ಮೈಕ್ರೊಫೋನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಕ್ರೊಫೋನ್ (ಆಡು ಭಾಷೆಯಲ್ಲಿ ಮಿಕ್ ಅಥವಾ ಮೈಕ್ (ಎರಡೂ 'ಮೈಕ್' ಎಂದು ಉಚ್ಚರಿಸಲ್ಪಡುತ್ತವೆ) ಒಂದು ಧ್ವನಿತರಂಗಗಳಿಂದ-ವಿದ್ಯುತ್ ಸಂಜ್ಞಾಪರಿವರ್ತಕ(ಸಂಜ್ಞಾಪರಿವರ್ತಕ) ಅಥವಾ ಸಂವೇದಕ(ಸೆನ್ಸರ್) ಆಗಿದೆ. ಇದು ಧ್ವನಿಯನ್ನು ವಿದ್ಯುತ್ ಸಂಕೇತವಾಗಿ ಪರಿವರ್ತಿಸುತ್ತದೆ. 1876 ರಲ್ಲಿ, ಎಮಿಲಿ ಬರ್ಲಿನರ್ ಎಂಬುವವರು ಮೊದಲ ಮೈಕ್ರೊಫೋನ್ ಕಂಡುಹಿಡಿದರು. ಅದನ್ನು ಟೆಲಿಫೋನ್ ಧ್ವನಿ ಟ್ರಾನ್ಸ್‌ಮಿಟರ್ ಆಗಿ ಬಳಸಲಾಯಿತು. ಮೈಕ್ರೊಫೋನ್‌ಗಳನ್ನೂ ಅನೇಕ ಉದ್ದೇಶಗಳಿಗಾಗಿ ಬಳಸುತ್ತಾರೆ. ಅವುಗಳೆಂದರೆ, ಟೆಲಿಫೋನ್ ಗಳು, ಟೇಪ್ ರೆಕಾರ್ಡರ್ ಗಳು, ಕರೆಓಕೆ ಸಿಸ್ಟಮ್‌ಗಳಲ್ಲಿ, ಕೇಳುವ ಸಾಧನ ಗಳಲ್ಲಿ, ಚಲನಚಿತ್ರ ನಿರ್ಮಾಣದಲ್ಲಿ,ನೇರ ಮತ್ತು ಧ್ವನಿಮುದ್ರಿತ ಆಡಿಯೋ ಎಂಜಿನಿಯರಿಂಗ್ ನಲ್ಲಿ, FRS ರೇಡಿಯೋಗಳಲ್ಲಿ, ಮೆಗಾಫೋನ್‌ಗಳಲ್ಲಿ, ರೇಡಿಯೋ ಮತ್ತು ಟೆಲಿವಿಷನ್ ಪ್ರಸರಣದಲ್ಲಿ ಮತ್ತು ಕಂಪ್ಯೂಟರ್ ಗಳಲ್ಲಿ ಧ್ವನಿಮುದ್ರಣ ಮಾಡಿಕೊಳ್ಳಲು, ಧ್ವನಿ ಗುರುತಿಸಲು, VoIP, ಮತ್ತು ಅಲ್ಟ್ರಾಸಾನಿಕ್ ಚೆಕಿಂಗ್ ಅಥವಾ ನಾಕ್ ಸೆನ್ಸರ್‌ಗಳಂಥ ಧ್ವನಿ ತರಂಗರಹಿತ ಉದ್ದೇಶಗಳಿಗಾಗಿ.

ನ್ಯೂಮಾನ್ U87 ಕಂಡೆನ್ಸರ್ ಮೈಕ್ರೊಫೋನ್ ಜೊತೆಗೆ ಶಾಕ್ ಮೌಂಟ್

ಇಂದಿನ ದಿನಗಳಲ್ಲಿ, ಅನೇಕ ಮೈಕ್ರೊಫೋನ್‌ಗಳು ಯಾಂತ್ರಿಕ ಕಂಪನದಿಂದ ಒಂದು ವಿದ್ಯುತ್ ವೋಲ್ಟೇಜ್ ಸಂಕೇತವನ್ನು ತಯಾರಿಸಲು ವಿದ್ಯುತ್ ಕಾಂತೀಯ ಚೋದನೆ(ಎಲೆಕ್ಟ್ರೋ ಮ್ಯಾಗ್ನೆಟಿಕ್ ಇಂಡಕ್ಶನ್) (ಡೈನಾಮಿಕ್ ಮೈಕ್ರೊಫೋನ್), ಧಾರಣಶಕ್ತಿಯ ಬದಲಾವಣೆ(ಕೆಪಾಸಿಟನ್ಸ್ ಚೇಂಜ್) (ಕಂಡೆನ್ಸರ್ ಮೈಕ್ರೊಫೋನ್, ಬಲಗಡೆಯ ಚಿತ್ರ), ಪೀಜೋಎಲೆಕ್ಟ್ರಿಕ್ ಜನರೇಶನ್, ಅಥವಾ ಲೈಟ್ ಮಾಡ್ಯುಲೇಶನ್‌ಗಳನ್ನು ಬಳಸುತ್ತವೆ.

ಪ್ರಕಾರಗಳು[ಬದಲಾಯಿಸಿ]

ಒಂದು ಮೈಕ್ರೊಫೋನ್‌ನಲ್ಲಿ ಬರುವ ಸಂವೇದನಶೀಲ ಸಂಜ್ಞಾಪರಿವರ್ತಕ ಭಾಗವನ್ನು ಎಲಿಮೆಂಟ್ ಅಥವಾ ಕೋಶ (ಕ್ಯಾಪ್ಸುಲ್) ಎಂದು ಕರೆಯುತ್ತಾರೆ. ಒಂದು ಪರಿಪೂರ್ಣ ಮೈಕ್ರೊಫೋನ್ ಒಳಗೊಳ್ಳುವ ಅಂಶಗಳೆಂದರೆ, ಹೌಸಿಂಗ್, ಎಲಿಮೆಂಟ್‌ನಿಂದ ಬೇರೆ ಉಪಕರಣಕ್ಕೆ ಸಂಕೇತ ತರುವ ಸಾಧನ ಮತ್ತು ಕ್ಯಾಪ್ಸುಲ್‌ನಿಂದ ಹುಟ್ಟುವ ಹೊರಹೋಗುವ ಸಂಕೇತವನ್ನು ಬಳಸಲಾದ ಉಪಕರಣಕ್ಕೆ ಹೊಂದಿಕೊಳ್ಳುವಂತೆ ಮಾಡಲು ಒಂದು ವಿದ್ಯುನ್ಮಾನ ಸರ್ಕಿಟ್‌ನ ಬಳಕೆ. ಮೈಕ್ರೊಫೋನ್‌ಗಳನ್ನು ಉಲ್ಲೇಖಿಸುವಾಗ, ವಾಹಕ, ಚಾಲಕಶಕ್ತಿ ಮೊದಲಾದ ಸಂಜ್ಞಾಪರಿವರ್ತಕ ಸಿದ್ಧಾಂತಗಳು ಮತ್ತು ಅವುಗಳ ಮುಖ್ಯ ಲಕ್ಷಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೆಲವು ಸಲ ಇತರ ಪ್ರಮುಖ ಭಾಗಗಳಾದ ಕಂಪನಫಲಕ ಗಾತ್ರ,ಉದ್ದೇಶಿತ ಬಳಕೆ ಅಥವಾ ಮೈಕ್ರೊಫೋನ್‌ನಲ್ಲಿರುವ ಪ್ರಧಾನ ಅಕ್ಷ (ಎಂಡ್- ಅಥವಾ ಸೈಡ್-ಅಡ್ರೆಸ್)ಕ್ಕೆ ಪ್ರಧಾನ ಶಬ್ದದ ಒಳಬರುವ ಸಂಕೇತದ ಸ್ಥಾನನಿರ್ಣಯ, ಇವೆಲ್ಲವನ್ನೂ ಮೈಕ್ರೊಫೋನ್ ಕುರಿತು ವಿವರಣೆಗೆ ಬಳಸಲಾಗುತ್ತದೆ.

ಕಂಡೆನ್ಸರ್ ಮೈಕ್ರೊಫೋನ್[ಬದಲಾಯಿಸಿ]

Oktava 319 ಕಂಡೆನ್ಸರ್ ಮೈಕ್ರೊಫೋನ್ ಒಳನೋಟ

ಧಾರಕ ಮೈಕ್ರೊಫೋನ್ ಅಥವಾ ಸ್ಥಾಯಿವಿದ್ಯುತ್ ಮೈಕ್ರೊಫೋನ್ ಎಂದು ಕರೆಯಲಾಗುವ ಕಂಡೆನ್ಸರ್ ಮೈಕ್ರೊಫೋನ್ [೧] ನಲ್ಲಿ ಕಂಪನಫಲಕವು ಧಾರಕ(ಕ್ಯೆಪಾಸಿಟರ್)ದ ಒಂದು ಪ್ಲೇಟ್‌ನಂತೆ ಕೆಲಸಮಾಡುತ್ತದೆ. ಇಲ್ಲಿ ಉಂಟಾಗುವ ಕಂಪನಗಳು ಪ್ಲೇಟ್‌ಗಳ ನಡುವಿನ ಅಂತರದಲ್ಲಿ ಬದಲಾವಣೆಗಳನ್ನುಂಟು ಮಾಡುತ್ತವೆ. ಹೀಗೆ ರಚನೆಯಾದ ಸಂಜ್ಞಾಪರಿವರ್ತಕ‌ದಿಂದ ಧ್ವನಿಮುದ್ರಿತ ಸಂಕೇತ ಪಡೆಯಲು ಎರಡು ವಿಧಾನಗಳಿವೆ: DCವಿದ್ಯುತ್ ಮೂಲ ಮತ್ತು ರೇಡಿಯೋ ಆವರ್ತನ (RF) ಅಥವಾ ಅಧಿಕ ಆವರ್ತನ (HF) ಕಂಡೆನ್ಸರ್ ಮೈಕ್ರೊಫೋನ್‌ಗಳು. DC-ವಿದ್ಯುತ್ ಮೂಲದ ಮೈಕ್ರೊಫೋನ್‌ನಲ್ಲಿ, ಪ್ಲೇಟ್‌ಗಳಿಗೆ ಒಂದು ನಿರ್ದಿಷ್ಟ ವಿದ್ಯುತ್ ಪೂರಣ(Q )ದೊಂದಿಗೆ ವಿದ್ಯುತ್ ಮೂಲ ನೀಡಲಾಗುತ್ತದೆ. ಅಂದರೆ ಧಾರಣ ಸಮೀಕರಣದ (C = Q/V)ಪ್ರಕಾರ, ಕೆಪಾಸಿಟರ್ ಪ್ಲೇಟ್‌ಗಳಲ್ಲಿ ನಿರ್ವಹಿಸಲಾದ ವೋಲ್ಟೇಜ್ ಗಾಳಿಯಲ್ಲಿ ಇರುವ ಕಂಪನಗಳೊಂದಿಗೆ ಬದಲಾಗುತ್ತದೆ. Q = ವಿದ್ಯುತ್ ಪೂರಣಕೂಲಂಬ್‌ ಗಳಲ್ಲಿ, C = ಧಾರಣ ಫಾರಡ್ ಗಳಲ್ಲಿ ಮತ್ತು V = ಪರಿಮಾಣ ವ್ಯತ್ಯಾಸ ವೋಲ್ಟ್‌ಗಳಲ್ಲಿ. ಪ್ಲೇಟ್‌ಗಳ ಧಾರಣ(ಕ್ಯಪಾಸಿಟೆನ್ಸ್)ವು ಒಂದು ಸಮಾನಾಂತರ ಪ್ಲೇಟ್ ಕೆಪಾಸಿಟರ್‌ಗಾಗಿ ಅವುಗಳ ನಡುವೆ ಇರುವ ಅಂತರಕ್ಕೆ ವಿಲೋಮಾನುಪಾತ(ಇನ್‌ವರ್ಸ್‌ಲಿ ಪ್ರೊಪೋರ್ಶನಲ್) ದಲ್ಲಿರುತ್ತದೆ. (ಹೆಚ್ಚಿನ ಮಾಹಿತಿಗಾಗಿ ಕಪಾಸಿಟನ್ಸ್ ಓದಿರಿ.) ತೆಗೆಯಲು ಬಾರದ ಮತ್ತು ತೆಗೆಯಲು ಬರುವ ಪ್ಲೇಟ್ ಗಳ ಜೋಡಣೆಯನ್ನು "ಎಲಿಮೆಂಟ್" ಅಥವಾ "ಕ್ಯಾಪ್ಸುಲ್" ಎಂದು ಕರೆಯುತ್ತಾರೆ.

ಕೆಪಾಸಿಟರ್ ಮೇಲೆ ಒಂದೇ ತೆರನಾದ ವಿದ್ಯುತ್‌ಪೂರಣವನ್ನು ಕಾಯ್ದುಕೊಳ್ಳಲಾಗುತ್ತದೆ. ಧಾರಣದಲ್ಲಿ ಬದಲಾವಣೆಯಾದಾಗ ಕೆಪಾಸಿಟರ್‌ನ ವಿದ್ಯುತ್ ಪೂರಣದಲ್ಲಿ ಸ್ವಲ್ಪ ಪ್ರಮಾಣದ ಬದಲಾವಣೆಯಾಗುತ್ತದೆ. ಆದರೆ, ಸ್ಪಷ್ಟವಾಗಿ ಕೇಳಿ ಬರುವ ಆವರ್ತನಗಳಲ್ಲಿ ಅದು ಸ್ಥಿರವಾಗಿ ಉಳಿಯುತ್ತದೆ. ಕ್ಯಾಪ್ಸುಲ್‌ನ ಧಾರಣವು (ಸುಮಾರು 5-100 pF) ಮತ್ತು ವಿದ್ಯುತ್ ಮೂಲ ರಿಸಿಸ್ಟರ್‌ನ ಮೌಲ್ಯವು (100 ಮೆಗೋಮ್ ಗಳಿಂದ ಹತ್ತಾರು ಗೆಗೋಮ್ ಗಳವರೆಗೆ)ಗಳು ಸೇರಿ ಒಂದು ಫಿಲ್ಟರ್‌(ಮಂಡಲ)ನ್ನು ರಚಿಸುತ್ತವೆ. ಈ ಫಿಲ್ಟರ್, ಆಡಿಯೋ ಸಂಕೇತಕ್ಕಾಗಿ ಹೈ ಪಾಸ್ ಮತ್ತು ವಿದ್ಯುತ್ ಮೂಲ ವೋಲ್ಟೇಟ್‌ಗಾಗಿ ಲೋಪಾಸ್ ಆಗಿರುತ್ತದೆ. ಒಂದು RC ಸರ್ಕಿಟ್ ನ ಟೈಮ್ ಕಾನ್ಸ್ಟಂಟ್ (ವೋಲ್ಟಜ್ ನ್ನು ಪೂರೈಸಲು ತೆಗೆದುಕೊಳ್ಳುವ ಸಮಯ)ವು ಪ್ರತಿರೋಧ ಮತ್ತು ಧಾರಣಗಳ ಗುಣಲಬ್ಧಕ್ಕೆ ಸಮಾನವಾಗಿರುತ್ತದೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ.

ಧಾರಣದ ಬದಲಾವಣೆಯ ಕಾಲಮಿತಿಯೊಳಗೆ (20 Hz ಗಳಿಗೆ 50ms ದಷ್ಟು ಆಡಿಯೊಸಂಕೇತ)ವಿದ್ಯುತ್ ಪೂರಣವು ಪ್ರಾಯೋಗಿಕವಾಗಿ ಸ್ಥಿರವಾಗಿರುತ್ತದೆ ಮತ್ತು ಧಾರಣದ ಬದಲಾವಣೆ ಬಿಂಬಿಸಲು ಕೆಪಾಸಿಟರ್(ಧಾರಕ)ಉದ್ದಕ್ಕೂ ವೋಲ್ಟೇಜ್ ಬದಲಾವಣೆಯಾಗುತ್ತದೆ. ಕೆಪಾಸಿಟರ್‌ ನಲ್ಲಿರುವ ವೋಲ್ಟೇಜ್ ವಿದ್ಯುತ್ ಮೂಲ ವೋಲ್ಟೇಜ್ ನ ಮೇಲ್ಭಾಗ ಮತ್ತು ಕೆಳಭಾಗಗಳಲ್ಲಿ ಬೇರೆ ಬೇರೆಯಾಗಿರುತ್ತದೆ. ವಿದ್ಯುತ್‌ಮೂಲ ಮತ್ತು ಕೆಪಾಸಿಟರ್ ನಡುವಿನ ವೋಲ್ಟೇಜ್ ವ್ಯತ್ಯಾಸವನ್ನು ಸಿರೀಸ್ ರೆಸಿಸ್ಟರ್‌ನಲ್ಲಿ ನೋಡಬಹುದು. ನಿರ್ವಹಣೆ ಅಥವಾ ಧ್ವನಿಮುದ್ರಣಕ್ಕಾಗಿ ರಿಸಿಸ್ಟರ್‌ನಲ್ಲಿನ ವೋಲ್ಟೇಜ್‌ನ್ನು ವರ್ಧಿಸಲಾಗುತ್ತದೆ.

AKG C451B ಸಣ್ಣ ಧ್ವನಿಫಲಕ ಕಂಡೆನ್ಸರ್ ಮೈಕ್ರೊಫೋನ್

RF ಕಂಡೆನ್ಸರ್ ಮೈಕ್ರೊಫೋನ್‌ಗಳು ಕಡಿಮೆ ಶಬ್ದ ಮಾಡುವ ಆಂದೋಲಕ(ಆಸಿಲೇಟರ್)ದಿಂದ ಉತ್ಪನ್ನವಾಗುವ ಕಡಿಮೆ ಪ್ರಮಾಣದ RF ವೋಲ್ಟೇಜ್ ನ್ನು ಬಳಸುತ್ತವೆ. ಕ್ಯಾಪ್ಸುಲ್ ಧ್ವನಿಫಲಕದಲ್ಲಿ ಚಲನೆ ಉಂಟು ಮಾಡುವ ಧ್ವನಿ ತರಂಗಗಳಿಂದ ಆಗುವ ಧಾರಣ ಬದಲಾವಣೆಗಳಿಂದಾಗಿ ಆಸಿಲೇಟರ್‌ನ ಸಂಕೇತಗಳು ಹೆಚ್ಚಾಗುತ್ತವೆ, ಅಥವಾ ಕ್ಯಾಪ್ಸುಲ್, ಆಸಿಲೇಟರ್ ಸಂಕೇತದ ಆವರ್ತನಗಳಲ್ಲಿ ಬದಲಾವಣೆ ತರುವ ರೆಸೋನಂಟ್ ಸರ್ಕಿಟ್ ನ ಭಾಗವಾಗಿರಬಹುದು. ಡಿಮಾಡ್ಯುಲೇಶನ್(ರವಾನೆ ತರಂಗದಿಂದ ಸಂಕೇತ ಗ್ರಹಿಸುವುದು) ಅತ್ಯಂತ ಕಡಿಮೆ ಮೂಲದ ವಿದ್ಯುತ್‌ಪ್ರವಾಹ ಪ್ರತಿರೋಧ(ಇಂಪೀಡೆನ್ಸ್) ಹೊಂದಿರುವ ಕಡಿಮೆ ಶಬ್ದ ಮಾಡುವ ಆಡಿಯೋ ಆವರ್ತನ ಸಂಕೇತ ಹುಟ್ಟಿಸುತ್ತದೆ. ಹೆಚ್ಚು ಪ್ರಮಾಣದ ಬಿಯಸ್ ವೋಲ್ಟೇಜ್ ಇಲ್ಲದಿದ್ದರೆ ಧ್ವನಿಫಲಕವನ್ನು ಕಡಿಮೆ ಒತ್ತಡದೊಂದಿಗೆ ಬಳಸಲು ಸಾಧ್ಯವಾಗುತ್ತದೆ. ಇದರಿಂದ ಹೆಚ್ಚಿನ ಅನುಸರಣೆಯೊಂದಿಗೆ ವ್ಯಾಪಕ ಆವರ್ತನ(ಫ್ರೀಕ್ವೆನ್ಸಿ)ಪ್ರತಿಕ್ರಿಯೆ ಸಾಧಿಸಲು ಬಳಸಬಹುದು. RF ಬಿಯಸಿಂಗ್ ಪ್ರಕ್ರಿಯೆಯು ಕಡಿಮೆ ವಿದ್ಯುತ್‌ಪ್ರವಾಹ ಪ್ರತಿರೋಧ ಕ್ಯಾಪ್ಸುಲ್ ಆಗಿ ಪರಿಣಮಿಸುತ್ತದೆ. ಇದು ಉಪಯುಕ್ತ ಉಪಉತ್ಪನ್ನವಾಗಿದ್ದು, ಏಕೆಂದರೆ, ತೇವಾಂಶ ಹೊಂದಿದ ವಾತಾವರಣದಲ್ಲಿ RF ಕಂಡೆನ್ಸರ್ ಮೈಕ್ರೊಫೋನ್‌ಗಳು ಕಾರ್ಯನಿರ್ವಹಿಸಬಹುದು. ಆದರೆ DC-ಬಿಯಾಸ್ಡ್ ಮೈಕ್ರೊಫೋನ್‌ಗಳಲ್ಲಿ ನಿರೋಧಕ ಮೇಲ್ಮೈಗಳು ಕಲುಷಿತವಾಗಿ ಸಮಸ್ಯೆಗಳನ್ನು ಸೃಷ್ಟಿಸಬಹುದು. ಸೆನ್‌ಹೈಸರ್"MKH" ಕಂಪನಿಯ ಮೈಕ್ರೊಫೋನ್‌ಗಳಲ್ಲಿ RF ಬಿಯಸಿಂಗ್ ವಿಧಾನವನ್ನು ಬಳಸಲಾಗುತ್ತದೆ.

ಕಂಡೆನ್ಸರ್ ಮೈಕ್ರೊಫೋನ್‌ಗಳು ದುಬಾರಿಯಲ್ಲದ ಕರಓಕ್ ಮೈಕ್ರೋಫೋನ್‌ಗಳ ಮೂಲಕ ಟೆಲಿಫೋನ್ ಟ್ರಾನ್ಸ್‌ಮಿಟರ್(ಸಂವಾಹಕ)ನಿಂದ ಹಿಡಿದು ಅತ್ಯುತ್ತಮ ನಿಖರತೆ ಹೊಂದಿರುವ ರೆಕಾರ್ಡಿಂಗ್ ಮೈಕ್ರೊಫೋನ್‌ಗಳಲ್ಲಿ ದೊರೆಯುತ್ತವೆ. ಇವುಗಳು ಶ್ರೇಷ್ಠ ಮಟ್ಟದ ಆಡಿಯೋ ಸಂಕೇತವನ್ನು ಸೃಷ್ಟಿಸುತ್ತವೆ. ಇಂದು, ಪ್ರಯೋಗಶಾಲೆಗಳಲ್ಲಿ ಮತ್ತು ಧ್ವನಿಮುದ್ರಿತ ಸ್ಟುಡಿಯೋಗಳಲ್ಲಿ ಈ ಮೈಕ್ರೊಫೋನ್‌ಗಳೇ ಹೆಚ್ಚಾಗಿ ಬಳಸಲ್ಪಡುತ್ತವೆ. ಈ ತಂತ್ರಜ್ಞಾನದ ಅಂತರ್ಗತ ಯುಕ್ತತೆಯು ಧ್ವನಿ ತರಂಗದಿಂದ ಚಲಿಸುವ ಅತೀ ಸಣ್ಣ ರಾಶಿಯಿಂದ ಉಂಟಾಗಿದೆ.ಇದಕ್ಕೆ ಭಿನ್ನವಾಗಿ ಇತರ ಮೈಕ್ರೋಫೋನ್ ವಿಧಗಳಲ್ಲಿ ಧ್ವನಿ ತರಂಗಗಳು ಇನ್ನೂ ಹೆಚ್ಚು ಕಾರ್ಯನಿರ್ವಹಿಸಬೇಕಾಗುತ್ತದೆ. ಇವುಗಳಿಗೆ ಫ್ಯಾಂಟಮ್ ಪವರ್ ಗಳಂತಹ ಮೈಕ್ರೊಫೋನ್ ಉತ್ಪಾದನೆಗಳಿಂದ ಅಥವಾ ಒಂದು ಸಣ್ಣ ಬ್ಯಾಟರಿಯಿಂದ ಪೂರೈಸಲಾಗುವ ವಿದ್ಯುತ್ ಮೂಲ ಬೇಕಾಗುತ್ತದೆ. ಕೆಪಾಸಿಟರ್ ಪ್ಲೇಟ್ ವೋಲ್ಟೇಜ್ ನ್ನು ಸ್ಥಾಪಿಸಲು ವಿದ್ಯುತ್ ಅವಶ್ಯಕತೆ ಇದೆ. ಮೈಕ್ರೊಫೋನ್ ಎಲೆಕ್ಟ್ರಾನಿಕ್ಸ್ ನ್ನು ಪ್ರಾರಂಭಿಸಲೂ ಸಹ ವಿದ್ಯುತ್ ಬೇಕು (ಎಲೆಕ್ರ್ಟೇಟ್ ಮತ್ತು DC-ಪೋಲರೈಸ್ ಮೈಕ್ರೊಫೋನ್‌ಗಳಲ್ಲಿ ವಿದ್ಯುತ್‌ಪ್ರವಾಹ ಪ್ರತಿರೋಧ ಪರಿವರ್ತನೆ , RF/HF ಮೈಕ್ರೊಫೋನ್‌ಗಳಲ್ಲಿ ಡಿಮಾಡ್ಯುಲೀಕರಣ ಅಥವಾ ಗುರುತಿಸುವಿಕೆ). ಕಂಡೆನ್ಸರ್ ಮೈಕ್ರೊಫೋನ್‌ಗಳೂ ಕೂಡ ಎರಡು ಧ್ವನಿಫಲಕಗಳೊಂದಿಗೆ ಲಭ್ಯವಿವೆ. ಇವುಗಳಿಂದ ಹೊರ ಸೂಸುವ ಸಂಕೇತಗಳನ್ನು ವಿದ್ಯುತ್‌ನಿಂದ ಜೋಡಿಸಿ ವಿವಿಧ ಪೋಲರ್ ವಿನ್ಯಾಸಗಳಾದ (ಕೆಳಗಡೆ ನೋಡಿ)ಕಾರ್ಡಿಯೋಯ್ಡ್, ಆಮ್ನಿಡೈರಕ್ಷನಲ್ ಮತ್ತು ಫಿಗರ್‌ಏಟ್‌ಗಳನ್ನು ಕೊಡಬಹುದಾಗಿದೆ. ಕೆಲವು ಮೈಕ್ರೊಫೋನ್‌ಗಳಲ್ಲಿ ಈ ವಿನ್ಯಾಸವನ್ನು ಬದಲಾಯಿಸುವುದು ಸಾಧ್ಯವಿದೆ. ಉದಾಹರಣೆಗಾಗಿ, Røde NT2000 ಅಥವಾ CAD M179.

ಎಲೆಕ್ರ್ಟೆಟ್ ಕಂಡೆನ್ಸರ್ ಮೈಕ್ರೊಫೋನ್[ಬದಲಾಯಿಸಿ]

G. M. ಸೆಸ್ಲರ್ ಮತ್ತಿತರರಿಂದ ಫಾಯಿಲ್ ಎಲೆಕ್ಟ್ರೆಟ್ ಮೈಕ್ರೊಫೋನ್ ಗೆ ಪ್ರಥಮ ಪೇಟೆಂಟ್ (ಪುಟಗಳು 1 ರಿಂದ 3)

ಎಲೆಕ್ರ್ಟೆಟ್ ಮೈಕ್ರೊಫೋನ್ ಒಂದು ಹೊಸ ಪ್ರಕಾರದ ಧಾರಕ ಮೈಕ್ರೊಫೋನ್ ಆಗಿದೆ. ಇದನ್ನು 1962 ರಲ್ಲಿ ಗೆರ್ಹಾರ್ಡ್ ಸೆಸ್ಲರ್ ಮತ್ತು ಜಿಮ್ ವೆಸ್ಟ್ ಎಂಬುವರು ಬೆಲ್ ಲ್ಯಾಬರೆಟರೀಸ್ ನಲ್ಲಿ ಸಂಶೋಧಿಸಿದರು.[೨] ಕಂಡೆನ್ಸರ್ ಮೈಕ್ರೋಫೋನ್‌ಗಳಲ್ಲಿ ಬಾಹ್ಯವಾಗಿ ಅಳವಡಿಸಲಾದ ವಿದ್ಯುತ್‌ಪೂರಣವನ್ನು ತೆಗೆದು ಎಲೆಕ್ಟ್ರೆಟ್ ಸಲಕರಣೆಯಲ್ಲಿ ಬರುವ ಶಾಶ್ವತ ವಿದ್ಯುತ್‌ಪೂರಣದೊಂದಿಗೆ ಬದಲಾಯಿಸಲಾಗುವುದು. ಇಲೆಕ್ಟ್ರೆಟ್ ಒಂದು ಫೆರೊವಿದ್ಯುತ್ ವಸ್ತುವಾಗಿದ್ದು, ಶಾಶ್ವತವಾಗಿ ವಿದ್ಯುತ್ ಪೂರಣ ಅಥವಾ ಧ್ರುವೀಯತೆ ನೀಡಲಾಗಿದೆ. electr ostatic ಮತ್ತು magnet ಗಳಿಂದ ಆ ಹೆಸರು ಬಂದಿದೆ. ಯಾವ ರೀತಿಯಾಗಿ ಕಬ್ಬಿಣದ ತುಂಡಿನಲ್ಲಿರುವ ಆಯಸ್ಕಾಂತೀಯ ಕಣಗಳ ಜೋಡಣೆಯಿಂದ ಆಯಸ್ಕಾಂತವನ್ನು ತಯಾರಿಸಲಾಗುತ್ತದೆಯೋ, ಅದೇ ರೀತಿ ಎಲೆಕ್ಟ್ರೆಟ್‌ನಲ್ಲಿ ಸ್ಥಾಯಿ ವಿದ್ಯುತ್ ಪೂರಣಗಳನ್ನು ವಸ್ತುವಿನ ಸ್ಥಾಯಿ ವಿದ್ಯುತ್‌ಪೂರಣಗಳ ಸಂಯೋಜನೆಯಿಂದ ಅಳವಡಿಸಲಾಗುತ್ತದೆ.

