಿ, ಬಿಚ್ಚಿಕೊಳ್ಳಲು ಆರಿಸಿಕೊಳ್ಳಬಹುದಾದ ಜೀವಂತಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದಾಗಿದೆ. ಮಾತ್ರವಲ್ಲ, ಮನುಷ್ಯ ತನ್ನ ಬದುಕಿನ ನಕಾಶೆಯಲ್ಲಿ ಮೂಡಿಸಿಕೊಳ್ಳಲೇಬೇಕಾದ ಅತ್ಯಂತ ಮೌಲಿಕ ಸಂಗತಿಗಳಲ್ಲಿ, ಕೆಲವು ಸಂಗತಿಗಳು ಸಾಹಿತ್ಯದಿಂದ ಮಾತ್ರ ಒದಗಬಲ್ಲವಂಥವುಗಳು." ಯಶವಂತ ಚಿತ್ತಾಲರನ್ನು ಒಬ್ಬ ಪ್ರಭಾವಿ ಚಿಂತನಶೀಲ ಲೇಖಕನನ್ನಾಗಿ ಮಾಡಿದ್ದು, ಈ ವೈಚಾರಿಕ-ಮೌಲ್ಯಗಳೇ ಅಂದರೆ ತಪ್ಪಲ್ಲ !

ಚಿತ್ತಾಲರ ಕಥೆಗಳು/ಕಾದಂಬರಿಗಳು[ಬದಲಾಯಿಸಿ]

ಕಥಾಸಂಕಲನಗಳು:

 • ಬೊಮ್ಮಿಯ ಹುಲ್ಲು ಹೊರೆ (೧೯೪೯ ರಲ್ಲಿ ಬರೆದ ಅವರ ಮೊತ್ತ ಮೊದಲ ಕಥೆ)
 • ಸಂದರ್ಶನ-ಕಥಾಸಂಕಲನ.
 • ಆಬೋಲಿನ.
 • ಅಟ.
 • ಬೇನ್ಯಾ.
 • ಕಥೆಯಾದಳು ಹುಡುಗಿ.
 • ಕುಮಟೆಗೆ ಬಂದಾ ಕಿಂದರಿಜೋಗಿ.
 • ಓಡಿ ಬಂದಾ ಮುಟ್ಟಿಸಿ ಹೋದಾ.
 • ಐವತ್ತೊಂದು ಕತೆಗಳು.

ಕಾದಂಬರಿಗಳು:

 • ಪುರುಷೋತ್ತಮ.
 • ಛೇದ.
 • ಶಿಕಾರಿ.
 • ಮೂರು ದಾರಿಗಳು.
 • ಕೇಂದ್ರವೃತ್ತಾಂತ.

ವಿಮರ್ಶೆ:

 • ಸಾಹಿತ್ಯ, ಸೃಜನಶೀಲತೆ ಮತ್ತು ನಾನು.
 • ಸಾಹಿತ್ಯದ ಸಪ್ತಧಾತುಗಳು.

ಪ್ರಶಸ್ತಿಗಳು[ಬದಲಾಯಿಸಿ]

 • "ಕಥೆಯಾದಳು ಹುಡುಗಿ" ಎಂಬ ಕೃತಿಗೆ ೧೯೮೩ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
 • "ಶಿಕಾರಿ" ಕಾದಂಬರಿಗೆ ೧೯೭೯ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪ್ರಶಸ್ತಿ ದೊರೆತಿದೆ.
 • ೨೦೦೨ ಸಾಲಿನ 'ನಿರಂಜನ ಪ್ರಶಸ್ತಿ' ದೊರೆತಿದೆ.
 • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,
 • ಮಹಾರಾಷ್ಟ್ರ ಸರ್ಕಾರದ ಸನ್ಮಾನ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳೂ ಲಭಿಸಿವೆ.
 • ಯಶವಂತ ಚಿತ್ತಾಲರ ಸಮಗ್ರ ಲೇಖನಗಳು , ಡಾ. ರಾಘವೇಂದ್ರರಾವ್, ರವರ ನಮಸ್ಕಾರ ಸಾಹಿತ್ಯವಿಮರ್ಶೆ, ಯಲ್ಲಿ ಉಲ್ಲೇಖಿತವಾಗಿದೆ. [೫]ಕನ್ನಡ-ತಾಣದಲ್ಲಿ, ಒಂದೆರಡು ಉದಾಹರಣೆಗಳು ಸೇರಿವೆ.

ನಿಧನ[ಬದಲಾಯಿಸಿ]

೮೬ ವರ್ಷ ಪ್ರಾಯದ, ಶ್ರೀ ಯಶವಂತ ಚಿತ್ತಾಲರು,[೬] ಕಳೆದ ೪೦ ದಿನಗಳಿಂದ ತೀವ್ರವಾಗಿ ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ೨೦೧೪ ರ ೨೨, ಶನಿವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಚಿತ್ತಾಲರು, ಪತ್ನಿ, ಇಬ್ಬರು ಪುತ್ರರು, ಹಾಗೂ ಅಸಂಖ್ಯಾತ ಗೆಳೆಯರು,ಬಂಧು-ಬಾಂಧವರು,ಮತ್ತು ಪ್ರೀತಿಯ ಓದುಗರನ್ನು ಅಗಲಿ ತೆರಳಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು ೨೩, ಆದಿತ್ಯವಾರದಂದು, ಮುಂಬೈನ ಶಿವಾಜಿಪಾರ್ಕ್ ನ, ವಿದ್ಯುತ್ ಚಿತಾಗಾರದಲ್ಲಿ ಅವರ ಹಿರಿಯ ಮಗ, 'ರವೀಂದ್ರ'ನಿಂದ ನೆರೆವೇರಿಸಲ್ಪಟ್ಟಿತು.[೭]

ಉಲ್ಲೇಖಗಳು[ಬದಲಾಯಿಸಿ]

 1. http://www.hindu.com/fr/2008/03/07/stories/2008030751500300.htm
 2. http://www.thehindu.com/todays-paper/tp-national/tp-karnataka/yashwant-chittal-dead/article5821000.ece
 3. http://www.loc.gov/acq/ovop/delhi/salrp/chittal.html
 4. http://timesofindia.indiatimes.com/topic/Yashwant-Vithoba-Chittal/photos/
 5. ನಮಸ್ಕಾರ ಪುಸ್ತಕದಿಂದ
 6. http://www.daijiworld.com/news/news_disp.asp?n_id=224623
 7. http://www.outlookindia.com/article.aspx?281375