ಉತ್ಪಾದಿಸಲು ಸುಲಭ, ಉತ್ತಮ ಕಾರ್ಯನಿರ್ವಣೆ ಮತ್ತು ಕಡಿಮೆ ಬೆಲೆ ಈ ಎಲ್ಲ ಲಕ್ಷಣಗಳನ್ನು ಹೊಂದಿರುವುದರಿಂದ, ಇಂದು ಉತ್ಪಾದಿಸಲಾಗುತ್ತಿರುವ ಹೆಚ್ಚು ಮೈಕ್ರೊಫೋನ್‌ಗಳು ಎಲೆಕ್ಟ್ರೆಟ್ ಮೈಕ್ರೊಫೋನ್‌ಗಳಾಗಿವೆ. ಒಬ್ಬ ಸೆಮಿಕಂಡಕ್ಟರ್ ಉತ್ಪಾದಕ[೩] ನ ಅಂದಾಜಿನ ಪ್ರಕಾರ, ಪ್ರತಿ ವರ್ಷ ಒಂದು ಶತಕೋಟಿಗಳಿಗಿಂತ ಹೆಚ್ಚು ಯುನಿಟ್‌ಗಳಲ್ಲಿ ಇವುಗಳನ್ನು ತಯಾರಿಸಲಾಗುತ್ತವೆ. ಇಂದು ನಾವು ನೋಡುವ ಎಲ್ಲ ಸೆಲ್ ಫೋನ್, ಕಂಪ್ಯೂಟರ್, PDA ಮತ್ತು ಹೆಡ್ ಸೆಟ್ ಮೈಕ್ರೊಫೋನ್‌ಗಳು ಎಲೆಕ್ಟ್ರೆಟ್ ಪ್ರಕಾರದ್ದಾಗಿವೆ. ಅತ್ಯುತ್ತಮ ಗುಣಮಟ್ಟದ ರೆಕಾರ್ಡಿಂಗ್ ಮತ್ತು ಚಿಕ್ಕ ಸೌಂಡ್ ರೆಕಾರ್ಡಿಂಗ್ ಸಾಧನಗಳು ಮತ್ತು ಟೆಲಿಫೋನ್‌ಗಳಲ್ಲಿ ಅಳವಡಿಸಲಾಗುವ ಬಿಲ್ಟ್-ಇನ್ ಮೈಕ್ರೊಫೋನ್‌ ಲ್ಯಾವೆಲಿಯರ್‌ಗಳಲ್ಲಿ ಬಳಸಲಾಗುತ್ತದೆ. ಮೊದಲೆಲ್ಲ, ಎಲೆಕ್ಟ್ರೆಟ್ ಮೈಕ್ರೊಫೋನ್‌ಗಳ ಗುಣಮಟ್ಟ ಕಳಪೆ ಎಂದು ಪರಿಗಣಿಸಲಾಗಿತ್ತು. ಆದರೆ, ಇಂದು ತಯಾರಿಸಲಾಗುವ ಅನೇಕ ಎಲೆಕ್ಟ್ರೆಟ್ ಮೈಕ್ರೊಫೋನ್‌ಗಳು ಸಾಂಪ್ರದಾಯಿಕ ಕಂಡೆನ್ಸರ್ ಮೈಕ್ರೊಫೋನ್‌ಗಳಿಗಿಂತ ಎಲ್ಲ ರೀತಿಯಲ್ಲೂ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತವೆ. ಅಷ್ಟೇ ಅಲ್ಲದೆ, ಮಾಪನ ಮೈಕ್ರೋಫೋನ್‌ಗೆ ಅಗತ್ಯವಾದ ಸುದೀರ್ಘ ಕಾಲದ ಸ್ಥಿರತೆ ಮತ್ತು ಪ್ರತಿಕ್ರಿಯೆ ನೀಡುವುದು ಸಾಧ್ಯ. ಇತರ ಕೆಪಾಸಿಟರ್ ಮೈಕ್ರೊಫೋನ್‌ಗಳಲ್ಲಿ ಬೇಕಾಗುವಂತೆ, ಇವುಗಳಿಗೆ ಧ್ರುವೀಕರಿಸಿದ ವೋಲ್ಟೇಜ್ ಬೇಕಾಗುವುದಿಲ್ಲ. ಆದರೆ ಇವುಗಳು ವಿದ್ಯುತ್ ಅಗತ್ಯವಾಗಿರುವ ಪ್ರಿಅಂಪ್ಲಿಫೈರ್ ನ್ನು ಒಳಗೊಂಡಿರುತ್ತವೆ (ಧ್ರುವೀಕರಿಸಿದ ಶಕ್ತಿ ಅಥವಾ ಬಿಯಸ್ ಎಂದು ಅನೇಕ ಬಾರಿ ತಪ್ಪಾಗಿ ಕರೆಯಲಾಗುತ್ತದೆ). ಈ ಪ್ರಿಅಂಪ್ಲಿಫೈರ್ ನ್ನು ಸೌಂಡ್ ರೀಇನ್ಫೋರ್ಸ್ ಮೆಂಟ್ (ಅನೇಕ ಕಾರ್ಯಕ್ರಮಗಳಲ್ಲಿ, ಮಾತನಾಡುವವರ ಧ್ವನಿಯನ್ನು ಹೆಚ್ಚಿಸಿ ದೂರದಲ್ಲಿರುವ ಪ್ರೇಕ್ಷಕರಿಗೂ ಕೇಳಿಸುವಂತೆ ಮಾಡುವ ವಿಧಾನ)ಮತ್ತು ಸ್ಟುಡಿಯೋ ಗಳಲ್ಲಿ ಪ್ರಿಅಂಪ್ಲಿಫೈರ್‌ನ್ನು ಫ್ಯಾಂಟಮ್ ಪವರ್ ನಿಂದ ನಡೆಸಲಾಗುತ್ತದೆ. ಪರ್ಸನಲ್ ಕಂಪ್ಯೂಟರ್‌ಗಳ(PC) ಬಳಕೆಗೆ ತಯಾರಿಸಲಾದ ಮೈಕ್ರೊಫೋನ್‌ಗಳನ್ನು ಕೆಲವು ಸಲ ಮಲ್ಟಿಮೀಡಿಯಾ ಮೈಕ್ರೊಫೋನ್ ಎಂದು ಕರೆಯಲಾಗುತ್ತದೆ. ಈ ಮೈಕ್ರೊಫೋನ್‌ಗಳು ಸ್ಟೀರಿಯೋ 3.5 mm ಪ್ಲಗ್ ರಿಂಗ್‍ನೊಂದಿಗೆ(ಮೋನೋ ಸೋರ್ಸ್ ಹೊಂದಿರುವ)ಬಳಸುತ್ತವೆ. ರೆಸಿಸ್ಟರ್ ಮೂಲಕ ಕಂಪ್ಯೂಟರ್ ನಲ್ಲಿರುವ 5 V ನಿಂದ ಈ ಪ್ಲಗ್‌ಗೆ ವಿದ್ಯುತ್ ಪೂರೈಕೆಯಾಗುತ್ತದೆ. ಆದರೆ , ಹೊಂದಾಣಿಕೆಯಾಗದ ಅನೇಕ ಡೈನಾಮಿಕ್ ಮೈಕ್ರೊಫೋನ್‌ಗಳಲ್ಲಿಯೂ ಸಹ ಈ 3.5 mm ಪ್ಲಗ್ ಗಳನ್ನು ಅಳವಡಿಸಲಾಗಿರುತ್ತದೆ. ಕೆಲವು ಎಲೆಕ್ಟ್ರೆಟ್ ಮೈಕ್ರೊಫೋನ್‌ಗಳು ಒಳ್ಳೆಯ DC-ಪೋಲರೈಸ್ ಮಾಡಿದ ಯುನಿಟ್ ಗಳನ್ನು ನಾಯಿಸ್ ಲೆವೆಲ್ (ಅತಿಯಾದ ಶಬ್ದದ ಹಂತ) ವಿಷಯದಲ್ಲಿ ಮೀರಿಸುತ್ತವೆ. ಈ ರೀತಿ ಆಗಲು ಕಾರಣ ಎಲೆಕ್ಟ್ರೆಟ್ ಇರುವ ಅಂತರ್ಗತ ಮಿತಿಗಳಲ್ಲ. ಆದರೆ, ಮೈಕ್ರೊಫೋನ್‌ಗಳನ್ನು ಕಡಿಮೆ ಖರ್ಚಿನಲ್ಲಿ ತಯಾರಿಸಲು ಬಳಸುವ ದೊಡ್ಡ ಪ್ರಮಾಣದ ಉತ್ಪಾದನಾ ವಿಧಾನಗಳಿಂದಾಗಿ ನಿಖರತೆ ಅಗತ್ಯವಿರುವ ಉತ್ತಮ ಮಟ್ಟದ ಮೈಕ್ರೊಫೋನ್‌ಗಳ ಉತ್ಪಾದನೆ ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ, ಆಂತರಿಕ ಆಯಾಮಗಳಲ್ಲಿ ಬಿಗಿಯಾದ ಸಹನೀಯತೆ(ತಡೆಯುವ ಸಾಮರ್ಥ್ಯ) ಅಗತ್ಯವಿರುತ್ತದೆ. DC, RF ಅಥವಾ ಎಲೆಕ್ಟ್ರೆಟ್, ಯಾವ ತಂತ್ರಜ್ಞಾನವನ್ನು ಬಳಸಿದರೂ, ಈ ತಡೆಯುವ ಸಾಮರ್ಥ್ಯಗಳು ಅಥವಾ ಟಾಲರನ್ಸ್ ಗಳು ಎಲ್ಲ ಕಂಡೆನ್ಸರ್ ಮೈಕ್ರೊಫೋನ್‌ಗಳಲ್ಲಿ ಒಂದೇ ತೆರನಾಗಿರುತ್ತವೆ.

ಡೈನಾಮಿಕ್ ಮೈಕ್ರೊಫೋನ್[ಬದಲಾಯಿಸಿ]

ಪ್ಯಾಟಿ ಸ್ಮಿತ್ ಶ್ಯೂರ್ SM58 (ಡೈನಾಮಿಕ್ ಕಾರ್ಡಿಆಯಿಡ್ ಪ್ರಕಾರ)ಮೈಕ್ರೊಫೋನ್ ನಲ್ಲಿ ಹಾಡುತ್ತಿರುವುದು

ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಡಕ್ಶನ್ ಮುಖಾಂತರವಾಗಿ ಡೈನಾಮಿಕ್ ಮೈಕ್ರೊಫೋನ್‌ಗಳು ಕೆಲಸ ಮಾಡುತ್ತವೆ. ಈ ಮೈಕ್ರೊಫೋನ್‌ಗಳು ಗಟ್ಟಿಯಾಗಿದ್ದು, ಕಡಿಮೆ ಬೆಲೆ ಮತ್ತು ತೇವಾಂಶ ನಿರೋಧಕ ಸಾಮರ್ಥ್ಯ ಹೊಂದಿರುತ್ತವೆ. ಇಷ್ಟೇ ಅಲ್ಲದೆ, ತಮ್ಮ ಸಾಮರ್ಥ್ಯ ದಿಂದ ಹೆಚ್ಚು ನಿಖರತೆಯನ್ನು ನೀಡುವುದರಿಂದ, ವೇದಿಕೆಗಳ ಮೇಲೆ ಬಳಸಲು ಇವು ಯೋಗ್ಯವಾಗಿವೆ.

ಮೂವಿಂಗ್-ಕಾಯಿಲ್ ಮೈಕ್ರೊಫೋನ್‌ಗಳು ಧ್ವನಿವರ್ಧಕದಲ್ಲಿ ಬಳಸಲಾಗುವ ಚಲನೆ ಸಿದ್ಧಾಂತವನ್ನೇ ತದ್ವಿರುದ್ಧ ರೀತಿಯಲ್ಲಿ ಬಳಸುತ್ತವೆ. ಶಾಶ್ವತ ಆಯಸ್ಕಾಂತ (ಪರ್ಮನೆಂಟ್ ಮ್ಯಾಗ್ನೆಟ್)ದ ಆಯಸ್ಕಾಂತೀಯ ಕ್ಷೇತ್ರ ದಲ್ಲಿ ಇರಿಸಲಾದ, ಚಲಿಸಬಹುದಾದ ಒಂದು ಸಣ್ಣ ಇಂಡಕ್ಶನ್ ಸುರುಳಿಯನ್ನು ಧ್ವನಿಫಲಕ ಕ್ಕೆ ಜೋಡಿಸಲಾಗಿರುತ್ತದೆ. ಮೈಕ್ರೊಫೋನ್ ನ ವಿಂಡ್ ಸ್ಕ್ರೀನ್ ಮೂಲಕ ಧ್ವನಿ ಪ್ರವೇಶಿಸಿದಾಗ, ಧ್ವನಿ ತರಂಗದಿಂದಾಗಿ ಧ್ವನಿಫಲಕ ಚಲಿಸುತ್ತದೆ. ಧ್ವನಿಫಲಕ ಕಂಪಿಸಿದಾಗ,ಸುರುಳಿಯು ಆಯಸ್ಕಾಂತೀಯ ಕ್ಷೇತ್ರದಲ್ಲಿ ಚಲಿಸುತ್ತದೆ. ಇದರಿಂದಾಗಿ, ವಿದ್ಯುತ್ಕಾಂತೀಯ ಚೋದನೆ(ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಡಕ್ಷನ್) ಮುಖಾಂತರ ಸುರುಳಿಯಲ್ಲಿ ವಿಭಿನ್ನವಾದ ಕರೆಂಟ್ ಉತ್ಪನ್ನವಾಗುತ್ತದೆ. ಒಂದು ಡೈನಾಮಿಕ್ ಪಟ್ಟಿ(ಮೆಂಬ್ರೇನ್)ಯು ಎಲ್ಲ ಆಡಿಯೋ ಆವರ್ತನಗಳಿಗೆ ಒಂದೇ ಸಮನಾದ ಪ್ರತಿಕ್ರಿಯೆ ನೀಡುವುದಿಲ್ಲ. ಈ ಕಾರಣಕ್ಕಾಗಿ, ಕೆಲವು ಮೈಕ್ರೊಫೋನ್‌ಗಳು ಬಹು ಪಟ್ಟಿಗಳನ್ನು (ಮಲ್ಟಿಪಲ್ ಮೆಂಬ್ರೆನ್ಸ್) ಉಪಯೋಗಿಸುತ್ತವೆ. ಈ ಮಲ್ಟಿಪಲ್ ಮೆಂಬ್ರೇನ್ ಗಳು ಆಡಿಯೋ ಸ್ಪೆಕ್ಟ್ರಮ್ ನ ಬೇರೆ ಬೇರೆ ಭಾಗಗಳಿಗಾಗಿ ಬಳಸಲಾಗುತ್ತವೆ. ನಂತರ, ದೊರೆಯುವ ಸಂಕೇತ (ಸಿಗ್ನಲ್)ಗಳನ್ನು ಒಟ್ಟಾಗಿ ಸೇರಿಸಲಾಗುತ್ತದೆ. ವಿವಿಧ ಸಂಕೇತಗಳನ್ನು ಸರಿಯಾಗಿ ಜೋಡಿಸುವುದು ಕಠಿಣವಾದ ಕೆಲಸ. ಈ ರೀತಿಯ ಜೋಡಣೆ ಮಾಡುವ ವಿನ್ಯಾಸಗಳು ವಿರಳ ಮತ್ತು ತುಂಬಾ ದುಬಾರಿ. ಅನೇಕ ವಿನ್ಯಾಸಗಳು ನಿರ್ದಿಷ್ಟವಾಗಿ ಆಡಿಯೋ ಸ್ಪೆಕ್ಟ್ರಮ್‌ನ ಬಿಡಿಯಾದ ಭಾಗಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತವೆ. AKG D 112 ಅನ್ನು ಟ್ರೆಬಲ್ ಗಿಂತ ಬೇಸ್ (bass) ಪ್ರತಿಕ್ರಿಯೆಗಾಗಿ ತಯಾರಿಸಲಾಗಿದೆ.[೪] ಆಡಿಯೋ ಇಂಜಿನಿಯರಿಂಗ್ ನಲ್ಲಿ ಅತ್ಯುತ್ತಮ ಪರಿಣಾಮ ಪಡೆಯಲು ಒಂದೇ ಸಮಯಕ್ಕೆ ಅನೇಕ ಪ್ರಕಾರದ ಮೈಕ್ರೊಫೋನ್‌ಗಳನ್ನು ಬಳಸುತ್ತಾರೆ.

ರಿಬನ್ ಮೈಕ್ರೊಫೋನ್ ಬಳಸುತ್ತಿರುವ ಎಡ್ಮಂಡ್ ಲೋವೆ

ರಿಬನ್ ಮೈಕ್ರೊಫೋನ್[ಬದಲಾಯಿಸಿ]

ರಿಬನ್ ಮೈಕ್ರೊಫೋನ್‌ಗಳು ಆಯಸ್ಕಾಂತ ಕ್ಷೇತ್ರದಲ್ಲಿ ಬಂಧಿತವಾಗಿರುವ ಒಂದು ತೆಳುವಾದ, ಸುಕ್ಕುಗಳಾಗಿರುವ ಮೆಟಲ್ ರಿಬನ್ ನ್ನು ಬಳಸುತ್ತವೆ. ಆ ರಿಬನ್‌ನ್ನು ವಿದ್ಯುತ್ ಸಹಾಯದಿಂದ ಮೈಕ್ರೊಫೋನ್‌ನ ಔಟ್ ಪುಟ್‌ಗೆ ಸಂಪರ್ಕಿಸಲಾಗಿರುತ್ತದೆ. ಆಯಸ್ಕಾಂತ ಕ್ಷೇತ್ರದ(ಮ್ಯಾಗ್ನೆಟ್ ಫೀಲ್ಡ್) ಒಳಗಡೆ ಆಗುವ ಅದರ ಕಂಪನವು ವಿದ್ಯುತ್ ಸಂಕೇತಗಳನ್ನು ಹುಟ್ಟಿಸುತ್ತದೆ. ಆಯಸ್ಕಾಂತೀಯ ಚೋದನೆ ಮೂಲಕ ಎರಡೂ ಧ್ವನಿ ಉತ್ಪಾದಿಸುವುದರಿಂದ, ರಿಬನ್ ಮೈಕ್ರೊಫೋನ್‌ಗಳು ಮತ್ತು ಮೊವಿಂಗ್ ಕಾಯಿಲ್ ಮೈಕ್ರೊಫೋನ್‌ಗಳೆರಡೂ ಒಂದನ್ನೊಂದು ಹೋಲುತ್ತವೆ. ಮೂಲ ರಿಬನ್ ಮೈಕ್ರೊಫೋನ್‌ಗಳು ಬೈ ಡೈರೆಕ್ಷನಲ್ ಅಥವಾ ಎರಡು ದಿಕ್ಕಿನ (figure-eight ಎಂದು ಸಹ ಕರೆಯುತ್ತಾರೆ) ಮಾದರಿಯಲ್ಲಿ ಧ್ವನಿಯನ್ನು ಗುರುತಿಸುತ್ತವೆ. ಏಕೆಂದರೆ, ಶಬ್ದಕ್ಕಾಗಿ ಮುಂದೆ ಮತ್ತು ಹಿಂದೆ ಮುಕ್ತವಾಗಿರುವ ರಿಬನ್ ಪ್ರೆಶರ್ ಗ್ರೇಡಿಯಂಟ್(ಒತ್ತಡದ ಪ್ರವಣತೆ)ಗೆ ಪ್ರತಿಕ್ರಿಯಿಸುತ್ತದೆ. ಆದರೆ, ಧ್ವನಿ ಒತ್ತಡದತ್ತ ಯಾವ ಪ್ರತಿಕ್ರಿಯೆಯೂ ವ್ಯಕ್ತವಾಗುವುದಿಲ್ಲ. ಸಾಮಾನ್ಯವಾದ ಸ್ಟೀರಿಯೋ ರೆಕಾರ್ಡಿಂಗ್‌ನಲ್ಲಿ ಸಮ್ಮಿತೀಯ ಮುಂಭಾಗ (ಸಿಮೆಟ್ರಿಕಲ್ ಫ್ರಂಟ್) ಮತ್ತು ಹಿಂಭಾಗ (ರಿಯರ್ ಪಿಕಪ್)ಗಳೆರಡೂ ಸ್ವಲ್ಪ ತೊಂದರೆಯುಂಟು ಮಾಡಬಹುದು. ಆದರೂ,ಈ ನಿರಾಕರಣೆಯನ್ನು ರಿಬನ್ ಮೈಕ್ರೊಫೋನ್‌ನ್ನು ಅಡ್ಡಲಾಗಿ ಇಡುವುದರ ಮೂಲಕ ಉಪಯೋಗ ಪಡೆಯಬಹುದು. ಉದಾಹರಣೆಗೆ, ಸಿಂಬಲ್(ಕಂಚಿನ ತಟ್ಟೆ)ಮೇಲ್ಭಾಗ. ಇಲ್ಲಿ ಲೋಬ್‌ನ ಹಿಂಭಾಗವು ಸಿಂಬಲ್‌ಗಳಿಂದ ಉಂಟಾಗುವ ಶಬ್ದವನ್ನು ಮಾತ್ರ ಸ್ವೀಕರಿಸುತ್ತದೆ. ಕ್ರಾಸ್ಡ್ ಫಿಗರ್ 8 ಅಥವಾ ಬ್ಲಮ್‌ಲೈನ್ ಜೋಡಿ ಸ್ಟೀರಿಯೋ ರೆಕಾರ್ಡಿಂಗ್ ವಿಧಾನವು ತುಂಬಾ ಜನಪ್ರಿಯವಾಗುತ್ತಿದೆ. ಅಲ್ಲದೆ ಒಂದು ರಿಬನ್ ಮೈಕ್ರೊಫೋನ್‌ನ ಫಿಗರ್ 8 ಪ್ರತಿಕ್ರಿಯೆಯು ಈ ಕೆಲಸದಲ್ಲಿ ತುಂಬಾ ಉಪಯುಕ್ತವಾಗಿದೆ.

ರಿಬನ್‌ನ ಒಂದು ಭಾಗವನ್ನು ಧ್ವನಿ ತರಂಗಗಳಿಗೆ ಮುಚ್ಚಿ ಅಥವಾ ತಡೆ ವಿಧಿಸಿ ಇತರ ಪ್ರಕಾರದ ಧ್ವನಿಗಳನ್ನು ಉತ್ಪಾದಿಸಲಾಗುತ್ತದೆ. ಇದರಿಂದ, ಒಂದೇ ಕಡೆಗೆ ಧ್ವನಿ ಪ್ರಸಾರವಾಗುವಂತೆ ಮಾಡಲು ಅವಕಾಶ ಒದಗಿಸುತ್ತದೆ. ಶ್ರೇಷ್ಠ ಗುಣಮಟ್ಟದ RCA Type 77-DX ಮೈಕ್ರೊಫೋನ್ ನಲ್ಲಿರುವ ಆಂತರಿಕ ಧ್ವನಿ ನಿರೋಧಕಕ್ಕೆ ಅನೇಕ ಬಾಹ್ಯ ಹೊಂದಾಣಿಕೆ ಸ್ಥಾನಗಳಿರುತ್ತವೆ. ಇದರಿಂದ, "ಫಿಗರ್-8" ನಿಂದ "ಯುನಿಡೈರೆಕ್ಷನಲ್" (ಒಂದೇ ದಿಕ್ಕಿನಲ್ಲಿ) ವರೆಗೆ ಬರುವ ಅನೇಕ ಧ್ವನಿ ಪ್ರಕಾರಗಳಲ್ಲಿ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಇಂದಿಗೂ ಸಹ ಅತ್ಯುತ್ತಮ ಗುಣಮಟ್ಟದ ಧ್ವನಿ ಪ್ರಸಾರದ ಸಾಮರ್ಥ್ಯ ಹೊಂದಿರುವ ಹಳೆಯ ರಿಬನ್ ಮೈಕ್ರೊಫೋನ್‌ಗಳು ಈ ಕಾರಣಕ್ಕಾಗಿ ತುಂಬಾ ಪ್ರಸಿದ್ಧವಾಗಿದ್ದವು. ಆದರೆ ಒಂದು ಒಳ್ಳೆಯ ಕಡಿಮೆ ಆವರ್ತನದ ಪ್ರತಿಕ್ರಿಯೆ ಪಡೆಯಲು ರಿಬನ್ ಬಹಳ ಸಡಿಲವಾಗಿ ತೂಗುಬಿಟ್ಟರೆ ಮಾತ್ರ ಸಾಧ್ಯ. ಇದರಿಂದ ಅವುಗಳನ್ನು ದುರ್ಬಲಗೊಳಿಸಿದೆ. ಹೊಸದಾಗಿ ಬಂದಿರುವ ನ್ಯಾನೋ (ಅತಿ ಚಿಕ್ಕ) ವಸ್ತುಗಳು[೫] ಸೇರಿದಂತೆ ಹೊಸ ರಿಬನ್ ವಸ್ತುಗಳು ಈ ಆತಂಕಗಳನ್ನು ನಿವಾರಿಸಿವೆ. ಅಷ್ಟೇ ಅಲ್ಲದೆ,ಕಡಿಮೆ ಆವರ್ತನಗಳಲ್ಲಿ ರಿಬ್ಬನ್ ಮೈಕ್ರೋಫೋನ್‌ಗಳ ಕ್ರಿಯಾಶೀಲ ವ್ಯಾಪ್ತಿಯನ್ನು ಸುಧಾರಿಸಿದೆ. ಸುರಕ್ಷಿತ ವಿಂಡ್ ಸ್ಕ್ರೀನ್ (ಗಾಳಿಯನ್ನು ತಡೆಯುವ ಪರದೆಗಳು)ಗಳು ಹಳೆಯ ರಿಬನ್ ಗೆ ಯಾವುದೇ ಹಾನಿ ಆಗದಂತೆ ಮಾಡುತ್ತವೆ. ಇದರ ಜೊತೆಗೆ, ರೆಕಾರ್ಡಿಂಗ್ ಸಮಯದಲ್ಲಿ ಪ್ಲೋಸಿವ್ ಆರ್ಟಿಫ್ಯಾಕ್ಟ್(ಸ್ಫೋಟೋಚ್ಚಾರಣೆ) ಗಳನ್ನು ಸಹ ಕಡಿಮೆ ಮಾಡುತ್ತವೆ. ಉತ್ತಮ ವಿನ್ಯಾಸದ ವಿಂಡ್ ಸ್ಕ್ರೀನ್ ಗಳಿಂದಾಗಿ ಉಚ್ಚಸ್ವರದ ಕ್ಷೀಣತೆಯನ್ನು ಕಡಿಮೆ ಮಾಡುತ್ತದೆ. ಡೈನಾಮಿಕ್ ಮೈಕ್ರೊಫೋನ್‌ಗಳ ಇತರ ಪ್ರಕಾರಗಳಂತೆಯೇ ರಿಬನ್ ಮೈಕ್ರೊಫೋನ್‌ಗಳಿಗೂ ಸಹ ಫ್ಯಾಂಟಮ್ ಪವರ್ ದ ಅವಶ್ಯಕತೆ ಇಲ್ಲ. ಈ ರೀತಿಯ ವೋಲ್ಟೇಜ್ ನಿಂದಾಗಿ ಹಳೆಯ ರಿಬನ್ ಮೈಕ್ರೊಫೋನ್‌ಗಳು ಹಾನಿಗೊಳಗಾಗಬಹುದು. ಕೆಲವು ಹೊಸ ರಿಬನ್ ಮೈಕ್ರೊಫೋನ್ ವಿನ್ಯಾಸಗಳಲ್ಲಿ ಪ್ರೀಅಂಪ್ಲಿಪೈರ್ ಅಳವಡಿಸಲಾಗಿದ್ದು, ಇವುಗಳಿಗೆ ಫ್ಯಾಂಟಮ್ ಪವರ್‌ನ ಅವಶ್ಯಕತೆ ಇದೆ. ಅಲ್ಲದೆ, ಫ್ಯಾಂಟಮ್ ಪವರ್ ನಿಂದ ಟ್ರಾನ್ಸ್ ಫಾರ್ಮರ್ ಮತ್ತು ರಿಬನ್‌ಗಳಿಗೆ ಹಾನಿಯಾಗದಂತೆ ತಡೆಯಲು, ಪ್ರೀಅಂಪ್ಲಿಪೈರ್ ಇಲ್ಲದ ಹೊಸ ನಿಷ್ಕ್ರಿಯ ರಿಬನ್ ಮೈಕ್ರೊಫೋನ್‌ಗಳ ಸರ್ಕಿಟ್‌ಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಈಗ ಗಾಳಿಯ ನುಗ್ಗುವಿಕೆ(ಒತ್ತಡ) ಮತ್ತು ಫ್ಯಾಂಟಮ್ ಪವರ್ ನಿಂದಾಗುವ ಹಾನಿಯನ್ನು ತಡೆಯುವಂತಹ ಹೊಸ ರಿಬನ್ ವಸ್ತುಗಳು ಸಹ ಲಭ್ಯ ಇವೆ.

ಕಾರ್ಬನ್ ಮೈಕ್ರೊಫೋನ್[ಬದಲಾಯಿಸಿ]

ಕಾರ್ಬನ್ ಮೈಕ್ರೊಫೋನ್ ಕೂಡ ಬರ್ಲೈನರ್ ಮತ್ತು ಎಡಿಸನ್ ಮೈಕ್ರೋಫೋನ್‌ಗಳ ರೀತಿಯಲ್ಲಿ ಎರಡು ಮೆಟಲ್ ಪ್ಲೇಟ್‌ಗಳ ಮಧ್ಯೆ ಒತ್ತಿದ ಕಾರ್ಬನ್ ಗ್ರ್ಯಾನೂಲ್ (ಕಾರ್ಬನ್ ನಿಂದ ತಯಾರಾದ ಸಣ್ಣ ಕಣಗಳು)ಗಳನ್ನು ಒಳಗೊಂಡ ಒಂದು ಬಟನ್ ಅಥವಾ ಕ್ಯಾಪ್ಸೂಲ್ ಬಳಸುತ್ತವೆ. ಮೆಟಲ್ ಪ್ಲೇಟ್ ಗಳಲ್ಲಿ ಅಳವಡಿಸಿದ ವೋಲ್ಟೇಜ್ ದಿಂದಾಗಿ ಕಾರ್ಬನ್‌ನ ಮುಖಾಂತರ ಒಂದು ಸಣ್ಣ ಪ್ರಮಾಣದ ಕರೆಂಟ್ (ವಿದ್ಯುತ್ ಸಂಚಾರ) ಹರಿಯುತ್ತದೆ. ಈ ಪ್ಲೇಟ್ ಗಳಲ್ಲಿ ಒಂದಾದ ಧ್ವನಿಫಲಕವು ಉತ್ಪನ್ನವಾಗುವ ಧ್ವನಿ ತರಂಗಗಳೊಂದಿಗೆ ಕಂಪಿಸುತ್ತದೆ. ಇದರಿಂದಾಗಿ, ಕಾರ್ಬನ್ ಕಡೆಗೆ ಏರುಪೇರಿನ ಒತ್ತಡ ಉಂಟುಮಾಡುತ್ತದೆ. ಒತ್ತಡದಲ್ಲಿ ಬದಲಾವಣೆಯಿಂದಾಗಿ ಗ್ರ್ಯಾನೂಲ್ ಗಳ ರಚನೆಯಲ್ಲಿ ಬದಲಾವಣೆಯಾಗುತ್ತದೆ. ಹೀಗಾಗಿ, ಅಕ್ಕ ಪಕ್ಕದಲ್ಲಿರುವ ಗ್ರ್ಯಾನೂಲ್ ಗಳ ಪ್ರತಿಯೊಂದು ಜೋಡಿಯ ನಡುವಿನ ಸಂಪರ್ಕದ ಸ್ಥಳವು ಬದಲಾಗುತ್ತ ಹೋಗುತ್ತದೆ. ಇದರ ಪರಿಣಾಮವಾಗಿ, ಗ್ರ್ಯಾನೂಲ್ ಗಳ ವಿದ್ಯುತ್ ನಿರೋಧಕ ಗುಣವು ಬದಲಾಗುವುದು. ಈ ರೀತಿ ನಿರೋಧಕ ಗುಣದಲ್ಲಿ ಆಗುವ ಬದಲಾವಣೆಗಳಿಂದಾಗಿ ಮೈಕ್ರೊಫೋನ್ ಮುಖಾಂತರ ಸಾಗುವ ವಿದ್ಯುತ್ ಸಂಚಾರದಲ್ಲಿ ಬದಲಾವಣೆ ಆಗುತ್ತದೆ. ಇದರಿಂದಾಗಿ ವಿದ್ಯುತ್ ಸಂಕೇತ (ಎಲೆಕ್ಟ್ರಿಕ್ ಸಿಗ್ನಲ್) ಉತ್ಪನ್ನವಾಗುತ್ತದೆ. ಒಂದು ಕಾಲದಲ್ಲಿ ಕಾರ್ಬನ್ ಮೈಕ್ರೊಫೋನ್‌ಗಳನ್ನು ಟೆಲಿಫೋನ್ ಗಳಲ್ಲಿ ಬಳಸಲಾಗುತ್ತಿತ್ತು. ಈ ಮೈಕ್ರೊಫೋನ್‌ಗಳು ಅತ್ಯಂತ ಕಡಿಮೆ ಗುಣಮಟ್ಟದ ಧ್ವನಿ ಉತ್ಪಾದಿಸುತ್ತವೆ ಮತ್ತು ಆವರ್ತನನ ಪ್ರತಿಕ್ರಿಯೆಯೂ ತುಂಬಾ ಮಿತಿಯಲ್ಲಿವೆ. ಆದರೆ ಇವು ಬಹಳ ಗಟ್ಟಿಯಾದ ಸಾಧನಗಳು. ಗ್ರ್ಯಾನೂಲ್ ಕಾರ್ಬನ್ ಬಟನ್ ಮೈಕ್ರೊಫೋನ್‌ಗಳಂತೆಯೇ ಒಂದು ಹೊಸ ಸಂಶೋಧನೆಯಾಗಿದ್ದ 1880 ರ ಬೌಡೆಟ್ ಮೈಕ್ರೋಫೋನ್‌ನಲ್ಲಿ ಚಿಕ್ಕ ಕಾರ್ಬನ್ ಚೆಂಡುಗಳನ್ನು(carbon balls)ಬಳಸಲಾಗಿತ್ತು.[೬]

ಇತರೆ ಮೈಕ್ರೋಫೋನ್‌ಗಳಿಗೆ ಭಿನ್ನವಾಗಿ,ಕಾರ್ಬನ್ ಮೈಕ್ರೊಫೋನ್‌ಗಳನ್ನು ಧ್ವನಿ ವರ್ಧಕ ಅಥವಾ ಅಂಪ್ಲಿಪೈರ್‌ನ ಒಂದು ಪ್ರಕಾರವಾಗಿ ಬಳಸಬಹುದು. ಇಲ್ಲಿ ಚಿಕ್ಕ ಪ್ರಮಾಣದ ಧ್ವನಿ ಶಕ್ತಿಯನ್ನು ಉಪಯೋಗಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಶಕ್ತಿ ಯನ್ನು ಉತ್ಪಾದಿಸಬಹುದಾಗಿದೆ. ಮುಂಚೆ ಕಾರ್ಬನ್ ಮೈಕ್ರೊಫೋನ್‌ಗಳನ್ನು ಟೆಲಿಫೋನ್ ರಿಪೀಟರ್ ಗಳಾಗಿ ಬಳಸಿದ್ದು ಕಂಡುಬಂದಿದೆ. ಇವುಗಳಿಂದಾಗಿ ನಿರ್ವಾತ ಟ್ಯೂಬ್‌ಗಳಿಗಿಂತಲೂ ಮೊದಲಿನ ಕಾಲದಲ್ಲಿಯೇ ದೂರದ ಪ್ರದೇಶಗಳಿಗೆ ದೂರವಾಣಿ ಕರೆ (ಫೋನ್ ಕಾಲ್) ಮಾಡುವುದು ಸಾಧ್ಯವಾಯಿತು. ಆಯಸ್ಕಾಂತೀಯ ಟೆಲಿಫೋನ್ ರಿಸೀವರ್‌ನ್ನು ಒಂದು ಕಾರ್ಬನ್ ಮೈಕ್ರೊಫೋನ್‍‌ನೊನೊಂದಿಗೆ ಜೋಡಿಸುವುದರ ಮೂಲಕ ಈ ರಿಪೀಟರ್‌ಗಳು ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದವು. ರಿಸೀವರ್‌ನಿಂದ ಬಂದ ಅಸ್ಪಷ್ಟ ಸಂಕೇತ ಅಥವಾ ಸಿಗ್ನಲ್ ನ್ನು ಮೈಕ್ರೊಫೋನ್‌ಗೆ ಸ್ಥಳಾಂತರಿಸಲಾಗುತ್ತಿತ್ತು. ಇದರಿಂದಾಗಿ ಪ್ರಬಲವಾದ ವಿದ್ಯುದೀಯ ಸಂಕೇತ (ಎಲೆಕ್ಟ್ರಿಕಲ್ ಸಿಗ್ನಲ್) ವನ್ನು ಕಳಿಸುವುದು ಸಾಧ್ಯವಾಗುತ್ತಿತ್ತು. ಆಂಪ್ಲಿಫೈಯರ್ ಪರಿಣಾಮದ ಒಂದು ಉದಾಹರಣೆಯೆಂದರೆ ಪ್ರತ್ಯಾದಾನದಿಂದ(ಫೀಡ್‌ಬ್ಯಾಕ್)ಉಂಟಾಗುವ ತೂಗಾಟ. ಹಳೆಯ "ಕ್ಯಾಂಡಲ್ ಸ್ಟಿಕ್" ಟೆಲಿಫೋನ್‌ನ ಇಯರ್‌ಫೋನ್‌ನ್ನು ಕಾರ್ಬನ್ ಮೈಕ್ರೊಫೋನ್ ನ ಹತ್ತಿರ ಇಟ್ಟಾಗ ಅದು ಅತಿ ಹೆಚ್ಚು ಕರ್ಕಶ ಧ್ವನಿ ಉಂಟುಮಾಡುತ್ತದೆ. ಕಾರ್ಬನ್ ಚೆಂಡುಗಳನ್ನು ಬಳಸುತ್ತಿದ್ದ 1881 ರ ಬೌಡೆಟ್ ಮೈಕ್ರೋಫೋನ್, ಪುಡಿಮಾಡಿದ (ಪೌಡರ್ಡ್) ಕಾರ್ಬನ್ ಬಟನ್ ಮೈಕ್ರೊಫೋನ್‌ಗಳ ಫಲವಾಗಿದೆ.

ಪೀಜೋಎಲೆಕ್ಟ್ರಿಕ್ ಮೈಕ್ರೊಫೋನ್[ಬದಲಾಯಿಸಿ]

ಕ್ರಿಸ್ಟಲ್ ಮೈಕ್ರೊಫೋನ್ ಅಥವಾ ಪೀಜೋ ಮೈಕ್ರೊಫೋನ್ ಪೀಜೋ ಎಲೆಕ್ಟ್ರಿಸಿಟಿ ಯ ವಿದ್ಯಮಾನವನ್ನು- ಒತ್ತಡ ಬಿದ್ದಾಗ ಕೆಲವು ಸಾಧನಗಳ ವೋಲ್ಟೇಜ್‌ನ್ನು ಉತ್ಪಾದಿಸುವ ಸಾಮರ್ಥ್ಯ-ಕಂಪನಗಳನ್ನು ವಿದ್ಯುದೀಯ ಸಂಕೇತಗಳಾಗಿ ಪರಿವರ್ತಿಸಲು ಈ ರೀತಿ ಪೀಜೋಎಲೆಕ್ಟ್ರಿಸಿಟಿಯನ್ನು ಬಳಸಲಾಗುತ್ತದೆ. ಇದಕ್ಕೆ ಉದಾಹರಣೆ, ರಷೆಲ್ ಉಪ್ಪು (ಪೊಟ್ಯಾಷಿಯಂ ಸೋಡಿಯಂ ಟಾರ್ಟ್‌ರೇಟ್). ಇದು ಒಂದು ಪೀಜೋಎಲೆಕ್ಟ್ರಿಕ್ ಸ್ಫಟಿಕವಾಗಿದ್ದು, ಮೈಕ್ರೊಫೋನ್ ಮತ್ತು ಸ್ಲಿಮ್ ಲೈನ್ ಲೌಡ್ ಸ್ಪೀಕರ್ ಘಟಕವಾಗಿ ಅಂದರೆ ಸಂಜ್ಞಾಪರಿವರ್ತಕವಾಗಿ(ಟ್ರಾನ್ಸ್‌ಡ್ಸೂಸರ್)ಕೆಲಸ ಮಾಡುತ್ತದೆ. ಮೊದಲೆಲ್ಲ ಸ್ಫಟಿಕ ಮೈಕ್ರೊಫೋನ್‌ಗಳಿಗಾಗಿ ಡೊಮೆಸ್ಟಿಕ್ ಟೇಪ್ ರೆಕಾರ್ಡರ್ ಗಳಂತಹ ವ್ಯಾಕ್ಯೂಮ್ ಟ್ಯೂಬ್ (ವಾಲ್ವ್) ಸಲಕರಣೆಯನ್ನು ಪೂರೈಸಲಾಗುತ್ತಿತ್ತು. ಅವುಗಳ ಹೆಚ್ಚಿನ ಹೊರಹೋಗುವ ಸಂಕೇತದ ವಿದ್ಯುತ್ ಪ್ರವಾಹ ಪ್ರತಿರೋಧ(ಇಂಪೀಡೆನ್ಸ್) ವ್ಯಾಕ್ಯೂಮ್ ಟ್ಯೂಬ್ ಇನ್‌ಪುಟ್ ಹಂತದ ಅಧಿಕ ಮಟ್ಟದ ಒಳಪ್ರವೇಶಿಸುವ ಸಂಕೇತದ (ಸುಮಾರು 10 ಮೆಗೋಮ್ ಗಳಷ್ಟು)ವಿದ್ಯುತ್ ಪ್ರವಾಹ ಪ್ರತಿರೋಧದೊಂದಿಗೆ ಹೊಂದಿಕೆಯಾಗುತ್ತದೆ. ಅವುಗಳನ್ನು ಮೊದಲಿನ ಟ್ರಾನ್ಸಿಸ್ಟರ್ ಸಲಕರಣೆಗಳೊಂದಿಗೆ ಹೊಂದಿಸುವುದು ಕಷ್ಟದಾಯಕವಾಗಿತ್ತು. ಅಲ್ಲದೆ, ಸ್ವಲ್ಪ ಕಾಲ ಡೈನಾಮಿಕ್ ಮೈಕ್ರೊಫೋನ್‌ಗಳು ಮತ್ತು ನಂತರ ಸಣ್ಣ ಎಲೆಕ್ಟ್ರೆಟ್ ಕಂಡೆನ್ಸರ್ ಉಪಕರಣಗಳು ತಕ್ಷಣವೇ ಅವುಗಳ ಸ್ಥಾನ ಪಡೆದುಕೊಂಡವು. ಕ್ರಿಸ್ಟಲ್ ಮೈಕ್ರೊಫೋನ್ ನ ಹೆಚ್ಚು ವಿದ್ಯುತ್ಪ್ರವಾಹ ಪ್ರತಿರೋಧಕ ಸಾಮರ್ಥ್ಯದಿಂದಾಗಿ ಸ್ವತಃ ಮೈಕ್ರೊಫೋನ್ ನಿಂದ ಹೊರ ಬರುವ ಮತ್ತು ಸಂಪರ್ಕಿಸುವ ಕೇಬಲ್‌ನಿಂದ ಬರುವ ಅತಿಯಾದ ಶಬ್ದವನ್ನು ನಿಭಾಯಿಸುವುದಕ್ಕೆ ಆಸ್ಪದ ಕಲ್ಪಿಸಿತು.

ಪೀಜೋಎಲೆಕ್ಟ್ರಿಕ್ ಸಂಜ್ಞಾಪರಿವರ್ತಕಗಳನ್ನು ಕಾಂಟ್ಯಾಕ್ಟ್ ಮೈಕ್ರೊಫೋನ್‌ಗಳಾಗಿ ಬಳಸಿಕೊಂಡು ಸಂಗೀತ ವಾದ್ಯಗಳಿಂದ ಬರುವ ಶಬ್ದವನ್ನು ಹೆಚ್ಚು ಪ್ರಮಾಣದಲ್ಲಿ ಕೇಳಿಬರುವಂತೆ ಮಾಡಲು, ಡ್ರಮ್ ಗಳ ಶಬ್ದವನ್ನು ಗ್ರಹಿಸಲು, ರೆಕಾರ್ಡ್ ಮಾಡಿಕೊಂಡ ಎಲೆಕ್ಟ್ರಾನಿಕ್ ನಮೂನೆಗಳನ್ನು ಪ್ರಾರಂಭಿಸಲು ಮತ್ತು ಜಲಗರ್ಭದಲ್ಲಿ ಅತಿಯಾದ ಒತ್ತಡದ ವಾತಾವರಣದಲ್ಲಿಯೂ ಧ್ವನಿಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಉಪಯೋಗಿಸಲಾಗುತ್ತವೆ. ಧ್ವನಿತರಂಗಗಳ ಗಿಟಾರ್ (ವಿದ್ಯುತ್ ಸಂಪರ್ಕವಿಲ್ಲದೆ ನುಡಿಸುವ)ಗಳ ಮೇಲಿರುವ ಸ್ಯಾಡಲ್-ಮೌಂಟೆಡ್ ಪಿಕಪ್ ಗಳು ಸ್ಯಾಡಲ್ ಮೇಲೆ ಹಾಯ್ದು ಹೋಗುವ ತಂತಿಗಳನ್ನು ಸಂಪರ್ಕಿಸುವ ಪೀಜೋಎಲೆಕ್ಟ್ರಿಕ್ ಉಪಕರಣಗಳಾಗಿವೆ. ಈ ಪ್ರಕಾರದ ಮೈಕ್ರೊಫೋನ್ ಎಲೆಕ್ಟ್ರಿಕ್ ಗಿಟಾರ್ ಮೇಲೆ ಇರುವ ಮ್ಯಾಗ್ನೆಟಿಕ್ ಕಾಯಿಲ್ ಪಿಕಪ್ ಗಳಿಗಿಂತ ವಿಭಿನ್ನವಾಗಿರುತ್ತದೆ. ಈ ಎಲೆಕ್ಟ್ರಿಕ್ ಗಿಟಾರ್ ಗಳು ಕಂಪನವನ್ನು ಹಿಡಿದಿಟ್ಟುಕೊಳ್ಳಲು ಯಾಂತ್ರಿಕ ಜೋಡಣೆಗಿಂತ ಆಯಸ್ಕಾಂತೀಯ ಚೋದನೆಯನ್ನು ಬಳಸಿಕೊಳ್ಳುತ್ತವೆ.

ಫೈಬರ್ ಆಪ್ಟಿಕ್ ಮೈಕ್ರೊಫೋನ್[ಬದಲಾಯಿಸಿ]

ಆಪ್ಟೊಅಕೌಸ್ಟಿಕ್ಸ್ 1140 ಫೈಬರ್ ಆಪ್ಟಿಕ್ ಮೈಕ್ರೊಫೋನ್

ಸಾಂಪ್ರದಾಯಿಕ ಮೈಕ್ರೋಫೋನ್‌ಗಳಲ್ಲಿ ಆಗುವ ಸಾಮರ್ಥ್ಯ ಬದಲಾವಣೆ ಅಥವಾ ಕಾಂತೀಯ ಕ್ಷೇತ್ರಗಳಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸುವ, ಬೆಳಕಿನ ತೀವ್ರತೆಯಲ್ಲಿ ಆಗುವ ಬದಲಾವಣೆಗಳನ್ನು ಅರಿತುಕೊಂಡು ಧ್ವನಿತರಂಗದ(ವಿದ್ಯುತ್ ಸಂಪರ್ಕವಿಲ್ಲದ) ಅಲೆಗಳನ್ನು ಎಲೆಕ್ಟ್ರಿಕಲ್ ಸಂಕೇತ (ಸಿಗ್ನಲ್)ಗಳಾಗಿ ಫೈಬಪ್ ಆಪ್ಟಿಕ್ ಮೈಕ್ರೋಫೋನ್ ಪರಿವರ್ತಿಸುತ್ತವೆ.[೭][೮]

ಈ ಪ್ರಕ್ರಿಯೆಯ ಸಮಯದಲ್ಲಿ, ಬೆಳಕು ಲೇಸರ್ ಮಾಧ್ಯಮದಿಂದ ಆಪ್ಟಿಕಲ್ ಫೈಬರ್ ಮುಖಾಂತರವಾಗಿ ಚಲಿಸುತ್ತದೆ. ಇದರಿಂದಾಗಿ ಒಂದು ಚಿಕ್ಕದಾದ ಧ್ವನಿ-ಸಂವೇದಿ ಪ್ರತಿಫಲಕ ಡಯಾಫ್ರಾಮ್ (ಸೌಂಡ್-ಸೆನ್ಸಿಟಿವ್ ರಿಫ್ಲೆಕ್ಟಿವ್ ಡಯಾಫ್ರಾಮ್) ನ ಮೇಲ್ಮೈ ಮೇಲೆ ಬೆಳಕು ಉತ್ಪತ್ತಿಯಾಗುತ್ತದೆ. ಧ್ವನಿಯಿಂದಾಗಿ ಧ್ವನಿಫಲಕ ಕಂಪಿಸುತ್ತದೆ. ಹೀಗಾಗಿ, ಪ್ರತಿಫಲಿತವಾದ ಬೆಳಕಿನ ತೀವ್ರತೆಯಲ್ಲಿ ಬದಲಾವಣೆ ಉಂಟಾಗುತ್ತದೆ. ನಂತರ, ಬದಲಾವಣೆ ಮಾಡಿದ ಬೆಳಕನ್ನು ಎರಡನೇ ಆಪ್ಟಿಕಲ್ ಫೈಬರ್ ಮೇಲಿಂದ ಫೋಟೋ ಡಿಟೆಕ್ಟರ್ ಗೆ ಕಳುಹಿಸಲಾಗುತ್ತದೆ. ಈಗ, ತೀವ್ರ ಬದಲಾವಣೆ ಹೊಂದಿದ ಬೆಳಕು (ಇಂಟೆನ್ಸಿಟಿ-ಮಾಡ್ಯೂಲೇಟೆಡ್ ಲೈಟ್) ಎನಲಾಗ್ ಅಥವಾ ಡಿಜಿಟಲ್ ಆಡಿಯೋ ಆಗಿ ಪರಿವರ್ತನೆ ಹೊಂದಿ ಪ್ರಸಾರ ಅಥವಾ ರೆಕಾರ್ಡಿಂಗ್ ನಡೆಯುತ್ತದೆ. ಶ್ರೇಷ್ಠ ಮಟ್ಟದ ಅತಿ ಸ್ಪಷ್ಟವಾಗಿ ಧ್ವನಿ ಪ್ರಸರಿಸುವ ಸಾಂಪ್ರದಾಯಿಕ ಮೈಕ್ರೊಫೋನ್‌ಗಳ ಹಾಗೆಯೇ ಫೈಬರ್ ಆಪ್ಟಿಕ್ ಮೈಕ್ರೊಫೋನ್‌ಗಳು ಕೂಡ ಹೆಚ್ಚು ಡೈನಾಮಿಕ್ ಮತ್ತು ಆವರ್ತನನದ ವಿಸ್ತಾರವನ್ನು ಹೊಂದಿರುತ್ತವೆ.

ಫೈಬರ್ ಆಪ್ಟಿಕ್ ಮೈಕ್ರೊಫೋನ್‌ಗಳು ಯಾವುದೇ ವಿದ್ಯುತ್, ಆಯಸ್ಕಾಂತೀಯ, ಸ್ಥಾಯಿವಿದ್ಯುತ್ ಅಥವಾ ರೇಡಿಯೋಎಕ್ಟಿವ್ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವುದಿಲ್ಲ ಅಥವಾ ಇವುಗಳಿಗೆ ಪ್ರತಿಕ್ರಿಯಿಸುವುದಿಲ್ಲ (ಇದನ್ನು EMI/RFI ಪ್ರತಿರೋಧಕ ಎಂದು ಕರೆಯುತ್ತಾರೆ). ಆದ್ದರಿಂದ,ಫೈಬರ್ ಆಪ್ಟಿಕ್ ಮೈಕ್ರೊಫೋನ್ ವಿನ್ಯಾಸವನ್ನು ಕೈಗಾರಿಕಾ ಚಕ್ರಗಳು ಅಥವಾ ಟರ್ಬೈನ್ ಗಳ ಒಳಗೆ ಅಥವಾ ಆಯಸ್ಕಾಂತೀಯ ಅನುರಣನ ಚಿತ್ರ (MRI) ಸಲಕರಣಾ ವಾತಾವರಣಗಳ ಒಳಗಡೆ ಬಳಸಲು ಯೋಗ್ಯವಾಗಿದೆ. ಆದರೆ ಇದೆ ಕ್ಷೇತ್ರಗಳಲ್ಲಿ ಸಾಂಪ್ರದಾಯಿಕ ಮೈಕ್ರೊಫೋನ್‌ಗಳನ್ನು ಬಳಸುವುದು ಅಪಾಯಕಾರಿ ಆಗಿದೆ.

ಫೈಬರ್ ಆಪ್ಟಿಕ್ ಮೈಕ್ರೊಫೋನ್‌ಗಳು ಗಟ್ಟಿಯಾಗಿದ್ದು, ಉಷ್ಣ ಮತ್ತು ತೇವಾಂಶ ಗಳಂತಹ ವಾತಾವರಣಗಳಿಗೆ ಪ್ರತಿರೋಧವಾಗಿವೆ. ಯಾವುದೇ ಪ್ರಕಾರದ ವಿದ್ಯುತ್ ಪ್ರವಾಹ ಪ್ರತಿರೋಧಕ ಹೊಂದಾಣಿಕೆ (ಇಂಪೆಡನ್ಸ್ ಮ್ಯಾಚಿಂಗ್)ಗಾಗಿ ಅಥವಾ ಯಾವುದೇ ದಿಕ್ಕಿನಲ್ಲಿ ಸಂವೇದನಾಶೀಲತೆಯ ಗುಣಕ್ಕೆ ಉತ್ಪಾದಿಸಬಹುದು. ಯಾವ ಪ್ರೀಅಂಪ್ಲಿಫೈರ್ ಅಥವಾ ಇತರ ವಿದ್ಯುತ್ ಉಪಕರಣಗಳ ಅಗತ್ಯವಿಲ್ಲದೇ ಮೈಕ್ರೊಫೋನ್‌ನ ಬೆಳಕಿನ ಮೂಲ ಮತ್ತು ಅದರ ಫೋಟೋ ಡಿಟೆಕ್ಟರ್ ನಡುವಿನ ಅಂತರವು ಅನೇಕ ಕಿಲೋಮೀಟರ್‌ಗಳವರೆಗೆ ಇರಬಹುದು. ಇದರಿಂದಾಗಿ ಫೈಬರ್ ಆಪ್ಟಿಕ್ ಮೈಕ್ರೋಫೋನ್ ಕೈಗಾರಿಕಾ ಮತ್ತು ಸರ್ವೈಲೆನ್ಸ್ ಅಕೌಸ್ಟಿಂಗ್ ಮಾನಿಟರಿಂಗ್‌(ಧ್ವನಿತರಂಗ ನಿಗಾ ಉಸ್ತುವಾರಿ)ಗೆ ಸೂಕ್ತವಾಗಿದೆ.

ಫೈಬರ್ ಆಪ್ಟಿಕ್ ಮೈಕ್ರೊಫೋನ್‌ಗಳನ್ನೂ ಮುಖ್ಯವಾಗಿ ಇನ್ ಫ್ರಾಸೌಂಡ್ ಮಾನಿಟರಿಂಗ್ ಮತ್ತು ನಾಯಿಸ್ ಕ್ಯಾನ್ಸಲಿಂಗ್ ಕ್ಷೇತ್ರಗಳಲ್ಲಿ ಬಳಸುತ್ತಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಇವು ಹೆಚ್ಚು ಉಪಯೋಗಕ್ಕೆ ಬರುತ್ತವೆ. ಉದಾಹರಣೆಗಾಗಿ, ಬಹಳ ಶಬ್ದವಾಗುವಂಥ ಆಯಸ್ಕಾಂತೀಯ ಕ್ಷೇತ್ರ ವ್ಯಾಪ್ತಿಯಲ್ಲಿ ರೆಡಿಯೋಲಾಜಿಸ್ಟ್‌ರು, ಸಿಬ್ಬಂದಿ ಮತ್ತು ರೋಗಿಗಳು ಯಾವುದೇ ತೊಂದರೆಯಿಲ್ಲದೆ ಮಾತನಾಡಲು ಅವಕಾಶ ನೀಡುತ್ತದೆ. ಇದೆ ರೀತಿ MRI ಕೊಠಡಿಗಳು ಮತ್ತು ದೂರದ ನಿಯಂತ್ರಣ ಕೊಠಡಿಗಳ (ರಿಮೋಟ್ ಕಂಟ್ರೋಲ್ ರೂಮ್ಸ್) ಒಳಗಡೆಯೂ ಮಾತನಾಡಬಹುದು.[೯] ಇವುಗಳಿಂದಾಗುವ ಇತರ ಪ್ರಯೋಜನಗಳೆಂದರೆ, ಇಂಡಸ್ಟ್ರಿಯಲ್ ಇಕ್ವಿಪ್ಮಂಟ್ ಮಾನಿಟರಿಂಗ್ ಮತ್ತು ಸೆನ್ಸಿಂಗ್, ಆಡಿಯೋ ತಪಾಸಣೆ ಮತ್ತು ಮಾಪನ, ಉತ್ತಮ ಗುಣಮಟ್ಟದ ರೆಕಾರ್ಡಿಂಗ್ ಮತ್ತು ಕಾನೂನು ಜಾರಿ.

ಲೇಸರ್ ಮೈಕ್ರೊಫೋನ್[ಬದಲಾಯಿಸಿ]

ಸಿನೆಮಾಗಳಲ್ಲಿ ಲೇಸರ್ ಮೈಕ್ರೊಫೋನ್‌ಗಳನ್ನು ಪತ್ತೇದಾರಿ ಕೆಲಸದಲ್ಲಿ ಬಳಸುವ ಉಪಕರಣಗಳಾಗಿ ತೋರಿಸಲಾಗುತ್ತದೆ.

ಒಂದು ಲೇಸರ್ ಕಿರಣವನ್ನು ಶಬ್ದದಿಂದ ಪ್ರಭಾವಿತ ಒಂದು ಕಿಟಕಿಯ ಮೇಲ್ಮೈ ಅಥವಾ ಇತರ ಮೇಲ್ಮೈ ಮೇಲೆ ಬಿಡಲಾಗುತ್ತದೆ. ಈ ಮೇಲ್ಮೈ ಮೇಲೆ ಸ್ವಲ್ಪ ಕಂಪನಗಳಾದರೂ ಪ್ರತಿಫಲಿತವಾದ ಲೇಸರ್ ಕಿರಣದ ಸ್ಥಾನಪಲ್ಲಟ ಮಾಡಿ ಶಬ್ದದ ತರಂಗವನ್ನು ಗುರ್ತಿಸುತ್ತದೆ.

ಆಗ ಕಂಪಿಸುತ್ತಿರುವ ಲೇಸರ್ ಸ್ಥಳವು ಮತ್ತೆ ಶಬ್ದವಾಗಿ ಪರಿವರ್ತಿತವಾಗುತ್ತದೆ.

ಇನ್ನೂ ಹೆಚ್ಚು ಗಟ್ಟಿಯಾದ ಮತ್ತು ದುಬಾರಿ ಅಳವಡಿಕೆಯಲ್ಲಿ,ಪ್ರತಿಫಲಿತವಾದ ಬೆಳಕು ಇಬ್ಭಾಗವಾಗಿ ಇಂಟರ್ಫರೋಮೀಟರ್ ನ್ನು ಪ್ರವೇಶಿಸುತ್ತದೆ. ಈ ಉಪಕರಣವು ಡಾಪ್ಲರ್ ಪ್ರಭಾವ ದಿಂದಾಗುವ ಆವರ್ತನ ಬದಲಾವಣೆಗಳನ್ನು ಕಂಡುಹಿಡಿಯುತ್ತದೆ. ಮುಂಚಿನ ಪ್ರಯೋಗವನ್ನು ಟೇಬಲ್ ಟಾಪ್ ಪ್ರಯೋಗ ಎನ್ನಲಾಗುತ್ತದೆ. ನಂತರದ ಪ್ರಯೋಗದಲ್ಲಿ ಅತ್ಯಂತ ಸ್ಥಿರವಾದ ಲೇಸರ್ ಮತ್ತು ನಿಖರ ಆಪ್ಟಿಕ್ಸ್ (ದೂರದರ್ಶಕ ಸಾಧನ ಮತ್ತು ಎಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಶನ್ ಗುರ್ತಿಸುವ) ಅವಶ್ಯಕತೆಯಿದೆ.

ಹೊಸ ಪ್ರಕಾರದ ಲೇಸರ್ ಮೈಕ್ರೊಫೋನ್‌ಗಳು ಲೇಸರ್ ಕಿರಣ ಮತ್ತು ಹೊಗೆ ಅಥವಾ ಆವಿಯನ್ನು ಬಳಸಿಕೊಂಡು ಮುಕ್ತ ಗಾಳಿಯಲ್ಲಿರುವ ಶಬ್ದಕಂಪನ ಗಳನ್ನು ಕಂಡು ಹಿಡಿಯುತ್ತವೆ.

ಆಗಸ್ಟ್ 25, 2009 ರಂದು, ಲೇಸರ್ ಕಿರಣದ ದಿಕ್ಕಿನಲ್ಲಿ ಹೊಗೆ ಅಥವಾ ಆವಿಯನ್ನು ಹೊಂದಿರುವ ಒಂದು ಜೊತೆ ಲೇಸರ್-ಫೋಟೋಸೆಲ್ ನ ಆಧಾರದ ಮೇಲೆ ಕಾರ್ಯನಿರ್ವಹಿಸುವ ನಿರ್ದಿಷ್ಟ ಫ್ಲೋ ಡಿಟೆಕ್ಷನ್ ಮೈಕ್ರೋಫೋನ್‌ಗೆ ಯು.ಎಸ್. ಪೇಟೆಂಟ್ 7,580,533 ಕೊಡಲಾಯಿತು. ಶಬ್ದದ ಒತ್ತಡದ ತರಂಗಗಳು ಹೊಗೆಯಲ್ಲಿ ಅಡಚಣೆ ಉಂಟು ಮಾಡುವುದರಿಂದ ಹೊಗೆಯು ಫೋಟೋ ಡಿಟೆಕ್ಟರ್‌ನ್ನು ತಲುಪುತ್ತಿರುವ ಲೇಸರ್ ಬೆಳಕಿನಲ್ಲಿ ವ್ಯತ್ಯಾಸಗಳಾಗುವಂತೆ ಮಾಡುತ್ತದೆ.

 ಈ ಉಪಕರಣದ ಒಂದು ಮಾದರಿಯನ್ನು 2009 ರ ಅಕ್ಟೋಬರ್ 9 ರಿಂದ 12 ರ ವರೆಗೆ ನ್ಯೂಯಾರ್ಕ್ ನಗರದಲ್ಲಿ ನಡೆದ 127 ನೆಯ ಆಡಿಯೋ ಇಂಜಿನಿಯರಿಂಗ್ ಸೊಸೈಟಿ ಸಮಾವೇಶದಲ್ಲಿ ಪ್ರದರ್ಶಿಸಲಾಯಿತು.

ಲಿಕ್ವಿಡ್ ಮೈಕ್ರೊಫೋನ್[ಬದಲಾಯಿಸಿ]

ಅಲೆಕ್ಸಾಂಡರ್ ಗ್ರಹಾಮ್ ಬೆಲ್ ವಿವಿಧ ಪ್ರತಿರೋಧಕದ ಮೈಕ್ರೊಫೋನ್/ಟ್ರಾನ್ಸ್ ಮೀಟರ್ ನಲ್ಲಿ ಸುಧಾರಣೆ ಮಾಡುವವರೆಗೂ ಮೊದಲಿನ ಮೈಕ್ರೊಫೋನ್‌ಗಳು ಸ್ಪಷ್ಟವಾಗಿ ಕೇಳಬಹುದಾದ ಧ್ವನಿ ಉತ್ಪಾದಿಸಲು ಸಾಧ್ಯವಾಗಿರಲಿಲ್ಲ.

 ಬೆಲ್ ತಯಾರಿಸಿದ ಲಿಕ್ವಿಡ್ ಟ್ರಾನ್ಸ್ ಮೀಟರ್ ನಲ್ಲಿ ಸ್ವಲ್ಪ ಸಲ್ಫುರಿಕ್ ಆಸಿಡ್ ಬೆರೆಸಿದ ನೀರು ತುಂಬಿದ್ದ ಒಂದು ಮೆಟಲ್ ಕಪ್ ಇತ್ತು.

ಒಂದು ಶಬ್ದದ ಅಲೆಯಿಂದಾಗಿ ಧ್ವನಿಫಲಕ ಚಲಿಸುವಂತಾಗಿ, ಅಲ್ಲಿರುವ ಸೂಜಿಯನ್ನು ನೀರಿನಲ್ಲಿ ಮೇಲೆ ಮತ್ತು ಕೆಳಗೆ ಚಲಿಸುವಂತೆ ಮಾಡಿತು. ನಂತರ,ವೈರ್ ಮತ್ತು ಕಪ್ ನಡುವಿನ ವಿದ್ಯುತ್ ಪ್ರತಿರೋಧಕ ಪ್ರಮಾಣವು ಅರ್ಧ ಮುಳುಗಿದ ಸೂಜಿಯ ಸುತ್ತಲಿನ ನೀರಿನ ಗಾತ್ರಕ್ಕೆ ವಿಲೋಮ ಪ್ರಮಾಣದಲ್ಲಿತ್ತು. ಅಲೈಷಾ ಗ್ರೆ ಎಂಬುವರು ಸೂಜಿಯ ಬದಲು ಹಿತ್ತಾಳೆಯ ಕೋಲು ಬಳಸುವ ಆವೃತ್ತಿಯನ್ನು ಕುರಿತು ಒಂದು ಕೇವಿಯಾಟ್ ಸಲ್ಲಿಸಿದರು. ಮೇಜರ್ ಏನಾ, ಚೇಂಬರ್ಸ್, ವೆನಿ, ಸೈಕ್ಸ್, ಮತ್ತು ಅಲೈಷಾ ಗ್ರೆ ಯವರು ಈ ಲಿಕ್ವಿಡ್ ಮೈಕ್ರೋಫೋನ್ ನಲ್ಲಿ ಇತರ ಚಿಕ್ಕ ಪುಟ್ಟ ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ಸೂಚಿಸಿದರು. 1903 ರಲ್ಲಿ, ರೆಜಿನಾಲ್ಡ್ ಫೆಸಂಡೆನ್ ಒಂದು ಆವೃತ್ತಿಗಾಗಿ ಪೇಟೆಂಟ್ ಪಡೆದುಕೊಂಡರು. ಇವೆಲ್ಲ ಉತ್ತಮ ಕೆಲಸ ನೀಡುತ್ತಿದ್ದ ಮೊದಲ ಮೈಕ್ರೋಫೋನ್ ಗಳಾಗಿದ್ದರೂ, ವಾಣಿಜ್ಯ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಬಳಸಲು ಸಾಧ್ಯವಿರಲಿಲ್ಲ. ಬೆಲ್ ಮತ್ತು ವಾಟ್ಸನ್ ರ ನಡುವೆ ನಡೆದ ಪ್ರಥಮ ಇತಿಹಾಸ ಪ್ರಸಿದ್ಧ ಮಾತುಕತೆಯು ಲಿಕ್ವಿಡ್ ಮೈಕ್ರೋಫೋನ್ ಬಳಸಿಯೇ ಮಾಡಿದ್ದು.

MEMS ಮೈಕ್ರೊಫೋನ್[ಬದಲಾಯಿಸಿ]

MEMS (ಮೈಕ್ರೋಎಲೆಕ್ಟ್ರಿಕಲ್ ಮೆಕ್ಯಾನಿಕಲ್ ಸಿಸ್ಟಮ್) ಮೈಕ್ರೊಫೋನ್‌ನನ್ನು ಮೈಕ್ರೊಫೋನ್ ಚಿಪ್ ಅಥವಾ ಸಿಲಿಕಾನ್ ಮೈಕ್ರೊಫೋನ್ ಎಂದು ಕರೆಯುತ್ತಾರೆ. MEMS ವಿಧಾನಗಳ ಸಹಾಯದಿಂದ ಒತ್ತಡ ಸಂವೇದಿ (ಪ್ರೆಶರ್-ಸೆನ್ಸಿಟಿವ್) ಧ್ವನಿಫಲಕವನ್ನು ನೇರವಾಗಿ ಸಿಲಿಕಾನ್ ಚಿಪ್ ನಲ್ಲಿ ಅಳವಡಿಸಲಾಗಿದ್ದು, ಇದರೊಂದಿಗೆ ಇಂಟಿಗ್ರೇಟೆಡ್ ಪ್ರೀಅಂಪ್ಲಿಫೈರ್ ಇರುತ್ತದೆ. ಹೆಚ್ಚು MEMS ಮೈಕ್ರೊಫೋನ್‌ಗಳು ಕಂಡೆನ್ಸರ್ ಮೈಕ್ರೊಫೋನ್ ಡಿಸೈನ್ ನ ಭಿನ್ನ ರೂಪಗಳಾಗಿವೆ. ಹೆಚ್ಚಾಗಿ MEMS ಮೈಕ್ರೊಫೋನ್‌ಗಳು ಅದೇ CMOS ಚಿಪ್ ಮೇಲೆ ಅನಲಾಗ್-ಟು-ಡಿಜಿಟಲ್ ಪರಿವರ್ತಕ (ADC) ಸರ್ಕಿಟ್ ಗಳನ್ನು ಹೊಂದಿರುತ್ತವೆ. ಇದರಿಂದಾಗಿ, ಚಿಪ್ ಒಂದು ಡಿಜಿಟಲ್ ಮೈಕ್ರೊಫೋನ್ ಆಗುವುದು ಮತ್ತು ಆಧುನಿಕ ಡಿಜಿಟಲ್ ಉತ್ಪಾದನೆಗಳ ಸಾಲಿಗೆ ಸೇರಿಕೊಂಡಿದೆ. MEMS ಸಿಲಿಕಾನ್ ಮೈಕ್ರೊಫೋನ್‌ಗಳನ್ನು ಉತ್ಪಾದಿಸುತ್ತಿರುವ ಪ್ರಮುಖ ಸಂಸ್ಥೆಗಳೆಂದರೆ, ವೂಲ್ಫ್‌ಸನ್ ಮೈಕ್ರೋಎಲೆಕ್ಟ್ರಾನಿಕ್ಸ್ (WM7xxx), ಅನಲಾಗ್ ಡಿವೈಸಸ್, ಅಕುಸ್ಟಿಕಾ(AKU200x), ಇನ್ಫಿನಿಯನ್ (SMM310 ಪ್ರಾಡಕ್ಟ್), ನೋಲೆಸ್ ಎಲೆಕ್ಟ್ರಾನಿಕ್ಸ್, ಮೆಮ್‌ಸ್ಟೆಕ್(MSMx), NXP ಸೆಮಿಕಂಡಕ್ಟರ್ಸ್, ಸೋನಿಯನ್ MEMS, AAC ಅಕೌಸ್ಟಿಕ್ ಟೆಕ್ನಾಲಜೀಸ್,[೧೦] and ಓಮ್ರಾನ್.[೧೧]

ಮೈಕ್ರೊಫೋನ್‌ಗಳಾಗಿ ಸ್ಪೀಕರ್ ಗಳು[ಬದಲಾಯಿಸಿ]

ಧ್ವನಿ ವರ್ಧಕ, ಅಂದರೆ ವಿದ್ಯುತ್ ಸಂಕೇತವನ್ನು ಶಬ್ದದ ತರಂಗಗಳಾಗಿ ಪರಿವರ್ತಿಸುವ ಒಂದು ಸಂಜ್ಞಾಪರಿವರ್ತಕ, ಕಾರ್ಯವೈಖರಿಯಲ್ಲಿ ಒಂದು ಮೈಕ್ರೊಫೋನ್ ಗಿಂತ ಭಿನ್ನವಾಗಿರುತ್ತದೆ. ಒಬ್ಬ ಸಾಂಪ್ರದಾಯಿಕ ಸ್ಪೀಕರ್ ಡೈನಾಮಿಕ್ ಮೈಕ್ರೊಫೋನ್ ರೀತಿಯಲ್ಲಿ ರಚನೆಯಾಗಿರುವುದರಿಂದ (ಧ್ವನಿಫಲಕ , ಕಾಯಿಲ್ ಮತ್ತು ಮ್ಯಾಗ್ನೆಟ್ ಹೊಂದಿರುವ)ಸ್ಪೀಕರ್‌ಗಳು ಮೈಕ್ರೊಫೋನ್‌ಗಳ ಹಾಗೆ "ವಿರುದ್ಧ ರೀತಿಯಲ್ಲಿ" ಕೆಲಸ ಮಾಡುತ್ತವೆ. ಆದರೆ, ಇದು ಒಂದು ಕಳಪೆ ಗುಣಮಟ್ಟದ ಮೈಕ್ರೊಫೋನ್ ಆಗಿ ರೂಪಗೊಳ್ಳುತ್ತದೆ. ಇದರಲ್ಲಿ ತುಂಬಾ ಕಡಿಮೆ ಆವರ್ತನ ಪ್ರತಿಕ್ರಿಯೆ (ಮುಖ್ಯವಾಗಿ ಹೈ ಎಂಡ್‌ನಲ್ಲಿ) ಮತ್ತು ಕೆಳಮಟ್ಟದ ಸಂವೇದನ ಶಕ್ತಿ ಗಳಿರುತ್ತವೆ. ಪ್ರಾಯೋಗಿಕವಾಗಿ, ಸ್ಪೀಕರ್ ಗಳನ್ನು ಇಂಟರ್ ಕಾಮ್ ಗಳಲ್ಲಿ, ವಾಕಿ-ಟಾಕಿ ಗಳಲ್ಲಿ ಅಥವಾ ವಿಡಿಯೋ ಗೇಮ್ ವಾಯಿಸ್ ಚಾಟ್ ಸಲಕರಣೆಗಳಲ್ಲಿ ಅಧಿಕ ಗುಣಮಟ್ಟ ಮತ್ತು ಸಂವೇದನೆ ಅಗತ್ಯವಿಲ್ಲದಿದ್ದಾಗ ಅಥವಾ ಸಾಂಪ್ರದಾಯಿಕ ಮೈಕ್ರೊಫೋನ್‌ಗಳ ಪೂರೈಕೆ ಕಡಿಮೆಯಿದ್ದಾಗ ಮೈಕ್ರೋಫೋನ್‌ಗಳಾಗಿ ಬಳಸಲಾಗುತ್ತದೆ.

ಈ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಅಳವಡಿಸಲು ಸಾಧ್ಯವಿದೆ. ಹೇಗೆಂದರೆ, ಒಂದು ಮೀಡಿಯಮ್ ಸೈಜಿನ ವೂಫರ್ ನ್ನು ಡ್ರಮ್ ಸೆಟ್ ನಲ್ಲಿ ಬರುವ "ಕಿಕ್" (ಬೇಸ್ ಡ್ರಮ್)ನ ಮುಂದೆ, ತುಂಬಾ ಹತ್ತಿರದಲ್ಲಿ ಇಟ್ಟಾಗ ಅದು ಮೈಕ್ರೊಫೋನ್ ಆಗಿ ಕೆಲಸ ಮಾಡುತ್ತದೆ. ಇಂದು, ಸಂಗೀತ ತಯಾರಿಕೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ದೊಡ್ಡ ಸ್ಪೀಕರ್ ಗಳನ್ನು ಕಡಿಮೆ ಆವರ್ತನನ ಶಬ್ದದ ಮೂಲಗಳನ್ನು ಟ್ರ್ಯಾನ್ಸ್ ಡ್ಯುಸ್ (ಒಂದು ಶಕ್ತಿಯ ಪ್ರಕಾರವನ್ನು ಮತ್ತೊಂದು ಶಕ್ತಿಯ ಪ್ರಕಾರವಾಗಿ ಪರಿವರ್ತಿಸುವ ಉಪಕರಣ)ಮಾಡಲು ಬಳಸಲಾಗುತ್ತಿದೆ. ಈ ಪ್ರಕಾರದ ಉಪಕರಣಕ್ಕೆ ಉದಾಹರಣೆಯಾಗಬಲ್ಲ ಉತ್ಪಾದನೆಯಂದರೆ, ಯಮಾಹ ಸಬ್‌ಕಿಕ್. ಇದು ಕಿಕ್ ಡ್ರಮ್ ಗಳ ಮುಂದೆ ಬಳಸಲಾಗುವ ಒಂದು 12-inch (300 mm)ವೂಫರ್ ಆಗಿದೆ. ದೊಡ್ಡ ಪ್ರಮಾಣದ ಮೆಂಬ್ರೇನ್ (ಪದರು) ಹೆಚ್ಚಿನ ಆವರ್ತನಗಳನ್ನು ಪರಿವರ್ತಿಸಲು ಸಾಧ್ಯವಿಲ್ಲವಾದ್ದರಿಂದ, ಸ್ಪೀಕರ್ ನ್ನು ಕಿಕ್ ಡ್ರಮ್ ನ ಮುಂದೆ ಇಟ್ಟು ಸಿಂಬಾಲ್ ಮತ್ತು ಸ್ನೇರ್ (ಡ್ರಮ್ ನ ಕೆಳಭಾಗದಲ್ಲಿ ಬರುವ ಒಂದು ತಂತಿ)ಗಳಿಂದಾಗುವ ಶಬ್ದವು ಕಿಕ್ ಡ್ರಮ್‌ನ ಶಬ್ದದೊಂದಿಗೆ ಬೆರೆಯದಂತೆ ತಡೆಯಬಹುದು. ಬಹಳ ಕಡಿಮೆ ಸಂದರ್ಭಗಳಲ್ಲಿ, ಮೈಕ್ರೊಫೋನ್‌ಗಳನ್ನು ಸ್ಪೀಕರ್ ಗಳಾಗಿ ಬಳಸಬಹುದು. ಬಹುತೇಕವಾಗಿ ಟ್ವೀಟರ್ (ಹೆಚ್ಚು ಆವರ್ತನದ ಶಬ್ದ ಪ್ರಸರಿಸುವ ಧ್ವನಿವರ್ಧಕ)ಗಳಂತೆ ಬಳಸಬಹುದು. ಈ ತರಹದ ಸಾಧ್ಯತೆಗಳು ಬಹಳ ಕಡಿಮೆ. ಏಕೆಂದರೆ, ಸ್ಪೀಕರ್ ಉಪಕರಣಗಳು ಸಾಮಾನ್ಯವಾಗಿ ನಿರ್ವಹಿಸುವ ಶಕ್ತಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ಮೈಕ್ರೊಫೋನ್‌ಗಳಿಗಿಲ್ಲ. ಈ ಪ್ರಕಾರದ ಅಳವಡಿಕೆಗೆ ಉದಾಹರಣೆಯೆಂದರೆ, STC ಮೈಕ್ರೊಫೋನ್ ನಿಂದ ಉತ್ಪನ್ನವಾದ 4001 ಸೂಪರ್ ಟ್ವೀಟರ್. 1960 ರ ದಶಕದಿಂದ -70 ರ ದಶಕದ ಮಧ್ಯದವರೆಗೆ, ಇದನ್ನು ಅನೇಕ ಉತ್ತಮ ಗುಣಮಟ್ಟದ ಲೌಡ್ ಸ್ಪೀಕರ್ ಸಿಸ್ಟಮ್ ಗಳಲ್ಲಿ ಯಶಸ್ವಿಯಾಗಿ ಬಳಸಲಾಯಿತು. ಈ ರೀತಿಯ ಬಳಕೆಗೆ ಉತ್ತಮ ಉದಾಹರಣೆಯೆಂದರೆ, ಬೋವರ್ಸ್ & ವಿಲ್ಕಿನ್ಸ್ DM2a ಮಾದರಿ.

ಕ್ಯಾಪ್ಸುಲ್ ವಿನ್ಯಾಸ ಮತ್ತು ನಿರ್ದಿಷ್ಟ ದಿಕ್ಕು[ಬದಲಾಯಿಸಿ]

ನಿರ್ದೇಶನ ಅಥವಾ ಸೂಚನೆ ನೀಡುವಲ್ಲಿ ಒಂದು ಮೈಕ್ರೊಫೋನ್ ನ ಒಳಗಿನ ಅಂಶಗಳು ಒಂದು ದಿಕ್ಕಿನ ವ್ಯತ್ಯಾಸದಲ್ಲಿ ಮುಖ್ಯ ಮೂಲವಾಗಿರುತ್ತದೆ. ಒಂದು ಪ್ರೆಶರ್ ಮೈಕ್ರೊಫೋನ್ ಧ್ವನಿಫಲಕವನ್ನು ನಿಗದಿಪಡಿಸಿದ ಗಾಳಿಯ ಆಂತರಿಕ ಪ್ರಮಾಣ ಮತ್ತು ವಾತಾವರಣದ ನಡುವೆ ಬಳಸುತ್ತದೆ. ನಂತರ, ಎಲ್ಲ ದಿಕ್ಕಿನಿಂದ ಬರುವ ಒತ್ತಡಕ್ಕೆ ಸಮಾನವಾಗಿ ಪ್ರತಿಕ್ರಿಯಿಸುತ್ತದೆ. ಆದ್ದರಿಂದಲೇ ಅದನ್ನು ಸರ್ವಸೂಚಕ ಅಥವಾ ಓಮ್ನಿಡೈರೆಕ್ಷನಲ್ (ಎಲ್ಲ ಕಡೆಗೂ ಪ್ರತಿಕ್ರಿಯಿಸುವ)ಎಂದು ಕರೆಯುತ್ತಾರೆ. ಪ್ರೆಶರ್-ಗ್ರೇಡಿಯಂಟ್ ಮೈಕ್ರೊಫೋನ್ ಎರಡೂ ಕಡೆಗಳಲ್ಲಿ ಅರ್ಧ ತೆರೆದುಕೊಂಡ ಧ್ವನಿಫಲಕಗಳನ್ನು ಬಳಸುತ್ತದೆ. ಎರಡೂ ಕಡೆಗಳಿಂದ ಬರುವ ಒತ್ತಡದ ವ್ಯತ್ಯಾಸವು ದಿಕ್ಕು ಸಂವೇದಿ ಗುಣಗಳನ್ನು ಉತ್ಪಾದಿಸುತ್ತದೆ. ಇತರ ಅಂಶಗಳು, ಅಂದರೆ ಮೈಕ್ರೊಫೋನ್ ನ ಹೊರಗಿನ ಆಕೃತಿ ಮತ್ತು ಹೊರಗಿರುವ ಉಪಕರಣಗಳಾದ ವ್ಯತಿಕರಣ(ಇಂಟರ್‌ಫೆರೆನ್ಸ್) ಟ್ಯೂಬ್‌ಗಳು ಸಹ ಮೈಕ್ರೊಫೋನ್ ನ ದಿಕ್ಕಿನ ಪ್ರತಿಕ್ರಿಯೆಯನ್ನು ಬದಲಾಯಿಸಬಲ್ಲವು. ಪೂರ್ತಿಯಾಗಿ ಪ್ರೆಶರ್ ಗ್ರೇಡಿಯಂಟ್ ಮೈಕ್ರೊಫೋನ್ ಮುಂದೆ ಮತ್ತು ಹಿಂದೆ ಬರುವ ಶಬ್ದಕ್ಕೆ ಸ್ಪಂದಿಸುತ್ತದೆ. ಆದರೆ, ಪಕ್ಕದಿಂದ ಬರುವ ಶಬ್ದದ ಪ್ರತಿ ಯಾವ ಸಂವೇದನೆಯನ್ನೂ ತೋರುವುದಿಲ್ಲ. ಏಕೆಂದರೆ, ಅದೇ ಸಮಯಕ್ಕೆ ಹಿಂದೆ ಮತ್ತು ಮುಂದೆ ಬರುವ ಶಬ್ದವು, ಅವೆರಡರ ನಡುವೆ ಯಾವುದೇ ಪ್ರಮಾಣದ ವ್ಯತ್ಯಾಸ ದರ ಸೃಷ್ಟಿಸಲು ಆಗುವುದಿಲ್ಲ. ಒಂದು ಸಂಪೂರ್ಣ ಒತ್ತಡ ಗ್ರೇಡಿಯಂಟ್ ಮೈಕ್ರೊಫೋನ್ ದಿಕ್ಕಿನ ನಮೂನೆಯು ಫಿಗರ್-8 ನಂತೆ ಇರುತ್ತದೆ. ಇತರ ಧ್ರುವೀಯ ನಮೂನೆಗಳನ್ನು ಈ ಎರಡು ಪರಿಣಾಮಗಳನ್ನು ಬೇರೆ ರೀತಿಯಲ್ಲಿ ಜೋಡಿಸುವ ಒಂದು ಕ್ಯಾಪ್ಸುಲ್ ನ್ನು ತಯಾರಿಸುವ ಮೂಲಕ ಪಡೆದುಕೊಳ್ಳಬಹುದು. ಉದಾಹರಣೆಗೆ, ಕಾರ್ಡಿಆಯಿಡ್ ನಲ್ಲಿ ಸ್ವಲ್ಪ ಮುಚ್ಚಿದ ಹಿಂಭಾಗವಿರುತ್ತದೆ. ಹೀಗಾಗಿ, ಅದರ ಪ್ರತಿಕ್ರಿಯೆಯು ಒತ್ತಡದ ಸಂಯೋಜನೆ ಮತ್ತು ಒತ್ತಡ ವ್ಯತ್ಯಾಸ ದರ ವೈಶಿಷ್ಟ್ಯಗಳಾಗಿರುತ್ತವೆ.[೧೨]

ಮೈಕ್ರೊಫೋನ್ ಧ್ರುವೀಯ ನಮೂನೆಗಳು[ಬದಲಾಯಿಸಿ]

(ಧ್ವನಿಫಲಕದ ಪುಟದ ಮೇಲ್ಭಾಗದ ಕಡೆಗೆ ಇರುವ ಮೈಕ್ರೊಫೋನ್, ಪುಟಕ್ಕೆ ಸಮಾನಂತರವಾಗಿದೆ):

ಒಂದು ಮೈಕ್ರೊಫೋನ್‌ನ ನಿರ್ದಿಷ್ಟ ದಿಕ್ಕು ಅಥವಾ ಧ್ರುವೀಯ ನಮೂನೆಯಿಂದ ತಿಳಿಯುವ ವಿಷಯವೆಂದರೆ, ಅದರ ಕೇಂದ್ರ ಅಕ್ಷದ ಹತ್ತಿರ, ಬೇರೆ ಬೇರೆ ಕೋನಗಳಿಂದ ಬರುವ ಶಬ್ದಗಳು ಎಷ್ಟು ಸಂವೇದನಶೀಲವಾಗಿದೆ (ಸೆನ್ಸಿಟಿವ್) ಎಂಬುದನ್ನು ಸೂಚಿಸುತ್ತದೆ. ಮೇಲಿನ ಚಿತ್ರಗಳಲ್ಲಿ ತೋರಿಸಲಾಗಿರುವ ಧ್ರುವೀಯ ನಮೂನೆಗಳು ಬಿಂದುಗಳಸ್ಥಾನವನ್ನು ಪ್ರತಿನಿಧಿಸುತ್ತವೆ. ಅದೇ ಬಿಂದುವಿನಿಂದ ಗೊತ್ತಾದಶಬ್ದ ಒತ್ತಡದ ಹಂತ (ಸೌಂಡ್ ಪ್ರೆಶರ್ ಲೆವಲ್) ಉತ್ಪನ್ನವಾದರೆ, ಮೈಕ್ರೊಫೋನ್ ನಲ್ಲಿ ಒಂದೇ ತರಹದ ಸಂಕೇತ ಮಟ್ಟದ ಔಟ್‌ಪುಟ್ ಉತ್ಪಾದಿಸುತ್ತದೆ. ಧ್ವನಿಫಲಕಗಳಿಗೆ ಸಂಬಂಧಿಸಿದಂತೆ ಮೈಕ್ರೋಫೋನ್ ಬೌತಿಕ ಆಕಾರವು ಗೊತ್ತಾದ ದಿಕ್ಕಿನಲ್ಲಿರುವುದು ಮೈಕ್ರೊಫೋನ್‌ನ ವಿನ್ಯಾಸದ ಮೇಲೆ ಅವಲಂಬಿತವಾಗಿದೆ. ಒಕ್ಟಾವ(ಮೇಲೆ ತೋರಿಸಿದ ಚಿತ್ರ) ದಂತೆ ದೊಡ್ಡ ಮೆಂಬ್ರೇನ್ ಹೊಂದಿರುವ ಮೈಕ್ರೊಫೋನ್‌ಗಳಿಗೆ, ಧ್ರುವೀಯ ಚಿತ್ರದಲ್ಲಿ ಮೇಲ್ಮುಖ ದಿಕ್ಕು ಮೈಕ್ರೊಫೋನ್‌ಗೆ ಲಂಬರೇಖೆಯ ಸ್ಥಿತಿಯಲ್ಲಿದೆ. ಇದನ್ನು "ಸೈಡ್ ಫಾಯರ್" ಅಥವಾ "ಸೈಡ್ ಅಡ್ರೆಸ್" ಎನ್ನುತ್ತಾರೆ. ಸಣ್ಣ ಧ್ವನಿಫಲಕ ಹೊಂದಿರುವ ಮೈಕ್ರೊಫೋನ್‌ಗಳು, ಅಂದರೆ ಶ್ಯೂರ್ (ಮೇಲಿನ ಚಿತ್ರ ನೋಡಿ) ಗಳ ವಿಷಯದಲ್ಲಿ, ಅದು ಸಾಮಾನ್ಯವಾಗಿ ಮೈಕ್ರೊಫೋನ್ ನ ಅಕ್ಷದಿಂದ ವಿಸ್ತರಿಸಿಕೊಳ್ಳುತ್ತದೆ. ಇದನ್ನು "ಎಂಡ್ ಫಾಯರ್" ಅಥವಾ "ಟಾಪ್/ಎಂಡ್ ಅಡ್ರೆಸ್" ಎಂದು ಕರೆಯುತ್ತಾರೆ.

ಈ ಧ್ರುವೀಯ ನಮೂನೆಯನ್ನು ಸೃಷ್ಟಿಸಲು ಕೆಲವು ಮೈಕ್ರೊಫೋನ್ ವಿನ್ಯಾಸಗಳು ಅನೇಕ ಸಿದ್ಧಾಂತಗಳನ್ನು ಒಟ್ಟುಗೂಡಿಸುತ್ತವೆ. ಇದು ಹೌಸಿಂಗ್ ನಿಂದಾಗುವ ಶೀಲ್ಡಿಂಗ್ (ಅಂದರೆ, ವಿವರ್ತನೆ/ಚೆದುರುವಿಕೆ/ಅವಶೋಷಣ)ದಿಂದ ಹಿಡಿದು ವಿದ್ಯುನ್ಮಾನವಾಗಿ ಎರಡು ಮೆಂಬ್ರೇನ್‌ಗಳನ್ನು ಜೋಡಿಸುವುದರ ವರೆಗೆ ತನ್ನ ವಿಸ್ತಾರ ಹೊಂದಿದೆ.

ಓಮ್ನಿಡೈರೆಕ್ಷನಲ್ (ಬಹುದಿಕ್ಕು ಸಂವೇದಿ)[ಬದಲಾಯಿಸಿ]

ಒಂದು ಓಮ್ನಿಡೈರೆಕ್ಷನಲ್(ಅಥವಾ ದಿಕ್ಕುರಹಿತ) ಮೈಕ್ರೋಫೋನ್ ನ ಪ್ರತಿಕ್ರಿಯೆಯು ಸಾಮಾನ್ಯವಾಗಿ ಮೂರು ಆಯಾಮಗಳಲ್ಲಿ ಒಂದು ಪರಿಪೂರ್ಣ ವೃತ್ತವಾಗಿರುತ್ತದೆ. ವಾಸ್ತವಿಕ ಜಗತ್ತಿನಲ್ಲಿ ಈ ರೀತಿಯಾಗಿ ನಡೆಯುವುದಿಲ್ಲ. ನಿರ್ದಿಷ್ಟ ದಿಕ್ಕಿನ ಮೈಕ್ರೊಫೋನ್‌ಗಳಂತೆಯೇ, ಒಂದು “ಓಮ್ನಿಡೈರೆಕ್ಷನಲ್” ಗಾಗಿ ಇರುವ ಧ್ರುವೀಯು ನಮೂನೆಯು ಆವರ್ತನದ ಕ್ರಿಯೆಯಾಗಿದೆ. ಮೈಕ್ರೊಫೋನ್ ಆಕಾರವು ಪರಿಮಿತಿ ಇಲ್ಲದಷ್ಟು ಚಿಕ್ಕದಾಗಿರುವುದಿಲ್ಲ. ಇದರ ಪರಿಣಾಮವಾಗಿ ಹಿಂಭಾಗದಿಂದ ಬರುವ ಶಬ್ದಗಳಿಗೆ ಸಂಬಂಧಿಸಿದಂತೆ ತನ್ನದೇ ದಾರಿಯಲ್ಲಿ ಉಪಕ್ರಮಿಸುತ್ತದೆ.ಇದರಿಂದಾಗಿ ಧ್ರುವೀಯ ಪ್ರತಿಕ್ರಿಯೆಯು ಸ್ವಲ್ಪ ದುರ್ಬಲಗೊಳ್ಳುವ ಸಾಧ್ಯತೆ ಇದೆ. ಮೈಕ್ರೊಫೋನ್ ನ ವ್ಯಾಸ (ಅದು ಸಿಲಿಂಡರ್ ಆಕಾರದಲ್ಲಿದೆ ಎಂದು ಊಹಿಸಿ)ವು ಆವರ್ತನದ ತರಾಂಗಂತರವನ್ನು ಮುಟ್ಟಿದಾಗ ಈ ರೀತಿಯ ದುರ್ಬಲತೆಯು ಹೆಚ್ಚುತ್ತದೆ. ಆದ್ದರಿಂದ, ಅತ್ಯಂತ ಚಿಕ್ಕ ವ್ಯಾಸ ಹೊಂದಿದ ಮೈಕ್ರೊಫೋನ್ ಅತಿ ಹೆಚ್ಚು ಆವರ್ತನಗಳಲ್ಲಿ ಶ್ರೇಷ್ಠ ಓಮ್ನಿಡೈರೆಕ್ಷನಲ್ ಲಕ್ಷಣಗಳನ್ನು ತೋರಿಸುತ್ತದೆ.

10 kHz ಯಲ್ಲಿ ಶಬ್ದದ ತರಂಗಾಂತರವು ಒಂದು ಅಂಗುಲಕ್ಕಿಂತ ಗಿಂತ ಸ್ವಲ್ಪ ಹೆಚ್ಚು(3.4 cm) ಇರುತ್ತದೆ. ಹೀಗಾಗಿ, ಅತ್ಯಂತ ಚಿಕ್ಕ ಅಳತೆಯ ಮೈಕ್ರೊಫೋನ್‌ಗಳು ಹೆಚ್ಚಾಗಿ 1/4"(6mm)ದಷ್ಟು ವ್ಯಾಸ ಹೊಂದಿದ್ದು, ಪ್ರಾಯೋಗಿಕವಾಗಿ ಇದು ಅತ್ಯಂತ ಹೆಚ್ಚಿನ ಆವರ್ತನಗಳಲ್ಲಿಯೂ ನಿರ್ದಿಷ್ಟ ದಿಕ್ಕನ್ನು ನಿವಾರಿಸುತ್ತದೆ. ಓಮ್ನಿಡೈರೆಕ್ಷನಲ್ ಮೈಕ್ರೊಫೋನ್‌ಗಳು ಕಾರ್ಡಿಆಯಿಡ್‌ಗಿಂತ ಭಿನ್ನವಾಗಿ ಚಟುವಟಿಕೆಯಲ್ಲಿ ತಡವಾಗುವ ಕಾರಣ ಅವು ಅನುರಣಕ(ರೆಸೋನಂಟ್) ಕ್ಯಾವಿಟಿಗಳನ್ನು ಬಳಸುವುದಿಲ್ಲ. ಹಾಗಾಗಿ ಅವುಗಳನ್ನು ಕಡಿಮೆ ವರ್ಣವಿನ್ಯಾಸ ವಿಷಯದಲ್ಲಿ ತುಂಬಾ ಶುದ್ಧ ಮೈಕ್ರೊಫೋನ್‌ಗಳೆಂದು ಪರಿಗಣಿಸಬಹುದು. ಮೂಲ ಶಬ್ದಕ್ಕೆ ಇವು ಬಹಳ ಕಡಿಮೆ ಕೊಡುಗೆಯನ್ನು ಕೊಡುತ್ತವೆ. ಒತ್ತಡ ಸಂವೆದಿಯಾಗಿರುವ (ಪ್ರೆಶರ್ ಸೆನ್ಸಿಟಿವ್)ಈ ಮೈಕ್ರೊಫೋನ್‌ಗಳು 20 Hz ಅಥವಾ ಅದಕ್ಕಿಂತ ಕೆಳಮಟ್ಟದ, ದುರ್ಬಲವಾದ ಕಡಿಮೆ ಆವರ್ತನ ಪ್ರತಿಕ್ರಿಯೆಯನ್ನು ಸಹ ಹೊಂದಿರಬಹುದು. ಒತ್ತಡ ಸಂವೇದಿ ಮೈಕ್ರೊಫೋನ್‌ಗಳು ಗಾಳಿಯ ಅತಿಯಾದ ಶಬ್ದಕ್ಕೆ ವೇಗ ಸಂವೇದಿ ಮೈಕ್ರೊಫೋನ್‌ಗಳಿಗಿಂತ ಅತಿ ಕಡಿಮೆ ಪ್ರತಿಕ್ರಿಯಿಸುತ್ತವೆ.

ದಿಕ್ಕುರಹಿತ ಮೈಕ್ರೊಫೋನ್ ಗೆ ಒಂದು ಉದಾಹರಣೆಯೆಂದರೆ, ದುಂಡನೆಯ ಕಪ್ಪಾದ ಏಟ್ ಬಾಲ್ .[೧೩]

ಯುನಿಡೈರೆಕ್ಷನಲ್[ಬದಲಾಯಿಸಿ]

ಒಂದು ಯುನಿಡೈರೆಕ್ಷನಲ್ ಮೈಕ್ರೊಫೋನ್ ಕೇವಲ ಒಂದೇ ದಿಕ್ಕಿನಿಂದ ಬರುವ ಶಬ್ದಕ್ಕೆ ಸ್ಪಂದಿಸುತ್ತದೆ. ಮೇಲೆ ತೋರಿಸಲಾದ ಧ್ವನಿಫಲಕದ ಚಿತ್ರವು ಈ ನಮೂನೆಗಳನ್ನು ತೋರಿಸುತ್ತದೆ. ಮೈಕ್ರೊಫೋನ್ ಪ್ರತಿಯೊಂದು ಚಿತ್ರದಲ್ಲಿ ಮೇಲ್ಮುಖವಾಗಿರುವುದು ಕಾಣುತ್ತದೆ. ಒಂದು ನಿರ್ದಿಷ್ಟವಾದ ಆವರ್ತನಕ್ಕಾಗಿ ಶಬ್ದದ ತೀವ್ರತೆಯನ್ನು 0 ಯಿಂದ 360° ವರೆಗಿನ ಕೋನಗಳನ್ನು ತ್ರಿಜ್ಯಾಕಾರವಾಗಿ ಅಳವಡಿಸಲಾಗಿರುತ್ತದೆ. (ವೃತ್ತಿಪರ ರೇಖಾಚಿತ್ರಗಳು ಈ ಮಾಪನಗಳನ್ನು ತೋರಿಸುತ್ತವೆ ಮತ್ತು ಬೇರೆ ಬೇರೆ ಆವರ್ತನಗಳಲ್ಲಿ ವಿವಿಧ ಯೋಜನೆಗಳನ್ನು ಅಥವಾ ವಿನ್ಯಾಸಗಳನ್ನು ಒಳಗೊಂಡಿರುತ್ತವೆ. ಇಲ್ಲಿ ತೋರಿಸಲಾಗಿರುವ ಚಿತ್ರಗಳು ಕೇವಲ ವಿಶಿಷ್ಟ ನಮೂನೆ ಆಕಾರಗಳನ್ನು ಮತ್ತು ಅವುಗಳ ಹೆಸರುಗಳನ್ನು ಕುರಿತು ಮೇಲ್ನೋಟ ಒದಗಿಸುತ್ತವೆ.)

ಕಾರ್ಡಿಆಯಿಡ್ ಗಳು[ಬದಲಾಯಿಸಿ]

US664A ಯುನಿವರ್ಸಿಟಿ ಸೌಂಡ್ ಡೈನಾಮಿಕ್ ಸೂಪರ್ ಕಾರ್ಡಿಆಯಿಡ್ ಮೈಕ್ರೊಫೋನ್

ಅತ್ಯಂತ ಸಾಮಾನ್ಯವಾದ ಮೈಕ್ರೊಫೋನ್ ಎಂದರೆ ಕಾರ್ಡಿಯಾಯ್ಡ್ ಮೈಕ್ರೊಫೋನ್ ಆಗಿದೆ. ಅದನ್ನು ಆ ರೀತಿ ಕರೆಯಲು ಕಾರಣ, ಅದರ ಸಂವೇದನೆಯ ನಮೂನೆಯು (ಸೆನ್ಸಿಟಿವಿಟಿ ಪ್ಯಾಟರ್ನ್) ಹೃದಯದ ಆಕಾರದಲ್ಲಿದೆ. ಹೈಪರ್-ಕಾರ್ಡಿಯಾಯ್ಡ್ ಮೈಕ್ರೊಫೋನ್ ಕೂಡ ಇದೆ ರೀತಿ ಇರುತ್ತದೆ. ಆದರೆ ಇದರಲ್ಲಿ ಮುಂಭಾಗದ ಸಂವೇದನೆಯ ಬಿಗಿಯಾದ ಕ್ಷೇತ್ರ ಮತ್ತು ಹಿಂಭಾಗದ ಸಂವೇದನೆಯ ಸಣ್ಣದಾದ ಲೋಬ್ ಇರುತ್ತವೆ. ಸೂಪರ್-ಕಾರ್ಡಿಆಯಿಡ್ ಮೈಕ್ರೊಫೋನ್ ಹೈಪರ್-ಕಾರ್ಡಿಆಯಿಡ್‌ನ್ನು ಹೋಲುತ್ತದೆ. ಆದರೆ, ಅದರಲ್ಲಿ ಮುಭಾಗದ ಪಿಕಪ್ ಜಾಸ್ತಿಯಾಗಿದ್ದು, ಹಿಂಭಾಗದ ಪಿಕಪ್ ಕಡಿಮೆಯಿರುತ್ತದೆ. ಈ ಮೂರು ನಮೂನೆಗಳು ವೋಕಲ್ (ಧ್ವನಿಗೆ ಸಂಬಂಧಿಸಿದಂತೆ)ಅಥವಾ ಮಾತನಾಡಲು ಬಳಸುವ (ಸ್ಪೀಚ್)ಮೈಕ್ರೊಫೋನ್‌ಗಳಾಗಿ ಬಳಸಲ್ಪಡುತ್ತವೆ. ಏಕೆಂದರೆ, ಇವುಗಳು ಬೇರೆ ಕಡೆಯಿಂದ ಬರುವ ಶಬ್ದಗಳನ್ನು ತಿರಸ್ಕರಿಸುವುದಕ್ಕೆ ಉತ್ತಮವಾಗಿರುತ್ತವೆ.

ಕಾರ್ಡಿಆಯಿಡ್ ಮೈಕ್ರೊಫೋನ್ ಓಮ್ನಿಡೈರೆಕ್ಷನಲ್ ಮತ್ತು ಫಿಗರ್-8 ಮೈಕ್ರೊಫೋನ್ ಗಿಂತಲೂ ಅತ್ಯುತ್ತಮವಾದ ಸ್ಥಾನದಲ್ಲಿದೆ. ಹಿಂಭಾಗದಿಂದ ಬರುವ ಶಬ್ದದ ಅಲೆಗಳಿಗಾಗಿ, ಫಿಗರ್-8 ನ ನಕಾರಾತ್ಮಕ ಸಂಕೇತವು ಓಮ್ನಿಡೈರೆಕ್ಷನಲ್ ಉಪಕರಣದ ಸಕಾರಾತ್ಮಕ ಸಂಕೇತವನ್ನು ರದ್ದುಮಾಡುತ್ತದೆ.ಆದರೆ ಮುಂದಿನಿಂದ ಬರುವ ಶಬ್ದದ ತರಂಗಗಳ ವಿಷಯದಲ್ಲಿ ಇವೆರಡೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹೈಪರ್ ಕಾರ್ಡಿಆಯಿಡ್ ಮೈಕ್ರೋಫೋನ್ ಕೂಡ ಇದೇ ರೀತಿ ಇರುತ್ತದೆ. ಆದರೆ ಅದರಲ್ಲಿ ಫಿಗರ್-8 ಕೊಡುಗೆ ಸ್ವಲ್ಪ ಜಾಸ್ತಿಯಿರುತ್ತದೆ. ಪ್ರೆಶರ್ ಗ್ರೇಡಿಯಂಟ್ ಸಂಜ್ಞಾಪರಿವರ್ತಕ ಮೈಕ್ರೊಫೋನ್‌ಗಳು ದಿಕ್ಕು ಸಂವೇದಿ ಆಗಿರುವುದರಿಂದ, ಇವುಗಳನ್ನು ಶಬ್ದದ ಮೂಲಕ್ಕೆ ಅತೀ ಸಮೀಪದಲ್ಲಿ (ಕೆಲವೇ ಕೆಲವು ಸೆಂಟಿಮೀಟರ್ ಗಳಷ್ಟು ದೂರದಲ್ಲಿ)ಇಡುವುದರಿಂದ ಅದು ಬ್ಯಾಸ್ ಬೂಸ್ಟ್ ಆಗಿ ಪರಿಣಮಿಸುತ್ತದೆ. ಇದನ್ನು ಸಾಮೀಪ್ಯದ ಪರಿಣಾಮಎಂದು ಕರೆಯುತ್ತಾರೆ.[೧೪]

ಬೈ-ಡೈರೆಕ್ಷನಲ್[ಬದಲಾಯಿಸಿ]

"ಫಿಗರ್ 8" ಅಥವಾ ಬೈ-ಡೈರೆಕ್ಷನಲ್ ಮೈಕ್ರೊಫೋನ್‌ಗಳು ಉಪಕರಣದ ಹಿಂಭಾಗ ಮತ್ತು ಮುಂಭಾಗದಿಂದ ಶಬ್ದವನ್ನು(ಸೌಂಡ್) ಸ್ವೀಕರಿಸುತ್ತವೆ. ಹೆಚ್ಚು ರಿಬನ್ ಮೈಕ್ರೊಫೋನ್‌ಗಳು ಈ ನಮೂನೆಯನ್ನು ಹೊಂದಿವೆ.

ಶಾಟ್ ಗನ್[ಬದಲಾಯಿಸಿ]

ಆಡಿಯೊ-ಟೆಕ್ನಿಕಾ ಶಾಟ್ ಗನ್ ಮೈಕ್ರೊಫೋನ್

ಶಾಟ್ ಗನ್ ಮೈಕ್ರೊಫೋನ್‌ಗಳು ಅತ್ಯಂತ ಹೆಚ್ಚು ದಿಕ್ಕು ಸಂವೇದಿ ಆಗಿವೆ. ಇವುಗಳಲ್ಲಿ ಸಂವೇದನೆಗಾಗಿ (ಸೆನ್ಸಿಟಿವಿಟಿ)ಎಡಕ್ಕೆ, ಬಲಕ್ಕೆ ಮತ್ತು ಹಿಂಭಾಗದಲ್ಲಿ ಸಣ್ಣ ಲೋಬ್ ಗಳಿವೆ. ಆದರೆ, ಪಕ್ಕಕ್ಕೆ ಮತ್ತು ಹಿಂಭಾಗಕ್ಕೆ ಇವುಗಳ ಸಂವೇದನೆಯ ಸಾಮರ್ಥ್ಯವು ಇತರ ದಿಕ್ಕುಸಂವೇದಿ ಮೈಕ್ರೊಫೋನ್‌ಗಳಿಗಿಂತ ಕಡಿಮೆ ಇದೆ. ಈ ರೀತಿಯಾಗಲು ಕಾರಣ, ಬದಿಗಳಲ್ಲಿ ಕೊರೆಯಲಾಗಿರುವ ಸೀಳುಗಂಡಿಗಳೊಂದಿಗೆ ಟ್ಯೂಬ್‌ನ ಕೊನೆಯಲ್ಲಿ ಉಪಕರಣವನ್ನು ಜೋಡಿಸಲಾಗಿರುತ್ತದೆ. ತರಂಗ ರದ್ದಾಗುವಿಕೆಯು ಬಹುತೇಕ ಅಕ್ಷದಿಂದ ದೂರದ ಶಬ್ದವನ್ನು ನಿವಾರಿಸುತ್ತದೆ. ಸಂವೇದನ ಕ್ಷೇತ್ರದ(ಸೆನ್ಸಿಟಿವಿಟಿ ಏರಿಯಾ) ಸಂಕುಚಿತತೆಯಿಂದ ಶಾಟ್ ಗನ್ ಮೈಕ್ರೊಫೋನ್‌ಗಳನ್ನು ಟೆಲಿವಿಷನ್, ಸಿನೆಮಾ ಸೆಟ್‌ಗಳಲ್ಲಿ, ಸ್ಟೇಡಿಯಮ್‌ಗಳಲ್ಲಿ ಮತ್ತು ವನ್ಯಜೀವಿಗಳ ಕ್ಷೇತ್ರ ರೆಕಾರ್ಡಿಂಗ್ ಮಾಡಿಕೊಳ್ಳಲು ಬಳಸಲಾಗುತ್ತವೆ.

ಬೌಂಡರಿ ಅಥವಾ "PZM"[ಬದಲಾಯಿಸಿ]

ಮಾದರಿಗಿಂತ ಕಡಿಮೆ ಧ್ವನಿತರಂಗ ಸ್ಥಳಗಳಲ್ಲಿ ಮೈಕ್ರೋಫೋನ್ ಪರಿಣಾಮಕಾರಿಯಾಗಿ ಬಳಸಲು ಅನೇಕ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸ್ಥಳದ ಒಂದಕ್ಕಿಂತ ಹೆಚ್ಚು ಮೇಲ್ಮೈಗಳಿಂದ(ಎಲ್ಲೆ)ಇವು ಹೆಚ್ಚಿನ ಪ್ರತಿಬಿಂಬಗಳಿಂದ ಬಾಧಿಸುತ್ತದೆ. ಒಂದು ವೇಳೆ ಮೈಕ್ರೊಫೋನ್ ನ್ನು ಈ ಎಲ್ಲೆಗಳಲ್ಲಿ ಒಂದರ ಮುಂದೆ ಅಥವಾ ಅದರ ಸಮೀಪ ಇರಿಸಿದರೆ, ಆ ಮೇಲ್ಮೈ ನಿಂದ ಬರುವ ಪ್ರತಿಫಲನಗಳನ್ನು ಮೈಕ್ರೊಫೋನ್ ನಿಂದ ಸಂವೇದನೆ ಸಾಧ್ಯವಾಗುವುದಿಲ್ಲ. ಮುಂಚೆ, ಒಂದು ಸಾಮಾನ್ಯ ಮೈಕ್ರೊಫೋನ್‌ನ್ನು ಮೇಲ್ಮೈ (ಸರ್ಫೇಸ್)ಪಕ್ಕಕ್ಕೆ ಇಡಲಾಗುತ್ತಿತ್ತು ಮತ್ತು ಕೆಲವು ಸಲ ಧ್ವನಿತರಂಗ ಪಾರದರ್ಶಕವಾದ ಫೋಮ್‌ನ ಒಂದು ಬ್ಲಾಕ್‌ನಲ್ಲಿ ಇಡಲಾಗುತ್ತಿತ್ತು. ಧ್ವನಿಫಲಕವನ್ನು ಎಲ್ಲೆಗೆ ಎದುರಾಗಿ ಮತ್ತು ಸಮಾನಾಂತರವಾಗಿ ಇಡುವ ಸಿದ್ಧಾಂತವನ್ನು ಅಭಿವೃದ್ಧಿ ಪಡಿಸಿದವರು ಸೌಂಡ್ ಇಂಜಿನಿಯರ್‌ಗಳಾದ ಎಡ್ ಲಾಂಗ್ ಮತ್ತು ರಾನ್ ವಿಕರ್ಷಾಮ್.[೧೫] ಪೇಟೆಂಟ್ ಅವಧಿ ಮುಗಿದಿದ್ದರೂ "ಫ್ರೆಶರ್ ಝೋನ್ ಮೈಕ್ರೋಫೋನ್" ಮತ್ತು "PZM" ಗಳು ಇಂದಿಗೂ ಸಹ ಕ್ರೌನ್ ಇಂಟರ್‌ನ್ಯಾಷನಲ್ ನ ವ್ಯಾಪಾರ ಮುದ್ರೆಗಳಾಗಿ ಬಳಕೆಯಲ್ಲಿವೆ. ಅಲ್ಲದೆ ಈ ಪ್ರಕಾರಕ್ಕೆ ಹೊಂದುವ "ಬೌಂಡರಿ ಮೈಕ್ರೊಫೋನ್" ಎಂಬ ಹೆಸರು ಕೂಡ ಪ್ರಾಮುಖ್ಯತೆ ಪಡೆದಿದೆ. ಒಂದು ಬೌಂಡರಿ ಮೈಕ್ರೊಫೋನ್ ನ್ನು ಪ್ರಾರಂಭದಲ್ಲಿ ಓಮ್ನಿಡೈರೆಕ್ಷನಲ್ ಉಪಕರಣವನ್ನು ಬಳಸಿಕೊಂಡು ಪ್ರಯೋಗಕ್ಕೆ ತರಲಾಯಿತು. ಅದೇ ರೀತಿಯಾಗಿ ಒಂದು ದಿಕ್ಕುಸಂವೇದಿ ಮೈಕ್ರೊಫೋನ್ ನ್ನು ಮೇಲ್ಮೈಗೆ ಸಾಕಷ್ಟು ಹತ್ತಿರ ತರುವುದರ ಮೂಲಕ ಈ ವಿಧಾನದ ಲಾಭಗಳನ್ನು ಪಡೆಯಬಹುದು. ಆಗ ಈ ಉಪಕರಣದ ದಿಕ್ಕುಸಂವೇದಿ ಗುಣಗಳನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ವಿಚಾರವನ್ನು ಆಧರಿಸಿದ ಕ್ರೌನ್ ವ್ಯಾಪಾರ ಮುದ್ರೆ ಎಂದರೆ "ಫೇಸ್ ಕೊಹೆರೆಂಟ್ ಕಾರ್ಡಿಯಾಯಿಡ್" ಅಥವಾ "PCC". ಇದೇ ತಂತ್ರವನ್ನು ಬಳಸಿಕೊಳ್ಳುವ ಇತರ ತಯಾರಕರೂ ಇದ್ದಾರೆ.

ಅಳವಡಿಕೆಯ ನಿರ್ದಿಷ್ಟ ವಿನ್ಯಾಸಗಳು[ಬದಲಾಯಿಸಿ]

ಒಂದು ಲಾವಲಿಯರ್ ಮೈಕ್ರೊಫೋನ್ ನ್ನು ಹ್ಯಾಂಡ್ಸ್-ಫ್ರೀ (ಕೈಗಳನ್ನು ಬಳಸದೆ)ಬಳಕೆಗಾಗಿ ತಯಾರಿಸಲಾಗಿದೆ. ಈ ಚಿಕ್ಕ ಮೈಕ್ರೊಫೋನ್‌ಗಳನ್ನು ದೇಹದ ಮೇಲೆ ಧರಿಸಬಹುದು. ಮುಂಚೆ, ಇವುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವಂತೆ ಮಾಡಲು ಕುತ್ತಿಗೆಯ ಸುತ್ತ ಲೇನ್ ಯರ್ಡ್ (ಕುತ್ತಿಗೆ ಸುತ್ತ ಹಾಕಿಕೊಳ್ಳುವ ಒಂದು ವಾಯರ್) ಮೂಲಕ ಧರಿಸುತ್ತಿದ್ದರು. ಹೆಚ್ಚಾಗಿ, ಇವುಗಳನ್ನು ಕ್ಲಿಪ್, ಪಿನ್, ಟೇಪ್ ಅಥವಾ ಮ್ಯಾಗ್ನೆಟ್ ಗಳ ಸಹಾಯದಿಂದ ಬಟ್ಟೆಗಳಿಗೆ ಕಟ್ಟಿಕೊಳ್ಳುತ್ತಾರೆ. ಲಾವಲಿಯರ್ ಕಾರ್ಡ್‌ನ್ನು ಬಟ್ಟೆಗಳೊಳಗೆ ಮುಚ್ಚಿಕೊಳ್ಳಬಹುದು. ನೀವು ಧರಿಸಿದ ಬೆಲ್ಟ್‌ಗೆ ಕ್ಲಿಪ್ ಹಾಕಿ ಜೋಡಿಸಿದ ಅಥವಾ ನಿಮ್ಮ ಜೇಬಿನಲ್ಲಿರುವ RF ಟ್ರಾನ್ಸ್‌ಮೀಟರ್‌ಗೆ ಜೋಡಿಸಲಾಗುತ್ತದೆ ಅಥವಾ ಬೆಲ್ಟ್‌ಗೆ ಕ್ಲಿಪ್‌ನಿಂದ ಭದ್ರಪಡಿಸಲಾಗುತ್ತದೆ(ಮೊಬೈಲ್ ಬಳಕೆಗಾಗಿ).ಅಥವಾ ನೇರವಾಗಿ ಮಿಕ್ಷರ್ (ಸ್ಟೇಷನರಿ ಬಳಕೆಗಳಿಗಾಗಿ)ಗೆ ಕಳಿಸಬಹುದು.

ಒಂದು ವೈರ್ ಲೆಸ್ ಮೈಕ್ರೊಫೋನ್ ಒಂದು ಕೇಬಲ್ ಮುಖಾಂತರ ಧ್ವನಿಯನ್ನು ಸಾಗಿಸುವುದರ ಬದಲು, ಆಡಿಯೋವನ್ನು ರೇಡಿಯೋ ಆಗಿ ಅಥವಾ ಆಪ್ಟಿಕಲ್ ಸಂಕೇತವಾಗಿ ರವಾನೆ ಮಾಡುತ್ತದೆ.( ಸಾಮಾನ್ಯವಾಗಿ ಅದು ಚಿಕ್ಕ FM ರೇಡಿಯೋ ಟ್ರಾನ್ಸ್‌ಮಿಟರ್ ಬಳಸಿಕೊಂಡು ಸೌಂಡ್ ಸಿಸ್ಟಮ್‌ಗೆ ಜೋಡಿಸಲಾಗಿರುವ ಸಮೀಪದ ರಿಸೀವರ್‌ಗೆ ಸಂಕೇತ ಕಳುಹಿಸುತ್ತದೆ. ಒಂದು ವೇಳೆ ಟ್ರಾನ್ಸ್‌ಮಿಟರ್ ಮತ್ತು ರಿಸೀವರ್‌ಗಳು ಒಂದಕ್ಕೊಂದು ಸಮೀಪದಲ್ಲಿದ್ದರೆ, ಅದು ಅವಕೆಂಪು ಬೆಳಕನ್ನು ಕೂಡ ಬಳಸಿಕೊಳ್ಳಬಹುದು.

ಕಾಂಟ್ಯಾಕ್ಟ್ ಮೈಕ್ರೊಫೋನ್ ಒಂದು ಗಟ್ಟಿಯಾದ ಮೇಲ್ಮೈ ಅಥವಾ ವಸ್ತುವಿನಿಂದ ಬರುವ ಕಂಪನಗಳನ್ನು ಸ್ವೀಕರಿಸುತ್ತದೆ. ಅಂದರೆ, ಈ ವಿಧಾನವು ಗಾಳಿಯ ಮೂಲಕ ತೆಗೆದುಕೊಂಡು ಹೋಗಲಾಗುವ ಶಬ್ದದ ಕಂಪನಗಳಿಗೆ (ಸೌಂಡ್ ವೈಬ್ರೆಶನ್ಸ್) ವಿರುದ್ಧವಾಗಿದೆ. ಇದರಿಂದಾಗುವ ಒಂದು ಪ್ರಯೋಜನವೆಂದರೆ, ಚಿಕ್ಕ ವಸ್ತುಗಳಿಂದ ಅಥವಾ ಕೀಟ ಗಳಿಂದ ಬರುವ ಕಡಿಮೆ ಮಟ್ಟದ ಧ್ವನಿಗಳನ್ನು ಗುರ್ತಿಸಬಹುದು. ಸಾಮಾನ್ಯವಾಗಿ ಮೈಕ್ರೊಫೋನ್ ನಲ್ಲಿ ಒಂದು ಆಯಸ್ಕಾಂತೀಯ (ಚಲಿಸುವ ಕಾಯಿಲ್)ಸಂಜ್ಞಾಪರಿವರ್ತಕ(ಟ್ರಾನ್ಸ್‌ಡ್ಯೂಸರ್) ಕಾಂಟ್ಯಾಕ್ಟ್ ಪ್ಲೇಟ್ ಮತ್ತು ಕಾಂಟ್ಯಾಕ್ಟ್ ಪಿನ್ ಇರುತ್ತವೆ. ಕಾಂಟ್ಯಾಕ್ಟ್ ಪ್ಲೇಟ್ ನ್ನು ಕಂಪನಗಳನ್ನು ಹೊರಡಿಸುವ ವಸ್ತುವಿಗೆ ಎದುರಾಗಿ ಇಡಲಾಗಿರುತ್ತದೆ. ಕಾಂಟ್ಯಾಕ್ಟ್‌ಪಿನ್ ಈ ಕಂಪನಗಳನ್ನು ಸಂಜ್ಞಾಪರಿವರ್ತಕದ ಸುರುಳಿಗೆ ಸ್ಥಳಾಂತರಿಸುತ್ತದೆ. ಕಾಂಟ್ಯಾಕ್ಟ್ ಮೈಕ್ರೊಫೋನ್‌ಗಳನ್ನು ಬಸವನ ಹುಳು (snail)ವಿನ ಹೃದಯ ಬಡಿತವನ್ನು ಕಂಡುಹಿಡಿಯಲು ಅಥವಾ ಕೇಳಲು ಮತ್ತು ಇರುವೆಗಳ ಹೆಜ್ಜೆಗಳ ಶಬ್ದ ಕೇಳಲು ಬಳಸಲಾಗಿದೆ. ಈ ಮೈಕ್ರೋಫೋನ್ ನ ಪೋರ್ಟೆಬಲ್ (ಸ್ಥಳದಿಂದ ಸ್ಥಳಕ್ಕೆ ಒಯ್ಯಲು ಅನುಕೂಲಕರವಾದ) ರೂಪವನ್ನು ಇತ್ತೀಚಿಗೆ ಅಭಿವೃದ್ಧಿ ಪಡಿಸಲಾಗಿದೆ. ಥ್ರೋಟ್ ಮೈಕ್ರೊಫೋನ್ (ಗಂಟಲಿನ ಮೈಕ್ರೊಫೋನ್) ಕಾಂಟ್ಯಾಕ್ಟ್ ಮೈಕ್ರೊಫೋನ್ ನ ಒಂದು ಪ್ರಕಾರವಾಗಿದೆ. ಗಂಟಲಿಗೆ ಬಿಗಿದಿರುವ ಇದು ಇದು ನೇರವಾಗಿ ಗಂಟಲಿನಿಂದ ಕೇಳಿಬರುವ ಮಾತುಗಳನ್ನು ಹಿಡಿದುಕೊಳ್ಳುತ್ತದೆ. ಆದ್ದರಿಂದ ಈ ಉಪಕರಣವನ್ನು ಸುತ್ತಲಿನ ಸ್ಥಳದ ಶಬ್ದಗಳು ಕೇಳುವ ಜಾಗದಲ್ಲಿ ಬಳಸಲಾಗುತ್ತದೆ. ಇಲ್ಲವಾದಲ್ಲಿ ಇದು ಸ್ಪೀಕರ್‌ಗೆ ಸರಿಯಾಗಿ ಕೇಳದಂತೆ ಮಾಡುತ್ತದೆ.

ಯಾವ ರೀತಿಯಾಗಿ ಒಂದು ಪ್ಯಾರಬಾಲಿಕ್ ಆಂಟೆನಾ (ಉದಾ: ಉಪಗ್ರಹ ಡಿಶ್)ರೇಡಿಯೋ ತರಂಗಗಳನ್ನು ಸಂಗ್ರಹಿಸುತ್ತದೆಯೋ, ಅದೇ ರೀತಿ ಒಂದು ಪ್ಯಾರಬಾಲಿಕ್ ಮೈಕ್ರೊಫೋನ್ ಪ್ಯಾರಬಾಲಿಕ್ ಪ್ರತಿಫಲಕವನ್ನು ಬಳಸಿ ಒಂದು ಮೈಕ್ರೊಫೋನ್‌ನ ರಿಸೀವರ್ ಮೇಲೆ ಧ್ವನಿ ತರಂಗಗಳನ್ನು ಸಂಗ್ರಹಿಸುತ್ತದೆ ಮತ್ತು ಕೆಂದ್ರೀಕರಿಸುತ್ತದೆ. ಮುಂಭಾಗ ಕೇಂದ್ರಿತ ಸಂವೇದನೆ ಮತ್ತು ಅನೇಕ ಮೀಟರ್ ಗಳಷ್ಟು ದೂರದ ಶಬ್ದಗಳನ್ನು ಗುರ್ತಿಸುವ ಸಾಮರ್ಥ್ಯವಿರುವ ಈ ಮೈಕ್ರೊಫೋನ್ ವಿಶಿಷ್ಟ ಉಪಯೋಗಗಳು ನಿಸರ್ಗದ ಧ್ವನಿಯನ್ನು ರೆಕಾರ್ಡ್ ಮಾಡಿಕೊಳ್ಳುವುದು, ಹೊರಾಂಗಣ ಕ್ರೀಡಾ ಸಮಾರಂಭಗಳನ್ನು ಸೆರೆಹಿಡಿಯಲು, ಈವ್ಸ್ ಡ್ರಾಪಿಂಗ್ (ಮಾತುಗಳನ್ನು ಕದ್ದಾಲಿಕೆ ಮಾಡಲು),ಲಾ ಎನ್ಫೋರ್ಸ್ ಮೆಂಟ್ (ಕಾನೂನು ಜಾರಿಗೆ ತರಲು)ಮತ್ತು ಎಸ್ಪಿಯನಾಜ್(ಗೂಢಚಾರ ಅಥವಾ ಪತ್ತೇದಾರಿ ಕೆಲಸಗಳಿಗಾಗಿ)ಗಾಗಿ ಬಳಸುತ್ತಾರೆ. ಪ್ಯಾರಬಾಲಿಕ್ ಮೈಕ್ರೊಫೋನ್‌ಗಳು ಉತ್ತಮ ಗುಣಮಟ್ಟದ ರೆಕಾರ್ಡಿಂಗ್‌ಗಾಗಿ ಸಾಮಾನ್ಯವಾಗಿ ಬಳಸಲಾಗುವುದಿಲ್ಲ. ಏಕೆಂದರೆ, ಅವುಗಳ ವಿನ್ಯಾಸ ಅಥವಾ ರಚನೆಯ ಅಡ್ಡಪರಿಣಾಮವಾಗಿ ಅವು ಬಹಳ ಕೆಳ ಮಟ್ಟದ ಆವರ್ತನ ಪ್ರತಿಕ್ರಿಯೆಯನ್ನು ಹೊಂದುವಂತಾಗಿದೆ.

ಒಂದು ಸ್ಟಿರಿಯೊ ಮೈಕ್ರೋಫೋನ್ ಸ್ಟೀರಿಯೋಫೋನಿಕ್ ಸಂಕೇತ ಉತ್ಪಾದಿಸುವ ಸಲುವಾಗಿ ಎರಡು ಮೈಕ್ರೊಫೋನ್‌ಗಳನ್ನೂ ಒಂದೇ ಘಟಕದಲ್ಲಿ ಕೂಡಿಸುತ್ತದೆ. ಸ್ಟೀರಿಯೋ ಮೈಕ್ರೊಫೋನ್ ನ್ನು ಹೆಚ್ಚಾಗಿ ಪ್ರಸಾರ ಮಾಡಲು ಅಥವಾ ಫೀಲ್ಡ್ ರೆಕಾರ್ಡಿಂಗ್ ಗಾಗಿ ಬಳಸುತ್ತಾರೆ. ಏಕೆಂದರೆ, ಸ್ಟೀರಿಯೋಫೋನಿಕ್ ರೆಕಾರ್ಡಿಂಗ್ ಸಲುವಾಗಿ ಎರಡು ಬೇರೆ ಕಂಡೆನ್ಸರ್ ಮೈಕ್ರೊಫೋನ್‌ಗಳನ್ನು X-Y ವಿನ್ಯಾಸದಲ್ಲಿ(ಮೈಕ್ರೋಫೋನ್ ಪ್ರಾಕ್ಟೀಸ್ ನೋಡಿ)ನಲ್ಲಿ ಅಳವಡಿಸುವುದು ಸೂಕ್ತವಾದ ವಿಧಾನವಲ್ಲ. ಈ ತರಹದ ಕೆಲವು ಮೈಕ್ರೊಫೋನ್‌ಗಳು ಎರಡು ಚಾನಲ್ ಗಳ ಮಧ್ಯೆ ಪ್ರಸಾರದ ಹೊಂದಾಣಿಕೆ ಕೋನದ ಸೌಲಭ್ಯವನ್ನು ಹೊಂದಿರುತ್ತದೆ.

ಶಬ್ದ ಮಾಲಿನ್ಯವಿರುವ ವಾತಾವರಣದಲ್ಲಿ ಕಾರ್ಯನಿರ್ವಹಿಸುವ ಸಲುವಾಗಿಯೇ ಉನ್ನತ ಮಟ್ಟದ ದಿಕ್ಕುಸಂವೇದಿ ವಿನ್ಯಾಸವಿರುವ ಹಿನ್ನೆಲೆ ಶಬ್ಧ ರದ್ದತಿ ಮೈಕ್ರೊಫೋನ್ ನ್ನು ತಯಾರಿಸಲಾಗಿದೆ. ಈ ತರಹದ ಒಂದು ಬಳಕೆಯನ್ನು ವಿಮಾನದ ಕಾಕ್‌ಪಿಟ್‌ಗಳಲ್ಲಿ ಕಾಣಬಹುದು. ಇಲ್ಲಿ ಹೆಡ್‌ಸೆಟ್‌ಗಳ ಮೇಲೆ ಅವುಗಳನ್ನು ಬೂಮ್ ಮೈಕ್ರೊಫೋನ್‌ಗಳಂತೆ ಅಳವಡಿಸಲಾಗುತ್ತದೆ. ಇದರ ಇನ್ನೊಂದು ಬಳಕೆಯಾಗುವುದು ವೇದಿಕೆಯ ಮೇಲೆ ಏರು ಧ್ವನಿಯಲ್ಲಿ ನಡೆಯುವ ಸಂಗೀತ ಕಛೇರಿಗಳಲ್ಲಿ. ಇಲ್ಲಿ ವೋಕಲಿಸ್ಟ್ (ಪಾಪ್ ಅಥವಾ ಜಾಜ್ ಹಾಡುಗಾರರು)ಗಳು ಇವುಗಳನ್ನು ಬಳಸುತ್ತಾರೆ. ಅನೇಕ ಶಬ್ದ ರದ್ದತಿ ಮೈಕ್ರೊಫೋನ್‌ಗಳು ವಿರುದ್ಧ ವಿದ್ಯುತ್ ದ್ರುವೀಯತೆಯಿರುವ ಅಥವಾ ವಿದ್ಯುನ್ಮಾನ ಚಾಲಿತವಾಗಿರುವ ಎರಡು ಧ್ವನಿಫಲಕಗಳಿಂದ ಸ್ವೀಕರಿಸಲಾದ ಸಂಕೇತಗಳನ್ನು ಒಟ್ಟಾಗಿ ಜೋಡಿಸುತ್ತವೆ. ಜೋಡಿ ಧ್ವನಿಫಲಕ ವಿನ್ಯಾಸಗಳಲ್ಲಿ, ಮುಖ್ಯ ಧ್ವನಿಫಲಕವನ್ನು ಉದ್ದೇಶಿತ ಮೂಲಕ್ಕೆ ಅತೀ ಸಮೀಪದಲ್ಲಿ ಅಳವಡಿಸಲಾಗುತ್ತದೆ ಮತ್ತು ಎರಡನೆಯ ಧ್ವನಿಫಲಕವನ್ನು ಮೂಲದಿಂದ ದೂರದಲ್ಲಿ ಸ್ಥಾಪಿಸಲಾಗುತ್ತದೆ. ಇದರಿಂದ ಮುಖ್ಯ ಧ್ವನಿಫಲಕದ ಸಂಕೇತಗಳಿಂದ ಕಳೆಯುವ ಪರಿಸರದ ಶಬ್ದಗಳನ್ನು ಅದು ಆಯ್ದುಕೊಳ್ಳುತ್ತದೆ. ಆ ಎರಡೂ ಸಂಕೇತಗಳನ್ನು ಜೋಡಿಸಿಯಾದ ಮೇಲೆ ಉದ್ದೇಶಿಸಿದ ಮೂಲದ ಧ್ವನಿಗಿಂತ ಸಿಕ್ಕ ಇತರೆ ಧ್ವನಿಗಳನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸಲಾಗುತ್ತದೆ. ಹೀಗಾಗಿ ಗಣನೀಯವಾಗಿ ಗ್ರಾಹ್ಯತೆಯನ್ನು ಹೆಚ್ಚಿಸುತ್ತದೆ. ಇತರ ಧ್ವನಿ-ರದ್ದತಿ ವಿನ್ಯಾಸಗಳು ಪಕ್ಕಕ್ಕೆ ಮತ್ತು ಮೈಕ್ರೊಫೋನ್ ನ ಹಿಂಭಾಗದಲ್ಲಿ ತೆರೆದಿರುವ ಪೋರ್ಟ್‌ಗಳಿಂದ ಪ್ರಭಾವಿತವಾಗಿರುವ ಧ್ವನಿಫಲಕವನ್ನು ಬಳಸುತ್ತವೆ. ಇದರಿಂದ ದೂರದಲ್ಲಿರುವ ಧ್ವನಿಗಳ ಅಥವಾ ಶಬ್ದದ ಒಟ್ಟು 16 dB ಸೌಂಡ್ ರಿಜೆಕ್ಷನ್ (ಧ್ವನಿ ತಡೆಯಲ್ಪಡುವುದು)ಆಗುತ್ತದೆ. ಪಾಪ್ ಗಾಯಕರಾದ ಗಾರ್ತ್ ಬ್ರಕ್ಸ್ ಮತ್ತು ಜನೆಟ್ ಜಾಕ್ಸನ್ ರು ಒಂದೇ ಧ್ವನಿಫಲಕವವನ್ನು ಬಳಸುವ ಒಂದು ಧ್ವನಿ-ರದ್ದತಿ ಹೆಡ್ ಸೆಟ್ ವಿನ್ಯಾಸವನ್ನು ಪ್ರಮುಖವಾಗಿ ಉಪಯೋಗಿಸಿದ್ದಾರೆ.[೧೬] ಕೆಲವು ಧ್ವನಿ-ರದ್ದತಿ ಮೈಕ್ರೊಫೋನ್‌ಗಳು ಗಂಟಲಿನ ಮೈಕ್ರೊಫೋನ್‌ಗಳಾಗಿವೆ.

ಕನೆಕ್ಟರ್‌ಗಳು[ಬದಲಾಯಿಸಿ]

ಮೈಕ್ರೊಫೋನ್ ಗಾಗಿ ಎಲೆಕ್ಟ್ರಾನಿಕ್ ಚಿಹ್ನೆ

ಮೈಕ್ರೊಫೋನ್‌ಗಳಿಂದ ಬಳಸಲ್ಪಡುವ ಅತ್ಯಂತ ಸಾಮಾನ್ಯವಾದ ಕನೆಕ್ಟರ್‌ಗಳೆಂದರೆ:

 • ಔದ್ಯೋಗಿಕ ಮೈಕ್ರೋಫೋನ್ ಮೇಲಿನ ಮೇಲ್ XLR ಕನೆಕ್ಟರ್
 • 1/4 (ಕೆಲವು ಸಲ 6.5 mm ನಂತೆ ಉಲ್ಲೇಖಿಸಲಾಗುತ್ತದೆ)ಇಂಚಿನ ಜಾಕ್ ಪ್ಲಗ್. ಇದನ್ನು ಕಡಿಮೆ ಖರ್ಚಿನ ಗ್ರಾಹಕ ಮೈಕ್ರೊಫೋನ್ ಮೇಲಿನ 1/4 ಇಂಚಿನ TRS ಕನೆಕ್ಟರ್ ಎಂದೂ ಕರೆಯುತ್ತಾರೆ. ಅನೇಕ ಗ್ರಾಹಕ ಮೈಕ್ರೊಫೋನ್‌ಗಳು ಅಸಮತೋಲನದಿಂದ ಕೂಡಿರುವ 1/4 ಇಂಚಿನ ಫೋನ್ ಜಾಕ್ ನ್ನು ಬಳಸುತ್ತವೆ. ಹಾರ್ಮೋನಿಕಾ ಮೈಕ್ರೊಫೋನ್‌ಗಳು ಸಾಮಾನ್ಯವಾಗಿ ಗಿಟಾರ್ ಆಂಪ್ಲಿಪೈರ್‌‌ಗಳ ಮುಖಾಂತರ ಹಾಯುವ, ಹೆಚ್ಚು ಪ್ರತಿರೋಧದ ಸಾಮರ್ಥ್ಯವಿರುವ 1/4 ಇಂಚಿನ TS ಕನೆಕ್ಷನ್ ನ್ನು ಬಳಸುತ್ತವೆ.
 • ಅತಿ ಕಡಿಮೆ ಬೆಲೆಯ ಮೈಕ್ರೊಫೋನ್‌ಗಳ ಮೇಲೆ ಮತ್ತು ಕಂಪ್ಯೂಟರ್ ಮೈಕ್ರೊಫೋನ್‌ಗಳ ಮೇಲೆ ಬರುವ 3.5 mm (ಕೆಲವು ಸಲ 1/8 ಇಂಚು ಚಿಕ್ಕದು ಎಂದು ಉಲ್ಲೇಖಿಸಲಾಗುವ)ಸ್ಟೀರಿಯೋ (ಮೋನೋ ಹಾಗೆ ವಯರ್ ಬೆಂಬಲ ಹೊಂದಿರುವ)ಮಿನಿ ಫೋನ್ ಪ್ಲಗ್.

ಕೆಲವು ಮೈಕ್ರೊಫೋನ್‌ಗಳು 5-pin XLR ಅಥವಾ ಮಿನಿ XLR ಗಳಂತಹ ಇತರ ಕನೆಕ್ಟರ್ ಗಳನ್ನು ಪೋರ್ಟೆಬಲ್ ಉಪಕರಣಕ್ಕೆ ಸಂಪರ್ಕ ನೀಡಲು ಬಳಸುತ್ತವೆ.

ಕೆಲವು ಲಾವಲಿಯರ್ (ಅಥವಾ 'ಲಪೆಲ್', ಏಕೆಂದರೆ ಮೈಕ್ರೊಫೋನ್‌ನ್ನು ವರದಿಗಾರರ ಕೋಟಿನ ಲಪೆಲ್‌ಗೆ ಸಿಕ್ಕಿಸಲಾಗುತ್ತಿತ್ತು)ಮೈಕ್ರೊಫೋನ್‌ಗಳು ವಯರ್ ಲೆಸ್ ಟ್ರಾನ್ಸ್‌ಮಿಟರ್‌ಗೆ ಸಂಪರ್ಕಿಸಲು ಪ್ರೊಪ್ರೈಟರ್ ಕನೆಕ್ಟರ್‌ನ್ನು ಬಳಸುತ್ತವೆ.

2005 ರಿಂದ, USB ಸಂಪರ್ಕ ಹೊಂದಿರುವ ವೃತ್ತಿಪರ-ಗುಣಮಟ್ಟದ ಮೈಕ್ರೊಫೋನ್‌ಗಳು ಮತ್ತೆ ಕಾಣಿಸಿಕೊಳ್ಳತೊಡಗಿವೆ. ಕಂಪ್ಯೂಟರ್ ಆಧಾರಿತ ಸಾಫ್ಟ್ ವೇರ್ ನೊಳಗೆ ನೇರ ರೆಕಾರ್ಡಿಂಗ್‌ಗಾಗಿ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.

ಪರ್ಯಾಯ ವಿದ್ಯುತ್ಪ್ರವಾಹ ಪ್ರತಿರೋಧ- ಹೊಂದಾಣಿಕೆ[ಬದಲಾಯಿಸಿ]

ಮೈಕ್ರೊಫೋನ್‌ಗಳು ಪರ್ಯಾಯ ವಿದ್ಯುತ್ ಪ್ರವಾಹ ಪ್ರತಿರೋಧ ಎಂಬ ವಿದ್ಯುತ್ ಲಕ್ಷಣವನ್ನು ಹೊಂದಿವೆ. ಇದು ವಿನ್ಯಾಸದ ಮೇಲೆ ಅವಲಂಬಿತವಾಗಿದ್ದು, ohm(Ω) ಗಳಲ್ಲಿ ಅಳೆಯಲಾಗುತ್ತದೆ.

ಮಾದರಿಯಾಗಿರೇಟೆಡ್ ಇಂಪೀಡೆನ್ಸ್ ಬಗ್ಗೆ ಹೇಳಲಾಗಿದೆ.[೧೭]

600 Ω ಗಿಂತ ಕೆಳಗಿದ್ದರೆ ಅದು ಕಡಿಮೆ ಪರ್ಯಾಯ ವಿದ್ಯುತ್ ಫ್ರತಿರೋಧ ಆಗುತ್ತದೆ. 600 Ω ಮತ್ತು 10 Ω ನಡುವೆ ಇದ್ದರೆ ಅದು ಮಧ್ಯಮ ಅಥವಾ ಮೀಡಿಯಮ್ ಪ್ರತಿರೋಧಎನಿಸುತ್ತದೆ 10 kΩ ಗಿಂತ ಮೇಲಿದ್ದರೆ, ಅದು ಹೆಚ್ಚು ಪ್ರತಿರೋಧ ಆಗುತ್ತದೆ. ಕಂಡೆನ್ಸರ್ ಮೈಕ್ರೊಫೋನ್‌ಗಳು (ಒಳಗಿರುವ ಪ್ರಿಅಂಪ್ ನಂತರ) 50 ಮತ್ತು 200 ohms ನಡುವಿನ, ಔಟ್‌ಪುಟ್ ಪ್ರತಿರೋಧ ಹೊಂದಿವೆ.[೧೮]

ಪ್ರತಿರೋಧತ್ವ ಕಡಿಮೆ ಇರಲಿ ಅಥವಾ ಹೆಚ್ಚಾಗಿರಲಿ, ಮೈಕ್ರೊಫೋನ್ ಔಟ್ ಪುಟ್ ಒಂದೇ ತೆರನಾದ ಶಕ್ತಿ ಅಥವಾ ಪವರ್ ನ್ನು ಬಿಡುಗಡೆ ಮಾಡುತ್ತದೆ.

ಒಂದು ವೇಳೆ ಒಂದು ಮೈಕ್ರೊಫೋನ್ ನ್ನು ಹೆಚ್ಚು ಮತ್ತು ಕಡಿಮೆ ಪರ್ಯಾಯ ವಿದ್ಯುತ್ ಪ್ರತಿರೋಧಕ ಆವೃತ್ತಿಗಳಾಗಿ ತಯಾರಿಸಿದರೆ, ಹೆಚ್ಚು ಪ್ರತಿರೋಧಕದ ಮೈಕ್ರೊಫೋನ್‌ನಲ್ಲಿ ಗೊತ್ತಾದ ಶಬ್ದ ಒತ್ತಡದ ಇನ್ ಪುಟ್‌ಗಾಗಿ ಅತಿ ಹೆಚ್ಚು ಔಟ್‌ಪುಟ್ ವೋಲ್ಟೇಜ್ ಇರುತ್ತದೆ. ಅಲ್ಲದೆ, ಇದು ನಿರ್ವಾತ-ಟ್ಯೂಬ್ ಗಿಟಾರ್ ಆಂಪ್ಲಿಫೈರ್ ಗಳೊಂದಿಗೆ ಬಳಸಲು ತುಂಬಾ ಅನುಕೂಲಕರವಾಗಿದೆ. ಉದಾಹರಣೆಗೆ, ಈ ಆಂಪ್ಲಿಫೈರ್‌ಗಳು ಹೆಚ್ಚಿನ ಇನ್ಪುಟ್ ಇರುವ ವಿದ್ಯುತ್ ಪ್ರವಾಹ ಪ್ರತಿರೋಧ ಹೊಂದಿವೆ ಮತ್ತು ಇವುಗಳಿಗೆ ಟ್ಯೂಬ್‌ಗಳಿಂದ ಬರುವ ಅಂತರ್ಗತ ಶಬ್ದವನ್ನು ತಡೆಯಲು ಹೆಚ್ಚು ಸಿಗ್ನಲ್ ಇನ್ ಪುಟ್ ವೋಲ್ಟೇಜ್‌ನ ಅವಶ್ಯಕತೆ ಇದೆ. ಹೆಚ್ಚು ವೃತ್ತಿಪರ ಮೈಕ್ರೊಫೋನ್‌ಗಳು ಕಡಿಮೆ ವಿದ್ಯುತ್ಪ್ರವಾಹ ಪ್ರತಿರೋಧ ಹೊಂದಿದ್ದು, 200 Ω ಅಥವಾ ಅದಕ್ಕಿಂತ ಕಡಿಮೆಯಾಗಿರುತ್ತವೆ. ಇನ್‌ಪುಟ್ ಟ್ಯೂಬ್‌ನ್ನು ಪ್ರಾರಂಭಿಸಲು ಬೇಕಾಗುವ ವೋಲ್ಟೇಜ್ ನೀಡುವ ಮತ್ತು ಮೈಕ್ರೊಫೋನ್ ಸರ್ಕಿಟ್‌ನ ವಿದ್ಯುತ್ಪ್ರವಾಹ ಪ್ರತಿರೋಧವನ್ನು ಹೆಚ್ಚು ವಿದ್ಯುತ್ಪ್ರವಾಹ ಪ್ರತಿರೋಧಕ್ಕೆ ಒಯ್ಯುವ ಟ್ರಾನ್ಸ್ ಫಾರ್ಮರ್ನ್ನು ಔದ್ಯೋಗಿಕ ವ್ಯಾಕ್ಯೂಮ್-ಟ್ಯೂಬ್ ಧ್ವನಿ ಉಪಕರಣವು ಅಳವಡಿಸುತ್ತದೆ. ವಿದ್ಯುತ್ಪ್ರವಾಹ ಪ್ರತಿರೋಧ ಪರಿವರ್ತನೆಯಿಂದಾಗಿ ವೋಲ್ಟೇಜ್ ಕೂಡ ಸಿಗುವುದು. ಬಾಹ್ಯವಾಗಿ ಹೊಂದಾಣಿಕೆಯಾಗುವ ಟ್ರಾನ್ಸ್ ಫಾರ್ಮರ್‌ಗಳು ಸಹ ಲಭ್ಯವಿವೆ. ಇವುಗಳನ್ನು ಕಡಿಮೆ ವಿದ್ಯುತ್ಪ್ರವಾಹ ಪ್ರತಿರೋಧ ಮೈಕ್ರೊಫೋನ್ ಮತ್ತು ಹೆಚ್ಚು ವಿದ್ಯುತ್ಪ್ರವಾಹ ಪ್ರತಿರೋಧ ಇನ್ಪುಟ್‌ಗಳ ನಡುವೆ ಬಳಸಬಹುದು.

ಕಡಿಮೆ ವಿದ್ಯುತ್ಪ್ರವಾಹ ಪ್ರತಿರೋಧ ಮೈಕ್ರೊಫೋನ್‌ಗಳಿಗೆ ಹೆಚ್ಚು ವಿದ್ಯುತ್ಪ್ರವಾಹ ಪ್ರತಿರೋಧಕ್ಕಿಂತ ಅಧಿಕ ಆದ್ಯತೆ ನೀಡಲಾಗುತ್ತದೆ. ಇದಕ್ಕೆ ಎರಡು ಕಾರಣಗಳು: ಒಂದು, ಉದ್ದನೆಯ ಕೇಬಲ್ ನೊಂದಿಗೆ ಹೆಚ್ಚು ವಿದ್ಯುತ್ಪ್ರವಾಹ ಪ್ರತಿರೋಧ ಮೈಕ್ರೊಫೋನ್‌ನ್ನು ಬಳಸುವುದರಿಂದ, ಕೇಬಲ್ ಧಾರಣದಿಂದಾಗಿ ಅಧಿಕ ಆವರ್ತನ ಸಂಕೇತ ನಷ್ಟವಾಗುತ್ತದೆ.ಇದರಿಂದಾಗಿ, ಮೈಕ್ರೊಫೋನ್ ಔಟ್ ಪುಟ್ ವಿದ್ಯುತ್ಪ್ರವಾಹ ಪ್ರತಿರೋಧ ಜೊತೆಗೆ ಒಂದು ಲೋ-ಪಾಸ್ ಫಿಲ್ಟರ್ ರೂಪಗೊಳ್ಳುತ್ತದೆ. ಎರಡನೆಯದು, ಉದ್ದನೆಯ ಅಧಿಕ ವಿದ್ಯುತ್ಪ್ರವಾಹ ಪ್ರತಿರೋಧ ಕೇಬಲ್‌ಗಳು ಹೆಚ್ಚು ಹಮ್ ತೆಗೆದುಕೊಳ್ಳುತ್ತವೆ (ಮತ್ತು ರೇಡಿಯೋ ಆವರ್ತನ ವ್ಯತಿಕರಣ(RFI)(ರೇಡಿಯೊ ಫ್ರೀಕ್ವೆನ್ಸಿ ಇಂಟರ್‌ಫೆರೆನ್ಸ್) ಸಾಧ್ಯತೆ ಕೂಡ ಇದೆ). ಒಂದು ವೇಳೆ ಮೈಕ್ರೊಫೋನ್ ಮತ್ತು ಬೇರೆ ಉಪಕರಣದ ನಡುವಿನ ವಿದ್ಯುತ್ಪ್ರವಾಹ ಪ್ರತಿರೋಧ ಹೊಂದದಿದ್ದಲ್ಲಿ ಯಾವುದೇ ತರಹದ ಹಾನಿಯೂ ಆಗುವುದಿಲ್ಲ. ಹಾನಿಯಾಗುವ ಸಾಧ್ಯತೆಗಳೆಂದರೆ, ಸಿಗ್ನಲ್ ಕಡಿಮೆಯಾಗುತ್ತದೆ ಅಥವಾ ಆವರ್ತನ ಪ್ರತಿಕ್ರಿಯೆಯಲ್ಲಿ ಬದಲಾವಣೆ ಉಂಟಾಗುತ್ತದೆ.

ಹೆಚ್ಚು ಮೈಕ್ರೊಫೋನ್‌ಗಳು ತಾವು ಸಂಪರ್ಕ ಹೊಂದಿರುವ ಲೋಡ್‌ನಿಂದಾಗಿ ವಿದ್ಯುತ್ಪ್ರವಾಹ ಪ್ರತಿರೋಧ‌ನ ಹೊಂದಾಣಿಕೆ ಯನ್ನು ಒಳಗೊಳ್ಳದ ಹಾಗೆ ರಚಿಸಲಾಗಿವೆ.[೧೯] ಈ ರೀತಿ ಮಾಡುವುದರಿಂದ ಅವುಗಳ ಆವರ್ತನ ಪ್ರತಿಕ್ರಿಯೆ ಬದಲಾಗುತ್ತದೆ ಮತ್ತು ಅಸ್ಪಷ್ಟತೆ ಉಂಟಾಗುತ್ತದೆ. ಇದು ಮುಖ್ಯವಾಗಿ ಅಧಿಕ ಧ್ವನಿ ಒತ್ತಡದ ಹಂತಗಳಲ್ಲಿ ನಡೆಯುತ್ತದೆ. ಕೆಲವು ನಿರ್ದಿಷ್ಟ ರಿಬನ್ ಮತ್ತು ಡೈನಾಮಿಕ್ ಮೈಕ್ರೊಫೋನ್‌ಗಳು ಇದಕ್ಕೆ ಹೊರತಾಗಿವೆ.ಇದಕ್ಕೆ ಕಾರಣ, ಒಂದು ನಿರ್ದಿಷ್ಟ ಲೋಡ್ ವಿದ್ಯುತ್ಪ್ರವಾಹ ಪ್ರತಿರೋಧ ಮೈಕ್ರೊಫೋನ್ ಒಳಗಿನ ವಿದ್ಯುತ್-ಧ್ವನಿತರಂಗ ಡ್ಯಾಮ್ಪಿಂಗ್ (ಕಡಿಮೆಗೊಳಿಸುವುದು) ಸರ್ಕಿಟ್ ಒಂದು ಭಾಗವಾಗಿರುವುದು ಎಂದು ವಿನ್ಯಾಸಕಾರರು ಊಹಿಸಿದರು.[೨೦][dubious ]

ಡಿಜಿಟಲ್ ಮೈಕ್ರೊಫೋನ್ ಇಂಟರ್‌ಫೇಸ್[ಬದಲಾಯಿಸಿ]

ಆಡಿಯೊ ಇಂಜಿನಿಯರಿಂಗ್ ಸೊಸೈಟಿಯಿಂದ ಪ್ರಕಟವಾದ AES 42 ಸ್ಟಾಂಡರ್ಡ್ ಮೈಕ್ರೊಫೋನ್‌ಗಳಿಗಾಗಿ ಡಿಜಿಟಲ್ ಅಂತರಕ್ರಿಯೆ ಸ್ಥಾನವನ್ನು ವ್ಯಾಖ್ಯಾನಿಸುತ್ತದೆ. ಈ ಮಾನದಂಡವನ್ನು ಅನುಸರಿಸುವ ಮೈಕ್ರೊಫೋನ್‌ಗಳು XLR ಮೇಲ್ ಕನೆಕ್ಟರ್ ಮುಖಾಂತರ ನೇರವಾದ ರೀತಿಯಲ್ಲಿ ಡಿಜಿಟಲ್ ಆಡಿಯೋ ಪ್ರವಾಹವನ್ನು ಉತ್ಪಾದಿಸುತ್ತವೆ. ಆದರೆ ಎನಲಾಗ್ ಔಟ್‌ಪುಟ್‌ನ್ನು ಉತ್ಪಾದಿಸುವುದಿಲ್ಲ. AES 42 ಸ್ಟಾಂಡರ್ಡ್ ಅನುಸರಿಸುವ ಸರಿಯಾದ ಒಳಬರುವ ಸಂಪರ್ಕಗಳನ್ನು ಹೊಂದಿರುವ ಹೊಸ ಉಪಕರಣ ಅಥವಾ ಒಂದು ಯೋಗ್ಯವಾದ ಅಂತರಕ್ರಿಯೆ ಬಾಕ್ಸ್ ಮೂಲಕ ಡಿಜಿಟಲ್ ಮೈಕ್ರೊಫೋನ್‌ಗಳನ್ನು ಬಳಸಬಹುದು. AES 42 ಸ್ಟಾಂಡರ್ಡ್‌ಗೆ ಹೊಂದಿಕೊಂಡಂತೆ ಕೆಲಸ ಮಾಡುವ ಸ್ಟೂಡಿಯೋ-ಗುಣಮಟ್ಟದ ಮೈಕ್ರೊಫೋನ್‌ಗಳು ಈಗ ಅನೇಕ ಮೈಕ್ರೊಫೋನ್ ತಯಾರಕರಿಂದ ಲಭ್ಯವಿವೆ.

ಮಾಪನಗಳು ಮತ್ತು ನಿರ್ದಿಷ್ಟ ವಿವರಣೆ[ಬದಲಾಯಿಸಿ]

ಒಕ್ಟಾವಾ 319 ಮತ್ತು ಶ್ಯೂರ್ SM58 ಗಳ ದೂರ ಕ್ಷೇತ್ರದ ಅಕ್ಷದ ಮೇಲಿನ ಆವರ್ತನ ಪ್ರತಿಕ್ರಿಯೆಯ ಹೋಲಿಕೆ

ಅವುಗಳ ರಚನೆಯಲ್ಲಿ ವ್ಯತ್ಯಾಸಗಳಿರುವುದರಿಂದ, ಶಬ್ದದ ಕಡೆಗೆ ಮೈಕ್ರೊಫೋನ್‌ಗಳು ತಮ್ಮದೇ ಆದ ವಿಶಿಷ್ಟ ಪ್ರತಿಕ್ರಿಯೆಗಳನ್ನು ಹೊಂದಿವೆ. ಪ್ರತಿಕ್ರಿಯೆಯಲ್ಲಿ ಈ ರೀತಿಯ ವ್ಯತ್ಯಾಸದಿಂದಾಗಿ ಅಸಮಾನವಾದ ಫೇಸ್ ಮತ್ತು ಆವರ್ತನ ಪ್ರತಿಕ್ರಿಯೆಗಳು ಉತ್ಪನ್ನವಾಗುತ್ತವೆ. ಅಲ್ಲದೆ, ಧ್ವನಿಯ ಒತ್ತಡಕ್ಕೆ ಮೈಕ್ರೊಫೋನ್‌ಗಳು ಸಮಾನವಾಗಿ ಸ್ಪಂದಿಸುವುದಿಲ್ಲ ಮತ್ತು ಬದಲಾಗುತ್ತಿರುವ ಹಂತಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಸ್ವೀಕರಿಸಬಹುದು. ವೈಜ್ಞಾನಿಕ ಬಳಕೆಗಾಗಿ ಸಮಾನ ಪ್ರತಿಕ್ರಿಯೆ ಕೊಡುವ ಮೈಕ್ರೊಫೋನ್‌ಗಳು ಹೆಚ್ಚು ಪ್ರಯೋಜನಕಾರಿಯಾಗಿವೆ. ಆದರೆ ಇದೆ ಪದ್ಧತಿಯು ಸಂಗೀತದ ಧ್ವನಿಮುದ್ರಿಕೆಗೆ ಅನ್ವಯಿಸುವುದಿಲ್ಲ. ಏಕೆಂದರೆ, ಮೈಕ್ರೊಫೋನ್‌ನ ಅಸಮಾನ ಪ್ರತಿಕ್ರಿಯೆಯು ಶಬ್ದದ ಇಚ್ಛಿತ ವರ್ಣವಿನ್ಯಾಸವನ್ನು ಉತ್ಪಾದಿಸಬಹುದು. ಮೈಕ್ರೊಫೋನ್‌ನ ನಿರ್ದಿಷ್ಟ ವಿವರಣೆಗಳಿಗಾಗಿ ಒಂದು ಅಂತಾರಾಷ್ಟ್ರೀಯ ಮಾನದಂಡವಿದೆ.[೧೭] ಆದರೆ ಕೆಲವು ಉತ್ಪಾದಕರು ಮಾತ್ರ ಇದಕ್ಕೆ ಬದ್ಧರಾಗಿದ್ದಾರೆ. ಇದರ ಪರಿಣಾಮವಾಗಿ, ಬೇರೆ ಬೇರೆ ಉತ್ಪಾದಕರಿಂದ ಪ್ರಕಟಗೊಂಡ ದತ್ತಾಂಶ(data) ಗಳನ್ನು ಹೋಲಿಕೆ ಮಾಡುವುದು ಕಠಿಣವಾಗುತ್ತದೆ. ಏಕೆಂದರೆ, ವಿವಿಧ ಮಾಪನ ತಂತ್ರಗಳನ್ನು ಬಳಸಲಾಗಿದೆ. ಚಿತ್ರಗಳು, ಪ್ರತಿಕ್ರಿಯೆಯ ರೇಖೆಗಳು ಮತ್ತು ಮೈಕ್ರೊಫೋನ್ ಉತ್ಪಾದಕರಿಂದ ಇತ್ತೀಚೆಗೆ ಪಟ್ಟಿ ಮಾಡಲಾದ ಪ್ರತಿಯೊಂದು ಮೈಕ್ರೊಫೋನ್ ಹಾಗೂ ಕೆಲವು ಮಾದರಿಗಳನ್ನು ಕುರಿತು ತಯಾರಿಸಲಾದ ತಾಂತ್ರಿಕ ದತ್ತಾಂಶ (data)ವನ್ನು ಮೈಕ್ರೋಫೋನ್ ಡಾಟಾ ವೆಬ್‌ಸೈಟ್‌ ಸಂಗ್ರಹಿಸಿದೆ. ಹೋಲಿಕೆ ಮಾಡಲು ಸುಲಭವಾಗುವಂತೆ ಒಂದೇ ಕ್ರಮವ್ಯವಸ್ಥೆಯಲ್ಲಿ ಈ ದತ್ತಾಂಶವನ್ನು ತೋರಿಸುತ್ತದೆ.[೩] Archived 2007-02-10 ವೇಬ್ಯಾಕ್ ಮೆಷಿನ್ ನಲ್ಲಿ. . ಉತ್ಪಾದಕರು IEC 60268-4 ಪ್ರಕಾರ ವಿವರಣೆಗಳನ್ನು ಪೂರೈಸಿದ್ದಾರೆಂಬುದು ತಿಳಿದುಕೊಳ್ಳದೇ,ಪ್ರಕಟಿಸಿದ ದತ್ತಾಂಶದಿಂದ ಯಾವುದೇ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.

ನಿಖರವಾದ ಆನ್-ಎಕ್ಷಿಸ್ ಸೌಂಡ್ (ಧ್ವನಿಯು 0° ಮಟ್ಟಕ್ಕೆ ಕ್ಯಾಪ್ಸುಲ್ ಗೆ ಬರುತ್ತದೆ)ಗೋಸ್ಕರ ಒಂದು ಆವರ್ತನ ಪ್ರತಿಕ್ರಿಯೆಯ ಚಿತ್ರವು ಆವರ್ತನಗಳ ವ್ಯಾಪ್ತಿ (ಕನಿಷ್ಠ ಪಕ್ಷ 0–20 kHz)ಯಲ್ಲಿ ಮೈಕ್ರೊಫೋನ್‌ನ ಸಂವೇದನೆಯನ್ನು ಡೆಸಿಬಲ್ ಗಳಲ್ಲಿ ತೋರಿಸುತ್ತದೆ. ಆವರ್ತನ ಪ್ರತಿಕ್ರಿಯೆಯ ಮಾಹಿತಿಯನ್ನು ಈ ರೀತಿಯಾಗಿ ತೋರಿಸಬಹುದು: "30 Hz-16 kHz ±3 dB". ಇದನ್ನು ವಿವರಿಸಿದ ಆವರ್ತನಗಳ ನಡುವೆ ಸರಿಸುಮಾರು ಸಮತಟ್ಟಾದ,ರೇಖೀಯ ಚಿತ್ರ ಎಂದು ವ್ಯಾಖ್ಯಾನಿಸಲಾಗಿದೆ. ಇದರ ಆಂಪ್ಲಿಟ್ಯೂಡ್‌ನಲ್ಲಿ ವ್ಯತ್ಯಾಸಗಳು ಪ್ಲಸ್ ಅಥವಾ ಮೈನಸ್ 3 dBಗಿಂತ ಹೆಚ್ಚಿಗಿರುವುದಿಲ್ಲ. ಈ ಮಾಹಿತಿಯ ಆಧಾರದ ಮೇಲೆ ಬದಲಾವಣೆಗಳು ಎಷ್ಟು ಸುಗಮ ವಾಗಿವೆ ಎಂದು ಹೇಳಲು ಅಥವಾ ರೋಹಿತದ(ಸ್ಪೆಕ್ಟ್ರಮ್) ಯಾವ ಭಾಗಗಳಲ್ಲಿ ಅವು ಕಾಣಿಸಿಕೊಳ್ಳುತ್ತವೆ ಎಂದು ಹೇಳಲು ಆಗದು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಟಾಲರೆನ್ಸ್(ತಡೆದುಕೊಳ್ಳುವ) ಡೆಸಿಬಲ್ ಅಳತೆ ಇಲ್ಲದೆ ನೀಡಲಾದ ಹೇಳಿಕೆಗಳು, ಅಂದರೆ "20 Hz-20 kHz" ನಂತಹ ಹೇಳಿಕೆ, ಅರ್ಥ ಕಳೆದುಕೊಳ್ಳುತ್ತವೆ. ದಿಕ್ಕು ಸಂವೇದಿ ಮೈಕ್ರೊಫೋನ್‌ಗಳ ಆವರ್ತನ ಪ್ರತಿಕ್ರಿಯೆಯು ಶಬ್ದದ ಮೂಲದಿಂದ ಇರುವ ದೂರಕ್ಕಿಂತ ಭಿನ್ನವಾಗಿದೆ. ಅಲ್ಲದೆ ಶಬ್ದದ ಮೂಲದ ಜ್ಯಾಮಿತಿಗಿಂತ ಭಿನ್ನವಾಗಿದೆ. IEC 60268-4 ಪ್ರಕಾರ, ಆವರ್ತನ ಪ್ರತಿಕ್ರಿಯೆಯನ್ನು ಪ್ಲೇನ್ ಪ್ರೊಗ್ರೆಸಿವ್ ವೇವ್ ಸ್ಥಿತಿಗಳಿಂದ (ಶಬ್ದ ಹುಟ್ಟುವ ಮೂಲದಿಂದ ತುಂಬಾ ದೂರವಿರುತ್ತದೆ)ಅಳೆಯಬೇಕು. ಆದರೆ, ಇದು ಪ್ರಾಯೋಗಿಕವಲ್ಲ. ಹತ್ತಿರದಿಂದ ಮಾತನಾಡಲು ಬಳಸುವ (ಕ್ಲೋಸ್ ಟಾಕಿಂಗ್) ಮೈಕ್ರೊಫೋನ್‌ಗಳನ್ನು ಬೇರೆ ಬೇರೆ ಧ್ವನಿ ಮೂಲಗಳು ಮತ್ತು ದೂರಗಳಿಂದ ಅಳೆಯಬಹುದು. ಆದರೆ, ಇದಕ್ಕೆ ನಿರ್ದಿಷ್ಟವಾದ ಮಾನದಂಡವಿಲ್ಲ. ಆದ್ದರಿಂದ, ಮಾಪಕ ತಂತ್ರಗಳನ್ನು ವಿವರಿಸದೇ ವಿವಿಧ ಮಾದರಿಗಳಿಂದ ದತ್ತಾಂಶ ಹೋಲಿಕೆ ಮಾಡಲು ಮಾರ್ಗವಿಲ್ಲ.

ಧ್ವನಿಯ ಅನುಪಸ್ಥಿತಿಯಲ್ಲಿ ಮೈಕ್ರೊಫೋನ್ ಯಾವ ರೀತಿಯ ಔಟ್‌ಪುಟ್ ವೋಲ್ಟೇಜ್‌ನ್ನು ಸೃಷ್ಟಿಸುತ್ತದೆಯೋ, ಅದೇ ತರಹದ ಔಟ್ ಪುಟ್ ವೋಲ್ಟೇಜ್ ನ್ನು ಸ್ವಯಂ-ಶಬ್ದ ಅಥವಾ ಸಮನಾದ ಶಬ್ದದ ಮಟ್ಟವಾದ ಸೌಂಡ್ ಲೆವಲ್ ಸೃಷ್ಟಿಸುತ್ತದೆ. ಇದು ಮೈಕ್ರೊಫೋನ್ ವಿವಿಧ ಶಬ್ದದ ವ್ಯಾಪ್ತಿಯ ಅತ್ಯಂತ ಕಡಿಮೆ ಬಿಂದುವನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ, ಕೇಳಲು ಅಸಾಧ್ಯವಾದ ಶಬ್ದಗಳನ್ನು ಧ್ವನಿಮುದ್ರಿಸಲು ಇದು ಬಹಳ ಪ್ರಮುಖವಾಗಿದೆ. ಮಾಪನವನ್ನು ಆಗಾಗ್ಗೆ dB(A)ಯಲ್ಲಿ ಹೇಳಲಾಗುತ್ತದೆ. ಕಿವಿಯಲ್ಲಿ ಹೇಗೆ ಕೇಳಲಾಗುತ್ತದೆ ಎಂಬ ಆಧಾರದ ಮೇಲೆ ಡೆಸಿಬಲ್ ಮಾಪಕ ಆವರ್ತನದಲ್ಲಿ ಶಬ್ದದ ಗಟ್ಟಿಧ್ವನಿಗೆ ಸಮಾನನಾಗಿದೆ, ಉದಾಹರಣೆಗೆ: "15 dBA SPL" (SPL ಅಂದರೆ ಶಬ್ದ ಒತ್ತಡಮಟ್ಟ. ಇದು 20 ಮೈಕ್ರೋಪಾಸ್ಕಲ್‌ಗಳಿಗೆ ಸಂಬಂಧಿಸಿರುತ್ತದೆ.) ಸಂಖ್ಯೆ ಎಷ್ಟು ಕಡಿಮೆಯಾಗಿರುತ್ತದೆಯೋ ಅಷ್ಟೇ ಒಳ್ಳೆಯದು. ಕೆಲವು ಮೈಕ್ರೊಫೋನ್ ಉತ್ಪಾದಕರು ITU-R 468 ಶಬ್ದದ ತೂಕ ಬಳಸಿಕೊಂಡು ಶಬ್ದದ ಮಟ್ಟವನ್ನು ತಿಳಿಸುತ್ತಾರೆ. ಇದು ನಾವು ಶಬ್ದವನ್ನು ಕೇಳುವ ರೀತಿಯನ್ನು ಸರಿಯಾಗಿ ತೋರಿಸುತ್ತದೆ. ಆದರೆ 11-14 dB ಹೆಚ್ಚು ಅಂಕಿಅಂಶವನ್ನು ಕೊಡುತ್ತದೆ. ಒಂದು ಅತಿ ಸೂಕ್ಷ್ಮ ಶಬ್ದವನ್ನು ಕೇಳುವ ಮೈಕ್ರೊಫೋನ್ (quiet maicrophone) ನ ಅಳತೆ 20 dBA SPL ಅಥವಾ 32 dB SPL 468-ವೇಟೆಡ್ ಆಗಿರುತ್ತದೆ. ಸುಮಾರು 0 dB SPL ಶಬ್ಧದ ಮಟ್ಟ ಹೊಂದಿರುವ ಬ್ರೂಯೆಲ್& ಕೆಜೀರ್ 4179 ನಂತಹ ಅತಿ ಸೂಕ್ಷ್ಮ ಶಬ್ದ ಗ್ರಹಿಸುವ ಮೈಕ್ರೊಫೋನ್‌ಗಳು ವಿಶೇಷ ಉಪಯೋಗಗಳಿಗಾಗಿ ಅನೇಕ ವರ್ಷಗಳಿಂದ ಅಸ್ತಿತ್ವದಲ್ಲಿವೆ. ಇತ್ತೀಚೆಗೆ ಕಡಿಮೆ ಶಬ್ಧದ ನಿರ್ದಿಷ್ಟ ವಿವರಣೆಯಿರುವ ಮೈಕ್ರೊಫೋನ್‌ಗಳನ್ನು ಸ್ಟುಡಿಯೋ/ಮನರಂಜನೆಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. ಅವುಗಳೆಂದರೆ, 5-7 dBA ನಡುವಿನ ಶಬ್ಧ ಮಟ್ಟಗಳನ್ನು ಜಾಹಿರಾತು ಮಾಡುವ Neumann ಮತ್ತು Røde ಉತ್ಪಾದಿತ ಮಾದರಿಗಳು. ಮಾದರಿಯಾಗಿ ಕ್ಯಾಪ್ಸುಲ್ ಮತ್ತು ಎಲೆಕ್ಟ್ರಾನಿಕ್ಸ್‌ಗಳ ಆವರ್ತನಗಳ ಪ್ರತಿಕ್ರಿಯೆಯನ್ನು ಬದಲಾಯಿಸಿದಾಗ ಅದು A- ವೆಯ್ಟಿಂಗ್ ರೇಖೆಯಲ್ಲಿ ಕಡಿಮೆ ಶಬ್ದವಾಗಿ ಪರಿಣಮಿಸುತ್ತದೆ. ಅದೇ ಸಂದರ್ಭದಲ್ಲಿ ಬ್ರಾಡ್‌ಬ್ಯಾಂಡ್‌ನ ಶಬ್ದ ಹೆಚ್ಚಿಸಬಹುದು.

ಮೈಕ್ರೊಫೋನ್ ಸ್ವೀಕರಿಸಬಹುದಾದ ಗರಿಷ್ಠ SPL (ಶಬ್ಧ ಒತ್ತಡ ಮಟ್ಟ)ವನ್ನು ಒಟ್ಟು ಸಂಗತ ಅಸ್ಪಷ್ಟತೆ (THD),ಅಂದರೆ ಮಾದರಿಯಾಗಿ 0.5%. ಈ ಪ್ರಮಾಣದ ಅಸ್ಪಷ್ಟತೆ ಸಾಮಾನ್ಯವಾಗಿ ಕೇಳಿಬರುವುದಿಲ್ಲ. ಹಾಗಾಗಿ, ಈ SPLನಲ್ಲಿ ರೆಕಾರ್ಡಿಂಗ್‌ಗೆ ಯಾವುದೇ ಹಾನಿಯಾಗದಂತೆ ಮೈಕ್ರೊಫೋನ್‌ನ್ನು ಸುರಕ್ಷಿತವಾಗಿ ಬಳಸಬಹುದು. ಉದಾಹರಣೆಗೆ: "142 dB SPL ಶೃಂಗ (at 0.5% THD)". ಹೆಚ್ಚು ಗರಿಷ್ಠ SPL ಹೊಂದಿರುವ ಮೈಕ್ರೊಫೋನ್‌ಗಳು ಸಹ ಹೈಯರ್ ಸೆಲ್ಫ್-ನಾಯಿಸ್ ನ್ನು ಹೊಂದಿವೆ. ಆದರೂ, ಮೌಲ್ಯವು ಎಷ್ಟು ಅಧಿಕವಾಗಿರುತ್ತದೆಯೋ ಅಷ್ಟೇ ಒಳ್ಳೆಯದು.

ಬಹುಶಃ ಕ್ಲಿಪಿಂಗ್ ಮಟ್ಟ ಅಧಿಕವಾಗಿ ಬಳಸಬಹುದಾದ ಮಟ್ಟ[ಸೂಕ್ತ ಉಲ್ಲೇಖನ ಬೇಕು]ವನ್ನು ಸೂಚಿಸುತ್ತದೆ.max SPL ಅಡಿಯಲ್ಲಿ ತೋರಿಸಲಾಗುವ 1% THD ಅಂಕಿಯು ಸಾಮಾನ್ಯವಾಗಿ ನಿಜವಾಗಿಯೂ ಬಹಳ ಸೂಕ್ಷ್ಮವಾದ ಅಸ್ಪಷ್ಟತೆ ಮಟ್ಟವಾಗಿದೆ. ಸಂಕ್ಷಿಪ್ತ ಉಚ್ಚ ಧ್ವನಿಗಳಲ್ಲಿ ಇದು ಕೇಳಿಸುವುದಿಲ್ಲ. ಮೈಕ್ರೊಫೋನ್‌ಗಳಿಂದಾಗುವ ಹಾರ್ಮನಿಕ್ ಅಸ್ಪಷ್ಟತೆ ಹೆಚ್ಚಾಗಿ ಲೋ-ಆರ್ಡರ್ (ಹೆಚ್ಚು ಮೂರನೆಯ ಹಾರ್ಮನಿಕ್)ಪ್ರಕಾರದ್ದಾಗಿರುತ್ತದೆ. ಆದ್ದರಿಂದ, 3-5% ಮಟ್ಟದಲ್ಲಿಯೂ ಸಹ ಅಷ್ಟೊಂದು ಜೋರಾಗಿ ಕೇಳಿಸುವುದಿಲ್ಲ.

ಇನ್ನೊಂದು ಕಡೆ, ಸಾಮಾನ್ಯವಾಗಿ ಧ್ವನಿಫಲಕ ತನ್ನ ಪೂರ್ತಿ ಪಲ್ಲಟನ ಮಿತಿ(ಅಥವಾ ಪ್ರೀಅಂಪ್ಲಿಪೈರ್ ದಿಂದಾಗಿ)ಯನ್ನು ತಲುಪಿದಾಗ ಸಾಮಾನ್ಯವಾಗಿ ಉಂಟಾಗುವ ಕ್ಲಿಪ್ಪಿಂಗ್, ಉಚ್ಚಧ್ವನಿಗಳಲ್ಲಿ ಕರ್ಕಶವಾದ ಶಬ್ದ ಉಂಟುಮಾಡುತ್ತದೆ, ಆದ್ದರಿಂದ ಇದನ್ನು ಸಾಧ್ಯವಾದಷ್ಟು ತಪ್ಪಿಸಬೇಕು.

ಕೆಲವು ಮೈಕ್ರೊಫೋನ್‌ಗಳಿಗೆ ಈ ಕ್ಲಿಪಿಂಗ್ ಲೆವಲ್ max SPL ಗಿಂತ ಜಾಸ್ತಿಯಾಗಿರಬಹುದು.

ಒಂದು ಮೈಕ್ರೊಫೋನ್ ನ ಗತಿಶೀಲ(ಡೈನಾಮಿಕ್) ವ್ಯಾಪ್ತಿಯು SPL ನಲ್ಲಿ ನಾಯಿಸ್ ಫ್ಲೋರ್ ಮತ್ತು ಗರಿಷ್ಠ SPL ಗಳ ನಡುವಿನ ವ್ಯತ್ಯಾಸವಾಗಿರುತ್ತದೆ. ಅದನ್ನು ಕುರಿತು ಹೇಳಬೇಕೆಂದರೆ, ಉದಾಹರಣೆಗಾಗಿ "120 dB", ಇದು ಕೊಡುವ ಮಾಹಿತಿಯು ವೈಯಕ್ತಿಕವಾಗಿ ಗರಿಷ್ಠ SPL ಸಂಖ್ಯೆಗಳು ಮತ್ತು ಸೆಲ್ಫ್-ನಾಯಿಸ್‌ಗಳು ಕೊಡುವ ಮಾಹಿತಿಗಿಂತ ಗಮನಾರ್ಹವಾಗಿ ಕಡಿಮೆಯಿರುತ್ತದೆ.

ಮೈಕ್ರೊಫೋನ್ ಎಷ್ಟು ಉತ್ತಮವಾಗಿ ಧ್ವನಿತರಂಗಗಳ ಒತ್ತಡವನ್ನು ಔಟ್‌ಪುಟ್ ವೋಲ್ಟೇಜ್ ಆಗಿ ಪರಿವರ್ತಿಸುತ್ತದೆ ಎಂಬುದನ್ನು ಸಂವೇದನೆ ಸೂಚಿಸುತ್ತದೆ.

ಅಧಿಕ ಸಂವೇದನೆಯ ಮೈಕ್ರೊಫೋನ್ ಹೆಚ್ಚು ವೋಲ್ಟೇಜ್ ಸೃಷ್ಟಿಸುತ್ತದೆ. ಆದ್ದರಿಂದಲೇ ಮಿಕ್ಸರ್ ಅಥವಾ ರೆಕಾರ್ಡಿಂಗ್ ಉಪಕರಣದಲ್ಲಿ ಅದಕ್ಕೆ ಕಡಿಮೆ ಆಂಪ್ಲಿಫಿಕೇಶನ್(ವರ್ಧನೆ) ಬೇಕಾಗುತ್ತದೆ.

ಇದು ಪ್ರಾಯೋಗಿಕ ವಿಚಾರವಾಯಿತು. ಆದರೆ ಮೈಕ್ರೊಫೋನ್ ನ ಗುಣಮಟ್ಟದ ಬಗ್ಗೆ ನೇರವಾದ ಸೂಚನೆಯಲ್ಲ. ನಿಜವಾಗಿ ಹೇಳಬೇಕೆಂದರೆ, ಸಂವೇದನೆ ಎಂಬ ಶಬ್ದವು ಒಂದು ತಪ್ಪಾಗಿ ಬಳಸಲಾದ ಶಬ್ದವಾಗಿದೆ. ಅದಕ್ಕೆ ಬದಲು, 'ಸಂಜ್ಞಾಪರಿವರ್ತನೆ ಲಾಭ' (ಟ್ರಾನ್ಸ್‌ಡಕ್ಷನ್ ಗೇನ್) ಎಂಬುದು ಸೂಕ್ತವಾಗಿರುತ್ತಿತ್ತು (ಅಥವಾ ಬರಿ "ಔಟ್ ಪುಟ್ ಲೆವಲ್"). ಏಕೆಂದರೆ, ನಿಜವಾದ ಸಂವೇದನೆಯು ಸಾಮಾನ್ಯವಾಗಿ ನಾಯಿಸ್ ಫ್ಲೋರ್‌ನಿಂದ ನಿರ್ಧರಿಸಲ್ಪಡುತ್ತದೆ. ಔಟ್ ಪುಟ್ ಲೆವಲ್ ಪ್ರಕಾರ, ಅತಿಯಾದ "ಸಂವೇದನೆ" ಯು ಕ್ಲಿಪಿಂಗ್ ಲೆವಲ್ ನೊಂದಿಗೆ ಹೊಂದಿಕೊಳ್ಳುತ್ತದೆ.

ಎರಡು ಸಾಮಾನ್ಯವಾದ ಮಾರ್ಗಗಳಿವೆ.

ಆದ್ಯತೆಯ ಅಂತಾರಾಷ್ಟ್ರೀಯ ಮಾನಕವು 1 kHz ಗೆ ಪ್ರತಿ pascal ದಂತೆ ಮಿಲ್ಲಿವೋಲ್ಟ್‌ಗಳಲ್ಲಿ ತಯಾರಿಸಲಾಗಿದೆ. ಹೆಚ್ಚಿನ ಮೌಲ್ಯವು ಹೆಚ್ಚಿನ ಸಂವೇದನೆಯನ್ನು ಸೂಚಿಸುತ್ತದೆ.

ಹಳೆಯ ಅಮೆರಿಕನ್ ವಿಧಾನವನ್ನು 1 V/Pa ಮಾನಕವಾಗಿ ಉಲ್ಲೇಖಿಸಲಾಗುತ್ತದೆ. ಇದನ್ನು ಡೆಸಿಬಲ್‌ಗಳಲ್ಲಿ ಅಳೆಯಲಾಗುತ್ತದೆ ಮತ್ತು ಬರುವ ಫಲಿತಾಂಶವು ಒಂದು ನಕಾರಾತ್ಮಕ ಮೌಲ್ಯವಾಗಿರುತ್ತದೆ.

ಮತ್ತೊಮ್ಮೆ ಹೇಳಬೇಕೆಂದರೆ, ಒಂದು ಅಧಿಕ ಮೌಲ್ಯವು ಬೃಹತ್ ಪ್ರಮಾಣದ ಸಂವೇದನೆಯನ್ನು ಸೂಚಿಸುತ್ತದೆ. ಆದ್ದರಿಂದ, -60 dB ಯು -70 dB ಗಿಂತ ಸಂವೇದಕ ಆಗಿರುತ್ತದೆ.

ಮೆಜರ್‌ಮೆಂಟ್ ಮೈಕ್ರೊಫೋನ್‌ಗಳು[ಬದಲಾಯಿಸಿ]

ಕೆಲವು ಮೈಕ್ರೊಫೋನ್‌ಗಳನ್ನು ಸ್ಪೀಕರ್‌ಗಳನ್ನು ಪರೀಕ್ಷಿಸಲು, ನಾಯಿಸ್ ಲೆವಲ್‌ಗಳನ್ನು ಅಳೆಯಲು ಮತ್ತು ಧ್ವನಿತರಂಗದ ಅನುಭವವನ್ನು ಪರಿಮಾಣಿಸಲು ಬಳಸುತ್ತಾರೆ.

ಇವೆಲ್ಲವೂ ಮಾಪನಾಂಕ ನಿರ್ಣಯಿಸಿದ ಸಂಜ್ಞಾಪರಿವರ್ತಕಗಳಾಗಿದ್ದು, ಇವುಗಳಿಗೆ ಸಾಮಾನ್ಯವಾಗಿ ಮಾಪನಾಂಕ ನಿರ್ಣಯ ಪ್ರಮಾಣಪತ್ರ ಪೂರೈಸಲಾಗುತ್ತದೆ. ಇದರಲ್ಲಿ ಆವರ್ತನದ ವಿರುದ್ಧ ಸಂಪೂರ್ಣ ಸಂವೇದನೆ ಕುರಿತು ತಿಳಿಸಲಾಗಿದೆ.

ಮಾಪನ ಮೈಕ್ರೊಫೋನ್‌ಗಳ ಗುಣಮಟ್ಟವನ್ನು ತೋರಿಸಲು "ಕ್ಲಾಸ್ 1,"ಟೈಪ್ 2" ಇತ್ಯಾದಿಗಳನ್ನು ಬಳಸಲಾಗುತ್ತದೆ. ಇವುಗಳು ಸೌಂಡ್ ಲೆವಲ್ ಮೀಟರ್‌ಗಳನ್ನು ಸೂಚಿಸುತ್ತವೆಯೇ ಹೊರತು ಮೈಕ್ರೊಫೋನ್ ನಿರ್ದಿಷ್ಟ ವಿವರಣೆಗಳನ್ನಲ್ಲ.[೨೧]

ಮಾಪನ ಮೈಕ್ರೊಫೋನ್ ನ ಕಾರ್ಯವೈಖರಿಯ ಕುರಿತು ವಿವರಣೆ ನೀಡಲು ಅತ್ಯಂತ ಸಮಗ್ರ ಮಾನಕವನ್ನು[೨೨] ಇತ್ತೀಚಿಗೆ ಅಳವಡಿಸಲಾಗಿದೆ.

ಮಾಪನ ಮೈಕ್ರೊಫೋನ್‌ಗಳು ಸಾಮಾನ್ಯವಾಗಿ ಒತ್ತಡ(ಪ್ರೆಶರ್)ದ ಸ್ಕೇಲಾರ್ ಸಂವೇದಕಗಳಾಗಿವೆ. ಇವುಗಳು ಓಮ್ನಿಡೈರೆಕ್ಷನಲ್ ಪ್ರತಿಕ್ರಿಯೆ ನೀಡುತ್ತವೆ. ಈ ಪ್ರತಿಕ್ರಿಯೆಯು ಅವುಗಳ ಭೌತಿಕ ಆಯಾಮಗಳ(ಫಿಸಿಕಲ್ ಡೈಮೆನ್ಶನ್ಸ್) ಚೆದುರಿದ ವಿವರಗಳಿಂದ ಮಾತ್ರ ಮಿತಿಗೆ ಒಳಪಟ್ಟಿರುತ್ತವೆ.

ಧ್ವನಿಯ ತೀವ್ರತೆ (ಸೌಂಡ್ ಇಂಟೆನ್ಸಿಟಿ)ಅಥವಾ ಧ್ವನಿಯ ಶಕ್ತಿಯ ಅಳತೆಗಳಿಗಾಗಿ ಪ್ರೆಶರ್-ಗ್ರೇಡಿಯಂಟ್ ಮೆಜರ್ ಮೆಂಟ್ ಗಳ ಅವಶ್ಯಕತೆ ಇದೆ. ಇವುಗಳನ್ನು ಕನಿಷ್ಠ ಎರಡು ಮೈಕ್ರೊಫೋನ್‌ಗಳನ್ನು ಒಟ್ಟಾಗಿ ಬಳಸಿಕೊಂಡು ತಯಾರಿಸಲಾಗಿರುತ್ತದೆ ಅಥವಾ ಹಾಟ್-ವಯರ್ ಅನಿಮೋಮೀಟರ್ ಗಳ ಸಹಾಯದಿಂದ ತಯಾರಿಸಲಾಗಿರುತ್ತದೆ.

ಮೈಕ್ರೊಫೋನ್ ಮಾಪನಾಂಕ ನಿರ್ಣಯ ತಂತ್ರಗಳು[ಬದಲಾಯಿಸಿ]

ಒಂದು ಮೈಕ್ರೊಫೋನ್ ನೊಂದಿಗೆ ವೈಜ್ಞಾನಿಕ ಅಳತೆಯನ್ನು ತೆಗೆದುಕೊಳ್ಳಲು ಅದರ ನಿಖರವಾದ ಸಂವೇದನೆಯ ಅರಿವಿರಬೇಕು (ಪ್ರತಿ ಪ್ಯಾಸ್ಕಲ್‌ ಗೆ ವೋಲ್ಟ್ ಗಳಲ್ಲಿ). ಉಪಕರಣವು ಬಳಕೆಯಲ್ಲಿ ಇರುವಷ್ಟು ದಿನಗಳೊಳಗಾಗಿ ಇದು ಬದಲಾಗಬಹುದು. ಆದ ಕಾರಣ ಮಾಪನ ಮೈಕ್ರೋಫೋನ್‌ಗಳಲ್ಲಿ ನಿಯಮಿತವಾಗಿ ಮಾಪನಾಂಕ ನಿರ್ಣಯಿಸುವುದು ಅಗತ್ಯವಾಗಿದೆ. ಕೆಲವು ಮೈಕ್ರೊಫೋನ್ ಉತ್ಪಾದಕರು ಮತ್ತು ಸ್ವತಂತ್ರವಾಗಿ ಕೆಲಸ ಮಾಡುವ ಪ್ರಮಾಣಿತ ಟೆಸ್ಟಿಂಗ್ ಪ್ರಯೋಗಾಲಯಗಳು ಈ ಸೇವೆಯನ್ನು ಒದಗಿಸುತ್ತವೆ. ಎಲ್ಲ ಮೈಕ್ರೊಫೋನ್ ಮಾಪನಾಂಕ ನಿರ್ಣಯವು ಪ್ರೈಮರಿ ಸ್ಟ್ಯಾಂಡರ್ಡ್ ಗಳ ಸಹಾಯದಿಂದ ಕಂಡುಹಿಡಿಯಬಹುದಾಗಿದೆ. ಈ ರೀತಿಯ ಸೌಲಭ್ಯ ಹೊಂದಿರುವ ನ್ಯಾಷನಲ್ ಮಾಪನ ಸಂಸ್ಥೆಗಳು ಕೆಲವು ರಾಷ್ಟ್ರಗಳಲ್ಲಿ ಇವೆ - UK ನಲ್ಲಿ NPL, Germany ಯಲ್ಲಿ PTB ಮತ್ತು USA ನಲ್ಲಿ NIST. ಈ ಸಂಸ್ಥೆಗಳು ಪರಸ್ಪರ ಕ್ರಿಯೆಯ ಪ್ರೈಮರಿ ಮಾನಕ ಬಳಸಿಕೊಂಡು ಮಾಪನಾಂಕ ನಿರ್ಣಯ ಮಾಡುತ್ತವೆ. ಈ ವಿಧಾನವನ್ನು ಬಳಸಿ ಮಾಪನಾಂಕ ನಿರ್ಣಯ ಮಾಡಲಾದ ಮಾಪನ ಮೈಕ್ರೊಫೋನ್‌ಗಳನ್ನು ಹೋಲಿಕೆ ಮಾಪನಾಂಕ ನಿರ್ಣಯ ವಿಧಾನಗಳನ್ನು ಬಳಸಿಕೊಂಡು ಇತರೆ ಮೈಕ್ರೊಫೋನ್‌ಗಳ ಮಾಪನಾಂಕ ನಿರ್ಣಯ ಮಾಡಬಹುದು.

ಉಪಯೋಗದ ಆಧಾರದ ಮೇಲೆ ಮಾಪನ ಮೈಕ್ರೊಫೋನ್‌ಗಳನ್ನು ಕಾಲಾನುಸಾರ (ಪ್ರತಿ ವರ್ಷಕ್ಕೊಮ್ಮೆ ಅಥವಾ ಅನೇಕ ತಿಂಗಳುಗಳಿಗೊಮ್ಮೆ)ಪರೀಕ್ಷಿಸಬೇಕು. ಅಲ್ಲದೆ, ಕೆಳಗೆ ಬಿದ್ದಾಗ,ಮುಂತಾದ ಹಾನಿಯ ಘಟನೆಯಲ್ಲಿ(ಬಹುತೇಕ ಮೈಕ್‌ಗಳು ಹಾನಿಯ ಅಪಾಯ ತಗ್ಗಿಸಲು ಫೋಮ್-ಪ್ಯಾಡ್‌ನ ಡಬ್ಬಿಗಳಲ್ಲಿ ಮುಚ್ಚಲಾಗಿರುತ್ತವೆ) ಅಥವಾ ಸಾಮರ್ಥ್ಯಕ್ಕೂ ಮೀರಿ ಶಬ್ದಗಳನ್ನು (ಸೌಂಡ್ಸ್)ಎದುರಿಸಿದ ಸಂದರ್ಭದಲ್ಲಿ ಪರೀಕ್ಷಿಸಬೇಕು.

ಪಿಸ್ಟನ್‌ಫೋನ್ ಉಪಕರಣ[ಬದಲಾಯಿಸಿ]

ಇನ್‌ಸ್ಟ್ರುಮೆನ್ಟೆಶನ್ ಮೈಕ್ರೊಫೋನ್‌ಗಳ ಮಾಪನಾಂಕ ನಿರ್ಣಯಕ್ಕಾಗಿ ನಿಖರವಾದ ಶಬ್ದದ ಒತ್ತಡವನ್ನು ಸೃಷ್ಟಿಸಲು ಮುಚ್ಚಿದ ಕಪ್ಲರ್‌‌ನ್ನು ಬಳಸುವ ಪಿಸ್ಟನ್ ಫೋನ್ ಒಂದು ಧ್ವನಿತರಂಗದ ಮಾಪನಾಂಕ ನಿರ್ಣಯ ಸಾಧನವಾಗಿದೆ (ಶಬ್ಧ ಮೂಲ)ಆಗಿದೆ. ಈ ಸಿದ್ಧಾಂತವು ಯಾಂತ್ರಿಕವಾಗಿ ನಿರ್ದಿಷ್ಟ ಆವರ್ತನ ದರದಲ್ಲಿ ಚಲಿಸುವ ಒಂದು ಪಿಸ್ಟನ್ ಮೇಲೆ ಅವಲಂಬಿತವಾಗಿದೆ. ಪರೀಕ್ಷಿಸಲಾಗುವ ಮೈಕ್ರೋಫೋನ್‌ಗೆ ನಿಗದಿತ ಗಾತ್ರದ ಗಾಳಿಯನ್ನು ತಳ್ಳುತ್ತದೆ. ಗಾಳಿಯನ್ನು ಸ್ಥಿರಶಾಖವಿರುವಂತೆ ಕುಗ್ಗಿಸಲಾಗಿದೆಯೆಂದು ಭಾವಿಸಿ, ಮತ್ತು ಚೇಂಬರ್‌ನಲ್ಲಿನ ಶಬ್ಧ ಒತ್ತಡ ಮಟ್ಟ ವನ್ನು ಉಪಕರಣದ ಆಂತರಿಕ ಭೌತಿಕ ಆಯಾಮಗಳಿಂದ ಮತ್ತು ಸ್ಥಿರಶಾಖವಿರುವ ಅನಿಲ ನಿಯಮದ ಸಹಾಯದಿಂದ ಲೆಕ್ಕ ಮಾಡಬಹುದು. ಈ ನಿಯಮದಲ್ಲಿ ಯು ಸ್ಥಿರವಾಗಿದ್ದು, ಅಂದರೆ ಚೇಂಬರ್‌ನಲ್ಲಿನ ಒತ್ತಡ, ಅಂದರೆ ಚೇಂಬರ್ ಗಾತ್ರ, ಮತ್ತು ಅಂದರೆ ಸ್ಥಿರ ಒತ್ತಡದಲ್ಲಿ ಗಾಳಿಯ ನಿರ್ದಿಷ್ಟ ಶಾಖ ಹಾಗೂ ಸ್ಥಿರ ಗಾತ್ರದಲ್ಲಿ ನಿರ್ದಿಷ್ಟ ಶಾಖದ ನಡುವಿನ ಅನುಪಾತ. ಈ ಪಿಸ್ಟನ್ ಫೋನ್ ವಿಧಾನವು ಕಡಿಮೆ ಆವರ್ತನಗಳಲ್ಲಿ ಮಾತ್ರ ಉಪಯೋಗಕ್ಕೆ ಬರುತ್ತದೆ. ಆದರೆ, ಅದು ನಿಖರವಾಗಿರಬಹುದು ಮತ್ತು ಶಬ್ದ ಒತ್ತಡ ಮಟ್ಟವನ್ನು ಸುಲಭವಾಗಿ ಲೆಕ್ಕ ಮಾಡಬಹುದು. ಮಾನಕ ಪರೀಕ್ಷೆ ಆವರ್ತನವು ಸಾಮಾನ್ಯವಾಗಿ ಸುಮಾರು 250 Hz ಇರುತ್ತದೆ.

ರೆಸಿಪ್ರೋಕಲ್ ವಿಧಾನ[ಬದಲಾಯಿಸಿ]

ಮಾಪನಾಂಕ ನಿರ್ಣಯ ಮಾಡಬೇಕಾಗಿರುವ 3 ಮೈಕ್ರೊಫೋನ್‌ಗಳ ಗುಂಪಿನಲ್ಲಿ ಒಂದು ಅಥವಾ ಹೆಚ್ಚು ಮೈಕ್ರೊಫೋನ್‌ಗಳ ಪರಸ್ಪರ ಅವಲಂಬನೆಯನ್ನು ಈ ವಿಧಾನವು ಆಧರಿಸಿದೆ. ಒಂದು ಮುಚ್ಚಿದ ಕಪ್ಲರ್‌ನಲ್ಲಿ ಅಥವಾ ಮುಕ್ತ ಮೈದಾನದಲ್ಲಿ ಇದನ್ನು ನಿರ್ವಹಿಸಬಹುದು. ಇವುಗಳಲ್ಲಿ ಒಂದು ಮೈಕ್ರೊಫೋನ್ ಮಾತ್ರ ಪರಸ್ಪರ ಅವಲಂಬಿತವಾಗಿರಬೇಕು (ಒಂದು ಮೈಕ್ರೊಫೋನ್ ಅಥವಾ ಲೌಡ್ ಸ್ಪೀಕರ್ ಆಗಿ ಬಳಸಿದಾಗ ಸಮಾನವಾದ ಪ್ರತಿಕ್ರಿಯೆ ತೋರಿಸುತ್ತದೆ).

ಮೈಕ್ರೊಫೋನ್ ಅರೇ ಮತ್ತು ಅರೇ ಮೈಕ್ರೊಫೋನ್‌ಗಳು[ಬದಲಾಯಿಸಿ]

ಒಂದು ಮೈಕ್ರೊಫೋನ್ ಶ್ರೇಣಿ ಅಂದರೆ ಸರದಿ ಯಾಗಿ ಕೆಲಸ ಮಾಡುವ ಅನೇಕ ಮೈಕ್ರೊಫೋನ್‌ಗಳು. ಅನೇಕ ರೀತಿಯ ಬಳಕೆಗಳಿವೆ:

ಒಂದು ಸ್ಥಳದ ಪರಿಧಿ (ಪರಿಮಿಟರ್) ಯ ಹತ್ತಿರ ವಿತರಿಸಲಾದ ಓಮ್ನಿಡೈರೆಕ್ಷನಲ್ ಮೈಕ್ರೊಫೋನ್‌ಗಳಿಂದ ಈ ಶ್ರೇಣಿ ಅಥವಾ ಗುಂಪನ್ನು ಸಿದ್ಧಪಡಿಸಲಾಗಿರುತ್ತದೆ. ಈ ಮೈಕ್ರೊಫೋನ್‌ಗಳು ಕಂಪ್ಯೂಟರ್ ನೊಂದಿಗೆ ಸಂಪರ್ಕ ಹೊಂದಿದ್ದು, ಆ ಕಂಪ್ಯೂಟರ್ ದಾಖಲು ಮಾಡಿಕೊಳ್ಳುತ್ತದೆ ಮತ್ತು ಫಾಲಿತಾಂಶಗಳನ್ನು ಸ್ಪಷ್ಟ ರೂಪದಲ್ಲಿ ವಿವರಿಸುತ್ತದೆ.

ಮೈಕ್ರೊಫೋನ್ ವಿಂಡ್ ಸ್ಕ್ರೀನ್‌ಗಳು (ಗಾಳಿ ತಡೆಯುವ ಪರದೆಗಳು)[ಬದಲಾಯಿಸಿ]

ಗಾಳಿ ಅಥವಾ ವೋಕಲ್ [[ಪ್ಲೋಸಿವ್ಸ್ (ತಡೆಹಿಡಿದು ಹಠಾತ್ತಾಗಿ ಹೊರಬಿಟ್ಟ ಉಸಿರಿನಿಂದ ಉಚ್ಚಾರ)ಅಂದರೆ ವ್ಯಂಜನಗಳಾದ "P", "B", ಮುಂತಾದವುಗಳಿಂದಾಗಿ]] ಮೈಕ್ರೊಫೋನ್‌ಗಳ ಮೇಲೆ ಅಪ್ಪಳಿಸಿ ಅವುಗಳಿಗೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಬಹುತೇಕ ಮೈಕ್ರೊಫೋನ್‌ಗಳು ಮೈಕ್ರೊಫೋನ್ ಧ್ವನಿಫಲಕಗಳ ಸುತ್ತಲೂ ವಿಂಡ್ ಸ್ಕ್ರೀನ್‌ಗಳನ್ನೂ ಹೊಂದಿರುತ್ತವೆ. ಪ್ಲಾಸ್ಟಿಕ್, ವಯರ್ ಜಾಳಿಗೆ ಅಥವಾ ಲೋಹದ ಕೇಜ್‌ನಿಂದ ತಯಾರಾದ ಒಂದು ಪರದೆಯನ್ನು ಮೈಕ್ರೊಫೋನ್ ಧ್ವನಿಫಲಕದಿಂದ ಸ್ವಲ್ಪ ಅಂತರದಲ್ಲಿ ಮುಚ್ಚಲಾಗುತ್ತದೆ. ಈ ಕೇಜ್ ವಸ್ತುಗಳ ಅಥವಾ ಗಾಳಿಯ ಯಾಂತ್ರಿಕ ಪರಿಣಾಮಗಳ ವಿರುದ್ಧ ಮೊದಲ ಸಾಲಿನ ರಕ್ಷಣೆಯನ್ನು ಒದಗಿಸುತ್ತದೆ. ಶ್ಯೂರ್ SM58 ನಂತಹ ಕೆಲವು ಮೈಕ್ರೊಫೋನ್‌ಗಳು ಕೇಜ್ ಒಳಗಡೆ ಫೋಮ್ ನ ಇನ್ನೊಂದು ಪದರವನ್ನು ಹೊಂದಿರಬಹುದು.ಇದರಿಂದಾಗಿ ರಕ್ಷಣಾತ್ಮಕ ಗುಣಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಮಗ್ರ ಮೈಕ್ರೋಫೋನ್ ಗಾಳಿಪರದೆಯ ಆಚೆ,ಹೆಚ್ಚುವರಿಯಾಗಿ ಗಾಳಿ ರಕ್ಷಣೆಗೆ ಮೂರು ವಿಶಾಲ ವರ್ಗಗಳಿವೆ.

ಈ ಎಲ್ಲ ವಿಧಗಳ ವಿಂಡ್‌ಸ್ಕ್ರೀನ್‌ಗಳು ಹೊಂದಿರುವ ಒಂದು ಅನಾನುಕೂಲವೆಂದರೆ, ಮೈಕ್ರೊಫೋನ್‌ನ ಅಧಿಕ ಆವರ್ತನ ಪ್ರತಿಕ್ರಿಯೆಯು ಸಣ್ಣ ಪ್ರಮಾಣದಲ್ಲಿ ಕ್ಷೀಣಿಸುತ್ತದೆ. ಇದು ರಕ್ಷಣಾತ್ಮಕ ಪದರದ ಸಾಂದ್ರತೆಯ ಮೇಲೆ ಅವಲಂಬಿತವಾಗಿದೆ.

ಕೆಲವು ಬಗೆಯ ಮೈಕ್ರೊಫೋನ್ ವಿಂಡ್‌ಸ್ಕ್ರೀನ್‌ಗಳನ್ನು "ವಿಂಡ್ ಗ್ಯಾಗ್" ಅಥವಾ ಆಡು ಭಾಷೆಯಲ್ಲಿ "ಡೆಡ್ ಕ್ಯಾಟ್" [೪] Archived 2010-07-03 ವೇಬ್ಯಾಕ್ ಮೆಷಿನ್ ನಲ್ಲಿ. ಎಂದು ಕರೆಯುತ್ತಾರೆ.

ಮೈಕ್ರೊಫೋನ್ ಕವರ್‌ಗಳು[ಬದಲಾಯಿಸಿ]

ಮೈಕ್ರೊಫೋನ್ ಕವರ್‌(ಹೊದಿಕೆ)ಗಳನ್ನು ಮೃದುವಾದ ಓಪನ್-ಸೆಲ್ ಪಾಲಿಯೆಸ್ಟರ್‌ನಿಂದ ಅಥವಾ ಪಾಲಿಯುರಥಿನ್ ಫೋಮ್‌ನಿಂದ ತಯಾರಿಸಿರುತ್ತಾರೆ. ಏಕೆಂದರೆ, ಫೋಮ್‌ಗಳು ದುಬಾರಿಯಲ್ಲದ ಬಳಸಿ ಎಸೆಯಬಹುದಾದ ಸ್ವರೂಪವನ್ನು ಪಡೆದಿವೆ.

ಬೇರೆ ಪ್ರಕಾರದ ವಿಂಡ್ ಸ್ಕ್ರೀನ್ ಗಳನ್ನು ಉತ್ಪಾದಕರು ಮತ್ತು ಮಧ್ಯವರ್ತಿಗಳಿಂದ ಪಡೆದುಕೊಳ್ಳಬಹುದು.

ಐಚ್ಛಿಕ ವಿಂಡ್ ಸ್ಕ್ರೀನ್‌ಗೆ ಒಂದು ಉದಾಹರಣೆಯೆಂದರೆ ಶ್ಯೂರ್ ತಯಾರಿಸಿದ A2WS. ಇವುಗಳಲ್ಲಿ ಒಂದನ್ನು ಅಮೆರಿಕಾದ ರಾಷ್ಟ್ರಪತಿಗಳ ಲೆಕ್ಟರ್ನ್ (ಭಾಷಣ ಮಾಡುವಾಗ ಬಳಸುವ ಕಟ್ಟಿಗೆಯ ಪೀಠ) ಮೇಲೆ ಬಳಸಲಾಗುವ ಎರಡು Shure SM57 ಮೈಕ್ರೊಫೋನ್‌ಗಳ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ.[೨೩]

ಪಾಲಿಯುರಿಥಿನ್ ಫೋಮ್ ನಿಂದ ತಯಾರಿಸಿದ ಮೈಕ್ರೊಫೋನ್ ಕವರ್ ಗಳ ಒಂದು ಅನಾನುಕೂಲವೆಂದರೆ, ಇವುಗಳು ಕಾಲ ಕ್ರಮೇಣ ದುರ್ಬಲಗೊಳ್ಳುತ್ತವೆ ಅಥವಾ ಕ್ಷೀಣಿಸುತ್ತವೆ.

ವಿಂಡ್ ಸ್ಕ್ರೀನ್‌ಗಳ ತೆರೆದ ಸೆಲ್‌ಗಳಲ್ಲಿ ಹೊಲಸು ಮತ್ತು ತೇವಾಂಶ ಸಂಗ್ರಹವಾಗುತ್ತದೆ. ಆದ್ದರಿಂದ ಅಧಿಕ ಆವರ್ತನ ನಷ್ಟ, ಕೆಟ್ಟ ವಾಸನೆ ಮತ್ತು ಅದನ್ನು ಬಳಸುವ ವ್ಯಕ್ತಿಗೆ ಅನಾರೋಗ್ಯಕರ ಪರಿಸ್ಥಿತಿಗಳನ್ನು ನಿವಾರಿಸಲು ಅವುಗಳನ್ನು ಸ್ವಚ್ಛಗೊಳಿಸುತ್ತಿರಬೇಕು. ಇನ್ನೊಂದು ಕಡೆ, ಸಂಗೀತಗೋಷ್ಠಿಯ ಹಾಡುವ ವಿಂಡ್ ಸ್ಕ್ರೀನ್‌ನ ಒಂದು ದೊಡ್ಡ ಅನುಕೂಲವೆಂದರೆ, ಮೈಕ್ರೊಫೋನ್ ಬಳಸುವವರ ನಡುವೆ ಒಬ್ಬ ವ್ಯಕ್ತಿಯು ಅತಿ ಬೇಗನೆ ಬದಲಾಯಿಸಿ ಸ್ವಚ್ಛವಾದ ವಿಂಡ್ ಸ್ಕ್ರೀನ್ ನ್ನು ಪಡೆದುಕೊಳ್ಳಬಹುದು. ಇದರಿಂದ ಸೂಕ್ಷ್ಮಾಣುಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಗ್ಗಿಸುತ್ತದೆ.

ಸಾಮಾನ್ಯವಾಗಿ ತುಂಬಾ ಕ್ರಿಯಾಶೀಲ,ಚಟುವಟಿಕೆಯ ವೇದಿಕೆಯ ಮೇಲೆ ಒಂದು ಮೈಕ್ರೋಫೋನ್‌‌ಗಳ ನಡುವೆ ವ್ಯತ್ಯಾಸ ಗುರುತಿಸಲು ವಿವಿಧ ವರ್ಣಗಳ ವಿಂಡ್‌ಸ್ಕ್ರೀನ್‌ಗಳನ್ನು ಬಳಸಬಹುದು.

ಪಾಪ್ ಫಿಲ್ಟರ್‌ಗಳು[ಬದಲಾಯಿಸಿ]

ಪಾಪ್ ಫಿಲ್ಟರ್ ಅಥವಾ ಪಾಪ್ ಸ್ಕ್ರೀನ್ ಗಳನ್ನು ನಿಯಂತ್ರಿತ ಸ್ಟುಡಿಯೋ ವಾತಾವರಣಗಳಲ್ಲಿ ಬಳಸುತ್ತಾರೆ. ಇವುಗಳು ರೆಕಾರ್ಡಿಂಗ್ ನಡೆದಿರುವಾಗ ಪ್ಲೋಸಿವ್ (ಸ್ಫೋಟೋಚ್ಚಾರ)ಗಳನ್ನು ಕನಿಷ್ಠಗೊಳಿಸಲು ಸಹಾಯ ಮಾಡುತ್ತವೆ. ಮಾದರಿಯ ಪಾಪ್ ಫಿಲ್ಟರ್ ಧ್ವನಿತರಂಗ ಪಾರದರ್ಶಕವಾದ ಗೇಜ್(gauze)ನಂತಹ ವಸ್ತುವಿನ ಒಂದು ಅಥವಾ ಹೆಚ್ಚು ಪದರುಗಳು, ಅಂದರೆ ಹೆಣೆಯಲಾದ ನೈಲಾನ್ ನನ್ನು ಒಂದು ದುಂಡನೆಯ ಚೌಕಟ್ಟಿನ (ಫ್ರೇಮ್) ಮೇಲೆ ಬಿಗಿದಿರುತ್ತಾರೆ. ಅಲ್ಲದೆ, ಮೈಕ್ರೊಫೋನ್ ನ ಸ್ಟ್ಯಾಂಡ್‌ ಗೆ ಕ್ಲಾಂಪ್ ಮತ್ತು ಬಾಗುವ ಮೌಂಟಿಂಗ್ ಬ್ರಾಕೆಟ್‌ನಿಂದ ಜೋಡಿಸಲಾಗುತ್ತದೆ. ಪಾಪ್ ಶೀಲ್ಡ್ (ಪದರು ಅಥವಾ ಕವಚ)ನ್ನು ಗಾಯಕ ಮತ್ತು ಮೈಕ್ರೊಫೋನ್ ನಡುವೆ ಇಡಲಾಗುತ್ತದೆ. ಒಬ್ಬ ಪಾಪ್ ಹಾಡುಗಾರ ತನ್ನ ತುಟಿಗಳನ್ನು ಮೈಕ್ರೊಫೋನ್ ಗೆ ತುಂಬಾ ಹತ್ತಿರ ತಂದಾಗ ಈ ಪಾಪ್ ಫಿಲ್ಟರ್‌ನ ಅವಶ್ಯಕತೆ ಉಂಟಾಗುತ್ತದೆ. ಪ್ಲೋಸಿವ್ (ಸ್ಪೋಟಕ ರೀತಿಯಲ್ಲಿ ಉಚ್ಚಾರವಾಗುವ ಪದಗಳು)ಪದಗಳನ್ನು ಮೃದುವಾಗಿ ಉಚ್ಚರಿಸುವಂತೆ ಅಥವಾ ಬಾಯಿಯಿಂದ ಗಾಳಿ ಬಿರುಸನ್ನು ಮೈಕ್ರೊಫೋನ್‌ನಿಂದ ದೂರ ಸರಿಸುವಂತೆ ಹಾಡುಗಾರರಿಗೆ ತರಬೇತಿ ನೀಡಬಹುದು. ಇಂಥ ಸಂದರ್ಭಗಳಲ್ಲಿ ಅವರಿಗೆ ಪಾಪ್ ಫಿಲ್ಟರ್ ನ ಅವಶ್ಯಕತೆ ಇರುವುದಿಲ್ಲ.

ಪಾಪ್ ಫಿಲ್ಟರ್‌ಗಳು ಬಾಯಿಯಿಂದ ಹೊರಬರುವ ಉಗುಳನ್ನು ಕೂಡ ಮೈಕ್ರೊಫೋನ್‌ನಿಂದ ದೂರವಿಡುತ್ತವೆ. ಹೆಚ್ಚು ಕಂಡೆನ್ಸರ್ ಮೈಕ್ರೊಫೋನ್‌ಗಳು ಉಗುಳಿನಿಂದಾಗಿ ಹಾಳಾಗಬಹುದು.

ಬ್ಲಿಂಪ್ ಗಳು[ಬದಲಾಯಿಸಿ]

ಚಿತ್ರ:Ecoacoustics.JPG
ಎರಡು ರೆಕಾರ್ಡಿಂಗ್ ಗಳನ್ನು ಮಾಡಲಾಗುತ್ತಿದೆ - ಎಡಗಡೆಯ ಮೈಕ್ರೊಫೋನ್ ಬ್ಲಿಂಪ್‌ನ್ನು ಬಳಸಿದೆ, ಬಲಗಡೆ ಇರುವುದು ಒಂದು ಓಪನ್-ಸೆಲ್ ಫೋಮ್ ವಿಂಡ್‌ಸ್ಕ್ರೀನ್ ಬಳಸಿದೆ.

ಬ್ಲಿಂಪ್ (ಜೆಪಲಿನ್ ಗಳೆಂದು ಕೂಡ ಪರಿಚಿತ)ಗಳು ದೊಡ್ಡ ಮತ್ತು ಪೊಳ್ಳಾದ ವಿಂಡ್ ಸ್ಕ್ರೀನ್‌ಗಳು. ನಿಸರ್ಗದ ಧ್ವನಿಮುದ್ರಣಕ್ಕೆ, ವಿದ್ಯುನ್ಮಾನ ಸುದ್ದಿ ಸಂಗ್ರಹ, ಚಲನಚಿತ್ರ ಮತ್ತು ವಿಡಿಯೋ ಶೂಟಿಂಗ್ ಗಳಂತಹ ಹೊರಾಂಗಣ ಲೊಕೇಶನ್ ಆಡಿಯೋ ಕೆಲಸಗಳನ್ನು ಮಾಡುವಾಗ ಮೈಕ್ರೊಫೋನ್‌ ಸುತ್ತ ಬ್ಲಿಂಪ್‌ಗಳನ್ನು ಬಳಸುತ್ತಾರೆ. ಇವುಗಳು ಗಾಳಿಯ ಅತಿಯಾದ ಶಬ್ದ (ವಿಂಡ್ ನಾಯಿಸ್)ವನ್ನು 25 dB ಯಷ್ಟು ಕಡಿತಗೊಳಿಸುತ್ತವೆ. ಮುಖ್ಯವಾಗಿ ಕಿಮೆ ಆವರ್ತನದ ಶಬ್ದವನ್ನು ಕಡಿತಗೊಳಿಸುತ್ತದೆ. ಬ್ಲಿಂಪ್ ಒಂದು ಪೊಳ್ಳಾದ ಕೇಜ್ ಅಥವಾ ಬಾಸ್ಕೆಟ್ ಹೊಂದಿದೆ. ಹೊರ ಚೌಕಟ್ಟಿನ ಮೇಲೆ ಧ್ವನಿತರಂಗಗಳಿಗೆ ಪಾರದರ್ಶಕವಾದ ವಸ್ತುವನ್ನು ಬಿಗಿಯಲಾಗಿರುತ್ತದೆ. ಮೈಕ್ರೊಫೋನ್ ಸುತ್ತಲೂ ಸ್ಥಿರವಾದ ಗಾಳಿಯ (ಸ್ಟಿಲ್ ಏರ್) ರಾಶಿಯನ್ನು ಸೃಷ್ಟಿಸುವುದರ ಮೂಲಕ ಬ್ಲಿಂಪ್ ಕೆಲಸ ಮಾಡುತ್ತದೆ. ಬಾಸ್ಕೆಟ್‌ನಲ್ಲಿರುವ ಒಂದು ಹಿಗ್ಗುವ (ಎಲಾಸ್ಟಿಕ್)ಸಾಧನದಿಂದ ಮೈಕ್ರೊಫೋನ್ ಮತ್ತು ಬ್ಲಿಂಪ್‌ನ್ನು ಇನ್ನಷ್ಟು ಪ್ರತ್ಯೇಕಿಸಬಹುದು. ಇದರಿಂದಾಗಿ ಗಾಳಿಯಿಂದಾಗುವ ಕಂಪನಗಳು ತಗ್ಗುತ್ತದೆ ಮತ್ತು ಕೇಜ್‌ನಿಂದ ರವಾನೆಯಾಗುವ ಶಬ್ದವನ್ನು ನಿಭಾಯಿಸುತ್ತದೆ. ಬ್ಲಿಂಪ್ ಪರಿಣಾಮಕಾರಿಯಾಗಿ ಉಳಿಯುವುದಕ್ಕಾಗಿ ಗಾಳಿ ವೇಗದ ಪರಿಸ್ಥಿತಿಗಳ ವ್ಯಾಪ್ತಿಯನ್ನು ವಿಸ್ತರಿಸಲು,ಹೊರ ಮೈ ಮೇಲೆ ಎರಡನೇ ಹೊದಿಕೆಯ ಆಯ್ಕೆಯನ್ನು ಅನೇಕ ಮಂದಿ ಮಾಡಿರುತ್ತಾರೆ. ಸಾಮಾನ್ಯವಾಗಿ ಇದು ಉದ್ದನೆಯ ಮೃದು ಕೂದಲು ("ಡೆಡ್ ಕ್ಯಾಟ್" ಅಥವಾ "ವಿಂಡ್ ಮಫ್" ಅನ್ನುತ್ತಾರೆ)ಗಳನ್ನು ಹೊಂದಿರುವ ಸಿಂಥೆಟಿಕ್ ಫರ್ (ಪೂರ್ತಿಯಾಗಿ ಶುದ್ಧವಾಗಿರದ ತುಪ್ಪಳ)ಆಗಿದ್ದು, ಧ್ವನಿತರಂಗಳಿಗೆ ಪಾರದರ್ಶಕವಾಗಿರುತ್ತದೆ. ಈ ಕೂದಲುಗಳು ಬ್ಲಿಂಪ್‌ಗೆ ಬಡಿಯುವ ರಭಸವಾದ ಗಾಳಿಗೆ ಎದುರಾಗಿ ಆಘಾತ ಅವಶೋಷಕದಂತೆ ಕೆಲಸ ಮಾಡುತ್ತವೆ. ಒಂದು ಸಿಂಥೆಟಿಕ್ ಫರ್ ಗಾಳಿಯ ಅತಿಯಾದ ಶಬ್ದವನ್ನು (ವಿಂಡ್ ನಾಯಿಸ್)10 dB ಗಳಷ್ಟು ಕಡಿಮೆ ಮಾಡಬಲ್ಲದು.[೨೪]

ಈ ಕೆಳಗಿನವುಗಳನ್ನೂ ನೋಡಿ[ಬದಲಾಯಿಸಿ]

ಟೆಂಪ್ಲೇಟು:Portalpar

ಲೌಡ್ ಸ್ಪೀಕರ್ (ಮೈಕ್ರೊಫೋನ್ ನ ವಿರುದ್ಧ ರೂಪವಾಗಿದೆ)

ಹೈಡ್ರೋಫೋನ್ (ನೀರಿನ ಒಳಗಡೆ ಬಳಸುವ ಮೈಕ್ರೊಫೋನ್)

ಜಿಯೋಫೋನ್ (ಭೂಮಿಯ ಒಳಗಡೆ ಬಳಸುವ ಮೈಕ್ರೊಫೋನ್)

ಅಯೋನೋಫೋನ್ (ಪ್ಲಾಸ್ಮಾ ಆಧಾರಿತ ಮೈಕ್ರೊಫೋನ್)

ನಾಮಿನಲ್ ವಿದ್ಯುತ್ಪ್ರವಾಹ ಪ್ರತಿರೋಧ - ಆಡಿಯೋ ಉಪಕರಣಗಳಿಗಾಗಿ ವಿದ್ಯುತ್ಪ್ರವಾಹ ರೋಧತ್ವ ಹೊಂದಾಣಿಕೆ ಯ ಕುರಿತು ಮಾಹಿತಿ

XLR ಕನೆಕ್ಟರ್ - ಇದರ 3-ಪಿನ್ ಪ್ರಕಾರವನ್ನು ಮೈಕ್ರೊಫೋನ್‌ಗಳ ನಡುವೆ ಸಂಪರ್ಕ ನೀಡಲು ಬಳಸುತ್ತಾರೆ

ಶಾಕ್ ಮೌಂಟ್ - ಎಲಾಸ್ಟಿಕ್ ನಿಂದ ಬಂಧಿತವಾಗಿರುವ ಮೈಕ್ರೊಫೋನ್ ಒಳಗೊಂಡಿರುವ ಒಂದು ಮೈಕ್ರೊಫೋನ್ ಮೌಂಟ್

ಉಲ್ಲೇಖಗಳು[ಬದಲಾಯಿಸಿ]

 1. [೧] 1916 ರಲ್ಲಿ E. C. ವೆಂಟ್ ಎಂಬುವರು ಬೆಲ್ ಲ್ಯಾಬ್ಸ್‌ನಲ್ಲಿ ಕಂಡೆನ್ಸರ್ ಮೈಕ್ರೊಫೋನ್ ಕಂಡುಹಿಡಿದರು.
 2. Sessler, G.M. (1962). "Self-biased condenser microphone with high capacitance". Journal of the Acoustical Society of America. 34: 1787–1788. doi:10.1121/1.1909130. {{cite journal}}: Unknown parameter |coauthors= ignored (|author= suggested) (help)
 3. "ಆರ್ಕೈವ್ ನಕಲು". Archived from the original on 2010-08-19. Retrieved 2010-07-14.
 4. ""AKG D 112 - ಬೇಸ್ ಉಪಕರಣಗಳಿಗಾಗಿ ದೊಡ್ಡ ಧ್ವನಿಫಲಕ ಡೈನಾಮಿಕ್ ಮೈಕ್ರೊಫೋನ್"". Archived from the original on 2010-02-27. Retrieved 2010-07-14.
 5. "Local firms strum the chords of real music innovation". Mass High Tech: the Journal of New England Technology. February 8, 2008.
 6. [೨] Archived 2015-08-22 ವೇಬ್ಯಾಕ್ ಮೆಷಿನ್ ನಲ್ಲಿ. ಬೌಡೆತ್ ಮೈಕ್ರೊಫೋನ್
 7. Paritsky, Alexander (1997). "Fiber optic microphone as a realization of fiber optic positioning sensors". Proc. of International Society for Optical Engineering (SPIE). 3110: 408–409. {{cite journal}}: Unknown parameter |coauthors= ignored (|author= suggested) (help)
 8. US patent 6462808, Alexander Paritsky and Alexander Kots, "Small optical microphone/sensor", issued 2002-10-08 
 9. "Case Study: Can You Hear Me Now?". rt image. Valley Forge Publishing. pp. 30–31. Archived from the original on 2013-07-21. Retrieved 2009-08-23.
 10. "MEMS Microphone Will Be Hurt by Downturn in Smartphone Market". Seeking Alpha. Retrieved 2009-08-23.
 11. "OMRON to Launch Mass-production and Supply of MEMS Acoustic Sensor Chip -World's first MEMS sensor capable of detecting the lower limit of human audible frequencies-". Retrieved 2009-11-24.
 12. Bartlett, Bruce. "How A Cardioid Microphone Works". Archived from the original on 2008-12-11. Retrieved 8/11/2008. {{cite web}}: Check date values in: |accessdate= (help)
 13. ಹಿಸ್ಟರಿ ಅಂಡ್ ಡೆವೆಲಪ್ ಮೆಂಟ್ ಆಫ್ ಮೈಕ್ರೊಫೋನ್ Archived 2008-07-04 ವೇಬ್ಯಾಕ್ ಮೆಷಿನ್ ನಲ್ಲಿ. ಲಾಯ್ಡ್ ಮೈಕ್ರೊಫೋನ್ ಕ್ಲಾಸಿಕ್ಸ್
 14. ಪ್ರಾಕ್ಸಿಮಿಟಿ ಎಫೆಕ್ಟ್ Archived 2007-10-16 ವೇಬ್ಯಾಕ್ ಮೆಷಿನ್ ನಲ್ಲಿ.. ಜೆಫ್ ಮಾರ್ಟಿನ್, ಧ್ವನಿ ರೆಕಾರ್ಡಿಂಗ್ ಪರಿಚಯ .
 15. (US 4361736 )
 16. ಕ್ರೌನ್ ಆಡಿಯೋ Archived 2003-04-09 ವೇಬ್ಯಾಕ್ ಮೆಷಿನ್ ನಲ್ಲಿ..ಟೆಕ್ ಮೇಡ್ ಸಿಂಪಲ್. Archived 2003-04-09 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಕ್ರೌನ್ ಡಿಫರಾಯಿಡ್ ಮೈಕ್ರೊಫೋನ್ Archived 2003-04-09 ವೇಬ್ಯಾಕ್ ಮೆಷಿನ್ ನಲ್ಲಿ.
 17. ೧೭.೦ ೧೭.೧ ಇಂಟರ್ ನ್ಯಾಷನಲ್ ಸ್ಟ್ಯಾಂಡರ್ಡ್ IEC 60268-4
 18. Eargle, John (2002). Audio Engineering for Sound Reinforcement. Milwaukee: Hal Leonard Corporation. p. 66. ISBN 0634043552. {{cite book}}: Unknown parameter |coauthors= ignored (|author= suggested) (help)
 19. http://www.shure.com/ProAudio/Products/us_pro_ea_impedance[ಶಾಶ್ವತವಾಗಿ ಮಡಿದ ಕೊಂಡಿ]
 20. ರಾಬರ್ಟ್ಸನ್, A.E.: "Microphones" Illiffe Press for BBC, 1951-1963
 21. IEC ಸ್ಟ್ಯಾಂಡರ್ಡ್ 61672 ಮತ್ತು/ಅಥವಾ ANSI S1.4
 22. IEC 61094
 23. "Shure - ಎಕ್ಸೆಸರೀಸ್ - A2WS ಮೈಕ್ರೊಫೋನ್ ವಿಂಡ್ ಸ್ಕ್ರೀನ್ಸ್". Archived from the original on 2008-05-11. Retrieved 2010-07-14.
 24. ಫುಲ್ ವಿಂಡ್ ಶೀಲ್ಡ್ ಕಿಟ್ಸ್ Archived 2010-05-04 ವೇಬ್ಯಾಕ್ ಮೆಷಿನ್ ನಲ್ಲಿ.. ರೈಕೋಟ್ ಮೈಕ್ರೋಫೋನ್ಸ್ ಮೇ 3, 2010 ರಂದು ಮರುಸಂಪಾದಿಸಲಾಗಿದೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]